Connect with us

Agriculture

Dragon Fruit: ರೈತರ ಮುಖದಲ್ಲಿ ಮಂದಹಾಸ ಮೂಡಿಸಿದ ಡ್ರಾಗನ್‌ ಹಣ್ಣು! ಇದರ ಬೇಸಾಯ ಕ್ರಮ ಹೇಗೆ? ಇಲ್ಲಿದೆ ವಿವರ

Published

on

ಪ್ರಸ್ತುತ ದಿನಗಳಲ್ಲಿ ಕೃಷಿ ಇಳಿಮುಖವಾಗುತ್ತಿರುವುದು ಸಹಜವಾಗಿ ಕಾಣಿಸುತ್ತಿದೆ. ಬತ್ತಿ ಹೋಗುತ್ತಿರುವ ಬೋರ್ರ್ವೆಲ್ ಗಳು, ರೋಗರುಜಿನಗಳಿಂದ ಕೈಗೆ ಸಿಗದ ಬೆಳೆಗಳು ,ಹಲವರಿಗೆ ಅತಿಯಾದ ಸಾಲದ ಒತ್ತಡ, ಇವೆಲ್ಲವೂ ರೈತರಿಗೆ ಕೃಷಿಯ ಮೇಲಿನ ನಂಬಿಕೆ ದಿನದಿಂದ ದಿನಕ್ಕೆ ಕ್ಷೀಣಿಸಲು ಕಾರಣವಾಗುತ್ತಿದೆ . ಇಂತಹ ಹಲವು ಸಮಸ್ಯೆಗೆ ಖಂಡಿತ ಪರಿಹಾರ ದೊರಕುವ ಬೆಳೆ ಎಂದರೆ? ಅದು ಡ್ರಾಗನ್ ಹಣ್ಣು.

ಡ್ರಾಗನ್ ಹಣ್ಣು ಮೂಲತಃ ವಿಯೆಟ್ನಾಮ್ ಬೆಳೆಯಾಗಿದ್ದು, ಶ್ರೀಲಂಕಾ ಮತ್ತು ಥಾಯ್ಲೆಂಡ್ ಗಳಲ್ಲಿ ಸಹ ಬೆಳೆಯಲಾಗುತ್ತದೆ. ಇದರ ವೈಜ್ಞಾನಿಕ ಹೆಸರು ಪಿಟಾಯಾ ಅಥವಾ ಪಿಟಾ‌ಹಯಾ.ಇದು ಹೈಲೋಸೀರಿಯಸ್ ಹಣ್ಣಿಗೆ ಸೇರಿದ ಒಂದು ಕಳ್ಳಿ ಜಾತಿಗೆ ಸೇರಿದ ಗಿಡವಾಗಿದೆ. ಇತ್ತೀಚಿನ ದಿನಗಳಲ್ಲಿ ಈ ಹಣ್ಣಿಗೆ ವಿಶ್ವದಾದ್ಯಂತ ಬೇಡಿಕೆ ಹೆಚ್ಚಾಗಿದೆ . ಪ್ರಸ್ತುತ ಈ ಹಣ್ಣನ್ನು ನಮ್ಮ ಕರ್ನಾಟಕದ ಬಿಜಾಪುರ ಬೆಳಗಾವಿ ದಾವಣಗೆರೆಯಲ್ಲಿ ಬೆಳೆಯುತ್ತಿದ್ದಾರೆ. ಈ ಹಣ್ಣನ್ನು ಭವಿಷ್ಯದ ಹಣ್ಣಿನ ಬೇಸಾಯ ಎಂದು ಕರೆಯಲಾಗುತ್ತದೆ. ಇದನ್ನು ಬೆಳೆಯಲು ಹೆಚ್ಚು ವೆಚ್ಚ ಬರಿಸುವ ಅಗತ್ಯತೆ ಇರುವುದಿಲ್ಲ. ಕಡಿಮೆ ಖರ್ಚಿನಲ್ಲಿ ಅಧಿಕ ಲಾಭ ಗಳಿಸಬಹುದು.

