Connect with us

Crime

ಬಿಹಾರ : ಮದುವೆ ಮನೆಯಲ್ಲಿ ಪತ್ನಿ ಡಾನ್ಸ್‌ | ಬೇಸರಗೊಂಡು ಪತಿ ಆತ್ಮಹತ್ಯೆ

Published

on

ಬಾವನ ಮದುವೆಯಲ್ಲಿ ಪತ್ನಿ ಡಾನ್ಸ್‌ ಮಾಡಿದಳೆಂದು ಬೇಸರಗೊಂಡ ಪತಿ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬಿಹಾರದ ಬದಾರಿಯಾದಲ್ಲಿ ನಡೆದಿದೆ.
ಬಹುಲಾ ಗ್ರಾಮದ ನಿವಾಸಿ 35 ವರ್ಷದ ಗೋಪಾಲ್‌ ಸಿಂಗ್‌, ರಸೂಲ್‌ಪುರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಬರುವ ಮಹೇಂದ್ರ ನಾಥ್‌ ಹಾಲ್ಟರ್‌ ರೈಲು ನಿಲ್ದಾಣದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಗೋಪಾಲ್‌ ಸಿಂಗ್‌ ಬೇನತ್‌ ಗ್ರಾಮದಲ್ಲಿ ತನ್ನ ಪತ್ನಿಯ ಸಹೋದರನ ಮದುವೆ ಸಮಾರಂಭಕ್ಕೆ ಹೋಗಿದ್ದರು. ಈ ವೇಳೆ ಸಂಭ್ರಮದಲ್ಲಿ ಡಾನ್ಸ್‌ ಮಾಡುತ್ತಿದ್ದ ಪತ್ನಿಯನ್ನು ನೋಡಿ ಅಸಮಾಧಾನಗೊಂಡು ಗೋಪಾಲ್‌ ಆಕೆಯನ್ನು ತಡೆದಿದ್ದಾನೆ.
ಕುಟುಂಬಸ್ಥರ ಮಾಹಿತಿ ಪ್ರಕಾರ ಗೋಪಾಲ್‌ ಡಾನ್ಸ್‌ ಮಾಡುತ್ತಿದ್ದ ತನ್ನ ಪತ್ನಿಯನ್ನು ಸುಮ್ಮನಿರುವಂತೆ ಸೂಚಿಸಿದ್ದನು. ಆದರೆ ಆಕೆ ಮಾತ್ರ ಆತನ ಮಾತಿಗೆ ಒಪ್ಪಲಿಲ್ಲ. ಈ ವೇಳೆ ಇಬ್ಬರ ನಡುವೆ ಸಣ್ಣ ಜಗಳ ನಡೆದಿದೆ.
ಆಗ ಬಾವ-ಬಾಮೈದರ ನಡುವೆ ಮಾತಿಗೆ ಮಾತು ಬೆಳೆದು ಜಗಳ ತಾರಕಕ್ಕೇರಿತ್ತು. ಇದರಿಂದ ತೀರ ಬೇಸರಗೊಂಡಿದ್ದ ಗೋಪಾಲ್‌, ರೈಲು ಬರುತ್ತಿದ್ದ ಸಮಯ ನೋಡಿಕೊಂಡು ಹಳಿಗೆ ಹಾರಿಗೆ ಪ್ರಾಣ ಬಿಟ್ಟಿದ್ದಾನೆ. ಪ್ರಕರಣ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿದೆ.

