Connect with us

Chikmagalur

ಕಳೆದು ಹೋಗಿದ್ದ ಮೊಬೈಲ್ ಪತ್ತೆಹಚ್ಚಿ ಹಿಂತಿರುಗಿಸುತ್ತಿರುವ ಸೆನ್ ಠಾಣೆಯ ಪೊಲೀಸರ ಕಾರ್ಯ ಶ್ಲಾಘನೀಯ : ಎಸ್ಪಿ ವಿಕ್ರಮ ಅಮಟೆ

Published

on

ಚಿಕ್ಕಮಗಳೂರು: ಕದ್ದ ಮತ್ತು ಕಳೆದುಹೋದ ಮೊಬೈಲ್ ಫೋನ್ ಗಳನ್ನು ಸಿಇಐಆರ್ ವ್ಯವಸ್ಥೆಯ ಮೂಲಕ ಪತ್ತೆಹಚ್ಚಿ, ಮೊಬೈಲ್‌ಗಳನ್ನು ಮಾಲೀಕರಿಗೆ ಹಿಂತಿರುಗಿಸುವಲ್ಲಿ ಪೊಲೀಸ್ ಇಲಾಖೆಯ ಕಾರ್ಯ ಶ್ಲಾಘನೀಯ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ. ವಿಕ್ರಮ ಅಮಟೆ ತಿಳಿಸಿದರು.

ಇಂದು ಜಿಲ್ಲಾ ಪೊಲೀಸ್ ಕಚೇರಿ ಸಭಾಂಗಣದಲ್ಲಿ CEIR ಪೋರ್ಟಲ್ ಗೆ ಸಂಬಂಧಿಸಿದಂತೆ ವಶಪಡಿಸಿಕೊಂಡ ಮೊಬೈಲ್ ಫೋನ್ ಗಳನ್ನು ವಾರಸುದಾರರಿಗೆ ಹಿಂದಿರುಗಿಸುವ ಸಂಬಂಧ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಫೋನ್‌ಗಳನ್ನು ಪತ್ತೆ ಹಚ್ಚುವಲ್ಲಿ ಕೇಂದ್ರ ಸಲಕರಣೆ ಗುರುತಿಸುವಿಕೆ ನೋಂದಣಿ (Central Equipment Identity Register- CEIR) ವ್ಯವಸ್ಥೆ ಸಹಕಾರಿಯಾಗಿದ್ದು, ಈ ಸೇವೆಯನ್ನು ಬಳಸಿಕೊಂಡು ಪೊಲೀಸರು ಇಂತದ್ದೊಂದು ಯಶಸ್ವಿ ಕಾರ್ಯಚರಣೆ ಮಾಡಿದ್ದಾರೆ. ಅದಲ್ಲದೇ ಈ ತಂತ್ರಜ್ಞಾನ ಫೋನ್‌ ಕಳ್ಳರಿಗೆ ಒಂದು ಎಚ್ಚರಿಕೆಯ ಗಂಟೆಯಾಗಿದೆ ಎಂದು ಹೇಳಿದರು.

ಈ ಪೋರ್ಟಲ್ ಮೂಲಕ ಕಳೆದು ಹೋದ 200 ಮೊಬೈಲ್ ಗಳನ್ನು ಪತ್ತೆ ಹಚ್ಚಿದ ನಮ್ಮ ಎಲ್ಲಾ ಠಾಣಾಧಿಕಾರಿಗಳು, ಅದರಲ್ಲೂ ಮುಖ್ಯವಾಗಿ CEIR ಠಾಣೆಯ ಪೊಲೀಸರು ಮೊಬೈಲ್ ಟ್ರೇಸ್ ಮಾಡುವುದಲ್ಲಿ ಯಶಸ್ವಿಯಾಗಿದ್ದಾರೆ. 2022 ರ ನಂತರ CEIR ಪೋರ್ಟಲ್ ನಲ್ಲಿ ಕಳೆದುಹೋದ ಮೊಬೈಲ್ ನ ದಾಖಲೆಗಳನ್ನು ಹಾಕಿದರೆ ಆ ದಾಖಲೆಗಳ ಅನುಸಾರ ಮೊಬೈಲ್ ನನ್ನು ಹುಡುಕಲು ಸಹಾಯ ಆಗುತ್ತದೆ. ಈ ಮೂಲಕ ಕಳೆದುಹೋದ ಮೊಬೈಲ್ ನನ್ನ ಟ್ರೇಸ್ ಮಾಡಬಹುದು ಅಲ್ಲದೆ ಅದು ಯಾವುದೇ ಕ್ರಿಮಿನಲ್ ಪ್ರಕರಣಗಳಿಗೆ ಬಳಸಿದಂತೆ ಅದನ್ನು ಬ್ಲಾಕ್ ಮಾಡಬಹುದು ಎಂದು ತಿಳಿಸಿದರು.

