Politics
ರಾಜ್ಯಸಭೆಗೆ ಮೂವರು ಕಾಂಗ್ರೆಸ್ ಹಾಗೂ ಓರ್ವ ಬಿಜೆಪಿ ಅಭ್ಯರ್ಥಿಗಳು ಆಯ್ಕೆ.
ಕಾಂಗ್ರೆಸ್ ಒಟ್ಟು ಶಾಸಕರ ಸಂಖ್ಯೆ- 134
ಅಜಯ್ ಮಾಕೇನ್ (ಕಾಂಗ್ರೆಸ್) – 47
ನಾರಾಯಣ ಭಾಂಡಗೆ (ಬಿಜೆಪಿ)- 48
ಯಾಸೀರ್ ಹುಸೇನ್(ಕಾಂಗ್ರೆಸ್)- 47
ಜಿ.ಸಿ.ಚಂದ್ರಶೇಖರ್(ಕಾಂಗ್ರೆಸ್)- 45
ಕುಪೇಂದ್ರ ರೆಡ್ಡಿ(ಜೆಡಿಎಸ್)- 35
ಮೈತ್ರಿ ಕೂಟಕ್ಕೆ ಭಾರಿ ಮುಖಭಂಗ
ತಪ್ಪಾದ ಲೆಕ್ಕಾಚಾರ…ಬಿಜೆಪಿಯ ಎಸ್.ಟಿ.ಸೋಮಶೇಖರ್ ಕಾಂಗ್ರೆಸ್ ಪರ ಅಡ್ಡಮತದಾನ
ಪಕ್ಷೇತರರ 4 ಮತಗಳು ಕಾಂಗ್ರೆಸ್ ಗೆ.
ಶಿವರಾಂ ಹೆಬ್ಬಾರ್,ಎಸ್.ಟಿ.ಸೋಮಶೇಖರ್ ವಿರುದ್ದ ಕ್ರಮ ಇನ್ನೂ ನಿಧಾನ
ಎಸ್.ಟಿ.ಸೋಮಶೇಖರ್ ಅನರ್ಹ ಅಸಾಧ್ಯ.
ಅಡ್ಡಮತದಾನ ವಿಪ್ ಉಲ್ಲಂಘನೆ ಕ್ರಮ ಕಷ್ಟಕರ.
Politics
ಕೈಹಿಡಿದ ಮತದಾರರು ಮುದುಡಿದ ಕಮಲ: ಬಿಜೆಪಿ ಭದ್ರಕೋಟೆ ಛಿದ್ರಗೊಳಿಸಿದ ಕೈಪಡೆ
ದಾವಣಗೆರೆ. ಜೂ.೪; ತೀವ್ರ ಕೂತೂಹಲ ಮೂಡಿಸಿದ್ದ ದಾವಣಗೆರೆ ಲೋಕಸಭಾ ಕ್ಷೇತ್ರ ಈ ಬಾರಿ ಕಾಂಗ್ರೆಸ್ ಪಾಲಾಗಿದೆ.ಕಾಂಗ್ರೆಸ್ ನ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ್ 26,094 ಮತಗಳ ಅಂತರದಿಂದ ವಿಜಯಶಾಲಿಯಾಗಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ್ 633,059 ಮತ ಪಡೆದಿದ್ದಾರೆ. ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ್ 606,965 ಮತಗಳಿದ್ದಾರೆ.
ಟಿಕೇಟ್ ಘೋಷಣೆಯಾದಾಗಿನಿಂದಲೂ ಗೆಲುವಿನ ಭರವಸೆಯಲ್ಲಿದ್ದ ಕಾಂಗ್ರೆಸ್ ಅಭ್ಯರ್ಥಿ ಕೊನೆಗೂ ಗೆದ್ದು ಬೀಗಿದ್ದಾರೆ.ದಾವಣಗೆರೆ ಲೋಕಸಭಾ ಕ್ಷೇತ್ರ ಬಿಜೆಪಿಯ ಭದ್ರಕೋಟೆಯಾಗಿದ್ದು ಆದರೆ ಈ ಬಾರಿ ಕಾಂಗ್ರೆಸ್ ಬಿಜೆಪಿಯ ಕ್ಷೇತ್ರವನ್ನು ಕಸಿದಿದೆ.ದಾವಣಗೆರೆಯಲ್ಲಿ ಈ ಬಾರಿಯೂ
ಬಿಜೆಪಿ ಪಾಲಾಗುತಿತ್ತು ಎನ್ನಲಾಗುತ್ತಿತ್ತು ಆದರೆ ಈ ಬಾರಿ ಪ್ರಭಾ ಮಲ್ಲಿಕಾರ್ಜುನ್ ಅವರಿಗೆ ದಾವಣಗೆರೆ ಜನತೆ ಜೈ ಎಂದಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಡಾ. ಪ್ರಭಾ ಮಲ್ಲಿಕಾರ್ಜುನ್ ನುಡಿದಂತೆ ಗೆಲುವು ಪಡೆದಿದ್ದಾರೆ.
