Connect with us

Kodagu

ಕುಶಾಲನಗರ ತಾಲ್ಲೂಕು ವ್ಯಾಪ್ತಿಯಲ್ಲಿ ಶೇ.80 ರಷ್ಟು ಮತದಾನ.

Published

on

ಕುಶಾಲನಗರ : ತಾಲ್ಲೂಕು ವ್ಯಾಪ್ತಿಯ ಮತಗಟ್ಟೆ ಕೇಂದ್ರಗಳಲ್ಲಿ ಮತಯಂತ್ರದಲ್ಲಿ ತಾಂತ್ರಿಕ ದೋಷ, ಕೆಲವು ಕೇಂದ್ರಗಳಲ್ಲಿ ನಿಧಾನ ಪ್ರಕ್ರಿಯೆ ಹಾಗೂ ಕೆಲವೆಡೆ ಮಂದಗತಿಯ ಮತದಾನ ಸೇರಿದಂತೆ ಒಟ್ಟಾರೆಯಾಗಿ ಶುಕ್ರವಾರ ನಡೆದ ಲೋಕಸಭಾ ಚುನಾವಣೆ ಯಾವುದೇ ಅಹಿತಕರ ಘಟನೆಗಳು ನಡೆಯದೆ ಶಾಂತಿಯುತವಾಗಿ ಮುಕ್ತಾಯಗೊಂಡಿತು.
ಸಮೀಪದ ಹೆಬ್ಬಾಲೆ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಮತದಾನ ಕೇಂದ್ರ 102 ರ ಮತಗಟ್ಟೆಯಲ್ಲಿ ಮಧ್ಯಾಹ್ನ ಎಲೆಕ್ಟ್ರಾನಿಕ್ ಮತಯಂತ್ರದಲ್ಲಿ ತಾಂತ್ರಿಕ ದೋಷ ಕಂಡು ಬಂದ ಹಿನ್ನೆಲೆಯಲ್ಲಿ ಅರ್ಧತಾಸಿಗೂ ಹೆಚ್ಚು ಕಾಲ ಮತದಾನ ಸ್ಥಗಿತಗೊಂಡಿತು. ತಕ್ಷಣ ಸ್ಥಳಕ್ಕೆ ಸೆಕ್ಟರ್ ಅಧಿಕಾರಿ ಡಾ.ಲಿಂಗರಾಜು ದೊಡ್ಡಮನಿ ಭೇಟಿ ಪರಿಶೀಲನೆ ನಡೆಸಿ
ವಿವಿಪ್ಯಾಟ್ ನಲ್ಲಿ ಬ್ಯಾಟರಿ ಲೋ ಆಗಿದ್ದು, ಇದರಿಂದ ದೋಷ ಕಂಡು ಬಂದಿದೆ ಎಂದು ಹೇಳಿ ವಿವಿ ಪ್ಯಾಟ್ ಬದಲಾವಣೆ ಮಾಡಿದರು. ನಂತರ ಮತದಾನ ಪ್ರಕ್ರಿಯೆ ಎಂದಿನಂತೆ ಮುಂದೂವರೆಯಿತು. ಪಟ್ಟಣದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಸ್ಥಾಪಿಸಿರುವ ಮೂರು,ಮಹಿಳಾ ಸಮಾಜದಲ್ಲಿ ಮೂರು, ರೈತ ಸಂಪರ್ಕ ಕೇಂದ್ರದಲ್ಲಿ ಒಂದು,ನೀರಾವರಿ ಇಲಾಖೆಯ ಕಚೇರಿಯಲ್ಲಿ ಒಂದು,ಸರ್ಕಾರಿ ಪಿಯು ಕಾಲೇಜಿನಲ್ಲಿ ಒಂದು


