Kodagu
ಮತದಾನ ಜಾಗೃತಿಗೆ ಸೆಲ್ಫಿ ಸ್ಪರ್ಧೆ
ಮಡಿಕೇರಿ : ಕೊಡಗು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಮತದಾನ ಪ್ರಮಾಣವನ್ನು ಹೆಚ್ಚಿಸುವ ಸಲುವಾಗಿ ಸೆಲ್ಫಿ contest ನಡೆಸಲು ತೀರ್ಮಾನಿಸಲಾಗಿರುತ್ತದೆ. ಈ ಸೆಲ್ಫಿ contest ನಲ್ಲಿ #Lets Vote Kodagu! ಶೀರ್ಷಿಕೆಯಲ್ಲಿ ಸ್ಪರ್ಧೆ ನಡೆಯಲಿದೆ.
ಮಡಿಕೇರಿ ಜಿಲ್ಲಾಧಿಕಾರಿಗಳ ಕಚೇರಿ, ನಗರದ ರಾಜಾಸೀಟು, ಸೋಮವಾರಪೇಟೆ ತಾಲೂಕು ಪಂಚಾಯತ್ ಕಚೇರಿ, ಪೊನ್ನಂಪೇಟೆ ತಾಲ್ಲೂಕು ಪಂಚಾಯತ್ ಕಚೇರಿ, ವಿರಾಜಪೇಟೆ ತಹಸೀಲ್ದಾರ್ ಕಚೇರಿ, ಕುಶಾಲನಗರ ಕಾವೇರಿ ನಿಸರ್ಗಧಾಮ ಈ 06 ಸ್ಥಳಗಳಲ್ಲಿ ಮತದಾನ ಜಾಗೃತಿಗಾಗಿ ಸೆಲ್ಫಿ ಪಾಯಿಂಟ್‍ಗಳನ್ನು ನಿರ್ಮಿಸಲಾಗಿರುತ್ತದೆ. ಸಾರ್ವಜನಿಕರು ಮತ್ತು ಯುವ ಮತದಾರರು ಪೋಟೊವನ್ನು ಕಳುಹಿಸಬಹುದಾಗಿದೆ.
ಅಲ್ಲದೆ ಏಪ್ರಿಲ್, 26 ರಂದು ಮತದಾನ ನಡೆಯಲಿರುವ ಆಯ್ದ ವಿಶೇಷ ಮತಗಟ್ಟೆಗಳಲ್ಲಿಯೂ ಸೆಲ್ಪಿ ಪಾಯಿಂಟ್ ಗಳನ್ನು ಸ್ಥಾಪಿಸಲಿದ್ದು, ಈ ಮತಗಟ್ಟೆಗಳಲ್ಲಿ ಮತದಾನ ಮಾಡಿದ ನಂತರ ಸೆಲ್ಪಿ ಪಾಯಿಂಟ್‍ನಲ್ಲಿ ಪೋಟೋಗಳನ್ನು ಕ್ರಿಯಾತ್ಮಕವಾಗಿ ಸೆಲ್ಪಿ ಕ್ಲಿಕ್ಕಿಸಿ ಕಳುಹಿಸಲು ಅವಕಾಶ ಕಲ್ಪಿಸಲಾಗಿದೆ.
