National - International
ಸಂವಿಧಾನ ಅರಿವು ಮೂಡಿಸುವಲ್ಲಿ ಬದ್ಧತೆ ಹಾಗೂ ಸ್ಪಷ್ಟತೆ : ಜನರಿಗೆ ಸಂವಿಧಾನದ ಅರಿವು ಮೂಡಿಸುವ ಉದ್ದೇಶ
ಸಂವಿಧಾನದ ತಳಹದಿಗೆ ಧಕ್ಕೆ ತರುವ ಪ್ರಯತ್ನಗಳನ್ನು ವಿಫಲಗೊಳಿಸಬೇಕು: ಮುಖ್ಯಮಂತ್ರಿ ಸಿದ್ದರಾಮಯ್ಯ
ಬೆಂಗಳೂರು, ಫೆಬ್ರವರಿ 17: ಜಾತ್ಯಾತೀತತೆ, ಸಮಾನತೆ, ಭ್ರಾತೃತ್ವ ತತ್ವಗಳೇ ಸಂವಿಧಾನದ ತಳಹದಿ. ಇಧಕ್ಕೆ ತರುವ ಪ್ರಯತ್ನಗಳನ್ನು ವಿಫಲಗೊಳಿಸಬೇಕಾಗಿರುವುದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿ. ಇದಕ್ಕೆ ಯಾವ ಪಕ್ಷ, ಗುಂಪು ಇಲ್ಲ. ಸಂವಿಧಾನ ಈ ದೇಶದ ಎಲ್ಲಾ ಜನರಿಗೆ ಸಲ್ಲುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಅವರು ಇಂದು ಸಮ್ಮೇಳನ ಸಭಾಂಗಣದಲ್ಲಿ ಏರ್ಪಡಿಸಿದ್ದ ಬಾರತ ಸಂವಿಧಾನ ಹಾಗೂ ಉರಾಷ್ಟ್ರೀಯ ಐಕ್ಯತಾ ಸಮಾವೇಶಕ್ಕೆ ಸಂಬಮಧಿಸಿದಂತೆ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಭಾರತದ ಸಂವಿಧಾನ ಜಾರಿಗೆ ಬಂದು 75 ನೇ ವರ್ಷಕ್ಕೆ ಕಾಲಿಟ್ಟಿದೆ. 75 ನೇ ವರ್ಷವನ್ನು ಅರ್ಥಪೂರ್ಣವಾಗಿ ಆಚರಿಸಲು ಸರ್ಕಾರ ತೀರ್ಮಾನಿಸಿದ್ದು, ಕರ್ನಾಟಕದಾದ್ಯಂತ 31 ಜಿಲ್ಲೆಗಳಲ್ಲಿ ಸಂವಿಧಾನ ಜಾಥಾ ಜನವರಿ 26 ರಿಂದ ಫೆ. 23ರವರೆಗೆ ಹಮ್ಮಿಕೊಳ್ಳಲಾಗಿದೆ. ಫೆ. 24-25 ಎರಡು ದಿಗಳು ರಾಷ್ಟ್ರೀಯ ಏಕತಾ ಸಮಾವೇಶ ಬೆಂಗಳೂರಿನಲ್ಲಿ ಹಮ್ಮಿಕೊಳ್ಳಲಾಗಿದೆ. ಹೆಸರಾಂತ ಭಾಷಣಕಾರರು, ಖ್ಯಾತ ಚಿಂತಕರಾದ ಪ್ರೊ: ಅಸುತೋಶ್ ವರ್ಶನಿ ಹಾಗೂ ಡಾ: ಗಣೇಶ್ ದೇವಿ, ಪ್ರೊ. ಜಯಂತಿ ಘೋಷ್, ಪ್ರೊ. ಸುಖದೇವ್ ಥೋರಟ್, ಪ್ರೊ, ಕಾಂಚಾ, ಪ್ರಶಾಂತ್ ಭೂಷಣ್, ಬಿಜುವಾಡ ವಿಲ್ಸನ್ , ಮೇಧಾ ಪಾಟ್ಕರ್ ಮುಂತಾದ ಅನೇಕ ಚಿಂತಕರು ಮೇಧಾವಿಗಳು ಈ ಕಾರ್ಯಕ್ರಮದಲ್ಲಿ ಬಾಗವಹಿಸಲಿದ್ದಾರೆ. ದೇಶದ ಸಮಸ್ಯೆಗಳು, ಜನರ ಬವಣೆಗಳು, ಸಂವಿಧಾನದಲ್ಲಿ ಅದಕ್ಕೆ ಪರಿಹಾರಗಳ ಬಗ್ಗೆ ಬೆಳಕು ಚೆಲ್ಲಲಿದ್ದಾರೆ. 24 ರಂದು ಉದ್ಘಾಟನೆ ನಡೆದು 25 ರಂದು ಬೃಹತ್ ರ್ಯಾಲಿ ನಡೆಯಲಿದೆ. ಜಾಥಾ ಯಶಸ್ವಿಯಾಗಿ ನಡೆಯುತ್ತಿದೆ. ಶಾಲಾ ಕಾಲೇಜುಗಳಲ್ಲಿ ಸಂವಿಧಾನದ ಪಿಠಿಕೆಯನ್ನು ಓದಿಸಲಾಗುತ್ತಿದೆ. ಸಂವಿಧಾನ ರಚನೆಯಾದ ನಂತರ ಮೊದಲನೇ ಬಾರಿಗೆ ಬಜೆಟ್ ಪುಸ್ತಕದ ಮುಖಪುಟದಲ್ಲಿ ಪೀಠಿಕೆಯನ್ನು ಮುದ್ರಿಸಲಾಗಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ಜಾಗೃತಿ ಮೂಡಬೇಕು
