Connect with us

Chamarajanagar

ಪಟ್ಟಣದ ಮುಖ್ಯ ರಸ್ತೆ  ಕಾಮಗಾರಿ ವೀಕ್ಷಣೆ ಮಾಡಿದ ಶಾಸಕ ಎಂ.ಆರ್ ಮಂಜುನಾಥ್.

Published

on

ಹನೂರು:ಪಟ್ಟಣದ ಮುಖ್ಯ ರಸ್ತೆ  ಕಾಮಗಾರಿ ವೀಕ್ಷಣೆ ಮಾಡಿದ ಶಾಸಕ ಎಂ.ಆರ್ ಮಂಜುನಾಥ್.

ನಂತರ ಮಾತನಾಡಿ ಪಟ್ಟಣದಲ್ಲಿ ತಾತ್ಕಾಲಿಕವಾಗಿ ಸ್ಥಗಿತವಾಗಿರುವ ರಸ್ತೆ ಕಾಮಗಾರಿಯನ್ನು ಶೀಘ್ರವೇ ಪೂರ್ಣಗೊಳಿಸಿ ಸಂಚಾರಕ್ಕೆ ಮುಕ್ತ ಗೊಳಿಸುವಂತೆ ಕೆ ಶಿಪ್ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.

ಉಳಿದಿರುವ ರಸ್ತೆ ಕಾಮಗಾರಿ ಪೂರ್ಣ ಗೊಳಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಕೆಸಿಎಫ್ ಅಧಿಕಾರಿಗಳಿಗೆ ಶಾಸಕರು  ತಿಳಿಸಿದರು.

ಪಟ್ಟಣದ ಮುಖ್ಯ ರಸ್ತೆ ಭರದಿಂದ ಸಾಗಿದ ರಸ್ತೆ ಕಾಮಗಾರಿ ಪಟ್ಟಣದ ನಡುವೆ ಹಾದು ಹೋಗುವ ಮುಖ್ಯ ರಸ್ತೆ  ಹೆದ್ದಾರಿ  ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ತಿಳಿಸಿದರು.

ರಸ್ತೆ  ಕಾಮಗಾರಿ ಪ್ರಾರಂಭವಾಗದೆ  ಇನ್ನು ಕೆಲವು ಕಡೆ ಕಟ್ಟಡ ತೆರವುಗೊಳಿಸುವ ಕಾರ್ಯ ಮಾಡಬೇಕಿದ್ದು ಪೂರ್ಣ ಪ್ರಮಾಣದಲ್ಲಿ ತೆರವುಗೊಳ್ಳುತ್ತಿದ್ದಂತೆ ರಸ್ತೆ ಕಾಮಗಾರಿ ನಡೆಸಲಾಗುವುದು. ಪಟ್ಟಣದ ಮುಖ್ಯ ರಸ್ತೆ ಕಾಮಗಾರಿ ನಡೆಯುತ್ತಿದ್ದು  ರಸ್ತೆ ಬದಿ ಅಂಗಡಿ ಮಾಲಿಕರುಗಳಿಗೂ ಕೂಡ ಅಧಿಕಾರಿಗಳಿಗೆ ಉಳಿದಿರುವ  ಅಬಿವೃದ್ಧಿ ಕಾಮಗಾರಿ  ಪೂರ್ಣಗೊಳಿಸಲು ಸಹಕರ ನೀಡಿ  ಪಟ್ಟಣದ ಅಭಿವೃದ್ಧಿಗೆ  ಸಹಕರಿಸಿ ಎಂದು ಹೇಳಿದ್ದರು .

ಇದೇ ವೇಳೆ ಕೆಸಿಎಫ್ ರಸ್ತೆ ಕಾಮಗಾರಿ ಪ್ರಾಜೆಕ್ಟ್ ಮ್ಯಾನೇಜರ್ ಮುತ್ತಣ್ಣ, ಮಹಾಂತೇಶ್,ಜೆಡಿಎಸ್ ಪಟ್ಟಣ ಪಂಚಾಯಿತಿ ಸದಸ್ಯರಾದ ಆನಂದ್ ಕುಮಾರ್, ಹಾಗೂ  ಮುಖಂಡರುಗಳಾದ ಮಂಜೇಶ್ ಗೌಡ, ಗಿರೀಶ್ ಇನ್ನಿತರರು ಉಪಸ್ಥಿತರಿದ್ದರು..

