State
ದೇಶದಲ್ಲಿ ಕಾಂಗ್ರೆಸ್ ನೇತೃತ್ವದ ಇಂಡಿಯಾ ಮೈತ್ರಿಕೂಟ ಅಧಿಕಾರಕ್ಕೆ: ಡಿಸಿಎಂ ಡಿ.ಕೆ. ಶಿವಕುಮಾರ್
ಬೆಂಗಳೂರು : ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಇಂಡಿಯಾ ಮೈತ್ರಿಕೂಟ ಅಧಿಕಾರಕ್ಕೆ ಬರಲಿದೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ವಿಶ್ವಾಸ ವ್ಯಕ್ತಪಡಿಸಿದರು.
ಕೆಪಿಸಿಸಿ ಕಚೇರಿಯಲ್ಲಿ ನಡೆದ ಪಕ್ಷದ ಸಭೆ ಬಳಿಕ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಭಾನುವಾರ ಪ್ರತಿಕ್ರಿಯಿಸಿದರು.

ಬಿಜೆಪಿ ಅಧಿಕಾರಕ್ಕೆ ಬಂದರೆ ಮೋದಿ ಅವರ ಅವಧಿ ಕೇವಲ ಒಂದು ವರ್ಷ ಮಾತ್ರ ಎಂಬ ಕೇಜ್ರಿವಾಲ್ ಅವರ ಹೇಳಿಕೆಗೆ ಬಿಜೆಪಿ ಟೀಕೆ ಮಾಡಿರುವ ಬಗ್ಗೆ ಕೇಳಿದಾಗ ಅವರು ಉತ್ತರಿಸಿದ್ದು ಹೀಗೆ;
“ಈ ಬಾರಿ ಕಾಂಗ್ರೆಸ್ ನೇತೃತ್ವದ ಇಂಡಿಯಾ ಒಕ್ಕೂಟ ಅಧಿಕಾರಕ್ಕೆ ಬರಲಿದ್ದು, ಬಿಜೆಪಿಯವರು ಪ್ರಧಾನಿಯಾಗಲು ಸಾಧ್ಯವಿಲ್ಲ. ದೇಶದಲ್ಲಿ ಕಾಂಗ್ರೆಸ್ ಹಾಗು ಇಂಡಿಯಾ ಮೈತ್ರಿಕೂಟ ಆಡಳಿತ ಮಾಡಲಿದೆ ಎಂಬ ವಿಶ್ವಾಸ ನನ್ನದು” ಎಂದರು.
ಲೋಕಸಭೆ ಮಾದರಿಯಲ್ಲಿ ಪರಿಷತ್ ಚುನಾವಣೆ ಎದುರಿಸುತ್ತೇವೆ:
ಪರಿಷತ್ ಚುನಾವಣೆ ಪೂರ್ವಭಾವಿ ಸಭೆ ಬಗ್ಗೆ ಕೇಳಿದಾಗ, “ಶಿಕ್ಷಕರ ಹಾಗು ಪದವೀಧರ ಕ್ಷೇತ್ರಗಳ ಅಭ್ಯರ್ಥಿ ಆಯ್ಕೆ ವಿಚಾರವಾಗಿ ನಮ್ಮ ಪಕ್ಷದ ನಾಯಕರು ಹಾಗು ಪದಾಧಿಕಾರಿಗಳ ಜತೆ ಚರ್ಚೆ ಮಾಡಿದ್ದೇವೆ.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಿಂದ ಹಿಡಿದು ಎಲ್ಲಾ ಮುಖಂಡರು ಸೇರಿ ಈ ಚುನಾವಣೆ ಎದುರಿಸಬೇಕು. ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಬೇಕು ಎಂದು ನಿರ್ದೇಶನ ನೀಡಲಾಗಿದೆ. ಇನ್ನು ಪಕ್ಷದ ಅಭ್ಯರ್ಥಿಗಳಿಗೆ ಬಿ ಫಾರಂ ನೀಡಲಾಗಿದೆ” ಎಂದು ತಿಳಿಸಿದರು.
ಲೋಕಸಭೆ ಮಾದರಿಯಲ್ಲೇ ಚುನಾವಣೆ ಮಾಡುತ್ತೀರಾ ಎಂದು ಕೇಳಿದಾಗ, “ಹೌದು, ಲೋಕಸಭೆ ಚುನಾವಣೆ ಮಾದರಿಯಲ್ಲಿ ಈ ಚುನಾವಣೆ ಎದುರಿಸುತ್ತೇವೆ” ಎಂದರು.
