Kodagu
ಪ್ರಥಮ ಮತದಾನ : ದೇಶದ ಅಭಿವೃದ್ಧಿ ಗಾಗಿ : ವಿದ್ಯಾರ್ಥಿ ಪ್ರೀತಿ

ಸಾಲಿಗ್ರಾಮ : ಪ್ರಥಮ ಮತದಾನ ಮಾಡುವ ಅವಕಾಶ ಸಿಕ್ಕಿರುವುದು ನನಗೆ ತುಂಬಾ ಖುಷಿ ಯಾಗಿದೆ. ಮತದಾನ ಮಾಡುತ್ತಿರುವ ಬಗ್ಗೆ ಹೆಮ್ಮೆ ಇದೆ. ಎಂದು ಪ್ರಥಮ ಮತದಾನ ಮಾಡಿದ ವಿದ್ಯಾರ್ಥಿ ಪ್ರೀತಿ ಹೇಳಿದರು.
ಸಾಲಿಗ್ರಾಮ ಪಟ್ಟಣದಲ್ಲಿ ಮತದಾನ ಮಾಡಿ ಮಾತನಾಡಿದ ಇವರು ದೇಶದ ಅಭಿವೃದ್ಧಿ ಹಾಗೂ ಉತ್ತಮ ಸರ್ಕಾರ ರಚನೆಗೆ ಒಂದೊಂದು ಮತವು ಅಮೂಲ್ಯ, ನನ್ನ ಮತದ ಮೌಲ್ಯವನ್ನು ಅರಿವು ಮತಗಟ್ಟೆಗೆ ಹೋಗಿ ಸೂಕ್ತ ಅಭ್ಯರ್ಥಿ ಗೆ ಮತ ಮಾಡಿರುತ್ತೇನೆ.
ದೇಶದ ಅಭಿವೃದ್ಧಿ ಯಲ್ಲಿ ಯುವ ಶಕ್ತಿಯ ಪಾತ್ರ ಎಷ್ಟು ಮುಖ್ಯವೊ, ಚುನಾವಣೆ ಯಲ್ಲಿ ಅರ್ಹ ಅಭ್ಯರ್ಥಿ ಆಯ್ಕೆ ಯೂ ಅಷ್ಟೆ ಮುಖ್ಯ,ಅದಕ್ಕೆ ಸಂವಿಧಾನ ನೀಡಿರುವ ಪ್ರಮುಖ ಅಸ್ತ್ರವೇ ಮತದಾನ, ಪ್ರಪ್ರಥಮ ಬಾರಿಗೆ ಲೋಕಸಭೆಯ ಮತದಾನದ ಹಕ್ಕು ಪಡೆದಿರುವ ನಾವುಗಳು ಮತದಾನ ಮಾಡಿದೆವು ತುಂಬಾ ಖುಷಿಯಾಗಿದೆ ಎಂದರು.
Kodagu
ಲೇಖನ – ಬಾಳೆಯಡ ಕಿಶನ್ ಪೂವಯ್ಯ ಲೇಖಕರು ಮತ್ತು ವಕೀಲರು

ಪೋನ್: 9448899554
ನುಡಿ ನಮನ
ಕಾಂಗ್ರೇಸ್ ಪಕ್ಷದಲ್ಲಿನ ಮತ್ತೊಂದು ಕೊಂಡಿ ಕಳೆದುಕೊಂಡಿದೆ.
