Deficiency
ತೆಂಗಿನ ಬೆಳೆಯಲ್ಲಿ ಕೀಟ ಮತ್ತು ರೋಗ ನಿಯಂತ್ರಣ ಹಾಗು ಸುಧಾರಿತ ಬೇಸಾಯ ಕ್ರಮಗಳ ಕುರಿತು ತರಬೇತಿ ಮತ್ತು ಪ್ರತ್ಯಕ್ಷಿತೆ ಕಾರ್ಯಕ್ರಮ
ಸಾಲಿಗ್ರಾಮ : ತೆಂಗಿನ ಬೆಳೆ ಕೀಟ ನಿಯಂತ್ರಣ ತರಬೇತಿ ತೋಟಗಾರಿಕೆ ಇಲಾಖೆ ಹಾಗು ತೋಟಗಾರಿಕೆ ಮಹಾವಿದ್ಯಾಲಯ ಇವರ ಸಹ ಬಾಗಿತ್ವದಲ್ಲಿ ತೆಂಗಿನ ಬೆಳೆಯಲ್ಲಿ ಕೀಟ ಮತ್ತು ರೋಗ ನಿಯಂತ್ರಣ ಹಾಗು ಸುಧಾರಿತ ಬೇಸಾಯ ಕ್ರಮಗಳ ಕುರಿತು ತರಬೇತಿ ಮತ್ತು ಪ್ರತ್ಯಕ್ಷಿತೆ ಕಾರ್ಯಕ್ರಮ ವನ್ನು ಮಿರ್ಲೆ ಹೋಬಳಿಯ ಎಲೆಮುದ್ದನಹಳ್ಳಿ ಕೊಪ್ಪಲು ಗ್ರಾಮದ ರೈತ ಪುಟ್ಟಸ್ವಾಮಿಗೌಡ ಅವರ ತೆಂಗಿನತೋಟದಲ್ಲಿ ಅಕ್ಟೋಬರ್ 31 ರ ಮಂಗಳವಾರ ಬೆಳ್ಳಿಗೆ 11 ಗಂಟೆಗೆ ಹಮ್ಮಿಕೊಳ್ಳಲಾಗಿದೆ ಎಂದು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕಿ ಟಿ. ಎಸ್. ಭಾರತಿ ತಿಳಿಸಿದ್ದಾರೆ. ಕಾರ್ಯಕ್ರಮದ ಉದ್ಘಾಟನೆಯನ್ನು ಶಾಸಕ ಡಿ. ರವಿಶಂಕರ್ ನೆರವೇರಿಸಳಲಿದ್ದು, ಮುಖ್ಯ ಅತಿಥಿಗಳಾಗಿ ತೋಟಗಾರಿಕೆ ಉಪ ನಿರ್ದೇಶಕ ಡಾ: ಮಂಜುನಾಥ್ ಅಂಗಡಿ,ಡಾ : ಸುದರ್ಶನ್, ಡಾ : ಮುತ್ತು ರಾಜ್, ಭಾಗವಹಿಸಲಿದ್ದಾರೆ. ರೈತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ತೆಂಗಿನ ಬೆಲೆಯಲ್ಲಿ ಕೀಟ ಮತ್ತು ರೋಗ ನಿಯಂತ್ರಣ ಹಾಗು ಸುಧಾರಿತ ಬೇಸಾಯ ಕ್ರಮಗಳ ಕುರಿತು ತರಬೇತಿ ಪಡೆದುಕೊಳ್ಳುವಂತೆ ಕೊರಿದ್ದಾರೆ.

