Connect with us

Mysore

ಕಪಿಲಾ ನದಿಯಲ್ಲಿ ಈಜಲು ಹೋದ ಮೂವರು ಯುವಕರು ನೀರು ಪಾಲು

Published

on

ನಂಜನಗೂಡು ಕಪಿಲಾ ನದಿಯಲ್ಲಿ ಈಜಲು ಹೋದ ಮೂವರು ಯುವಕರು ನೀರು ಪಾಲಾಗಿರುವ ಘಟನೆ ನಂಜನಗೂಡು ತಾಲ್ಲೂಕಿನ ಗೊದ್ದನಪುರ ಗ್ರಾಮದ ಕಪಿಲಾ ನದಿಯ ಸೇತುವೆಯಲ್ಲಿ ನಡೆದಿದೆ.

ಬಿಹಾರ ಮೂಲದ 22 ವರ್ಷದ ಮಿಲನ್, 25 ವರ್ಷದ ಮೋಹನ್, 19 ವರ್ಷದ ತರುಣ್ ಮೃತ
ದುರ್ದೈವಿಗಳಾಗಿದ್ದಾರೆ.

ಬಿಹಾರ ಮೂಲದ 22 ವರ್ಷದ ಮಿಲನ್ ಮೃತ ದೇಹ ಪತ್ತೆಯಾಗಿದೆ. ಇನ್ನುಳಿದ ಇಬ್ಬರು ಯುವಕರ ಶವಕ್ಕಾಗಿ ಹುಡುಕಾಟ ನಡೆಸಲಾಗುತ್ತಿದೆ. ಗುತ್ತಿಗೆ ಆಧಾರದ ಮೇಲೆ ನೆಸ್ಲೆ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದರು.

ಈಜಲು ಹೋದ ಮೂವರು ಸುಳಿಗೆ ಸಿಲುಕಿದ್ದಾರೆ. ಸ್ಥಳೀಯರು ನಂಜನಗೂಡು ಗ್ರಾಮಾಂತರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ಆಗಮಿಸಿದ ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿಗಳು ಕಪಿಲಾ ನದಿಯಲ್ಲಿ ಶವಗಳಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ.

ಈ ಸಂಬಂಧ ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Continue Reading
Click to comment

Leave a Reply

Your email address will not be published. Required fields are marked *

Mysore

ಅಧಿಕಾರಿಗಳ ನೇತೃತ್ವದಲ್ಲಿ ಮುಕ್ತ ಮತ್ತು ನ್ಯಾಯ ಸಮ್ಮತ ಚುನಾವಣೆ

Published

on

ಸಾಲಿಗ್ರಾಮ – ಮಂಡ್ಯಲೋಕಸಭಾ ಚುನಾವಣೆಗೆ ಕೆಆರ್ ನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಅಧಿಕಾರಿ ನೇತೃತ್ವದಲ್ಲಿ   ಮುಕ್ತ ಮತ್ತು ನ್ಯಾಯ ಸಮ್ಮತ ಚುನಾವಣೆ ನಡೆದು ಎಲ್ಲೂ ಅಹಿತಕರ ಘಟನೆ ಅಥವಾ ಯಾವುದೇ ಗೊಂದಲಗಳಿಲ್ಲದೆ ಶಾಂತಿಯುತವಾಗಿ ಮತದಾನ ನಡೆಯಿತು. ಸರದಿ ಸಾಲಿನಲ್ಲಿ ನಿಂತು ತಮ್ಮ ಹಕ್ಕನ್ನು ಮತದಾರರು ಚಲಾಯಿಸಿದರು

ಗ್ರಾಮಾಂತರ ಪ್ರದೇಶದಲ್ಲಿ ಬೆಳೆಗ್ಗೆಯಿಂದಲೇ ಚುರಕಾಗಿ ಮತದಾನ ನಡೆದರೆ ಪಟ್ಟಣ ವ್ಯಾಪ್ತಿಯಲ್ಲಿ ನಿಧಾನ ಗತಿಯಲ್ಲಿ ನಡೆಯಿತು ಒಟ್ಟಾರೆಯಾಗಿ ಕೆಆರ್ ನಗರ ಮತ್ತು ಸಾಲಿಗ್ರಾಮ ತಾಲೂಕುಗಳಲ್ಲಿ ಶೇಕಡ 80ರಷ್ಟು ಮತದಾನ ನಡೆದಿದೆ.