ಜಿಲ್ಲೆಯಾದ್ಯಂತ ಎಲ್ಲಾ ಸಾರ್ವಜನಿಕರು, ಮತದಾರರು ಮತದಾನದ ಪೂರ್ವದಲ್ಲಿ ನಾನು ಮತ ಚಲಾಯಿಸುತ್ತೇನೆ ಎಂಬ ಪರಿಕಲ್ಪನೆಯೊಂದಿಗೆ ತಾವಿರುವ ಸ್ಥಳದಲ್ಲಿಯೇ ವೈಯಕ್ತಿಕವಾಗಿ ಮತ್ತು ಗುಂಪಾಗಿ ಮತದಾನದಲ್ಲಿ ಪೂರ್ವದಲ್ಲಿ ಕ್ರಿಯಾತ್ಮಕವಾಗಿ ಸೆಲ್ಪಿ ಕ್ಲಿಕ್ಕಿಸಿ ವ್ಯಾಟ್ಸಪ್ ಮೊಬೈಲ್ ಸಂಖ್ಯೆ : 9741224300 ಗೆ ಕಳುಹಿಸಿ ಸ್ಪರ್ದೆಯಲ್ಲಿ ಭಾಗವಹಿಸಬಹುದಾಗಿದೆ. ಅಲ್ಲದೆ ಮತದಾನದ ದಿನದಂದು ಮತ ಚಲಾಯಿಸಿದ ನಂತರ “I VOTED’’ ಎಂಬ ಶೀರ್ಷಿಕೆಯೊಂದಿಗೆ ಸೆಲ್ಪಿ ಕ್ಲಿಕ್ಕಿಸಿ 9741224300 ವಾಟ್ಸಪ್ ಸಂಖ್ಯೆಗೆ ಕಳಹಿಸಲು ಅವಕಾಶ ಕಲ್ಪಿಸಲಾಗಿರುತ್ತದೆ. ಇಂದಿನಿಂದ ಮತದಾನ ಪೂರ್ಣಗೊಳ್ಳುವವರೆವಿಗೂ ಈ ಸೆಲ್ಫಿ contest ಸ್ಪರ್ಧೆಯಲ್ಲಿ ಜಿಲ್ಲೆಯ ಎಲ್ಲಾ ಮತದಾರರು/ ಸಾರ್ವಜನಿಕರು ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ. ಕ್ರಿಯಾತ್ಮಕವಾಗಿ ಸೆಲ್ಪಿ ಕ್ಲಿಕ್ಕಿಸಿ ಕಳುಹಿಸುವ ಆಯ್ದ ಪೋಟೊಗಳಿಗೆ ಆಕರ್ಷಕ ಬಹುಮಾನವನ್ನು ನೀಡಲಾಗುವುದು.
ಕೊಡಗು ಜಿಲ್ಲಾ ಸ್ವೀಪ್ ಸಮಿತಿಯ ವ್ಯಾಟ್ಸಪ್ ಸಂಖ್ಯೆಗೆ ಉತ್ತಮವಾಗಿ ಕ್ಲಿಕ್ಕಿಸಿದ ಒಂದು ಪೋಟೊವನ್ನು ಕಳುಹಿಸಲು ಅವಕಾಶ ನೀಡಲಾಗಿದೆ. #Lets Vote Kodagu! ಸೆಲ್ಫಿ ಸ್ಪರ್ಧೆಯಲ್ಲಿ ಭಾಗವಹಿಸಿ ಆಕರ್ಷಕ ಬಹುಮಾನ ಗೆಲ್ಲಿರಿ.
ನಿಬಂಧನೆಗಳು: ಒಬ್ಬ ವ್ಯಕ್ತಿ ಒಂದು ಪೋಟೊವನ್ನು ಮಾತ್ರವೇ ಕಳುಹಿಸತಕ್ಕದ್ದು. ಪೋಟೊ ಜೊತೆಯಲ್ಲಿ ತಮ್ಮ ಹೆಸರು, ಊರಿನ ಹೆಸರನ್ನು ಕಡ್ಡಾಯವಾಗಿ ಕಳುಹಿಸತಕ್ಕದ್ದು. ವಿಜೇತರನ್ನು ಆಯ್ಕೆ ಮಾಡುವಲ್ಲಿ ಕೊಡಗು ಜಿಲ್ಲಾ ಸ್ವೀಪ್ ಸಮಿತಿ ನಿರ್ಣಯವೇ ಅಂತಿಮವಾಗಿರುತ್ತದೆ. ಯಾವುದೇ ಧರ್ಮ, ಜಾತಿ, ವ್ಯಕ್ತಿ, ರಾಜಕೀಯ ಪಕ್ಷ, ಚುನಾವಣಾ ಅಭ್ಯರ್ಥಿ ಪರವಾಗಿ ಅಥವಾ ಪಕ್ಷದ ಗುರುತಿನೊಂದಿಗೆ ಕಳುಹಿಸುವ ಪೋಟೊವನ್ನು ಸ್ಫರ್ಧೆಗೆ ಪರಿಗಣಿಸಲಾಗುವುದಿಲ್ಲ. ವ್ಯಾಟ್ಸಪ್ ಮುಖಾಂತರವಾಗಿ ಮಾತ್ರವೇ ಪೋಟೊ ಸಲ್ಲಿಸಲು ಅವಕಾಶವಿದೆ ಎಂದು ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅವರು ತಿಳಿಸಿದ್ದಾರೆ.
