Mysore
ಶ್ರೀಮತಿ ಭವಾನಿ ರೇವಣ್ಣ ಸಹೋದರ ಇಂದು ಅಂತ್ಯಕ್ರಿಯೆ
ವರದಿ : ಎಸ್ ಬಿ ಹರೀಶ್ ಸಾಲಿಗ್ರಾಮ
ಸಾಲಿಗ್ರಾಮ : ಮಾಜಿ ಸಚಿವ ಎಚ್ ಡಿ ರೇವಣ್ಣ ರವರ ಧರ್ಮ ಪತ್ನಿ ಶ್ರೀಮತಿ ಭವಾನಿ ರೇವಣ್ಣ ರವರ ಸಹೋದರ ಸಾಲಿಗ್ರಾಮ ನಿವಾಸಿ ಎಸ್ ಎಸ್ ಪ್ರಕಾಶ್ 55 ವರ್ಷ ಇವರು ಸಾವನಪ್ಪಿದ್ದು, ಅಂತ್ಯಕ್ರಿಯೆಯು ಇಂದು ನೆರವೇರಿಸಿದರು.
ಮೃತರಿಗೆ ಪತ್ನಿ ಹಾಗೂ ಇಬ್ಬರು ಅವಳಿ ಹೆಣ್ಣು ಮಕ್ಕಳು ಇದ್ದು, ಸಹೋದರಿ ಯರಾದ ರಾಜೇಶ್ವರಿ, ಶ್ರೀಮತಿ ಭವಾನಿ ರೇವಣ್ಣ ಸೇರಿದಂತೆ ಅಪಾರ ಬಂದು ಬಳಗವನ್ನು ಅಗಲಿದ್ದಾರೆ.
ಇವರ ಅಂತ್ಯಕ್ರಿಯೆಯು ಸ್ವಗ್ರಾಮ ಸಾಲಿಗ್ರಾಮದ ದಡದಹಳ್ಳಿ ಗ್ರಾಮದಲ್ಲಿರುವ ತೋಟದಲ್ಲಿ ನೆರವೇರಿಸಿದರು.
ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡ, ಮಾಜಿ ಸಚಿವ ಎಚ್. ಡಿ. ರೇವಣ್ಣ, ಶಾಸಕರಾದ ಜಿ ಟಿ ದೇವೇಗೌಡ, ಡಿ. ರವಿಶಂಕರ್, ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್, ಮಾಜಿ ಸಚಿವ ಸಾರಾಮಹೇಶ್, ನವನಗರ ಬ್ಯಾಂಕ್ ಅಧ್ಯಕ್ಷ ಬಸಂತ್, ದಿನೇಶ್ ನಂಜಪ್ಪ, ಕೆ ಪಿ ಸಿ ಸಿ ಕಾರ್ಯಕಾರಿ ಸಮಿತಿ ಸದಸ್ಯ ದೊಡ್ಡಸ್ವಾಮಿಗೌಡ, ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷ ಸಾರಾ ನಂದೀಶ್, ಜಿಲ್ಲಾ ಪಂಚಾಯತಿ ಮಾಜಿ ಸದಸ್ಯಎಂ ಟಿ ಕುಮಾರ್, ಪಿ ಎಲ್ ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಎಸ್ ಎಂ ಸೋಮಣ್ಣ, ಡಾಕ್ಟರ್ ಮಂಜುನಾಥ್, ಸೂರಜ್ ರೇವಣ್ಣ, ಹಾಸನ ಕೆ.ಎಂ. ಎಫ್.ಎಂ ಡಿ ಮಹೇಶ್,ಬೇಲೂರು ಮಾಜಿ ಶಾಸಕ ನಿಂಗೇಶ್, ಚನ್ನರಾಯಪಟ್ಟಣ ಶಾಸಕ ಬಾಲಕೃಷ್ಣ, ಅರಕಲಗೂಡು ಶಾಸಕ ಎ. ಮಂಜು,ಮಡಿಕೇರಿ ಜಿಲ್ಲಾ ವೈದ್ಯಾಧಿಕಾರಿ ಡಾ : ಸತೀಶ್,ಹಾಸನ ಜಿಲ್ಲಾ ಪಂಚಾಯತಿ ಅಧ್ಯಕ್ಷರು ಸೇರಿದಂತೆ ಹೊಳೆನರಸೀಪುರ, ಹಾಗೂ ಹಾಸನ ಜಿಲ್ಲೆಯ ಕಾರ್ಯಕರ್ತರುಗಳು, ಸಾಲಿಗ್ರಾಮ ಸುತ್ತ ಮುತ್ತಲಿನ ಕಾರ್ಯಕರ್ತರು, ಸಹಸ್ರಾರು ಸಂಖ್ಯೆ ಯಲ್ಲಿ ಸಾರ್ವಜನಿಕರು ಆಗಮಿಸಿ ಅಂತಿಮ ದರ್ಶನ ಪಡೆದರು. ವಿಧಿ ವಿಧಾನಗಳೊಂದಿಗೆ ಅಂತ್ಯಕ್ರಿಯೆ ನಡೆಸಿದರು.