ಶಿವುಮಾದಪ್ಪ ನಿಧನದಿಂದ ಕಾಂಗ್ರೇಸ್ ಪಕ್ಷದಲ್ಲಿನ ಮತ್ತೊಂದು ಕೊಂಡಿ ಕಳೆದುಕೊಂಡಿದೆ ಎನ್ನಬಹುದು. ನಾನು ರಾಜಕೀಯದಲ್ಲಿ ಸಕ್ರಿಯನಾದರು ಯಾವುದೇ ನಾಯಕರೊಡನೇ ಒಡನಾಟ ಕಮ್ಮಿ ಏಕೆಂದರೆ ನನಗೆ ಅನಾವಶ್ಯಕವಾಗಿ ಅವರಿಗೆ ಕಿರಿಕಿರಿ ಮಾಡಲು ಇಷ್ಟ ಇಲ್ಲ ಅದು ಎಲ್ಲಾ ನಾಯಕರುಗಳಿಗೂ ಗೊತ್ತು. ಆದರೆ ಎಲ್ಲರೊಡನೆ ಉತ್ತಮ ಬಾಂದವ್ಯ ಇಟ್ಟುಕೊಂಡಿರುತ್ತೇನೆ. ಪಕ್ಷದ ಕೆಲಸ ಮಾಡಿ ಸುಮ್ಮನೆ ಇದ್ದು ಬಿಡುತ್ತಿದ್ದೆ. ನಾನು ಮಾನಸಿಕವಾಗಿ ನೋವು ಅನುಭವಿಸಿದ್ದು, ಃ.ಖಿ ಪ್ರದೀಪ್ ಅವರನ್ನು ಕಳೆದುಕೊಂಡಾಗ ಮನದಲ್ಲಿ ಒಂದು ರೀತಿಯ ಮಾನಸಿಕ ಹಿಂಸೆ ಅನುಭವಿಸಿದೆ. ನಾನು ಮೊದಲೇ ಹೇಳಿದಂತೆ ನನಗೆ ಅವರ ಒಡನೆ ಹೇಳಿಕೊಳ್ಳುವ ಒಡನಾಟ ಇರಲಿಲ್ಲ. ಆದರೂ ಅವರು ಮನಸ್ಸಿಗೆ ನಾಟಿಕೊಂಡಿದ್ದರು. ನಾನು ನಾಪೋಕ್ಲುವಿನ ತೋಟಕ್ಕೆ ಬೆಳಿಗ್ಗೆ ೭ ಗಂಟೆಗೆ ಹೋಗುವಾಗ ದಾರಿಯಲ್ಲಿ ಅವರ ಕಾರು ಸಿಗುತ್ತಿತ್ತು. ಅಷ್ಟು ಹೊತ್ತಿಗೆ ಮನೆ ಬಿಟ್ಟರೆ ಹಿಂದುರುಗುವುದು ರಾತ್ರಿ ಇದರಲ್ಲಿ ವಿಶೇಷ ಏನು ಇಲ್ಲ. ಎಲ್ಲಾ ರಾಜಕಾರಣಿಗಳು ಮಾಡುವುದು ಇದೇ ಕೆಲಸ, ಇಲ್ಲಿ ಪ್ರಶ್ನೆ ಏನೆಂದರೆ ಇಷ್ಟು ಕಷ್ಟ ಪಟ್ಟು ಪಕ್ಷ ಕಟ್ಟಿ ಕಾಣದ ಕೈಗಳ ಷಡ್ಯಂತ್ರಕ್ಕೆ ಸಿಲುಕಿ ದಿಡೀರನೆ ಅಧಿಕಾರ ಕಳೆದುಕೊಂಡು ಮೂಲೆ ಗುಂಪಾದದ್ದು ರಾಜಕೀಯದಲ್ಲೊಂದು ದುರಂತ ಅಂದು ಸಜ್ಜನ ರಾಜಕಾರಣಿ ಒಬ್ಬರು ನಮ್ಮಿಂದ ದೂರವಾದರೂ ಅವರ ನೆನಪು ನನ್ನನ್ನು ಬಹುದಿನಗಳವರೆಗೆ ಕಾಡಿತ್ತು. ಅವರು ನನ್ನನ್ನು ಎನ್. ಬಾಳೆಯಡ ಎಳತ್‌ಕಾರ ಎಂದೇ ಕರೆಯುತ್ತಿದ್ದರು. ಯಾವಾಗಲೂ ನೋಡಿದರೂ ಅದೇ ಮುಗುಳ್ನಗೆ.