Kodagu
ಬೆಂಗಳೂರಿನಲ್ಲಿ 22/7/2024 ರಂದು ವಿಧಾನಸೌಧ ಚಲೋ ಚಳುವಳಿ – ಕೊಡಗು ರೈತ ಸಂಘದ ಜಿಲ್ಲಾಧ್ಯಕ್ಷ ಶರತ್ ಕುಮಾರ್
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷರಾದ ವಾಸುದೇವ ಮೇಟಿ ನೇತೃತ್ವದಲ್ಲಿ 22/7/2024 ಸೋಮವಾರದಂದು ವಿಧಾನಸೌಧ ಚಲೋ ಚಳುವಳಿಯನ್ನ ಬೆಂಗಳೂರಿನಲ್ಲಿ ಮಾಡಲಾಗುವುದು ಎಂದು ಕೊಡಗು ಜಿಲ್ಲಾಧ್ಯಕ್ಷ ಶರತ್ ಕುಮಾರ್ HJ ಹೇಳಿದ್ದಾರೆ.
ವಿಧಾನಸಭಾ ಅಧಿವೇಶನದಲ್ಲಿ ರೈತರ ಕುಂದು ಕೊರತೆಗಳನ್ನು ಆಲಿಸದೆ . ತಮ್ಮ ಮನಸೋ ಇಚ್ಛೆ . ಜನತೆಯಿಂದ ಗೆದ್ದ ರಾಜಕಾರಣಿಗಳು. ರೈತರ ಬೇಡಿಕೆಗಳು ಮತ್ತು ಅತಿ ಹೆಚ್ಚು ಮಳೆ ಇಂದ ಆದಂತಹ ಜಿಲ್ಲೆಗಳ ಸ್ಥಳ ಪರಿಶೀಲನೆ ಮಾಡಿ ರೈತರಿಗೆ ಮತ್ತೆ ಜನರಿಗೆ ಆದಂತಹ ಕಷ್ಟಗಳಿಗೆ ನೆರವಾಗದೆ ಬದಲು. ಬೇಡವಾದ ವಿಚಾರಗಳನ್ನು ವಿಧಾನಸಭೆಯ ದೇವಾಲಯದಲ್ಲಿ ಡೊಂಬರಾಟ ನಡೆಸುತ್ತಿದ್ದಾರೆ. ಎಂದು ಶರತ್ ಕುಮಾರ್ ಆರೋಪಿಸಿದ್ದಾರೆ
ಕೊಡಗು ಮತ್ತು ಮೈಸೂರು ಜಿಲ್ಲೆ ಸಂಚಾಲಕಡಾ ಅರುಣ್ ಕುಮಾರ್ ಮಾತಾಡಿ ಮಳೆ ಪರಿಸ್ಥಿತಿಯಲ್ಲಿ ರಾಜ್ಯದಲ್ಲಿ ಆದಂತಹ ಅನಾಹುತಗಳನ್ನು ಪರಿಶೀಲನೆ ಮಾಡಿ ರೈತರಿಗೆ ಪರಿಹಾರವನ್ನು ಕೊಡಬೇಕು ಮತ್ತುಮೈಸೂರು.ಕೊಡಗು ಜಿಲ್ಲೆಗೆ ಸಂಬಂಧಪಟ್ಟಂತೆ ರೈತರಿಗೆ ಆಗಿರುವ ನಷ್ಟವನ್ನು ಕೊಡಬೇಕು. ಕೊಡಗಿನಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಆನೆ ಮತ್ತೆ ಮಾನವ ಸಂಘರ್ಷವನ್ನು ಕಟ್ಟು ನಿಟ್ಟಾಗಿ ತಡೆಯಬೇಕು.
