Chikmagalur
ಧಾರಾಕಾರ ಮಳೆಗೆ ಎರಡು ಮನೆಗಳಿಗೆ ಹಾನಿ
ಚಿಕ್ಕಮಗಳೂರು : ಮಲೆನಾಡಿನಾದ್ಯಂತ ಧಾರಾಕಾರ ಮಳೆ ಸುರಿಯುತ್ತಿದೆ. ಕಳೆದ ಮೂರು ದಿನಗಳಿಂದ ಪಶ್ಚಿಮ ಘಟಕ್ಕೆ ಹೊಂದಿಕೊಂಡಂತೆ ಇರುವ ಮಲೆನಾಡಿನ ಪ್ರದೇಶಗಳಲ್ಲಿ ನಿರಂತರ ಮಳೆ ಸುರಿಯುತ್ತಿದೆ. ಮಳೆಯಿಂದಾಗಿ ಮೂಡಿಗೆರೆ ತಾಲೂಕಿನಲ್ಲಿ ಎರಡು ಮನೆಗಳು ಕುಸಿದಿವೆ. ಮನೆಯಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮೂಡಿಗೆರೆ ತಾಲೂಕಿನ ಗೋಣಿಬೀಡು ಹೋಬಳಿಯ ಚಿನ್ನಿಗ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಣಜೂರು ಗ್ರಾಮದಲ್ಲಿ ದಿನೇಶ್ ಎಂಬುವವರು ಮನೆ ಶುಕ್ರವಾರ ರಾತ್ರಿ ಸುರಿದ ಮಳೆಗೆ ಕುಸಿದಿದೆ. ಹಾಗೆಯೇ ಬಾಳೂರು ಹೋಬಳಿ ಜಾವಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೇಗೂರು ಗ್ರಾಮದಲ್ಲಿ ಮನೆಯೊಂದು ಕುಸಿದಿದೆ.
ಮೇಗೂರು ಗ್ರಾಮದ ರಾಮಯ್ಯ ಎಂಬುವವರ ಮನೆ ಮಳೆಯಿಂದಾಗಿ ಕುಸಿದು ಬಿದ್ದಿದೆ. ಮನೆಯ ಗೋಡೆ ಮತ್ತು ಮೇಲ್ಚಾವಣಿ ಬಹುತೇಕ ಕುಸಿದು ಬಿದ್ದಿದೆ. ಈ ಸಮಯದಲ್ಲಿ ಮನೆಯವರು ಒಳಗಡೆಯೇ ಇದ್ದರು ಎಂದು ತಿಳಿದುಬಂದಿದ್ದು. ಮನೆಯವರೆಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಸ್ಥಳಕ್ಕೆ ಕಂದಾಯ ಮತ್ತು ಗ್ರಾಮ
ಪಂಚಾಯಿತಿ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಅವರ ಮನೆಗೆ ತಾತ್ಕಾಲಿಕ ರಕ್ಷಣೆಗಾಗಿ ಟಾರ್ಪಲ್ ಹೊದಿಸಲು ವ್ಯವಸ್ಥೆ ಮಾಡಿದ್ದು. ಕುಟುಂಬದವರನ್ನು ಪಕ್ಕದ ಮನೆಗೆ ಸ್ಥಳಾಂತರಿಸಲಾಗಿದೆ.
Chikmagalur
ವೈದ್ಯರು ನಿಸ್ವಾರ್ಥದಿಂದ ಸೇವೆ ಮಾಡಿ: ಪೇಜಾವರ ಶ್ರೀ ಕರೆ
ಬೆಂಗಳೂರು: ಪ್ರತಿಷ್ಠಿತ ಕಾವೇರಿ ಆಸ್ಪತ್ರೆಯು ಎಲೆಕ್ಟ್ರಾನಿಕ್ಸ್ ಸಿಟಿಯಲ್ಲಿನ ಆಸ್ಪತ್ರೆಯಲ್ಲಿ ಕರ್ನಾಟಕದ ಅತಿ ದೊಡ್ಡ ಹೊರರೋಗಿ ವಿಭಾಗ (OPD) ಸೌಲಭ್ಯವನ್ನು ಆರಂಭಿಸಿದೆ.