ಪರಿಷತ್ ಚುನಾವಣೆಗೂ ಬಿಜೆಪಿ ಹಾಗು ಜೆಡಿಎಸ್ ಮೈತ್ರಿ ಬಗ್ಗೆ ಕೇಳಿದಾಗ, “ಅವರು ಶಾಶ್ವತವಾಗಿ ಮೈತ್ರಿ ಮಾಡಿಕೊಳ್ಳಲಿ. ಅದಕ್ಕೆ ನಮ್ಮ ಅಭ್ಯಂತರವಿಲ್ಲ. ಮೈತ್ರಿಯಾದರೂ ಮಾಡಿಕೊಳ್ಳಲಿ, ವಿಲೀನವಾದರೂ ಮಾಡಿಕೊಳ್ಳಲಿ. ಅದು ಅವರ ಪಕ್ಷಗಳ ತೀರ್ಮಾನ. ನಮಗೂ ಅದಕ್ಕೂ ಸಂಬಂಧವಿಲ್ಲ” ಎಂದು ತಿಳಿಸಿದರು.
Special
ಸ್ತ್ರೀ ಶಕ್ತಿ ಪ್ಯಾಕೇಜ್: ಮಹಿಳೆಯರಿಗೆ ಭದ್ರತೆಯಿಲ್ಲದೇ 10 ಲಕ್ಷದವರೆಗೆ ಸಾಲ!
ಮಹಿಳೆಯರನ್ನು ಸ್ವಾವಲಂಬಿಯನ್ನಾಗಿ ಮಾಡಲು ಭಾರತೀಯ ಸ್ಟೇಟ್ ಬ್ಯಾಂಕ್ (SBI) ಹೊಸ ‘ಸ್ತ್ರೀ ಶಕ್ತಿ ಪ್ಯಾಕೇಜ್’ ಆದ ಸಾಲದ ಯೋಜನೆಯನ್ನು ಮಹಿಳಾ ಉದ್ಯಮಶೀಲತೆಯನ್ನು ಪ್ರೋತ್ಸಾಹಿಸಲು ಜಾರಿ ಮಾಡಿದೆ. ಇದು ಮಹಿಳೆಯರನ್ನು ಆರ್ಥಿಕವಾಗಿ ಸ್ವಾವಲಂಬಿಯಾಗಿ ಮಾಡಿ, ಸ್ವಂತ ಉದ್ಯಮ ಆರಂಭಿಸಲು ಸಹಾಯಮಾಡುವುದಾಗಿದೆ.
ಸಾಲದ ಷರತ್ತುಗಳು:
* ಮಹಿಳೆಯರು ಕನಿಷ್ಟ 50 % ಪಾಲುದಾರಿಕೆ ಹೊಂದಿರಬೇಕು.
* ಸಾಲದ ಮೊತ್ತ ₹50,000 ರಿಂದ ₹25 ಲಕ್ಷದವರೆಗೆ ಇರಬಲ್ಲದು.
* ಕೆಲವು ಸಂದರ್ಭಗಳಲ್ಲಿ ಗರಿಷ್ಠ ₹50 ಲಕ್ಷವರೆಗೆ ಸಹ ವಿಸ್ತರಣೆ ಸಾಧ್ಯವಾಗಿದೆ.
* ₹10 ಲಕ್ಷವರೆಗೆ ಯಾವುದೇ ಭದ್ರತೆ ಅಗತ್ಯವಿಲ್ಲ — ಇದರಿಂದ ಆಸ್ತಿ ಇಲ್ಲದವರಿಗೂ ಸಾಲ ಸಿಗುವುದು ಸುಲಭ.
* 2 ಲಕ್ಷಕ್ಕಿಂತ ಹೆಚ್ಚು ಸಾಲಕ್ಕೆ ಬಡ್ಡಿ ದರದಲ್ಲಿ 0.5% ರಿಯಾಯಿತಿ ನೀಡಲಾಗುತ್ತದೆ.
•MSME ಅಡಿಯಲ್ಲಿ ನೋಂದಾಯಿತ ವ್ಯವಹಾರಗಳಾಗಿರಬೇಕು.

ಯಾರು ಅರ್ಹರು?