Mysore
ದೌರ್ಜನ್ಯ ತಡೆಗೆ ಕೆಪಿಎ- ಸಾವಿತ್ರಿಬಾ ಫುಲೆ ಸಂಸ್ಥೆ ನಡುವೆ ಒಡಂಬಡಿಕೆ
ಮೈಸೂರು: ದೌರ್ಜನ್ಯರಹಿತ ಸಮಾಜ ನಿರ್ಮಾಣಕ್ಕಾಗಿ ಕರ್ನಾಟಕ ಪೊಲೀಸ್ ಅಕಾಡೆಮಿ ಮತ್ತು ಸಾವಿತ್ರಿಭಾಯಿ ಫುಲೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಂಸ್ಥೆಗಳ ನಡುವೆ ಒಡಂಬಡಿಕೆ ಏರ್ಪಟ್ಟಿದ್ದು, ಎರಡೂ ಸಂಸ್ಥೆಗಳ ಮುಖ್ಯಸ್ಥರು ಒಡಂಬಡಿಕೆಗೆ ಸಹಿ ಹಾಕಿದರು.
ಈ ವೇಳೆ ಮಾತನಾಡಿದ ಕರ್ನಾಟಕ ಪೊಲೀಸ್ ಅಕಾಡೆಮಿ ನಿರ್ದೇಶಕ ಎಸ್.ಎಲ್.ಚೆನ್ನಬಸವಣ್ಣ, ಕೇಂದ್ರ ಸರ್ಕಾರದ ಪ್ರತಿಷ್ಠಿತ ಸಂಸ್ಥೆಯಾದ ಸಾವಿತ್ರಿಭಾಯಿ ಫುಲೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಂಸ್ಥೆಯೊಡನೆ ಒಡಂಬಡಿಕೆೆ ವಿಶಿಷ್ಟವಾಗಿದೆ.

ಪ್ರಸ್ತುತ ಸಮಾಜದಲ್ಲಿ ಮಹಿಳೆಯರು ಮತ್ತು ಮಕ್ಕಳು ಎದುರಿಸುತ್ತಿರುವ ಸವಾಲುಗಳು, ಸಮಸ್ಯೆಗಳ ನಿರ್ವಹಣೆಯಲ್ಲಿ ಪೊಲೀಸ್ ಇಲಾಖೆಯ ಪಾತ್ರ, ಕಾನೂನುಗಳು ಹಾಗೂ ಸಂಬಂಧಪಟ್ಟ ಪ್ರಚಲಿತ ವಿದ್ಯಮಾನಗಳ ಕುರಿತು ಪೊಲೀಸ್ ಇಲಾಖೆಗೆ ಸೇರ್ಪಡೆಯಾಗುವ ಅಧಿಕಾರಿಗಳಿಗೆ ಹಾಗೂ ಕರ್ತವ್ಯನಿರತ ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ನೀಡಿ ಅವರನ್ನು ಸಂವೇದನಾಶೀಲರನ್ನಾಗಿ ಮಾಡಲು ಬಹಳ ಸಹಕಾರಿಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸಾವಿತ್ರಿಭಾಯಿ ಫುಲೆ ಸಂಸ್ಥೆಯ ಬೆಂಗಳೂರು ಪ್ರಾದೇಶಿಕ ಕೇಂದ್ರದ ನಿರ್ದೇಶಕ ಪಿ.ಜೆ.ಫಿಲಿಪ್ಸ್ ಮಾತನಾಡಿ, ಕರ್ನಾಟಕ ರಾಜ್ಯದಲ್ಲಿ ವರದಿಯಾಗುತ್ತಿರುವ ಮಹಿಳೆಯರ ಮತ್ತು ಮಕ್ಕಳ ದೌರ್ಜನ್ಯಗಳ ಸಂಖ್ಯೆಯನ್ನು ಗಣನೀಯವಾಗಿ ಕಡಿಮೆ ಮಾಡುವುದು, ರಾಜ್ಯವನ್ನು ದೌರ್ಜನ್ಯಮುಕ್ತ ಮಾಡುವಲ್ಲಿ ಪೊಲೀಸ್ ಇಲಾಖೆಯೊಂದಿಗೆ ಕೈ ಜೋಡಿಸುವುದು ಒಡಂಬಡಿಕೆಯ ಉದ್ದೇಶ ಎಂದರು.

