Education
ಹಾಸನದ 6 ತಾಲ್ಲೂಕುಗಳ ಪ್ರೌಢಶಾಲೆವರೆಗೆ ರಜೆ
ಹಾಸನ: ಕರ್ನಾಟಕ ಬಂದ್ ಹಿನ್ನೆಲೆ ಶುಕ್ರವಾರ ಜಿಲ್ಲೆಯ ಆರು ತಾಲೂಕುಗಳಲ್ಲಿ ೧ ರಿಂದ ೧೦ನೇ ತರಗತಿವರೆಗೆ ಖಾಸಗಿ,ಅನುದಾನ
ರಹಿತ ಸೇರಿದಂತೆ ಎಲ್ಲಾ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.

ಹಾಸನ, ಅರಕಲಗೂಡು, ಚನ್ನರಾಯಪಟ್ಟಣ, ಬೇಲೂರು, ಸಕಲೇಶಪುರ, ಆಲೂರು ಬಿಇಒಗಳು ರಜೆ ಘೋಷಣೆ ಮಾಡಿ ಆದೇಶಿಸಿದ್ದಾರೆ.
ಆದರೆ ಅರಸೀಕೆರೆ ಮತ್ತು ಹೊಳೆನರಸೀಪುರ ತಾಲೂಕಿನಲ್ಲಿ ಯಾವುದೇ ನಿರ್ಧಾರ ಕೈಗೊಂಡಿಲ್ಲ.

ಬಂದ್‌ಗೆ ಕರೆ ನೀಡಿರುವವರಿಂದ ಶಾಲೆಗಳಿಗೆ ರಜೆ ನೀಡುವಂತೆ ಒತ್ತಾಯ ಬಂದರೆ ಆಯಾ ತಾಲೂಕುಗಳ ಕ್ಷೇತ್ರ ಶಿಕ್ಷಣಾಧಿಕಾರಿ ಅವರು ತಮ್ಮ ಹಂತದಲ್ಲೇ ರಜೆ ಘೋಷಿಸಿ ಸದರಿ ದಿನದ ಶಾಲೆಯನ್ನು ಬೇರೆ ದಿನದಂದು ನಡೆಸುವಂತೆ ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ(ಆಡಳಿತ) ಬಸವೇಗೌಡ ತಿಳಿಸಿದ್ದಾರೆ.
ಪ್ರಾಂಶುಪಾಲರಿಗೆ ಅಧಿಕಾರ: ಹಾಗೆಯೇ ಜಿಲ್ಲೆಯ ಎಲ್ಲಾ ಪದವಿಪೂರ್ವ ಕಾಲೇಜುಗಳನ್ನು ಶುಕ್ರವಾರ ಬಂದ್ ಮಾಡುವಂತೆ ಒತ್ತಾಯ ಬಂದಲ್ಲಿ ತಮ್ಮ ಹಂತದಲ್ಲಿಯೇ ಕಾಲೇಜುಗಳಿಗೆ ರಜೆ ನೀಡಿ ಆ ದಿನದ ಕಾರ್ಯಭಾರವನ್ನು ಮುಂಬರುವ ಯಾವುದಾದರೂ ರಜೆ ದಿನದಂದು ಸರಿದೂಗಿಸುವಂತೆ ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ (ಆಡಳಿತ) ಸಿ.ಎಂ. ಮಹಾಲಿಂಗಯ್ಯ ಅವರು ಎಲ್ಲಾ ಕಾಲೇಜುಗಳ ಪ್ರಾಂಶುಪಾಲರಿಗೆ ಸೂಚನೆ ನೀಡಿದ್ದಾರೆ.
Education
ಎಸ್‌ಎಸ್‌ಎಲ್‌ಸಿ ಟಾಪರ್ ಗಳಿಗೆ ಸಿಗಲಿದೆ ಲ್ಯಾಪ್ಟಾಪ್ ಬದಲು 50000 ರೂ ನಗದು ಬಹುಮಾನ!!
ಕರ್ನಾಟಕ ಸರ್ಕಾರವು ಪ್ರತಿ ವರ್ಷವೂ ಪರೀಕ್ಷೆಯ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ನೀಡುವ ಯೋಜನೆಯನ್ನು ರದ್ದುಗೊಳಿಸಿ, ಈಗ ಅವರಿಗೆ ನೇರವಾಗಿ ₹50,000 ನಗದು ಬಹುಮಾನ ನೀಡಲು ತೀರ್ಮಾನಿಸಿದೆ.
