Mandya
ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಶೇ.81.67 ಮತದಾನ

ಮಂಡ್ಯ : ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಶೇ.81.67 ರಷ್ಟು ಮತದಾನವಾಗಿದ್ದು, ಕಳೆದ ಬಾರಿಗಿಂತ ಈ ಬಾರಿ ಹೆಚ್ಚಿನ ಮತದಾನವಾಗಿದೆ.
ಮಂಡ್ಯ ಲೋಕಸಭಾ ಕ್ಷೇತ್ರದ ಎಂಟು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮಳವಳ್ಳಿ- 77.23%, ಮದ್ದೂರು – 82.99%, ಮೇಲುಕೋಟೆ -87.20%, ಮಂಡ್ಯ-77%, ಶ್ರೀರಂಗಪಟ್ಟಣ-84.48%, ನಾಗಮಂಗಲ – 84.73%, ಕೆ.ಆರ್.ಪೇಟೆ-80.63%,ಕೆ ಆರ್ ನಗರ ಕ್ಷೇತ್ರದಲ್ಲಿ 80.50% ರಷ್ಟು ಮತದಾನವಾಗಿದೆ.
ಕಳೆದ ಬಾರಿಯ ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಶೇ.80.41 ರಷ್ಟು ಮತದಾನವಾಗಿತ್ತು, ಈ ಬಾರಿ 1.26 ರಷ್ಟು ಹೆಚ್ಚಿನ ಮತದಾನದ ಮೂಲಕ ರಾಜ್ಯದಲ್ಲಿ ದಾಖಲೆ ಬರೆದಿದೆ.
ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಡು 17,79,243 ಮತದಾರರಿದ್ದು, 14,53,067 ಮತದಾರರು ತಮ್ಮ ಹಕ್ಕನ್ನುಬಹಕ್ಕು ಚಲಾಯಿಸಿದ್ದಾರೆ. ಈ ಪೈಕಿ 7,20,520 ಪುರುಷರು, 7,32,503 ಮಹಿಳೆಯರಾಗಿದ್ದು 44 ಇತರರಾಗಿದ್ದಾರೆ.
ಕ್ಷೇತ್ರ ವ್ಯಾಪ್ತಿ ಮತದಾನದ ವಿವರ
ಮಳವಳ್ಳಿಯಲ್ಲಿ 1,95,889 ಮತದಾರರು ಹಕ್ಕು ಚಲಾಯಿಸಿದ್ದು, ಈ ಪೈಕಿ 98,146 ಪುರುಷರು, 97,741 ಮಹಿಳೆಯರು, 2 ಇತರೆ. ಮದ್ದೂರಿನಲ್ಲಿ 1,79,038 ಮತದಾರರು ಮತದಾನ ಮಾಡಿದ್ದು, ಈ ಪೈಕಿ 87,331 ಪುರುಷರು 91,702 ಮಹಿಳೆಯರು, 05 ಇತರೆ. ಮೇಲುಕೋಟೆ ಕ್ಷೇತ್ರದಲ್ಲಿ 1,77,368 ಮತದಾರರು ಮತ ಚಲಾಯಿಸಿದ್ದರೆ ಇವರಲ್ಲಿ 88,175 ಪುರುಷರು, 89189 ಮಹಿಳೆಯರು, 04 ಇತರೆ. ಮಂಡ್ಯ ಕ್ಷೇತ್ರದಲ್ಲಿ 1,76,841 ಮತದಾರರು ಮತದಾನ ಮಾಡಿದ್ದು, ಈ ಪೈಕಿ 86,970 ಪುರುಷರು, 89,859 ಮಹಿಳೆಯರು, 12 ಇತರೆ.
ಶ್ರೀರಂಗಪಟ್ಟಣ ಕ್ಷೇತ್ರದಲ್ಲಿ 1,83,851 ಮತದಾರರು ಮತ ಹಕ್ಕು ಚಲಾಯಿಸಿದ್ದು, ಇವರಲ್ಲಿ 90,507 ಪುರುಷರು, 93,336 ಮಹಿಳೆಯರು, 08 ಇತರೆ. ನಾಗಮಂಗಲ ಕ್ಷೇತ್ರದಲ್ಲಿ 1,83,480 ಮತದಾರರು ಮತದಾನ ಮಾಡಿದ್ದು, ಈ ಪೈಕಿ 92,195 ಪುರುಷರು, 91,281 ಮಹಿಳೆಯರು, 04 ಇತರೆ. ಕೆಆರ್ ಪೇಟೆ ಕ್ಷೇತ್ರದಲ್ಲಿ 1,80,477 ಮತದಾರರು ಮತ ಹಕ್ಕು ಚಲಾಯಿಸಿದ್ದರೆ ಇವರಲ್ಲಿ 89,362 ಪುರುಷರು, 91,112 ಮಹಿಳೆಯರು 03 ಇತರೆ. ಕೆ.ಆರ್.ನಗರ ಕ್ಷೇತ್ರದಲ್ಲಿ 1,76,123 ಮತದಾರರು ಮತದಾನ ಮಾಡಿದ್ದರೆ ಇವರಲ್ಲಿ 87,834 ಪುರುಷರು, 88,283 ಮಹಿಳೆಯರು, 06 ಇತರರು ಮತ ಚಲಾಯಿಸಿದ್ದಾರೆ.
Mandya
ಏ.27 ರಂದು ಜಿಲ್ಲಾ ಮಟ್ಟದ ಬೌದ್ಧ ಸಮ್ಮೇಳನ : ಗುರುಮೂರ್ತಿ

ಮಂಡ್ಯ: ಮಂಡ್ಯ ಜಿಲ್ಲಾ ಬುದ್ಧಿಸ್ಟ್ ಒಕ್ಕೂಟ, ಮಾನವ ಬಂಧುತ್ವ ವೇದಿಕೆ ಹಾಗೂ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ಸಹಯೋಗದಲ್ಲಿ ಜಿಲ್ಲಾ ಮಟ್ಟದ ಬೌದ್ಧ ಸಮ್ಮೇಳನವು ಏಪ್ರಿಲ್ ೨೭ ರ ಬೆಳಿಗ್ಗೆ ೧೧ ಗಂಟೆಗೆ ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಆಯೋಜಿಸಲಾಗಿದೆ ಎಂದು ಒಕ್ಕೂಟದ ಉಪಾಧ್ಯಕ್ಷ ಗುರುಮೂರ್ತಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೌದ್ಧ ಸಮ್ಮೇಳನದ ನಿಮಿತ್ತ ನಡೆಯುವ ಬುದ್ಧ ಅಂಬೇಡ್ಕರ್ ಮತ್ತು ಸರ್ವಾಧ್ಯಕ್ಷರ ಮೆರವಣಿಗೆಗೆ ಶಾಸಕ ರವಿಕುಮಾರ್ ಗಣಿಗ, ಜಿಲ್ಲಾಧಿಕಾರಿ ಡಾ.ಕುಮಾರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕೆ.ಆರ್.ನಂದಿನಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗದ ಅಂಬೇಡ್ಕರ್ ಪ್ರತಿಮೆ ಬಳಿ ಬೆಳಿಗ್ಗೆ ೧೦ಗಂಟೆಗೆ ಚಾಲನೆ ನೀಡಲಿದ್ದಾರೆ ಎಂದರು.
