Connect with us

Cinema

ಮನೆಯ ಅಂಗಳದಲ್ಲಿ ಗಾಂಜಾ ಬೆಳೆದ ಆರೋಪಿ ಬಂಧನ

Published

on

ವಿರಾಜಪೇಟೆ : ಗಾಂಜಾ ವ್ಯಸನಿಯಾಗಿ, ಮನೆಯ ಅಂಗಳದಲ್ಲಿ ಗಾಂಜ ಗಿಡಗಳನ್ನು ಬೆಳೆದು ಪೊಲೀಸರ ಅತಿಥಿಯಾಗಿರುವ ಘಟನೆ ವಿರಾಜಪೇಟೆ ಗ್ರಾಮಾಂತರ ಪ್ರದೇಶವಾದ ಕಂಡAಗಾಲ ಗ್ರಾಮದಲ್ಲಿ ನಡೆದಿದೆ.

ವಿರಾಜಪೇಟೆ ತಾಲೂಕು ಬಿಟ್ಟಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿ.ಬಾಡಗ ಗ್ರಾಮ ಕಂಡAಗಾಲ ನಿವಾಸಿ ನಂಬುಡುಮಾಡ ವಿಜಯ್ ಭಿಮಯ್ಯ ಅಲಿಯಾಸ್ (ಚಿಂಡ) (39) ಮನೆಯ ಅಂಗಳದಲ್ಲಿ ಗಾಂಜಾ ಬೆಳೆದು ಬಂಧಿತನಾದ ವ್ಯಕ್ತಿ.

ವಿಜಯ್ ಮನೆಯ ಅಂಗಳದಲ್ಲಿ ಹೂವಿನ ಗಿಡದ ಕುಂಡಗಳಲ್ಲಿ ಹೂಗಿಡಗಳ ಮಧ್ಯೆ ಯಾರಿಗೂ ಸಂಶಯ ಬಾರದಂತೆ ಗಾಂಜಾ ಗಿಡಗಳನ್ನು ಬೆಳೆಸಿದ್ದಾನೆ. ಇತನ ಮೇಲೆ ಪೊಲೀಸರಿಗೆ ಮೊದಲೇ ಗುಮಾನಿ ಇದ್ದಿತ್ತು. ಮಾಹಿತಿದಾರರು ನೀಡಿರುವ ಮಾಹಿತಿ ಅನ್ವಯ ವಿರಾಜಪೇಟೆ ಗ್ರಾಮಾಂತರ ಪೊಲೀಸು ಠಾಣೆಯ ಸಿಬ್ಬಂದಿಗಳು ಭಾನುವಾರ ಬೆಳಿಗ್ಗೆ ಆರೋಪಿಯು ವಾಸವಾಗಿದ್ದ ಕಂಡAಗಾಲ ಗ್ರಾಮದ ಮನೆಯ ಮೇಲೆ ಧಾಳಿ ನಡೆಸಿದ್ದಾರೆ. ಧಾಳಿಯ ವೇಳೆಯಲ್ಲಿ ಹೂವಿನ ಕುಂಡದಲ್ಲಿ ಬೆಳೆಯಲಾಗಿದ್ದ ಒಟ್ಟು ಆರು ಗಾಂಜಾ ಗಿಡಗಳು ಪತ್ತೆಯಾಗಿದೆ. ಗಾಂಜಾ ಗಿಡಗಳು ಹುಲುಸಾಗಿ ಬೆಳೆದಿದ್ದು ಸುಮಾರು 5 ಅಡಿ ಎತ್ತರವಾಗಿದೆ. ಹಸಿ ಗಾಂಜಾ ಗಿಡಗಳು 01 ಕೆ.ಜಿ. 600 ಗ್ರಾಂ ತೂಕ ಹೊಂದಿದೆ. ಗಾಂಜಾ ಗಿಡಗಳನ್ನು ವಶಕ್ಕೆ ಪಡೆದುಕೊಂಡು ಅರೋಪಿ ವಿಜಯ್ ಮೇಲೆ ಮಾದಕ ವಸ್ತುಗಳ ನಿಯಂತ್ರಣ ಕಾಯ್ದೆ ಅನ್ವಯ ಎನ್.ಡಿ.ಪಿ.ಎಸ್ ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮ ಜರುಗಿಸಿದ್ದಾರೆ.