ಕ್ಷೇತ್ರದ ವ್ಯಾಪ್ತಿಯಲ್ಲಿ 252 ಮತಗಟ್ಟೆಗಳಿದ್ದು ಆ ಪೈಕಿ 8 ಅತಿ ಸೂಕ್ಷ್ಮ ,32 ಸೂಕ್ಷ್ಮಮತಗಟ್ಟೆಗಳನ್ನು ಗುರುತಿಸಲಾಗಿದ್ದು, ಚುನಾವಣಾ ಕಾರ್ಯಕ್ಕೆ 32 ಸೆಕ್ಟರ್ ಮ್ಯಾಜಿಸ್ಟೇಟ್, 7 ಫ್ಲೈಯಿಂಗ್ ಸ್ಕ್ವಾಡ್ ಪೊಲೀಸ್  ಮತ್ತು ಅರೆ ಮಿಲಿಟರಿ ಪಡೆ   ಯಶಸ್ವಿಯಾಗಿ ಕಾರ್ಯನಿರ್ವಹಿಸುವ ಜೊತೆಗೆ ಸೂಕ್ತ ಬಂದು ಬಸ್ತ್  ವ್ಯವಸ್ಥೆಯನ್ನು ಮಾಡಿ ಕೊಡಲಾಗಿತ್ತು.

ಶಾಸಕ ಡಿ ರವಿಶಂಕರ್ ಪತ್ನಿ ಸಮೇತ ತಮ್ಮ ತವರು ಗ್ರಾಮವಾದ ಕೆಸ್ತೂರ್ ಕೊಪ್ಪಲಿನಲ್ಲಿ ಮತದಾನ ಮಾಡಿದರೆ ಮಾಜಿ ಸಚಿವ ಸಾರಾ ಮಹೇಶ್ ಪತ್ನಿ ಅನಿತಾ ಸಾರಾ ಮಹೇಶ್ ಪುತ್ರ ಸಾರಾ ಜಯಂತ್ ಹಾಗೂ ಡಾ. ಸಾರಾ ಧನುಷ್ ಸಾಲಿಗ್ರಾಮದ ತಮ್ಮ ತವರು ಗ್ರಾಮದಲ್ಲಿ ಕುಟುಂಬ ಸಮೇತ ಮತದಾನ ಮಾಡಿದ್ದು ವಿಶೇಷವಾಗಿತ್ತು. ನಂತರ ಮಾತನಾಡಿದ ಮಾಜಿ ಸಚಿವ ಸಾರಾ ಮಹೇಶ್ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾರರೇ ಮಾಲೀಕರಾಗಿದ್ದು ನಮ್ಮನ್ನಾಳುವ ನಾಯಕನನ್ನು ಆಯ್ಕೆ ಮಾಡುವ ಜವಾಬ್ದಾರಿ ಮತದಾರರಲ್ಲಿರುತ್ತದೆ ಆದ್ದರಿಂದ ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡುವ ಮೂಲಕ ತಮ್ಮನ್ನ ತಮ್ಮ ಹಕ್ಕನ್ನು ಚಲಾಯಿಸಿಕೊಳ್ಳುವಂತೆ ಮನವಿ ಮಾಡಿದರು.