ನಂತರ ವೇದಿಕೆ ಕಾರ್ಯಕ್ರಮ ನಡೆಯಲಿದ್ದು, ಚನ್ನಲಿಂಗನಹಳ್ಳಿ ಬೌದ್ಧ ಬಿಕ್ಕು ಜೀತವನದ ಮನೋರಕ್ಕಿತ ಬಂತೇಜಿ ದಿವ್ಯ ಸಾನಿಧ್ಯದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎನ್ ಚೆಲುವರಾಯಸ್ವಾಮಿ ಸಮ್ಮೇಳನಕ್ಕೆ ಚಾಲನೆ ನೀಡಲಿದ್ದು, ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಸರ್ವಾಧ್ಯಕ್ಷತೆ ವಹಿಸಲಿದ್ದಾರೆ. ಬುದ್ಧಿಸ್ಟ್ ಒಕ್ಕೂಟದ ಎಂ ಸಿ ಬಸವರಾಜು ಪ್ರಾಸ್ತಾವಿಕ ನುಡಿ ನುಡಿಯಲಿದ್ದು, ಶಾಸಕರಾದ ರವಿಕುಮಾರ್ ಗಣಿಗ, ಕೆ ಎಂ ಉದಯ್, ರಮೇಶ್ ಬಾಬು ಬಂಡಿಸಿದ್ದೇಗೌಡ, ಪಿ ಎಂ ನರೇಂದ್ರಸ್ವಾಮಿ, ದರ್ಶನ್ ಪುಟ್ಟಣ್ಣಯ್ಯ, ಎಚ್ ಟಿ ಮಂಜು ಘನ ಉಪಸ್ಥಿತಿ ವಹಿಸುವರು, ರೈತ ಮುಖಂಡರಾದ ಸುನಂದ ಜಯರಾಮ್, ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಗುರುಪ್ರಸಾದ್ ಕೆರಗೋಡು, ಜಿಲ್ಲಾ ಬುದ್ಧಿಸ್ಟ್ ಒಕ್ಕೂಟದ ಅಧ್ಯಕ್ಷ ಚಿಕ್ಕರಸಿನಕೆರೆ ಸಿ ಶಿವಲಿಂಗಯ್ಯ, ಪ್ರಧಾನ ಕಾರ್ಯದರ್ಶಿ ಅಭಿ ಗೌಡ, ಉಪಾಧ್ಯಕ್ಷ ನಾಗರಾಜ್ ಅಂಬೇಡ್ಕರ್, ಟಿ ಎಸ್ ಕಾಳಯ್ಯ, ಟಿ ಎನ್ ಸತ್ಯ, ಎಂ ವಿನಯಕುಮಾರ್, ಬಿ ಟಿ ವಿಶ್ವನಾಥ್, ಲಂಕೇಶ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಮಧ್ಯಾಹ್ನ ೧೨-೧೫ ಕ್ಕೆ ‘ಬುದ್ಧನ ಚಿಂತನೆ ಮತ್ತು ಪರಿಣಾಮಗಳು’ ವಿಷಯ ಕುರಿತ ಗೋಷ್ಠಿಯು ನಡೆಯಲಿದ್ದು, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಲೇಖಕ ಮೂಡ್ನಾ ಕೂಡು ಚಿನ್ನಸ್ವಾಮಿ ಅಧ್ಯಕ್ಷತೆ ವಹಿಸಲಿದ್ದಾರೆ, ಪ್ರಾಧ್ಯಾಪಕರು ಹಾಗೂ ಲೇಖಕರಾದ ಶೈಲಜಾ ವೇಣುಗೋಪಾಲ್ ವಿಷಯ ಮಂಡನೆ ಮಾಡಲಿದ್ದು, ಬುದ್ಧಿಸ್ಟ್ ಒಕ್ಕೂಟದ ಹುರುಗಲವಾಡಿ ರಾಮಯ್ಯ, ಎನ್ ಸುರೇಶ್ ಕುಮಾರ್, ಬಿ ಸ್ವಾಮಿ ಭಾಗವಹಿಸಲಿದ್ದಾರೆ. ಮಧ್ಯಾಹ್ನ ೧:೩೦ಕ್ಕೆ ‘ ಬುದ್ಧರ ಚಿಂತನೆಗಳಲ್ಲಿ ಸ್ವಾಮಿ ವಿವೇಕಾನಂದರು ಮತ್ತು ಇತರ ದಾರ್ಶನಿಕರು’ ವಿಷಯ ಕುರಿತು ನಡೆಯುವ ಗೋಷ್ಠಿಯ ಅಧ್ಯಕ್ಷತೆಯನ್ನು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಪ್ರೊ. ಎಲ್.ಎನ್.ಮುಕುಂದ ರಾಜ್ ವಹಿಸಲಿದ್ದು, ಸಾಹಿತಿ ಪ್ರೊ. ಕೆ ಎಸ್ ಭಗವಾನ್ ವಿಚಾರ ಮಂಡನೆ ಮಾಡಲಿದ್ದಾರೆ, ಜಿಲ್ಲಾ ಬುದ್ಧಿಸ್ಟ್ ಒಕ್ಕೂಟದ ಜಯರಾಮು, ನಿರಂಜನ್ ಭೋದ, ಜಯ ಸುಧಾ ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಮಧ್ಯಾಹ್ನ ೩:೩೦ಕ್ಕೆ ಸಮ್ಮೇಳನದ ಸಮಾರೋಪ ಸಮಾರಂಭ ನಡೆಯಲಿದ್ದು, ಜಿಲ್ಲಾ ಬುದ್ಧಿಸ್ಟ್ ಒಕ್ಕೂಟದ ಗೌರವಾಧ್ಯಕ್ಷ ಯಮದೂರು ಸಿದ್ದರಾಜು ಅಧ್ಯಕ್ಷತೆ ವಹಿಸಲಿದ್ದಾರೆ, ಅಣ್ಣೂರು ಸರ್ಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ದೊಡ್ಡ ಬೋರಯ್ಯ ಸಮಾರೋಪ ಭಾಷಣ ಮಾಡಲಿದ್ದು, ಮುಖ್ಯ ಅತಿಥಿಗಳಾಗಿ ಬುದ್ಧಿಸ್ಟ್ ಒಕ್ಕೂಟದ ಸುಜಯಕುಮಾರ್, ಡಿ ಪ್ರೇಮ್ ಕುಮಾರ್, ಕೆ ಎಚ್ ಮಹದೇವ, ಕೆ ಶಿವಲಿಂಗಯ್ಯ, ಸಿದ್ದಯ್ಯ ನೆಟ್ಕಲ್, ಮಂಜುನಾಥ್, ಮುನಿರಾಜು, ಚಂದ್ರಶೇಖರಯ್ಯ ಎಚ್ ಆರ್, ಟಿ ಎಲ್ ನಾಗರಾಜು, ಪ್ರಮೋದ್ ಭಾಗವಹಿಸಲಿದ್ದಾರೆ ಎಂದು ವಿವರಿಸಿದರು.