ವಿರಾಜಪೇಟೆ ಉಪ ವಿಭಾಗ ಡಿವೈಎಸ್ಪಿ ಮೋಹನ್ ಕುಮಾರ್ ಮತ್ತು ವಿರಾಜಪೇಟೆ ವೃತ್ತ ನಿರೀಕ್ಷಕರಾದ ಬಿ.ಎಸ್.ಶಿವರುದ್ರ ಅವರುಗಳ ಮಾರ್ಗದರ್ಶನದಲ್ಲಿ ವಿರಾಜಪೇಟೆ ಗ್ರಾಮಾಂತರ ಪೊಲೀಸು ಠಾಣೆಯ ಠಾಣಾಧೀಕಾರಿಗಳಾದ ಸಿ. ಮಂಜುನಾಥ್ ಮತ್ತು ಸಿಬ್ಬಂದಿಗಳಾದ ಗಿರೀಶ್, ನಂಜುAಡ ಹಾಗೂ ಬೋಪಣ್ಣ ಅವರುಗಳು ಕಾರ್ಯಚರಣೆಯಲ್ಲಿ ಭಾಗವಹಿಸಿದ್ದರು.

Continue Reading
Click to comment

Leave a Reply

Your email address will not be published. Required fields are marked *

Cinema

2019ರ ರಾಜ್ಯವಾರ್ಷಿಕ ಚಲನಚಿತ್ರ ಪ್ರಶಸ್ತಿ: ಸುದೀಪ್‌ಗೆ ಒಲಿದ ಅತ್ಯುತ್ತಮ ನಟ ಪ್ರಶಸ್ತಿ

Published

on

ಬೆಂಗಳೂರು: 2019ರ ರಾಜ್ಯ ವಾರ್ಷಿಕ ಚಲನಚಿತ್ರ ಪ್ರಶಸ್ತಿಯನ್ನು ರಾಜ್ಯ ಸರ್ಕಾರ ಘೋಷಣೆ ಮಾಡಿದ್ದು, ಕನ್ನಡದ ಖ್ಯಾತನಟ ಕಿಚ್ಚ ಸುದೀಪ್ ಹಾಗೂ ನಟಿ ಅನುಪಮಾ ಗೌಡಗೆ ರಾಜ್ಯ ಪ್ರಶಸ್ತಿ ಘೋಷಿಸಿದೆ.

ಪೈಲ್ವಾನ್ ಸಿನಿಮಾದಲ್ಲಿನ ಅಭಿನಯಕ್ಕೆ ಸುದೀಪ್‌ಗೆ ಅತ್ಯುತ್ತಮ ನಟ ಪ್ರಶಸ್ತಿ, ತ್ರಯಂಬಕಂ ಸಿನಿಮಾಗಾಗಿ ಅನುಪಮ ಗೌಡಗೆ ಅತ್ಯುತ್ತಮ ನಟಿ ಪ್ರಶಸ್ತಿ ದೊರೆತಿದೆ.

2019ರ ರಾಜ್ಯ ವಾರ್ಷಿಕ ಚಲನಚಿತ್ರ ಪ್ರಶಸ್ತಿ ವಿಜೇತರ ಮಾಹಿತಿ:

ಮೊದಲ ಅತ್ಯುತ್ತಮ ಚಿತ್ರ: ಮೋಹನದಾಸ
ಎರಡನೇ ಅತ್ಯುತ್ತಮ ಚಿತ್ರ: ಲವ್‌ ಮಾಕ್‌ ಟೈಲ್‌
ವಿಶೇಷ ಸಾಮಾಜಿಕ ಕಾಳಜಿ ಚಿತ್ರ: ಕನ್ನೇರಿ
ಅತ್ಯುತ್ತಮ ಜನಪ್ರಿಯ ಮಜರಂಜನಾ ಚಿತ್ರ: ಇಂಡಿಯಾ v/s ಇಂಗ್ಲೆಂಡ್‌
ಅತ್ಯುತ್ತಮ ಮಕ್ಕಳ ಚಿತ್ರ: ಎಲ್ಲಿ ಆಡೋದು ನಾವು ಎಲ್ಲಿ ಆಡೋದು
ನಿರ್ದೇಶಕರ ಪ್ರಥಮ ನಿರ್ದೇಶನದ ಅತ್ಯುತ್ತಮ ಚಿತ್ರ: ಗೋಪಾಲಗಾಂಧಿ
ಅತ್ಯುತ್ತಮ ಕರ್ನಾಟಕ ಪ್ರಾದೇಶಿಕ ಭಾಷಾ ಚಿತ್ರ: ಟ್ರಿಬಲ್‌ ತಲಾಕ್‌ (ಬ್ಯಾರಿ ಭಾಷೆ)
ಅತ್ಯುತ್ತಮ ನಟ (ಸುಬ್ಬಯ್ಯ ನಾಯ್ಡು ಪ್ರಶಸ್ತಿ): ಕಿಚ್ಚ ಸುದೀಪ್‌ (ಪೈಲ್ವಾನ್‌)
ಅತ್ಯುತ್ತಮ ನಟಿ: ಅನುಪಮಾ ಗೌಡ (ತ್ರಯಂಬಕಂ)
ಅತ್ಯುತ್ತಮ ಪೋಷಕ ನಟ (ಕೆ.ಎಸ್‌ ಅಶ್ವಥ್‌ ಪ್ರಶಸ್ತಿ): ತಬಲಾ ನಾಣಿ (ಕೆಮಿಸ್ಟ್ರಿ ಆಫ್‌ ಕರಿಯಪ್ಪ)
ಅತ್ಯುತ್ತಮ ಪೋಷಕ ನಟಿ: ಅನೂಷಾ ಕೃಷ್ಣ (ಬ್ರಾಹ್ಮಿ)
ಅತ್ಯುತ್ತಮ ಕಥೆ: ಜಯಂತ್‌ ಕಾಯ್ಕಿಣಿ ( ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ)
ಅತ್ಯುತ್ತಮ ಚಿತ್ರಕಥೆ: ಡಾರ್ಲಿಂಗ್‌ ಕೃಷ್ಣ (ಲವ್‌ ಮಾಕ್‌ ಟೈಲ್‌)
ಅತ್ಯುತ್ತಮ ಸಂಭಾಷಣೆ: ಬರಗೂರು ರಾಮಚಂದ್ರಪ್ಪ (ಅಮೃತಮತಿ)
ಅತ್ಯುತ್ತಮ ಛಾಯಾಗ್ರಹಣ: ಜಿ.ಎಸ್‌.ಭಾಸ್ಕರ್‌ (ಮೋಹನದಾಸ)
ಅತ್ಯುತ್ತಮ ಸಂಗೀತ ನಿರ್ದೇಶನ: ವಿ. ಹರಿಕೃಷ್ಣ (ಯಜಮಾನ)
ಅತ್ಯುತ್ತಮ ಸಂಕಲನ: ಜಿ. ಬಸವರಾಜ ಅರಸ್‌ (ಝಾನ್ಸಿ ಐ.ಪಿ.ಎಸ್‌)
ಅತ್ಯುತ್ತಮ ಬಾಲನಟ: ಮಾಸ್ಟರ್‌ ಪ್ರೀತಂ (ಮಿಂಚು ಹುಳು)
ಅತ್ಯುತ್ತಮ ಬಾಲನಟಿ: ಬೇಬಿ ವೈಷ್ಣವಿ ಅಡಿಗ (ಸುಗಂಧಿ)
ಅತ್ಯುತ್ತಮ ಕಲಾ ನಿರ್ದೇಶನ: ಹೊಸ್ಮನೆ ಮೂರ್ತಿ (ಮೋಹನದಾಸ)
ಅತ್ಯುತ್ತಮ ಗೀತ ರಚನೆ: ರಝಾಕ್‌ ಪುತ್ತೂರು (ಪೆನ್ಸಿಲ್‌ ಬಾಕ್ಸ್‌)
ಅತ್ಯುತ್ತಮ ಹಿನ್ನೆಲೆ ಗಾಯನ: ರಘು ದೀಕ್ಷಿತ್‌ (ಲವ್‌ ಮಾಕ್‌ ಟೈಲ್‌)
ಅತ್ಯುತ್ತಮ ಹಿನ್ನೆಲೆ ಗಾಯಕಿ: ಡಾ. ಜಯದೇವಿ ಜಿಂಗಮ ಶೆಟ್ಟಿ (ರಾಗಭೈರವಿ)

