Connect with us

Chikmagalur

ಮುಖಂಡ ಖಾಂಡ್ಯ ಪ್ರವೀಣ್ ಮೇಲೆ ಸ್ಥಳೀಯ ಬಿಜೆಪಿ ಮುಖಂಡರಿಂದ ಹಲ್ಲೆ

Published

on

ಲೋಕಸಭಾ ಚುನಾವಣೆ ಮತದಾನ ಶಾಂತಿಯುತ ಅಂತ್ಯ ಕಾಣುವ ಹೊತ್ತಲ್ಲೇ ಬಾಳೇಹೊನ್ನೂರಿನಲ್ಲಿ ಬಿಜೆಪಿ ಕಾರ್ಯಕರ್ತರ ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಉಜಿವಿ ಮತದಾನ ಕೇಂದ್ರದ ಬಳಿ ಮಾಜಿ ಭಜರಂಗದಳ ಮುಖಂಡ ಖಾಂಡ್ಯ ಪ್ರವೀಣ್ ಮೇಲೆ ಸ್ಥಳೀಯ ಬಿಜೆಪಿ ಮುಖಂಡರೇ ಹಲ್ಲೆ ನಡೆಸಿರುವ ಆರೋಪ ಕೇಳಿ ಬಂದಿದೆ. ಮಾಜಿ ಶಾಸಕ ಡಿ.ಎನ್ ಜೀವರಾಜ್ ಕುಮ್ಮಕ್ಕಿನಿಂದ ಹಲ್ಲೆ ನಡೆಸಲಾಗಿದೆ ಎಂದು ಹೇಳಲಾಗುತ್ತಿದೆ.

ಬಾಳೆಹೊನ್ನೂರು ಬಿಜೆಪಿ ಅಂತರಿಕ ಕಲಹ ಮತ್ತೊಮ್ಮೆ ಬೀದಿ ಗಲಾಟೆ ಮೂಲಕ ಬಹಿರಂಗಗೊಂಡಿದೆ. ಉಡುಪಿ ಚಿಕ್ಕಮಗಳೂರು ಲೋಕಸಭಾ ಚುನಾವಣೆಯ ಮತದಾನದ ವೇಳೆ ಘರ್ಷಣೆ ನಡೆದಿರುವುದು ಒಳ ಬೇಗುದಿಯ ಹೊಡೆತ ಮತ್ತೆ ಬಿಜೆಪಿಗೆ ತಟ್ಟಿದೆ. ಮಾಜಿ ಭಜರಂಗದಳ ಮುಖಂಡ ಪ್ರವೀಣ್ ಖಾಂಡ್ಯ ಹಾಗೂ ಮಾಜಿ ಶಾಸಕ ಡಿ.ಎನ್ ಜೀವರಾಜ್ ನಡುವಿನ ಮುಸುಕಿನ ಗುದ್ದಾಟ ಇದೀಗ ಹೊಡೆದಾಟದ ಸ್ವರೂಪ ಪಡೆದುಕೊಂಡಿದೆ. ಮತದಾನ ನಡೆಯುತ್ತಿದ್ದ ಬಾಳೆಹೊನ್ನೂರಿನ ಮತಕೇಂದ್ರಗಳಿಗೆ ಭೇಟಿ ಕೊಡುತ್ತಿದ್ದ ಖಾಂಡ್ಯ ಪ್ರವೀಣ್ ಹಾಗೂ ಬೆಂಬಲಿಗರ ಮೇಲೆ ಜೀವರಾಜ್ ಬೆಂಬಲಿಗರು ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಬಿದರೆ ಪಂಚಾಯ್ತಿ ಸುತ್ತಮುತ್ತ ತೆರಳುತ್ತಿದ್ದ ವೇಳೆ ಪರಸ್ಪರ ಎರಡೂ ಬಣದ ಕಾರ್ಯಕರ್ತರು ಕೈ ಕೈ ಮಿಲಾಯಿಸಿಕೊಂಡಿದ್ದಾರೆ. ಘಟನೆಯಲ್ಲಿ ಪ್ರವೀಣ್ ಖಾಂಡ್ಯ ತಲೆಗೆ ಪೆಟ್ಟುಬಿದ್ದು ಗಂಭೀರ ಗಾಯವಾಗಿ ರಕ್ತಸ್ವಾಥವಾಗಿದೆ. ಆಸ್ಪತ್ರೆಗೆ ಸೇರಿ ಚಿಕಿತ್ಸೆ ಪಡೆಯುತ್ತಿರುವ ಪ್ರವೀಣ್ ಮಾಜಿ ಶಾಸಕ ಜೀವರಾಜ್ ವಿರುದ್ಧ ಹರಿ ಹಾಯ್ದಿದ್ದಾರೆ. ಬಾಳೆಹೊನ್ನೂರು ಬಿಜೆಪಿ ಮುಖಂಡ ವೆನಿಲ್ಲಾ ಬಾಸ್ಮರ್ ಸೇರಿದಂತೆ ಹಲವರು ಇದರ ಹಿಂದೆ ಇದ್ದಾರೆ ಎಂದು ಆರೋಪಿಸಿರುವ ಅವರು ಜೀವರಾಜ್ ಮುಂದಿನ ದಿನಗಳಲ್ಲಿ ಇದರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ. ಕಳೆದ ವಿಧಾನಸಭಾ ಚುನಾವಣೆ ವೇಳೆ ಜೀವರಾಜ್ ಸೋಲಿಗೆ ಖಾಂಡ್ಯ ಪ್ರವೀಣ್ ಕಾರಣ ಎಂಬ ಜಿದ್ದಿಗೆ ಬಾಳೆಹೊನ್ನೂರು ಸ್ಥಳೀಯ ಬಿಜೆಪಿ ಮುಖಂಡರು ಈ ರೀತಿ ಮಾಡಿದ್ದಾರಂತ