 

 

ಬೇಸಾಯ ಕ್ರಮ.

ಈ ಹಣ್ಣನ್ನು ವಿಶೇಷವಾಗಿ ಮಳೆ ಬೀಳುವ ಪ್ರದೇಶವನ್ನು ಹೊರತುಪಡಿಸಿ ಉಳಿದ ಎಲ್ಲ ಪ್ರದೇಶಗಳಲ್ಲಿ ಇದನ್ನು ಬೆಳೆಯಬಹುದು. ಒಣ ಪ್ರದೇಶ ಈ ಬೆಳೆಗೆ ಹೆಚ್ಚು ಸೂಕ್ತವಾಗಿದೆ. ಈ ಹಣ್ಣಿನ ಗಿಡಗಳು ಸಾಮಾನ್ಯವಾಗಿ ಕಾಂಡದ ಮೂಲಕ ಬೆಳೆಯುವಂತಹವು ಆದ್ದರಿಂದ ಸಸಿಗಳು ಕೂಡ ಕಂಡ ರೂಪದಲ್ಲಿ ದೊರೆಯುತ್ತದೆ. ಸುಮಾರು ಒಂದು ಎಕರೆ ಪ್ರದೇಶಕ್ಕೆ ಎಷ್ಟು ಸಸಿಗಳು? ಅದಕ್ಕೆ ಸಂಬಂಧಿಸಿದ ಮಾಹಿತಿ ನೀಡಬಹುದು. 1 ಎಕರೆ ಪ್ರದೇಶದಲ್ಲಿ ಸಾಲಿನಿಂದ ಸಾಲಿಗೆ 12 ಅಡಿ ಗಿಡದಿಂದ ಗಿಡಕ್ಕೆ 7 ಅಡಿಗಳ ಅಂತರ ಉತ್ತಮವಾದದ್ದು. ಒಂದು ಎಕರೆ ಪ್ರದೇಶಕ್ಕೆ ಸರಿಸುಮಾರು 2080 ಸಸಿಗಳನ್ನು ನಾಟಿ ಮಾಡಬಹುದು.

ನಾಟಿಯ ವಿಧಾನ

ಮೊದಲಿಗೆ 12 /7 ಅಂತರದಲ್ಲಿ ಕಲ್ಲಿನ ಅಥವಾ ಸಿಮೆಂಟ್ ನಿಂದ ತಯಾರಿಸಿದ 7 ಅಡಿ ಎತ್ತರವಿರುವ ಕಂಬಗಳನ್ನು 1.5 ಅಡಿ ಆಳದಲ್ಲಿ ನಿಲ್ಲಿಸಬೇಕು. ಒಂದು ಎಕರೆ ಪ್ರದೇಶಕ್ಕೆ ಸುಮಾರು 518 ಕಂಬಗಳು ಬೇಕಾಗುತ್ತದೆ. ಈ ಹಣ್ಣಿನ ಸಸಿ ಪಾಪಸ್ ಕಳ್ಳಿಯ ಜಾತಿಗೆ ಸೇರಿರುವುದರಿಂದ ಇದಕ್ಕೆ ಆಧಾರ ಬಹಳ ಮುಖ್ಯವಾದುದ್ದು. ಪ್ರತಿ ಕಂಬದ 4 ಬದಿಗಳಲ್ಲಿ ನಾಲ್ಕು ಸಸಿಗಳನ್ನು ನೆಡಬೇಕು. ಅಂದರೆ ಒಂದು ಕಂಬಕ್ಕೆ 4 ಸಸಿಗಳಂತೆ ನಾಟಿ ಮಾಡಬೇಕು. ನಂತರ ಸಿಮೆಂಟಿನ ರಿಂಗು ಗಳು ಅಥವಾ ಟೈಯರ್ ಗಳನ್ನು ಕಂಬದ ಮೇಲ್ಭಾಗದಲ್ಲಿ ಕಟ್ಟಿ.ಇದರಿಂದ ಗಿಡ ವಿಶಾಲವಾಗಿ ಹರಡಿ ಕೊಳ್ಳಲು ಸಹಾಯವಾಗುತ್ತದೆ. ಸುಮಾರು 1 ವರ್ಷಗಳ ಕಾಲ ಗಿಡಗಳನ್ನು ಜಾಗರೂಕತೆಯಿಂದ ನೋಡಿಕೊಳ್ಳಬೇಕು. ಏಕೆಂದರೆ ಗಾಳಿಗೆ ಮುರಿದು ಬೀಳುವ ಸಾಧ್ಯತೆ ಇರುವುದರಿಂದ ಸರಿಯಾದ ಸಮಯಕ್ಕೆ ಸಸಿಗಳನ್ನು ಕಂಬಕ್ಕೆ ಕಟ್ಟಬೇಕು. ಗಿಡ ನೀವು ಜೋಡಿಸಿರುವ ಸಿಮೆಂಟ್ ರಿಂಗಿನ ಮೇಲೆ ಹರಡಿಕೊಳ್ಳಲು ಪ್ರಾರಂಭಿಸುತ್ತದೆ. ಇದರ ವೆಚ್ಚ ಸುಮಾರು 3-3.5 ಲಕ್ಷ ಎಕರೆ ಖರ್ಚಾಗುತ್ತದೆ. ತಿಂಗಳಿಗೆ ಮೂರರಿಂದ ನಾಲ್ಕು ಬಾರಿ ನೀರು ಪೂರೈಸಿದರೆ ಸಾಕಾಗುತ್ತದೆ.