ಗೋಷ್ಠಿಯಲ್ಲಿ ಅಧ್ಯಕ್ಷ ಸಿ.ಶಿವಲಿಂಗಯ್ಯ, ಖಜಾಂಚಿ ಬಿ.ಅನ್ನದಾನಿ, ದೇವರಾಜ್ ಕೊಪ್ಪ, ವಿನಯ್‌ಕುಮಾರ್, ಅಭಿಗೌಡ, ಕುಮಾರ್, ಗುರುಶಂಕರ್ ಇದ್ದರು.
Mandya
ಮಂಡ್ಯ|ಕನ್ನಡ ಚಿತ್ರರಂಗ ಹಾಗೂ ಕಲೆಗೆ ಜೀವನವನ್ನೇ ಮುಡಿಪಾಗಿಟ್ಟವರು ಡಾ.ರಾಜ್ ಕುಮಾರ್ : ಡಾ. ಕುಮಾರ

ಮಂಡ್ಯ : ನಟಸಾರ್ವಭೌಮ ಡಾ. ರಾಜ್ ಕುಮಾರ್ ಕುರಿತು ಕನ್ನಡಿಗರಿಗೆ ಹೇಳುವ ಅಗತ್ಯವಿಲ್ಲ, ಅವರ ಸರಳತೆ, ಸಜ್ಜನಿಕೆ ವ್ಯಕ್ತಿತ್ವ ಹಾಗೂ ಅವರ ಕೊಡುಗೆ ಕನ್ನಡಿಗರ ಜನಮಾನಸದಲ್ಲಿ ಸದಾಕಾಲ ಚಿರವಾಗಿದೆ. ಕನ್ನಡ ಚಿತ್ರರಂಗ ಹಾಗೂ ಕಲೆಗೆ ಜೀವನವನ್ನೇ ಮುಡಿಪಾಗಿಟ್ಟವರು ಡಾ.ರಾಜ್ ಕುಮಾರ್ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಅವರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಮತ್ತು ಮಹಿಳಾ ಸರ್ಕಾರಿ ಕಾಲೇಜು (ಸ್ವಾಯತ್ತ) ಇವರ ಸಂಯುಕ್ತಾಶ್ರಯದಲ್ಲಿ ವರನಟ ಡಾ. ರಾಜ್ ಕುಮಾರ್ ಅವರ 97 ನೇ ಜನ್ಮದಿನಾಚರಣೆಯನ್ನು ಇಂದು(ಏಪ್ರಿಲ್.24) ಮಹಿಳಾ ಸರ್ಕಾರಿ ಕಾಲೇಜು (ಸ್ವಾಯತ್ತ) ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ದೈಹಿಕವಾಗಿ ಡಾ ರಾಜ್ ಕುಮಾರ್ ಅವರು ನಮ್ಮನ್ನು ಆಗಲಿದ್ದರು ಅವರ ಕೊಡುಗೆಗಳು ಆದರ್ಶಗಳು ಮೌಲ್ಯ, ವ್ಯಕ್ತಿತ್ವದ ಮೂಲಕ ಜನಮಾನಸದಲ್ಲಿ ನೆಲೆಸಿದ್ದಾರೆ. ಅವರಿಗೆ ಕನ್ನಡದ ಮೇಲೆ ಇದ್ದಂತಹ ಅಭಿಮಾನ ನಾವ್ಯಾರೂ ಮರೆಯುವಂತಿಲ್ಲ. ಕನ್ನಡ ನಾಡಿನಲ್ಲಿ ರಾಜ್ ಕುಮಾರ್ ಅಂತಹ ವ್ಯಕ್ತಿತ್ವ ಜನಿಸಿದ್ದು ಕನ್ನಡಿಗರ ಭಾಗ್ಯ. ಅವರು ಬಲು ಕಠಿಣದ ಪರಿಸ್ಥಿತಿಯಿಂದ ಬಂದು ಸಾಧನೆ ಮಾಡಿದವರು. ಪ್ರತಿಭೆ ಇದ್ದವರು ಯಾವ ಮಟ್ಟದಲ್ಲಿ ಬೇಕಾದರೂ ಸಾಧನೆ ಮಾಡಬಹುದು ಎಂಬುದಕ್ಕೆ ಉತ್ತಮ ನಿದರ್ಶನ ಡಾ.ರಾಜ್ ಎಂದು ಹೇಳಿದರು.