ದೇಶದ ಜನರಿಗೆ ಸಂವಿಧಾನ ನಮಗೇನು ಕೊಟ್ಟಿದೆ ಎನ್ನುವುದನ್ನು ತಿಳಿಯಬೇಕು. ಪ್ರತಿಯೊಬ್ಬ ನಾಗರಿಕನಿಗೂ ಇದು ಅರ್ಥವಾಗದಿದ್ದರೆ, ಅªರÀ ಹಕ್ಕುಗಳ ಪರವಾಗಿ ಹೋರಾಟ ಮಾಡಲು ತಿಳಿಯಬೇಕು. ಅಂಬೇಡ್ಕರ್ ಅವರು ಶಿಕ್ಷಣ, ಸಂಘಟನೆ, ಹೋರಾಟ ಎಂಬ ಮಂತ್ರಗಳನ್ನು ನೀಡಿದ್ದಾರೆ. ಹೋರಾಟ ಇಲ್ಲದೇ ಸಂವಿಧಾನದಲ್ಲಿ ಹೇಳಿರುವ ಅನೇಕ ಹಕ್ಕುಗಳು ನಮಗೆ ದಕ್ಕುತ್ತಿರಲಿಲ್ಲ. ಸ್ವಾತಂತ್ರ್ಯ ಬಂದು 77 ವರ್ಷಗಳಾಯಿತು. ಸಂವಿಧಾನ ಜಾರಿಯಾಗಿ 75 ನೇ ವರ್ಷವಾದರೂ ಎಲ್ಲರಿಗೂ ಎಲ್ಲ ಹಕ್ಕುಗಳು ಸಿಕ್ಕಿಲ್ಲ. ಸಂವಿಧಾನ ಜಾರಿ ಬಂದ ಸಂದರ್ಭದಲ್ಲಿ ವೈರುಧ್ಯತೆ ಇರುವ ಸಮಾಜಕ್ಕೆ ಕಾಲಿಡುತ್ತಿದ್ದೇವೆ ಎಂದು ಅಂಬೇಡ್ಕರ್ ಹೇಳಿದ್ದರು. ದೇಶದಲ್ಲಿ ಸಾಮಾಜಿಕ ಹಾಗೂ ರಾಜಕೀಯ ಅಸಮಾನತೆ ಇದೆ. ಇಷ್ಟು ವರ್ಷಗಳಾದರೂ ಅಸಮಾನತೆ ನಮ್ಮ ದೇಶದಿಂದ ಹೋಗಿಲ್ಲ. ಈ ಬಗ್ಗೆ ಎಲ್ಲರೂ ಎಚ್ಚೆತ್ತುಕೊಳ್ಳಬೇಕು. ಆರ್ಥಿಕ, ಸಾಮಾಜಿಕ, ಸಮಾನತೆಯನ್ನು ಸಂವಿಧಾನ ಕೊಟ್ಟಿದ್ದರೂ ನಮಗ್ಯಾಕೆ ಸಿಕ್ಕಿಲ್ಲ ಎಂಬ ಜಾಗೃತಿ ಮೂಡಬೇಕು. ಕೊಟ್ಟಿಲ್ಲ ಎಂದು ಸುಮ್ಮನೆ ಕುಳಿತುಕೊಳ್ಳಬಾರದು. ಅದಕ್ಕಾಗಿ ಈ ಜಾಥಾ ಹಮ್ಮಿಕೊಳ್ಳಲಾಗಿದೆ ಎಂದರು.
ಜನರಿಗೆ ಸಂವಿಧಾನದ ಅರಿವು ಮೂಡಿಸುವ ಉದ್ದೇಶ:
ನಮ್ಮ ದೇಶದಲ್ಲಿ ಕಾನೂನಿನ ಅರಿವು ಕಡಿಮೆಯಿದೆ. ಬಹಳ ಜನರು ಸಂವಿಧಾನದ ಬಗ್ಗೆ ತಿಳಿದಿಲ್ಲ. ದೇಶದ ಪ್ರತಿ ನಾಗರಿಕನಿಗೂ ನಮ್ಮ ಸಂವಿಧಾನದ ಬಗ್ಗೆ ತಿಳಿದಿರಬೇಕು. ಸಂವಿಧಾನ ನೀಡಿರುವ ಹಕ್ಕುಗಳು, ಅವುಗಳು ಸರಿಯಾಗಿ ಅನುಷ್ಠಾನ ಮಾಡಲಾಗುತ್ತಿದೆಯೇ ಎಂದು ಎಲ್ಲರಿಗೂ ತಿಳಿಯುವ ಸಲುವಾಗಿ ಸಮಾವೇಶವನ್ನು ಆಯೋಜಿಸುತ್ತಿರುವುದಾಗಿ ತಿಳಿಸಬೇಕಿದೆ. ಸಂವಿಧಾನದಲ್ಲಿ ಕೆಲವರಿಗೆ ನಂಬಿಕೆ , ಗೌರವವಿಲ್ಲ. ಆದ್ದರಿಂದ ಜನರ ದಾರಿ ತಪ್ಪಿಸುತ್ತಿದ್ದಾರೆ ಎಂದರು.