ರೋಗಗಳು

ಸಾಮಾನ್ಯವಾಗಿ ಈ ಹಣ್ಣಿಗೆ ಯಾವುದೇ ರೋಗಗಳು ಕಂಡುಬರುವುದಿಲ್ಲ. ಕೊಳೆರೋಗ ಮಳೆಗಾಲದ ಸಮಯದಲ್ಲಿ ಕಂಡುಬರುತ್ತದೆ. ಇದಕ್ಕೆ ಪರಿಹಾರವಾಗಿ ಸಸಿ ನಾಟಿ ಮಾಡುವ ಸಮಯದಲ್ಲಿ ಏರುಮಡಿ ಪದ್ಧತಿಯ ಮೂಲಕ ನಾಟಿ ಮಾಡುವುದು ಸೂಕ್ತವಾಗಿರುತ್ತದೆ.

ಈ ಸಸಿಗಳು ಮೊದಲಿಗೆ 18 ತಿಂಗಳಿಗೆ ಹೂ ಬಿಡಲು ಆರಂಭಿಸುತ್ತದೆ. ಜೂನ್ ತಿಂಗಳುಗಳಲ್ಲಿ ಹೂಬಿಟ್ಟು ಜುಲೈ ತಿಂಗಳಿನಲ್ಲಿ ಹಣ್ಣಾಗುತ್ತದೆ. ನಾಲ್ಕು ತಿಂಗಳು ಸತತವಾಗಿ ಐದು ಬಾರಿ ಹಂತಹಂತವಾಗಿ ಹಣ್ಣು ಬಿಡುತ್ತದೆ. ಉತ್ತಮ ಬೇಸಾಯಕ್ರಮವನ್ನು ಅನುಸರಿಸಿದರೆ ಒಂದು ಕಂಬಕ್ಕೆ ಸುಮಾರು 18ರಿಂದ 20 ಹಣ್ಣುಗಳು ದೊರೆಯುತ್ತವೆ. ಒಂದು ಹಣ್ಣು ಶೇಕಡ ಅರ್ಧ ಕೆಜಿ ತೂಗುತ್ತದೆ . ಪ್ರಸ್ತುತ ಮಾರುಕಟ್ಟೆಯ ಬೆಲೆ ಒಂದು ಕೆಜಿಗೆ 300 ರಿಂದ 400 ರೂಪಾಯಿಗಳು. ಇಳುವರಿ ಬಂದ ಮೊದಲ ವರ್ಷದಲ್ಲಿ ಎಕರೆಗೆ ಎರಡರಿಂದ ಮೂರು ಲಕ್ಷ ಆದಾಯವನ್ನು ಗಳಿಸಬಹುದು. ಎರಡನೆಯ ವರ್ಷಕ್ಕೆ ನಾಲ್ಕರಿಂದ ಐದು ಲಕ್ಷ ಆದಾಯವನ್ನು ಯಾವುದೇ ಸಂದೇಹವಿಲ್ಲದೆ ಗಳಿಸಬಹುದು.