ರಾಜ್ ಕುಮಾರ್ ಅವರು ನಟಿಸಿದ ಎಲ್ಲಾ ಚಲನಚಿತ್ರಗಳು ಸಮಾಜಕ್ಕೆ ಉತ್ತಮ ಸಂದೇಶ ನೀಡಿವೆ. ಮನೋರಂಜನೆಯ ಜೊತೆ ಮಾನವೀಯ ಮೌಲ್ಯಗಳನ್ನು ತಮ್ಮ ಸಿನಿಮಾಗಳಲ್ಲಿ ಅಳವಡಿಸುವ ಮೂಲಕ ಪ್ರೇಕ್ಷಕರನ್ನು ರಂಜಿಸಿದ್ದಾರೆ. ಅಲ್ಲದೇ ಅವರು ತಾನು ಬೆಳೆದು ತನ್ನವರನ್ನು ಬೆಳೆಸುವ ಗುಣ ಹೊಂದಿದ್ದರು. ಅಂತಹ ಮಹನೀಯರ ಆದರ್ಶಗಳನ್ನು ಮೌಲ್ಯಗಳನ್ನು ನಾವೆಲ್ಲರೂ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಮಹಿಳಾ ಸರ್ಕಾರಿ ಕಾಲೇಜಿನ (ಸ್ವಯತ) ಪ್ರಾಂಶುಪಾಲರಾದ ಡಾ. ಗುರುರಾಜ್ ಪ್ರಭು ಮಾತನಾಡಿ, ಕನ್ನಡ ನಾಡು ನುಡಿ ಮತ್ತು ಕನ್ನಡ ಚಲನಚಿತ್ರರಂಗದ ಇತಿಹಾಸವನ್ನು ನೋಡಿದರೆ ಡಾ. ರಾಜ್ ಕುಮಾರ್ ಉತ್ತುಂಗ ದಲ್ಲಿ ಕಾಣುತ್ತಾರೆ. ಜಗತ್ತಿನ ದೊಡ್ಡ ದೊಡ್ಡ ದೇಶಗಳಲ್ಲಿ ಡಾ. ರಾಜ್ ಕುಮಾರ್ ಅವರ ಅಭಿಮಾನಿಗಳು ಸಂಘಗಳನ್ನು ಕಟ್ಟಿಕೊಂಡು ಉತ್ತಮ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ. ಅಮೆರಿಕಾದ ಅಕ್ಕ ಸಮ್ಮೇಳನದಲ್ಲಿ ಡಾ. ರಾಜ್ ಕುಮಾರ್ ಅವರು ಕುರಿತು ವಿಚಾರಗೋಷ್ಠಿಗಳನ್ನು ನಡೆಯುತ್ತಿವೆ ಎಂದು ತಿಳಿಸಿದರು.
ಡಾ.ರಾಜ್ ಕುಮಾರ್ ಕೇವಲ ನಟನಾಗಿ ಅಲ್ಲದ ತಮ್ಮ ಸರಳ ವ್ಯಕ್ತಿತ್ವದಿಂದಲ್ಲೂ ಅಪಾರ ಅಭಿಮಾನಿಗಳನ್ನು ಹೊಂದಿದ್ದರು. ತಮ್ಮ ನಟನೆಯ ಮೂಲಕ ನಮ್ಮ ಸಮಾಜ ಮತ್ತು ಸಂಸ್ಕೃತಿಯ ಪ್ರತಿಬಿಂಬಿಸುವ ಕಾರ್ಯ ನಿರ್ವಹಿಸಿದ್ದಾರೆ. ಮುಂದಿನ ಚಿತ್ರರಂಗದ ಪೀಳಿಗೆಗೆ ಮಾದರಿಯಾಗಿ ನಿಲ್ಲುತ್ತಾರೆ ಎಂದರು.
ಕಾಲೇಜಿನ ಇತಿಹಾಸ ಪ್ರಾಧ್ಯಾಪಕ ಕಾಂತರಾಜು ಮಾತನಾಡಿ, ರಾಜ್ಯ ಸರ್ಕಾರ ಡಾ. ರಾಜ್ ಕುಮಾರ್ ಜನ್ಮದಿನಾಚರಣೆಯನ್ನು ಆಚರಿಸುತ್ತಿರುವುದು ಪ್ರಶಂಸನೀಯ. ರಾಜಕುಮಾರ್ ಯಶಸ್ಸಿನ ಉತ್ತುಂಗದಲ್ಲಿದ್ದರೂ ಸಹ ಸರಳತೆಯ ಸಾರ್ವಭೌಮರಾಗಿದ್ದರು. ಕರ್ನಾಟಕ ರತ್ನ ಪ್ರಶಸ್ತಿಯನ್ನು ರಾಷ್ಟ್ರಕವಿ ಯುಗದ ಕವಿ ಜಗದ ಕವಿ ಎಂದೇ ಪ್ರಸಿದ್ಧರಾಗಿದ್ದ ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ ರವರೊಂದಿಗೆ ಪಡೆದಿದ್ದಾರೆ ಎಂದು ಹೇಳಿದರು.
ರಾಜಕುಮಾರ್ ಅಭಿನಯಸದೇ ಇರುವ ಯಾವುದೇ ಪಾತ್ರಗಳಿಲ್ಲ. ಎಲ್ಲಾ ಪಾತ್ರಗಳಲ್ಲೂ ಪರಕಾಯ ಪ್ರವೇಶ ಮಾಡಿ ಪಾತ್ರಗಳಿಗೆ ಮೆರಗು ತುಂಬುತ್ತಿದ್ದರು. ಅವರು ಮಯೂರ, ಇಮ್ಮಡಿ ಪುಲಕೇಶಿ, ಶ್ರೀಕೃಷ್ಣದೇವರಾಯ ಅಂತಹ ಪೌರಾಣಿಕ ಪಾತ್ರಗಳಿಗೆ ಬಣ್ಣ ಹಚ್ಚಿ ಜೀವ ತುಂಬಿದವರು. ಕನ್ನಡ ನಾಡು ನುಡಿ ವಿಚಾರದಲ್ಲಿ ಡಾ.ರಾಜ್ ಕುಮಾರ್ ಅವರ ಗಟ್ಟಿತನದ ನಿಲುವು ಗೋಕಾಕ್ ಚಳುವಳಿಗೆ ಶಕ್ತಿಯನ್ನು ತುಂಬಿತ್ತು. ಗೋಕಾಕ್ ಚಳುವಳಿಯಲ್ಲಿ ಲಕ್ಷೋಪಲಕ್ಷ ಮಂದಿ ಸೇರಿಸಿ ಚಳುವಳಿಯನ್ನು ಯಶಸ್ವಿಗೊಳಿಸಿದರು ಎಂದು ಹೇಳಿದರು.