ಈ ಹೊಸ ನೀತಿಯಡಿ ಪ್ರತಿ ಜಿಲ್ಲೆ ಮತ್ತು ತಾಲ್ಲೂಕಿನ ಮೊದಲ ಮೂರು ಟಾಪರ್‌ಗಳಿಗೆ ಪ್ರತಿ ವಿದ್ಯಾರ್ಥಿಗೂ 50 ಸಾವಿರ ರೂ. ಹಣವನ್ನು ಅವರ ಬ್ಯಾಂಕ್ ಖಾತೆಗೆ ನೇರವಾಗಿ ವರ್ಗಾವಣೆ ಮಾಡಲಾಗುತ್ತದೆ.
ಯಾಕೀ ಬದಲಾವಣೆ?
ಈ ಬದಲಾವಣೆಯ ಮುಖ್ಯ ಉದ್ದೇಶವೆಂದರೆ, ಲ್ಯಾಪ್‌ಟಾಪ್ ನೀಡುವ ಸಂದರ್ಭದಲ್ಲಿ ಎದುರಾಗುವ ತಾಂತ್ರಿಕ ತೊಂದರೆ ಮತ್ತು ವಿತರಣಾ ಜಟಿಲತೆಗಳನ್ನು ತಪ್ಪಿಸುವುದು ಹಾಗೂ ವಿದ್ಯಾರ್ಥಿಗಳಿಗೆ ಹೆಚ್ಚು ಸ್ವಾತಂತ್ರ್ಯ ಮತ್ತು ಆಯ್ಕೆಯನ್ನು ನೀಡುವುದು. ಹಣವನ್ನು ನೇರವಾಗಿ ಬ್ಯಾಂಕ್ ಖಾತೆಗೆ ಜಮಾ ಮಾಡುವ ಮೂಲಕ, ಅವರು ಕೂಡ ತಮ್ಮ ಶಿಕ್ಷಣದ ಅಗತ್ಯಗಳಿಗೆ ತಕ್ಕಂತೆ ಉಪಯೋಗಿಸಿಕೊಳ್ಳಬಹುದು.
ಈ ಯೋಜನೆಯಡಿ ಒಟ್ಟು 758 ವಿದ್ಯಾರ್ಥಿಗಳಿಗೆ ಈ ₹50,000 ನಗದು ಬಹುಮಾನ ಸಿಗಲಿದ್ದು, ನೇರವಾಗಿ ಬ್ಯಾಂಕ್ ಖಾತೆಗೆ ಹಣ ಜಮಾ ಮಾಡುವುದರಿಂದ ಪರದರ್ಶಕತೆ ಹೆಚ್ಚಿರುತ್ತದೆ.
ಯಾರು ಅರ್ಹರು?
1. ವಿದ್ಯಾರ್ಥಿಯು ಸರ್ಕಾರಿ ಪ್ರೌಢಶಾಲೆಯಲ್ಲಿ ಓದಿರಬೇಕು.
2. ಅವರು ಜಿಲ್ಲಾ ಅಥವಾ ತಾಲ್ಲೂಕಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿ ಮೊದಲ 3 ಸ್ಥಾನಗಳಲ್ಲಿ ಇರಬೇಕು.
3. ಹಣವನ್ನು ಹೊಂದಲು ವಿದ್ಯಾರ್ಥಿಯ ಬ್ಯಾಂಕ್ ಖಾತೆ ಆಧಾರ್ ಸಂಖ್ಯೆಗೆ ಲಿಂಕ್ ಆಗಿರಬೇಕು.
ಹಣ ವಿತರಣೆ ಹೇಗೆ?
ಶಿಕ್ಷಣ ಇಲಾಖೆ ಇದನ್ನು ಅಧಿಕೃತವಾಗಿ ಗುರುತಿಸಿ, ಆಯ್ಕೆಯಾದ ಅಭ್ಯರ್ಥಿಗಳ ಖಾತೆಗೆ DBT (Direct Benefit Transfer) ಮೂಲಕ ನೇರವಾಗಿ ₹50,000 ಜಮಾ ಮಾಡುತ್ತದೆ. ಮುಂದೆ ವಿದ್ಯಾರ್ಥಿಗಳು ಈ ಹಣವನ್ನು ತಮ್ಮ ಶಿಕ್ಷಣದ ಅಗತ್ಯಗಳಿಗೆ ಮುಕ್ತವಾಗಿ ಬಳಸಿಕೊಳ್ಳುವ ಅವಕಾಶವಿರುತ್ತದೆ.