ಕೊಡಗಿನಲ್ಲಿ ಸರ್ಕಾರದ ಭೂಮಿಯನ್ನು ಒತ್ತುವರಿಯನ್ನು ತೆರೆವು ಗೊಳಿಸಬೇಕು .ಬಹುಕರ್ ಸಾಗುವಳಿಯನ್ನು ಪ್ರತಿಯೊಬ್ಬ ರೈತನಿಗೆ ಕೊಡಬೇಕು ಹಾಗಾಗಿ ಇಡೀ ರಾಜ್ಯಾದ್ಯಂತ ನಮ್ಮ ರೈತ ಸಂಘಟನೆ ವಿಧಾನಸೌಧ ಮುತ್ತಿಗೆ ಚಳುವಳಿಯನ್ನು ಆರಂಭಿಸಿದ್ದೇವೆ ಎಂದು ಆಕ್ರೋಶ ಹೊರ ಹಾಕಿದರು. ಈ ಸಂದರ್ಭದಲ್ಲಿ ಕೊಡಗು ಗೌರವಾಧ್ಯಕ್ಷ ಚಂದ್ರಣ್ಣ. ಉಪಾಧ್ಯಕ್ಷ ಪ್ರಸನ್ನ ರೆಡ್ಡಿ. ಜಿಲ್ಲಾ ಸಂಘಟನಾ ಕಾರ್ಯದರ್ಶಿ ಶಿವಮೂರ್ತಿ. ತಾಲೂಕು ಸಂಘಟನಾ ಕಾರ್ಯದರ್ಶಿ ತೊರೆನೂರು. ಅರುಣ. ತೊರೆನೂರು ಘಟಕದ ಅಧ್ಯಕ್ಷ ಅಮೃತ್. ಹೆಬ್ಬಾಲೆ ಘಟಕದ ಅಧ್ಯಕ್ಷ ಬಾಂಬೆಪುಟ್ಟ. ಹುಲಸೆ ಘಟಕದ ಅಧ್ಯಕ್ಷ ದಿನೇಶ್.ಇದ್ದರು
Kodagu
ನಾಪೋಕ್ಲು ವ್ಯಾಪ್ತಿಯಲ್ಲಿ ತಗ್ಗಿದ ಮಳೆ
ರಸ್ತೆಗೆ ಅವರಿಸಿದ್ದ ಕಾವೇರಿ ನದಿ ಪ್ರವಾಹದಲ್ಲಿ ಇಳಿಕೆ ಸಂಚಾರಕ್ಕೆ ಮುಕ್ತವಾಗಿದೆ.
ನಾಪೋಕ್ಲು ಮೂರ್ನಾಡು ಸಂಪರ್ಕ ರಸ್ತೆಯ ಬೊಳಿಬಾಣೆಯಲ್ಲಿ ಕಾವೇರಿ ನದಿ ಪ್ರವಾಹ ಇಳಿಕೆ ವಾಹನ ಸಂಚಾರ ಆರಂಭ.
ನಾಪೋಕ್ಲು ಚೆರಿಯಪರಂಬು ಕಲ್ಲುಮೊಟ್ಟೆ ಸಂಪರ್ಕ ರಸ್ತೆಯಲ್ಲಿ ಪ್ರವಾಹದಲ್ಲಿ ಇಳಿಕೆ ಕಂಡಿದ್ದು ಇಂದು ಮದ್ಯಾಹ್ನದ ಹೊತ್ತಿಗೆ ಸಂಚಾರಕ್ಕೆ ಮುಕ್ತವಾಗುವ ಸಾಧ್ಯತೆ.
ನಾಪೋಕ್ಲು ಕೊಟ್ಟಮುಡಿ, ಬೆಟ್ಟಗೇರಿ,ಕೈಕಾಡು ಪಾರಾಣೆ, ಕಕ್ಕಬ್ಬೆ ಮಾರ್ಗವಾಗಿ ವಿರಾಜಪೇಟೆ ತೆರಳುವ ರಸ್ತೆ ಸಂಚಾರಕ್ಕೆ ಮುಕ್ತವಾಗಿದೆ.
ನಾಪೋಕ್ಲು ವ್ಯಾಪ್ತಿಯಲ್ಲಿ ಸುರಿದ ಧಾರಾಕಾರ ಮಳೆಗೆ ಕಾವೇರಿ ನದಿ ಮೈದುಂಬಿ ಹರಿದು ಕಳೆದ ಎರಡು ಮೂರು ದಿನಗಳಿಂದ ರಸ್ತೆಗಳು ಜಲಾವೃತ ಗೊಂಡು ಸಂಚಾರ ಸ್ಥಗಿತಗೊಂಡಿತ್ತು.
