Chamarajanagar
ಸೋಲಿಗರ ಆರಾಧ್ಯ ದೈವ ಶ್ರೀಬಿಳಿಗಿರಿ ರಂಗನಾಥ ಸ್ವಾಮಿ ಬ್ರಹ್ಮರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು.

ಯಳಂದೂರು ಏಪ್ರಿಲ್ 23
ಸೋಲಿಗರ ಆರಾಧ್ಯ ದೈವ ಶ್ರೀಬಿಳಿಗಿರಿ ರಂಗನಾಥ ಸ್ವಾಮಿ ಬ್ರಹ್ಮರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು.
ಬೆಳಗ್ಗೆಯಿಂದಲೇ ಶ್ರೀ ಬಿಳಿಗಿರಿ ರಂಗನಾಥ ಸ್ವಾಮಿ ಮತ್ತು ಆಲಮೇಲು ರಂಗನಾಯಕಿ ಅಮ್ಮ ನವರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ನಂತರ ವೈಖಾನಾಸ ಆಗ ಮೊಕ್ತವಾಗಿ ಪೂರ್ವ ಪದ್ಧತಿಯಂತೆ ವೇದ ಮಂತ್ರಗಳನ್ನು ಉಚ್ಚರಿಸಿ ವಿಶೇಷ ಪೂಜೆಯನ್ನು ಸಲ್ಲಿಸಲಾಯಿತು. ನಂತರ ಚಂಪಕಾರಣ್ಯವಾಸಿ ಶ್ರೀ ಬಿಳಿಗಿರಿರಂಗನಾಥ ಸ್ವಾಮಿಗೆ ವಿಜಯಭ್ಯುದಯ ಶಾಲಿವಾಹನ ಶಕ ೧೯೪೫ನೇ ಶ್ರೀ ಶೋಭಾಕ್ಕೃತ್ ನಾಮ ಸಂವತ್ಸರದ ಉತ್ತರಾಯಣ ವಸಂತ ಋತು ವೈಖಾಸನ ಶುದ್ಧ ಚತುರ್ದಶಿ ತಿಥಿಮಾಸ ಪೂರ್ವ ಪದ್ಧತಿಯಂತೆ ಬೆಳಗ್ಗೆ 4 ಗಂಟೆಗೆ ಕಲ್ಯಾಣೋತ್ಸವ, 6:00ಗೆ ಪ್ರಸನ್ನ ಮಂಟಪೋತ್ಸವ ಗಳು ನಡೆಯಿತು. ನಂತರ ಬೆಳಗ್ಗೆ
10 .53 ರಿಂದ 11. 08ಎಂಟರ ಒಳಗೆ ಸಲ್ಲುವ ಶುಭ ಮಿಥುನ ಲಗ್ನದ ಮೇಷ ಕುಜ ನವಾಂಶದ ಶುಭ ಮುಹೂರ್ತದಲ್ಲಿ ಮಹಾ ರಥೋತ್ಸವಕ್ಕೆ ವಿಶೇಷ ಪೂಜೆ ಸಲ್ಲಿಸಲಾಯಿತು.
ರಂಗನಾಥಸ್ವಾಮಿ, ಪದ್ಮಾವತಿ, ತುಳಸಿ ಅಮ್ಮನವರ ಉತ್ಸವ ಮೂರ್ತಿಯನ್ನು ರಂಗನಾಥ ಸ್ವಾಮಿ ದೊಡ್ಡ ರಥೋತ್ಸವದಲ್ಲಿ ಕೂರಿಸಿ ಆಕಾಶದಲ್ಲಿ ಗರುಡ ಪಕ್ಷಿ ದೊಡ್ಡ ರಥೋತ್ಸವವನ್ನು ಮೂರು ಬಾರಿ ಪ್ರದಕ್ಷಿಣೆ ಹಾಕುತ್ತಿದ್ದಂತೆ ಸೋಲಿಗರು ಹಾಗೂ ಭಕ್ತರು ಶ್ರೀ ಬಿಳಿಗಿರಂಗನಾಥನ ನಾಮಸ್ಮರಣೆ ಮಾಡುತ್ತಾ ರಂಗಪ್ಪನ ತೇರು ಎಳೆದು ಹರ್ಷೋದ್ಗಾರ ವ್ಯಕ್ತಪಡಿಸಿದರು.