ಈ ಹಣ್ಣಿನಲ್ಲಿ ಮೂರು ವಿಧಗಳಿವೆ ,,ಕೆಂಪು ಡ್ರಾಗನ್ ಹಣ್ಣು, ಬಿಳಿ ಡ್ರಾಗನ್ ಹಣ್ಣು ,ಹಳದಿ ಡ್ರಾಗನ್ ಕಣ್ಣು. ಪ್ರಸ್ತುತವಾಗಿ ಕೆಂಪು ಡ್ರಾಗನ್ ಹಣ್ಣಿಗೆ ಹೆಚ್ಚಿನ ಬೇಡಿಕೆ ಇದ್ದು. ಇದು ಸರಾಸರಿಯಾಗಿ ಸತತವಾಗಿ 30 ವರ್ಷಗಳ ಕಾಲ ಇಳುವರಿ ಪಡೆಯಬಹುದು.ಈ ಹಣ್ಣಿನ ಬೇಸಾಯಕ್ಕೆ ಕೃಷಿ ಇಲಾಖೆಯಿಂದ ಸಬ್ಸಿಡಿ ದೊರೆಯುತ್ತದೆ . ಒಂದು ಎಕರೆಗೆ ಸಾಮಾನ್ಯರಿಗೆ 1.20 ಲಕ್ಷ ಪರಿಶಿಷ್ಟ ಜಾತಿ ಪಂಗಡದವರಿಗೆ 1.80 ಲಕ್ಷ ರೂಪಾಯಿಗಳನ್ನು ಪ್ರೋತ್ಸಾಹ ಧನವಾಗಿ ನೀಡಲಾಗುತ್ತದೆ.

ಔಷಧೀಯ ಗುಣಗಳು

ಈ ಹಣ್ಣು ನೈಸರ್ಗಿಕವಾಗಿ ಹೇಳಿ ಮಾಡಿಸಿದಂತಿದೆ. ಹೆಚ್ಚು ಸಿಹಿ ಯಾಗಿರುವುದಿಲ್ಲ ಸ್ವಲ್ಪಮಟ್ಟಿಗೆ ಸಪ್ಪೆ ಆಗಿರುವುದರಿಂದ ಸಕ್ಕರೆ ಕಾಯಿಲೆಗೆ ರಾಮಬಾಣವಾಗಿದೆ. ಕ್ಯಾನ್ಸರ್, ಚರ್ಮರೋಗ ಮುಂತಾದ ಕಾಯಿಲೆಗಳಿಗೆ ಪರಿಹಾರ ನೀಡುತ್ತದೆ. ದೇಹದ ಇನ್ಸುಲಿನ್, ಬಿಳಿ ರಕ್ತಕಣಗಳ ಅಭಿವೃದ್ಧಿಗೆ ಸಹಾಯಕವಾಗಿದೆ. ವಾರಕ್ಕೆ ಒಂದೊಂದು ಹಣ್ಣನ್ನು ಸೇವಿಸಿದರೆ ನಮ್ಮ ಆರೋಗ್ಯ ಸುಸ್ಥಿರವಾಗಿ ಇರುವುದರಲ್ಲಿ ಯಾವುದೇ ಸಂದೇಹವಿಲ್ಲ.