Kodagu
ನಾಪೋಕ್ಲುವಿನಲ್ಲಿ ತಗ್ಗಿದ ಮಳೆ ಇಳಿಯದ ಪ್ರವಾಹ
ನಾಪೋಕ್ಲು : ಕಳೆದ ಕೆಲವು ದಿನಗಳಿಂದ ನಾಪೋಕ್ಲು ವ್ಯಾಪ್ತಿಯಲ್ಲಿ ಧಾರಾಕಾರ ಮಳೆ ಸುರಿದು ಕಾವೇರಿ ನದಿ ಸೇರಿದಂತೆ ವಿಭಾಗದ ಉಪನದಿಗಳು ಮೈದುಂಬಿ ಹರಿದ ಪರಿಣಾಮ ಪ್ರವಾಹ ಬಂದು ರಸ್ತೆಗಳು ಜಲಾವೃತಗೊಂಡು ವ್ಯಾಪ್ತಿ ಅಲವೆಡೆ ಮನೆಗಳಿಗೆ ಹಾನಿಯಾಗಿ ಅವಾಂತರ ಸೃಷ್ಟಿಯಾಗಿತ್ತು. ಶನಿವಾರ ವ್ಯಾಪ್ತಿಯಲ್ಲಿ ಮಳೆ ಕಡಿಮೆಯಾಗಿದ್ದು ಆದರೆ ಕಾವೇರಿ ನದಿ ಪ್ರವಾಹದಿಂದ ಜಲಾವೃತಗೊಂಡ ರಸ್ತೆಗಳು ಹಾಗೂ ಗ್ರಾಮಗಳಲ್ಲಿ ನೀರಿನ ಮಟ್ಟ ಅಲ್ಪ ಪ್ರಮಾಣದಲ್ಲಿ ಮಾತ್ರ ಇಳಿಕೆ ಕಂಡಿದೆ.
ನಾಪೋಕ್ಲು ಮೂರ್ನಾಡು ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆ ಹಾಗೂ ನಾಪೋಕ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೆರಿಯಪರಂಬು ಕಲ್ಲುಮೊಟ್ಟೆ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಕಾವೇರಿ ನದಿ ಪ್ರವಾಹ ಬಂದು ಕಳೆದ ಮೂರು ದಿನಗಳ ಹಿಂದೆಯೇ ಆವರಿಸಿ ಜಲಾವೃತಗೊಂಡು ಸಂಚಾರ ಸ್ಥಗಿತಗೊಂಡಿತ್ತು. ಆದರೆ ಶನಿವಾರ ವಿಭಾಗದಲ್ಲಿ ಮಳೆ ಕಡಿಮೆಯಾದರೂ ನದಿ ನೀರಿನ ಮಟ್ಟ ಅಲ್ಪ ಪ್ರಮಾಣದಲ್ಲಿ ಮಾತ್ರ ಇಳಿಕೆ ಕಂಡಿದೆ.
ಚೆರಿಯಪರಂಬು ಗ್ರಾಮದ ಕಾವೇರಿ ನದಿ ದಡದಲ್ಲಿ ವಾಸಿಸುತ್ತಿರುವ ಹಲವು ಕುಟುಂಬಗಳು ಈಗಾಗಲೇ ಸ್ಥಳಾಂತರಗೊಂಡಿದ್ದಾರೆ. ವ್ಯಾಪ್ತಿಯಲ್ಲಿ ಸುರಿದ ಬಾರಿ ಗಾಳಿ ಮಳೆಯಿಂದ ಕಕ್ಕಬ್ಬೆ, ಕುಂಜಿಲ, ನೆಲಜಿ, ಬಲ್ಲಮಾವಟಿ ಸೇರಿದಂತೆ ಹಲವು ಗ್ರಾಮಗಳ ತೋಟಗಳಲ್ಲಿ ಮರದ ಕೊಂಬೆಗಳು ಮುರಿದುಬಿದ್ದು ವಿದ್ಯುತ್ ಕಂಬಕ್ಕೆ ಹಾನಿಯಾಗಿ ವಿದ್ಯುತ್ ವ್ಯತ್ಯೆಯ ಕೂಡ ಉಂಟಾಗಿದೆ.