,ಅರಣ್ಯ ಇಲಾಖೆ ಕಚೇರಿಯಲ್ಲಿ ಒಂದು,ಮುಳ್ಳುಸೋಗೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮೂರು,
ಕೂಡುಮಂಗಳೂರು ಎರಡು,ಕೂಡಿಗೆ ಪ್ರಾಥಮಿಕ ಶಾಲೆಯಲ್ಲಿ ಎರಡು, ಹೆಬ್ಬಾಲೆ ಪ್ರಾಥಮಿಕ ಶಾಲೆಯಲ್ಲಿ ಮೂರು ಮತಗಟ್ಟೆ ಕೇಂದ್ರಗಳಲ್ಲಿ ಬೆಳಿಗ್ಗೆಯಿಂದಲೇ ಬಿರುಸಿನ ಮತದಾನ ಆರಂಭಗೊಂಡಿತು. ಆದರೆ ಅತ್ತೂರು,ಚಿಕ್ಕತ್ತೂರು,ಕೂಡಿಗೆಯ ಶಾಲೆಯಲ್ಲಿ ಸ್ಥಾಪಿಸಿರುವ ಮತದಾನ ಕೇಂದ್ರದಲ್ಲಿ ನಿಧಾನಗತಿಯಲ್ಲಿ ಮತದಾನ ಆರಂಭಗೊಂಡಿತು. ಮಹಿಳಾ ಸಮಾಜದ 166 ಮತಗಟ್ಟೆ ಕೇಂದ್ರದಲ್ಲಿ ಮತದಾನ ನಿಧಾನವಾದ ಹಿನ್ನೆಲೆಯಲ್ಲಿ ಮತದಾರರ ಸಂಖ್ಯೆ ಹೆಚ್ಚಾಗಿ
ಮತದಾನ ಪ್ರಕ್ರಿಯೆ ತೀರಾ ತಡವಾಗುತ್ತಿರುವ ಬಗ್ಗೆ ಮತದಾರರು ಆಕ್ರೋಶ ವ್ಯಕ್ತಪಡಿಸಿದರು.


ಶಿರಂಗಾಲ ಮತ್ತು ಮುಳ್ಳುಸೋಗೆ ಸಖಿ ಮತಗಟ್ಟೆಯಲ್ಲಿ ನಿಧಾನಗತಿಯಲ್ಲಿ ಮತದಾನ ನಡೆಯಿತು.
ವಯೋವೃದ್ದರು ಹಾಗೂ ಅಂಗವಿಕಲರನ್ನು ಸ್ವಯಂ ಸೇವಕರು ತಳ್ಳುವ ಗಾಡಿಯಲ್ಲಿ ಕರೆದುಕೊಂಡು ಹೋಗಿದ ಮತದಾನಕ್ಕೆ ‌ಅವಕಾಶ ಮಾಡಿಕೊಟ್ಟರು.
ಮತದಾನ ಪಟ್ಟಿಯಲ್ಲಿ ಅನೇಕ ಯುವ ಮತದಾರರು ಹೆಸರು ಕೈಬಿಟ್ಟು ಹೋಗಿರುವ ಹಾಗೂ ಹೆಸರು ತಪ್ಪಾದ ಹಿನ್ನೆಲೆಯಲ್ಲಿ ಕೆಲವು ಕಡೆ ಅನೇಕ ಮತದಾರರು ಮತದಾನದ ಅವಕಾಶದಿಂದ ವಂಚಿತಗೊಂಡರು.ಎಲ್ಲಾ ಮತದಾನ ಕೇಂದ್ರಗಳಲ್ಲೂ ಬಿಗಿ ಪೊಲೀಸ್ ಭದ್ರತೆ ವ್ಯವಸ್ಥೆ ಕಲ್ಪಿಸಲಾಗಿತ್ತು.
ಅಳುವಾರ,ಹೆಬ್ಬಾಲೆ,ಕೂಡಿಗೆ ಹಾಗೂ ಕುಶಾಲನಗರ ಮತದಾನ ಕೆಂದ್ರಗಳಿಗೆ ಶಾಸಕ ಡಾ.ಮಂತರ್ ಗೌಡ ಭೇಟಿ ನೀಡಿದ್ದರು. ಜೊತೆಗೆ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ


ಅಭ್ಯರ್ಥಿ ಲಕ್ಷ್ಮಣ್ ಪರವಾಗಿ ಮತಯಾಚನೆ ಮಾಡಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಪಿ.ಶಶಿಧರ್, ನಗರ ಘಟಕದ ಅಧ್ಯಕ್ಷ ಪ್ರಮೋದ್ ಮುತ್ತಪ್ಪ,ಕೆಪಿಸಿಸಿ ಸದಸ್ಯ ಮಂಜುನಾಥ್ ಗುಂಡೂರಾವ್ ನೇತೃತ್ವದಲ್ಲಿ ಕಾರ್ಯಕರ್ತರು ಅಭ್ಯರ್ಥಿ ಲಕ್ಷ್ಮಣ್ ಪರವಾಗಿ ಹಾಗೂ ಬಿಜೆಪಿ ,ಜೆಡಿಎಸ್ ಮುಖಂಡರಾದ ಚರಣ್,ಮಧುಸೂದನ್,ಚಂದ್ರು,ಬಿ.ಜೈವರ್ಧನ್ ಸೇರಿದಂತೆ ಕಾರ್ಯಕರ್ತರು ಅಭ್ಯರ್ಥಿ ಯದುವೀರ್ ಪರವಾಗಿ ಬೆಳಿಗ್ಗೆ ಯಿಂದ ಸಂಜೆ ವರೆಗೂ ಮತಗಟ್ಟೆ ಕೇಂದ್ರಗಳ ಬಳಿ ನಿಂತು ಮತದಾನಕ್ಕೆ ಬರುವ ಮತದಾರರ ಮನವೊಲಿಸುವ ಅಂತಿಮ ಪ್ರಯತ್ನ ಮಾಡಿದರು. ಎಲ್ಲರೂ ತಮ್ಮ ಪಕ್ಷದ ಶಾಲು,ಟೋಪಿ ಹಾಕಿಕೊಂಡು ಮತಯಾಚನೆ ಮಾಡಿದರು.
ನವ ವದುವರರಿಂದ ಹಕ್ಕು ಚಲಾವಣೆ : ಮೈಸೂರಿನಲ್ಲಿ ವಿವಾಹವಾದ ಕೂಡಿಗೆ ಗ್ರಾಮದ ನಿವಾಸಿ ಸೋಮಣ್ಣ ಎಂಬುವವರ ಪುತ್ರ ಕೆ.ಎಸ್.ಶ್ರೀನಿವಾಸ್ ಅವರು ಕೂಡಿಗೆ ಮತಗಟ್ಟೆಗೆ ಆಗಮಿಸಿ ತಮ್ಮ ಹಕ್ಕು ಚಲಾಯಿಸಿದರು.
ಅದೇ ರೀತಿ ನವವಿವಾಹಿತೆ ಕಾವ್ಯಶ್ರೀ ಕೂಡ ಮೈಸೂರಿನಲ್ಲಿ ಮತ ಚಲಾಯಿಸಿದರು.
ಮದುವೆ ಸಮಾರಂಭವನ್ನು ಬೇಗ ಮುಗಿಸಿಕೊಂಡು ಐವತ್ತಕ್ಕೂ ಹೆಚ್ಚಿನ ಮದುವೆಗೆ ಬಂದಿದ್ದ ಬಂಧು ಬಾಂಧವ್ಯವನ್ನು ಬಸ್ಸಿನಲ್ಲಿ ಕರೆದುಕೊಂಡು ಬಂದು ಮತದಾನ ಮಾಡಿಸುವ ಮೂಲಕ ಮದುಮಗ ಶ್ರೀನಿವಾಸ್ ತಮ್ಮ ಜವಬ್ದಾರಿ ಮರೆದಿದ್ದಾರೆ. ಈ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಪ್ರತಿಯೊಬ್ಬರೂ ತಪ್ಪದೆ ಮತದಾನ ಮಾಡಬೇಕು. ಇದು ನಮ್ಮ ಹಕ್ಕು. ದೇಶ ಕಟ್ಟುವ ಕಾಯಕದಲ್ಲಿ ಎಲ್ಲರೂ ಕೈಜೋಡಿಸಬೇಕು. ಈ ಹಿನ್ನೆಲೆಯಲ್ಲಿ ನನ್ನ ಮದುವೆಯನ್ನು ಮೈಸೂರಿನಲ್ಲಿ ಬೇಗ ಮುಗಿಸಿಕೊಂಡು ಸಮಯಕ್ಕೆ ಸರಿಯಾಗಿ ಪತ್ನಿಯೊಂದಿಗೆ ಆಗಮಿಸಿ ಮತದಾನ ಮಾಡಿದ್ದೇನೆ ಎಂದು ಹೇಳಿದರು.
ಕುಶಾಲನಗರದ ಕಲ್ಯಾಣ ಮಂಟಪವೊಂದರಲ್ಲಿ ಮಧುವಣಗಿತ್ತಿ ಮತಗಟ್ಟೆಗೆ ತೆರಳಿ ಮತದಾನ ಮಾಡಿದರು.
ಜಿಲ್ಲಾ ಹೋಟೆಲ್ ಅಸೋಸಿಯೇಷನ್ ಅಧ್ಯಕ್ಷ ನಾಗೇಂದ್ರ ಪ್ರಸಾದ್ ಅವರ ಪುತ್ರಿ ಬಿ.ಎನ್.ಅಪೂರ್ವ ಅವರ ವಿವಾಹ ಏಪ್ರಿಲ್ 26 ರ ಮತದಾನದ ದಿನದಂದು ಇಲ್ಲಿನ ಮಾರುತಿ ಸಭಾಂಗಣದಲ್ಲಿ ನಡೆದಿತ್ತು.
ಮಧ್ಯಾಹ್ನ‌ ವಿವಾಹದ ಧಾರ್ಮಿಕ ವಿಧಿಗಳನ್ನು ಪೂರೈಸಿದ ಮಧುವಣಗಿತ್ತಿ ಕುಶಾಲನಗರದ ಮತಗಟ್ಟೆಗೆ ತೆರಳಿ ತಮ್ಮ ಹಕ್ಕು ಚಲಾಯಿಸಿದರು.
ಈ ಸಂದರ್ಭ ಮಧುಮಗ ಧನಂಜಯ ಗುಪ್ತ ಸಾಥ್ ನೀಡಿದರು.
ಸೀಗೆಹೊಸೂರು ಬೂತ್ ಸಂಖ್ಯೆ 149 ನವದಂಪತಿಗಳಾದ ಹರ್ಶನ್ ಪಿ ಆರ್ . ಚಂದ್ರಕಲಾ ಲೋಕಸಭೆ ಚುನಾವಣೆಯಲ್ಲಿ ಮತ ಚಲಾಯಿಸುವುದರ ಮೂಲಕ ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ.