ಡಿ ದೇವರಾಜ ಅರಸ್ ಹಿಂದುಳಿದ ವರ್ಗಗಳ ವೇದಿಕೆಯ ಅಧ್ಯಕ್ಷ ಸಂದೇಶ ಅವರು ಮಾತನಾಡಿ ತಮ್ಮ ಉದ್ಯೋಗವನ್ನು ಶ್ರದ್ಧೆಯಿಂದ ಪ್ರೀತಿಸಿ ಕೆಲಸ ಮಾಡುವವರು ಉನ್ನತ ಸ್ಥಾನ ನ ಅಲಂಕರಿಸಬಹುದು ಎಂಬುದಕ್ಕೆ ನೈಜ ಉದಾಹರಣೆ ಡಾ. ರಾಜಕುಮಾರ್, ತಮ್ಮ ಎಲ್ಲಾ ಪಾತ್ರಗಳಲ್ಲೂ ಸಹ ತಮ್ಮ ಕಾಯಕ ನಿಷ್ಠೆಯನ್ನು ತೋರಿಸಿದ್ದಾರೆ, ಭಿಕ್ಷುಕನಿಂದ ಇಡಿದು ಬಾಂಡ್ ಶೈಲಿಯ ಪಾತ್ರಗಳನ್ನು ಡಾ.ರಾಜ್ ಕುಮಾರ್ ನಿರ್ವಹಿಸಿದ್ದಾರೆ ಎಂದರು.
ಹೆಣ್ಣು ಮಕ್ಕಳು ಸರ್ಕಾರಿ ನೌಕರಿ ಹೊಂದಿರುವ ಗಂಡನ್ನು ಹುಡುಕುವ ಬದಲು ನೀವೇ ಸರ್ಕಾರಿ ಉನ್ನತ ಹುದ್ದೆಗಳನ್ನು ಅಲಂಕರಿಸಬೇಕು. ಶೈಕ್ಷಣಿಕವಾಗಿ ಹಾಗೂ ರಾಜಕೀಯವಾಗಿ ಮುಂದೆ ಬರಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಅರಿವು ಬೋಧಿ ಫೌಂಡೇಶನ್ ಅಧ್ಯಕ್ಷ ಗಣೇಶ್ ಅವರು ಮಾತನಾಡಿ, ಹಿಂದಿನ ಕಾಲದಲ್ಲಿ ಹೆಚ್ಚಿನ ಅನಕ್ಷರಸ್ಥರು ಇದ್ದು ಅವರಿಗೆ ಪೌರಾಣಿಕ ಇತಿಹಾಸವನ್ನು ಓದಿ ತಿಳಿಯಲು ಸಾಧ್ಯವಾಗುತ್ತಿರಲಿಲ್ಲ, ಅಂತಹ ಸಮಯದಲ್ಲಿ ದೃಶ್ಯ ಮಾಧ್ಯಮಗಳು ಹಾಗೂ ಚಲನಚಿತ್ರಗಳು ಜನರಿಗೆ ಪೌರಾಣಿಕ ಇತಿಹಾಸ ಕುರಿತು ಮಾಹಿತಿ ನೀಡುತ್ತಿತ್ತು. ಡಾ. ರಾಜಕುಮಾರ್ ಅಭಿನಯಿಸಿದ ಎಷ್ಟೋ ಪೌರಾಣಿಕ ಪಾತ್ರಗಳು ಜನರಿಗೆ ಇತಿಹಾಸದ ಕುರಿತು ಮಾಹಿತಿಯನ್ನು ತಿಳಿಸಿದವು. ಅವರು ಅಭಿನಯಿಸಿದ ಎಷ್ಟೋ ಚಲನಚಿತ್ರಗಳಿಂದ ಜನರು ಪ್ರೇರೇಪಿತರಾಗಿ ಚಲನಚಿತ್ರಗಳಲ್ಲಿ ನೀಡಿದ ನೈತಿಕ ಸಂದೇಶಗಳನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡು ಜೀವನ ಸಾಗಿಸಲು ಮುಂದಾದರು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ನಿಶ್ಚಯ್ ಜೈನ್, ಮನ್ಸೂರ್ ಪಾಷಾ, ಹಾಗೂ ಕೃಷ್ಣೇಗೌಡ ಅವರು ಡಾ. ರಾಜಕುಮಾರ್ ಅಭಿನಯಿಸಿದ ಚಲನಚಿತ್ರ ಗೀತೆಗಳಾದ ಜೇನಿನ ಹೊಳೆಯೋ, ಹುಟ್ಟಿದರೆ ಕನ್ನಡ ನಾಡಿನಲ್ಲಿ ಹುಟ್ಟಬೇಕು, ಆಡಿಸಿ ನೋಡು ಬೀಳಿಸಿ ನೋಡು ಹುರುಳಿ ಹೋಗದು ಹಾಗೂ ಎಲ್ಲಾದರೂ ಇರು ಎಂತಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು ಎಂಬ ಗೀತೆಗಳನ್ನು ಪ್ರಸ್ತುತಪಡಿಸಿದರು.
ಕಾರ್ಯಕ್ರಮದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕಿ ಎಸ್.ಎಚ್. ನಿರ್ಮಲ, ಮಹಿಳಾ ಸರ್ಕಾರಿ ಕಾಲೇಜಿನ ಎನ್ಎಸ್ಎಸ್ ಕಾರ್ಯಕ್ರಮಾಧಿಕಾರಿಗಳಾದ ಡಾ. ಶಿವರಾಜ್, ಮಹಿಳಾ ಸರ್ಕಾರಿ ಕಾಲೇಜಿನ ಸಾಂಸ್ಕೃತಿಕ ಕಾರ್ಯದರ್ಶಿಗಳಾದ ನಿಂಗರಾಜು, ಡಾ. ರಾಜಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷರಾದ ರವೀಂದ್ರ, ನಗರಸಭೆ ಮಾಜಿ ಸದಸ್ಯರಾದ ಆನಂದ್, ಅನನ್ಯ ಆಟ್ಸ್೯ ನ ಅನುಪಮಾ ಬಿ ಎಸ್ ಸೇರಿದಂತೆ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.
