Chamarajanagar
ಕೆಎಸ್ಆರ್ಟಿಸಿ ಬಸ್ ಹಾಗೂ ಬೈಕ್ ನಡುವೆ ಡಿಕ್ಕಿ
ಯಳಂದೂರು ಸಮೀಪದ ಮಂಗಳ ಬಸ್ ನಿಲ್ದಾಣದ ಬಳಿ ಕೆಎಸ್ಆರ್ಟಿಸಿ ಬಸ್ ಹಾಗೂ ಬೈಕ್ ನಡುವೆ ಡಿಕ್ಕಿಯಾಗಿದ್ದು ಬೈಕ್ ಚಾಲಕ ಮಹಾದೇವ ಶೆಟ್ಟಿ ಆತನ ಹೆಂಡತಿ ಮಂಗಳಮ್ಮ ರವರಿಗೆ ಗಾಯಗಳಾಗಿರುತ್ತವೆ.
ಶೀಘ್ರವಾಗಿ ಆಸ್ಪತ್ರೆಗೆ ರವಾನಿಸಲಾಗಿದೆ.ಈ ಸಂದರ್ಭದಲ್ಲಿ ಕೆಎಸ್ಆರ್ಟಿಸಿ ಬಸ್ಗಳನ್ನು ಗ್ರಾಮಸ್ಥರು ನಮ್ಮ ಗ್ರಾಮದಲ್ಲಿ ತಡೆ ನೀಡುವುದಿಲ್ಲ ವೆಂದು ಅತಿ ವೇಗವಾಗಿ ಚಾಲನೆ ಮಾಡುತ್ತಾರೆಂದು ಬಸ್ ಗಳನ್ನು ತಡೆಯಲು ಹೋದಾಗ ಸ್ಥಳಕ್ಕೆ ಸಂತೆಮರಹಳ್ಳಿ ಪಿಎಸ್ಐ ಚಂದ್ರಹಾಸ ನಾಯಕ್ ರವರು ಭೇಟಿ ನೀಡಿ ಡಿಪೋ ಮ್ಯಾನೇಜರ್ರವರನ್ನು ಸ್ಥಳಕ್ಕೆ ಕರೆಸಿ ಸಮಸ್ಯೆಯನ್ನು ಬಗೆಹರಿಸಿರುತ್ತಾರೆ.
ಗ್ರಾಮದ ಮುಖಂಡರುಗಳಾದ ಮಾಜಿ ಅಧ್ಯಕ್ಷರಾದ ಶಿವಣ್ಣರವರು ನಾರಾಯಣಸ್ವಾಮಿ ರವರು ಮಾದು ಮಹೇಶ್ ಚೆಲುವರಾಜು ಕುಮಾರ್ ಮಲ್ಲಿಕಾರ್ಜುನ್ ಬೀರೇಗೌಡರು ಶಿವಸ್ವಾಮಿ ರವರು ಆಜರಿದ್ದರು.
Chamarajanagar
ಪರಿಶ್ರಮದಿಂದ ಯಶಸ್ಸು ಸಾಧ್ಯ: ದೈಹಿಕ ನಿರ್ದೇಶಕ ಡಾ. ಶಾಂತರಾಜು
ಚಾಮರಾಜನಗರ: ಚಾಮರಾಜನಗರ ವಿಶ್ವವಿದ್ಯಾಲಯ ಕ್ರೀಡಾಪಟುಗಳು ದೇಶ ಹಾಗೂ ರಾಜ್ಯದ ಮಹಿಳಾ ಕ್ರೀಡಾ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿದ್ದು, ಪರಿಶ್ರಮದಿಂದ ಮಾತ್ರ ಯಶಸ್ಸು ಸಾಧ್ಯವಾಗಲಿದೆ ಎಂದು ಚಾಮರಾಜನಗರ ವಿ.ವಿ ದೈಹಿಕ ನಿರ್ದೇಶಕ ಡಾ. ಶಾಂತರಾಜು ತಿಳಿಸಿದರು.
ನಗರದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮೈದಾನದಲ್ಲಿ ಇಂದು ಫೆಬ್ರವರಿ 11 ರಿಂದ 15 ರವರೆಗೆ ತಮಿಳುನಾಡಿನ ದಿಂಡಿಗಲ್ ನ ಪಿಎಸ್‌ಎನ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ನಡೆಯುವ ಅಖಿಲ ಭಾರತ ಅಂತರ್ ವಿಶ್ವವಿದ್ಯಾನಿಲಯ ಮಹಿಳೆಯರ ಬಾಲ್ ಬ್ಯಾಡ್ಮಿಂಟನ್ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುವ ಚಾಮರಾಜನಗರ ವಿವಿ ಕ್ರೀಡಾಪಟುಗಳಿಗೆ ಸಮವಸ್ತ್ರ ವಿತರಿಸಿ ಮಾತನಾಡಿದರು.

