Connect with us

Mandya

ಮಂಡ್ಯದಲ್ಲಿ ಸಂಜೆ 6 ಗಂಟೆ ವೇಳೆಗೆ ಶೇ.81.56ರಷ್ಟು ಮತದಾನ.

Published

on

ವಿಧಾನಸಭಾ ಕ್ಷೇತ್ರವಾರು ವಿವರ:

ಕೆ.ಆರ್.ಪೇಟೆ ಶೇ .80.63.

ಮದ್ದೂರು ಶೇ.82.91.

ಮಳವಳ್ಳಿ ಶೇ.77.07.

ಮಂಡ್ಯ ಶೇ 76.98.

ಮೇಲುಕೋಟೆ 87.13.

ನಾಗಮಂಗಲ ಶೇ 84.60.

ಶ್ರೀರಂಗಪಟ್ಟಣ ಶೇ.84.09.

ಕೆ.ಆ‌ರ್.ನಗರ ಶೇ.80.44ರಷ್ಟು ಮತದಾನ.

Continue Reading
Click to comment

Leave a Reply

Your email address will not be published. Required fields are marked *

Mandya

ಬರ ಪರಿಹಾರ ಕೊಡುವಲ್ಲಿ‌ ರಾಜ್ಯ ಸರ್ಕಾರ ವಿಫಲ : ತಹಸೀಲ್ದಾರ್ ಗೆ ಮನವಿ

Published

on

ಶ್ರೀರಂಗಪಟ್ಟಣ : ರಾಜ್ಯ ಸರ್ಕಾರ ರೈತರಿಗೆ ಬರಪರಿಹಾರ ಕೊಡುವಲ್ಲಿ ವಿಫಲ ವಾಗಿದೆ ಎಂದು ಆರೋಪಿಸಿ ಭೂಮಿತಾಯಿ ಹೋರಾಟ ಸಮಿತಿ ಪದಾಧಿಕಾರಿಗಳು ತಹಸೀಲ್ದಾರ್ ಪರಶುರಾಮ್ ಸತ್ತಿಗೇರಿ‌ ಅವರಿಗೆ ಮನವಿ ಸಲ್ಲಿಸಿದರು.

ಸರ್ಕಾರ ಬೆಳೆದು ನಿಂತ ಬೆಳೆಗಳ ರಕ್ಷಣೆಗೆ ಕೆಆರ್ ಎಸ್ ಕನ್ನಂಬಾಡಿ ಅಣೆಕಟ್ಟೆಯಿಂದ ನೀರು ಬಿಡುಗಡೆ ಮಾಡದೆ, ಬೆಳೆ ಒಣಗಳು ಕಾರಣ ವಾಗಿದೆ. ಜೊತೆಗೆ ರೈತರ ನೆರವಿಗೆ ಬರಲು ವಿಫಲ ವಾಗಿದ್ದು, ರೈತ ವಿರೋಧಿ ರಾಜ್ಯ ಸರ್ಕಾರ ಒಣಗಿದ ಬೆಳೆ ಸಮೀಕ್ಷೆ ಮಾಡದೆ, ನೊಂದ ರೈತರಿಗೆ ಅನ್ಯಾಯ ಮಾಡಿದೆ.

ತಾಲ್ಲೋಕಿನ ಬೆಳೆ ನಷ್ಟದ ವರದಿಯನ್ನು ಸರ್ಕಾರಕ್ಕೆ ನೀಡಿ, ಅನ್ನದಾತರ ನೋವನ್ನು ಸರ್ಕಾರಕ್ಕೆ ವರದಿ ಮಾಡಲು ಶ್ರೀರಂಗಪಟ್ಟಣದ ತಾಸಿಲ್ದಾರ್ ರವನ್ನು ಬೇಟಿ ಮಾಡಿ ಒತ್ತಾಯಿಸುತ್ತಿರುವುದಾಗಿ ಅವರು‌‌ ತಿಳಿಸಿದರು.

Continue Reading

Mandya

ಶ್ರೀರಂಗಪಟ್ಟಣದಲ್ಲಿ ಲಿಂಗ ಪತ್ತೆ, ಭ್ರೂಣ ಹತ್ಯೆ ಶಿಕ್ಷಾರ್ಹ ಅಪರಾಧ ಕುರಿತು ಕಾರ್ಯಾಗಾರ

Published

on

ಶ್ರೀರಂಗಪಟ್ಟಣ : ಗರ್ಭ ಪೂರ್ವ ಮತ್ತು ಪ್ರಸವ ಪೂರ್ವ ಲಿಂಗ ಪತ್ತೆ ಮಾಡುವುದು ಹಾಗೂ ಹೆಣ್ಣು ಭ್ರೂಣ ಹತ್ಯೆ ಮಾಡುವುದು ಕಾನೂನು ಬಾಹೀರ ಮತ್ತು ಶಿಕ್ಷಾರ್ಹ ಅಪರಾಧ ಎಂದು ಸಾರ್ವಜನಿಕ ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ.ಪಿ.ಮಾರುತಿ ಹೇಳಿದರು.