ವರದಿ :ಎಸ್ ಬಿ ಹರೀಶ್ ಸಾಲಿಗ್ರಾಮ
Deficiency
ಅಧಿಕಾರಿಗಳು ಹಣ ಮಾಡೋದು ಒಂದೇ ದಾರಿಯಲ್ಲ ರೈತರ ಜೊತೆ ಸರಿಯಾಗಿ ನಡೆದುಕೊಳ್ಳಬೇಕು
ಹುಣಸೂರು : ಅಧಿಕಾರಿಗಳು ಹಣ ಮಾಡೋದು ಒಂದೇ ದಾರಿಯಲ್ಲ ರೈತರ ಜೊತೆ ಸರಿಯಾಗಿ ನಡೆದುಕೊಳ್ಳಬೇಕು ಎಂದು ಕೆಲವರು ಆರೋಪಿಸಿದರೆ, ಕೆಲವರು ಸಣ್ಣ ಪುಟ್ಟ ರೈತರ ಮೇಲೆ ನಡೆಯುವ ತೊಂದರೆಗಳನ್ನು ಪ್ರಶ್ನೆಸಿದರೆ ಆ ರೈತರಿಗೆ ಅಧಿಕಾರಿಗಳು ಮಾನಸಿಕವಾಗಿ ತೊಂದರೆ ನೀಡುತ್ತಾರೆ ಆದರೆ ಈಗ ರೈತನಿಗೆ ಶೂ ನಲ್ಲಿ ಹೊಡೆಯಲು ಮುಂದಾಗಿರೋ ಅಧಿಕಾರಿಗೆ ಏನು ಕ್ರಮ ಕೈಗೊಳ್ಳಬೇಕು ಎಂದು ರೈತರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಸಭೆಯಲ್ಲಿ ಹೊರಹಾಕಿದ್ದು ಹೀಗೆ.
ಅವರು ಹುಣಸೂರು ತಾಲೂಕಿನ ಚಿಲ್ಕುಂದ ಗ್ರಾಮದ ತಂಬಾಕು ಮಂಡಳಿಯ ರೈತ ಭವನದಲ್ಲಿ ಪ್ಲಾಟ್ ಫಾರಂ ನಂಬರ್ 62ರ ಹರಾಜು ಅಧೀಕ್ಷಕ ಬ್ರಿಜ್ ಭೂಷಣ್ ವಿರುದ್ಧ ರೈತರು ಸೋಮವಾರ ಸಭೆ ಸೇರಿ ಚರ್ಚಿಸಿ ನಿರ್ಣಯ ಕೈಗೊಂಡು ತಂಬಾಕು ಮಂಡಳಿಯ ಅಧಿಕಾರಿ ಒಬ್ಬ ತಂಬಾಕು ರೈತನಿಗೆ ಶೂ ನಿಂದ ಹೊಡೆಯಲು ಮುಂದಾಗಿರುವುದು ರೈತ ಕುಲಕ್ಕೆ ಅವಮಾನ ಆ ಅಧಿಕಾರಿಯನ್ನು ಕರ್ನಾಟಕ ರಾಜ್ಯದಿಂದ ವರ್ಗಾವಣೆ ಮಾಡಬೇಕು, ಹಾಗೂ ಆತ ಸಭೆಯಲ್ಲಿ ಕ್ಷಮೆ ಕೇಳಬೇಕು ಜೊತೆಗೆ ಈ ವಿಷಯಕ್ಕೆ ಸಂಬಂಧಿಸಿದಂತೆ ಮೇಲಾಧಿಕಾರಿಗಳು ವಿಚಾರಣೆ ಕೈಗೊಳ್ಳಬೇಕು ಎಂದು ಸಭೆಯಲ್ಲಿ ತೀರ್ಮಾನ ಕೈಗೊಂಡು ಈ ನಿರ್ಣಯವನ್ನು ಸಭೆಯಲ್ಲಿ ಸರ್ವ ಸದಸ್ಯರಿಂದ ಒಪ್ಪಿಗೆ ಪಡೆದ ಗೊಬ್ಬರ ಕಮಿಟಿಯ ಅಧ್ಯಕ್ಷ ಅಣ್ಣೂರು ಕಾಳೇಗೌಡ ಈ ನಿರ್ಣಯವನ್ನು ಓದಿ ತಿಳಿಸಿದರು.