•ಚಿಲ್ಲರೆ ವ್ಯಾಪಾರಿಗರು, ಸಣ್ಣ ಕೈಗಾರಿಕೆ, ಸೇವಾ ವಲಯ, ಗೃಹ ಉತ್ಪಾದನೆ, ಹಾಲು ಉತ್ಪಾದನೆ ಮುಂತಾದ ಉದ್ಯಮಗಳು.
•ವೃತ್ತಿಪರ ಮಹಿಳೆಯರು (ಡಾಕ್ಟರ್, CA, ಆರ್ಕಿಟೆಕ್ಟ್, ಬ್ಯೂಟಿ ಪಾರ್ಲರ್ ಮುಂತಾದವರು) ಸಹ ಅರ್ಹತೆ ಹೊಂದಿದ್ದಾರೆ.
ಮುಖ್ಯ ಪ್ರಯೋಜನಗಳು:
* ಮಹಿಳಾ ಉದ್ಯಮಕ್ಕೆ ಬೇಕಾದ ಆರಂಭಿಕ ಬಂಡವಾಳಕ್ಕೆ ಹಣಕಾಸು ಪಡೆಯಬಹುದು.
* ಬಡ್ಡಿ ದರದಲ್ಲಿ ರಿಯಾಯಿತಿ ಮತ್ತು ಭದ್ರತೆ ರಹಿತ ಸಾಲ ಮಾರುಕಟ್ಟೆಯಲ್ಲಿ ಸಿಗುವುದು ವಿರಳ.
* ವ್ಯಾಪಾರ ವಿಸ್ತರಣೆ, ಕೈಗಾರಿಕೆ ಸಾಮಗ್ರಿ ಖರೀದಿಗೆ ಹಣ ಬಳಸಬಹುದು.

ಈ ಸ್ತ್ರೀ ಶಕ್ತಿ ಪ್ಯಾಕೇಜ್ ಯಾರು ಬಿಸಿನೆಸ್ ಪ್ರಾರಂಭಿಸಲು ಯೋಚಿಸುತ್ತಿದ್ದಾರೋ, ಅವರಿಗೆ ಹಣಕಾಸಿನ ಬೆಂಬಲವಾಗಿ ಅವರ ಕನಸುಗಳನ್ನು ನನಸು ಮಾಡಿಕೊಳ್ಳಲು ಉತ್ತಮ ಸಾಧನವಾಗಿದೆ. ಇದರ ಉಪಯೋಗವನ್ನು ಎಲ್ಲಾ ಮಹಿಳೆಯರು ಪಡೆಯಬೇಕು.
Special
ಪ್ರಧಾನ ಮಂತ್ರಿ ಸಣ್ಣ ಆಹಾರ ಸಂಸ್ಕರಣಾ ಉದ್ಯಮ (PMFME) – 15 ಲಕ್ಷ ರೂ. ಸಹಾಯಧನ
ಭಾರತ ಸರ್ಕಾರವು ಗ್ರಾಮೀಣ ಹಳ್ಳಿಗಳಲ್ಲಿ ಸ್ವತಂತ್ರ ಉದ್ದಿಮೆ ಸ್ಥಾಪಿಸಲು ಪ್ರಧಾನ ಮಂತ್ರಿ ಸಣ್ಣ ಆಹಾರ ಸಂಸ್ಕರಣಾ ಉದ್ಯಮಗಳ ನಿಯಮಬದ್ಧಗೊಳಿಸುವಿಕೆ (PMFME) ಯೋಜನೆಯನ್ನು ಜಾರಿಗೆ ತಂದಿದೆ.
ಯೋಜನೆಯ ಉದ್ದೇಶ:
ಇದರ ಪ್ರಮುಖ ಉದ್ದೇಶ ರೈತರು, ಮಹಿಳೆಯರು ಮತ್ತು ಯುವಕರಿಗೆ ಆಹಾರ ಪೂರೈಕೆಯಲ್ಲಿ ಸ್ವಯಂ ಉದ್ಯೋಗ ಸೃಷ್ಟಿಸಲು ಸಹಾಯ ಮಾಡುವುದು. ಈ ಯೋಜನೆಯಡಿ ಗರಿಷ್ಠ ₹15,00,000 ವರೆಗೆ ಸಹಾಯಧನ (ಸಬ್ಸಿಡಿ) ಲಭಿಸುತ್ತದೆ.