ಮಜ್ಜಿಗೆ ಪಾನಕ ವಿತರಣೆ.
ಬಿಳಿಗಿರಿ ರಂಗನಾಥ ಸ್ವಾಮಿ ತೆರಿಗೆ ರಾಜ ಬೀದಿಯಲ್ಲಿ ಅರವಟ್ಟಿಕೆಗಳಲ್ಲಿ ಭಕ್ತರು ಮಜ್ಜಿಗೆ ಪಾನಕ ಕೋಸಂಬರಿ ವಿತರಣೆ ಮಾಡಿದರು. ಅಲ್ಲದೆ ಭಕ್ತರಿಗೆ ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಅನ್ನ ಸಂತರ್ಪಣೆ ಮಾಡಿದರು. ದೇವಾಲಯದ ಆಡಳಿತ ಮಂಡಳಿ ವತಿಯಿಂದ ಸಹ ಜಾತ್ರೆಗೆ ಬರುವ ಎಲ್ಲಾ ಭಕ್ತರಿಗೂ ಕುಡಿಯುವ ನೀರಿನ ವ್ಯವಸ್ಥೆ ಮತ್ತು ಊಟದ ವ್ಯವಸ್ಥೆ ಮಾಡಲಾಗಿತ್ತು.
ಪ್ರತಿ ವರ್ಷದಂತೆ ಸಹ ಈ ವರ್ಷವೂ ಬಸ್ಸಿಗೆ ಸಮಸ್ಯೆ ಉಂಟಾಯಿತು. ಈ ಬಾರಿ ಜಿಲ್ಲಾಡಳಿತ 60ಕ್ಕೂ ಹೆಚ್ಚು ಬಸ್ಸುಗಳನ್ನು ಬಿಟ್ಟಿದ್ದರು ಸಹ ಬಸ್ ಬಾರದೆ ಭಕ್ತರು ಚಡಪಡಿಸಿದರು. ದ್ವಿಚಕ್ರ ವಾಹನ ನಿಷೇಧ ಮಾಡಿದ್ದರಿಂದ ಟ್ರಾಫಿಕ್ ಸಮಸ್ಯೆ ಇರಲಿಲ್ಲ. ದಾರಿ ಉದ್ದಕ್ಕೂ ಪೊಲೀಸ್ ಇಲಾಖೆ ಸಿಬ್ಬಂದಿ ನಿಯೋಜನೆಗೊಂಡಿದ್ದರಿಂದ ಕಾನೂನು ಸುವ್ಯವಸ್ಥೆ ಅಚ್ಚುಕಟ್ಟಾಗಿ ನಡೆಯಿತು.
ಬಹುಪರಾಕ್.
ಗ್ರಾಮೀಣ ಜನರು ಅಕ್ಕಿ, ಬೆಲ್ಲ, ಎಳ್ಳು ,ಕಾಯಿ, ಹಸಿಗಡಲೆ, ಕಜ್ಜಾಯ ಪುರಿ ಪಳಾರ ಮಾಡಿ ಬಿಳಿಗಿರಿ ರಂಗನಾಥ ಸ್ವಾಮಿ ದಾಸಯ್ಯರಿಂದ ಬ್ಯಾಟ ಮನೆ ಹಾಕಿಸಿ ಹಾಪರ ಗೋಪರ ಕೂಗಿ ಬಿಳಿಗಿರಿ ರಂಗನಾಥ ಸ್ವಾಮಿಗೆ ಬಹುಪರಾಕ್ ಹಾಕಿಸಿದರು.
ಮಳೆಗಾಗಿ ಪ್ರಾರ್ಥನೆ.