ಮೊನ್ನೆ ಅಕಾಲಿಕವಾಗಿ ನಮ್ಮನ್ನು ಅಗಲಿದ ಶಿವು ಮಾದಪ್ಪನ ನಿಧನ ಸುದ್ದಿ ಕೇಳಿದ ತಕ್ಷಣ ಮನದಲ್ಲಿ ಬಂದದ್ದು ಃ.ಖಿ. ಪ್ರದೀಪ್ ಚಿತ್ರ. ರಾಜಕೀಯದ ಷಡ್ಯಂತ್ರಕ್ಕೆ ಇನ್ನೊಂದು ಜೀವ ಬಲಿಯಾಯಿತು ಅನ್ನಿಸುತ್ತೆ. ಈ ಇಬ್ಬರು ನಾಯಕರದ್ದು ತದ್ವಿರುದ್ಧ ಸ್ವಭಾವ ಒಬ್ಬರದು ಸೌಮ್ಯ ಇನ್ನೊಬ್ಬರು ಡೈನಾಮಿಕ್ ಯಾರನ್ನೂ ಕೇರ್ ಮಾಡದ ಸ್ವಾಭಿಮಾನ, ಶಿವು ತಳಮಟ್ಟದಿಂದ ರಾಜಕೀಯ ಮಾಡಿ ಮೇಲೆ ಬಂದವರು ಹಾಗೇ ನೋಡಿದ್ರೆ ಅವರಿಗೆ ಹಣ ಮತ್ತು ರಾಜ್ಯ ಮತ್ತೆ ಕೇಂದ್ರದ ನಾಯಕರ ನೇರ, ಸಂಪರ್ಕ ಇದ್ದವರು ಅವರಿಗೆ ಜನ ಸೇವೆ ಮಾಡದೇ, ಹಣ ಖರ್ಚು ಮಾಡದೇ ಪಕ್ಷದಲ್ಲಿ ಹುದ್ದೆ ಪಡೆಯಬಹುದಿತ್ತು. ಆದರೆ ಅವರು ರಾಜಕೀಯವನ್ನು ಹವ್ಯಾಸವನ್ನಾಗಿ ಮಾಡಿಕೊಳ್ಳದೆ ವೃತ್ತಿಯಾಗಿ ಕೆಲಸ ಮಾಡಿದವರು ಗ್ರಾಮ ಪಂಚಾಯತ್‌ನಿಂದ ಜಿಲ್ಲಾ ಪಂಚಾಯತ್‌ವರೆಗೆ ಗ್ರಾಮ ಮಟ್ಟದಿಂದ ಜಿಲ್ಲಾಧ್ಯಕ್ಷ ಪಟ್ಟವನ್ನು ಸ್ವಸಾಮರ್ಥ್ಯವಾಗಿ ಪಡೆದವರು. ಬಿಜೆಪಿಯ ಭದ್ರಕೋಟೆಯಲ್ಲಿ ಕಾಂಗ್ರೇಸನ್ನು ಭದ್ರವಾಗಿ ಕಟ್ಟಿ ಬೆಳೆಸಿದವರು.
ಅವರು ಜಿಲ್ಲಾಅಧ್ಯಕ್ಷರು ಆದಾಗ ಪಕ್ಷಕ್ಕೆ ಜೀವ ಬರತೊಡಗಿತು. ಆದರೆ ಪಕ್ಷದ ಒಳ ರಾಜಕೀಯಕ್ಕೆ ಬಲಿಯಾದ ಇವರು ಜಿಲ್ಲಾ ಅಧ್ಯಕ್ಷ ಪಟ್ಟವನ್ನು ದಿಡೀರನೆ ಕಳೆದುಕೊಂಡರು. ಅನಂತರದ ದಿನಗಳಲ್ಲಿ ವ್ಯವಸ್ಥೆ ಅವರನ್ನು ರಾಜಕೀಯದಿಂದ ದೂರ ಮಾಡಿತೋ ಅಲ್ಲ ಅವರೇ ರಾಜಕೀಯದಿಂದ ದೂರವಾದರು ತಿಳಿಯದು. ಇತ್ತೀಚಿನ ದಿನಗಳಲ್ಲಿ ಪಕ್ಷದ ಕಾರ್ಯಕ್ರಮಗಳಿಂದ ದೂರ ಉಳಿದರು. ಅವರು ಬಂಡಾಯದ ಬಾವುಟವನ್ನು ಹಾರಿಸಲಿಲ್ಲ, ಪಕ್ಷವನ್ನು ಬಿಡಲಿಲ್ಲ, ಒಂದೇ ಒಂದು ವಿರುದ್ಧ ಹೇಳಿಕೆ ನೀಡಲಿಲ್ಲ. ಕೊನೆಯವರೆಗೂ ಪಕ್ಷದ ನಿಷ್ಟಾವಂತ ಕಾರ್ಯಕರ್ತನಾಗಿ ಉಳಿದು ಬೇರೆಯವರಿಗೆ ಮಾದರಿಯಾಗಿ ಉಳಿದರು. ಒಂದು ಗ್ರಾಮಪಂಚಾಯತ್ ಟಿಕೆಟ್ ಸಿಕ್ಕದಿದ್ದರೆ ಬಂಡಾಯದ ಬಾವುಟ ಹಾರಿಸಿ ಬೇರೆ ಹುದ್ದೆ ಪಡೆಯಲು ಬ್ಲಾಕ್‌ಮೇಲ್ ನಡೆಸುವಂತ ಕಾಲದಲ್ಲಿ ಅವರು ಎಂದು ಪಕ್ಷ ವಿರೋಧಿ ಚಟುವಟಿಕೆ ನಡಿಸಲಿಲ್ಲ.