ಈ ನಿರ್ಣಯದ ಮನವಿಯನ್ನು ಮೇಲಾಧಿಕಾರಿಗಳಿಗೆ ಕಳುಹಿಸಲು ಆರ್.ಎಂ. ಓ ಲಕ್ಷ್ಮಣ್ ರಾವ್ ರವರಿಗೆ ನೀಡಿದರು. ಕಾರ್ಯಕ್ರಮದಲ್ಲಿ ತಂಬಾಕು ಮಂಡಳಿಯ ಉಪಾಧ್ಯಕ್ಷ ಬಸವರಾಜಪ್ಪ, ಸದಸ್ಯರಾದ ವಿಕ್ರಂ ಗೌಡ ,ದಿನೇಶ್ , ಗೊಬ್ಬರ ಕಮಿಟಿಯ ಉಪಾಧ್ಯಕ್ಷ ಮಂಜುನಾಥ್ ಕೆರೆಗೋಡು, ಕಾರ್ಯದರ್ಶಿ ಮರಿಗೌಡ, ರೈತ ಸಂಘದ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್, ಡಿಎಸ್ಎಸ್ ಸಂಚಾಲಕ ರಾಮಕೃಷ್ಣ ಅತ್ತಿಕುಪ್ಪೆ, ಪ್ರಭಾಕರ್, ಮೋದೂರು ಶಿವಣ್ಣ, ದೇವರಾಜ್, ಉಂಡವಾಡಿ ಚಂದ್ರೇಗೌಡ, ರವಿಕುಮಾರ್, ನವೀನ್, ಅಗ್ರಹಾರ ರಾಮೇಗೌಡ ಸೇರಿದಂತೆ ಸಾವಿರಾರು ರೈತರು ಭಾಗವಹಿಸಿದ್ದರು.

Chikmagalur
ಧಾರಾಕಾರ ಮಳೆಗೆ ಎರಡು ಮನೆಗಳಿಗೆ ಹಾನಿ
ಚಿಕ್ಕಮಗಳೂರು : ಮಲೆನಾಡಿನಾದ್ಯಂತ ಧಾರಾಕಾರ ಮಳೆ ಸುರಿಯುತ್ತಿದೆ. ಕಳೆದ ಮೂರು ದಿನಗಳಿಂದ ಪಶ್ಚಿಮ ಘಟಕ್ಕೆ ಹೊಂದಿಕೊಂಡಂತೆ ಇರುವ ಮಲೆನಾಡಿನ ಪ್ರದೇಶಗಳಲ್ಲಿ ನಿರಂತರ ಮಳೆ ಸುರಿಯುತ್ತಿದೆ. ಮಳೆಯಿಂದಾಗಿ ಮೂಡಿಗೆರೆ ತಾಲೂಕಿನಲ್ಲಿ ಎರಡು ಮನೆಗಳು ಕುಸಿದಿವೆ. ಮನೆಯಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮೂಡಿಗೆರೆ ತಾಲೂಕಿನ ಗೋಣಿಬೀಡು ಹೋಬಳಿಯ ಚಿನ್ನಿಗ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಣಜೂರು ಗ್ರಾಮದಲ್ಲಿ ದಿನೇಶ್ ಎಂಬುವವರು ಮನೆ ಶುಕ್ರವಾರ ರಾತ್ರಿ ಸುರಿದ ಮಳೆಗೆ ಕುಸಿದಿದೆ. ಹಾಗೆಯೇ ಬಾಳೂರು ಹೋಬಳಿ ಜಾವಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೇಗೂರು ಗ್ರಾಮದಲ್ಲಿ ಮನೆಯೊಂದು ಕುಸಿದಿದೆ.
ಮೇಗೂರು ಗ್ರಾಮದ ರಾಮಯ್ಯ ಎಂಬುವವರ ಮನೆ ಮಳೆಯಿಂದಾಗಿ ಕುಸಿದು ಬಿದ್ದಿದೆ. ಮನೆಯ ಗೋಡೆ ಮತ್ತು ಮೇಲ್ಚಾವಣಿ ಬಹುತೇಕ ಕುಸಿದು ಬಿದ್ದಿದೆ. ಈ ಸಮಯದಲ್ಲಿ ಮನೆಯವರು ಒಳಗಡೆಯೇ ಇದ್ದರು ಎಂದು ತಿಳಿದುಬಂದಿದ್ದು. ಮನೆಯವರೆಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಸ್ಥಳಕ್ಕೆ ಕಂದಾಯ ಮತ್ತು ಗ್ರಾಮ
ಪಂಚಾಯಿತಿ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಅವರ ಮನೆಗೆ ತಾತ್ಕಾಲಿಕ ರಕ್ಷಣೆಗಾಗಿ ಟಾರ್ಪಲ್ ಹೊದಿಸಲು ವ್ಯವಸ್ಥೆ ಮಾಡಿದ್ದು. ಕುಟುಂಬದವರನ್ನು ಪಕ್ಕದ ಮನೆಗೆ ಸ್ಥಳಾಂತರಿಸಲಾಗಿದೆ.
