Connect with us

Kodagu

ಬಾರ್ ವೆಂಡರ್ ಕೊಲೆ – ಆರೋಪಿ ಬಂಧನ

Published

on

ವರದಿ : ಟಿ.ಆರ್ ಪ್ರಭುದೇವ್ ಕುಶಾಲನಗರ
=================
ಕುಶಾಲನಗರದ ಹೃದಯ ಭಾಗದಲ್ಲಿರುವ ಖಾಸಗಿ ಬಾರ್ ಅಂಡ್ ರೆಸ್ಟೋರೆಂಟ್‌ನಲ್ಲಿ ವೆಂಡರ್ ಆಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಯ ಬರ್ಬರ ಹತ್ಯೆ ನಡೆದ ಘಟನೆ ಭಾನುವಾರ ನಡೆದಿದೆ.
ಮೂಲತ ಸೋಮವಾರಪೇಟೆಯ ನಿವಾಸಿ ಸಂತೋಷ್ (42) ಕೊಲೆಯಾದ ದುರ್ದೈವಿ.
ಸಂತೋಷ್ ಹಲವಾರು ವರ್ಷಗಳಿಂದ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದರು. ಭಾನುವಾರ ಕೂಡ ಕೆಲಸದಲ್ಲಿ ಇದ್ದು ಬಾರ್ ಮುಚ್ವುವ ಸಂದರ್ಭದಲ್ಲಿ ಅಂದಾಜು ರಾತ್ರಿ 11.25 ರ ಸಮಯದಲ್ಲಿ ಬಾರ್‌ನಲ್ಲಿ ಮದ್ಯ ಸೇವಿಸುತ್ತಿದ್ದ ಜನತಾ ಕಾಲೋನಿಯ ನಿವಾಸಿ ಹರ್ಷ (33) ನಡುವೆ ಕ್ಷುಲ್ಲಕ ಕಾರಣಕ್ಕೆ ಮಾತಿನ ಚಕಮಕಿ ನಡೆದಿದೆ. ಬಾರ್ ಸಮೀಪದಲ್ಲಿ ಕೈ ತೊಳೆಯುವ ಜಾಗದಲ್ಲಿ ಹರ್ಷ ಸಂತೋಷ್ ಮೇಲೆ ದೊಡ್ಡ ಬಿಯರ್ ಗ್ಲಾಸ್‌ನಿಂದ ತಲೆಗೆ ಹೊಡೆದು ನಂತರ ಚೂರಾದ ಗ್ಲಾಸ್‌ನ ಹರಿತವಾದ ಭಾಗದಿಂದ ಕುತ್ತಿಗೆ ಇರಿದಿದ್ದಾನೆ ಎಂದು ಪೋಲಿಸ್ ಮೂಲಗಳು ತಿಳಿಸಿದೆ.
ಘಟನೆಯಲ್ಲಿ ತೀವ್ರವಾಗಿ ರಕ್ತಸ್ರಾವಗೊಂಡ ಸಂತೋಷ್‌ನನ್ನು ಹೋಟೆಲ್ ಮಾಲೀಕರು ಕೂಡಲೇ ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಪ್ರಥಮ ಚಿಕಿತ್ಸೆ ಕೊಡಿಸಿದ ನಂತರ ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾ ಕೇಂದ್ರ ಮಡಿಕೇರಿಗೆ ಕರೆದುಕೊಂಡು ಹೋಗುವ ಸಂದರ್ಭದಲ್ಲಿ ಸಂತೋಷ್ ಮೃತಪಟ್ಟಿದ್ದಾರೆ.
ಆರೋಪಿಹರ್ಷನನ್ನು ಪೋಲಿಸ್ ಬಂದಿಸಿದ್ದಾರೆ. ಘಟನಾ ಸ್ಥಳಕ್ಕೆ ಎಎಸ್‌ಪಿ.ಸುಂದರ್ ರಾಜ್, ಡಿವೈಎಸ್‌ಪಿ ಗಂಗಾಧರಪ್ಪ, ಸಿ.ಐ ಪ್ರಕಾಶ್ ಭೇಟಿ ಪರಿಶೀಲನೆ ನಡೆಸಿದರು.

Continue Reading
Click to comment

Leave a Reply

Your email address will not be published. Required fields are marked *

Kodagu

ಭಕ್ತಿಬಾವದಿಂದ‌ ಜರುಗಿದ ಶ್ರಾವಣ ಮಾಸದ ಶ್ರೀ ಶನೀಶ್ವರ ಪೂಜಾ ಕಾರ್ಯ:

Published

on

ವಿರಾಜಪೇಟೆ: ಆ:
ಶ್ರಾವಣ ಮಾಸದ ಪ್ರಥಮ ಶನಿವಾರ ದಿನದ ಅಂಗವಾಗಿ ಶ್ರೀ ಶನೀಶ್ವರ ಮತ್ತು ನವಗ್ರಹ ದೇವಾಲಯದಲ್ಲಿ ಶ್ರಾವಣ ಶನಿವಾರದ ಪೂಜಾ ಕೈಂಕಾರ್ಯಗಳು ಭಕ್ತಿ ಬಾವದಿಂದ ಜರುಗಿತು.