ಕಾಗದರಹಿತ ಡಿಜಿಟಲ್ ವ್ಯವಸ್ಥೆ ಹೊಂದಿರುವ ಈ ವಿಭಾಗವನ್ನು ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರು ಮಂಗಳವಾರ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ಅತ್ಯುತ್ತಮ ಸೌಲಭ್ಯಗಳೊಂದಿಗೆ ಸೇವೆಗೆ ಸಮರ್ಪಿತವಾಗಿರುವ ಈ ಒಪಿಡಿ ವಿಭಾಗದಲ್ಲಿ ರೋಗಿಗಳಿಗೆ ಉತ್ತಮ ಸೇವೆ ಸಿಗುತ್ತದೆ. ಇನ್ನು ವೈದ್ಯರು ನಿಸ್ವಾರ್ಥದಿಂದ ಸೇವೆ ಮಾಡಬೇಕು ಎಂದು ಹೇಳಿದರು.
ಆಸ್ಪತ್ರೆಯ ಸಂಸ್ಥಾಪಕ ಡಾ. ಎಸ್. ಚಂದ್ರಕುಮಾರ್ ಮಾತನಾಡಿ, “ಕಾರಿಡಾರ್‌ನಲ್ಲಿ ಕಾಯುವಿಕೆ ಹಾಗೂ ಚಿಕಿತ್ಸೆಗಾಗಿ ಅಲೆಯುವ ಕುಟುಂಬಗಳ ಸಂಕಷ್ಟ ನಿವಾರಿಸಲು, ರೋಗಿಗಳ ಅನುಭವಕ್ಕೆ ಆದ್ಯತೆ ನೀಡಿ ಈ ಆಧುನಿಕ ಒಪಿಡಿ ವಿಭಾಗವನ್ನು ನಿರ್ಮಿಸಿದ್ದೇವೆ. ಇಲ್ಲಿ 36 ವಿಶೇಷ ವಿಭಾಗಗಳಿದ್ದು, ಒಂದೇ ಸೂರಿನಡಿ 140ಕ್ಕೂ ಹೆಚ್ಚು ತಜ್ಞರು ಲಭ್ಯರಾಗಲಿದ್ದಾರೆ. ವರ್ಷದ ಎಲ್ಲಾ ದಿನಗಳಂದು ಬೆಳಗ್ಗೆ 8 ರಿಂದ ರಾತ್ರಿ 8 ರವರೆಗೆ ಇದು ಕಾರ್ಯನಿರ್ವಹಿಸಲಿದೆ ಎಂದು ಹೇಳಿದರು.
Chikmagalur
ಕಾಡುಕೋಣ ದಾಳಿಗೆ 45 ವರ್ಷದ ಮಂಜುನಾಥ್ ಬಲಿ
ಚಿಕ್ಕಮಗಳೂರು, ಜು. 21: ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಾಡುಕೋಣಗಳ ಹಾವಳಿ ಮತ್ತೆ ಜೀವ ಬಲಿ ಪಡೆದಿದೆ. ಕೊಪ್ಪ ತಾಲೂಕಿನ ಅಗಳಗಂಡಿ ಸಮೀಪದ ದೋಣಿಹಡ್ಲು ಗ್ರಾಮದಲ್ಲಿ ಕಾಡುಕೋಣ ದಾಳಿಗೆ 45 ವರ್ಷದ ಮಂಜುನಾಥ್ ಮೃತಪಟ್ಟಿದ್ದಾರೆ.
ಮಂಜುನಾಥ್ ಅವರು ತಮ್ಮ ಮನೆಯಿಂದ ತೋಟದ ಕಡೆಗೆ ತೆರಳುತ್ತಿದ್ದ ವೇಳೆ ಹಳ್ಳಿರಸ್ತೆಯಲ್ಲಿ ಏಕಾಏಕಿ ಎದುರಾದ ಕಾಡುಕೋಣ ದಾಳಿ ನಡೆಸಿದೆ. ತೀವ್ರವಾಗಿ ತಿವಿದ ಪರಿಣಾಮ ಅವರು ಗಂಭೀರವಾಗಿ ಗಾಯಗೊಂಡಿದ್ದರು. ಸ್ಥಳೀಯರು ತಕ್ಷಣ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದರೂ, ಮಾರ್ಗ ಮಧ್ಯೆಯೇ ಅವರು ಮೃತಪಟ್ಟಿದ್ದಾರೆ.