ಮತ ಎಣಿಕೆಯ ಆರಂಭದಿಂದಲೂ ಮುನ್ನಡೆ ಸಾಧಿಸಿದ್ದ ಕಾಂಗ್ರೆಸ್ ಪಕ್ಷ ಕೊನೆಯ ಸುತ್ತಿನ ವರೆಗೂ ಮುನ್ನಡೆ ಸಾಧಿಸುತ್ತಲೇ ಬಂದಿತ್ತು. ಅಂತಿಮವಾಗಿ ಕಾಂಗ್ರೆಸ್ ಅಭ್ಯರ್ಥಿ ಪ್ರಭಾ ಮಲ್ಲಿಕಾರ್ಜುನ್ ಗೆಲುವು ಸಾಧಿಸಿದ್ದು, ಮತದಾರ ಕೈ ಕೊರಳಿಗೆ ಜಯದಮಾಲೆ ಹಾಕಿದ್ದಾರೆ.
Politics
ಶಾಸಕ ಶಾಮನೂರು ಶಿವಶಂಕರಪ್ಪ ಕಚೇರಿಗೆ ಬೆದರಿಕೆಪತ್ರ ಬರೆದ ಕಿಡಿಗೇಡಿಗಳು
ದಾವಣಗೆರೆ.ಮಾ.೨೩; ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತದರಿ ಡಿ.ಕೆಶಿವಕುಮಾರ್ ಅವರಿಗೆ ಬೆದರಿಕೆ ಪತ್ರ ಬರೆದಿರುವ ಕಿಡಿಗೇಡಿಗಳು
ಶಾಸಕ ಶಾಮನೂರು ಶಿವಶಂಕರಪ್ಪನವರ ಕಚೇರಿಗೆ ಆ ಪತ್ರವನ್ನು ಹಾಕಿದ್ದಾರೆ ಎನ್ನುವುದು ತಡವಾಗಿ ಬೆಳಕಿಗೆ ಬಂದಿದೆ. ಶಾಮನೂರು ಶಿವಶಂಕರಪ್ಪನವರ ಆಪ್ತ ಸಹಾಯಕರು ನಗರದ ಬಡಾವಣೆ ಠಾಣೆಯಲ್ಲಿ ಬೆದರಿಕೆ ಪತ್ರದ ಕುರಿತು ದೂರು ದಾಖಲಿಸಿದ್ದಾರೆ. ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಅವರ ವಿರುದ್ಧ ಪತ್ರದ ಮೂಲಕ ವೈಯಕ್ತಿಕವಾಗಿ ಮಾನಹಾನಿ ಮಾಡಿ ಪ್ರಾಣ ಬೆದರಿಕೆ ಹಾಕಿರುವ ಕುರಿತಂತೆ ದೂರಿನಲ್ಲಿ ಉಲ್ಲೇಖಿಸಲಾಗಿದೆ.ದಾವಣಗೆರೆ ನಗರದ ಎಂಸಿಸಿ ಬಿ ಬ್ಲಾಕ್ನಲ್ಲಿರುವ ಶಾಮನೂರು ಶಿವಶಂಕರಪ್ಪನವರ ನಿವಾಸದ ಕಚೇರಿಗೆ ದಿನನಿತ್ಯ ಬರುವ ಪತ್ರಗಳನ್ನು ಪರಿಶೀಲನೆ ನಡೆಸುವ ವೇಳೆ ಮಾ.18ರಂದು ಸಿಎಂ ಹಾಗೂ ಡಿಸಿಎಂ ಬಗ್ಗೆ ವೈಯಕ್ತಿಕ ಮಾನಹಾನಿ ಮಾಡುವ ಕೆಟ್ಟ ಶಬ್ದಗಳನ್ನು ಬಳಸಿ ಪ್ರಾಣ ಬೆದರಿಕೆ ಹಾಕಿರುವ ಪತ್ರ ದೊರೆತಿದೆ. ಈ ವಿಚಾರವನ್ನು ಶಾಸಕರು ಕೂಡಲೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾಪ್ರಶಾಂತ್ ಅವರ ಗಮನಕ್ಕೆ ತಂದಿದ್ದಾರೆ. ಆ ಬಳಿಕ ಎಸ್ಪಿ ಅವರ ಸಲಹೆಯಂತೆ ದೂರು ನೀಡಲಾಗಿದೆ. ಪತ್ರದಲ್ಲಿ ವೈಯಕ್ತಿಕ ಚಾರಿತ್ರಕ್ಕೆ ಧಕ್ಕೆ ಬರುವ ರೀತಿ ಪದಗಳನ್ನು ಬಳಸಲಾಗಿದೆ. ಅಲ್ಲದೇ ಬೆದರಿಕೆ ಸಹ ಹಾಕಲಾಗಿದೆ. ಈ ಪತ್ರ ಬರೆದವರನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಕಾರ್ಯಕರ್ತರು ಒತ್ತಾಯಿಸಿದ್ದಾರೆ.