ಇಂತಹ ಅದ್ಭುತವಾದ ಲಾಭದಾಯಕವಾದ ಬೇಸಾಯವನ್ನು ನಮ್ಮ ಕೃಷಿಕರು ಸ್ವಲ್ಪ ಮನಸ್ಸಿನಲ್ಲಿ ಇಟ್ಟುಕೊಂಡು ಆರಂಭಿಸಿದರೆ ಅವರಿಗೆ ಅಧಿಕ ಲಾಭ ಕೈಗೆ ಸಿಗುತ್ತದೆ. ನಮ್ಮ ರೈತಬಾಂಧವರು ಹೊಸ ಹೊಸ ಅವಿಷ್ಕಾರಗಳನ್ನು ಬಳಸಿಕೊಂಡು ವೈಜ್ಞಾನಿಕ ರೀತಿಯಲ್ಲಿ ಕೃಷಿ ಮಾಡಿದರೆ ಯಶಸ್ವಿ ರೈತ ನಗಬಹುದು…

Continue Reading
Click to comment

Leave a Reply

Your email address will not be published. Required fields are marked *

Agriculture

25 ಲಕ್ಷದವರೆಗೆ ಸಾಲ ಮತ್ತು ಅದಕ್ಕೆ 35% ಸಬ್ಸಿಡಿ : ಕೇಂದ್ರ ಸರ್ಕಾರದ ಈ ಯೋಜನೆಯಡಿ ಯಾರಿಗೆ ಸಿಗಲಿದೆ ಈ ಸೌಲಭ್ಯ?

Published

on

PMEGP Scheme | How to apply? – ಕೇಂದ್ರ ಸರ್ಕಾರವು ಹೊಸದಾಗಿ ಸ್ವಂತ ಉದ್ಯಮ ಆರಂಭಿಸುವ ಯುವ ಜನತೆಗೆ ಅನೇಕ ರೀತಿಯಲ್ಲಿ ಸಹಾಯ ಮಾಡುತ್ತದೆ. ಆದರೆ ಹಲವು ಜನರಿಗೆ ಈ ಯೋಜನೆಗಳ ಮಾಹಿತಿ ತಿಳಿದಿರುವುದೇ ಇಲ್ಲ. ಈ ಒಂದು ಲೇಖನದಲ್ಲಿ ಕೇಂದ್ರ ಸರ್ಕಾರದ ಒಂದು ಉತ್ತಮ ಯೋಜನೆಯ ಬಗ್ಗೆ ತಿಳಿಸಲಿದ್ದೇವೆ.

ಯಾವುದು ಈ ಯೋಜನೆ?

ಈ ಯೋಜನೆಯ ಹೆಸರು ” ಪ್ರಧಾನ ಮಂತ್ರಿ ಉದ್ಯೋಗ ಸೃಷ್ಟಿ ಕಾರ್ಯಕ್ರಮ “. ಈ ಯೋಜನೆಯನ್ನು 2008 ಆಗಸ್ಟ್ 15ರಂದು ಅಂದಿನ ಪ್ರಧಾನ ಮಂತ್ರಿ ಮನಮೋಹನ ಸಿಂಗ್ ಅವರು ಜಾರಿಗೋಳಿಸಿದ್ದರು. ಈ ಯೋಜನೆಯ ಮುಖ್ಯ ಉದ್ದೇಶವೇನೆಂದರೆ ಹೊಸದಾಗಿ ಸ್ವಂತ ಉದ್ಯಮ ಆರಂಭಿಸುವವರಿಗೆ ಆರ್ಥಿಕ ಸಹಾಯ ಮಾಡುವುದಾಗಿದೆ.

ಈ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹತೆ ಹೊಂದಿರುವ ಅಭ್ಯರ್ಥಿಗಳಿಗೆ ಸಂಬಂಧಪಟ್ಟ ಬ್ಯಾಂಕಗಳು ನಿಮ್ಮ ಯೋಜನಾ ಮೊತ್ತದ ಗರಿಷ್ಟ 90% ನಿಂದ 95% ವರೆಗಿನ ಹಣವನ್ನು ಮಂಜೂರು ಮಾಡುತ್ತವೆ. ನೀವು ಪಡೆದ ಸಾಲದ ಮೊತ್ತದ ಮೇಲೆ PMEGP ಯೋಜನೆಯ ಅಡಿಯಲ್ಲಿ 15% ನಿಂದ 35% ನವರೆಗೆ ಸಬ್ಸಿಡಿಯನ್ನು ಕೇಂದ್ರ ಸರ್ಕಾರ ನೀಡುತ್ತದೆ.