ಹಿಂದೆ ಮೊಬೈಲ್ ಕಳೆದುಕೊಂಡವರಿಗೆ ಮೊಬೈಲ್ ಫೋನ್ ಮರಳಿ ಸಿಗುವುದೇ ಕಷ್ಟ ಆಗಿತ್ತು ಆದರೆ ಈ ವಿಶೇಷವಾದ ಪೋರ್ಟಲ್ ನಿಂದ ಪೊಲೀಸರು ಮೊಬೈಲ್ ಗಳನ್ನ ಟ್ರೇಸ್ ಮಾಡಿ ವಾರಸುದಾರರಿಗೆ ಹಿಂತಿರುಗಿಸುತ್ತಿದ್ದಾರೆ. ಒಂದು ವೇಳೆ ಯಾವುದಾದರೂ ಮೊಬೈಲ್ ಕಳ್ಳತನವಾದರೆ ಅಥವಾ ಕಳೆದು ಹೋದರೆ ಅದರ ವಾರಸುದಾರರು ತಕ್ಷಣ CEIR ಪೋರ್ಟಲ್ ನಲ್ಲಿ ಮೊಬೈಲ್ ಮಾಹಿತಿಯನ್ನು ದಾಖಲಿಸಬೇಕು. ಅವರಿಗೆ ಅದು ಸಾಧ್ಯವಾಗದಿದ್ದಲ್ಲಿ ಹತ್ತಿರದ ಪೊಲೀಸ್ ಠಾಣೆಗೆ ಬಂದು ದೂರನ್ನು ನೀಡಬೇಕು. ಅದನ್ನು ಹುಡುಕಿ ಕೊಡುವುದರ ಜೊತೆಗೆ ಅದು ಯಾವುದೇ ಅಪರಾಧ ಕೃತ್ಯಗಳಿಗೆ ಬಳಸಿಕೊಳ್ಳದಂತೆ ನೋಡಿಕೊಳ್ಳುವುದು ನಮ್ಮ ಪೊಲೀಸ್ ಇಲಾಖೆಯ ಜವಾಬ್ದಾರಿ ಎಂದು ಸಾರ್ವಜನಿಕರಿಗೆ ಮಾಹಿತಿ ನೀಡಿದ್ದರು.

ಈ‌ ಕಾರ್ಯಾಚರಣೆಯಲ್ಲಿ ಪಿಐ ಗವಿರಾಜ್, ಪಿಎಸ್ ಐ ಗಳಾದ ರಘುನಾಥ್, ವಿಶ್ವನಾಥ್, ಸಿಬ್ಬಂದಿಗಳಾದ ಅನ್ವರ್, ಹರಿಪ್ರಸಾದ್, ಹರೀಶ್, ಮಹೇಂದ್ರ, ರಮೇಶ್, ಶಿವು, ಧರ್ಮರಾಜ್, ಶೀಲಾ, ಮಾನಸ, ಸವಿತ ಪಾಲ್ಗೊಂಡಿದ್ದರು.

Continue Reading
Click to comment

Leave a Reply

Your email address will not be published. Required fields are marked *

Chikmagalur

ವಿದ್ಯುತ್ ಸ್ಪರ್ಶಿಸಿ ಯುವಕ ಸಾವು

Published

on

ಚಿಕ್ಕಮಗಳೂರು ವಿದ್ಯುತ್ ಸ್ಪರ್ಶಿಸಿ ಯುವಕ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಗಂಜಲಗೋಡು ಗ್ರಾಮದಲ್ಲಿ ಸಂಭವಿಸಿದೆ.