Continue Reading
Click to comment

Leave a Reply

Your email address will not be published. Required fields are marked *

Chikmagalur

ಮನೆಯ ಗೋಡೆ ಏಕಾಏಕಿ ಕುಸಿತ

Published

on

ಚಿಕ್ಕಮಗಳೂರು: ಮಲೆನಾಡಿನಲ್ಲಿ ಭಾರೀ ಮಳೆಯಾಗುತ್ತಿದೆ. ಮೂಡಿಗೆರೆ ತಾಲೂಕಿನ ಬಕ್ಕಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಬೆಳಗಿನಜಾವ ಮನೆಯ ಗೋಡೆ ಏಕಾಏಕಿ ಕುಸಿದು ಬಿದ್ದಿದೆ. ಗ್ರಾಮದ ಸರಿತಾ ಎಂಬವರಿಗೆ ಸೇರಿದ ಮನೆ ಇದಾಗಿದೆ. ಮನೆಯಲ್ಲಿದ್ದ ಆಹಾರ ಪದಾರ್ಥಗಳು, ಟಿವಿ, ಪೀಠೋಪಕರಣಗಳು ಸಂಪೂರ್ಣ ಜಖಂಗೊಂಡಿದೆ. ಮನೆ ಕಳೆದುಕೊಂಡು ಸರಿತಾ ಕಣ್ಣೀರು ಹಾಕುತ್ತಿದ್ದು, ಸಹಾಯಕ್ಕಾಗಿ ಅಂಗಲಾಚಿದ್ದಾರೆ.


ಕಳಸ ತಾಲೂಕಿನಾದ್ಯಂತ ನಿರಂತರವಾಗಿ ಮಳೆ ಸುರಿಯುತ್ತಿದ್ದು, ಭದ್ರ ನದಿಯ ನೀರಿನ ಮಟ್ಟ ಏರಿಕೆಯಾಗಿದೆ. ಕುದುರೆಮುಖ, ಕಳಸ ಸೇರಿದಂತೆ ಸುತ್ತಮುತ್ತಲಲ್ಲಿ ನಿರಂತರವಾಗಿ ಮಳೆಯಾಗುತ್ತಿದ್ದು,ಕೆಲವು ಅವಾಂತರ ಸೃಷ್ಟಿಯಾಗಿದೆ. ಮಳೆಗೆ ಮನೆಯ ಚಾವಣಿ ಹಾಗೂ ಗೋಡೆ ಕುಸಿದು ಬಿದ್ದಿದೆ. ಸ್ವಲ್ಪದರಲ್ಲೇ ಮಹಿಳೆಯೊಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

 