ಸಹಾಯಧನದ ಬಗ್ಗೆ ಮಾಹಿತಿ:
ಈ ಯೋಜನೆಯಡಿ ಒಟ್ಟು ₹15 ಲಕ್ಷದವರೆಗೆ ಸಹಾಯಧನ ದೊರೆಯುತ್ತದೆ. ಇದನ್ನು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಶೇ. 60:40 ದರದಲ್ಲಿ ಹಂಚಿಕೊಳ್ಳುತ್ತಿದ್ದು, ಕೇಂದ್ರದಿಂದ ₹6 ಲಕ್ಷ ಮತ್ತು ರಾಜ್ಯದಿಂದ ₹9 ಲಕ್ಷ ವರ್ಷಕ್ಕೆ ನೀಡಲಾಗುತ್ತದೆ.

ಯಾರು ಅರ್ಹರು?
ಸಹಾಯಧನ ಪಡೆಯಲು ಯಾವುದೇ ವಿಶೇಷ ವಿದ್ಯಾರ್ಹತೆ ಅಗತ್ಯವಿಲ್ಲ; 18 ವರ್ಷ ಮೇಲ್ಪಟ್ಟ ಯಾವುದೇ ಭಾರತೀಯ ನಾಗರಿಕರು ಅರ್ಜಿ ಸಲ್ಲಿಸಬಹುದು ಮತ್ತು ಬ್ಯಾಂಕ್ ಸಾಲ ಪಡೆದವರಿಗೂ ಅರ್ಜಿ ಸಲ್ಲಿಸಲು ಅವಕಾಶವಿದೆ.
ಅರ್ಜಿ ಸಲ್ಲಿಕೆಯನ್ನು ಅಧಿಕೃತ ಪೋರ್ಟ್‌ಲ್ ಮೂಲಕ ಆನ್‌ಲೈನ್‌ನಲ್ಲಿ ಮಾಡಬೇಕು.
ಯಾರು ಲಾಭ ಪಡೆಯಬಹುದು?
* ವೈಯಕ್ತಿಕ ಉದ್ಯಮಿಗಳು
* ರೈತರು ಹಾಗೂ ಯೂವಕರು
* ಮಹಿಳಾ ಉದ್ಯಮಿಗಳು
* ಸ್ವ ಸಹಾಯ ಸಂಘಗಳು (SHG)
* ರೈತ ಉತ್ಪಾದಕ ಸಂಘಗಳು (FPO)
ಯಾವ ಉದ್ಯಮಗಳಿಗೆ ಸಹಾಯಧನ?
ಸಹಾಯಧನಕ್ಕಾಗಿ ವಿವಿಧ ಬಗೆಯ ಆಹಾರ ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಬಹುದು.
* ಸಿರಿಧಾನ್ಯ (ಮಿಲೆಟ್ಸ್) ಸಂಸ್ಕರಣಾ ಘಟಕ
* ಬೆಲ್ಲ, ಸಕ್ಕರೆ ಹಾಗೂ ನಿಂಬೆ ಉತ್ಪನ್ನ ಘಟಕಗಳು
* ಬೇಕರಿ ಅಥವಾ ಮಸಾಲಾ ಘಟಕ
* ಎಣ್ಣೆ (ಕೋಲ್ಡ್-ಪ್ರೆಸ್) ಘಟಕ
* ಹಣ್ಣು ಮತ್ತು ತರಕಾರಿ ಸಂಸ್ಕರಣಾ ಘಟಕ
* ಕೋಳಿ, ಮೀನು ಮತ್ತು ಇತರ ಆಹಾರ ಘಟಕಗಳು.

ಯೋಜನೆಯ ಪ್ರಗತಿ:
ಕಳೆದ ಕೆಲವು ವರ್ಷಗಳಲ್ಲಿ ಈ ಯೋಜನೆ ಮೂಲಕ ಸಾವಿರಾರು ಆಹಾರ ಸಂಸ್ಕರಣಾ ಘಟಕಗಳು ಸ್ಥಾಪನೆಯಾಗಿವೆ. ಉದಾ., ಸಿರಿಧಾನ್ಯ, ಎಣ್ಣೆ, ಬೆಲ್ಲ ಮತ್ತು ಮಸಾಲಾ ಘಟಕಗಳು ದೇಶಾದ್ಯಂತ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿವೆ.