ನಿನ್ನೆ ಸುರಿದ ಭಾರಿ ಮಳೆಯಿಂದಾಗಿ ಕೃಷಿ ಜಮೀನಿನಲ್ಲಿ ಕೆಳಕ್ಕೆ ಜಗ್ಗಿದ್ದ ಮೈನ್ಸ್ ವಯರ್ ಸರಿಪಡಿಸಲು ಹೋಗಿ‍, ವಿದ್ಯುತ್ ಪ್ರವಹಿಸಿ ಗಂಜಲಗೂಡು ಗ್ರಾಮದ 23 ವರ್ಷದ ಯುವಕ ಜೀವಿತ್ ಸ್ಥಳದಲ್ಲಿ ಮೃತಪಟ್ಟಿದ್ದಾನೆ‌.

ಕಳೆದ ಎರಡು ವರ್ಷಗಳ ಹಿಂದೆ ಜೀವಿತ್ ತಂದೆ ಶೇಖರಪ್ಪ ಸಾವನ್ನಪ್ಪಿದ ಬಳಿಕ ಜೀವಿತ್ ಸಂಪೂರ್ಣವಾಗಿ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದ. ಇಂದು ಸಂಭವಿಸಿದ ವಿದ್ಯುತ್ ಅವಘಡದಲ್ಲಿ ಜೀವಿತ್ ಮೃತಪಟ್ಟಿದ್ದು ಮೃತ ಜೀವಿತ್ ತಾಯಿ ರೇಣುಕ ಅನಾಥರಾಗಿದ್ದಾರೆ. ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ‌.

Continue Reading

Chikmagalur

ಅಕ್ರಮ ಪಿಸ್ತೂಲ್ ಹೊಂದಿದ ಇಬ್ಬರ ಬಂಧನ

Published

on

ಮಂಗಳೂರು: ಅಕ್ರಮ ಶಸ್ತ್ರಾಸ್ತ್ರವಾದ ಪಿಸ್ತೂಲ್ ನ್ನು ವಶದಲ್ಲಿರಿಸಿಕೊಂಡಿರುವ ಆರೋಪಿಗಳಿಬ್ಬರನ್ನು ಮಂಗಳೂರು ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.

ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ಮುಹಮ್ಮದ್ ಅಸ್ಗರ್(26), ಅಬ್ದುಲ್ ನಿಸಾರ್.ಕೆ(29) ಬಂಧಿತರು.

ಉಳ್ಳಾಲ ತಾಲೂಕು ತಲಪಾಡಿ ಗ್ರಾಮದ ಪಿಲಿಕೂರು ಎಂಬಲ್ಲಿ ಇಬ್ಬರು ವ್ಯಕ್ತಿಗಳು ಕಪ್ಪು ಬಣ್ಣದ ಕಾರಿನಲ್ಲಿ ಯಾವುದೇ ಪರವಾನಿಗೆ ಇಲ್ಲದೇ ಅಕ್ರಮವಾಗಿ ಮಾರಕಾಯುಧವಾದ ಪಿಸ್ತೂಲ್ ನ್ನು ವಶದಲ್ಲಿರಿಸಿಕೊಂಡು ಯಾವುದೋ ದುಷ್ಕೃತ್ಯವನ್ನು ನಡೆಸುವುದಕ್ಕಾಗಿ ತಿರುಗಾಡುತ್ತಿದ್ದರೆಂಬ ಬಗ್ಗೆ ಖಚಿತ ಮಾಹಿತಿ ಪಡೆದ ಮಂಗಳೂರು ಸಿಸಿಬಿ ಪೊಲೀಸರು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.

ಆರೋಪಿಗಳಿಂದ ಪಿಸ್ತೂಲ್, ಎರಡು ಸಜೀವ ಮದ್ದುಗುಂಡುಗಳು, ಎರಡು ಮೊಬೈಲ್ ಫೋನುಗಳು, ಹಾಗೂ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಸೊತ್ತಿನ ಒಟ್ಟು ಮೌಲ್ಯ ರೂ. 7,15,000/- ಆಗಬಹುದು ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಆರೋಪಿಯ ಪೈಕಿ ಮುಹಮ್ಮದ್ ಅಸ್ಗರ್ ಎಂಬಾತನ ವಿರುದ್ಧ ಈ ಹಿಂದೆ ಕೇರಳದ ಕಾಸರಗೋಡು ಜಿಲ್ಲೆಯ ಮಂಜೇಶ್ವರ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ, ಅಪಹರಣ, ಹಲ್ಲೆ ಪ್ರಕರಣ ಮತ್ತು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಗಾಂಜಾ ಮಾರಾಟ ಪ್ರಕರಣ ಹಾಗೂ ಬೆಂಗಳೂರು ನಗರದ ಬೈಯಪ್ಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಗಾಂಜಾ ಸಾಗಾಟದ ಪ್ರಕರಣ ಹೀಗೆ ಒಟ್ಟು 8 ಪ್ರಕರಣಗಳು ದಾಖಲಾಗಿರುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.