Deficiency
ಕಾವೇರಿಗಾಗಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಹೋರಾಟ ನಡೆಸುತ್ತೇವೆ
ಮೈಸೂರು : ಕಾವೇರಿ ನೀರು ಬಿಡುಗಡೆ ವಿಚಾರವಾಗಿ ಮಾತನಾಡದಿರುವ ಕರ್ನಾಟಕದ ಸಂಸದರು ನರಸತ್ತವರು. ಕಾವೇರಿಗಾಗಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಹೋರಾಟ ನಡೆಸುತ್ತೇವೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಹೇಳಿದರು.
ಕಾವೇರಿ ವಿಚಾರದಲ್ಲಿ ರಾಜ್ಯಕ್ಕೆ ಅನ್ಯಾಯವಾಗಿದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಕುರಿತು ಕ್ರಮ ತೆಗೆದುಕೊಳ್ಳಬೇಕು. ಉದ್ದೇಶ ಪೂರ್ವಕವಾಗಿ ನ್ಯಾಯಾಲಯದ ಆದೇಶ ಉಲ್ಲಂಘನೆ ಮಾಡಿದರೇ ತಪ್ಪು. ಆದರೆ, ಪಾಲಿಸಲಾಗದ ಆದೇಶ ಉಲ್ಲಂಘನೆ ಮಾಡಿದ್ರೆ ಅದು ತಪ್ಪಲ್ಲ. ಆದೇಶ ಉಲ್ಲಂಘನೆ ಮಾಡಿದ್ರೆ ಜಲಾಶಯದ ಕೀ ಕಿತ್ತುಕೊಳ್ಳುವ ಭಯ ಸರ್ಕಾರಕ್ಕಿದೆ ಅನಿಸುತ್ತೆ. ರಾಜ್ಯ ಸರ್ಕಾರದಿಂದ ಬೀಗ ಕಿತ್ತು ಕೊಳ್ಳಬಹುದು ಹೊರತು ರಾಜ್ಯ ರೈತರಿಂದಲ್ಲ. ಹೀಗಾಗಿ
ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಈ ಬಗ್ಗೆ ಯೋಚನೆ ಮಾಡ್ಬೇಕು ಎಂದರು.
ಕೇಂದ್ರ ಸರ್ಕಾರ ಈ ಕೂಡಲೇ ಕಾವೇರಿ ವಿಚಾರಕ್ಕೆ ಮದ್ಯ ಪ್ರವೇಶಿಸಬೇಕು. ಕಾವೇರಿ ಕೊಳ್ಳದ 9 ಎಂಪಿಗಳು ಮೋದಿ ಭೇಟಿ ಮಾಡಿ ವಿನಂತಿ ಮಾಡ್ಬೇಕು. ರಾಜ್ಯದ ಎಂಪಿಗಳೂ ಬೀದಿಗಿಳಿದು ಜನರ ಪರ ನಿಲ್ಲಬೇಕು
ಈ ಭಾಗದ 50ಕ್ಕು ಹೆಚ್ಚು ಎಂ.ಎಲ್. ಎ ಗಳು ಕೂಡ ಬೀದಿಗೆ ಇಳಿಯಬೇಕು. ಇಲ್ಲದಿದ್ದರೆ ನಿಮ್ಮನ್ನು ಮನೆಯಿಂದ ನಾವೇ ಎಳೆ ತರುವ ಕೆಲ್ಸ ಮಾಡುತ್ತೇವೆ. ಎರಡು ರಾಜ್ಯಗಳ ನಡುವೆ ಕಂದಕ ಉಂಟಾದಾಗ ಕೇಂದ್ರ ಮದ್ಯೆ ಬರಬೇಕು ಇಲ್ಲದಿದ್ದರೆ ಒಕ್ಕೂಟ ವ್ಯವಸ್ಥೆಯ ವಿರುದ್ಧ ಅಪಸ್ವರ ಬರಲಿದೆ. ಎಲ್ಲವನ್ನೂ ಮನಗೊಂಡು ತೀರ್ಮಾನ ಮಾಡಬೇಕು ಎಂದರು
ರಾಜ್ಯದ ಸಂಸದರು ನರ ಸತ್ತವರು. ನಿಮ್ಮನ್ನು ಆಯ್ಕೆ ಮಾಡಿದ್ದು ರಾಜ್ಯದ ಪರ ಕೆಲಸ ಮಾಡಲಿ ಅಂತ.