ಹಚ್ಚಹಸಿರಿನಿಂದ ಕಂಗೊಳಿಸುತ್ತಿರುವ ಗಿರಿಪ್ರದೇಶದ ಪ್ರವಾಸಿ ತಾಣಗಳಾದ ಮುಳ್ಳಯ್ಯನಗಿರಿ, ದತ್ತಪೀಠ, ಸೀತಾಳಯ್ಯನ ಗಿರಿ, ಮಾಣಿಕ್ಯಾಧಾರಕ್ಕೆ ಭಾರೀ ಪ್ರವಾಸಿಗರು ಆಗಮಿಸುತ್ತಿದ್ದು, ಕೈಮರ ಚೆಕ್ ಪೋಸ್ಟ್ ಬಳಿ ಸಂಚಾರ ದಟ್ಟಣೆ ಅಧಿಕವಾಗಿದೆ. ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿಕೊಂಡಿರುವ ಪ್ರವಾಸಿಗರ ಸುಗಮ ಸಂಚಾರಕ್ಕೆ ಪರದಾಡುವಂತಾಗಿದೆ.

 


ರಾಜ್ಯದ ವಿವಿಧ ಭಾಗಗಳಿಂದ ಸಾವಿರಾರು ಪ್ರವಾಸಿಗರು ಆಗಮಿಸಿದ್ದು, ಸಂಚಾರ ನಿಯಂತ್ರಣಕ್ಕೆ ಪೊಲೀಸರು ಹರಸಾಹಸ ಪಡುವಂತಾಗಿದೆ.ಪ್ರವಾಸಿಗಳ ನಿಯಂತ್ರಣಕ್ಕೆ ಹತ್ತಾರು ಪೊಲೀಸರ ನಿಯೋಜಿಸಲಾಗಿದೆ. ಗಿರಿ ಭಾಗದಲ್ಲಿ ಮದ್ಯ ಸೇವನೆ, ಪ್ಲಾಸ್ಟಿಕ್ ನಿಷೇಧಕ್ಕೆ ಪೋಲೀಸ್, ಜಿಲ್ಲಾಡಳಿತ ಮುಂದಾಗಿದ್ದು, ಪ್ರತಿಯೊಂದು ವಾಹನಗಳನ್ನು ಪರಿಶೀಲಿಸಿ ಕಳುಹಿಸಲಾಗುತ್ತಿದೆ.

Continue Reading

Chikmagalur

ಎಮ್ಮೆದೊಡ್ಡಿ ಅರಣ್ಯಭೂಮಿ ಒತ್ತುವರಿ ಅರಣ್ಯ ಇಲಾಖೆ ಹಾಗೂ ಪೊಲೀಸರು ಜಂಟಿ ಕಾರ್ಯಾಚರಣೆ ಮೂಲಕ ತೆರವು

Published

on

ಚಿಕ್ಕಮಗಳೂರು: ಜಿಲ್ಲಾ ಪಂಚಾಯಿತಿಯ ಕೆಡಿಪಿ ಸಭೆಯಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದ ಕಡೂರು ತಾಲೂಕು ಎಮ್ಮೆದೊಡ್ಡಿ ಅರಣ್ಯಭೂಮಿ ಒತ್ತುವರಿಯನ್ನು ಶನಿವಾರ ಬೆಳಿಗ್ಗೆ ಅರಣ್ಯ ಇಲಾಖೆ ಹಾಗೂ ಪೊಲೀಸರು ಜಂಟಿ ಕಾರ್ಯಾಚರಣೆ ಮೂಲಕ ತೆರವುಗೊಳಿಸಲಾಯಿತು.