Continue Reading
Click to comment

Leave a Reply

Your email address will not be published. Required fields are marked *

Kodagu

ಮಡಿಕೇರಿ ನಗರಸಭೆಗೆ ಮೃತ ಇಂಜಿನಿಯರ್‌ ಟ್ರಾನ್ರ್ಫರ್‌ !

Published

on

ಮಡಿಕೇರಿ : ಸರ್ಕಾರ ಮತ್ತು ಇಲಾಖೆಯಿಂದ ವರ್ಗಾವಣೆಯ ಎಡವಟ್ಟಿನಿಂದಾಗಿ 6 ತಿಂಗಳ ಹಿಂದೆ ಮೃತಪಟ್ಟ ನಗರಾಭಿವೃದ್ಧಿ ಇಲಾಖೆಯ ಕಿರಿಯ ಇಂಜಿನಿಯರ್ ಓರ್ವರನ್ನು ಜುಲೈ 9ರಂದು ಕೊಡಗಿನ ಮಡಿಕೇರಿಯ ನಗರಸಭೆಯಲ್ಲಿ ಖಾಲಿ ಇರುವ ಕಿರಿಯ ಅಭಿಯಂತರ ಹುದ್ದೆಗೆ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.
ಅಶೋಕ ಪುಟಪಾಕ್ ಎಂಬ ಅಧಿಕಾರಿಯನ್ನು ಜುಲೈ 9ರಂದು ಕೊಡಗಿಗೆ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ವಾಸ್ತವವಾಗಿ, ಅಶೋಕ ಪುಟಪಾಕ್ ಕಳೆದ ಜನವರಿ 12ರಂದು ಮೃತಪಟ್ಟಿದ್ದಾರೆ.
ನಗರಾಭಿವೃದ್ಧಿ ಇಲಾಖೆಯ ಅಧಿಕಾರಿಗಳು ಮಾಹಿತಿ ಇಲ್ಲದೆಯೇ ಎಡವಟ್ಟು ಮಾಡಿಕೊಂಡಿದ್ದು, ವರ್ಗಾವಣೆಯ ಪ್ರತಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.