ರಾಜ್ಯದಲ್ಲಿ ಕೆಲವು ದಿನಗಳಿಂದ ಮಳೆ ಬರದೇ ಇರುವುದರಿಂದ ಮೈಸೂರು ಚಾಮರಾಜನಗರ ಮಂಡ್ಯ ಜಿಲ್ಲೆಗಳಿಂದ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ ರೈತರು ಉತ್ತಮ ಮಳೆ ಬೆಳೆಯಾಗುವಂತೆ ರಂಗನಾಥ ಸ್ವಾಮಿಯಲ್ಲಿ ಬೇಡಿಕೊಂಡರು.
ನವ ಜೋಡಿಗಳ ಕಲರವ
ಬಣ್ಣ ಬಣ್ಣದ ಉಡುಗೆ ತೊಟ್ಟ ನವ ಜೋಡಿಗಳು ಬಿಳಿಗಿರಿ ರಂಗನಾಥ ಸ್ವಾಮಿ ರಥೋತ್ಸವಕ್ಕೆ ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿ ಹಣ್ಣು ಜವನ ಎಸೆದು ಜೀವನ ಸುಖಮಯವಾಗಿರಲಿ ಎಂದು ರಂಗನಾಥ ಸ್ವಾಮಿಯಲ್ಲಿ ಕೋರಿದರು.
ಜಿಲ್ಲೆಯ ನಾನಾ ಭಾಗದ ಸೋಲಿಗ ಸಮುದಾಯದ ಜನರು ಜಾತ್ರೆಗೆ ಬಂದಿದ್ದು, ಬಿಳಿಗಿರಿರಂಗನಾಥ ಸ್ವಾಮಿ ತಮ್ಮದೇ ಸಮುದಾಯದ ಕುಸುಮಲೆಯನ್ನು ವರಿಸಿದ ಎಂಬ ಇತಿಹಾಸ ಇರುವುದರಿಂದ ಸೋಲಿಗರು ರಂಗನಾಥ ಸ್ವಾಮಿಯನ್ನು ರಂಗಾಭಾವ ಎಂದು ಕರೆಯುವ ಪದ್ಧತಿ ಹಿಂದಿನಿಂದಲೂ ಬಂದಿದ್ದು ತೇರಿನ ದಿವಸ ಎಲ್ಲಾ ಸೋಲಿಗರು ಬಿಳಿಗಿರಿರಂಗನ ಬೆಟಕ್ಕೆ ಆಗಮಿಸಿ ರಂಗನಾಥ ಸ್ವಾಮಿ ದರ್ಶನ ಪಡೆಯುತ್ತಾರೆ.
Chamarajanagar
ಚಾಮರಾಜನಗರ: ಫೆ.13ರಂದು ವಿವಿಧೆಡೆ ವಿದ್ಯುತ್ ವ್ಯತ್ಯಯ

ಚಾಮರಾಜನಗರ: ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮವು ತಾಲೂಕಿನ ಕಾಗಲವಾಡಿ ಶಾಖಾ ವ್ಯಾಪ್ತಿಯ ಚಂದಕವಾಡಿ ಉಪಕೇಂದ್ರದ ನವೋದಯ ಎನ್.ಜೆ.ವೈ ಹಾಗೂ ಹಿರಿಕೆರೆ ಎನ್.ಜೆ.ವೈ ಫೀಡರ್ ಗಳ ತುರ್ತು ಕಾಮಗಾರಿಯನ್ನು ಫೆಬ್ರವರಿ 13 ರಂದು ಹಮ್ಮಿಕೊಂಡಿರುವುದರಿಂದ ಅಂದು ಬೆಳಿಗ್ಗೆ 10 ರಿಂದ ಸಂಜೆ 6 ಗಂಟೆಯವರೆಗೆ ವಿವಿಧೆಡೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.