ಸಹಿಷ್ಣುತೆ ಮತ್ತು ಸಹಬಾಳ್ವೆಯನ್ನು ಭೋದಿಸುವ ಸಂವಿಧಾನ:
ಸಂವಿಧಾನದ ಬಗ್ಗೆ ಜಾಗೃತಿ ಮೂಡಿಸಬೇಕಾದ್ದು ಸರ್ಕಾರಗಳ ಕರ್ತವ್ಯ. ಸಹಿಷ್ಣುತೆ ಮತ್ತು ಸಹಬಾಳ್ವೆಯನ್ನು ಸಂವಿಧಾನ ತಿಳಿಸುತ್ತದೆ, ಆದರೆ ಅದು ಪಾಲನೆಯಾಗುತ್ತಿದೆಯೇ? ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ನಿಜವಾಗಲೂ ಆಗುತ್ತಿದೆಯೇ? ಸಾಮಾಜಿಕ ನ್ಯಾಯ ಮತ್ತು ಅವಾಕಶಗಳನ್ನು ಪಡೆಯಲು ಜನರು ಪ್ರಯತ್ನಿಸಲು ಜಾಗೃತಿ ಮೂಡಿಸಲು ಫೆಬ್ರವರಿ 24 ಮತ್ತು 25 ರಂದು ಎರಡು ಭಾರತ ಸಂವಿಧನ ಮತ್ತು ರಾಷ್ಟ್ರೀಯ ಐಕ್ಯತಾ ಸಮಾವೇಶವನ್ನು ಆಯೋಜಿಸಲಾಗಿದೆ ಎಂದರು
ಸಂವಿಧಾನ ಅರಿವು ಮೂಡಿಸುವಲ್ಲಿ ಬದ್ಧತೆ ಹಾಗೂ ಸ್ಪಷ್ಟತೆ :
ಸಂವಿಧಾನ ಬಗ್ಗೆ ಅರಿವು ಮೂಡಿಸುವ ಕಾರ್ಯದಲ್ಲಿ ಬದ್ಧತೆ ಹಾಗೂ ಸ್ಪಷ್ಟತೆ ಇದ್ದರೆ, ಯಾರು ನಮ್ಮನ್ನು ದಾರಿತಪ್ಪಿಸಲು ಸಾಧ್ಯವಿಲ್ಲ. ಸುಮಾರು 78% ರಷ್ಟು ಜನರು ಶಿಕ್ಷಣ ಪಡೆದಿದ್ದಾರೆ. ವಿದ್ಯಾವಂತರು ಇಂದಿಗೂ ಮೌಢ್ಯ ಕಂದಾಚಾರವನ್ನು ನಂಬುತ್ತಿದ್ದಾರೆ. ನಮ್ಮಲ್ಲಿ ವೈಚಾರಿಕತೆಯ ಬಗ್ಗೆ ಜ್ಞಾನವಿಲ್ಲ. ಸರಿತಪ್ಪುಗಳ ಬಗ್ಗೆ ಅರಿಯಲೆಂದೇ ಶಿಕ್ಷಣ ಪಡೆಯುವುದು ಎಂದರು.
ಸಚಿವ ಡಾ: ಹೆಚ್.ಸಿ ಮಹದೇವಪ್ಪ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು

National
U-19 World Cup| ವೈಭವ್‌ನ ಶತಕ: 6ನೇ ಬಾರಿಗೆ ಅಂಡರ್-19 ವಿಶ್ವಕಪ್ ಗೆದ್ದ ಟೀಂ ಇಂಡಿಯಾ
ಹರಾರೆ: ಜಿಂಬಾಬ್ವೆಯ ಹರಾರೆ ಮೈದಾನದಲ್ಲಿ ಯಂಗ್ ಇಂಡಿಯಾ ತಂಡ ಇತಿಹಾಸ ಸೃಷ್ಟಿಸಿದೆ. ಅಂಡರ್- 19 ವಿಶ್ವಕಪ್ ಫೈನಲ್‌ನಲ್ಲಿ ಭಾರತ v/s ಇಂಗ್ಲೆಂಡ್ ತಂಡವನ್ನು ಬರೋಬ್ಬರಿ 100 ರನ್ಗಳಿಂದ ಸೋಲಿಸಿದ್ದು, ಭಾರತ ಸತತ ಆರನೇ ಬಾರಿಗೆ ಅಂಡರ್- 19 ವಿಶ್ವಕಪ್ ಎತ್ತಿಹಿಡಿದಿದೆ.