ಇವರ ನಡುವಳಿಕೆ ರಾಜಕೀಯದಲ್ಲಿ ಇತರರಿಗೆ ಮಾದರಿ ಅಧಿಕಾರ ಇರುವರೆಗೆ ನಾಯಕರ ಹಿಂದೆ ಗುಂಪು ಆವರಿಸುವುದು ಸಕ್ಕರೆ ಇರುವಲ್ಲಿ ಇರುವೆ ಮುತ್ತುವುದು ಸರ್ವೇ ಸಾಮಾನ್ಯ ಹಾಗೇ ಈಗ ಪತ್ರಿಕೆಯಲ್ಲಿ ಸಾಮಾಜಿಕ ಜಾಲದಲ್ಲಿ ವಿವಿಧ ರೀತಿಯ ಸ್ಲೋಗನ್ ಕಂಡು ಹಾಗೂ ಕೇಳಿ ಬರುತ್ತಿದೆ. ಕೇಳಲು ನೀನಿಲ್ಲ ಗೆಳೆಯ ಮತ್ತೋಮ್ಮೆ ಹುಟ್ಟಿ ಬನ್ನಿ ಎಂದು ಕರೆಯುತ್ತಾರೆ ಅಂತ ಬರಬೇಡ ಸ್ವಾರ್ಥದ ರಾಜಕೀಯ ನಿನ್ನನ್ನು ಬಲಿ ಪಡೆಯಿತು. ನಿನ್ನ ಕೊನೆ ದಿನಗಳಲ್ಲಿ ನೀನೇಷ್ಟು ಅಂತರ್ ಮುಖಿಯಾಗಿದ್ದೆ ಎಂಬುದು ನಿನ್ನ ಅರಿತವರಿಗೆ ಗೊತ್ತು ಹೊರತು ಅಧಿಕಾರ ಇದ್ದಾಗ ನಿನ್ನ ಬಳಸಿಕೊಂಡವರಿಗೆ ಹೇಗೆ ಗೊತ್ತಾಗಬೇಕು ಇಲ್ಲಿ ಅಧಿಕಾರ ಪದವಿ ಹಣ ಇದ್ದಾಗ ಎಲ್ಲರೂ ನಮ್ಮವರು ಹೋದರೆ ನಾವು ಒಂಟಿ ಅಂದು ಪ್ರದೀಪ್ ಸತ್ತಾಗ ಜನ ಇದೇ ರೀತಿಯ ಕೂಗು ಕೇಳಿ ಬಂತು. ಈಗ ಪ್ರದೀಪ್ ಯಾರು ಅಂತ ಗೊತ್ತಿಲ್ಲ. ಇನ್ನೂ ಕೆಲವೇ ದಿನಗಳಲ್ಲಿ ನಾವೆಲ್ಲ ನಿನ್ನ ಮರೆತು ಬಿಡುತ್ತೇವೆ ಈಗಿನ ಸಮಾಜದ ವ್ಯವಸ್ಥೆಯೇ ಹಾಗೇ ನಿನ್ನ ಮನೆಯವರಿಗೆ ಮಾತ್ರ ನಷ್ಟ ಹೊರತು ಸಮಾಜಕಲ್ಲ ಎಂಬುದಂತು ಕಟು ಸತ್ಯ ಇತ್ತೀಚಿಗೆ ಪತ್ರಿಕೆಯಲ್ಲಿ ಓದಿದ ನೆನಪು ಮಾಜಿ ಸಚಿವರು ಲೋಕಸಭಾ ಸದಸದ್ಯರು ಆದ ಹೆಚ್.ವಿಶ್ವನಾಥ್ ರವರು ಕುಂಭಮೇಳದಲ್ಲಿ ದಿವಂಗತ ಪ್ರದೀಪ್ ರವರ ನೆನಪು ಮಾಡಿಕೊಂಡು ಅವರಿಗೆ ಪಿಂಡ ಪ್ರಧಾನ ಮಾಡಿದರು, ಹಾಗೆಯೇ ಮುಂದಿನ ದಿನಗಳಲ್ಲಿ ನಿನನ್ನನ್ನು ಯಾರಾದರೂ ನೆನಪು ಮಾಡಿಕೊಂಡರೆ ಸಾರ್ವಜನಿಕ ಜೀವನದಲ್ಲಿ ನೀನು ಮಾಡಿದ ಸೇವೆಗೆ ಪ್ರತಿಫಲ ಎಂದು ಭಾವಿಸುತ್ತೇನೆ.