ಈ ಯೋಜನೆ ಗ್ರಾಮೀಣ ಭಾರತೀಯರಿಗೆ ಉದ್ಯಮ ಸ್ಥಾಪನೆಯಲ್ಲಿ ಬೃಹತ್ ಅವಕಾಶ ಒದಗಿಸುತ್ತದೆ ಮತ್ತು ಕಳೆದ ವರ್ಷಕ್ಕಿಂತ ಹೆಚ್ಚು ಹೊಸ ಅರ್ಜಿಗಳನ್ನು ಸ್ವೀಕರಿಸಲು ಮುಂದುವರಿಸಿದೆ. ರೈತರು, ಮಹಿಳೆಯರು ಮತ್ತು ಯುವಕರು ತಮ್ಮ ಹಳ್ಳಿಯಲ್ಲೇ ಸ್ವಂತ ಆಹಾರ ಸಂಸ್ಕರಣಾ ಉದ್ಯಮ ಆರಂಭಿಸಲು ಈ ಯೋಜನೆಯ ಸದುಪಯೋಗಪಡಿಸಿಕೊಳ್ಳಬೇಕು.
State
ಬೆಸ್ಕಾಂನಲ್ಲಿ 520 ಹುದ್ದೆಗಳಿಗೆ ನೇರ ನೇಮಕಾತಿ!
ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್ (BESCOM) ತನ್ನ 2025–26ನೇ ಸಾಲಿನ ಅಪ್ರೆಂಟೀಸ್‌ಶಿಪ್ ನೇಮಕಾತಿಗೆ ಅಧಿಕೃತ ಅಧಿಸೂಚನೆ ಬಿಡುಗಡೆ ಮಾಡಿದೆ. ಈ ನೇಮಕಾತಿಯಲ್ಲಿ ಒಟ್ಟು 520 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ಪ್ರಮುಖ ದಿನಾಂಕಗಳು
* ಅಧಿಸೂಚನೆ ಪ್ರಕಟಣೆ: 06 ಫೆಬ್ರವರಿ 2026
* ಆನ್‌ಲೈನ್ ಅರ್ಜಿ ಆರಂಭ: 12 ಫೆಬ್ರವರಿ 2026
* ಕೊನೆಯ ದಿನಾಂಕ: 02 ಮಾರ್ಚ್ 2026
ಹುದ್ದೆಗಳ ವಿವರ:
•ಹುದ್ದೆ ಶ್ರೇಣಿ: ಎಂಜಿನಿಯರಿಂಗ್ ಗ್ರಾಜುಯೇಟ್ (E&E)
* ಹುದ್ದೆಗಳ ಸಂಖ್ಯೆ: 130
* ಬೇರೆ ಎಂಜಿನಿಯರಿಂಗ್ ಹಾಗೂ ಸಾಮಾನ್ಯ ಪದವಿ ಗ್ರಾಜುಯೇಟ್: 315
* ಡಿಪ್ಲೊಮಾ ಹೋಲ್ಡರ್ಸ್: 75
* ಒಟ್ಟು ಹುದ್ದೆಗಳು: 520
ಅರ್ಹತಾ ಮಾನದಂಡ
* ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಕನಿಷ್ಠ 18 ವರ್ಷ ವಯಸ್ಸಿನವರಾಗಿರಬೇಕು.
* ಅಭ್ಯರ್ಥಿಗಳು 2021 ನಂತರ ಶಿಕ್ಷಣ ಪೂರ್ಣಗೊಳಿಸಿರುವವರಾಗಿರಬೇಕು.
ಸ್ಟೈಪೆಂಡ್:
ಗ್ರಾಜುಯೇಟ್ ಅಪ್ರೆಂಟಿಸ್‌ಗಳಿಗೆ ₹9,000/-
ಡಿಪ್ಲೊಮಾ ಅಪ್ರೆಂಟಿಸ್‌ಗಳಿಗೆ ₹8,000/-
(ಪ್ರತಿ ತಿಂಗಳಿಗೆ)
ಆಯ್ಕೆ ಮಾಪನ:
ಯಾವುದೇ ಲಿಖಿತ ಪರೀಕ್ಷೆ ಇಲ್ಲ; ಆಯ್ಕೆ ಮೆರಿಟ್ ಆಧಾರಿತ, ಅಂದರೆ ಪದವಿ/ಡಿಪ್ಲೊಮಾ ಅಂಕಗಳನ್ನು ಆಧರಿಸಿ.