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ 50 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 411 ರನ್ ಗಳಿಸಿತ್ತು. ಈ ಗುರಿ ಬೆನ್ನಟ್ಟಿದ ಇಂಗ್ಲೆಂಡ್ ತಂಡವೂ 311 ರನ್‌ಗಳಿಗೆ ಆಲೌಟ್ ಆಗುವ ಮೂಲಕ 100 ರನ್ಗಳಿಂದ ಸೋಲೊಪ್ಪಿಕೊಂಡಿತು. ಭಾರತದ ಈ ಗೆಲುವಿನಲ್ಲಿ ಮುಖ್ಯ ಪಾತ್ರವಹಿಸಿದ 14 ವರ್ಷದ ವೈಭವ್ ಸೂರ್ಯವಂಶಿ ಕೇವಲ 80 ಎಸೆತಗಳಲ್ಲಿ 175 ರನ್‌ಗಳ ಇನ್ನಿಂಗ್ಸ್ ಆಡಿದರು. ವೈಭವ್ ಅವರ ಈ ಇನ್ನಿಂಗ್ಸ್‌ನಲ್ಲಿ 15 ಸಿಕ್ಸರ್‌ಗಳು ಮತ್ತು 15 ಬೌಂಡರಿಗಳು ಸೇರಿದ್ದವು.

ವೈಭವ್‌ನ ಸ್ಫೋಟಕ ಶತಕ
ಈ ವೇಳೆ ವೈಭವ್ 39 ಎಸೆತಗಳಲ್ಲಿ ವೇದಾಂತ್ ತ್ರಿವೇದಿ ಅವರೊಂದಿಗೆ ಮೂರನೇ ವಿಕೆಟ್‌ಗೆ 89 ರನ್‌ಗಳ ಪಾಲುದಾರಿಕೆಯನ್ನು ಹಂಚಿಕೊಂಡರು. ವೈಭವ್ ವಿಕೆಟ್ ಪತನವಾದಾಗ ತಂಡದ ಮೊತ್ತ 251 ರನ್ ಆಗಿತ್ತು. ಇದರ ನಂತರ ಉಳಿದ 7 ಆಟಗಾರರು ಸ್ಕೋರ್ ಬೋರ್ಡ್ಗೆ 160 ರನ್ ಸೇರಿಸಿದರು. ವೇದಾಂತ್ 36 ಎಸೆತಗಳಲ್ಲಿ 32 ರನ್ ಗಳಿಸಿದರೆ, ವಿಹಾನ್ ಮಲ್ಹೋತ್ರಾ 36 ಎಸೆತಗಳಲ್ಲಿ 30 ರನ್ ಬಾರಿಸಿದರು. ಅಭಿಗ್ಯಾನ್ ಕುಂಡು 31 ಎಸೆತಗಳಲ್ಲಿ 40 ರನ್, ಅಂಬ್ರಿಸ್ ಕೇವಲ 18 ರನ್, ಕನಿಷ್ಕ್ ಚೌಹಾಣ್ 20 ಎಸೆತಗಳಲ್ಲಿ ಅಜೇಯ 37 ರನ್ ಗಳಿಸಿದರು. ಇಂಗ್ಲೆಂಡ್ ಪರ ಜೇಮ್ಸ್ ಮಿಂಟೊ ಮೂರು ವಿಕೆಟ್ ಪಡೆದರೆ, ಸೆಬಾಸ್ಟಿಯನ್ ಮಾರ್ಗನ್ ಮತ್ತು ಅಲೆಕ್ಸ್ ಗ್ರೀನ್ ತಲಾ ಎರಡು ವಿಕೆಟ್ ಪಡೆದಿದ್ದಾರೆ.
ಏಕಾಂಗಿ ಹೋರಾಟ ಮಾಡಿದ ಫಾಕ್ನರ್ ಆಟ ವ್ಯರ್ಥ
ಭಾರತ ನೀಡಿದ 412 ರನ್‌ಗಳ ಗುರಿ ಬೆನ್ನಟ್ಟಿದ ಇಂಗ್ಲೆಂಡ್ ತಂಡ 40.2 ಓವರ್‌ಗಳಲ್ಲಿ 311 ರನ್‌ಗಳಿಗೆ ಆಲೌಟ್ ಆಯಿತು. ಇಂಗ್ಲೆಂಡ್ ಪರ ಏಕಾಂಗಿ ಹೋರಾಟ ನಡೆಸಿದ ಕ್ಯಾಲೆಬ್ ಫಾಕ್ನರ್ 67 ಎಸೆತಗಳಲ್ಲಿ 115 ರನ್‌ಗಳ ಇನ್ನಿಂಗ್ಸ್ ಆಡಿದರು. ಆದರೆ ಇನ್ನೊಂದು ತುದಿಯಿಂದ ಅವರಿಗೆ ಉತ್ತಮ ಬೆಂಬಲ ಸಿಗಲಿಲ್ಲ. ಫಾಕ್ನರ್ ಹೊರತುಪಡಿಸಿ ಬೆನ್ ಡಾಕಿನ್ಸ್ 66 ಮತ್ತು ಬೆನ್ ಮೇಯಸ್ 45 ರನ್‌ಗಳ ಇನ್ನಿಂಗ್ಸ್ ಆಡಿದರು. ನಾಯಕ ಥಾಮಸ್ 31 ರನ್ಗಳನ್ನು ನೀಡಿದರು. ಇಂಗ್ಲೆಂಡ್ ತಂಡ ಉತ್ತಮ ಪಡೆಯಿತ್ತಾದರೂ ಮಧ್ಯಮ ಓವರ್‌ಗಳಲ್ಲಿ ಎಂಟು ಎಸೆತಗಳಲ್ಲಿ ನಾಲ್ಕು ವಿಕೆಟ್‌ಗಳನ್ನು ಕಳೆದುಕೊಂಡಿತು. ಇದರಿಂದಾಗಿ ತಂಡಕ್ಕೆ ಬೃಹತ್ ಗುರಿಯನ್ನು ಬೆನ್ನಟ್ಟಲು ಸಾಧ್ಯವಾಗಲಿಲ್ಲ.