ಕಡೂರು ಪುರಸಭೆ ಮುಖ್ಯಾಧಿಕಾರಿಯಾಗಿದ್ದ ಮಂಜುನಾಥ್ ಎಮ್ಮೆದೊಡ್ಡಿಯಲ್ಲಿ ೧೦ ಎಕರೆ ಅರಣ್ಯ ಭೂಮಿಯನ್ನು ಒತ್ತುವರಿಮಾಡಿಕೊಂಡಿದ್ದು, ಅಲ್ಲಿ ಕೆಲವು ಶೆಡ್‌ಗಳನ್ನು ನಿರ್ಮಿಸಿಕೊಳ್ಳಲಾಗಿತ್ತು. ಆ ಶೆಡ್‌ಗಳನ್ನು ಜೆಸಿಬಿ ಮೂಲಕ ಅರಣ್ಯ ಇಲಾಖೆ ಅಧಿಕಾರಿಗಳು ತೆರವು ಗೊಳಿಸಿದ್ದಾರೆ.
ಎಮ್ಮೆದೊಡ್ಡಿ ಸರ್ವೆ ನಂಬರ್ ೭೦ರಲ್ಲಿ ಒಟ್ಟು ೧೦ ಎಕರೆಯಲ್ಲಿ ನಿರ್ಮಿಸಿದ್ದ ಮನೆ, ಕುರಿಶೆಡ್, ಕೋಳಿ ಶೆಡ್ ಕೃಷಿ ಹೊಂಡ ಸೇರಿದಂತೆ ಹಲವನ್ನು ಜೆಸಿಬಿ ಮೂಲಕ ಬೆಳಿಗ್ಗೆ ೬ ಗಂಟೆಗೆ ಪೊಲೀಸರ ನೆರವಿನೊಂದಿಗೆ ಜಂಟಿಕಾರ್ಯಾಚರಣೆ ನೆಲಕ್ಕುರುಳಿಸಲಾಯಿತು.


ಉಪ ಅರಣ್ಯ ಸಂರಕ್ಷಣಾಧಿಕಾರಿ ರಮೇಶ್‌ಬಾಬು ಸೂಚನೆ ಮೇರೆಗೆ ಎಸಿಎಫ್ ಮೋಹನ್ ಕಡೂರು ಆರ್‌ಎಫ್‌ಓ ರಜಾಕ್ ರದಾಫ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದ್ದು ಕಡೂರು ಪೊಲೀಸರು ಹಾಜರಿದ್ದರು. ಒತ್ತುವರಿಯಾಗಿದ್ದ ಅರಣ್ಯ ಪ್ರದೇಶವನ್ನು ತೆರವುಗೊಳಿಸಲಾಗಿತ್ತು.
ಎಮ್ಮೆದೊಡ್ಡಿಯಲ್ಲಿ ಅರಣ್ಯ ಪ್ರದೇಶ ಒತ್ತುವರಿಯಾಗಿರುವುದು ಕಂಡು ಬರುತ್ತಿದ್ದಂತೆ ಸ್ಥಳಕ್ಕೆ ಈ ಹಿಂದೆ ಜಿಲ್ಲಾಧಿಕಾರಿಯಾಗಿದ್ದ ಕೆ.ಎನ್.ರಮೇಶ್ ಅವರು ತೆರಳಿ ಪರಿಶೀಲಿಸಿದ್ದರು. ಶೆಡ್‌ಗಳಿಗೆ ಬೇರೆಯವರ ಹೆಸರಿನಲ್ಲಿ ಅಕ್ರಮವಾಗಿ ವಿದ್ಯುತ್ ಸಂಪರ್ಕ ಕಲ್ಪಿಸಿದ್ದು, ಅವರುಗಳಿಗೆ ನೋಟೀಸ್ ಜಾರಿಗೊಳಿಸಲಾಗಿತ್ತು.


ಜನವರಿ ೧೬ ರಂದು ಜಿಲ್ಲಾಪಂಚಾಯಿತಿ ನಜೀರ್‌ಸಾಬ್ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್ ಅಧ್ಯಕ್ಷತೆಯಲ್ಲಿ ನಡೆದಿದ್ದ ಕೆಡಿಪಿ ಸಭೆಯಲ್ಲಿ ಎಮ್ಮೆದೊಡ್ಡಿ ಗ್ರಾಮದಲ್ಲಿ ಒತ್ತುವರಿಯಾಗಿರುವ ಅರಣ್ಯ ಭೂಮಿಯನ್ನು ೩೦ ದಿನದೊಳಗೆ ತೆರವುಗೊಳಿಸಬೇಕೆಂದು ಜನಪ್ರತಿನಿಧಿಗಳು ಒತ್ತಾಯಿಸಿದ್ದರು ಅದಕ್ಕೆ ಉಪರಣ್ಯ ಸಂರಕ್ಷಣಾಧಿಕಾರಿಗಳು ಸಮ್ಮತಿಸಿದ್ದರು.
ಜಿಲ್ಲಾಪಂಚಾಯಿತಿಯಲ್ಲಿ ಶುಕ್ರವಾರ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಮತ್ತು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಾಜೇಂದ್ರಕುಮಾರ್ ಕಟಾರಿಯಾ ಸಮ್ಮುಖದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಒತ್ತುವರಿ ವಿಷಯ ಪ್ರಸ್ತಾಪವಾಯಿತು. ಒತ್ತುವರಿ ವಿಷಯದಲ್ಲಿ ಬಡವರಿಗೊಂದು, ಬಲ್ಲಿದರಿಗೊಂಡು ಕಾನೂನೇ ಎಂದು ಶಾಸಕ ಹೆಚ್.ಡಿ.ತಮ್ಮಯ್ಯ ಕೇಳಿದ್ದರು.