ಹೆಬ್ಬಸೂರು, ಬಸಪ್ಪನಪಾಳ್ಯ, ಸರಗೂರು, ಹುರಳಿನಂಜನಪುರ, ಕಾಗಲವಾಡಿ, ಲಿಂಗರಾಜಪುರ, ಕರಿಯನಕಟ್ಟೆ, ಮಲ್ಲುಪುರ, ಹಂಚಿತಾಳಪುರ, ಕೊಕ್ಕನಹಳ್ಳಿ, ಅಯ್ಯನಪುರ, ಹಿತ್ತಲಗುಡ್ಡ, ಕೋಟಂಬಳ್ಳಿ, ಮಲ್ಲೇದೇವನಹಳ್ಳಿ ಹಾಗೂ ನಾಗವಳ್ಳಿ, ನಲ್ಲೂರು, ದೇವರಾಜಪುರ, ಕೋಟೆತಿಟ್ಟು, ಹೊಂಡರಬಾಳು, ಚಂದಕವಾಡಿ, ಅರಳೀಪುರ ಗ್ರಾಮಗಳಲ್ಲಿವಿದ್ಯುತ್ ವ್ಯತ್ಯಯವಾಗಲಿದೆ.
ಗ್ರಾಹಕರು ಸಹಕರಿಸುವಂತೆ ನಿಗಮದ ಸಂತೇಮರಹಳ್ಳಿ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Chamarajanagar
ಚಿಣ್ಣರ ಕರ್ನಾಟಕ ದರ್ಶನ: ವಿದ್ಯಾರ್ಥಿಗಳಿಗೆ ವೈವಿಧ್ಯತೆ ತಿಳಿಯಲು ಸಹಕಾರಿ ಎಂದ ಮಾರಯ್ಯ

ಯಳಂದೂರು: ಪರಿಶಿಷ್ಟ ಜಾತಿ ಮತ್ತು ಪಂಗಡದ ವಿಶೇಷ ಯೋಜನೆಯಡಿ ತಾಲ್ಲೂಕಿನ ಎಂಟನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ 75 ಮಕ್ಕಳಿಗೆ ಐದು ದಿನಗಳ ಚಿಣ್ಣರ ಕರ್ನಾಟಕ ದರ್ಶನಕ್ಕೆ ಮಂಗಳವಾರ (ಫೆ.11) ಕ್ಷೇತ್ರ ಶಿಕ್ಷಣಾಧಿಕಾರಿ ಮಾರಯ್ಯ ಚಾಲನೆ ನೀಡಿದರು.
ದೇಶ ಸುತ್ತು ಕೋಶ ಓದು ಎಂಬಂತೆ ಪ್ರವಾಸದ ಸದುಪಯೋಗ ಪಡೆದು ವಿವಿಧ ರೀತಿಯ ಪ್ರದೇಶಗಳ ವೈವಿಧ್ಯತೆ ತಿಳಿಯಲು ಮಾಹಿತಿ ನೀಡಿದರು.
ಈ ವೇಳೆ ನೌಕರರ ಸಂಘದ ನಿರ್ದೇಶಕ ಎಂ. ರಾಜು ಮಕ್ಕಳಿಗೆ ಸಿಹಿ ನೀಡಿ ಶುಭ ಹಾರೈಸಿದರು. ಶಿಕ್ಷಕರ ಸಂಘದ ಚಂದ್ರಮ್ಮ, ಸಲೀನಾ, ಶಿಕ್ಷಣ ಸಂಯೋಜಕರಾದ ಕುಮಾರ್, ಸಿ ಆರ್ ಪಿ ಎಸ್ ರೇಚಣ್ಣ, ತೇಜಸ್ವಿನಿ, ಶಿಕ್ಷಕರಾದ ಮಹದೇವ್, ಗಿರಿನಾಯಕ್ ಶಶಿಧರ್, ನಾಗರಾಜ್, ಸುನೀಲ್ ಇತರರು ಹಾಜರಿದ್ದರು.
Chamarajanagar
ಚಿನ್ನಾಭರಣ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಆಟೋ ಚಾಲಕ

ಚಾಮರಾಜನಗರ: ಮಹಿಳೆಯೊಬ್ಬರು ಆಟೋದಲ್ಲಿ ಬಿಟ್ಟು ಹೋಗಿದ್ದ ಚಿನ್ನಾಭರಣದ ಬ್ಯಾಗ್ ಅನ್ನು ವಾಪಸ್ ನೀಡಿ ನಗರದ ಆಟೋ ಚಾಲಕ ಸಿದ್ದರಾಜು ಪ್ರಾಮಾಣಿಕತೆ ಮೆರೆದಿದ್ದಾರೆ.