Mandya
ಕನ್ನಡ ಚಿತ್ರರಂಗ ಹಾಗೂ ಕಲೆಗೆ ಜೀವನವನ್ನೇ ಮುಡಿಪಾಗಿಟ್ಟವರು ಡಾ.ರಾಜ್ ಕುಮಾರ್ : ಡಾ. ಕುಮಾರ

ಮಂಡ್ಯ : ನಟಸಾರ್ವಭೌಮ ಡಾ. ರಾಜ್ ಕುಮಾರ್ ಕುರಿತು ಕನ್ನಡಿಗರಿಗೆ ಹೇಳುವ ಅಗತ್ಯವಿಲ್ಲ, ಅವರ ಸರಳತೆ, ಸಜ್ಜನಿಕೆ ವ್ಯಕ್ತಿತ್ವ ಹಾಗೂ ಅವರ ಕೊಡುಗೆ ಕನ್ನಡಿಗರ ಜನಮಾನಸದಲ್ಲಿ ಸದಾಕಾಲ ಚಿರವಾಗಿದೆ. ಕನ್ನಡ ಚಿತ್ರರಂಗ ಹಾಗೂ ಕಲೆಗೆ ಜೀವನವನ್ನೇ ಮುಡಿಪಾಗಿಟ್ಟವರು ಡಾ.ರಾಜ್ ಕುಮಾರ್ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಅವರು ಹೇಳಿದರು.
ಅವರು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಮತ್ತು ಮಹಿಳಾ ಸರ್ಕಾರಿ ಕಾಲೇಜು (ಸ್ವಾಯತ್ತ) ಇವರ ಸಂಯುಕ್ತಾಶ್ರಯದಲ್ಲಿ ವರನಟ ಡಾ. ರಾಜ್ ಕುಮಾರ್ ಅವರ 97 ನೇ ಜನ್ಮದಿನಾಚರಣೆಯನ್ನು ಮಹಿಳಾ ಸರ್ಕಾರಿ ಕಾಲೇಜು (ಸ್ವಾಯತ್ತ) ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ದೈಹಿಕವಾಗಿ ಡಾ ರಾಜ್ ಕುಮಾರ್ ಅವರು ನಮ್ಮನ್ನು ಆಗಲಿದ್ದರು ಅವರ ಕೊಡುಗೆಗಳು ಆದರ್ಶಗಳು ಮೌಲ್ಯ, ವ್ಯಕ್ತಿತ್ವದ ಮೂಲಕ ಜನಮಾನಸದಲ್ಲಿ ನೆಲೆಸಿದ್ದಾರೆ ಎಂದು ಹೇಳಿದರು. ಅವರಿಗೆ ಕನ್ನಡದ ಮೇಲೆ ಇದ್ದಂತ ಅಭಿಮಾನ ನಾವ್ಯಾರೂ ಮರೆಯುವಂತಿಲ್ಲ, ಕನ್ನಡನಾಡಿನಲ್ಲಿ ರಾಜ್ ಕುಮಾರ್ ಅಂತಹಾ ವ್ಯಕ್ತಿತ್ವ ಜನಿಸಿದ್ದು ಕನ್ನಡಿಗರ ಭಾಗ್ಯ, ಅವರು ಬಲು ಕಠಿಣದ ಪರಿಸ್ಥಿತಿಯಿಂದ ಬಂದು ಸಾಧನೆ ಮಾಡಿದವರು, ಪ್ರತಿಭೆ ಇದ್ದವರು ಯಾವ ಮಟ್ಟದಲ್ಲಿ ಬೇಕಾದರೂ ಸಾಧನೆ ಮಾಡಬಹುದು ಎಂಬುದಕ್ಕೆ ಉತ್ತಮ ನಿದರ್ಶನ ಡಾ.ರಾಜ್ ಎಂದು ಹೇಳಿದರು.
ಅವರು ನಟಿಸಿದ ಎಲ್ಲಾ ಚಲನಚಿತ್ರಗಳು ಸಮಾಜಕ್ಕೆ ಉತ್ತಮ ಸಂದೇಶ ನೀಡಿವೆ, ಮನೋರಂಜನೆಯ ಜೊತೆ ಮಾನವೀಯ ಮೌಲ್ಯಗಳನ್ನು ತಮ್ಮ ಸಿನಿಮಾಗಳಲ್ಲಿ ಅಳವಡಿಸುವ ಮೂಲಕ ಪ್ರೇಕ್ಷಕರನ್ನು ರಂಜಿಸಿದ್ದಾರೆ, ಡಾ: ರಾಜ್ ತಾನು ಬೆಳೆದು ತನ್ನವರನ್ನು ಬೆಳೆಸುವ ಗುಣ ಹೊಂದಿದ್ದರು, ಅಂತಹ ಮಹನೀಯರ ಆದರ್ಶಗಳನ್ನು ಮೌಲ್ಯಗಳನ್ನು ನಾವೆಲ್ಲರೂ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಮಹಿಳಾ ಸರ್ಕಾರಿ ಕಾಲೇಜಿನ (ಸ್ವಯತ) ಪ್ರಾಂಶುಪಾಲರಾದ ಡಾ. ಗುರುರಾಜ್ ಪ್ರಭು ಅವರು ಮಾತನಾಡಿ ಕನ್ನಡ ನಾಡು ನುಡಿ ಮತ್ತು ಕನ್ನಡ ಚಲನಚಿತ್ರರಂಗದ ಇತಿಹಾಸವನ್ನು ನೋಡಿದರೆ ಡಾ. ರಾಜ್ ಕುಮಾರ್ ಉತ್ತುಂಗ ದಲ್ಲಿ ಕಾಣುತ್ತಾರೆ, ಜಗತ್ತಿನ ದೊಡ್ಡ ದೊಡ್ಡ ದೇಶಗಳಲ್ಲಿ ಡಾ. ರಾಜ್ ಕುಮಾರ್ ಅವರ ಅಭಿಮಾನಿಗಳು ಸಂಘಗಳನ್ನು ಕಟ್ಟಿಕೊಂಡು ಉತ್ತಮ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ, ಅಮೇರಿಕಾದ ಅಕ್ಕ ಸಮ್ಮೇಳನದಲ್ಲಿ ಡಾ. ರಾಜ್ ಕುಮಾರ್ ಅವರು ಕುರಿತು ವಿಚಾರಗೋಷ್ಠಿಗಳನ್ನು ನಡೆಯುತ್ತಿವೆ ಎಂದು ಹೇಳಿದರು.