ಕೊನೆಗೂ 140 ಕೋಟಿ ಭಾರತೀಯರ ಕನಸು ನನಸಾಗಿದೆ. ಐಸಿಸಿ ಅಂಡರ್-19 ವಿಶ್ವಕಪ್ 2026ರ ಟ್ರೋಫಿಗೆ ‘ಯಂಗ್ ಇಂಡಿಯಾ’ ಮುತ್ತಿಟ್ಟಿದೆ. ಹರಾರೆಯಲ್ಲಿ ಇಂದು ನಡೆದ ಫೈನಲ್ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ಸ್ಫೋಟಕ ಶತಕ ಹಾಗೂ ಸಂಘಟಿತ ಬೌಲಿಂಗ್ ನೆರವಿನಿಂದ ಇಂಗ್ಲೆಂಡ್ ವಿರುದ್ಧ ಭಾರತ 100 ರನ್‌ಗಳ ಭರ್ಜರಿ ಜಯಗಳಿಸಿ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ.
National - International
ನಾಳೆಯಿಂದ T-20 World Cup| 20 ತಂಡಗಳು, 55 ಪಂದ್ಯಗಳು, 1 ಟ್ರೋಫಿ: ವೇಳಾಪಟ್ಟಿ ಏನು?
T-20 World Cup 2026: 10ನೇ ಆವೃತ್ತಿಯ ಟಿ-20 ವಿಶ್ವಕಪ್ ಭಾರತ ಮತ್ತು ಶ್ರೀಲಂಕಾ ಜಂಟಿಯಾಗಿ ಆಯೋಜಿಸುತ್ತಿದ್ದು, ನಾಳೆಯಿಂದ ಆರಂಭವಾಗಲಿದೆ. ಈ ಮೆಗಾ ಟೂರ್ನಮೆಂಟ್‌ನಲ್ಲಿ ಒಟ್ಟು 20 ತಂಡಗಳು ಸ್ಪರ್ಧಿಸಲಿವೆ. ಹಾಲಿ ಚಾಂಪಿಯನ್ ಆಗಿ ಕಣಕ್ಕಿಳಿಯುತ್ತಿರುವ ಭಾರತ, ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಅಮೆರಿಕ ವಿರುದ್ಧ ತನ್ನ ಮೊದಲ ಪಂದ್ಯವನ್ನು ಆಡಲಿದೆ.
20 ತಂಡಗಳ 4 ಗುಂಪುಗಳು ಯಾವ್ಯಾವು?
ಗುಂಪು -ಎ: ಭಾರತ, ಪಾಕಿಸ್ತಾನ, ಅಮೆರಿಕ, ನೆದರ್‌ಲ್ಯಾಂಡ್ಸ್, ನಮೀಬಿಯಾ.
ಗುಂಪು- ಬಿ: ಆಸ್ಟ್ರೇಲಿಯಾ, ಶ್ರೀಲಂಕಾ, ಜಿಂಬಾಬ್ವೆ, ಐರ್ಲೆಂಡ್, ಓಮನ್.
ಗುಂಪು- ಸಿ: ವೆಸ್ಟ್ ಇಂಡೀಸ್, ಇಂಗ್ಲೆಂಡ್, ಇಟಲಿ, ನೇಪಾಳ, ಸ್ಕಾಟ್ಲೆಂಡ್.
ಗುಂಪು -ಡಿ: ದಕ್ಷಿಣ ಆಫ್ರಿಕಾ, ನ್ಯೂಜಿಲೆಂಡ್, ಅಫ್ಘಾನಿಸ್ತಾನ, ಕೆನಡಾ, ಯುಎಇ.

ಆತಿಥ್ಯದ ಸ್ಥಳಗಳು ಯಾವ್ಯಾವು?
ಭಾರತ
- ಈಡನ್ ಗಾರ್ಡನ್ಸ್- ಕೋಲ್ಕತ್ತಾ
- ವಾಂಖೆಡೆ ಸ್ಟೇಡಿಯಂ- ಮುಂಬೈ
- ಎಂಎ ಚಿದಂಬರಂ ಸ್ಟೇಡಿಯಂ- ಚೆನ್ನೈ
- ನರೇಂದ್ರ ಮೋದಿ ಕ್ರೀಡಾಂಗಣ- ಅಹಮದಾಬಾದ್
- ಅರುಣ್ ಜೇಟ್ಲಿ ಕ್ರೀಡಾಂಗಣ- ದೆಹಲಿ
ಶ್ರೀಲಂಕಾ
- ಸಿಂಹಳೀಸ್ ಸ್ಪೋರ್ಟ್ಸ್ ಕ್ಲಬ್- ಕೊಲಂಬೊ
- ಆರ್.ಪ್ರೇಮದಾಸ ಕ್ರೀಡಾಂಗಣ- ಕೊಲಂಬೊ
- ಪಲ್ಲೆಕೆಲೆ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ- ಪಲ್ಲೆಕೆಲೆ
ಟಿ-20 ವಿಶ್ವಕಪ್ ಪಂದ್ಯದ ವೇಳಾಪಟ್ಟಿ ಏನು?
