Crime
ಕಾರು ಡಿಕ್ಕಿಯಾಗಿ ಮಹಿಳೆ ದುರ್ಮರಣ
*ಮದುವೆಗೆ ಬಂದ ಮಹಿಳೆ ಸ್ಮಶಾನ ಸೇರಿದರು.
ಸಂಬಂಧಿಕರ ಮದುವೆಗೆಂದು ಬಂದಿದ್ದ ಮಹಿಳೆಯೊಬ್ಬರು ಮಾರುತಿ ಕಾರು ಡಿಕ್ಕಿ ಹೊಡೆದ ಪರಿಣಾಮ ಅಸು ನೀಗಿರುವ ಘಟನೆ ಇಂದು ಮಧ್ಯಾಹ್ನ ಸುಂಟಿಕೊಪ್ಪ ಸಮೀಪದ ಗದ್ದೆಹಳ್ಳದಲ್ಲಿ ನಡೆದಿದೆ. ಕಾಸರಗೋಡುವಿನ ರಾಬಿಯ ಎಂಬುವವರು ಮೃತ ದುರ್ದೈವಿ. 7ನೇ ಹೊಸಕೋಟೆಯಲ್ಲಿರುವ ಇವರ ಸಂಬಂಧಿಯ ವಿವಾಹ ಗದ್ದೆಹಳ್ಳದಲ್ಲಿ ನಡೆಯುತ್ತಿತ್ತು. ಮದುವೆಯಲ್ಲಿ ಪಾಲ್ಗೊಂಡಿದ್ದ ರಾಬಿಯ ರಸ್ತೆ ಬದಿಯಲ್ಲಿ ನಿಂತಿದ್ದರು.
ಈ ಸಂದರ್ಭ ಗಿರಿಯಪ್ಪ ಮನೆ ಗದ್ದೆ ನಿವಾಸಿ ಪೊನ್ನಪ್ಪ ಎಂಬುವವರ ಪುತ್ರ ಶರತ್ ಎಂಬಾತ ವೇಗವಾಗಿ ಚಲಾಯಿಸಿಕೊಂಡು ಬಂದ ಮಾರುತಿ ಕಾರು ಮೂವರು ಮಹಿಳೆಯರಿಗೆ ಡಿಕ್ಕಿಪಡಿಸಿ ಗಾಯಗೊಳಿಸಿದೆ. ಅಲ್ಲಿಯೂ ನಿಯಂತ್ರಣಕ್ಕೆ ಬಾರದ ಕಾರು ಮುಂದಕ್ಕೆ ಚಲಿಸಿ ರಾಬಿಯ ಅವರಿಗೆ ಗುದ್ದಿ ಅವರೊಂದಿಗೆ ವಿದ್ಯುತ್ ಕಂಬಕ್ಕೆ ಅಪ್ಪಳಿಸಿದೆ. ಇದರಿಂದ ಗಂಭೀರವಾಗಿ ಗಾಯಗೊಂಡ ರಾಬಿಯ ಸ್ಥಳದಲ್ಲಿಯೇ ಉಸಿರು ಚೆಲ್ಲಿದ್ದಾರೆ. ಕಾರು ಡಿಕ್ಕಿಯಾಗಿ ಗಾಯಗೊಂಡಿರುವ ಇನ್ನುಳಿದ ಮೂವರು ಮಹಿಳೆಯರನ್ನು ಮಡಿಕೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
Crime
ಕಟ್ಟಿನಮನೆ ಬಳಿ ಗಾಳಿ ಮಳೆಯಿಂದ ಮರ ಬಿದ್ದು ಓರ್ವ ಮಹಿಳೆ ಭೀಕರ ದುರ್ಮರಣ..ಮೂವರಿಗೆ ಗಾಯ
ನರಸಿಂಹರಾಜಪುರ ತಾಲೂಕಿನ ಕಾನೂರು ಪಂಚಾಯತ್ ವ್ಯಾಪ್ತಿಯ ಕಟ್ಟಿನಮನೆ ಗ್ರಾಮದಲ್ಲಿ ಪೂಜೆ ಮುಗಿಸಿ ಮನೆಗೆ ತೆರುಳುವ ಸಂದರ್ಭದಲ್ಲಿ ಭಾರಿ ಗಾಳಿಯಿಂದಾಗಿ ಮರ ಬಿದ್ದು ಮಹಿಳೆ ಮೃತಪಟ್ಟಿದ್ದಾರೆ.