ಡಾ.ರಾಜ್ ಕುಮಾರ್ ಕೇವಲ ನಟನಾಗಿ ಅಲ್ಲದ ತಮ್ಮ ಸರಳ ವ್ಯಕ್ತಿತ್ವದಿಂದಲ್ಲೂ ಅಪಾರ ಅಭಿಮಾನಿಗಳನ್ನು ಹೊಂದಿದ್ದರು, ತಮ್ಮ ನಟನೆಯ ಮೂಲಕ ನಮ್ಮ ಸಮಾಜ ಮತ್ತು ಸಂಸ್ಕೃತಿಯ ಪ್ರತಿಬಿಂಬಿಸುವ ಕಾರ್ಯ ನಿರ್ವಹಿಸಿದ್ದಾರೆ, ಮುಂದಿನ ಚಿತ್ರರಂಗದ ಪೀಳಿಗೆಗೆ ಮಾದರಿಯಾಗಿ ನಿಲ್ಲುತ್ತಾರೆ ಎಂದು ಹೇಳಿದರು.
ಮಹಿಳಾ ಸರ್ಕಾರಿ ಕಾಲೇಜಿನ (ಸ್ವಾಯತ್ತ) ಇತಿಹಾಸ ಪ್ರಾಧ್ಯಾಪಕ ಕಾಂತರಾಜು ಮಾತನಾಡಿ ರಾಜ್ಯ ಸರ್ಕಾರ ಡಾ. ರಾಜ್ ಕುಮಾರ್ ಜನ್ಮದಿನಾಚರಣೆಯನ್ನು ಆಚರಿಸುತ್ತಿರುವುದು ಪ್ರಶಂಸನೀಯ, , ಡಾಕ್ಟರ್ ರಾಜಕುಮಾರ್ ಯಶಸ್ಸಿನ ಉತ್ತುಂಗದಲ್ಲಿದ್ದರೂ ಸಹ ಸರಳತೆಯ ಸಾರ್ವಭೌಮರಾಗಿದ್ದರು, ಕರ್ನಾಟಕ ರತ್ನ ಪ್ರಶಸ್ತಿಯನ್ನು ರಾಷ್ಟ್ರಕವಿ ಯುಗದ ಕವಿ ಜಗದ ಕವಿ ಎಂದೇ ಪ್ರಸಿದ್ಧರಾಗಿದ್ದ ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ ರವರೊಂದಿಗೆ ಪಡೆಯುತ್ತಾರೆ ಎಂದು ತಿಳಿಸಿದರು.
ಡಾಕ್ಟರ್ ರಾಜಕುಮಾರ್ ಅಭಿನಯಸದೇ ಇರುವ ಯಾವುದೇ ಪಾತ್ರಗಳಿಲ್ಲ, ಎಲ್ಲಾ ಪಾತ್ರಗಳಲ್ಲೂ ಪರಕಾಯ ಪ್ರವೇಶ ಮಾಡಿ ಪಾತ್ರಗಳಿಗೆ ಮೆರಗು ತುಂಬುತ್ತಿದ್ದರು, ಮಯೂರ, ಇಮ್ಮಡಿ ಪುಲಕೇಶಿ, ಶ್ರೀಕೃಷ್ಣದೇವರಾಯ ಅಂತಹ ಪೌರಾಣಿಕ ಪಾತ್ರಗಳನ್ನು ಬಣ್ಣ ಹಚ್ಚಿ ಜೀವ ತುಂಬಿದವರು ಡಾ. ರಾಜ್, ಕನ್ನಡ ನಾಡು ನುಡಿ ವಿಚಾರದಲ್ಲಿ ಡಾ.ರಾಜ್ ಕುಮಾರ್ ಅವರ ಗಟ್ಟಿತನದ ನಿಲುವು ಗೋಕಾಕ್ ಚಳುವಳಿಗೆ ಶಕ್ತಿಯನ್ನು ತುಂಬಿತ್ತು, ಗೋಕಾಕ್ ಚಳುವಳಿಯಲ್ಲಿ ಲಕ್ಷೋಪಲಕ್ಷ ಮಂದಿ ಸೇರಿಸಿ ಚಳುವಳಿಯನ್ನು ಯಶಸ್ವಿಗೊಳಿಸಿದರು ಎಂದು ಹೇಳಿದರು.
ಡಿ ದೇವರಾಜ ಅರಸ್ ಹಿಂದುಳಿದ ವರ್ಗಗಳ ವೇದಿಕೆಯ ಅಧ್ಯಕ್ಷ ಸಂದೇಶ ಅವರು ಮಾತನಾಡಿ ತಮ್ಮ ಉದ್ಯೋಗವನ್ನು ಶ್ರದ್ಧೆಯಿಂದ ಪ್ರೀತಿಸಿ ಕೆಲಸ ಮಾಡುವವರು ಉನ್ನತ ಸ್ಥಾನ ನ ಅಲಂಕರಿಸಬಹುದು ಎಂಬುದಕ್ಕೆ ನೈಜ ಉದಾಹರಣೆ ಡಾ. ರಾಜಕುಮಾರ್, ತಮ್ಮ ಎಲ್ಲಾ ಪಾತ್ರಗಳಲ್ಲೂ ಸಹ ತಮ್ಮ ಕಾಯಕ ನಿಷ್ಠೆಯನ್ನು ತೋರಿಸಿದ್ದಾರೆ, ಭಿಕ್ಷುಕನಿಂದ ಇಡಿದು ಬಾಂಡ್ ಶೈಲಿಯ ಪಾತ್ರಗಳನ್ನು ಡಾ.ರಾಜ್ ಕುಮಾರ್ ನಿರ್ವಹಿಸಿದ್ದಾರೆ ಎಂದು ಹೇಳಿದರು.