ವಿರಾಜಪೇಟೆ ತಾಲ್ಲೂಕಿನ ಮಗ್ಗುಲ ಗ್ರಾಮದ ಶ್ರೀ ಶನೀಶ್ವರ ಮತ್ತು ನವಗ್ರಹ ದೇವಾಲಯದಲ್ಲಿ ಶ್ರಾವಣ ಮಾಸದ ಪ್ರಥಮ ಶನಿವಾರದ ಪೂಜಾ ಕಾರ್ಯಕ್ರಮಗಳು ಬೆಳಿಗ್ಗೆ ಗಣಪತಿ ಹೋಮದೊಂದಿಗೆ ಆರಂಭವಾಯಿತು. ಅರ್ಚಕರಾದ ಸಂತೋಷ್ ಹೆಬ್ಬಾರ್ ಮತ್ತು ಪವನ್ ಕುಮಾರ್ ಭಟ್ ಸಾರಥ್ಯದಲ್ಲಿ ಪೂಜೆಗಳು ಆರಂಭಗೊಂಡಿತು. ದೇವಾಲಯದಲ್ಲಿ ನವಗ್ರಹ ಪೂಜೆ, ಶನಿ ಶಾಂತಿ,ಶನಿ ಜಪ,ರಾಹು ಕೇತು ಜಪ, ಕುಂಕುಮಾರ್ಚನೆ, ಮೃತ್ಯುಂಜಯ ಜಪ ಪೂಜಾದಿಗಳು ನಡೆಯಿತು. ಬಳಿಕ ಮಧ್ಯಾಹ್ನ ೧-೦೦ ಗಂಟೆಗೆ ಶ್ರೀ ಶನೀಶ್ವರ ಸ್ವಾಮಿಗೆ ಮಾಹಾ ಮಂಗಳಾರತಿ, ಮಾಹಾಪೂಜೆ ಸಲ್ಲಿಕೆಗೊಂಡಿತ್ತು.


ದೇವಾಲಯದಲ್ಲಿ ತಾ 17 ,24, 31 ರಂದು ಶ್ರಾವಣ ಶನಿವಾರದ ವಿಶೇಷ ಪೂಜೆಗಳು ನಡೆಯಲಿದೆ ಹಾಗೂ ಮಾಹಾಪೂಜೆಯ ಬಳಿಕ ಭಕ್ತಮಾಹಾಶಯರೀಗೆ ಅನ್ನಸಂತರ್ಪಣೆ ನಡೆಯಲಿದೆ.
ಮಾಹಾಪೂಜೆಯ ಸಂಧರ್ಭದಲ್ಲಿ ದೇಗುಲ ತಕ್ಕರಾದ ಚೊಕಂಡ ರಮೇಶ್ ಮತ್ತು ಕುಟುಂಬಸ್ಥರು, ಪುರೋಹಿತ ವರ್ಗ, ಗ್ರಾಮಸ್ಥರು ನಗರ ಮತ್ತು ಸ್ಥಳೀಯ ಗ್ರಾಮಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ದೇಗುಲಕ್ಕೆ ಆಗಮಿಸಿ ಶ್ರೀ ಶನೀಶ್ವರ ದೇವರ ಅನುಗ್ರಹ ಪಡೆದು ಪುನಿತರಾದರು.