ವರದಿ : ಎಸ್ ಬಿ ಹರೀಶ್ ಸಾಲಿಗ್ರಾಮ 

 

Continue Reading

Mysore

“ಒಳ್ಳೆಯ ಅಭ್ಯರ್ಥಿ ಆಯ್ಕೆ ಮಾಡುವ ಸಂದರ್ಭ”

Published

on

ಹುಣಸೂರು, ತಾಲೂಕಿನ ಹಳೇಬೀಡು ಗ್ರಾಮ ಪಂಚಾಯ್ತಿಯ ಮತಗಟ್ಟೆ ಸಂಖ್ಯೆ 74 ರೈ ಬೂತ್ ರಲ್ಲಿ ಮೊದಲ ಬಾರಿಗೆ ಯುವಕ
ವಿನಯಕುಮಾರ್ ತಂದೆ ‌ಸೋಮಚಾರಿ ಐ ಟಿ ಐ ವಿದ್ಯಾರ್ಥಿ ಮತ ಚಲಾಯಿಸಿ ಹೊರಬಂದು ಮಾಧ್ಯಮದವರ ಜೊತೆ ತಮ್ಮ ಅಭಿಪ್ರಾಯ ಅನಿಸಿಕೆ ಹಂಚಿಕೊಂಡರು.

Continue Reading

Mysore

ನಂಜನಗೂಡು ಕ್ಷೇತ್ರ ಶಾಸಕರಾದ ದರ್ಶನ್ ಧ್ರುವ ನಾರಾಯಣ್ ಮತದಾನ ಚಲಾಯಿಸಿದರು.

Published

on

ಚಾಮರಾಜನಗರ ಜಿಲ್ಲೆಯ ಸ್ವಗ್ರಾಮ ಹೆಗ್ಗವಾಡಿ ಗ್ರಾಮದ ಮತಗಟ್ಟೆ ಸಂಖ್ಯೆ 65 ರಲ್ಲಿ ನಂಜನಗೂಡು ಕ್ಷೇತ್ರದ ಶಾಸಕರಾದ ದರ್ಶನ್ ಧ್ರುವನಾರಾಯಣ್ ತನ್ನ ಸಹೋದರ ಧೀರನ್ ಧ್ರುವನಾರಾಯಣ್ ಅವರ ಜೊತೆಗೂಡಿ ಕುಟುಂಬದ ಸದಸ್ಯರು ಹಾಗೂ ಕಾರ್ಯಕರ್ತರೊಂದಿಗೆ ತೆರಳಿ ಮತದಾನ ಚಲಾಯಿಸಿದರು.

ಬಳಿಕ ಶಾಸಕರು ಅಭ್ಯರ್ಥಿ ಸುನೀಲ್ ಬೋಸ್ ಜೊತೆಗೂಡಿಕೊಂಡು ನಂಜನಗೂಡು ಕ್ಷೇತ್ರದ ವ್ಯಾಪ್ತಿಯ ಭೂತ್ ಗಳಿಗೆ ಭೇಟಿ ನೀಡಿದರು.

ನಂಜನಗೂಡು ಟೌನ್ ಶ್ರೀರಾಂಪುರ ,ಶಂಕರಪುರ, ಆನಂದಪುರ, ನೀಲಕಂಠನ ನಗರ, ವಾಡ್೯ ಗಳಿಗೆ
ಭೇಟಿ ನೀಡಿ ಮತದಾರರು ಮತವನ್ನು ಹಾಕುತ್ತಿದ್ದಾರ ಎಂದು ಪರಿಶೀಲಿಸಿದರು.

ಶಾಸಕ ದರ್ಶನ್ , ಅಭ್ಯರ್ಥಿ ಸುನೀಲ್ ಬೋಸ್
ವಾರ್ಡ್ಗಳನ್ನು ಭೇಟಿ ನೀಡಿದಾಗ ಸಂದರ್ಭದಲ್ಲಿ ಯುವಕರು, ಪಕ್ಷದ ಮುಖಂಡರುಗಳು ಸೆಲ್ಫಿ ತೆಗೆದುಕೊಳ್ಳುವುದಕ್ಕೆ ಮುಂದಾದರು.

ನಂಜನಗೂಡು ಮಹದೇವಸ್ವಾಮಿ ಪಟೇಲ್.

Continue Reading

Trending

error: Content is protected !!