ತಮಿಳುನಾಡಿನ ದಿಂಡಿಗಲ್ ನಲ್ಲಿ ನಡೆಯುವ ಅಖಿಲ ಭಾರತ ಅಂತರ್ ವಿಶ್ವವಿದ್ಯಾನಿಲಯ ಮಹಿಳೆಯರ ಬಾಲ್ ಬ್ಯಾಡ್ಮಿಂಟನ್ ಕ್ರೀಡಾಕೂಟಕ್ಕೆ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಆಯ್ಕೆಯಾಗಿರುವುದು ಸಂತಸದ ವಿಚಾರ. ಕ್ರೀಡಾಕೂಟದಲ್ಲಿ ಸೋಲು ಗೆಲುವು ಮುಖ್ಯವಲ್ಲ, ಸ್ಪರ್ಧಾ ಮನೋಭಾವನೆ ಬೆಳೆಸಿಕೊಳ್ಳಬೇಕು. ಗಡಿ ಜಿಲ್ಲೆಯ ವಿದ್ಯಾರ್ಥಿಗಳು ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿ ಜಯಶೀಲರಾಗಬೇಕು ಎಂದು ವಿದ್ಯಾರ್ಥಿನಿಯರಿಗೆ ಸಲಹೆ ನೀಡಿದರು.
ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ. ಬಿಎಸ್. ಮಹದೇವಸ್ವಾಮಿ, ಚಾಮರಾಜನಗರ ವಿಶ್ವವಿದ್ಯಾಲಯ ಕ್ರೀಡಾ ಸಲಹೆ ಸಮಿತಿ ಸದಸ್ಯ ಜಿ ಬಂಗಾರು, ಕೊಳ್ಳೇಗಾಲ ಜೆಎಸ್‌ಎಸ್ ಮಹಿಳಾ ಕಾಲೇಜು ದೈಹಿಕ ಉಪನ್ಯಾಸಕರಾದ ಎಸ್. ಶ್ರೀಧರ್, ಇತರರು ಇದ್ದರು.
Chamarajanagar
ಜಾನುವಾರುಗಳ ಮರಣಕ್ಕೆ ರೋಗೋದ್ರೇಕ ಕಾರಣವಲ್ಲ : ಜಿಲ್ಲಾಧಿಕಾರಿ ಶ್ರೀರೂಪ ಸ್ಪಷ್ಟನೆ
ಚಾಮರಾಜನಗರ: ಹನೂರು ತಾಲೂಕಿನ ಶೆಟ್ಟಳ್ಳಿ ಗ್ರಾಮದ 6 ದನಗಳು ಹಾಗೂ ಗುನ್ನೂರು ಬಯಲು ಪಳನಿಮೇಡು ಗ್ರಾಮದ 5 ದನಗಳು ವಿಷಯುಕ್ತ ನೀರು ಸೇವಿಸಿ ಮರಣಹೊಂದಿದೆ. ಈ ಜಾನುವಾರುಗಳು ಯಾವುದೇ ರೋಗೋದ್ರೇಕ ಕಾರಣಗಳಿಂದ ಮರಣ ಹೊಂದಿಲ್ಲ ಎಂಬುವುದು ದೃಢಪಟ್ಟಿರುವುದರಿಂದ ರೈತರು ಯಾವುದೇ ಆತಂಕಪಡುವ ಅಗತ್ಯವಿಲ್ಲ ಎಂದು ಜಿಲ್ಲಾಧಿಕಾರಿ ಶ್ರೀರೂಪ ತಿಳಿಸಿದ್ದಾರೆ.