Continue Reading
Click to comment

Leave a Reply

Your email address will not be published. Required fields are marked *

Crime

ಅನೈತಿಕ ಸಂಬಂಧಕ್ಕೆ ಅಡ್ಡಿ – ಸೈನೆಡ್ ನೀಡಿ ಕೊ*ಲೆ ಮಾಡಿದ ಇಬ್ಬರಿಗೆ ಜೀವಾವಧಿ ಶಿಕ್ಷೆ

Published

on

ಮಡಿಕೇರಿ : ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತಿಯನ್ನು ಪ್ರಿಯಕರನೊಂದಿಗೆ ಸೇರಿ ಸೈನೆಡ್ ನೀಡಿ ಹತ್ಯೆಗೈದ ಮಹಿಳೆ ಹಾಗೂ ಆಕೆಯ ಪ್ರಿಯಕರನಿಗೆ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.
ಸೋಮವಾರಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಸೋಮವಾರಪೇಟೆ ನಿವಾಸಿ ಬಿ.ಡಿ. ಮುರಳಿ ಮತ್ತು ತಣ್ಣೀರುಹಳ್ಳ ಗ್ರಾಮದ ರಾಧ ಎಂಬಾಕೆಯ ನಡುವೆ ಅನೈತಿಕ ಸಂಬಂಧವಿತ್ತು. ಇವರ ಅನೈತಿಕ ಸಂಬಂಧಕ್ಕೆ ರಾಧಳ ಪತಿ ಸುರೇಶ ಎಂಬವರು ಅಡ್ಡಿಯಾಗಿದ್ದರಿಂದ ಅವರನ್ನು ಕೊಲೆ ಮಾಡಲು ರಾಧ ಮತ್ತು ಮುರಳಿ ಸಂಚು ರೂಪಿಸಿದ್ದರು. ಅದರಂತೆ ಮಂಗಳೂರಿನಲ್ಲಿ ಮೆಡಿಕಲ್ ರೆಪ್ ಆಗಿ ಕೆಲಸ ಮಾಡಿಕೊಂಡು, ಭೋಗ್ಯಕ್ಕೆ ಮನೆ ಮಾಡಿ ತಾತ್ಕಾಲಿಕ ವಾಸವಿದ್ದ ಮುರಳಿ ತಾ. ೧೭.೭.೨೦೧೯ ರಂದು ಮಹಾರಾಷ್ಟçದ ಸೊಲ್ಲಾಪುರದ ಮಲ್ಲಿಕಾರ್ಜುನ್ ಮೊಟಗಿ ಎಂಬವರೊಂದಿಗೆ ವಾಟ್ಸಾಪ್ ಮೂಲಕ ಪೊಟಾಷಿಯಂ ಸೈನೆಡ್ ಬಗ್ಗೆ ಚಾಟಿಂಗ್ ಮಾಡಿ ಅವರಿಂದ ೫೦೦ ಗ್ರಾಂ ಪೊಟಾಷಿಯಂ ಸೈನೆಡನ್ನು ಸೊಲ್ಲಾಪುರದಿಂದ ತನ್ನ ವಿಳಾಸಕ್ಕೆ ಕೊರಿಯರ್ ಮಾಡಿಸಿಕೊಂಡು