ನಗರದ ಶ್ರೀ ಭುವನೇಶ್ವರಿ ವೃತ್ತದ ಬಳಿ ಹನುಮನಪುರ ನಿವಾಸಿಯಾದ ರಶ್ಮಿ ಅವರು ಬಸ್ ಹತ್ತುವ ಅವಸರದಲ್ಲಿ ಚಿನ್ನಾಭರಣವಿದ್ದ ಬ್ಯಾಗನ್ನು ಆಟೋದಲ್ಲೇ ಮರೆತು ಹೋಗಿದ್ದು, ಬಳಿಕ ಬ್ಯಾಗ್ ಅನ್ನು ಕಳೆದುಕೊಂಡ ವಿಷಯವನ್ನು ಪಟ್ಟಣ ಪೊಲೀಸ್ ಠಾಣೆಗೆ ತಿಳಿಸಿದ್ದಾರೆ.
ಅಷ್ಟರಲ್ಲೇ ನಗರದ ಆಟೋ ಚಾಲಕ ಸಿದ್ದರಾಜು ಎಂಬುವವರು ಆಟೋದಲ್ಲಿದ್ದ ಚಿನ್ನಾಭರಣದ ಬ್ಯಾಗ್ ಅನ್ನು ಪೊಲೀಸ್ ಠಾಣೆಗೆ ತಂದು ಒಪ್ಪಿಸಿದ್ದಾರೆ. ತದನಂತರ ಪೊಲೀಸರು ಬ್ಯಾಗ್ ಅನ್ನು ರಶ್ಮಿಗೆ ಒಪ್ಪಿಸಿದರು.
-
Kodagu12 hours ago
ಸ್ಪ್ರಿಂಕ್ಲರ್ ಪೈಪಿಗೆ ಕೃಷಿ ಇಲಾಖೆಯಿಂದ ಸಹಾಯಧನ
-
Kodagu13 hours ago
ಮಡಿಕೇರಿಯಲ್ಲಿ ಡಿ ಗ್ರೂಪ್ ಹುದ್ದೆಗಳಿಗೆ ಅರ್ಜಿ ಆಹ್ವಾನ
-
Kodagu16 hours ago
ಕೊಡಗು ಗೌಡ ಸಮಾಜಗಳ ಒಕ್ಕೂಟ ತೀವ್ರ ಅಸಮಾಧಾನ: ಕಾರಣವೇನು?
-
Hassan21 hours ago
HASSAN: ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ಟಾಟಾ ವಿಂಗರ್ ವಾಹನ ಪಲ್ಟಿ
-
Mysore21 hours ago
ಅವಹೇಳನಕಾರಿ ಚಿತ್ರವುಳ್ಳ ಪೋಸ್ಟ್ : ಆರೋಪಿ ಬಂಧನಕ್ಕೆ ರಸ್ತೆ ತಡೆದು ಪ್ರತಿಭಟನೆ
-
Hassan17 hours ago
ಯುವ ಕಾಂಗ್ರೆಸ್ ಚುನಾವಣೆಯಲ್ಲಿ ಅಕ್ರಮ: ಮರು ಚುನಾವಣೆಗೆ ಒತ್ತಾಯ
-
State14 hours ago
ನಮ್ಮ ಮೆಟ್ರೋ ದರ ಏರಿಕೆ: ಸಿಎಂ ಸಿದ್ದರಾಮಯ್ಯ ಅವರ ಮಾಧ್ಯಮ ಪ್ರಕಟಣೆ
-
Hassan21 hours ago
ಶ್ರೀ ಲಕ್ಷ್ಮೀ ವೆಂಕಟೇಶ್ವರಸ್ವಾಮಿ ಜಾತ್ರಾ ಮಹೋತ್ಸವ: ಜೆಡಿಎಸ್ ಹಾಗೂ ಕಾಂಗ್ರೆಸ್ನಿಂದ ಪ್ರತ್ಯೇಕವಾಗಿ ಆರ್ಕೆಸ್ಟ್ರಾ ಆಯೋಜನೆ