ಹಾಗಿದ್ದರೆ ಈ ಯೋಜನೆಗೆ ಅರ್ಜಿ ಯಾರು ಸಲ್ಲಿಸಬಹುದು? ಹೇಗೆ ಅರ್ಜಿ ಸಲ್ಲಿಸಬೇಕು? ಯಾವ ದಾಖಲೆಗಳು ಬೇಕು ಎಂಬ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

ಅರ್ಜಿ ಸಲ್ಲಿಸಲು ಯಾರು ಅರ್ಹರು?

ಕನಿಷ್ಠ 8ನೇ ತರಗತಿ ಪಾಸಾದಂತಹ 18 ವರ್ಷದ ಮೇಲಿನ ಭಾರತೀಯ ಪ್ರಜೆಗಳಾಗಿರಬೇಕು. ಈ ಮೊದಲು ಉದ್ಯಮ ಆರಂಭಿಸಲು ಸರ್ಕಾರದಿಂದ ಯಾವುದೇ ರೀತಿಯ ಲಾಭ ಪಡೆದುಕೊಂಡಿರಬಾರದು.

ಅರ್ಜಿ ಸಲ್ಲಿಸಲು ಬೇಕಾಗುವಂತಹ ಅವಶ್ಯಕ ದಾಖಲೆಗಳು :

ಈ ಯೋಜನೆಗೆ ಅರ್ಜಿ ಸಲ್ಲಿಸಲು ನೀವು ಅರ್ಹರಿದ್ದರೆ ಈ ಕೆಳಗಿನ ದಾಖಲಾತಿಗಳನ್ನು ಸಿದ್ಧಪಡಿಸಿ ಇಟ್ಟುಕೊಳ್ಳಿ.
1. ಪಾಸ್ಪೋರ್ಟ್ ಅಳತೆಯ ಭಾವಚಿತ್ರ
2. ಶೈಕ್ಷಣಿಕ ಪ್ರಮಾಣಪತ್ರ
3. ವಿವರವಾದ ಯೋಜನಾ ವರದಿ
4. ಜಾತಿ ಪ್ರಮಾಣಪತ್ರ
5. ಗ್ರಾಮೀಣ ಪ್ರಮಾಣ ಪತ್ರ (ಅನ್ವಯವಾದಲ್ಲಿ ಮಾತ್ರ)

ಅರ್ಜಿ ಹೇಗೆ ಸಲ್ಲಿಸಬೇಕು?

ಅರ್ಹತೆ ಹೊಂದಿರುವ ಅಭ್ಯರ್ಥಿಗಳು PMEGP ಯ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ, ನೋಂದಣಿ ಮಾಡಿಕೊಂಡು ಬೇಕಾಗುವ ಮಾಹಿತಿಯನ್ನು ಭರ್ತಿ ಮಾಡಿ ಮತ್ತು ಅವಶ್ಯಕ ದಾಖಲಾತಿಗಳನ್ನು ಅಪ್ಲೋಡ್ ಮಾಡಿ ಅರ್ಜಿ ಸಲ್ಲಿಸಬೇಕು.

PMEGP ಅಧಿಕೃತ ಜಾಲತಾಣ –
https://www.kviconline.gov.in/pmegpeportal/pmegphome/index.jsp