ಸಂಸ್ಥೆ ಬೆಂಗಳೂರು ಪ್ರಾದೇಶಿಕ ಕೇಂದ್ರದ ಉಪ ನಿರ್ದೇಶಕ ಲೋಕೇಶ್, ಕೆಪಿಎ ಅಧಿಕಾರಿಗಳು, ಬೋಧಕರು ಹಾಜರಿದ್ದರು.
Mysore
ಹೊನ್ನಾರುತಿ ದೇಗುಲದ ತಂತಿಬೇಲಿ ಕಾರ್ಯ ಪೂರ್ಣ ಗೊಳಿಸಿದ ಗ್ರಾಮಸ್ಥರು
ತಿ.ನರಸೀಪುರ: ತಾಲೂಕಿನ ಹೆಗ್ಗೂರು ಗ್ರಾಮದ ಶ್ರೀ ಹೊನ್ನಾರುತಿ ಅಮ್ಮನವರ ದೇಗುಲದ ಸುತ್ತಲೂ ತಂತಿಬೇಲಿ ಅಳವಡಿಸುವ ಕಾರ್ಯವನ್ನು ಹೆಗ್ಗೂರು ಗ್ರಾಮದ ಸರ್ವಜನಾಂಗದ ಜನರು ಸೇರಿ ಪೂರ್ಣಗೊಳಿಸಿದರು.
ಹೆಗ್ಗೂರು ಗ್ರಾಮದ ಪ್ರಾಚೀನ ದೇವಾಲಯಗಳಲ್ಲಿ ಒಂದಾದ ಶ್ರೀ ಹೊನ್ನಾರುತಿ ದೇವಾಲಯಕ್ಕೆ ತಂತಿ ಬೇಲಿ ಅಳವಡಿಸುವ ಕುರಿತು ಗ್ರಾಮದ ಸರ್ವ ಜನಾಂಗದ ಜನರು ಹಲವು ಸಭೆ ಸೇರಿ ತಂತಿಬೇಲಿ ಅಳವಡಿಸಲು ಒಮ್ಮತದ ನಿರ್ಧಾರ ಮಾಡಿದ್ದರು.

ಮಾದಿಗ ಸಮುದಾಯಕ್ಕೆ ಸೇರಿದ ದೇಗುಲದ ಸುತ್ತಲೂ ಅನ್ಯಕೋಮಿನ ಕೆಲವು ವ್ಯಕ್ತಿಗಳು ಅತಿಕ್ರಮವಾಗಿ ಗುಡಿಸಲುಗಳನ್ನು ನಿರ್ಮಿಸಿಕೊಂಡು ದನಕರುಗಳನ್ನು ಕಟ್ಟಿಕೊಳ್ಳುತ್ತಿದ್ದ ಹಿನ್ನೆಲೆಯಲ್ಲಿ ಹೆಗ್ಗೂರು,ಕುಪ್ಯ, ಸಿದ್ದನಹುಂಡಿ,ಹೂವಿನಕೊಪ್ಪಲು, ತಲಕಾಡು ಮತ್ತು ಬೆಂಗಳೂರು ಸೇರಿದಂತೆ ಶ್ರೀ ಹೊನ್ನಾರುತಿ ದೇವರ ಒಕ್ಕಲಿನ ಹಲವು ಜನರ ಮನವಿ ಮೇರೆಗೆ ಗ್ರಾಮದ ಸರ್ವ ಜನಾಂಗದ ಜನರು ಸಭೆ ಸೇರಿ ದೇಗುಲಕ್ಕೆ ಭದ್ರತೆ ಒದಗಿಸಲು ತಂತಿ ಬೇಲಿ ಅಳವಡಿಸಿಕೊಳ್ಳುವಂತೆ ನಿರ್ಣಯಿಸಲಾಗಿತ್ತು.