Crime
ಬಿಹಾರ : ಮದುವೆ ಮನೆಯಲ್ಲಿ ಪತ್ನಿ ಡಾನ್ಸ್ | ಬೇಸರಗೊಂಡು ಪತಿ ಆತ್ಮಹತ್ಯೆ
ಬಾವನ ಮದುವೆಯಲ್ಲಿ ಪತ್ನಿ ಡಾನ್ಸ್ ಮಾಡಿದಳೆಂದು ಬೇಸರಗೊಂಡ ಪತಿ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬಿಹಾರದ ಬದಾರಿಯಾದಲ್ಲಿ ನಡೆದಿದೆ.
ಬಹುಲಾ ಗ್ರಾಮದ ನಿವಾಸಿ 35 ವರ್ಷದ ಗೋಪಾಲ್ ಸಿಂಗ್, ರಸೂಲ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಮಹೇಂದ್ರ ನಾಥ್ ಹಾಲ್ಟರ್ ರೈಲು ನಿಲ್ದಾಣದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಗೋಪಾಲ್ ಸಿಂಗ್ ಬೇನತ್ ಗ್ರಾಮದಲ್ಲಿ ತನ್ನ ಪತ್ನಿಯ ಸಹೋದರನ ಮದುವೆ ಸಮಾರಂಭಕ್ಕೆ ಹೋಗಿದ್ದರು. ಈ ವೇಳೆ ಸಂಭ್ರಮದಲ್ಲಿ ಡಾನ್ಸ್ ಮಾಡುತ್ತಿದ್ದ ಪತ್ನಿಯನ್ನು ನೋಡಿ ಅಸಮಾಧಾನಗೊಂಡು ಗೋಪಾಲ್ ಆಕೆಯನ್ನು ತಡೆದಿದ್ದಾನೆ.
ಕುಟುಂಬಸ್ಥರ ಮಾಹಿತಿ ಪ್ರಕಾರ ಗೋಪಾಲ್ ಡಾನ್ಸ್ ಮಾಡುತ್ತಿದ್ದ ತನ್ನ ಪತ್ನಿಯನ್ನು ಸುಮ್ಮನಿರುವಂತೆ ಸೂಚಿಸಿದ್ದನು. ಆದರೆ ಆಕೆ ಮಾತ್ರ ಆತನ ಮಾತಿಗೆ ಒಪ್ಪಲಿಲ್ಲ. ಈ ವೇಳೆ ಇಬ್ಬರ ನಡುವೆ ಸಣ್ಣ ಜಗಳ ನಡೆದಿದೆ.
ಆಗ ಬಾವ-ಬಾಮೈದರ ನಡುವೆ ಮಾತಿಗೆ ಮಾತು ಬೆಳೆದು ಜಗಳ ತಾರಕಕ್ಕೇರಿತ್ತು. ಇದರಿಂದ ತೀರ ಬೇಸರಗೊಂಡಿದ್ದ ಗೋಪಾಲ್, ರೈಲು ಬರುತ್ತಿದ್ದ ಸಮಯ ನೋಡಿಕೊಂಡು ಹಳಿಗೆ ಹಾರಿಗೆ ಪ್ರಾಣ ಬಿಟ್ಟಿದ್ದಾನೆ. ಪ್ರಕರಣ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
Crime
ಪತ್ನಿ ಹಾಗೂ ಇಬ್ಬರು ಮಕ್ಕಳಿಗೆ ವಿಷವುಣಿಸಿ ಕೊಲೆಗೈದು ತಾನೂ ಆತ್ಮಹತ್ಯೆಗೆ ಯತ್ನಿಸಿರುವ ಪತಿ…!
ನಾಗಮಂಗಲ :- ಕ್ರಿಕೆಟ್ ಬೆಟ್ಟಿಂಗ್ ಹಾಗೂ ಪರಸ್ತ್ರೀ ಜೊತೆಗಿನ ಮೋಜಿನಿಂದ ಸಾಲದ ಸುಳಿಗೆ ಸಿಲುಕಿದ್ದ ಪತಿಯೊಬ್ಬ ಹೆಂಡತಿ ಮತ್ತು ಇಬ್ಬರು ಮಕ್ಕಳಿಗೆ ವಿಷ ವುಣಿಸಿ ಕೊಲೆಗೈದು ತಾನು ಸಹ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಪಟ್ಟಣದಲ್ಲಿ ನಡೆದಿದೆ.