1.ಫೆ. 7 (ಶನಿವಾರ)
- ಪಾಕಿಸ್ತಾನ v/s ನೆದರ್ಲ್ಯಾಂಡ್ಸ್ — ಕೊಲಂಬೊ — ಬೆಳಿಗ್ಗೆ 11:00
- ವೆಸ್ಟ್ ಇಂಡೀಸ್ v/s ಸ್ಕಾಟ್ಲೆಂಡ್ – ಕೋಲ್ಕತ್ತಾ – ಮಧ್ಯಾಹ್ನ 3:00
- ಭಾರತ v/s ಅಮೆರಿಕ – ಮುಂಬೈ – ಸಂಜೆ 7:00
2.ಫೆ.8 (ಭಾನುವಾರ)
- ನ್ಯೂಜಿಲೆಂಡ್ v/s ಅಫ್ಘಾನಿಸ್ತಾನ – ಚೆನ್ನೈ – ಬೆಳಿಗ್ಗೆ 11:00
- ಇಂಗ್ಲೆಂಡ್ v/s ನೇಪಾಳ – ಮುಂಬೈ – ಮಧ್ಯಾಹ್ನ 3:00
- ಶ್ರೀಲಂಕಾ v/s ಐರ್ಲೆಂಡ್ – ಕೊಲಂಬೊ- ಸಂಜೆ 7:00
3.ಫೆ. 9 (ಸೋಮವಾರ)
- ಸ್ಕಾಟ್ಲೆಂಡ್ v/s ಇಟಲಿ — ಕೋಲ್ಕತ್ತಾ — ಬೆಳಿಗ್ಗೆ 11:00
- ಜಿಂಬಾಬ್ವೆ v/s ಓಮನ್ – ಕೊಲಂಬೊ – ಮಧ್ಯಾಹ್ನ 3:00
- ದಕ್ಷಿಣ ಆಫ್ರಿಕಾ v/s ಕೆನಡಾ – ಅಹಮದಾಬಾದ್ – ಸಂಜೆ 7:00
4. ಫೆ.10 (ಮಂಗಳವಾರ)
- ನೆದರ್ಲ್ಯಾಂಡ್ಸ್ v/s ನಮೀಬಿಯಾ — ದೆಹಲಿ — ಬೆಳಿಗ್ಗೆ 11:00
- ನ್ಯೂಜಿಲೆಂಡ್ v/s ಯುಎಇ – ಚೆನ್ನೈ – ಮಧ್ಯಾಹ್ನ 3:00
- ಪಾಕಿಸ್ತಾನ v/s ಅಮೆರಿಕ — ಕೊಲಂಬೊ— ಸಂಜೆ 7:00
5. ಫೆ. 11 (ಬುಧವಾರ)
- ದಕ್ಷಿಣ ಆಫ್ರಿಕಾ v/s ಅಫ್ಘಾನಿಸ್ತಾನ – ಅಹಮದಾಬಾದ್ – ಬೆಳಿಗ್ಗೆ 11:00
- ಆಸ್ಟ್ರೇಲಿಯಾ v/s ಐರ್ಲೆಂಡ್ – ಕೊಲಂಬೊ – ಮಧ್ಯಾಹ್ನ 3:00
- ಇಂಗ್ಲೆಂಡ್ v/s ವೆಸ್ಟ್ ಇಂಡೀಸ್ – ಮುಂಬೈ – ಸಂಜೆ 7:00 ಗಂಟೆಗೆ
6.ಫೆ.12 (ಗುರುವಾರ)
- ಶ್ರೀಲಂಕಾ v/s ಓಮನ್ — ಕ್ಯಾಂಡಿ — ಬೆಳಿಗ್ಗೆ 11:00
- ನೇಪಾಳ v/s ಇಟಲಿ — ಮುಂಬೈ — ಮಧ್ಯಾಹ್ನ 3:00
- ಭಾರತ v/s ನಮೀಬಿಯಾ — ದೆಹಲಿ — ಸಂಜೆ 7:00
7. ಫೆ. 13 (ಶುಕ್ರವಾರ)
- ಆಸ್ಟ್ರೇಲಿಯಾ v/s ಜಿಂಬಾಬ್ವೆ — ಕೊಲಂಬೊ— ಬೆಳಿಗ್ಗೆ 11:00
- ಕೆನಡಾ v/s ಯುಎಇ — ದೆಹಲಿ — ಮಧ್ಯಾಹ್ನ 3:00
- ಅಮೆರಿಕ v/s ನೆದರ್ಲ್ಯಾಂಡ್ಸ್ — ಚೆನ್ನೈ — ಸಂಜೆ 7:00
8. ಫೆ. 14 (ಶನಿವಾರ)
- ಐರ್ಲೆಂಡ್ v/s ಓಮನ್ — ಕೊಲಂಬೊ — ಬೆಳಿಗ್ಗೆ 11:00
- ಇಂಗ್ಲೆಂಡ್ v/s ಸ್ಕಾಟ್ಲೆಂಡ್ – ಕೋಲ್ಕತ್ತಾ – ಮಧ್ಯಾಹ್ನ 3:00