ಹಾಗಾಗಿ ಕಳೆದ ಎರಡು ದಿನಗಳಿಂದ ಹೊನ್ನಾರುತಿ ದೇವರ ಒಕ್ಕಲಿನ ಜನರು ಮತ್ತು ಹೆಗ್ಗೂರು ಗ್ರಾಮದ ಜನರು ಸೇರಿಕೊಂಡು ದೇಗುಲಕ್ಕೆ ತಂತಿಬೇಲಿ ಹಾಕುವ ಕಾರ್ಯದಲ್ಲಿ ತೊಡಗಿಸಿಕೊಂಡರು. ಸತತ ಎರಡು ದಿನಗಳ ಕಾಲ ನಡೆದ ತಂತಿಬೇಲಿ ಅಳವಡಿಸುವ ಕಾರ್ಯದಲ್ಲಿ ವಯೋವೃದ್ಧರು, ಯುವಕರು ಶ್ರಮದಾನ ಮಾಡಿದರು.

ಇದೇ ವೇಳೆ ಶ್ರೀ ಹೊನ್ನಾರುತಿ ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷ ಸಿದ್ದನಹುಂಡಿ ಎನ್.ಮಲ್ಲಯ್ಯ ಮಾತನಾಡಿ, ಹಲವು ದಶಕಗಳ ಐತಿಹಾಸಿಕ ಹಿನ್ನಲೆಯುಳ್ಳ ದೇವಾಲಯದ ಜಾಗ ನಿರ್ಣಯಕ್ಕೆ ಹೆಗ್ಗೂರು ಗ್ರಾಮದಲ್ಲಿ ಸರ್ವ ಜನಾಂಗದ ಸಭೆಯನ್ನು ಹಲವು ಬಾರಿ ಕರೆಯಲಾಗಿತ್ತು. ಆದರೆ, ಇದೇ ಗ್ರಾಮದ ಕೆಲವು ವ್ಯಕ್ತಿಗಳು ತಮ್ಮ ಸ್ವಹಿತಾಸಕ್ತಿಗಾಗಿ ದೇವಾಲಯದ ಜಾಗ ನಿರ್ಣಯಕ್ಕೆ ತೊಂದರೆ ಕೊಡುತ್ತಾ ಬಂದಿದ್ದರು.
ಈಗ ಗ್ರಾಮದ ಎಲ್ಲ ಸಮುದಾಯದವರ ಸಹಕಾರದೊಂದಿಗೆ ಸೇರಿ ನಮ್ಮ ದೇವಾಲಯದ ಜಾಗಕ್ಕೆ ತಂತಿ ಬೇಲಿ ಅಳವಡಿಸಿಕೊಂಡಿದ್ದೇವೆ. ಈ ಕಾರ್ಯಕ್ಕೆ ಸಹಕಾರ ನೀಡಿದ ಎಲ್ಲ ಸಮುದಾಯದ ಜನರಿಗೆ ನಮ್ಮ ಸಮುದಾಯವು ಚಿರಋಣಿಯಾಗಿರುತ್ತದೆ ಎಂದು ಹೇಳಿದರು.
ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಕುಪ್ಯ ಶಂಭಯ್ಯ,ಪ್ರಧಾನ ಕಾರ್ಯದರ್ಶಿ ಬೆಂಗಳೂರಿನ ಕೆ.ವೆಂಕಟೇಶ್ ಕುಮಾರ್,ಉಪ ಕಾರ್ಯದರ್ಶಿ ಹೆಗ್ಗೂರು ರಾಮಕೃಷ್ಣ, ಹೆಗ್ಗೂರು ಕೆಂಪಯ್ಯ, ಹೂವಿನಕೊಪ್ಪಲು ಯಜಮಾನ ನಂಜುಂಡಯ್ಯ ಸೇರಿದಂತೆ ಹಲವು ಗ್ರಾಮದ ಮುಖಂಡರು, ಯುವಕರು ಮತ್ತು ಗ್ರಾಮಸ್ಥರು ಹಾಜರಿದ್ದರು.