ಪಟ್ಟಣದ ಎಂಟನೇ ವಾರ್ಡ್ ನ ಪೇಟೆ ಹೊಲ ರಸ್ತೆಯ ನಿವಾಸಿ ನರಸಿಂಹ ಪತ್ನಿ ಮತ್ತು ಮಕ್ಕಳನ್ನು ಕೊಲಗೈದಿದ್ದಲ್ಲದೆ ತಾನು ಸಹ ಆತ್ಮಹತ್ಯೆಗೆ ಯತ್ನಿಸಿದವನಾಗಿದ್ದಾನೆ.
ಈತನ ಪತ್ನಿ ಕೀರ್ತನ (23) ಮಕ್ಕಳಾದ ಜಯಸಿಂಹ (4) ಮತ್ತು ಒಂದೂವರೆ ವರ್ಷದ ರಿಷಿಕಾ ಸಾವನ್ನಪ್ಪಿದ್ದು, ನರಸಿಂಹನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ತಾಲೂಕಿನ ತೆಂಗಿನಭಾಗ ಗ್ರಾಮದ ಸ್ವಾಮಿ ರ ಪುತ್ರ ನರಸಿಂಹ ಕಟಿಂಗ್ ಶಾಪ್ ಅಂಗಡಿ ಇಟ್ಟುಕೊಂಡು ಜೀವನ ಮಾಡುತ್ತಿದ್ದನು ಮಂಡ್ಯ ತಾಲೂಕಿನ ಬಸರಾಳು ಸಮೀಪದ ಕಂಬದಹಳ್ಳಿ ಗ್ರಾಮದ ಕೀರ್ತನ ಳನ್ನು ಮದುವೆಯಾಗಿದ್ದು ದಂಪತಿಗೆ ಮುದ್ದಾದ ಎರಡು ಮಕ್ಕಳು ಇದ್ದವು.
ಪರಸ್ತ್ರೀ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ ಈತ ಕ್ರಿಕೆಟ್ ಬೆಟ್ಟಿಂಗ್ ನಿಂದ ಲಕ್ಷಾಂತರ ರೂ ಸಾಲ ಮಾಡಿಕೊಂಡಿದ್ದನು ಎನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ಪತ್ನಿಗೆ ಹಣ ತರುವಂತೆ ಪೀಡಿಸುತ್ತಿದ್ದು ನ್ಯಾಯ ಪಂಚಾಯಿತಿ ನಡೆಸಿ ಹಣವನ್ನು ನೀಡಲಾಗಿತ್ತು, ಆದರೂ ಸಹ ಈತ ಬದಲಾಗಿರಲಿಲ್ಲ, ಐಪಿಎಲ್ ಪಂದ್ಯಾವಳಿ ಆರಂಭ ಗೊಂಡ ನಂತರ ಬೆಟ್ಟಿಂಗ್ ನಲ್ಲಿ ಹೆಚ್ಚು ಹಣ ಕಳೆದುಕೊಂಡಿದ್ದನು.
ಸುಮಾರು ಎಂಟು ಲಕ್ಷ ಸಾಲದ ಹೊರೆ ಈತನ ಮೇಲಿತ್ತು, ಸಾಲಗಾರರ ಕಿರುಕುಳಕ್ಕೆ ಒಳಗಾಗಿದ್ದ ಈತ ಸಾಲ ತೀರಿಸುವ ಮಾರ್ಗ ಇಲ್ಲದೆ ಪತ್ನಿ ಜೊತೆ ಆಗಾಗ್ಗೆ ಜಗಳ ಮಾಡಿಕೊಳ್ಳುತ್ತಿದ್ದನು,
ಗುರುವಾರ 11 ರ ಮನೆಗೆ ಬಂದ ಈತ ಪತ್ನಿ ಕೀರ್ತನ ಮತ್ತು ಇಬ್ಬರು ಮಕ್ಕಳಿಗೆ ವಿಷ ವುಣಿಸಿದ ನಂತರ ಅವರು ಸಾವನ್ನಪ್ಪಿರುವುದನ್ನು ಖಚಿತ ಮಾಡಿಕೊಂಡು ತಾನು ಸಹ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು,ಮದ್ಯಾಹ್ನದ ವೇಳೆ ಮನೆಯವರು ಹೋಗಿ ನೋಡಿದಾಗ ಪ್ರಕರಣ ನೆಡೆದಿರುವುದು ಬೆಳಕಿಗೆ ಬಂದಿದೆ, ತಕ್ಷಣ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.