ಆಯ್ಕೆಯಾಗಿದ್ದವರಿಗೆ ದಾಖಲೆ ಪರಿಶೀಲನೆ ನಡೆಯುತ್ತದೆ.
ಅರ್ಜಿ ಸಲ್ಲಿಸುವ ವಿಧಾನ
* ಆಸಕ್ತ ಅಭ್ಯರ್ಥಿಗಳು BESCOM ಅಧಿಕೃತ ವೆಬ್‌ಸೈಟ್ ಮೂಲಕ ಆನ್‌ಲೈನ್ ಅರ್ಜಿಯನ್ನು ಭರ್ತಿ ಮಾಡಬೇಕು. ಅರ್ಜಿಯಲ್ಲಿ ನಿಮ್ಮ ವಿದ್ಯಾರ್ಹತೆ, ಗುರುತಿನ ದಾಖಲೆಗಳು, ಫೋಟೋ ಮತ್ತು ಸಹಿ ದಾಖಲೆಗಳನ್ನು ಸರಿಯಾಗಿ ಅಪ್‌ಲೋಡ್ ಮಾಡಬೇಕು.
•ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.
ಉದ್ಯೋಗಕ್ಕಾಗಿ ಹಾತೊರೆಯುತ್ತಿರುವ ಯುವಕರಿಗೆ ಈ ನೇಮಕಾತಿ ಅದ್ಭುತ ಅವಕಾಶವಾಗಿದ್ದು, ಯಾವುದೇ ಪರೀಕ್ಷೆ ಇಲ್ಲದೆ ನೇರ ನೇಮಕಾತಿ ಮೂಲಕ ಕೆಲಸವನ್ನು ಪಡೆಯುವ ಸುವರ್ಣಾವಕಾಶ ಇದಾಗಿದೆ.
-
Mandya12 hours agoಕೆರೆ ಒತ್ತುವರಿ ತೆರವುಗೊಳಿಸದಿದ್ದರೆ ಶಿಸ್ತು ಕ್ರಮ: ಸಮಯ ನಿಗದಿಗೊಳಿಸಿ ಸೂಚನೆ ನೀಡಿದ ಡಿಸಿ ಡಾ.ಕುಮಾರ
-
Mandya13 hours agoಬೂದನೂರು ಗ್ರಾಮ ಪಂಚಾಯತಿಗೆ ನೇಮಕವಾಗಿರುವ ಆಡಳಿತಾಧಿಕಾರಿಗೆ ಗ್ರಾಮಸ್ಥರಿಂದ ಭವ್ಯ ಸ್ವಾಗತ
-
Hassan14 hours agoಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರ ಎಚ್ಡಿಕೆ ಅಭಿಮಾನಿಗಳಿರುವ ಕ್ಷೇತ್ರ: ನಿಖಿಲ್ ಕುಮಾರಸ್ವಾಮಿ
-
Chamarajanagar20 hours agoಚಿರತೆ ದಾಳಿ: ಹಸು ಬಲಿ ಗ್ರಾಮಸ್ಥರಲ್ಲಿ ಆತಂಕ
-
Mysore18 hours agoಹಣ್ಣುಗಳ ಮಹತ್ವ, ಪೌಷ್ಟಿಕಾಂಶದ ಬಗ್ಗೆ ಅರಿವು ಮೂಡಿಸಿದ ರವಿ ಮಹದೇವ್
-
Mandya12 hours agoಜಿಲ್ಲೆಯ ಜನರಿಗೆ ಶುದ್ಧ ಕುಡಿಯುವ ನೀರು ಪೂರೈಸಿ : ಮನೋಜ್ ಕುಮಾರ್ ಮೀನಾ
-
Special7 hours agoಸ್ತ್ರೀ ಶಕ್ತಿ ಪ್ಯಾಕೇಜ್: ಮಹಿಳೆಯರಿಗೆ ಭದ್ರತೆಯಿಲ್ಲದೇ 10 ಲಕ್ಷದವರೆಗೆ ಸಾಲ!
-
Mandya10 hours agoಫೆ.13 ರಿಂದ 19 ರವರೆಗೆ ಪ್ರಜಾಪಿತ ಬ್ರಹ್ಮ ಕುಮಾರೀಸ್ ಈಶ್ವರೀಯ ವಿಶ್ವ ವಿದ್ಯಾಲಯದ ವತಿಯಿಂದ 90ನೇ ಮಹಾಶಿವರಾತ್ರಿ ಮಹೋತ್ಸವ