ಹೆಣ್ಣು ಮಕ್ಕಳು ಸರ್ಕಾರಿ ನೌಕರಿ ಹೊಂದಿರುವ ಗಂಡನ್ನು ಹುಡುಕುವ ಬದಲು ನೀವೇ ಸರ್ಕಾರಿ ಉನ್ನತ ಹುದ್ದೆಗಳನ್ನು ಅಲಂಕರಿಸಬೇಕು, ಶೈಕ್ಷಣಿಕವಾಗಿ ಹಾಗೂ ರಾಜಕೀಯವಾಗಿ ಮುಂದೆ ಬರಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಅರಿವು ಬೋಧಿ ಫೌಂಡೇಶನ್ ಅಧ್ಯಕ್ಷರಾದ ಗಣೇಶ್ ಅವರು ಮಾತನಾಡಿ ಹಿಂದಿನ ಕಾಲದಲ್ಲಿ ಹೆಚ್ಚಿನ ಅನಕ್ಷರಸ್ಥರು ಇದ್ದು ಅವರಿಗೆ ಪೌರಾಣಿಕ ಇತಿಹಾಸವನ್ನು ಓದಿ ತಿಳಿಯಲು ಸಾಧ್ಯವಾಗುತ್ತಿರಲಿಲ್ಲ, ಅಂತಹ ಸಮಯದಲ್ಲಿ ದೃಶ್ಯ ಮಾಧ್ಯಮಗಳು ಹಾಗೂ ಚಲನಚಿತ್ರಗಳು ಜನರಿಗೆ ಪೌರಾಣಿಕ ಇತಿಹಾಸ ಕುರಿತು ಮಾಹಿತಿ ನೀಡುತ್ತಿತ್ತು, ಡಾ. ರಾಜಕುಮಾರ್ ಅಭಿನಯಿಸಿದ ಎಷ್ಟೋ ಪೌರಾಣಿಕ ಪಾತ್ರಗಳು ಜನರಿಗೆ ಇತಿಹಾಸದ ಕುರಿತು ಮಾಹಿತಿಯನ್ನು ತಿಳಿಸಿದವು, ಅವರು ಅಭಿನಯಿಸಿದ ಎಷ್ಟೋ ಚಲನಚಿತ್ರಗಳಿಂದ ಜನರು ಪ್ರೇರೇಪಿತರಾಗಿ ಚಲನಚಿತ್ರಗಳಲ್ಲಿ ನೀಡಿದ ನೈತಿಕ ಸಂದೇಶಗಳನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡು ಜೀವನ ಸಾಗಿಸಲು ಮುಂದಾದರು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ನಿಶ್ಚಯ್ ಜೈನ್, ಮನ್ಸೂರ್ ಪಾಷಾ, ಹಾಗೂ ಕೃಷ್ಣೇಗೌಡ ಅವರು ಡಾ. ರಾಜಕುಮಾರ್ ಅಭಿನಯಿಸಿದ ಚಲನಚಿತ್ರ ಗೀತೆಗಳಾದ ಜೇನಿನ ಹೊಳೆಯೋ, ಹುಟ್ಟಿದರೆ ಕನ್ನಡ ನಾಡಿನಲ್ಲಿ ಹುಟ್ಟಬೇಕು, ಆಡಿಸಿ ನೋಡು ಬೀಳಿಸಿ ನೋಡು ಹುರುಳಿ ಹೋಗದು ಹಾಗೂ ಎಲ್ಲಾದರೂ ಇರು ಎಂತಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು ಎಂಬ ಗೀತೆಗಳನ್ನು ಪ್ರಸ್ತುತಪಡಿಸಿದರು,
ಕಾರ್ಯಕ್ರಮದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕಿ ಎಸ್.ಎಚ್ ನಿರ್ಮಲ, ಮಹಿಳಾ ಸರ್ಕಾರಿ ಕಾಲೇಜಿನ ಎನ್ಎಸ್ಎಸ್ ಕಾರ್ಯಕ್ರಮಾಧಿಕಾರಿಗಳಾದ ಡಾ. ಶಿವರಾಜ್, ಮಹಿಳಾ ಸರ್ಕಾರಿ ಕಾಲೇಜಿನ ಸಾಂಸ್ಕೃತಿಕ ಕಾರ್ಯದರ್ಶಿಗಳಾದ ನಿಂಗರಾಜು, ಡಾ. ರಾಜಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷರಾದ ರವೀಂದ್ರ, ನಗರಸಭೆ ಮಾಜಿ ಸದಸ್ಯರಾದ ಆನಂದ್, ಅನನ್ಯ ಆಟ್ಸ್೯ ನ ಅನುಪಮಾ ಬಿ ಎಸ್ ಸೇರಿದಂತೆ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.
-
Mysore13 hours ago
ಅರಣ್ಯ ಇಲಾಖೆಯ ವಾಚರ್ ಆತ್ಮಹ*ತ್ಯೆ
-
Mysore15 hours ago
ನಂಜನಗೂಡಿನ ಸಬ್ ರಿಜಿಸ್ಟರ್ ಕಛೇರಿಗೆ ಬೀಗ: ಲೋಕಾಯುಕ್ತ ದಾಳಿ
-
National - International8 hours ago
ಪಹಲ್ಗಾಮ್ ದಾಳಿ; ಉಗ್ರರ ಜೊತೆ ಗುಂಡಿನ ಕಾಳಗದಲ್ಲಿ ವೀರ ಯೋಧ ಹುತಾತ್ಮ
-
State11 hours ago
ಕಾಶ್ಮೀರದ ಪೆಹಲ್ಗಾಮನಲ್ಲಿ ನಡೆದ ಉಗ್ರರ ದಾಳಿ ಖಂಡನೀಯ – ಮುಖ್ಯಮಂತ್ರಿ ಸಿದ್ದರಾಮಯ್ಯ
-
National - International9 hours ago
ದಾಳಿ ನಡೆಸಿದ ಉಗ್ರರಿಗೆ ಊಹೆಗೂ ಮೀರಿದ ಶಿಕ್ಷೆ ನೀಡಲಾಗುವುದು: ಪ್ರಧಾನಿ ನರೇಂದ್ರ ಮೋದಿ
-
Kodagu23 hours ago
ಕೊಂಗಾಣದಲ್ಲಿ ಕಣ್ಣನೂರಿನ ಕೋಲಿಯಾ ಆಸ್ಪತ್ರೆಯ ಮಾಲೀಕನ ಕೊ*ಲೆ
-
Kodagu14 hours ago
ಜಿಲ್ಲಾ ಮಟ್ಟದ ಜ್ಞಾನಜ್ಯೋತಿ ಕಾರುಣ್ಯ ಕಾರ್ಯಕ್ರಮ
-
National - International4 hours ago
ಆಕಸ್ಮಿಕವಾಗಿ ಗಡಿ ದಾಟಿದ ಭಾರತದ ಯೋಧನ ವಶಕ್ಕೆ ಪಡೆದ ಪಾಕ್