Continue Reading

Cinema

ನಟ ಸೈಫ್‌ ಅಲಿ ಖಾನ್‌ಗೆ ಚಾಕು ಇರಿತ ಪ್ರಕರಣ: ಪತ್ನಿ ಕರೀನಾ ಕಪೂರ್‌ ಫಸ್ಟ್‌ ರಿಯಾಕ್ಷನ್‌!

Published

on

ಮುಂಬೈ: ಬಾಲಿವುಡ್‌ ನಟ ಸೈಫ್‌ ಅಲಿ ಖಾನ್‌ ಅವರ ಮೇಲಿನ ಮಾರಣಾಂತಿಕ ದಾಳಿ ಬಗ್ಗೆ ಮೊದಲ ಬಾರಿಗೆ ಬಾಲಿವುಡ್‌ ನಟಿ, ಸೈಫ್‌ ಅಲಿ ಖಾನ್‌ ಪತ್ನಿ ಕರೀನಾ ಕಪೂರ್‌ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ.

ಈ ಸಂಬಂಧ ಹೇಳಿಕೆ ನೀಡಿರುವ ಕರೀನಾ ಕಪೂರ್‌, ಏಕಾಏಕಿ ಮನೆಗೆ ನುಗ್ಗಿದ ದುಷ್ಕರ್ಮಿ, ತನ್ನ ಚಾಕುವಿನಿಂದ ದಾಳಿ ನಡೆಸಿದ, ಆದರೆ ಅಲ್ಲಿ ಬಹಿರಂಗವಾಗಿ ಇರಿಸಿದ್ದ ಯಾವುದೇ ನಗದು, ಚಿನ್ನಾಭರಣವನ್ನು ಆತ ಕದಿಯಲು ಯತ್ನಿಸಲಿಲ್ಲ.

ಹೊಡೆದಾಟದ ವೇಳೆ ದುಷ್ಕರ್ಮಿ ತುಂಬಾ ಆಕ್ರಮಣಕಾರಿಯಾಗಿ ದಾಳಿ ನಡೆಸಿದ ಈ ವೇಳೆ ಸೈಫ್‌ ಮೇಲೆ ನಿರಂತರವಾಗಿ ಆರು ಬಾರಿ ಚಾಕುವಿನಿಂದ ದಾಳಿ ಮಾಡಿದ. ಆದರೆ ಕಣ್ಣಮುಂದೆ ತೆರದಿಟ್ಟಿದ್ದ ಯಾವುದೇ ನಗದು, ಚಿನ್ನಾಭರಣವನ್ನು ಅವನು ಮುಟ್ಟಲಿಲ್ಲ ಎಂದು ಕರೀನಾ ಕಪೂರ್‌ ಹೇಳಿಕೆ ನೀಡಿದ್ದಾರೆ.