ತವರು ಮನೆಯಿಂದ ಹಣ ತರುವಂತೆ ಒತ್ತಡ ಹಾಕುತ್ತಿದ್ದ ನರಸಿಂಹ ಬಲವಂತವಾಗಿ ಹೆಂಡತಿ ಮಕ್ಕಳಿಗೆ ವಿಷ ವುಣಿಸಿದ್ದಾನೆ, ಅಕ್ರಮ ಸಂಬಂಧ ಹಿನ್ನೆಲೆಯಲ್ಲಿ ಕುಟುಂಬವನ್ನು ಕೊಲೆಗೈದಿದ್ದಾನೆ ಎಂದು ಹೇಳಲಾಗುತ್ತಿದ್ದು ಪ್ರಕರಣದ ಸುತ್ತ ಹಲವು ಅನುಮಾನ ಸೃಷ್ಟಿಯಾಗಿದೆ.
ಕೀರ್ತನ ತಂದೆ ಶಿವನಂಜು ಮಾತನಾಡಿ ವರದಕ್ಷಿಣೆ ಕಿರಿಕುಳವನ್ನು ಪದೇ ಪದೇ ನೀಡುತ್ತಿದ್ದನು, 8 ಲಕ್ಷಕ್ಕೂ ಹೆಚ್ಚು ಸಾಲ ಮಾಡಿಕೊಂಡು ನ್ಯಾಯ ಪಂಚಾಯತಿ ಎಲ್ಲ ನಡೆದಿದ್ದವು. ಆದರೂ ಕೂಡ ನಾನು ಅವರ ಹಣವನ್ನು ನೀಡಿದ್ದೆ ಅಳಿಯ ನರಸಿಂಹನ ಆಕ್ರಮ ಸಂಬಂಧದ ಹಿನ್ನೆಲೆಯಲ್ಲಿ ನನ್ನ ಮಗಳು ಸಾವನ್ನಪ್ಪಿದ್ದಾಳೆ ಎಂದು ತಿಳಿಸಿದರು
ನಾಗಮಂಗಲ ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ.
-
Mysore3 months ago
ಶ್ರೀಮತಿ ಭವಾನಿ ರೇವಣ್ಣ ಸಹೋದರ ಇಂದು ಅಂತ್ಯಕ್ರಿಯೆ
-
State6 months ago
Free sewing machine, ಉಚಿತ ಹೊಲಿಗೆ ಯಂತ್ರ ಪಡೆಯಲು ಅರ್ಜಿ ಸಲ್ಲಿಸಿ!
-
State6 months ago
ಶಾಲಾ ಮಕ್ಕಳಿಗೆ ಫೆಬ್ರವರಿ ತಿಂಗಳಲ್ಲಿ ಭರ್ಜರಿ ಹಾಲಿಡೇ! ಇಲ್ಲಿದೆ ರಜಾ ಲಿಸ್ಟ್!!!
-
Health6 months ago
Sugar Control ಆಗಬೇಕು ಅಂದ್ರೆ ಈ ಹಿಟ್ಟನ್ನು ತಿನ್ನಬೇಕಂತೆ! ಕನ್ಫ್ಯೂಸ್ ಆಗ್ಬೇಡಿ ಸುದ್ದಿ ಓದಿ
-
Hassan3 months ago
ಹಾಸನ ಜಿಲ್ಲೆ ಹೊಳೆನರಸೀಪುರ ತಾಲ್ಲೂಕಿನ ಹರದನಹಳ್ಳಿಯಲ್ಲಿ ಸಂಸದ ಪ್ರಜ್ವಲ್ ರೇವಣ್ಣ ಹೇಳಿಕೆ
-
Uncategorized2 months ago
NEET 2024 ಮರು ಪರೀಕ್ಷೆಗೆ ಒತ್ತಾಯ: ಪೇಪರ್ ಲೀಕ್, ಮೋಸದ ಗ್ರೇಸ್ ಮಾರ್ಕ್, ಒಂದೇ ಕೇಂದ್ರದ ವಿದ್ಯಾರ್ಥಿಗಳು ಟಾಪರ್ಸ್ !!
-
Uncategorized8 months ago
ಅರ್ಜುನನ ಸಮಾದಿಗೆ ಪೂಜೆ ಸಲ್ಲಿಸಿದ ಮೈಸೂರು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್
-
State6 months ago
ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ!!. ‘ಹಳೆ ಪಿಂಚಣಿ’ ಜಾರಿಗೆ ಗ್ರೀನ್ ಸಿಗ್ನಲ್ ಕೊಟ್ಟ ರಾಜ್ಯ ಸರ್ಕಾರ.