Continue Reading
Click to comment

Leave a Reply

Your email address will not be published. Required fields are marked *

Chamarajanagar

ಡಿ. 10ಕ್ಕೆ ಚಾ.ನಗರದಲ್ಲಿ ಸಾರ್ವಜನಿಕರಿಂದ ದೂರು ಸ್ವೀಕರಿಸಲಿರುವ ಲೋಕಾಯುಕ್ತ ಅಧಿಕಾರಿಗಳು

Published

on

ಚಾಮರಾಜನಗರ : ಜಿಲ್ಲೆಯ ಲೋಕಾಯುಕ್ತ ಕಚೇರಿಯ ಅಧಿಕಾರಿಗಳು ಚಾಮರಾಜನಗರ ಪ್ರವಾಸಿಮಂದಿರದಲ್ಲಿ (ಐ.ಬಿ) ಡಿಸೆಂಬರ್. 10ರಂದು ಬೆಳಿಗ್ಗೆ 11 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಸಾರ್ವಜನಿಕರಿಂದ ಕರ್ನಾಟಕ ಲೋಕಯುಕ್ತ ಕಾಯ್ದೆಯಡಿ ಭರ್ತಿ ಮಾಡಿದ ದೂರು ಅರ್ಜಿಗಳನ್ನು ಸ್ವೀಕರಿಸಿ ವಿಚಾರಣೆ ನಡೆಸಲಿದ್ದಾರೆ.

ಸರ್ಕಾರಿ ಕಚೇರಿಗಳಲ್ಲಿ ಕೆಲಸದ ಅನಗತ್ಯ ವಿಳಂಬ ಹಾಗೂ ಇನ್ನಿತರ ತೊಂದರೆ ನೀಡುತ್ತಿರುವ ಸರ್ಕಾರಿ ಅಧಿಕಾರಿ, ನೌಕರರ ವಿರುದ್ಧ ಸಾರ್ವಜನಿಕರು ದೂರುಗಳನ್ನು ನಿಗದಿತ ನಮೂನೆ-1 ಮತ್ತು 2 ರಲ್ಲಿ ಭರ್ತಿಮಾಡಿ ಸಲ್ಲಿಸಬಹುದು.

ಸಾರ್ವಜನಿಕರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಕರ್ನಾಟಕ ಲೋಕಾಯುಕ್ತ ಜಿಲ್ಲಾ ಪೊಲೀಸ್ ವಿಭಾಗದ ಉಪಾಧೀಕ್ಷಕ ಜಿ.ಎಸ್. ಗಜೇಂದ್ರ ಪ್ರಸಾದ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Continue Reading

Chamarajanagar

ಚಾಮರಾಜನಗರ, ನಂಜನಗೂಡು, ಕಡಕೊಳ, ಅಶೋಕಪುರಂ ರೈಲು ನಿಲ್ದಾಣಗಳಿಗೆ ಡಿಆರ್‌ಎಂ ಭೇಟಿ, ಪರಿಶೀಲನೆ

Published

on

ಮೈಸೂರು: ಮೈಸೂರು ವಿಭಾಗದ ನೈರುತ್ಯ ರೈಲ್ವೆ ವ್ಯವಸ್ಥಾಪಕ ‌ನಿರ್ದೇಶಕ ಮುದಿತ್ ಮಿತ್ತಲ್ ಅವರು ಚಾಮರಾಜನಗರ, ನಂಜನಗೂಡು ಟೌನ್, ಕಡಕೊಳ ಮತ್ತು ಅಶೋಕಪುರಂ ರೈಲು ನಿಲ್ದಾಣಗಳನ್ನು ಸೋಮವಾರ ಪರಿಶೀಲಿಸಿದರು.

ಚಾಮರಾಜನಗರದಲ್ಲಿ ಅಮೃತ ಭಾರತ್ ಸ್ಟೇಷನ್ ಯೋಜನೆಯಡಿ ನಡೆಯುತ್ತಿರುವ ಕಾಮಗಾರಿಗಳ ಪ್ರಗತಿಯನ್ನು ಅವರು ಪರಿಶೀಲಿಸಿ, ಪ್ರಯಾಣಿಕರ ಸೌಲಭ್ಯಗಳು, ಮೂಲಸೌಕರ್ಯ ಸುಧಾರಣೆಗಳು ಮತ್ತು ನಿಲ್ದಾಣ ಪುನರ್ವಿಕಾಸಕ್ಕೆ ಸಂಬಂಧಿಸಿದ ಅಂಶಗಳ ಮೇಲೆ ವಿಶೇಷ ಗಮನ ಹರಿಸಿದರು. ಅಲ್ಲದೇ, ನಿಲ್ದಾಣದಲ್ಲಿನ ಉದ್ಯೋಗಿಗಳು ಮತ್ತು ಸಿಬ್ಬಂದಿಯೊಂದಿಗೆ ಕೂಡ ಸಂವಾದ ನಡೆಸಿದರು.