Continue Reading

Agriculture

ಗಾಳಿಮಳೆಗೆ ನೆಲಕಚ್ಚಿದ ಭತ್ತದ ಬೆಳೆ

Published

on

ದಾವಣಗೆರೆ. ಮೇ.೧೯; ಮಳೆಗಾಳಿಗೆ ದಾವಣಗೆರೆ ಸಮೀಪದ ದೊಡ್ಡಬಾತಿ ಗ್ರಾಮದಲ್ಲಿ ನೂರಾರು ಎಕರೆ ಭತ್ತದ ಬೆಳೆ ನೆಲಕಚ್ಚಿದೆ.ಫಸಲಿಗೆ ಬಂದಿದ್ದ ಭತ್ತ ಕಟಾವಿಗೆ ಮುನ್ನವೇ

ನೀರುಪಾಲಾಗಿದೆ.ಕಳೆದ ಸಂಜೆ ಬೀಸಿದ ಗಾಳಿಮಳೆಗೆ ಭತ್ತದ ಬೆಳೆ‌ಗೆ ಹಾನಿಯಾಗಿದೆ.ಬರದ ನಡುವೆಯೂ ಕೊಳವೆಬಾವಿಯ ಮೂಲಕ ಭತ್ತ ಬೆಳೆದಿದ್ದ ರೈತರಿಗೆ ಮಳೆಯಾಗಿದ್ದು ಒಂದುಕಡೆ ಸಂತಸ ತಂದರೆ ಮತ್ತೊಂದೆಡೆ ಬೆಳೆದ ಭತ್ತ ನೀರುಪಾಗಿದೆ ಇದರಿಂದ ರೈತರು ಆತಂಕಕ್ಕೊಳಗಾಗಿದ್ದಾರೆ. ಈ ವೇಳೆ ದೊಡ್ಡಬಾತಿ ಗ್ರಾಮದ ರೈತ ಉಮೇಶ್ ಮಾತನಾಡಿ ಸಾಲಮಾಡಿ ನನ್ನ ಒಂದು ಎಕರೆ ಜಮೀನಿನಲ್ಲಿ ಭತ್ತ ಬೆಳೆದಿದ್ದೆ ಆದರೆ ಇದೀಗ ಬೆಳೆಯೆಲ್ಲಾ

ನೆಲಕಚ್ಚಿದೆ.ಐವತ್ತು ಸಾವಿರ ಲಾಭ ತೆಗೆಯುವ ಕನಸು ಕಂಡಿದ್ದೆ.ಮಳೆಯಿಲ್ಲದೇ ಬರ ಆವರಿಸಿದ್ದರು ಕೊಳವೆಬಾವಿ ಮೂಲಕ ನೀರು ಹರಿಸಿ ಭತ್ತ ನಾಟಿ ಮಾಡಿದ್ದೆ ಹಗಲು ರಾತ್ರಿ ಕರೆಂಟ್ ಗೆ ನೀರು ಹಾಯಿಸಿದ್ದೇಲ್ಲಾ ನೀರಿನಲ್ಲಿ

ಹೋಮ‌ಮಾಡಿದಂತಾಗಿದೆ.ಅಧಿಕಾರಿಗಳು ನಮ್ಮ ಜಮೀನಿಗೆ ಭೇಟಿ‌ನೀಡಿ ನಮಗಾದ ನಷ್ಟ. ಭರಿಸಿಕೊಡಬೇಕು ಎಂದು ಅಳಲು ತೊಡಿಕೊಂಡರು.ದೊಡ್ಡಬಾತಿ ಗ್ರಾಮದ ಹಲವೆಡೆ ಬೆಳೆದ ಭತ್ತ ನೀರುಪಾಲಾಗಿದ್ದು ರೈತರು ಸಂಕಷ್ಟದಲ್ಲಿದ್ದಾರೆ.

Continue Reading

Trending

error: Content is protected !!