ಕಲಬುರಗಿ ಜಿಲ್ಲೆಯ ಸೇಡಂ ಪುರಸಭೆಯಲ್ಲಿ ಕಿರಿಯ ಇಂಜಿನಿಯರ್ ಆಗಿ ಕೆಲಸ ಮಾಡ್ತಿದ್ದ ಅಶೋಕ್, ಜಿಲ್ಲೆಯ ಚಿತ್ತಾಪುರ ತಾಲೂಕಿನ ದಿಗ್ಗಾಂವ್ ಗ್ರಾಮದ ನಿವಾಸಿ. ಕಳೆದ ಜನವರಿಯಲ್ಲಿ ಮೃತಪಟ್ಟಿದ್ದರು. ಆದರೆ ಈ ಮಾಹಿತಿಯನ್ನು ಅವರು ಕೆಲಸ ಮಾಡುತ್ತಿದ್ದ ಕಚೇರಿಯ ಅಧಿಕಾರಿಗಳು ಮೇಲಾಧಿಕಾರಿಗಳಿಗೆ ನೀಡಿರಲಿಲ್ಲವೇ ? ಎನ್ನುವ ಅನುಮಾನ ಹುಟ್ಟಿಕೊಂಡಿದ್ದು, ಮೃತಪಟ್ಟ ಬಗ್ಗೆ ಮಾಹಿತಿ ಇಲ್ಲದ ನಗರಾಭಿವೃದ್ಧಿ ಇಲಾಖೆಯ ಅಧಿಕಾರಿಗಳು, ಕಳೆದ ಜುಲೈ ಜುಲೈ 9ರಂದು ಕೊಡಗಿಗೆ ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದಾರೆ.
ಇಲಾಖೆಯ ನೌಕರ ಮೃತಪಟ್ಟ ವಿಚಾರ ಗೊತ್ತಿಲ್ಲದೆ ವರ್ಗಾವಣೆ ಮಾಡಿದೆಯಾ ಅಥವಾ ಸಾಯುವ ಮುನ್ನ ಅಶೋಕ್ ಪುಟಪಾಕ್ ವರ್ಗಾವಣೆ ಬಯಸಿದ್ದರಾ ಎಂದು ಜಿಲ್ಲಾಡಳಿತವೇ ಈ ಬಗ್ಗೆ ಸ್ಪಷ್ಟ ಮಾಹಿತಿ ನೀಡಬೇಕಷ್ಟೇ.

Continue Reading

Kodagu

ಜು.17ರಂದು ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ನೂತನ ಪದಾಧಿಕಾರಿಗಳ ಪದಗ್ರಹಣ

Published

on

ಪ್ರಾಧಿಕಾರದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಜು.17 ರಂದು ನಡೆಯಲಿದೆ ಎಂದು ನೂತನ ಅಧ್ಯಕ್ಷ ಬಿ.ವೈ.ರಾಜೇಶ್ ಯಲ್ಲಪ್ಪ ತಿಳಿಸಿದ್ದಾರೆ.


ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿಯಲ್ಲಿ ಬೆಳಿಗ್ಗೆ 11 ಗಂಟೆಗೆ ತಾವು ಸೇರಿದಂತೆ ಸದಸ್ಯರುಗಳಾದ ಸುದಯ್ ನಾಣಯ್ಯ, ಕಾನೆಹಿತ್ಲು ಮೊಣ್ಣಪ್ಪ, ಆರ್.ಪಿ.ಚಂದ್ರಶೇಖರ್ ಹಾಗೂ ಮೀನಾಜ್ ಪ್ರವೀಣ್ ಅಧಿಕಾರ ಸ್ವೀಕರಿಸಲಿರುವುದಾಗಿ ಪತ್ರಿಕಾ ಪ್ರಕಟಣೆ ನೀಡಿದ್ದಾರೆ.

Continue Reading

Kodagu

ಮಿನಿ ಒಲಿಂಪಿಕ್ಸ್ ಅಂಡರ್ 14 ಫುಟ್ಬಾಲ್ : ಕೊಡಗು ತಂಡಕ್ಕೆ ಭಾನುವಾರ ಆಯ್ಕೆ ಪ್ರಕ್ರಿಯೆ.

Published

on

ಮಡಿಕೇರಿ: ಕರ್ನಾಟಕ ರಾಜ್ಯ ಒಲಿಂಪಿಕ್ಸ್ ಸಂಸ್ಥೆಯಿಂದ ನಡೆಯಲಿರುವ “ಮಿನಿ ಒಲಿಂಪಿಕ್ಸ್” ಫುಟ್ಬಾಲ್ ಅಂಡರ್-14 ಬಾಲಕ ಮತ್ತು ಬಾಲಕಿಯರ ಕೊಡಗು ಫುಟ್ಬಾಲ್ ತಂಡಕ್ಕೆ ಆಯ್ಕೆ ಪ್ರಕ್ರಿಯೆ ಜುಲೈ 14ರ ಭಾನುವಾರದಂದು ಅಮ್ಮತ್ತಿಯ ಫ್ರೌಡ ಶಾಲಾ ಮೈದಾನದಲ್ಲಿ ನಡೆಯಲಿದೆ ಎಂದು ಕೊಡಗು ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್ ಕಾರ್ಯದರ್ಶಿ ಪಿ.ಎ ನಾಗೇಶ್ (ಈಶ್ವರ್) ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


2010ರ ನಂತರ ಜನಿಸಿರುವ ಯುವ ಫುಟ್ಬಾಲ್ ಆಟಗಾರರು ಮಾತ್ರ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಲು ಅವಕಾಶವಿದ್ದು, ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸುವ ಆಟಗಾರರು ಕಡ್ಡಾಯವಾಗಿ ತಮ್ಮ ಆಧಾರ್ ಕಾರ್ಡ್ ತರಬೇಕು. ಭಾನುವಾರ ಬೆಳಗ್ಗೆ 09 ಗಂಟೆಗೆ ಅಮ್ಮತ್ತಿಯ ಪ್ರೌಢ ಶಾಲಾ ಮೈದಾನದಲ್ಲಿ ಆಟಗಾರರ ಆಯ್ಕೆ ಪ್ರಕ್ರಿಯೆಯು ಕೊಡಗು ಜಿಲ್ಲಾ ಫುಟ್ಬಾಲ್ ಸಂಸ್ಥೆಯ ಉಪಾಧ್ಯಕ್ಷ

ಕ್ರಿಸ್ಟೋಫರ್ ಅವರ ನೇತೃತ್ವದಲ್ಲಿ ನಡೆಯಲಿದೆ.ಕೊಡಗು ಜಿಲ್ಲೆಗೆ ಇದೇ ಮೊದಲ ಬಾರಿಗೆ ಮಿನಿ ಒಲಿಂಪಿಕ್ಸ್ ಫುಟ್ಬಾಲ್ ನಲ್ಲಿ ಭಾಗವಹಿಸಲು ಅವಕಾಶ ದೊರೆತಿದ್ದು,ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಕೊಡಗು ಜಿಲ್ಲಾ ಫುಟ್ಬಾಲ್ ಸಂಸ್ಥೆಯ ಕಾರ್ಯದರ್ಶಿ ನಾಗೇಶ್ (ಈಶ್ವರ್ ತಿಳಿಸಿದ್ದಾರೆ).

Continue Reading

Trending

error: Content is protected !!