ಮೊದ ಮೊದಲಿಗೆ ಈ ದಾಳಿ ಕೇವಲ ಕಳ್ಳತನಕ್ಕಾಗಿ ಎಂದು ಭಾವಿಸಲಾಗಿತ್ತು. ಆದರೆ ಕರೀನಾ ಅವರು ನೀಡಿದ ಹೇಳಿಕೆ ಆಧರಿಸಿದ ಬಳಿಕ ಈ ದಾಳಿಯ ಹಿಂದೆ ಹಲವಾರು ಊಹಾಪೋಹಗಳು ಹುಟ್ಟುಕೊಂಡಿವೆ.

ಸೈಫ್‌ ಅಲಿ ಖಾನ್‌ ಅವರ ಮೇಲಿನ ದಾಳಿ ನಡೆದು ೪೮ ಗಂಟೆ ಕಳೆದಿದ್ದರೂ ಸಹಾ 30 ತಂಡಗಳನ್ನು ರಚಿಸಿರುವ ಮುಂಬೈ ಪೊಲೀಸರಿಂದ ಅಪರಾಧಿಯನ್ನು ಪತ್ತೆ ಹಚ್ಚಲಾಗಿಲ್ಲ.

Continue Reading

Cinema

ಸೈಫ್‌ ಅಲಿ ಖಾನ್‌ಗೆ ಚಾಕು ಇರಿತ ಪ್ರಕರಣ: ವೈದ್ಯರು ಹೇಳಿದ್ದೇನು?

Published

on

ಮುಂಬೈ: ಬಾಲಿವುಡ್‌ ಖ್ಯಾತನಟ ಸೈಫ್‌ ಅಲಿ ಖಾನ್‌ ಅವರಿಗೆ ಮುಂಬೈನ ಬಾಂದ್ರಾದಲ್ಲಿರುವ ತಮ್ಮ ನಿವಾಸದಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಮನೆಗೆ ನುಗ್ಗಿ ಒಟ್ಟು ಆರು ಬಾರಿ ಚಾಕುವಿನಿಂದ ಇರಿದು ಪರಾರಿಯಾಗಿದ್ದ. ಈ ಸಂಬಂಧ ಅವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದ್ದು, ವೈದ್ಯರು ಅವರ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ್ದಾರೆ.

ಗುರುವಾರ ಬೆಳಗಿನ ಜಾವ 2.30ರ ಸುಮಾರಿಗೆ ಈ ಘಟನೆ ನಡೆದಿದ್ದು, ತಕ್ಷಣವೇ ಅವರನ್ನು ನಗರದ ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಸುಮಾರು ಆರು ಬಾರಿ ಇರಿದ ಕಾರಣದಿಂದ ಬೆನ್ನು ಮೂಳೆ, ದೇಹದ ಎರಡು ಭಾಗಗಳಲ್ಲಿ ಆಳವಾಗಿ ಗಾಯಗಳಾಗಿವೆ. ತ್ವರಿತಗತಿಯಲ್ಲಿ ಚಿಕಿತ್ಸೆ ನೀಡಲಾಗಿದ್ದು, ಯಾವುದೇ ಪ್ರಣಾಪಾಯವಾಗಿಲ್ಲ ಎಂದು ವೈದ್ಯರು ಹೇಳಿದ್ದಾರೆ.

ತಾವು ಬೆನ್ನು ಮೂಳೆ ಬಳಿ ಉಳಿದ ಚಾಕನ್ನು ಹೊರತೆಗೆಯುವ ಉದ್ದೇಶದಿಂದ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಸದ್ಯ ಅವರನ್ನು ಐಸಿಯುನಲ್ಲಿ ಇರಿಸಲಾಗಿದ್ದು, ಆರೋಗ್ಯ ಸ್ಥಿತಿ ಸ್ಥಿರವಾಗಿದೆ ನಾಳೆ ಅವರ ವಿಕ್ಷಣೆಗೆ ಅವಕಾಶ ನೀಡಲಾಗುವುದು ಎಂದು ವೈದ್ಯರು ತಿಳಿಸಿದ್ದಾರೆ.

Continue Reading

Trending

error: Content is protected !!