ಬಳಿಕ ಹೂ, ಕುಂಕುಮ ಖರೀದಿಸಿ ತಾನು ತರಿಸಿದ್ದ ಪೊಟಾಷಿಯಂ ಸೈನೆಡ್‌ನಲ್ಲಿ ಸ್ವಲ್ಪವನ್ನು ತೆಗೆದು ನೀರಿನಲ್ಲಿ ಹಾಕಿ ಮಿಶ್ರಣ ಮಾಡಿ, ಅದರೊಂದಿಗೆ ಹೂ, ಕುಂಕುಮ ಇಟ್ಟು ಅದರೊಂದಿಗೆ ಒಂದು ಪತ್ರವನ್ನು ಇಟ್ಟು ಅದರಲ್ಲಿ ಇದು ದೇವರ ಪ್ರಸಾದ ಮನೆಯ ಯಜಮಾನ ಮಾತ್ರ ಕುಡಿಯಬೇಕು ಎಂದು ಬರೆದು ಪ್ಯಾಕ್ ಮಾಡಿ ರಾಧಳ ಗಂಡ ಸುರೇಶ ಕೆಲಸ ಮಾಡುತ್ತಿದ್ದ ಸೋಮವಾರಪೇಟೆ ಪಟ್ಟಣದ ಹೊಟೇಲ್‌ಗೆ ಕೊರಿಯರ್ ಮಾಡಿದ್ದ. ಅದನ್ನು ರಾಧ ತಾ. ೪.೮.೨೦೧೯ ರಂದು ಸಂಜೆ ೬ ಗಂಟೆಗೆ ತನ್ನ ವಾಸದ ಮನೆಯಲ್ಲಿ ತನ್ನ ಗಂಡ ಸುರೇಶ ಬೇಡ ಎಂದರೂ ಕೂಡ ಬಿಡದೆ ದೇವರ ಪ್ರಸಾದ ಬೇಡ ಎನ್ನಬಾರದು ಎಂದು ಒತ್ತಾಯಪೂರ್ವಕವಾಗಿ ಪೊಟಾಷಿಯಂ ಸೈನೆಡ್ ಮಿಶ್ರಿತ ನೀರನ್ನು ಸುರೇಶ್‌ಗೆ ಕುಡಿಸಿ ಸುರೇಶನನ್ನು ಕೊಲೆ ಮಾಡಿ, ಉಳಿದಿದ್ದ ಸೈನೆಡ್ ಮಿಶ್ರಿತ ನೀರು ಹಾಗೂ ಪ್ಲಾಸ್ಟಿಕ್ ಡಬ್ಬವನ್ನು ಮನೆಯ ಹಿಂಬದಿ ನೀರಿನ ಒಲೆಗೆ ಹಾಕಿ ಸುಟ್ಟು ಹಾಕಿದ್ದಳು.
ಈ ಬಗ್ಗೆ ಪಿ.ಎಸ್.ಐ. ಶಿವಶಂಕರ್ ಪ್ರಕರಣ ದಾಖಲಿಸಿ ಮುರಳಿ ಹಾಗೂ ರಾಧ ವಿರುದ್ಧ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ನಡೆದು ಮುರಳಿ ಹಾಗೂ ರಾಧ ಸಂಚು ರೂಪಿಸಿ ಸೈನೆಡ್ ನೀಡಿ ಸುರೇಶನನ್ನು ಕೊಲೆ ಮಾಡಿ, ಸಾಕ್ಷ್ಯ ನಾಶಪಡಿಸಿದ ಆರೋಪ ಸಾಬೀತಾದ ಮೇರೆಗೆ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರಾದ ಹೊಸಮನಿ ಪುಂಡಲಿಕ್ ಅವರು, ಮುರಳಿ ಹಾಗೂ ರಾಧಗೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ಈ ಪ್ರಕರಣದಲ್ಲಿ ಸರಕಾರಿ ಅಭಿಯೋಜಕರಾದ ಕೆ.ಜಿ. ಅಶ್ವಿನಿ ವಾದ ಮಂಡಿಸಿದ್ದರು.

Continue Reading

Crime

ಬೋಟಿಕ್ ತರಬೇತಿ ನೆಪದಲ್ಲಿ 12 ಲಕ್ಷ ರೂ. ವಂಚನೆ

Published

on

ಮೈಸೂರು: ಡಿಸೈನಿಂಗ್ ಬೋಟಿಕ್ ತರಬೇತಿ ನೀಡಿ ವಿದೇಶಗಳ ಸರ್ಟಿಫಿಕೇಟ್ ನೀಡುವುದಾಗಿ ನಂಬಿಸಿ 12 ಲಕ್ಷ ರೂ. ವಂಚನೆ ಮಾಡಲಾಗಿದೆ.

ದೇವಾಂಶ್ ಬೋಟಿಕ್ ಮತ್ತು ರೆಂಟಲ್ ಸಂಸ್ಥೆಯ ಮಾಲೀಕರಾದ ಸುನಂದ ಮಾಲಾ ಹಾಗೂ ಬಾಲಬೊಮ್ಮ ಆರೋಪಿಗಳು‌.

ನವ್ಯ, ಜ್ಯೋತಿ, ರಕ್ಷಿತಾ, ಶ್ಯಾಮಲಾ, ಶೃತಿ, ಮಲ್ಲೇಶ್ವರಿ, ಉಷಾ ಸೇರಿದಂತೆ 8 ಮಂದಿ ವಂಚನೆಗೆ ಒಳಗಾಗಿದ್ದಾರೆ.