 


ಒಂದೇ ದಿನದಲ್ಲಿ ತೆರವುಗೊಳಿಸಲು ಮುಂದಾಗದಿದ್ದರೆ ಅಧಿಕಾರಿಯನ್ನು ಅಮಾನತುಗೊಳಿಸಬೇಕೆಂದು ವಿಧಾನಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ ಆಗ್ರಹಿಸಿದ್ದರು. ೪೮ ಗಂಟೆಯೊಳಗೆ ಒತ್ತುವರಿ ತೆರವುಗೊಳಿಸುವಂತೆ ಉಸ್ತುವಾರಿ ಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಡಿಎಫ್‌ಓ ಅವರಿಗೆ ಸೂಚಿಸಿದ್ದರು.
ಇದರಿಂದ ಎಚ್ಚೆತ್ತುಕೊಂಡು ಅರಣ್ಯ ಇಲಾಖೆಯ ಅಧಿಕಾರಿಗಳು ಎಮ್ಮೆದೊಡ್ಡಿಯಲ್ಲಿ ಒತ್ತುವರಿಯಾಗಿದ್ದ ಅರಣ್ಯ ಪ್ರದೇಶ ಮತ್ತು ಆಜಾಗದಲ್ಲಿ ನಿರ್ಮಾಣಗೊಂಡಿದ್ದ ಶೆಡ್‌ಗಳನ್ನು ಶನಿವಾರ ಬೆಳಿಗ್ಗೆಯೇ ಪೊಲೀಸರ ನೆರವಿನೊಂದಿಗೆ ತೆರವುಗೊಳಿಸಲಾಯಿತು.

Continue Reading

Chikmagalur

ಡಾ.ವಿಕ್ರಮ್ ಅಮಟೆ ಅವರು ವಾಹನ ತಪಾಸಣೆ ಮಾಡುವ ಮೂಲಕ ಪ್ರವಾಸಿಗರಿಗೆ ಶಾಕ್ ನೀಡಿದ್ದಾರೆ.

Published

on

ಚಿಕ್ಕಮಗಳೂರು: ವಾರಾಂತ್ಯ ದಲ್ಲಿ ಮುಳ್ಳಯ್ಯನಗಿರಿ ಮತ್ತು ದತ್ತಪೀಠಕ್ಕೆ ಆಗಮಿಸಿದ ಪ್ರವಾಸಿಗರಿಗೆ ಖುದ್ದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವಿಕ್ರಮ್ ಅಮಟೆ ಅವರು ವಾಹನ ತಪಾಸಣೆ ಮಾಡುವ ಮೂಲಕ ಪ್ರವಾಸಿಗರಿಗೆ ಶಾಕ್ ನೀಡಿದ್ದಾರೆ.


ರಾಜ್ಯದ ನೆಚ್ಚಿನ ಪ್ರವಾಸಿಕೇಂದ್ರ ದಲ್ಲಿ ಮುಳ್ಳಯ್ಯನಗಿರಿ ಪರ್ವತ ಶ್ರೇಣಿಯೂ ಒಂದಾಗಿದ್ದು ವಾರಾಂತ್ಯದಲ್ಲಿ ಸಾವಿರಾರು ಪ್ರವಾಸಿಗರು ಇಲ್ಲಿಗೆ ಲಗ್ಗೆ ಇಡುತ್ತಿದ್ದಾರೆ. ಆಗಮಿಸುವ ಪ್ರವಾಸಿಗರು ಪ್ಲಾಸ್ಟಿಕ್ ಬಾಟಲಿ ಸೇರಿದಂತೆ ಅನುಪಯುಕ್ತ ವಸ್ತುಗಳನ್ನು ಎಲ್ಲದರಲ್ಲಿ ಬಿಸಾಡುವುದರಿಂದ ಪ್ರವಾಸಿ ಕೇಂದ್ರ ಕಸದ ಕೊಂಪೆಯಾಗು ತ್ತಿದ್ದು ಗಿರಿ ಪ್ರದೇಶದಲ್ಲಿ ಪ್ಲಾಸ್ಟಿಕ್ ಸೇರಿದಂತೆ ಇತರೆ ಅನುಪಯುಕ್ತ ವಸ್ತುಗಳ ಬಳಕೆಯನ್ನು ಈಗಾ ಗಲೇ ನಿಷೇಧಿಸಲಾಗಿದೆ.