Politics
ಈಶ್ವರಪ್ಪ ಬೆಂಬಲಕ್ಕೆ ನಿಂತ ರೇಣುಕಾಚಾರ್ಯ
ದಾವಣಗೆರೆ.ಮಾ.೨೧; ಬಿಜೆಪಿಯ ವರಿಷ್ಠರು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮಾಜಿ ಡಿಸಿಎಂ ಕೆ. ಎಸ್. ಈಶ್ವರಪ್ಪ ಅವರಿಗೆ ಟಿಕೆಟ್ ನಿರಾಕರಿಸಿದ್ದರು. ಈಶರಪ್ಪ ಪಕ್ಷಕ್ಕಾಗಿ ಸಾಕಷ್ಟು ದುಡಿದಿದ್ದಾರೆ. ಅವರ ಪುತ್ರ ಕಾಂತೇಶ್ ಗೆ ಈ ಬಾರಿ ಟಿಕೆಟ್ ನೀಡಬೇಕಿತ್ತು ಎಂದು ಮಾಜಿ ಸಚಿವ ಎಂ.ಪಿ ರೇಣುಕಾಚಾರ್ಯ ಹೇಳಿದ್ದಾರೆ.
ದಾವಣಗೆರೆ ನಗರ ದೇವತೆ ಶ್ರೀ ದುರ್ಗಾಂಭಿಕಾ ದೇವಿ ದರ್ಶನ ಪಡೆದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಈಶ್ವರಪ್ಪ ಪುತ್ರನಿಗೆ
ಯಾಕೆ ನಿರಾಕರಿಸಲಾಯಿತು ಎಂಬುದು
ಗೊತ್ತಿಲ್ಲ. ಪಕ್ಷದ ವರಿಷ್ಠರು ಈ ಕ್ರಮ ತೆಗೆದುಕೊಂಡಿದ್ದಾರೆ. ಹೈಕಮಾಂಡ್ ನಿರ್ಧಾರಕ್ಕೆ ನಾವೆಲ್ಲಾ ಬದ್ಧ. ಆದರೆ, ಈ ವಿಚಾರದಲ್ಲಿ ಈಶ್ವರಪ್ಪ ಯಡಿಯೂರಪ್ಪ ಹಾಗೂ ವಿಜಯೇಂದ್ರ ಅವರ ಬಗ್ಗೆ ಆರೋಪ ಮಾಡುತ್ತಿರುವ ಕುರಿತಂತೆ ಪ್ರತಿಕ್ರಿಯೆ ನೀಡುವಷ್ಟು ನಾನುದೊಡ್ಡವನಲ್ಲ. ಈಶ್ವರಪ್ಪರ ಕುಟುಂಬಕ್ಕೆ ಟಿಕೆಟ್ ನೀಡಿದ್ದರೆ ತಪ್ಪೇನಾಗುತಿತ್ತು ಎಂಬುದಷ್ಟೇ ನನ್ನ ಭಾವನೆ ಎಂದಿದ್ದಾರೆ.
“ಬಿಜೆಪಿಗೆ ದ್ರೊಹ ಬಗೆಯಲ್ಲ”
ಯಾವ ದೇವಸ್ಥಾನಕ್ಕಾದರೂ ಬರಲಿ, ಮಠಗಳಿಗಾದರೂ ಬರಲಿ. ಆಣೆ ಮಾಡಲು ಸಿದ್ಧನಿದ್ದೇನೆ. ಬೇರೆಯೊಬ್ಬರ ಜೊತೆ ಹೊಂದಾಣಿಕೆ ಮಾಡಿಕೊಂಡು ಬಿಜೆಪಿ ಪಕ್ಷಕ್ಕೆ ದ್ರೋಹ ಬಗೆಯುವ ಕೆಲಸ ಮಾಡುವುದಿಲ್ಲ
ಎಂದು ಮಾಜಿ ಶಾಸಕ ಎಂ. ಪಿ. ರೇಣುಕಾಚಾರ್ಯ ಸವಾಲು ಹಾಕಿದ್ದಾರೆ.ಬಿಜೆಪಿ ಪಕ್ಷಕ್ಕಾಗಿ ಹಗಲಿರುಳು ಕೆಲಸ ಮಾಡಿದ್ದೇವೆ. ಪ್ರಧಾನಿ ನರೇಂದ್ರ ಮೋದಿ ಅವರು ಮೂರನೇ ಬಾರಿ ಪ್ರಧಾನಿಯಾಗಬೇಕು. ರಾಜ್ಯದ 28 ಕ್ಷೇತ್ರಗಳಲ್ಲಿಯೂ ಗೆಲ್ಲಬೇಕು.