ಇವರಿಂದ ಆರೋಪಿಗಳು ಡಿಸೈನಿಂಗ್ ಬೋಟಿಕ್ ತರಬೇತಿ ನೀಡುವುದಾಗಿ ನಂಬಿಸಿ ತಲಾ 1 ಲಕ್ಷ ರೂ. ಹಣ ಪಡೆದು ಬಿಲ್ ನೀಡಿಲ್ಲ. ನಂತರ ಬಟ್ಟೆಗಳಿಗೆ ಎಂದು 60 ಸಾವಿರ ಪಡೆದು ತಾವುದೇ ತರಬೇತಿ ನೀಡದೆ ವಂಚಿಸಿದ್ದಾರೆಂದು ಆರೋಪಿಸಿದ್ದಾರೆ. ಅಲ್ಲದೆ 180 ದೇಶದ ಸರ್ಟಿಫಿಕೇಟ್ ಕೊಡುವುದಾಗಿ ಸಹ ನಂಬಿಸಿ ಮೋಸ ಮಾಡಿದ್ದಾರೆ.

ಈ ಸಂಬಂಧ ಕುವೆಂಪುನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Continue Reading

Crime

 ನನ್ನನ್ನೇ ಲವ್ ಮಾಡು ಚಿನ್ನ, ಇಲ್ಲಾಂದ್ರೆ ಇಡ್ತೀನಿ ಗುನ್ನ – ಇನ್ಸ್ಪೆಕ್ಟರ್ ಗೆ ಕಾಂಗ್ರೆಸ್ ಕಾರ್ಯಕರ್ತೆಯ ಚಿತ್ರಹಿಂಸೆ!