ಫೆ. 4 ರಂದು ಹನೂರು ತಾಲೂಕಿನ ಶೆಟ್ಟಳ್ಳಿ ಗ್ರಾಮದ ಪರಶಿವಮೂರ್ತಿ ಅವರ 6 ದನಗಳು (ಹಳ್ಳಿಕಾರ್) ಹಾಗೂ ಫೆ. 5 ರಂದು ಗುನ್ನೂರು ಬಯಲು ಪಳನಿಮೇಡು ಗ್ರಾಮದ ತಂಗರಾಜು ಅವರ 5 ದನಗಳು (ಸ್ಥಳೀಯ) ಮೇಯಲು ಹೋಗಿದ್ದ ಸಂದರ್ಭದಲ್ಲಿ ಹಠಾತ್ ಆಗಿ ಒಟ್ಟು 11 ಜಾನುವಾರುಗಳು ಮೃತಪಟ್ಟಿವೆ.

ಸದರಿ ದನಗಳ ಮರೋಣೋತ್ತರ ಪರೀಕ್ಷೆಯನ್ನು ಬೆಂಗಳೂರಿನ ಪಶು ಆರೋಗ್ಯ ಮತ್ತು ಜೈವಿಕ ಸಂಸ್ಥೆಯ (ಐಎಎಚ್ ಮತ್ತು ವಿಬಿ, ಬೆಂಗಳೂರು) ತಜ್ಞ ವಿಜ್ಞಾನಿಗಳ ತಂಡವು ನಡೆಸಿದ್ದು, ವಿಷಯುಕ್ತ ನೀರು ಸೇವಿಸಿರುವುದರಿಂದ ಜಾನುವಾರುಗಳು ಮರಣ ಹೊಂದಿರುತ್ತದೆ ಎಂದು ಪ್ರಯೋಗಾಲಯದ ವರದಿಯಿಂದ ದೃಢಪಟ್ಟಿರುತ್ತದೆ.
ಈ ಜಾನುವಾರುಗಳು ಯಾವುದೇ ರೋಗೋದ್ರೇಕ ಕಾರಣಗಳಿಂದ ಮರಣ ಹೊಂದಿಲ್ಲ ಎಂಬುವುದು ದೃಢಪಟ್ಟಿರುವುದರಿಂದ ರೈತರು ಯಾವುದೇ ಆತಂಕಪಡುವ ಅಗತ್ಯವಿಲ್ಲ ಎಂದು ಜಿಲ್ಲಾಧಿಕಾರಿ ಶ್ರೀರೂಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Chamarajanagar
ಫಲಾನುಭವಿಗಳಿಗೆ ವಿವಿಧ ಯೋಜನೆಯ ದಾಖಲೆಗಳ ವಿತರಿಸಿ ಶಾಸಕ ಮಂಜುನಾಥ್
ಹನೂರು : ಹಲವಾರು ವರ್ಷಗಳಿಂದ ಬಗೆಹರಿಯದ ಸಮಸ್ಯೆಗಳನ್ನು ವಿಶೇಷವಾಗಿ ರಾಜ್ಯದ ಜನಕ್ಕೆ, ಅರ್ಹ ಫಲಾನುಭವಿಗಳಿಗೆ ಸರ್ಕಾರ ಹಾಗೂ ಕಂದಾಯ ಇಲಾಖೆ ಡಿಜಿಟಲ್ ಮೂಲಕ ದಾಖಲೆ ನೀಡಲಾಗುತ್ತಾ ಬರಲಾಗುತ್ತಿದೆ ಎಂದು ಶಾಸಕ ಎಂ. ಆರ್. ಮಂಜುನಾಥ್ ತಿಳಿಸಿದರು.
ಹನೂರು ತಾಲೂಕಿನ ಲೊಕ್ಕನಹಳ್ಳಿಯ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಕಂದಾಯ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ಕಂದಾಯ/ಪಿಂಚಣಿ ಅದಾಲತ್ ಹಾಗೂ ಕಂದಾಯ ಇಲಾಖೆಯ ವಿವಿಧ ಯೋಜನೆಯ ದಾಖಲೆಗಳ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ರೈತರಿಗೆ ಹಾಗೂ ಸ್ಟಳೀಯ ನಿವಾಸಿಗಳಿಗೆ ಆಧಾರವಾಗವಂತೆ ಮನೆ, ಜಮೀನು ಹಕ್ಕು ಪತ್ರ ಸೇರಿದಂತೆ ಯೋಜನೆಯ ಆದೇಶಗಳನ್ನು ವಿತರಣೆ ಮಾಡಲಾಗುತ್ತಿದೆ. ಜಮೀನು ಪೋಡಿಗೆ ರೈತರು ಅಲೆದಾಡುವ ಸ್ಥಿತಿ ನಿರ್ಮಾಣವಾಗಿತ್ತು. ಈ ಸಂಬಂಧ ಕಂದಾಯ ಇಲಾಖೆ ದಿಟ್ಟ ನಿರ್ಧಾರ ಕೈಗೊಂಡು ಅರ್ಹರಿಗೆ ಹಕ್ಕು ದಕ್ಕಿಸುವ ಕೆಲಸ ಮಾಡಲಾಗುತ್ತಿದೆ. ಈ ಕಾರ್ಯವನ್ನು ಕಂದಾಯ ಇಲಾಖೆ ಮನೆ ಬಾಗಿಲಿಗೆ ಯೋಜನೆಯನ್ನು ಒದಗಿಸುವ ಕಾರ್ಯ ಮಾಡುತ್ತಿರುವುದು ಸ್ವಾಗತರ್ಹ ಎಂದರು.