- ನ್ಯೂಜಿಲೆಂಡ್ v/s ದಕ್ಷಿಣ ಆಫ್ರಿಕಾ – ಅಹಮದಾಬಾದ್ – ಸಂಜೆ 7:00
9. ಫೆ. 15 (ಭಾನುವಾರ)
- ವೆಸ್ಟ್ ಇಂಡೀಸ್ v/s ನೇಪಾಳ – ಮುಂಬೈ – ಬೆಳಿಗ್ಗೆ 11:00
- ಅಮೆರಿಕ v/s ನಮೀಬಿಯಾ — ಚೆನ್ನೈ — 3:00
- ಭಾರತ /vs ಪಾಕಿಸ್ತಾನ – ಕೊಲಂಬೊ- ಸಂಜೆ 7:00
10. ಫೆ.16 (ಸೋಮವಾರ)
- ಅಫ್ಘಾನಿಸ್ತಾನ v/s ಯುಎಇ — ದೆಹಲಿ — ಬೆಳಿಗ್ಗೆ 11:00
- ಇಂಗ್ಲೆಂಡ್ v/s ಇಟಲಿ – ಕೋಲ್ಕತ್ತಾ – ಮಧ್ಯಾಹ್ನ 3:00
- ಆಸ್ಟ್ರೇಲಿಯಾ v/s ಶ್ರೀಲಂಕಾ – ಕ್ಯಾಂಡಿ – ಸಂಜೆ 7:00
11.ಫೆ. 17 (ಮಂಗಳವಾರ)
- ನ್ಯೂಜಿಲೆಂಡ್ v/s ಕೆನಡಾ – ಚೆನ್ನೈ – ಬೆಳಿಗ್ಗೆ 11:00
- ಐರ್ಲೆಂಡ್ v/s ಜಿಂಬಾಬ್ವೆ – ಕ್ಯಾಂಡಿ – ಮಧ್ಯಾಹ್ನ 3:00
- ಸ್ಕಾಟ್ಲೆಂಡ್ v/s ನೇಪಾಳ – ಮುಂಬೈ – ಸಂಜೆ 7:00 ಗಂಟೆಗೆ.
12.ಫೆ. 18 (ಬುಧವಾರ)
- ದಕ್ಷಿಣ ಆಫ್ರಿಕಾ v/s ಯುಎಇ — ದೆಹಲಿ — ಬೆಳಿಗ್ಗೆ 11:00
- ಪಾಕಿಸ್ತಾನ v/s ನಮೀಬಿಯಾ – ಕೊಲಂಬೊ – ಮಧ್ಯಾಹ್ನ 3:00
- ಭಾರತ v/s ನೆದರ್ಲ್ಯಾಂಡ್ಸ್ – ಅಹಮದಾಬಾದ್ – ಸಂಜೆ 7:00
13. ಫೆ.19 (ಗುರುವಾರ)
- ವೆಸ್ಟ್ ಇಂಡೀಸ್ v/s ಇಟಲಿ — ಕೋಲ್ಕತ್ತಾ — ಬೆಳಿಗ್ಗೆ 11:00
- ಶ್ರೀಲಂಕಾ v/s ಜಿಂಬಾಬ್ವೆ – ಕೊಲಂಬೊ – ಮಧ್ಯಾಹ್ನ 3:00
- ಅಫ್ಘಾನಿಸ್ತಾನ v/s ಕೆನಡಾ — ಚೆನ್ನೈ — ಸಂಜೆ 7:00
14.ಫೆ. 20 (ಶುಕ್ರವಾರ)
ಆಸ್ಟ್ರೇಲಿಯಾ v/s ಓಮನ್ – ಕ್ಯಾಂಡಿ – ಸಂಜೆ 7:00
National - International
ಭಾರತದ ಮೇಲಿನ 25% ಹೆಚ್ಚುವರಿ ಸುಂಕ ತೆಗೆಯಲು ಟ್ರಂಪ್ ಸಿದ್ಧತೆ!
ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಭಾರತದ ಮೇಲೆ 50% (25% ಹೆಚ್ಚುವರಿ) ಸುಂಕ ವಿಧಿಸಿದಾಗಿನಿಂದ ರಷ್ಯಾದಿಂದ ತೈಲ ಖರೀದಿಸುವುದು ಗಮನಾರ್ಹವಾಗಿ ಕಡಿಮೆಯಾಗಿದೆ. ಪ್ರಸ್ತುತ 50% ಸುಂಕ ಇದ್ದು, ಇದು ಶಾಶ್ವತವಾಗಿ ಇರೋದಿಲ್ಲ ಎಂದು ಸುಂಕ ಕಡಿತಗೊಳಿಸುವ ಬಗ್ಗೆ ಸುಳಿವು ಕೊಟ್ಟಿದ್ದಾರೆ.