Kodagu
ಆಟವಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ಕೆರೆಗೆ ಬಿದ್ದು ಬಾಲಕಿ ಮೃ*ತ

ವರದಿ: ಸಿಂಗಿ ಸತೀಶ್
ಗೋಣಿಕೊಪ್ಪ: ಆಟವಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ಕೆರೆಗೆ ಬಿದ್ದು ಬಾಲಕಿಯೊಬ್ಬಳು ಮೃತಪಟ್ಟ ಘಟನೆ ಅತ್ತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೆನ್ನಂಗೋಲ್ಲಿ ಸಮೀಪ ಭಾನುವಾರ ನಡೆದಿದೆ.
ಚೆನ್ನಂಗೋಲ್ಲಿ ಸಮೀಪ ಕೆ.ಕೆ ತಿಮ್ಮಯ್ಯ ಅವರ ಕೆರೆಗೆ ನಾಲ್ಕನೇ ತರಗತಿ ವಿದ್ಯಾರ್ಥಿನಿ ಬಿದ್ದು ಸಾವನ್ನಪ್ಪಿದ್ದಾಳೆ.
ತಿಮ್ಮಯ್ಯ ಅವರ ಕಾಫಿ ತೋಟದ ಕಾರ್ಮಿಕರಾದ ಭವಾನಿ ಅವರ ಮಗಳು ಲಾವಣ್ಯ ಮೃತಪಟ್ಟ ದುರ್ದೈವಿಯಾಗಿದ್ದಾಳೆ.
ಭಾನುವಾರ ಕೆರೆಯ ದಡದಲ್ಲಿ ಆರು ವಿದ್ಯಾರ್ಥಿಗಳು ಆಟವಾಡುತ್ತಿದ್ದರು. ಮೃತಪಟ್ಟ ಲಾವಣ್ಯ, ಮತ್ತು ಉಷಾ, ಶೋಭಿತಾ ಈ ಮೂವರು ವಿದ್ಯಾರ್ಥಿಗಳು ಆಟವಾಡುವ ಉತ್ಸಾಹದಲ್ಲಿ ಕೆರೆಗೆ ಹಾರಿದ್ದಾರೆ. ತೋಟಕ್ಕೆ ನೀರು ಹಾಯಿಸಿದ್ದರಿಂದ ಕೆರೆಯಲ್ಲಿ ನೀರು ಬತ್ತಿ ಹೋಗಿದ್ದು, ಕೇವಲ ಕೆಸರಿನಿಂದ ತುಂಬಿತ್ತು. ಇದಲ್ಲಿ ಮೂವರು ಮಕ್ಕಳು ಕೆಸರಿನಲ್ಲಿ ಸಿಲುಕಿಕೊಂಡು ಕಿರುಚಾಡಿದ್ದಾರೆ.
ದಡದ ಮೇಲಿದ್ದ ಮೂರು ಮಕ್ಕಳು ಸಮೀಪದ ಪೋಷಕರಿಗೆ ಮಾಹಿತಿ ಮುಟ್ಟಿಸಲು ಹೋದಾಗ, ಈ ಮಾರ್ಗದ ಮೂಲಕ ಹಾದು ಹೋಗುತ್ತಿದ್ದ ಕಾರ್ಮಿಕರು ಮಕ್ಕಳನ್ನು ರಕ್ಷಿಸಲು ಮುಂದಾಗಿದ್ದಾರೆ.