ಈ ಸಂದರ್ಭದಲ್ಲಿ ತಹಸೀಲ್ದಾರ್ ಚೈತ್ರಾ, ಕೊಳ್ಳೇಗಾಲ ಉಪ ತಹಸೀಲ್ದಾರ್ ರವಿ, ಸರ್ವೇ ಅಧೀಕ್ಷಕ ಕುಮಾರಸ್ವಾಮಿ, ಲೊಕ್ಕನಹಳ್ಳಿ ರಾಜಸ್ವ ನಿರೀಕ್ಷಕ ಮಹಾದೇವಸ್ವಾಮಿ, ಕಂದಾಯ ಆಡಳಿತ ಅಧಿಕಾರಿಗಳಾದ ಮಾರುತಿ, ವಿದ್ಯಾಶ್ರೀ, ಶಿವಕುಮಾರ್, ನಂಜುಂಡ, ವಿಷಯ ನಿರ್ವಾಹಕರಾದ ಮಹೇಶ್ವರಿ ಸಿಬ್ಬಂದಿಗಳಾದ ನಿಂಗರಾಜು, ಕೃಷ್ಣ ಮೂರ್ತಿ, ಸಿದ್ದರಾಜು, ಶಿವಚಂದ್ರ, ಇನ್ನಿತರರು ಇದ್ದರು.
-
Chikmagalur17 hours agoವೈದ್ಯಕೀಯ ವಿಭಾಗದ ಕ್ಯಾಪ್ಟನ್ ಡಾ.ಸಾತ್ವಿಕ್ ಅರುಣ್ಗೆ ಅದ್ದೂರಿ ಸ್ವಾಗತ ಕೋರಿದ ಗ್ರಾಮಸ್ಥರು
-
Hassan13 hours agoಅಸಹಾಯಕ ಮಹಿಳೆಗೆ ಧಮ್ಕಿ ಹಾಕಿದ ಎಎಸ್ಐ ದೇವರಾಜ್
-
Special23 hours agoಪಿ ಎಂ ಆವಾಸ್ ಯೋಜನೆಯಿಂದ ಮನೆಕಟ್ಟಲು ಸಬ್ಸಿಡಿ!
-
Kodagu13 hours agoಕುಂದಚೇರಿ ಗ್ರಾ.ಪಂ. ನೂತನ ಕಟ್ಟಡ ಉದ್ಘಾಟಿಸಿದ ಶಾಸಕ ಎ.ಎಸ್.ಪೊನ್ನಣ್ಣ
-
State17 hours agoಉಳಿತಾಯದ ಹೂಡಿಕೆಗಳು MSIL ಸಂಸ್ಥೆಯಲ್ಲಿ ಸುಭದ್ರ ಗ್ಯಾರಂಟಿ: ಸಿಎಂ ಸಿದ್ದರಾಮಯ್ಯ
-
Hassan14 hours agoರಾಷ್ಟ್ರೀಯ ಚಿಂತನೆ ಮೈಗೂಡಿಸಿಕೊಳ್ಳಿ : ಶಾಸಕ ಸಿಮೆಂಟ್ ಮಂಜು
-
Chamarajanagar19 hours agoಗುಬ್ಬಚ್ಚಿಗೂಡು ಜಾಗೃತಿ ಅಭಿಯಾನ: ಹನೂರಿನ ಶಾಲೆಗಳಲ್ಲಿ ಅರಿವು ಮೂಡಿಸಿದ ರೈತ ದಂಪತಿ
-
Hassan14 hours agoಮನೆಗಳ್ಳನ ಬಂಧನ : 140 ಗ್ರಾಂ.ಚಿನ್ನ ವಶ