Mysore
ಸಿಮ್ ದುರ್ಬಳಕೆ ನೆಪದಲ್ಲಿ 82 ಲಕ್ಷ ರೂ. ದೋಖಾ: ಸೈಬರ್ ಠಾಣೆಗೆ ದೂರು ನೀಡಿದ ವೈದ್ಯ
ಮೈಸೂರು: ನಿಮ್ಮ ಹೆಸರಿನಲ್ಲಿ ಮೊಬೈಲ್ ಫೋನ್ ಸಿಮ್ ದುರ್ಬಳಕೆ ಆಗಿದೆ ಎಂದು ಬೆದರಿಸಿ ವೈದ್ಯರೊಬ್ಬರಿಂದ ಬರೋಬ್ಬರಿ 82 ಲಕ್ಷ ರೂ. ಹಣ ಕಳೆದುಕೊಂಡಿದ್ದಾರೆ.
ಮೈಸೂರಿನ ವಿಜಯನಗರ 1ನೇ ಹಂತದ ನಿವಾಸಿ, ವೈದ್ಯ ಡಾ.ರಾಜೀವ್ ಹಣ ಕಳೆದುಕೊಂಡವರು.
ಆಗಿದ್ದೇನು?
ರಾಜೀವ್ ಅವರ ಮೊಬೈಲ್ ಫೋನ್‌ಗೆ ನವೆಂಬರ್. 1ರಂದು ಕರೆ ಮಾಡಿದ ಅಪರಿಚಿತ ವ್ಯಕ್ತಿ, ತನ್ನನ್ನು ಟೆಲಿಕಾಮ್ ರೆಗ್ಯುಲೇಟರಿ ಆಫ್ ಇಂಡಿಯಾದ ನೋಟಿಫೀಕೇಷನ್ ವಿಭಾಗದ ಸಾರ್ವಜನಿಕ ಸಂಪರ್ಕ ಅಧಿಕಾರಿ ಅಮಿತ್ ಶ್ಯಾಮ್ ಎಂದು ಪರಿಚಯ ಮಾಡಿಕೊಂಡಿದ್ದಾನೆ.

ನಿಮ್ಮ ಹೆಸರಿನಲ್ಲಿರುವ ಮೊಬೈಲ್ ಫೋನ್ ಸಿಮ್ ಕಾರ್ಡ್ವೊಂದು ಅಪರಾಧ ಕೃತ್ಯಗಳಿಗೆ ಬಳಕೆಯಾಗಿದೆ. ಈ ಬಗ್ಗೆ ಮಹಾರಾಷ್ಟçದ ಮುಂಬೈನಲ್ಲಿರುವ ಬಾಂದ್ರಾ ಪೊಲೀಸ್ ಠಾಣೆಗೆ ಸ್ಪಷ್ಟನೆ ನೀಡುವಂತೆ ಸೂಚಿಸಿದ್ದಾನೆ. ಆತನ ಮಾತು ನಂಬಿ ಡಾ.ರಾಜೀವ್ ವಿಡಿಯೋ ಕರೆ ಮಾಡಿದ್ದು, ಪೊಲೀಸ್ ಸಮವಸ್ತ್ರದಲ್ಲಿ ಕಾಣಿಸಿಕೊಂಡ ವ್ಯಕ್ತಿ ಮಾತನಾಡಿದ್ದಾನೆ.
ನಿಮ್ಮ ಮೊಬೈಲ್ ಸಂಖ್ಯೆಯಿಂದ ಅಶ್ಲೀಲ ವಿಡಿಯೋ, ಕಾನೂನುಬಾಹಿರ ಜಾಹೀರಾತು ಹಾಗೂ ಬೆದರಿಕೆ ಕರೆಗಳನ್ನು ಮಾಡಿ ಮುಂಬೈ ಸಾರ್ವಜನಿಕರಿಗೆ ತೊಂದರೆ ನೀಡಲಾಗಿದೆ. ನಿಮ್ಮ ಖಾತೆಯಿಂದ 2 ಕೋಟಿ ಹಣ ಚಲಾವಣೆ ಆಗಿದೆ. ಮನಿ ಲಾಂಡ್ರಿAಗ್ ಪ್ರಕರಣದಲ್ಲಿ ನಿಮ್ಮ ಹಾಗೂ ನಿಮ್ಮ ಪತ್ನಿಯನ್ನು ಅರೆಸ್ಟ್ ಮಾಡುವುದಾಗಿ ಬೆದರಿಸಿದ್ದಾನೆ.