Continue Reading

Agriculture

ಆರ್ ಬಿ ಐ ನಿಂದ ರೈತರಿಗೆ ಗುಡ್ ನ್ಯೂಸ್ : ಅಡಮಾನ ಇಲ್ಲದೆ 2 ಲಕ್ಷ ರೂ. ವರೆಗೆ ಸಾಲ ಸೌಲಭ್ಯ

Published

on

Loan for farmers upto 2 lakh without Surity – ದೇಶದ ರೈತರಿಗೆ ಮೇಲಾಧಾರ – ಮುಕ್ತ ಕೃಷಿ ಸಾಲದ ಮಿತಿಯನ್ನು ಏರಿಸಲಾಗಿದೆ. ಈ ಮೊದಲು ₹1.6 ಲಕ್ಷ ರೂ. ವರೆಗೆ ಇದ್ದ ಸಾಲದ ಮಿತಿಯನ್ನು ₹2.0 ಲಕ್ಷ ರೂ. ಗೆ ಏರಿಸಲಾಗಿದೆ. ಈ ನಿರ್ಧಾರವನ್ನು ಜನವರಿ 01, 2025 ರಿಂದಲೇ ಜಾರಿಗೆ ತರಲು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ದೇಶದ ಎಲ್ಲಾ ಬ್ಯಾಂಕ್ ಗಳಿಗೆ ಸೂಚಿಸಿದೆ.

ಈ ಹೊಸ ಉಪಕ್ರಮದ ಮೂಲ ಉದ್ದೇಶವೇನು?

ಕೃಷಿ ವಲಯದ ಅಧಾಯವನ್ನು ಬೆಂಬಲಿಸಲು ಮತ್ತು ಹೆಚ್ಚಿಸಲು ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಈಗಿನ ಸಮಯದಲ್ಲಿ ಆಗಿರುವ ಹಣದುಬ್ಬರ (Inflation) ಮತ್ತು ಹೆಚ್ಚುತ್ತಿರುವ ಕೃಷಿ ಒಳಹರಿವಿನ ವೆಚ್ಚಕ್ಕೆ ರೈತರಿಗೆ ಸಹಾಯವಾಗುವಂತೆ ಈ ನಿರ್ಧಾರವನ್ನು ಕೈಗೊಳ್ಳಲಾಗಿದ್ದು, ಇದರಿಂದ ರೈತರಿಗೆ ಆರ್ಥಿಕ ನೆರವು ಸಿಗಲಿದೆ.

ಈ ಉಪಕ್ರಮದಿಂದ ದೇಶದ 86% ಕ್ಕಿಂತಲೂ ಹೆಚ್ಚು ಸಣ್ಣ ಹಾಗೂ ಅತೀ ಸಣ್ಣ ರೈತರಿಗೆ ಪ್ರಯೋಜನ ಸಿಗಲಿದೆ. ಆರ್ ಬಿಐ ನ ಈ ಹೊಸ ಮಾರ್ಗಸೂಚಿಯು ದೇಶದ ಪ್ರತಿಯೊಬ್ಬ ರೈತನಿಗೂ ತಲುಪಲಿ ಎಂಬ ಉದ್ದೇಶದಿಂದ ಸರ್ಕಾರವು ವ್ಯಾಪಾಕ ಪ್ರಚಾರ ಕೈಗೊಳ್ಳಲಿದೆ.

ಇದರಿಂದ ಕೃಷಿ ವಲಯದಲ್ಲಿ ಹೆಚ್ಚಿನ ಹೂಡಿಕೆ, ರೈತರ ಜೀವನ ಅಭಿವೃದ್ಧಿಗೊಳ್ಳಲಿದೆ. ಮುಂದಿನ ವರ್ಷ ಅಂದರೆ, ಜನವರಿ 01, 2025ರಿಂದ ದೇಶಾದ್ಯಂತ ಇದು ಜಾರಿಯಾಗಲಿದ್ದು ಇದರ ಲಾಭ ಪಡೆಯಲು ರೈತರು ತಮ್ಮ ಬ್ಯಾಂಕ್ ಗಳಿಗೆ ಭೇಟಿ ನೀಡಿ ಇದರ ಹೆಚ್ಚಿನ ಮಾಹಿತಿ ಪಡೆದುಕೊಳ್ಳಬಹುದು.