ಬಲ್ಲಮಾವಟಿ ಗ್ರಾಮದಲ್ಲಿ ಸುರಿದ ಬಾರಿ ಗಾಳಿ ಮಳೆಯಿಂದ ಗ್ರಾಮದ ನಿವಾಸಿ ಮಾದಪ್ಪ ಎನ್.ಪಿ,ಬಿನ್ ಎನ್ ಎಂ ಪೂವಯ್ಯ ಅವರ ವಾಸದ ಮನೆಯ ಸ್ನಾನದ ಕೋಣೆಯ ಗೋಡೆ ಕುಸಿದು ಬಿದ್ದು ಮನೆಯ ಹೆಂಚುಗಳು ಹಾನಿಯಾಗಿ ಅಪಾರ ನಷ್ಟ ಉಂಟಾಗಿದೆ.
ಸ್ಥಳಕ್ಕೆ ನಾಪೋಕ್ಲು ಕಂದಾಯ ಪರಿವೀಕ್ಷಕ ರವಿಕುಮಾರ್, ಗ್ರಾಮಲೆಕ್ಕಿಗೆ ದಾನೇಶ್ವರಿ, ಸಿಬ್ಬಂದಿ ಪೂಣಚ್ಚ ಭೇಟಿ ನೀಡಿ ಪರಿಶೀಲನೆ ನಡೆಸಿದರು.
-
Mysore3 months ago
ಶ್ರೀಮತಿ ಭವಾನಿ ರೇವಣ್ಣ ಸಹೋದರ ಇಂದು ಅಂತ್ಯಕ್ರಿಯೆ
-
State6 months ago
Free sewing machine, ಉಚಿತ ಹೊಲಿಗೆ ಯಂತ್ರ ಪಡೆಯಲು ಅರ್ಜಿ ಸಲ್ಲಿಸಿ!
-
State6 months ago
ಶಾಲಾ ಮಕ್ಕಳಿಗೆ ಫೆಬ್ರವರಿ ತಿಂಗಳಲ್ಲಿ ಭರ್ಜರಿ ಹಾಲಿಡೇ! ಇಲ್ಲಿದೆ ರಜಾ ಲಿಸ್ಟ್!!!
-
Health6 months ago
Sugar Control ಆಗಬೇಕು ಅಂದ್ರೆ ಈ ಹಿಟ್ಟನ್ನು ತಿನ್ನಬೇಕಂತೆ! ಕನ್ಫ್ಯೂಸ್ ಆಗ್ಬೇಡಿ ಸುದ್ದಿ ಓದಿ
-
Hassan3 months ago
ಹಾಸನ ಜಿಲ್ಲೆ ಹೊಳೆನರಸೀಪುರ ತಾಲ್ಲೂಕಿನ ಹರದನಹಳ್ಳಿಯಲ್ಲಿ ಸಂಸದ ಪ್ರಜ್ವಲ್ ರೇವಣ್ಣ ಹೇಳಿಕೆ
-
Uncategorized2 months ago
NEET 2024 ಮರು ಪರೀಕ್ಷೆಗೆ ಒತ್ತಾಯ: ಪೇಪರ್ ಲೀಕ್, ಮೋಸದ ಗ್ರೇಸ್ ಮಾರ್ಕ್, ಒಂದೇ ಕೇಂದ್ರದ ವಿದ್ಯಾರ್ಥಿಗಳು ಟಾಪರ್ಸ್ !!
-
Uncategorized8 months ago
ಅರ್ಜುನನ ಸಮಾದಿಗೆ ಪೂಜೆ ಸಲ್ಲಿಸಿದ ಮೈಸೂರು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್
-
State6 months ago
ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ!!. ‘ಹಳೆ ಪಿಂಚಣಿ’ ಜಾರಿಗೆ ಗ್ರೀನ್ ಸಿಗ್ನಲ್ ಕೊಟ್ಟ ರಾಜ್ಯ ಸರ್ಕಾರ.