ರಾಜ್ಯ ಸರ್ಕಾರದಿಂದ ಇದೊಂದು ಧನಾತ್ಮಕ ಬದಲಾವಣೆಯಾಗಿದ್ದು, ಇದರಿಂದ ಹಣವನ್ನು ಪಡೆಯುವ ಮೂಲಕ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ತಮ್ಮ ಭವಿಷ್ಯದ ಓದು ಮತ್ತು ಕರಿಯರ್ ಯೋಜನೆಗಳಿಗೆ ಇನ್ನೂ ಪರಿಣಾಮಕಾರಿಯಾಗಿ ತಯಾರಿ ಮಾಡಿಕೊಳ್ಳಬಹುದು.ಇದು ವಿದ್ಯಾರ್ಥಿಗಳಲ್ಲಿ ಇನ್ನೂ ಚೆನ್ನಾಗಿ ಓದುವ ಸ್ಪೂರ್ತಿ ತುಂಬುತ್ತದೆ.
Education
Power Sprayer ಸಬ್ಸಿಡಿ ಯೋಜನೆ: ಕೇವಲ ರೂ.1,781 ಪಾವತಿಸಿ ಪವರ್ ಸ್ಪ್ರೇಯರ್ ಪಡೆಯಿರಿ.
ಕರ್ನಾಟಕ ರಾಜ್ಯ ಸರ್ಕಾರ ರೈತ ಬಂಧುಗಳಿಗೆ ಸಂತಸದ ಸುದ್ದಿ ನೀಡಿದ್ದು, ಸಹಾಯಧನ (ಸಬ್ಸಿಡಿ) ಯೋಜನೆಯಡಿ ಪವರ್ ಸ್ಪ್ರೇಯರ್ ಪಡೆಯುವ ಅವಕಾಶ ಲಭ್ಯವಾಗಿಸಿದೆ. ಈ ಯೋಜನೆಯಡಿ ಕೇವಲ, ರೂ.1,781/- ಪಾವತಿಸಿ ಯಂತ್ರವನ್ನು ಪಡೆಯಬಹುದಾಗಿದೆ.
ಯೋಜನೆಯ ಉದ್ದೇಶ:
ರೈತರಿಗೆ ಸ್ಪ್ರೇಯಿಂಗ್ ಕೆಲಸವನ್ನು ಸುಲಭಗೊಳಿಸಿ, ಸಮಯ ಮತ್ತು ಶ್ರಮ ಉಳಿಸಲು ಈ ಪವರ್ ಸ್ಪ್ರೇಯರ್ ಸಬ್ಸಿಡಿ ಯೋಜನೆ ರೂಪಿಸಲಾಗಿದೆ. ಯಂತ್ರದ ಸಹಾಯದಿಂದ ಕೀಟನಾಶಕ ಮತ್ತು ರಸಗೊಬ್ಬರಗಳನ್ನು ಸಮವಾಗಿ ಮತ್ತು ವೇಗವಾಗಿ ಸಿಂಪಡಿಸಬಹುದು.
ಸಹಾಯಧನದ ವಿವರಗಳು:
ಸಾಮಾನ್ಯ ವರ್ಗದ ರೈತರಿಗೆ:
ಪೂರ್ಣ ದರ: ₹10,219/-
ಸಬ್ಸಿಡಿ: ₹4,688/-
ರೈತನಿಂದ ಪಾವತಿ: ₹5,531/-
ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ (SC/ST) ರೈತರಿಗೆ: ಪೂರ್ಣ ದರ: ₹9,375/-
ಸಬ್ಸಿಡಿ: ₹8,438/-
ರೈತನಿಂದ ಪಾವತಿ:₹1,781/-
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು:
1. ಆಧಾರ್ ಕಾರ್ಡ್
2. ಬ್ಯಾಂಕ್ ಪಾಸ್ ಬುಕ್
3. ಜಮೀನಿನ ಪಹಣಿ/RTC
4. ರೇಷನ್ ಕಾರ್ಡ್
5. ಪಾಸ್‌ಪೋರ್ಟ್ ಸೈಸ್ ಫೋಟೋ
6. ಬಾಂಡ್ ಪೇಪರ್
7. ಮೊಬೈಲ್ ನಂಬರ್
ಅರ್ಜಿ ಸಲ್ಲಿಸುವ ವಿಧಾನ:
ರೈತ ಬಂಧುಗಳು ಸಮೀಪದ ರೈತ ಸಂಪರ್ಕ ಕೇಂದ್ರ (Raita Samparka Kendra)ಗೆ ಭೇಟಿ ನೀಡಿ ಅರ್ಜಿ ನಮೂನೆ ಪಡೆಯಬಹುದು.ಅಥವಾ ಆನ್ಲೈನ್ ಮೂಲಕ ಸಹ ಅರ್ಜಿ ಸಲ್ಲಿಸಬಹುದು.