Continue Reading

Kodagu

ಅಜಯ್ ಮಾಖೇನ್ ಅವರಿಗೆ ಧನ್ಯವಾದ ಅರ್ಪಿಸಿದ ಕೊಡವಾಮೆರ ಕೊಂಡಾಟ ಸಂಘಟನೆ

Published

on

ಮಡಿಕೇರಿ : ರಾಜ್ಯ ಸಭಾ ಸಂಸದ ಅಜಯ್ ಮಾಖೇನ್ ಅವರು ರಾಜ್ಯ ಸಭೆಯಲ್ಲಿ ಕೊಡವ ಹಾಕಿ ನಮ್ಮೆಯ ಕುರಿತು ಪ್ರಸ್ತಾಪಿಸಿ, ಕೊಡವರ ಬಗ್ಗೆ ವ್ಯಕ್ತಪಡಿಸಿದ ಹೆಮ್ಮೆಯ ಅಭಿಪ್ರಾಯಕ್ಕೆ ಕೊಡವಾಮೆರ ಕೊಂಡಾಟ ಸಂಘಟನೆ ಜನಾಂಗದ ಪರವಾಗಿ ಅಭಿನಂದನೆ ಸಲ್ಲಿಸಿದ್ದಾರೆ.
ಈ ಕುರಿತು ಪತ್ರ ಬರೆದಿರುವ ಸಂಘಟನೆ ಅಧ್ಯಕ್ಷ ಚಾಮೆರ ದಿನೇಶ್ ಬೆಳ್ಯಪ್ಪ ಅವರು, ಶ್ರೀ ಅಜಯ್ ಮಾಕೇನ್ ಅವರಿಗೆ ಇಮೈಲ್, ಎಕ್ಸ್ ಮತ್ತು ವಾಟ್ಸಾಪ್ ಮೂಲಕ ಸಂದೇಶ ಕಳುಹಿಸಿದ್ದಾರೆ.


ಗಿನ್ನಿಸ್ ವಿಶ್ವ ದಾಖಲೆಯಲ್ಲಿ ಸ್ಥಾನ ಪಡೆದಿರುವ, ಕೊಡವ ಹಾಕಿ ನಮ್ಮೆಗೆ ಕೇಂದ್ರ ಸರ್ಕಾರ ಅನುದಾನ ನೀಡಬೇಕು, ಭಾರತ ಹಾಕಿಗೆ ಕೊಡವ ಜನಾಂಗ ನೀಡಿರುವ ಕೊಡುಗೆ ಅಪಾರವಾಗಿದ್ದು, ಅವರ ಈ ಸಾಧನೆಯೂ ಕೇಂದ್ರ ಸರ್ಕಾರದ ಯಾವುದೇ ಸಹಾಯ, ಅನುದಾನ ಇಲ್ಲದೆಯೆ ಮಾಡಿರುವ ಹೆಗ್ಗಳಿಕೆಯಾಗಿದೆ. ಕೊಡಗಿನ ಕ್ರೀಡಾ ಸ್ಫೂರ್ತಿಯನ್ನ ಮನಗಂಡು ಸರ್ಕಾರ ಕೂಡಲೇ ಅರುಣಾಚಲದ ಕೂನೂರ್ ಮಾದರಿಯಲ್ಲಿ ಉನ್ನತ ದರ್ಜೆಯ ಕ್ರೀಡಾ ತರಬೇತಿ ಕೇಂದ್ರವನ್ನು ತೆರೆಯಬೇಕೆಂದು ಅಜಯ್ ಮಾಖೇನ್ ಕೇಂದ್ರ ಸರ್ಕಾರವನ್ನ ಒತ್ತಾಯಿಸಿದ್ದರು.


ದೇಹಲಿ ಮೂಲದ ಸಂಸದರೊಬ್ಬರು ಪ್ರಪಂಚದ ವಿಶಿಷ್ಟ ಸಂಸ್ಕೃತಿ ಮತ್ತು ಸ್ವಾಭಿಮಾನಿ ಜನಾಂಗವಾದ ಕೊಡವರ ಬಗ್ಗೆ ಹಾಗೂ ಕೊಡವ ಹಾಕಿಯ ಕುರಿತು ಸಂಸತ್ತಿನಲ್ಲಿ ದ್ವನಿ ಎತ್ತಿರುವುದಕ್ಕೆ, ಸಮಸ್ಥ ಕೊಡವ ಜನಾಂಗದ ಪರವಾಗಿ ಶ್ರೀ ಅಜಯ್ ಮಾಖೇನ್ ಅವರಿಗೆ ಅಭಿನಂದನೆಯ ಜೊತೆಗೆ, ಧನ್ಯವಾದ ತಿಳಿಸಿದ ಸಂಘಟನೆ, ಶ್ರೀಯುತರ ಮನವಿಯನ್ನು ಪುರ್ಸ್ಕರಿಸಿ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೂಡಲೆ ಅನುಷ್ಟಾನಕ್ಕೆ ತರಬೇಕೆಂದು ಒತ್ತಾಯಿಸಿದೆ.