ಮನೇಲಿ ಕೂತು ಬಿಟ್ಟಿ ಭೋದನೆ ಮಾಡುವುದಕ್ಕಲ್ಲ.
ಸಂಸದರು ಬಂದು ನಮ್ಮ ಪರ ನಿಲ್ಲಬೇಕು.
ಬೀದಿಗಿಳಿದು ರಾಜ್ಯದ ಜನರ ಪರ ಹೋರಾಟ ಮಾಡ್ಬೇಕು. ರಾಜ್ಯದ ಬಿಜೆಪಿ ಸಂಸದರು ಪ್ರಧಾನಿ ನರೇಂದ್ರ ಮೋದಿ ಮುಂದೆ ತುಟಿ ಬಿಚ್ಚಲ್ಲ. ಇವರನ್ನು ಆಯ್ಕೆ ಮಾಡಿದ್ದು ನಮ್ಮ ತಪ್ಪು ಎಂದು ಸಂಸದರ ವಿರುದ್ಧ ಕಿಡಿಕಾರಿದರು.
ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೊಸಕೋಟೆ ಬಸವರಾಜು, ಪ್ರಸನ್ನ ಎನ್. ಗೌಡ ಮುಂತಾದವರು ಪತ್ರಿಕಾಗೋಷ್ಠಿಯಲ್ಲಿದ್ದರು.
-
Mysore15 hours agoಹುಣಸೂರಿನಲ್ಲಿ ಒಂದೇ ಕುಟುಂಬದ ನಾಲ್ವರು ಆತ್ಮಹ*ತ್ಯೆ; ಸಾವಿನ ಕಾರಣ ನಿಗೂಢ
-
Mysore22 hours agoನಂಜನಗೂಡಿನಲ್ಲಿ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನ: ಕಾಮುಕನಿಗೆ ಗ್ರಾಮಸ್ಥರಿಂದ ಧರ್ಮದೇಟು, ಪೊಲೀಸರ ವಶಕ್ಕೆ
-
Kodagu18 hours agoಅಧ್ಯಕ್ಷರಾಗಿ ವಾಂಚಿರ ವಿಠಲ್ ನಾಣಯ್ಯ ಆಯ್ಕೆ
-
Politics11 hours agoಪರಪ್ಪನ ಅಗ್ರಹಾರಕ್ಕೆ ವಿಜಯಲಕ್ಷ್ಮಿ, ರಕ್ಷಿತಾ ಭೇಟಿ: ದರ್ಶನ್ ಆರೋಗ್ಯ ವಿಚಾರಣೆ
-
Politics12 hours agoರಾಜ್ಯ ಸಚಿವ ಸಂಪುಟ ವಿಸ್ತರಣೆ ನಾಳೆ: 18 ಮಂದಿಗೆ ಸಚಿವ ಸ್ಥಾನ ಸಾಧ್ಯತೆ
-
Kodagu11 hours agoಹಾರಂಗಿ ಜಲಾಶಯದ ನೀರು ಕುಡಿಯಲು ಮಾತ್ರ: ರೈತರಿಗೆ ಬೆಳೆ ಬೆಳೆಯದಂತೆ ಮನವಿ
-
Manglore9 hours agoಮನೆ ಕಾಮಗಾರಿಗೆ ಬಂದು 6.37 ಲಕ್ಷ ಮೌಲ್ಯದ ಚಿನ್ನಾಭರಣ ಕಳವು- ಕೃತ್ಯ ಎಸಗಿದ 24 ಗಂಟೆಯೊಳಗೆ ಆರೋಪಿ ಅಂದರ್
-
Hassan18 hours agoಹಾಸನದ ವಿದ್ಯಾರ್ಥಿಗಳಿಗೆ ನೀಟ್–ಜೆಇಇ ತರಬೇತಿಯಲ್ಲಿ ಹೊಸ ಮೈಲುಗಲ್ಲು ನಿರ್ಮಿಸಿದ ಪಾಠಶಾಲಾ ನೀಟ್ ಅಕಾಡೆಮಿ