ದಾವಣಗೆರೆಯಲ್ಲಿಯೂ ಬಿಜೆಪಿ ಗೆಲ್ಲಿಸಬೇಕೆಂಬ ಅಪೇಕ್ಷೆ ನಮ್ಮದು ಎಂದು ಹೇಳಿದರು.
ಹಣಕ್ಕೋಸ್ಕರ ರೇಣುಕಾಚಾರ್ಯ ಸೇರಿದಂತೆ ಇತರರು ಭಿನ್ನಮತೀಯ ಚಟುವಟಿಕೆ ನಡೆಸುತ್ತಿದ್ದಾರೆ ಎಂಬ ಆರೋಪದಲ್ಲಿ ಹುರುಳಿಲ್ಲ. ಇದರ ಅವಶ್ಯಕತೆಯೂ ಇಲ್ಲ. ಬಿಜೆಪಿ ಪಕ್ಷವು ನಮಗೆ ತಾಯಿ ಸಮಾನ. ವದಂತಿಗಳುಹಾಗೂ ಊಹಾಪೋಹಗಳಿಗೆ ಯಾರೂ ಕಿವಿಗೊಡಬೇಡಿ. ದೇವರು ನಮಗೆ ಆರ್ಥಿಕವಾಗಿ ಶಕ್ತಿ ನೀಡಿದ್ದು, ಇಂಥ ಆಸೆ ನಮ್ಮಲ್ಲಿರುವ ಯಾರಿಗೂ ಇಲ್ಲ. ದುಡ್ಡಿಗಾಗಿ ಇಂಥ ಕೆಲಸಕ್ಕೂ ನಾವು ಕೈ ಹಾಕುವ ಅವಶ್ಯಕತೆ ಇಲ್ಲ ಎಂದು
ಹೇಳಿದರು.
-
Mysore3 months ago
ಶ್ರೀಮತಿ ಭವಾನಿ ರೇವಣ್ಣ ಸಹೋದರ ಇಂದು ಅಂತ್ಯಕ್ರಿಯೆ
-
State6 months ago
Free sewing machine, ಉಚಿತ ಹೊಲಿಗೆ ಯಂತ್ರ ಪಡೆಯಲು ಅರ್ಜಿ ಸಲ್ಲಿಸಿ!
-
State6 months ago
ಶಾಲಾ ಮಕ್ಕಳಿಗೆ ಫೆಬ್ರವರಿ ತಿಂಗಳಲ್ಲಿ ಭರ್ಜರಿ ಹಾಲಿಡೇ! ಇಲ್ಲಿದೆ ರಜಾ ಲಿಸ್ಟ್!!!
-
Health6 months ago
Sugar Control ಆಗಬೇಕು ಅಂದ್ರೆ ಈ ಹಿಟ್ಟನ್ನು ತಿನ್ನಬೇಕಂತೆ! ಕನ್ಫ್ಯೂಸ್ ಆಗ್ಬೇಡಿ ಸುದ್ದಿ ಓದಿ
-
Hassan3 months ago
ಹಾಸನ ಜಿಲ್ಲೆ ಹೊಳೆನರಸೀಪುರ ತಾಲ್ಲೂಕಿನ ಹರದನಹಳ್ಳಿಯಲ್ಲಿ ಸಂಸದ ಪ್ರಜ್ವಲ್ ರೇವಣ್ಣ ಹೇಳಿಕೆ
-
Uncategorized2 months ago
NEET 2024 ಮರು ಪರೀಕ್ಷೆಗೆ ಒತ್ತಾಯ: ಪೇಪರ್ ಲೀಕ್, ಮೋಸದ ಗ್ರೇಸ್ ಮಾರ್ಕ್, ಒಂದೇ ಕೇಂದ್ರದ ವಿದ್ಯಾರ್ಥಿಗಳು ಟಾಪರ್ಸ್ !!
-
Uncategorized8 months ago
ಅರ್ಜುನನ ಸಮಾದಿಗೆ ಪೂಜೆ ಸಲ್ಲಿಸಿದ ಮೈಸೂರು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್
-
State6 months ago
ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ!!. ‘ಹಳೆ ಪಿಂಚಣಿ’ ಜಾರಿಗೆ ಗ್ರೀನ್ ಸಿಗ್ನಲ್ ಕೊಟ್ಟ ರಾಜ್ಯ ಸರ್ಕಾರ.