ಎಲ್ಲಾ ದಾಖಲೆಗಳೊಂದಿಗೆ ಪೂರ್ಣ ಮಾಹಿತಿಯನ್ನು ಸಲ್ಲಿಸಿದ ಬಳಿಕ, ಸಹಾಯಧನ ಅನುಮೋದನೆ ದೊರೆಯುತ್ತದೆ.
ಸೂಚನೆಗಳು:
1.ಸಬ್ಸಿಡಿ ಲಭ್ಯತೆ ನಿಮ್ಮ ಜಿಲ್ಲೆಯ ಕೃಷಿ ಅಥವಾ ತೋಟಗಾರಿಕೆ ಇಲಾಖೆಯ ಅನುದಾಯ ಮಿತಿಯ ಮೇಲೆ ಅವಲಂಬಿತವಾಗಿರುತ್ತದೆ.
2.ಯಂತ್ರದ ಕಂಪನಿ ಹಾಗೂ ಮಾದರಿಗಳ ಪ್ರಕಾರ ದರದಲ್ಲಿ ಸ್ವಲ್ಪ ವ್ಯತ್ಯಾಸ ಇರಬಹುದು.
3.ಅರ್ಜಿಯ ವೇಳೆಗೆ ಅಧಿಕೃತ ದೃಢೀಕರಣ ಪತ್ರಗಳನ್ನು ಮಾತ್ರ ಸಲ್ಲಿಸುವುದು ಅತ್ಯಂತ ಅಗತ್ಯ.
ರಾಜ್ಯ ಸರ್ಕಾರ ನೀಡುತ್ತಿರುವ ಈ ಪವರ್ ಸ್ಪ್ರೇಯರ್ ಸಹಾಯಧನ ಯೋಜನೆಯು ರೈತರ ಶ್ರಮವನ್ನು ಕಡಿಮೆ ಮಾಡಿ ಉತ್ಪಾದನೆಯನ್ನು ಹೆಚ್ಚಿಸಲು ಸಹಕಾರಿಯಾಗಲಿದೆ. ನಿಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ಕೃಷಿ ಇಲಾಖೆಯಲ್ಲಿ ಮಾಹಿತಿ ಪಡೆದು ತಕ್ಷಣ ಅರ್ಜಿ ಸಲ್ಲಿಸಿ.
Education
ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ (KAR-TET) – 2025 ಅರ್ಜಿ ಆಹ್ವಾನ : ಹೊಸ ನಿಯಮ ತಿದ್ದುಪಡಿ ಪ್ರಕಟ!
ಈ ಬಾರಿ TET ನಿಯಮದಲ್ಲಿ ಪ್ರಮುಖ ತಿದ್ದುಪಡಿ ಮಾಡಲಾಗಿದ್ದು, ಶಿಕ್ಷಕ ವೃತ್ತಿಗೆ ಆಸಕ್ತರಾಗಿರುವ ಅಭ್ಯರ್ಥಿಗಳಿಗೆ ಇದು ಮಹತ್ವದ ಅವಕಾಶವಾಗಿದೆ.
ಪರೀಕ್ಷೆಯ ಕುರಿತು: ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ (KAR-TET) ರಾಜ್ಯದ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ 1 ರಿಂದ 8ನೇ ತರಗತಿವರೆಗೆ ಶಿಕ್ಷಕರ ನೇಮಕಾತಿಗೆ ಅಗತ್ಯವಾದ ಅರ್ಹತಾ ಪರೀಕ್ಷೆಯಾಗಿದೆ. ಪ್ರತೀ ವರ್ಷ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ಈ ಪರೀಕ್ಷೆಯನ್ನು ಆಯೋಜಿಸುತ್ತದೆ.