ಕೇವಲ 15 ದಿನಗಳ ಅಂತರದಲ್ಲಿ ಜಿಲ್ಲೆಯಲ್ಲಿ ಕಾಡುಕೋಣ ದಾಳಿಗೆ ಇದು ಎರಡನೇ ಬಲಿಯಾಗಿದೆ. ಕಳೆದ ಜುಲೈ 7ರಂದು ಕಳಸ ತಾಲೂಕಿನ 52 ವರ್ಷದ ಶೀಲಾ ಅವರು ಕಾಡುಕೋಣ ದಾಳಿಯಲ್ಲಿ ಮೃತಪಟ್ಟಿದ್ದರು. ನಿರಂತರವಾಗಿ ನಡೆಯುತ್ತಿರುವ ಕಾಡುಕೋಣ ದಾಳಿಗಳಿಂದ ಮಲೆನಾಡು ಭಾಗದ ಜನರಲ್ಲಿ ಆತಂಕ ಮನೆಮಾಡಿದ್ದು, ಸರ್ಕಾರ ಹಾಗೂ ಅರಣ್ಯ ಇಲಾಖೆಯ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಕಾಡು ಪ್ರಾಣಿಗಳ ಹಾವಳಿಯನ್ನು ನಿಯಂತ್ರಿಸಲು ಶಾಶ್ವತ ಕ್ರಮ ಕೈಗೊಳ್ಳಬೇಕು ಹಾಗೂ ಗ್ರಾಮೀಣ ಪ್ರದೇಶದ ಜನರ ಜೀವ ರಕ್ಷಣೆಗಾಗಿ ತುರ್ತು ಕ್ರಮಗಳನ್ನು ಜಾರಿಗೆ ತರಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಈ ಸಂಬಂಧ ಜಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ಕ್ರಮ ಕೈಗೊಳ್ಳಲಾಗಿದೆ.
Chikmagalur
ಮೂಡಿಗೆರೆ ರೋಟರಿ ಕ್ಲಬ್‌ನಿಂದ ವನಮಹೋತ್ಸವ: ಹಳಿಕೆ ಶಾಲಾ ಆವರಣದಲ್ಲಿ ಸಸಿ ನೆಟ್ಟು ಪರಿಸರ ಜಾಗೃತಿ
ಮೂಡಿಗೆರೆ: ಪರಿಸರ ಸಮತೋಲನ ಕಾಪಾಡುವ ನಿಟ್ಟಿನಲ್ಲಿ ರೋಟರಿ ಕ್ಲಬ್ (RI Dist 3182, Zone 08) ವತಿಯಿಂದ ತಾಲೂಕಿನ ಹಳಿಕೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಇತ್ತೀಚೆಗೆ ‘ವನಮಹೋತ್ಸವ’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ರೋಟರಿ ಸದಸ್ಯರು ಹಾಗೂ ಶಾಲಾ ಮಕ್ಕಳ ಜಂಟಿ ಸಹಭಾಗಿತ್ವದಲ್ಲಿ ವಿವಿಧ ತಳಿಯ ಗಿಡಗಳನ್ನು ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಪಾಸ್ಟ್ ಝೋನಲ್ ಲೆಫ್ಟಿನೆಂಟ್ ಆರ್‌ಟಿಎನ್. ಆದರ್ಶ ಅವರು, “ಇತ್ತೀಚಿನ ದಿನಗಳಲ್ಲಿ ಸಕಾಲಕ್ಕೆ ಮಳೆಯಾಗದಿರಲು ಮತ್ತು ಶುದ್ಧ ಗಾಳಿಯ ಅಭಾವಕ್ಕೆ ಮರ-ಗಿಡಗಳ ಅತಿಯಾದ ನಾಶವೇ ಪ್ರಮುಖ ಕಾರಣ. ಅಭಿವೃದ್ಧಿ ಅಥವಾ ಅನಿವಾರ್ಯ ಕಾರಣಗಳಿಗೆ ಒಂದು ಮರವನ್ನು ಕಡಿದರೆ, ಅದಕ್ಕೆ ಪ್ರತಿಯಾಗಿ ಕನಿಷ್ಠ ಎರಡು ಸಸಿಗಳನ್ನು ನೆಟ್ಟು ಪೋಷಿಸಬೇಕು. ಆಗ ಮಾತ್ರ ಪ್ರಕೃತಿಯನ್ನು ಕಾಪಾಡಿಕೊಳ್ಳಲು ಸಾಧ್ಯ. ಶಾಲಾ ಹಂತದಿಂದಲೇ ಮಕ್ಕಳು ಪರಿಸರ ಕಾಳಜಿಯನ್ನು ಮೈಗೂಡಿಸಿಕೊಳ್ಳಬೇಕು” ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಮೂಡಿಗೆರೆ ಘಟಕದ ಅಧ್ಯಕ್ಷ ಬಿ. ಕೆ. ದಿನೇಶ್, ಕಾರ್ಯದರ್ಶಿ ಆರ್‌ಟಿಎನ್. ಸಂತೋಷ್, ನಿಕಟಪೂರ್ವ ಅಧ್ಯಕ್ಷ ಆರ್‌ಟಿಎನ್. ಪ್ರಸಾದ್, ಸದಸ್ಯರಾದ ಆರ್‌ಟಿಎನ್. ಸಂದೀಪ್, ಆರ್‌ಟಿಎನ್. ಸುಭಾಷ್, ಆರ್‌ಟಿಎನ್. ಅವಿನ್, ಆರ್‌ಟಿಎನ್. ಸುನಿಲ್ ಉಪಸ್ಥಿತರಿದ್ದರು.