Continue Reading

Agriculture

ಜೀವನೋಪಾಯಕ್ಕಾಗಿ ಮಾಡಿರುವ ಭೂ ಒತ್ತುವರಿದಾರರು ಆತಂಕಪಡುವ ಅಗತ್ಯ ಇಲ್ಲ

Published

on

ಚಿಕ್ಕಮಗಳೂರು: ಜೀವನೋಪಾಯಕ್ಕಾಗಿ ಮಾಡಿರುವ ಭೂ ಒತ್ತುವರಿದಾರರು ಆತಂಕಪಡುವ ಅಗತ್ಯ ಇಲ್ಲ ಎಂದು ಶೃಂಗೇರಿ ಕ್ಷೇತ್ರದ ಶಾಸಕ ಹಾಗೂ ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತ ಅಧ್ಯಕ್ಷ ಟಿ.ಡಿ.ರಾಜೇಗೌಡ ಭರವಸೆ ನೀಡಿದರು.ಇಂದು ನಗರದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಒತ್ತುವರಿ ಸಮಸ್ಯೆ ಸಂಬಂಧ ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್, ಲೋಕಸಭೆ ಮಾಜಿ ಸದಸ್ಯ ಜಯಪ್ರಕಾಶ್ ಹೆಗ್ಡೆ, ಮಾಜಿ ಸಚಿವರಾದ ಕಿಮ್ಮನೆ ರತ್ನಾಕರ್ ತಾವೂ ಹಾಗೂ ಜಿಲ್ಲೆಯ ಎಲ್ಲಾ ಶಾಸಕರು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅರಣ್ಯ ಸಚಿವ ಈಶ್ವರ್ ಖಂಡ್ರೇ ಅವರನ್ನು ಭೇಟಿ ಮಾಡಿ ಸಮಸ್ಯೆಯನ್ನು ಮನವರಿಕೆ ಮಾಡಿದ್ದೀವೆ ಎಂದು ಹೇಳಿದರು.


ಬಹಳಷ್ಟು ಉಹಾಪೋಹಗಳು ಭೂ ಒತ್ತುವರಿ ಬಗ್ಗೆ ಹರಿದಾಡುತ್ತಿದ್ದು, ಕೆಲವರು ರಾಜಕೀಯ ದುರುದ್ದೇಶದಿಂದ ಸುಳ್ಳು ಅಪಪ್ರಚಾರ ಮಾಡುತ್ತಾ ಜನರಲ್ಲಿ ಗೊಂದಲ ಮೂಡಿಸುತ್ತಿದ್ದಾರೆ. ಈಗಾಗಲೇ ಸರ್ಕಾರ ಒತ್ತುವರಿ ತೆರವು ಕಾರ್ಯವನ್ನು ಸ್ಥಗಿತಗೊಳಿಸಿ ಆದೇಶಿಸಿದೆ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಾರ್ವಜನಿಕರ ಹಿತಾಸಕ್ತಿಗೆ ಅನುಗುಣವಾಗಿ ಅರಣ್ಯ ಇಲಾಖೆಗೆ ಸೂಕ್ತ ನಿರ್ದೇಶನವನ್ನು ನೀಡಿದ್ದಾರೆ. ಜತೆಗೆ ಕಾನೂನಿನ ಚೌಕಟ್ಟಿನಡಿಯಲ್ಲಿ ಅರ್ಹ ಪ್ರಕರಣಗಳಿಗೆ ಹಕ್ಕುಪತ್ರ ನೀಡುವ ಪ್ರಕ್ರಿಯೆ ಪ್ರಾರಂಭಿಸಲಾಗಿದೆ. ಒತ್ತುವರಿ ಸಮಸ್ಯೆ ಬಹಳಷ್ಟು ವರ್ಷಗಳ ಸಮಸ್ಯೆಯಾಗಿದೆ. ಸ್ವಾತಂತ್ರ್ಯ ಪೂರ್ವದಿಂದ ಇಲ್ಲಿಯವರೆಗೂ ಜನಸಂಖ್ಯೆಯಲ್ಲಿ ಭಾರೀ ಪ್ರಮಾಣದ ಬದಲಾವಣೆಯಾಗಿದೆ. ಇದರಿಂದ ಜೀವನೋಪಾಯಕ್ಕಾಗಿ ಒತ್ತುವರಿಯೂ ನಡೆದಿದೆ. ಅರಣ್ಯವೂ ಕ್ಷೀಣಿಸಿದೆ ಎಂದು ತಿಳಿಸಿದರು.

Continue Reading

Trending

error: Content is protected !!