ಪ್ರಮುಖ ತಿದ್ದುಪಡಿ: ಹಿಂದಿನ ಅಧಿಸೂಚನೆಯಲ್ಲಿ 1ರಿಂದ 5ನೇ ತರಗತಿಗಳಿಗೆ ಶಿಕ್ಷಕರಾಗಲು ಪದವಿಯಲ್ಲಿ ಕನಿಷ್ಠ 50% ಅಂಕಗಳೊಂದಿಗೆ B.Ed ಓದುತ್ತಿರಬೇಕು ಅಥವಾ ಪಾಸಾಗಿರಬೇಕು ಎಂಬ ನಿಯಮ ಅನಿವಾರ್ಯವಾಗಿತ್ತು.ಆದರೆ ಈಗ ಈ ನಿಯಮವನ್ನು ಹಿಂಪಡೆಯಲಾಗಿದ್ದು, ಈ ಶರತ್ತು ಇದೀಗ ಕೈಬಿಡಲಾಗಿದೆ, ಹಾಗಾಗಿ ಪೂರ್ವ ನಿಯಮದಂತೆ ಅಭ್ಯರ್ಥಿಗಳಿಗೆ ಹೆಚ್ಚು ಸಡಿಲಿಕೆ ನೀಡಲಾಗಿದೆ.

ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 09-11-2025
ಪರೀಕ್ಷೆಯ ದಿನಾಂಕ: 07-12-2025
ಅರ್ಜಿ ಸಲ್ಲಿಸುವ ವಿಧಾನ: ಅಭ್ಯರ್ಥಿಗಳು ಅಧಿಕೃತ ಜಾಲತಾಣಕ್ಕೆ(https://schooleducation.karnataka.gov.in/cacell/en) ಭೇಟಿ ನೀಡಿ ಅಗತ್ಯ ಮಾಹಿತಿಗಳನ್ನು ತುಂಬಿ ಅರ್ಜಿ ಸಲ್ಲಿಸಬಹುದು.
TET ಹೊಸ ನಿಯಮ ತಿದ್ದುಪಡಿಯಿಂದ ಹೆಚ್ಚು ಅಭ್ಯರ್ಥಿಗಳಿಗೆ ಅವಕಾಶ ದೊರೆತಿದೆ. ಹಾಗೂ ಶಿಕ್ಷಕರಾಗುವ ಕನಸನ್ನು ಸಾಕಾರಗೊಳಿಸಲು ಇದು ಉತ್ತಮ ಅವಕಾಶವಾಗಿದೆ.
-
Chikmagalur13 hours agoವೈದ್ಯಕೀಯ ವಿಭಾಗದ ಕ್ಯಾಪ್ಟನ್ ಡಾ.ಸಾತ್ವಿಕ್ ಅರುಣ್ಗೆ ಅದ್ದೂರಿ ಸ್ವಾಗತ ಕೋರಿದ ಗ್ರಾಮಸ್ಥರು
-
Hassan9 hours agoಅಸಹಾಯಕ ಮಹಿಳೆಗೆ ಧಮ್ಕಿ ಹಾಕಿದ ಎಎಸ್ಐ ದೇವರಾಜ್
-
Special20 hours agoಪಿ ಎಂ ಆವಾಸ್ ಯೋಜನೆಯಿಂದ ಮನೆಕಟ್ಟಲು ಸಬ್ಸಿಡಿ!
-
Hassan11 hours agoರಾಷ್ಟ್ರೀಯ ಚಿಂತನೆ ಮೈಗೂಡಿಸಿಕೊಳ್ಳಿ : ಶಾಸಕ ಸಿಮೆಂಟ್ ಮಂಜು
-
Chamarajanagar16 hours agoಗುಬ್ಬಚ್ಚಿಗೂಡು ಜಾಗೃತಿ ಅಭಿಯಾನ: ಹನೂರಿನ ಶಾಲೆಗಳಲ್ಲಿ ಅರಿವು ಮೂಡಿಸಿದ ರೈತ ದಂಪತಿ
-
Kodagu9 hours agoಕುಂದಚೇರಿ ಗ್ರಾ.ಪಂ. ನೂತನ ಕಟ್ಟಡ ಉದ್ಘಾಟಿಸಿದ ಶಾಸಕ ಎ.ಎಸ್.ಪೊನ್ನಣ್ಣ
-
State13 hours agoಉಳಿತಾಯದ ಹೂಡಿಕೆಗಳು MSIL ಸಂಸ್ಥೆಯಲ್ಲಿ ಸುಭದ್ರ ಗ್ಯಾರಂಟಿ: ಸಿಎಂ ಸಿದ್ದರಾಮಯ್ಯ
-
Hassan10 hours agoಮನೆಗಳ್ಳನ ಬಂಧನ : 140 ಗ್ರಾಂ.ಚಿನ್ನ ವಶ