ಆಸ್ತಿ ವಿವರಗಳ ಪರಿಶೀಲನೆ ನೆಪದಲ್ಲಿ ಬ್ಯಾಂಕ್ ಖಾತೆಗಳ ಮಾಹಿತಿ ಪಡೆದುಕೊಂಡು ಯೂನಿಯನ್ ಬ್ಯಾಂಕ್ ಖಾತೆಯಿಂದ 11.10 ಲಕ್ಷ ರೂ., ಆಕ್ಸಿಸ್ ಬ್ಯಾಂಕ್‌ನಿಂದ 33 ಲಕ್ಷ ರೂ., ಇಂಡಸ್‌ಇಂದ್ ಬ್ಯಾಂಕ್‌ನಿಂದ 38 ಲಕ್ಷ ರೂ. ಸೇರಿ ಹಂತ ಹಂತವಾಗಿ 82 ಲಕ್ಷ ರೂ. ಹಣ ಕಸಿದುಕೊಳ್ಳಲಾಗಿದೆ.
ಬೆದರಿಸಿ ಹಣ ವಸೂಲಿ ಮಾಡಿರುವ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಡಾ.ರಾಜೀವ್ ಅವರು ದೂರು ನೀಡಿದ್ದು, ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
-
Mysore22 hours agoಉದ್ಯಮಿ ಅಪಹರಿಸಿ ಕೋಟಿ ರೂ.ಗಳಿಗೆ ಡಿಮ್ಯಾಂಡ್: ನಾಲ್ವರ ಬಂಧನ
-
Mandya5 hours agoಡಿ 10 ಶ್ರೀರಂಗಪಟ್ಟಣ ಸೇರಿದಂತೆ ವಿವಿದೆಡೆ ವಿದ್ಯುತ್ ಕಡಿತ
-
Special20 hours agoಮಹಿಳೆಯರಿಗೆ ದೊಡ್ಡ ಅವಕಾಶ! ಅಂಗನವಾಡಿಯ 571 ಹುದ್ದೆಗಳಿಗೆ ಅರ್ಜಿ ಅಹ್ವಾನ.
-
Hassan1 hour agoಜಿಲ್ಲಾ ಮಟ್ಟದ ಅಂತರಶಾಲಾ ಚೆಸ್ ಸ್ಪರ್ಧೆ ಯಶಸ್ವಿ
-
Kodagu3 hours agoಸಂವಿಧಾನದ ರಕ್ಷಣೆ ನಮ್ಮೆಲ್ಲರ ಹೊಣೆ : ಗಾಯತ್ರಿ ನರಸಿಂಹ
-
Hassan24 hours agoHKS PUC ಕಾಲೇಜಿನಲ್ಲಿ ಜರುಗಿದ ರಾಜ್ಯಮಟ್ಟದ ಬಾಲ್ ಬ್ಯಾಡ್ಮಿಂಟನ್ ಕ್ರೀಡಾಕೂಟ ಸಮಾರೋಪ ಸಮಾರಂಭ
-
Mysore7 hours agoಡಾ.ಬಿ.ಆರ್. ಅಂಬೇಡ್ಕರ್ 69ನೇ ಮಹಾ ಪರಿನಿಬ್ಬಾಣ ದಿನ: ಸೇವಾ ಕಾರ್ಯದೊಂದಿಗೆ ಗೌರವ ನಮನ
-
Hassan36 minutes agoಎಂಸಿಇ ಕಾಲೇಜಿನ ಸಿವಿಲ್ ವಿಭಾಗದಲ್ಲಿ ಸ್ಪೋರ್ಟ್ಸ್ ವಿಜೇತರಿಗೆ ಸನ್ಮಾನ