ಕೆಸರಿನಲ್ಲಿ ಸಿಲುಕಿದ ಇಬ್ಬರು ಮಕ್ಕಳನ್ನ ರಕ್ಷಿಸಿದರೇ, ಲಾವಣ್ಯಳ ಜೀವ ಉಳಿಸಲು ಸಾಧ್ಯವಾಗಿಲ್ಲ.
ಶಾಲೆಯಲ್ಲಿ ಐದನೇ ತರಗತಿ ಓದುತ್ತಿರುವ ಪವನ್, 3ನೇ ತರಗತಿ ಓದುತ್ತಿರುವ ಲೋಹಿತ್, ಶರಣ್, ಶೋಭಿತಾ ಹಾಗೂ ನಾಲ್ಕನೇ ತರಗತಿಯಲ್ಲಿ ಓದುತ್ತಿರುವ ಉಷಾ ಮತ್ತು ಮೃತಪಟ್ಟ ಲಾವಣ್ಯ ಕಣ್ಣಮುಚ್ಚಾಲೆ ಆಟವಾಡುತ್ತಿದ್ದರು.
ಈ ಮಕ್ಕಳು ಚೆನ್ನಂಗೋಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದು ಸೋಮವಾರ ವಾರ್ಷಿಕ ಪರೀಕ್ಷೆಯನ್ನು ಬರೆಯಬೇಕಾಗಿತ್ತು. ವಿದ್ಯಾರ್ಥಿ ಮೃತಪಟ್ಟ ಹಿನ್ನೆಲೆ ಸೋಮವಾರ ಶಾಲೆಗೆ ರಜೆ ನೀಡಲಾಗಿದೆ ಎಂದು ಶಾಲೆಯ ಮುಖ್ಯ ಶಿಕ್ಷಕಿ ಗಿರಿಜಾ ಮಾಹಿತಿ ನೀಡಿದ್ದಾರೆ.
ಈ ಸಂಬಂಧ ಗೋಣಿಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kodagu
ಬಲ್ಲಮಾವಟಿ ಪೇರೂರು ಗ್ರಾಮದ ಲೈನ್ ಮನೆಯಲ್ಲಿ ಮಗುವಿಗೆ ಜನ್ಮ ನೀಡಿ ಮಹಿಳೆ ನಾಪತ್ತೆ – 112ಪೊಲೀಸರಿಂದ ಮಗುವಿನ ರಕ್ಷಣೆ

ವರದಿ:ಝಕರಿಯ ನಾಪೋಕ್ಲು
ನಾಪೋಕ್ಲು :ನಾಪೋಕ್ಲು ಸಮೀಪದ ಬಲ್ಲಮಾವಟಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಪೇರೂರು ಗ್ರಾಮದ ಲೈನ್ ಮನೆಯೊಂದರಲ್ಲಿ ಮಗುವಿಗೆ ಜನ್ಮ ನೀಡಿ ಮಹಿಳೆ ನಾಪತ್ತೆಯಾಗಿರುವ ಘಟನೆ ಶನಿವಾರ ರಾತ್ರಿ ವರದಿಯಾಗಿದೆ.
ಬಲ್ಲಮಾವಟಿ ಪೇರೂರು ಗ್ರಾಮದ ತೋಳಂಡ ಪೂಣಚ್ಚ ಎಂಬುವವರ ಲೈನ್ ಮನೆಯಲ್ಲಿ ಶನಿವಾರ ರಾತ್ರಿ (ದಿನಾಂಕ:15/03/2025/ 8.ಗಂಟೆಗೆ )ಮಹಿಳೆಯೊಬ್ಬರು ಹೆಣ್ಣು ಮಗುವಿಗೆ ಜನ್ಮ ನೀಡಿ ಬಳಿಕ ಬಿಟ್ಟುಪರಾರಿ ಯಾಗಿದ್ದಾಳೆ.