ಅವರು ಶ್ರೀರಂಗಪಟ್ಟಣದ ಸಾರ್ವಜನಿಕ ಆಸ್ಪತ್ರೆ ಸಭಾಂಗಣದಲ್ಲಿ “ಲಿಂಗ ಪತ್ತೆ ಮತ್ತು ಭ್ರೂಣ ಹತ್ಯೆ ನಿಷೇಧ ಕಾಯ್ದೆ ಕುರಿತು” ಏರ್ಪಡಿಸಿದ್ದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.

ಗಂಡು ಹೆಣ್ಣು ನಾಣ್ಯದ ಎರಡು ಮುಖಗಳು ಇದನ್ನು ಅರಿತು ಎಲ್ಲರೂ ಅಸಮತೋಲನ ಉಂಟಾಗದಂತೆ ನೋಡಿಕೊಳ್ಳಬೇಕೆಂದು ಸಲಹೆ ನೀಡಿದರು.

ನಂತರ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಡಿ.ಬೆನ್ನೂರ್ ಮಾತನಾಡಿ, ಹೆಣ್ಣು ಭ್ರೂಣ ಹತ್ಯೆಯಿಂದ ಸಮಾಜದ ಮೇಲೆ ಪರಿಣಾಮ ಬೀರುತ್ತದೆ ಲಿಂಗ ಅನುಪಾತದಲ್ಲಿ ಏರುಪೇರಾಗಿ ಸಮಾಜದಲ್ಲಿ ಸಾಕಷ್ಟು ಸಮಸ್ಯೆಗಳು ಸೃಷ್ಟಿಯಾಗುತ್ತವೆ. ಮಹಿಳೆಯರ ಮೇಲೆ ಅತ್ಯಾಚಾರ,‌ವಿವಾಹ ವಿಚ್ಛೇದನ ಕುಟುಂಬ ಹದಗೆಡುತ್ತದೆ. ದೇಶದ ಅಭಿವೃದ್ಧಿ ಕುಂಠಿತವಾಗುತ್ತದೆ. ಹೆಣ್ಣು ಮಕ್ಕಳ ಸಂಖ್ಯೆ ಕಡಿಮೆಯಾದಲ್ಲಿ ಗಂಡು ಮಕ್ಕಳಿಗೆ ಮದುವೆಯ ಕೊರತೆ ಉಂಟಾಗುತ್ತದೆ. ಆ ಕಾರಣ ಲಿಂಗ ಪರೀಕ್ಷೆ ಮತ್ತು ಭ್ರೂಣ ಹತ್ಯೆ ಆರೋಗ್ಯದ ದೃಷ್ಟಿಯಿಂದ ಸರಿಯಲ್ಲ. ಗಂಡು ಮಗುವಿಗೆ ತೋರುವಷ್ಟು ಕಾಳಜಿ ಹೆಣ್ಣು ಮಗುವಿಗೂ ತೋರಬೇಕೆಂದು ಅವರು ಸಲಹೆ ನೀಡಿದರು.

ಇದೇ ಸಂದರ್ಭದಲ್ಲಿ ಪ್ರಸೂತಿ ತಜ್ಞ ವೈದ್ಯರಾದ ಡಾ.ಕುಮಾರ್ ಮಾತನಾಡಿ, ಗರ್ಭಿಣಿಯರು ನಿಗದಿತ ಅವಧಿಯಲ್ಲಿ ವೈದ್ಯಕೀಯ ತಪಾಸಣೆ ಮಾಡಿಸಿಕೊಂಡು ರಕ್ತ ಹೀನತೆ ಆಗದಂತೆ ಎಚ್ಚರಿಕೆ ವಹಿಸಬೇಕೆಂದು ತಿಳಿಸಿದರು.

ಕಾರ್ಯಾಗಾರದಲ್ಲಿ ತಾಲ್ಲೂಕು ಪ್ರಭಾರಿ ಹಿರಿಯ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಬಿ.ಮಂಗಳ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ರಾಜ್, ಆರೋಗ್ಯ ನಿರೀಕ್ಷಣಾಧಿಕಾರಿ ಎಂ.ಸಿ.ಚಂದನ,ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಸ್ಮಿತಾ, ಶುಶ್ರೂಷಣಾಧಿಕಾರಿ ಸುಧಾ,ಆಶಾ ಕಾರ್ಯಕರ್ತೆಯರಾದ ಚಾಂದನಿ, ಮೀನಾ, ಹೇಮಾವತಿ, ಗರ್ಭಿಣಿಯರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು

Continue Reading

Mandya

ಯೋಗ ಬಲ್ಲವನಿಗೆ ರೋಗವಿಲ್ಲ: ಅಪ್ಪಾಜಿ

Published

on

ಶ್ರೀರಂಗಪಟ್ಟಣ : ಆಧುನಿಕ ಜೀವನ ಶೈಲಿ ಆಹಾರ ಪದ್ಧತಿಯ ಪರಿಣಾಮವಾಗಿ ಬಾಲ್ಯದಲ್ಲೇ ಹಲವಾರು ಖಾಯಿಲೆಗಳಗೆ ಪೀಡಿತರಾಗುತ್ತಿರುವುದು ನೋವಿನ ಸಂಗತಿ. ಇವುಗಳಿಂದ ಮುಕ್ತಿ ಪಡೆಯಲು ಯೋಗ ಮತ್ತು ಧ್ಯಾನವನ್ನು ಸಿದ್ದ ಔಷಧವಾಗಿ ಬಳಸುವಂತೆ ಯೋಗ ತರಬೇತಿದಾರ ಕೆ ಶೆಟ್ಟಹಳ್ಳಿ ಅಪ್ಪಾಜಿ ತಿಳಿಸಿದರು.