ಈ ಹಿನ್ನಲೆಯಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ಕಟ್ಟು ತಪಾಸಣೆಗೆ ಮುಂದಾಗಿದ್ದು, ನೀರಿ‌ನ ಬಾಟಲಿ, ಮದ್ಯದ ಬಾಟಲಿ, ಸಿಗರೇಟ್ ಸೇರಿದಂತೆ ಇತರೆ ವಸ್ತುಗಳನ್ನು ಕೈಮರದಲ್ಲಿನ ಚೆಕ್ ಪೋಸ್ಟ್ ನಲ್ಲಿ ತಪಾಸಣೆ ನಡೆಸಿ ವಶಕ್ಕೆ ಪಡೆದುಕೊಳ್ಳಲಾಗುತ್ತಿದೆ.
ಪ್ರವಾಸಿ ಕೇಂದ್ರಗಳಲ್ಲಿ ಪ್ರವಾಸಿಗರ ಹುಚ್ಚಾಟ, ತರಲೆ, ಕೀಟಲೆ ಹೆಚ್ಚಾದ ಹಿನ್ನಲೆಯಲ್ಲಿ ಪೊಲೀಸರು ಫುಲ್ ಅಲರ್ಟ್ ಆಗಿದ್ದು ಈಗಾಗಲೇ ಅನೇಕರ ಮೇಲೆ ಕೇಸ್ ಕೂಡ ದಾಖಲು ಮಾಡಲಾಗಿದೆ.
ಶನಿವಾರ ಗಿರಿ ಪ್ರದೇಶಕ್ಕೆ ತೆರಳು ಸಾವಿರಾರು ಸಂಖ್ಯೆಯ ಪ್ರವಾಸಿಗರು‌ ಆಗಮಿಸಿದ್ದು, ಖುದ್ದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವಿಕ್ರಮ್ ಅಮಟೆ ಅವರು ವಾಹನ ತಪಾಸಣೆಗೆ ಇಳಿದರು.
ಮುಳ್ಳಯ್ಯನಗಿರಿ, ಶ್ರೀ ಗರು ದತ್ತಾತ್ರೇಯ ಬಾಬಾ ಬುಡನ್ ದರ್ಗಾ, ಮಾಣಿಕ್ಯಧಾರ ಹೋಗುವ ಮಾರ್ಗದ ಕೈಮರ ಚಕ್ ಪೋಸ್ಟ್ ನಲ್ಲಿ ಪ್ರವಾಸಿಗರ ವಾಹನಗಳಲ್ಲಿದ್ದ ಸಾವಿರಾರು ರೂ.ಮೌಲ್ಯದ ಮದ್ಯ ಸೀಜ್ ಮಾಡಿ ಪ್ರಕರಣ ದಾಖಲಿಸುವ ಮೂಲಕ ಪ್ರವಾಸಿಗರ ಬೆವರು ಇಳಿಸುವ ಕೆಲಸ ಮಾಡಿದ್ದಾರೆ.
ಒಟ್ಟಾರೆ ಜಿಟಿ ಜಿಟಿ ಮಳೆಯಲ್ಲಿ ನೆನೆದು ಸುಂದರ ಪ್ರವಾಸಿ ತಾಣಗಳಲ್ಲಿ ಕುಳಿತು ಹಾಟ್ ಹಾಟ್ ಆಗಿ ಎಣ್ಣೆ ಹೊಡಿಯೋಣ ಅಂತ ಬಂದ ಪ್ರವಾಸಿಗರಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಾಕ್ ನೀಡಿದ್ದಾರೆ.

Continue Reading

Trending

error: Content is protected !!