ಭಾರತವು ರಷ್ಯಾದ ತೈಲ ಖರೀದಿ ಮಾಡುವ ಮೂಲಕ ಉಕ್ರೇನ್ ವಿರುದ್ಧದ ಯುದ್ಧಕ್ಕೆ ಫಂಡಿಂಗ್ ಮಾಡುತ್ತಿದೆ ಅನ್ನೋದು ಟ್ರಂಪ್ ಬಲವಾದ ಆರೋಪ ಇದೇ ಕಾರಣಕ್ಕೆ ಭಾರತದ ಮೇಲೆ ಸುಂಕ ಏರಿಸಿದ್ದಾರೆ. ಟ್ರಂಪ್ ಅಧಿಕಾರಕ್ಕೆ ಏರಿದ ಆರಂಭದಲ್ಲಿ ಭಾರತದಿಂದ ಅಮೆರಿಕಕ್ಕೆ ಆಮದಾಗುವ ವಸ್ತುಗಳ ಮೇಲೆ 25% ಸುಂಕ ವಿಧಿಸಿದ್ದರು. ಬಳಿಕ ರಷ್ಯಾದಿಂದ ಕಚ್ಚಾ ತೈಲವನ್ನು ಆಮದು ಮಾಡುತ್ತಿರುವುದಕ್ಕೆ ಪ್ರತಿಯಾಗಿ 25% ದಂಡದ ರೂಪದಲ್ಲಿ ಸುಂಕ ಹೇರಿದ್ದಾರೆ. ಈ ನಿರ್ಧಾರದಿಂದ ಭಾರತದ ಕೆಲವು ವಸ್ತುಗಳಿಗೆ ಈಗ 50% ಸುಂಕ ಹೇರಲಾಗಿದೆ.

ಯುಎಸ್, G7 ಮತ್ತು ಯುರೋಪಿಯನ್ ದೇಶಗಳು ರಷ್ಯಾದ ತೈಲಕ್ಕೆ ಬೆಲೆ ಮಿತಿ ವ್ಯವಸ್ಥೆ ಜಾರಿಗೆ ತಂದಿವೆ. ಈ ಮಿತಿ ಜನವರಿ 2026 ರ ವರೆಗೆ ಬ್ಯಾರೆಲ್‌ಗೆ ಸರಿಸುಮಾರು 47.60 ಡಾಲರ್ (4,360 ರೂ.) ಆಗಿದ್ದು, ಫೆಬ್ರವರಿ 1 ರಿಂದ 44.10 ಡಾಲರ್ (4,039 ರೂ.) ಗೆ ಇಳಿಕೆಯಾಗಲಿದೆ. ಒಂದು ವೇಳೆ ಮಿತಿಗೊಳಿಸಿದ ಬೆಲೆಗಿಂತ ಹೆಚ್ಚಿನ ದರಕ್ಕೆ ಮಾರಾಟ ಮಾಡಿದ್ರೆ, ವಿಮೆ, ಸಾಗಣೆ ಮತ್ತು ಹಣಕಾಸು ಮುಂತಾದ ಸೇವೆಗಳನ್ನು ಒದಗಿಸಲಾಗುವುದಿಲ್ಲ ಎಂದು ದೇಶಗಳು ಎಚ್ಚರಿಕೆ ನೀಡಿವೆ.
-
Chikmagalur3 hours agoವೈದ್ಯಕೀಯ ವಿಭಾಗದ ಕ್ಯಾಪ್ಟನ್ ಡಾ.ಸಾತ್ವಿಕ್ ಅರುಣ್ಗೆ ಅದ್ದೂರಿ ಸ್ವಾಗತ ಕೋರಿದ ಗ್ರಾಮಸ್ಥರು
-
National - International24 hours agoನಾಳೆಯಿಂದ T-20 World Cup| 20 ತಂಡಗಳು, 55 ಪಂದ್ಯಗಳು, 1 ಟ್ರೋಫಿ: ವೇಳಾಪಟ್ಟಿ ಏನು?
-
Special10 hours agoಪಿ ಎಂ ಆವಾಸ್ ಯೋಜನೆಯಿಂದ ಮನೆಕಟ್ಟಲು ಸಬ್ಸಿಡಿ!
-
National23 hours agoU-19 World Cup| ವೈಭವ್‌ನ ಶತಕ: 6ನೇ ಬಾರಿಗೆ ಅಂಡರ್-19 ವಿಶ್ವಕಪ್ ಗೆದ್ದ ಟೀಂ ಇಂಡಿಯಾ
-
Chamarajanagar6 hours agoಗುಬ್ಬಚ್ಚಿಗೂಡು ಜಾಗೃತಿ ಅಭಿಯಾನ: ಹನೂರಿನ ಶಾಲೆಗಳಲ್ಲಿ ಅರಿವು ಮೂಡಿಸಿದ ರೈತ ದಂಪತಿ
-
State3 hours agoಉಳಿತಾಯದ ಹೂಡಿಕೆಗಳು MSIL ಸಂಸ್ಥೆಯಲ್ಲಿ ಸುಭದ್ರ ಗ್ಯಾರಂಟಿ: ಸಿಎಂ ಸಿದ್ದರಾಮಯ್ಯ
-
Mandya23 minutes agoಫೆ.28ಕ್ಕೆ ಮೈಸೂರು ಷುಗರ್ ಕಂಪನಿಯ ಸರ್ವ ಸದಸ್ಯರ ಸಾಮಾನ್ಯ ಸಭೆ : ಸಿ.ಡಿ.ಗಂಗಾಧರ್
-
State5 hours agoಜಿಬಿಎ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಲಿದೆ: ಬಿ.ವೈ.ವಿಜಯೇಂದ್ರ