ಶಿಕ್ಷಣ ಇಲಾಖೆ, ಬೆಂಗಳೂರು ಸುಕೃತ ಸಂಸ್ಥೆ ಹಾಗೂ ಬಲ್ಲೇನಹಳ್ಳಿ ಡಿಜಿಟಲ್ ಗ್ರಂಥಾಲಯ ಹಾಗೂ ಅರಿವು ಕೇಂದ್ರದ ಸಹಯೋಗದಲ್ಲಿ ತಾಲೂಕಿನ ನೆಲಮನೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯ ಆವರಣದಲ್ಲಿ “ಚೈತ್ರದ ಚಿಗುರು” ಗ್ರಾಮೀಣ ಮಕ್ಕಳ ಉಚಿತ ಬೇಸಿಗೆ ಶಿಬಿರದದಲ್ಲಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿ ಮಾತನಾಡುತ್ತಾ, ಪ್ರಪಂಚಕ್ಕೆ ಯೋಗವನ್ನು ಕೊಡುಗೆಯಾಗಿ ನೀಡಿದಂತಹ ದೇಶ ನಮ್ಮದು.

ಪ್ರಸ್ತುತ ಬದುಕಿನಲ್ಲಿ ಆರೋಗ್ಯವನ್ನು ಉಳಿಸಿಕೊಳ್ಳುವುದು ಸವಾಲಾಗಿ ಪರಿಣಮಿಸಿದ್ದು, ಯೋಗ ಮತ್ತು ಧ್ಯಾನವನ್ನು ಬದುಕಿನ ಒಂದು ಅಂಗವಾಗಿ ಅಳವಡಿಸಿಕೊಳ್ಳಬೇಕು. ಆ ಮೂಲಕ ಉತ್ತಮ ದೈನಂದಿನ ಚಟುವಟಿಕೆ ಹಾಗೂ ಸಸ್ಯಹಾರ ಮತ್ತು ಉತ್ತಮ ಚಿಂತನೆಯನ್ನು ಮೈಗೂಡಿಸಿಕೊಂಡು ಆರೋಗ್ಯಕರ ಬದುಕು ನಡೆಸಬಹುದು ಎಂದು ಸಲಹೆ ನೀಡಿದರು.

ರಾಷ್ಟ್ರಮಟ್ಟದ ತೀರ್ಪುಗಾರ ಹಾಗೂ ಕರಾಟೆ ತರಬೇತಿದಾರ ವೆಂಕಟೇಶ್ ಕರಾಟೆ ಬಗ್ಗೆ ಮಾರ್ಗದರ್ಶನ ನೀಡಿ ಮಾತನಾಡುತ್ತಾ, ಹೆಣ್ಣು ಮಕ್ಕಳು ತಮ್ಮ ಮೇಲೆ ಆಗುತ್ತಿರುವ ಅನ್ಯಾಯ ಹಾಗೂ ದೌರ್ಜನ್ಯವನ್ನು ನಿಯಂತ್ರಿಸಲು ಹಾಗೂ ದುಷ್ಟ ಶಕ್ತಿಗಳನ್ನು ಮಟ್ಟ ಹಾಕಬೇಕು. ಮಹಿಳೆಯರು ಆತ್ಮ ರಕ್ಷಣೆಗಾಗಿ ಹಾಗೂ ಶಾಂತಿಗಾಗಿ ಕರಾಟೆಯನ್ನು ಕಲಿಯುವ ಅಗತ್ಯವಿದೆ ಎಂದು ಅವರು ತಿಳಿಸಿದರು.

ವಿಜ್ಞಾನ ಸಂಪನ್ಮೂಲ ವ್ಯಕ್ತಿ ಕರಿಯಪ್ಪ ಲೇಬಗೆರಿ, ಮುಖ್ಯ ಶಿಕ್ಷಕ ಕೃಷ್ಣಪ್ಪ, ಶಿಕ್ಷಕರಾದ ಸಾಗರ್, ಲಕ್ಷ್ಮಿ, ಸವಿತಾ, ಎಸ್ ಡಿಎಂಸಿ ಅಧ್ಯಕ್ಷೆ ಜ್ಯೋತಿ ರಮೇಶ್, ಗ್ರಂಥಪಾಲಕ ಹಾಗೂ ಸಂಪನ್ಮೂಲ ವ್ಯಕ್ತಿ ಕೂಡಲಕುಪ್ಪೆ ಸೋಮಶೇಖರ್ ಹಾಜರಿದ್ದರು.

Continue Reading

Trending

error: Content is protected !!