ಇದೇ ವೇಳೆ ಶಾಲೆಯ ಮುಖ್ಯ ಶಿಕ್ಷಕ ಮಂಜು ನಾಯ್ಕ್, ಶಿಕ್ಷಕಿ ರೇಣುಕಮ್ಮ, ಶಾಲಾ ವಿದ್ಯಾರ್ಥಿಗಳು ಹಾಗೂ ಸ್ಥಳೀಯ ಸಾರ್ವಜನಿಕರು ಭಾಗವಹಿಸಿ ಸಾಥ್ ನೀಡಿದರು.

ಅಂತಿಮವಾಗಿ “ಒಂದು ಸಸಿ ನೆಡೋಣ – ಪರಿಸರ ಉಳಿಸೋಣ” ಹಾಗೂ “ಸೇವೆಯೇ ಶ್ರೇಷ್ಠ” ಎಂಬ ಆಶಯದೊಂದಿಗೆ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಮುಕ್ತಾಯಗೊಳಿಸಲಾಯಿತು.
-
Mysore15 hours agoಹುಣಸೂರಿನಲ್ಲಿ ಒಂದೇ ಕುಟುಂಬದ ನಾಲ್ವರು ಆತ್ಮಹ*ತ್ಯೆ; ಸಾವಿನ ಕಾರಣ ನಿಗೂಢ
-
Mysore22 hours agoನಂಜನಗೂಡಿನಲ್ಲಿ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನ: ಕಾಮುಕನಿಗೆ ಗ್ರಾಮಸ್ಥರಿಂದ ಧರ್ಮದೇಟು, ಪೊಲೀಸರ ವಶಕ್ಕೆ
-
Kodagu18 hours agoಅಧ್ಯಕ್ಷರಾಗಿ ವಾಂಚಿರ ವಿಠಲ್ ನಾಣಯ್ಯ ಆಯ್ಕೆ
-
Politics11 hours agoಪರಪ್ಪನ ಅಗ್ರಹಾರಕ್ಕೆ ವಿಜಯಲಕ್ಷ್ಮಿ, ರಕ್ಷಿತಾ ಭೇಟಿ: ದರ್ಶನ್ ಆರೋಗ್ಯ ವಿಚಾರಣೆ
-
Politics12 hours agoರಾಜ್ಯ ಸಚಿವ ಸಂಪುಟ ವಿಸ್ತರಣೆ ನಾಳೆ: 18 ಮಂದಿಗೆ ಸಚಿವ ಸ್ಥಾನ ಸಾಧ್ಯತೆ
-
Kodagu11 hours agoಹಾರಂಗಿ ಜಲಾಶಯದ ನೀರು ಕುಡಿಯಲು ಮಾತ್ರ: ರೈತರಿಗೆ ಬೆಳೆ ಬೆಳೆಯದಂತೆ ಮನವಿ
-
Manglore9 hours agoಮನೆ ಕಾಮಗಾರಿಗೆ ಬಂದು 6.37 ಲಕ್ಷ ಮೌಲ್ಯದ ಚಿನ್ನಾಭರಣ ಕಳವು- ಕೃತ್ಯ ಎಸಗಿದ 24 ಗಂಟೆಯೊಳಗೆ ಆರೋಪಿ ಅಂದರ್
-
Hassan18 hours agoಹಾಸನದ ವಿದ್ಯಾರ್ಥಿಗಳಿಗೆ ನೀಟ್–ಜೆಇಇ ತರಬೇತಿಯಲ್ಲಿ ಹೊಸ ಮೈಲುಗಲ್ಲು ನಿರ್ಮಿಸಿದ ಪಾಠಶಾಲಾ ನೀಟ್ ಅಕಾಡೆಮಿ