ಜನರು ವಾಸವಿಲ್ಲದ ಲೈನ್ ಮನೆಯಲ್ಲಿ ಮಗುವಿನ ಕೂಗು ಕೇಳಿದ ಸ್ಥಳೀಯರು ಮನೆ ಮಾಲೀಕ ಪೂಣಚ್ಚ ಎಂಬುವರಿಗೆ ಮಾಹಿತಿ ನೀಡಿದ್ದಾರೆ. ಪರಿಶೀಲಿಸಿದ ಮಾಲಿಕ ಪೂಣಚ್ಚ ಎಂಬುವವರು ಮಗುವಿನ ಬಳಿ ಯಾರು ಇಲ್ಲದಿರುವುದನ್ನು ಕಂಡು 112 ಪೊಲೀಸ್ ಕಂಟ್ರೋಲ್ ರೂಮಿಗೆ ಕರೆ ಮಾಡಿ ತಿಳಿಸಿದ್ದಾರೆ. ತಕ್ಷಣ
ಸ್ಥಳಕ್ಕೆ ಧಾವಿಸಿದ 112 ಸಿಬ್ಬಂದಿಗಳಾದ ಮುಖ್ಯಪೇದೆ ರಾಜೇಶ್, ಮತ್ತು ಮೊಣ್ಣಪ್ಪ ರವರು ಮಗುವನ್ನು ರಕ್ಷಿಸಿ ನಾಪೋಕ್ಲು ಸಮುದಾಯ ಅರೋಗ್ಯ ಕೇಂದ್ರಕ್ಕೆ ಕರೆತಂದು ಪ್ರಥಮ ಚಿಕಿತ್ಸೆ ಕೊಡಿಸಿ ಆಂಬುಲೆನ್ಸಲ್ಲಿ ಮಡಿಕೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಿ ರಕ್ತದ ಮಡುವಿನಲ್ಲಿ ಇರುವೆಗಳೊಂದಿಗೆ ಜೀವ ಕಳೆದುಕೊಳ್ಳುವ ಸ್ಥಿತಿಯಲ್ಲಿದ್ದ ಮಗುವನ್ನು ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.ಘಟನೆ ಸಂಬಂಧ ಮಡಿಕೇರಿ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿದ ನಾಪೋಕ್ಲು ಠಾಣಾಧಿಕಾರಿ ಮಂಜುನಾಥ್ ಮಗುವಿನ ಅರೋಗ್ಯದ ಬಗ್ಗೆ ವೈದ್ಯರಿಂದ ಮಾಹಿತಿ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.
-
Chamarajanagar22 hours ago
ಕಾಂಗ್ರೆಸ್ ಗೆ ಭರ್ಜರಿ ಗೆಲುವು
-
Uncategorized21 hours ago
ಕಾಡಾನೆ ಸೆರೆ ಕಾರ್ಯಾಚರಣೆ ಯಶಸ್ವಿ: ಪುಂಡಾನೆ ಸೆರೆ ಹಿಡಿದ ಕ್ಯಾಪ್ಟನ್ ಪ್ರಶಾಂತ್ ಅಂಡ್ ಟೀಮ್
-
Chamarajanagar22 hours ago
ಕಾರು ಅಪಘಾತ ಇಬ್ಬರು ಸ್ಥಳದಲ್ಲೇ ಮೃತ
-
Chikmagalur24 hours ago
ಹತ್ತು ಲಕ್ಷ ಮೌಲ್ಯದ 11 ಬೈಕ್ ಕದ್ದಿದ್ದ ಕಳ್ಳನ ಬಂಧನ
-
National - International14 hours ago
ಪಾಕ್ನ 90 ಮಂದಿ ಸೈನಿಕರನ್ನು ಹತ್ಯೆ ಮಾಡಿದ್ದೇವೆ ಎಂದ ಬಲೂಚ್ ಲಿಬರೇಶನ್ ಆರ್ಮಿ
-
Chamarajanagar16 hours ago
ತಲೆಯಲ್ಲಿ ಕೂದಲಿಲ್ಲ ಎಂದು ನಿಂದಿಸಿದ ಪತ್ನಿ: ಮನನೊಂದ ಪತಿ ಆತ್ಮ*ಹತ್ಯೆ
-
Kodagu15 hours ago
ಆಟವಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ಕೆರೆಗೆ ಬಿದ್ದು ಬಾಲಕಿ ಮೃ*ತ
-
Mandya19 hours ago
ಮಳವಳ್ಳಿ ವಸತಿ ಶಾಲೆಯ ದುರ್ಘಟನೆ : ಎಚ್ಡಿಕೆ ಕಳವಳ