Published

on

ಬೆಂಗಳೂರು : ಕಾಂಗ್ರೆಸ್ ಕಾರ್ಯಕರ್ತೆಯೊಬ್ಬಳು ಇನ್ಸ್‌ಪೆಕ್ಟರ್ ಒಬ್ಬರ ಹಿಂದೆ ಬಿದ್ದು
ತನ್ನನ್ನೇ ಪ್ರೀತಿಸುವಂತೆ ಚಿತ್ರಹಿಂಸೆ ನೀಡಿ, ಆತ್ಮಹತ್ಯೆ ಬೆದರಿಕೆಯನ್ನೂ ಹಾಕಿರುವ ಘಟನೆ  ಬೆಂಗಳೂರಿನಲ್ಲಿ ನಡೆದಿದೆ, ರಾಮಮೂರ್ತಿ ನಗರ ಪೊಲೀಸ್‌ ಠಾಣೆಯ ಇನ್ಸ್‌ಪೆಕ್ಟ್‌‌ ಸತೀಶ್ ಕಿರುಕುಳಕೊಳಗಾದ ನೊಂದ ಪುರುಷರಾಗಿದ್ದು, ಅವರಿಗೆ ಚಿತ್ರ ಹಿಂಸೆ ನೀಡಿದ ಆರೋಪದ ಮೇಲೆ ಸಂಜನಾ ಅಲಿಯಾಸ್ ವನಜಾ ವಿರುದ್ಧ ದೂರು ದಾಖಲಾಗಿದೆ. ನನ್ನ ಲವ್ ಮಾಡಬೇಕು ಇಲ್ಲ, ಅಂದರೆ ಆತ್ಮಹತ್ಯೆ ಮಾಡ್ಕೊತಿನಿ ಅಂತ ಕಿರುಕುಳ ನೀಡುತ್ತಿದ ಸಂಜನಾ ಪ್ರತಿದಿನ ವಿವಿಧ ಫೋನ್ ನಂಬರ್ ಗಳಿಂದ ಇನ್ಸ್‌ ಪೆಕ್ಟರ್ ಗೆ ಮಸೇಜ್
ಮಾಡುತ್ತಿದ್ದಳು, ಈಕೆಯ ಮೆಸೇಜ್ ನಿಂದ ಬೇಸತ್ತಿದ್ದ ಇನ್ಸ್‌ಕ್ಷ್ಯರ್‌ ಸತೀಶ್, ಸಂಜನಾ ಕರೆ ಮಾಡಲು ಬಳಸಿದ್ದ ಸುಮಾರು 11 ಫೋನ್ ನಂಬರ್ ಬಾಕ್ ಮಾಡಿದ್ದರು, ಮೊಬೈಲ್ ನಂಬರ್ ಬ್ಲ್ಯಾಕ್ ಮಾಡಿದ್ದರೆ, ಠಾಣೆಗೆ ಬಂದಿದ್ದ ವನಜಾ ಲವ್ ಲೆಟರ್ ನೀಡಿ, ಪ್ರೀತಿಸದಿದ್ರೆ ಆತ್ಮಹತ್ಯೆ ಮಾಡ್ಕೊಂಡು ಸಾಯ್ತಿನಿ ಎಂದು ಬೆದರಿಕೆಯನೊಡಿದ್ದಳು,
ನಾನು ಕಾಂಗ್ರೆಸ್ ಕಾರ್ಯಕರ್ತನನಗೆ ಸಿಎಂ ಡಿಸಿಎಂ ಗೊತ್ತು ಎಂದು ಧಮಿ ಹಾಕಿದ ವನಜಾ, ಅಷ್ಟೂ ಸಾಲದೆಂಬಂತೆ ಮೋಟಮ್ಮ, ಲಕ್ಷ್ಮಿ ಹೆಬ್ಬಾರ್ ಜೊತೆಗಿನ ಫೋಟೊ ಕಳಿಸಿ
ಪ್ರೀತಿಸುವಂತೆ ದುಂಬಾಲು ಬಿದ್ದಿದ್ದಳು, ಈಕೆಯ ಪ್ರಭಾವದಿಂದ ಗೃಹ ಸಚಿವರ
ಕಚೇರಿಯಿಂದಲೂ ಮಹಿಳೆ ದೂರು ತೆಗೆದುಕೊಳ್ಳುವಂತೆ ಕರೆ ಬಂದಿತ್ತು. ಆದರೆ ಅವರು
ಯಾವುದೇ ದೂರು ಕೊಟ್ಟಿಲ್ಲ ಎಂದು ಸತೀಶ್ ಉತ್ತರಿಸಿದ್ದರು.
ಇನ್ಸ್‌ಕ‌ ಇಲ್ಲದಾಗ ಕಜ್ಜಾಯದ ಡಬ್ಬಿ ಬೊಕ್ಕೆ ತಂದು ಠಾಣೆಯಲ್ಲಿಟ್ಟಿದ, ವನಜಾ, ಲವ್ ಲೆಟರ್ ನೊಂದಿಗೆ Nexito plus ಎಂಬ ಮಾತ್ರೆಯನ್ನು ಸಹ ಇಟ್ಟಿದ್ದಳು, ನನ್ನ ಪ್ರೀತಿಯನ್ನು ನೀವು ಒಪ್ಪಲ ನಿಮಗೆ ತೊಂದರೆ ಕೊಡಲು ಇಷ್ಟ ಇಲ್ಲ, ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ,ನನ್ನ ಸಾವಿಗೆ ನೀವೆ ಕಾರಣ ಎಂದು ಬರೆದು ಜೊತೆಗೆ ಹಾರ್ಟ್ ಚಿತ್ರ
ಬರೆದು Chinni love u,u love me ಎಂದು ರಕ್ತದಲ್ಲಿ, ಪತ್ರ ಬರೆದಿದ್ದಳು,
ಈಕೆಯ ಕಾಟ ತಡೆಯಲಾರದೆ ಕೊನೆಗೆ ಪೊಲೀಸ್ ಇನ್ಸ್‌ಪೆಕ್ಟರ್ ಸತೀಶ್ , ಸ್ವತಃ ಪೊಲೀಸ್
ಠಾಣೆಯಲ್ಲಿ, ದೂರು ದಾಖಲಿಸಿದ್ದರು, ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆ ಮತ್ತು ಕರ್ತವ್ಯ ಅಡ್ಡಿ ಮಾಡಿದ ಆರೋಪದ ಮೇಲೆ ರಾಮಮೂರ್ತಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Continue Reading

Trending

error: Content is protected !!