ನಂಜನಗೂಡು ಪಟ್ಟಣದ ಗೂಡ್ಸ್ ಶೆಡ್ ಪರಿಶೀಲಿಸಿ, ಅದರ ಕಾರ್ಯಾಚರಣಾ ದಕ್ಷತೆ ಹಾಗೂ ಭವಿಷ್ಯದ ಸಾಮರ್ಥ್ಯ ವೃದ್ಧಿ ಅಗತ್ಯಗಳನ್ನು ಅವಲೋಕಿಸಿದರು. ನಂತರ ಕಡಕೊಳ ರೈಲು ನಿಲ್ದಾಣಕ್ಕೆ ಭೇಟಿ ನೀಡಿ, ಕಂಟೇನರ್ ಲೋಡಿಯಿಂಗ್ ಪಾಯಿಂಟ್ ಕಾರ್ಯಕ್ಷಮತೆಯನ್ನು ಪರಿಶೀಲಿಸಿದರು.

ಈ ವೇಳೆ ಸರಕು ಹಸ್ತಾಂತರ ಸೌಲಭ್ಯಗಳು ಹಾಗೂ ಸರಕು ಸಾಗಣೆ ಕಾರ್ಯಕ್ಷಮತೆ ಮುಂಬರುವ ಅಭಿವೃದ್ಧಿ ಚಟುವಟಿಕೆಗಳನ್ನು  ಪರಿಶೀಲಿಸಿದರು.

ಅಶೋಕಪುರಂ ರೈಲು ನಿಲ್ದಾಣದಲ್ಲಿ ಪ್ರಯಾಣಿಕರ ಸೌಲಭ್ಯಗಳು, ಸುರಕ್ಷತಾ ಕ್ರಮಗಳು ಹಾಗೂ ನಿಲ್ದಾಣದ ನಿರ್ವಹಣೆಯನ್ನೂ ಪರಿಶೀಲಿಸಿದರು.

ಈ ಸಂದರ್ಭದಲ್ಲಿ ಗತಿ ಶಕ್ತಿ ಸಿಪಿಎಂ ಆನಂದ್ ಭಾರತಿ ಮತ್ತು ವಿವಿಧ ವಿಭಾಗದ ಹಿರಿಯ ಅಧಿಕಾರಿಗಳು ಇದ್ದರು.

Continue Reading

Chamarajanagar

ಇ-ಸ್ವತ್ತು ಹಾಗೂ ನೋಂದಣಿ ಗೆ ಒತ್ತಾಯಿಸಿ ಪ್ರತಿಭಟನೆ

Published

on

ವರದಿ : ಸುನೀಲ್ ಪ್ರಶಾಂತ್

ಕೊಳ್ಳೇಗಾಲ: ಇ-ಸ್ವತ್ತು ಹಾಗೂ ನೋಂದಣಿ ಮಾಡಿಕೊಡುವಂತೆ ಮಹಿಳಾ ನಿವಾಸಿಗಳು ಒತ್ತಾಯಿಸಿ ಪ್ರತಿಭಟನೆ ನಡೆಸಿದರು.

ಪಟ್ಟಣದ ನಗರಸಭೆ ಮುಂಭಾಗದಲ್ಲಿ ಜಮಾಯಿಸಿದ ಮುಡಿಗುಂಡ ಹಾಗೂ ಶಂಕನಪುರ ಬಡಾವಣೆಗಳ ಸ್ಲಮ್ ಬೋರ್ಡ್ ಮನೆಗಳ ಇ-ಸ್ವತ್ತು ಹಾಗೂ ನೋಂದಣಿ ಮಾಡಿಕೊಡುವಂತೆ ಒತ್ತಾಯಿಸಿ ಇಲ್ಲಿನ ಮುಡಿಗುಂಡ ಹಾಗೂ ಶಂಕನಪುರ ಬಡಾವಣೆಯ ಮಹಿಳಾ ವಾಸಿಗಳು ಪ್ರತಿಭಟನೆ ನಡೆಸಿದರು.

ಇದೇ ಸಂದರ್ಭದಲ್ಲಿ ಮಹಿಳೆಯೊಬ್ಬರು ಮಾತನಾಡಿ ನಮ್ಮ ಸಮಸ್ಯೆ ಕುರಿತು ಅಳಲು ತೋಡಿಕೊಂಡರು.

ಪ್ರತಿಭಟನೆಯಲ್ಲಿ ಮಹಿಳಾ ಹೋರಾಟಗಾರ್ತಿ ಶಿವಮ್ಮ, ನಿವಾಸಿಗಳಾದ ಕವಿತಾ, ಸುಮ, ನಿಂಗಮ್ಮ,ರಾಧ, ಪುಟ್ಟನಂಜಮ್ಮ, ನಾಗವೇಣಿ, ದೀಪಾ, ಜಯಮ್ಮ,
ಮಹದೇವ, ನಿಂಗರಾಜು ಇತರರು ಇದ್ದರು.

Continue Reading

Trending

error: Content is protected !!