Continue Reading

Kodagu

ಗೋಣಿಕೊಪ್ಪಲು, ಕೈಕೇರಿಯ ವಿವಿಧೆಡೆ ಆ.10 ರಂದು ವಿದ್ಯುತ್ ವ್ಯತ್ಯಯ

Published

on

ಜನಮಿತ್ರ ಮಡಿಕೇರಿ : ಪೊನ್ನಂಪೇಟೆ ವಿದ್ಯುತ್ ವಿತರಣಾ ಕೇಂದ್ರದ ಎಫ್7 ಗೋಣಿಕೊಪ್ಪಲು ಫೀಡರ್‌ನ ಹೊಸ ಲಿಂಕ್‌ಲೈನ್ ಕಾಮಗಾರಿ ಪ್ರಾರಂಭಿಸಬೇಕಿರುವ ಹಿನ್ನೆಲೆ ಆಗಸ್ಟ್, 10 ರಂದು ಬೆಳಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ ಈ ಫೀಡರ್ ವ್ಯಾಪ್ತಿಯಲ್ಲಿ ವಿದ್ಯುತ್ ಸರಬರಾಜು ಸ್ಥಗಿತಗೊಳಿಸಲಾಗುವುದು.
ಆದ್ದರಿಂದ ಗೋಣಿಕೊಪ್ಪ ಪಟ್ಟಣ, ಜೋಡುಬೀಟೆ, ಅರವತ್ತೋಕ್ಲು, ಕೈಕೇರಿ, ಹಾತೂರು, ಹೊಸಕೋಟೆ, ಕೆ.ಬೈಗೋಡು, ಕುಂದ, ಅತ್ತೂರು, ಹೊಸೂರು ಹಾಗೂ ಸುತ್ತಮುತ್ತಲ÷ಗ್ರಾಮಗಳಿಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಸೆಸ್ಕ್ ಕಾರ್ಯ ಮತ್ತು ಪಾಲನೆ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಅವರು ತಿಳಿಸಿದ್ದಾರೆ.


ಹಾಗೆಯೇ ಸೋಮವಾರಪೇಟೆ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತುರ್ತು ನಿರ್ವಹಣೆ ಕಾರ್ಯ ನಿರ್ವಹಿಸಬೇಕಿರುವ ಹಿನ್ನೆಲೆ ಆಗಸ್ಟ್, 10 ರಂದು ಬೆಳಗ್ಗೆ 10 ರಿಂದ ಸಂಜೆ 6 ಗಂಟೆಯವರೆಗೆ ಎಫ್2 ಶಾಂತಳ್ಳಿ, ಎಫ್3 ಐಗೂರು ಹಾಗೂ ಎಫ್4 ಸೋಮವಾರಪೇಟೆ ವಿದ್ಯುತ್ ಉಪ ಕೇಂದ್ರಗಳಲ್ಲಿ ವಿದ್ಯುತ್ ಸರಬರಾಜು ಸ್ಥಗಿತಗೊಳಿಸಲಾಗುತ್ತದೆ.


ಆದ್ದರಿಂದ ಸೋಮವಾರಪೇಟೆ ಪಟ್ಟಣ, ಚೌಡ್ಲು, ಹಾನಗಲ್ಲು, ನಗರೂರು, ಚಂದನಚುಕ್ಕಿ, ದುದ್ದಗಲ್ಲು, ಹಾನಗಲ್ಲು ಬಾಣೆ, ಗಾಂಧಿನಗರ, ಆಲೆಕಟ್ಟಿರಸ್ತೆ, ವಲ್ಲಭಾಯಿರಸ್ತೆ, ಬಸವೇಶ್ವರ ರಸ್ತೆ, ಶಾಂತಳ್ಳಿ, ಗೌಡಳ್ಳಿ, ಅಬ್ಬೂರುಕಟ್ಟೆ, ಐಗೂರು, ಸಜ್ಜಳ್ಳಿ, ಹೊಸತೋಟ, ಗರಗಂದೂರು, ಮೂಡುಗದ್ದೆ, ಭಟ್ಕನಳ್ಳಿ, ಕಾಜೂರು, ಗಿರಿವ್ಯಾಲಿ, ಕಂತಳ್ಳಿ, ಜೌತಳ್ಳಿ, ಯಡವಾರೆ, ಅಬ್ಬಿಮಠ, ಬಾಚಳ್ಳಿ, ವನಗೂರುಕೊಪ್ಪ, ಬಸವನಕೊಪ್ಪ, ನಗರಳ್ಳಿ, ಗೌರಿಕೆರೆ, ಕುಂದಳ್ಳಿ, ಹಂಚಳ್ಳಿ, ಮಲ್ಲಳ್ಳಿ, ಬೀದಳ್ಳಿ, ಹೆಗ್ಗಡಮನೆ ಹಾಗೂ ಸುತ್ತಮುತ್ತಲ÷ವ್ಯಾಪ್ತಿಯ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಸೆಸ್ಕ್ ಕಾರ್ಯ ಮತ್ತು ಪಾಲನೆ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಅನಿತಾ ಬಾಯಿ ಅವರು ತಿಳಿಸಿದ್ದಾರೆ.

Continue Reading

Trending

error: Content is protected !!