Mysore
“ಒಳ್ಳೆಯ ಅಭ್ಯರ್ಥಿ ಆಯ್ಕೆ ಮಾಡುವ ಸಂದರ್ಭ”
Mysore
ಕೊಡಗು ಜಿಲ್ಲೆಯಲ್ಲಿ ಏ. 8 ರಿಂದ 3 ದಿನಗಳ ಕಾಲ ಪಾಸ್‌ಪೋರ್ಟ್ ಮೇಳ
ಮೈಸೂರು: ಕಿತ್ತಳೆ ನಾಡು ಕೊಡಗು ಜಿಲ್ಲೆಯ ನಾಗರಿಕರಿಗೆ ಸಂತಸದ ಸುದ್ದಿ. ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಪರಿಶ್ರಮದ ಫಲವಾಗಿ ಕೊಡಗಿನಲ್ಲಿ ಪಾಸ್‌ಪೋರ್ಟ್ ಆಯೋಜಿಸಲು ಬೆಂಗಳೂರು ವಿಭಾಗೀಯ ಪಾಸ್‌ಪೋರ್ಟ್ ಕಚೇರಿ ನಿರ್ಧರಿಸಿದೆ.
ಏಪ್ರಿಲ್ 8ರಿಂದ ಮೂರು ದಿನಗಳ ಕಾಲ ಕೊಡಗ ಜಿಲ್ಲೆಯಲ್ಲಿ ಪಾಸ್‌ಪೋರ್ಟ್ ಮೇಳ ನಡೆಯಲಿದೆ.
ಕಳೆದ ಫೆಬ್ರವರಿ ತಿಂಗಳಿನಲ್ಲಿ ವಿದೇಶಾಂಗ ಸಚಿವಾಲಯದ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದ ಯದುವೀರ್ ಒಡೆಯರ್ ಕೊಡಗು ಜಿಲ್ಲೆಯಲ್ಲಿ ಪಾಸ್‌ಪೋರ್ಟ್ ಮೇಳ ಆಯೋಜಿಸುವಂತೆ ಮನವಿ ಮಾಡಿದ್ದರು.

ಇದಕ್ಕೆ ಸ್ಪಂದಿಸಿರುವ ಬೆಂಗಳೂರು ರೀಜನಲ್ ಪಾಸ್‌ಪೋರ್ಟ್ ಅಧಿಕಾರಿಗಳು ಸಂಸದರಿಗೆ ಪತ್ರ ಬರೆದು, ಏಪ್ರಿಲ್ 8, 9, 10ರಂದು ಮೇಳ ಆಯೋಜಿಸಲಾಗುವುದು ಹಾಗೂ ೮ ರಂದು ಈ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲು ಆಗಮಿಸಬೇಕು ಎಂದು ಸಂಸದ ಯದುವೀರ್ ಒಡೆಯರ್ ಅವರಿಗೆ ಮನವಿ ಮಾಡಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಸಂಸದ ಯದುವೀರ್ ಒಡೆಯರ್, ಕೊಡಗು ಜಿಲ್ಲೆಯ ಹಲವಾರು ಮಂದಿ ಪಾಸ್‌ಪೋರ್ಟ್ ಬೇಕು ಎಂಬ ಮನವಿ ಸಲ್ಲಿಸಿದ್ದರು. ಕೆಲವರು ಮೈಸೂರಿಗೆ ಅಥವಾ ಬೆಂಗಳೂರಿಗೆ ತೆರಳಬೇಕು. ಇದು ಹಿರಿಯ ನಾಗರಿಕರಿಗೆ ತೊಂದರೆ ಆಗುತ್ತದೆ ಎಂದು ಮನವಿಯಲ್ಲಿ ವಿವರಿಸಿದ್ದರು. ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲು ನಿರ್ಧರಿಸಿದೆ ಎಂದರು.

ಕಳೆದ ಬಾರಿ ನವದೆಹಲಿಗೆ ತೆರಳಿದಾಗ ವಿದೇಶಾಂಗ ಸಚಿವಾಲಯದ ಕಾರ್ಯದರ್ಶಿ ಪ್ರಿಯಾ ರಂಗನಾಥನ್ ಅವರನ್ನು ಭೇಟಿ ಮಾಡಿ, ಕೊಡಗು ಜಿಲ್ಲೆಯಲ್ಲಿ ಪಾಸ್‌ಪೋರ್ಟ್ ಮೇಳ ಆಯೋಜಿಸಲು ಮನವಿ ಸಲ್ಲಿಸಿದೆ ಎಂದು ತಿಳಿಸಿದರು.
ಇದಕ್ಕೆ ಸ್ಪಂದಿಸಿರುವ ಹಿರಿಯ ಅಧಿಕಾರಿಗಳು, ಬೆಂಗಳೂರು ಪಾಸ್‌ಪೋರ್ಟ್ ಕಚೇರಿಗೆ ಸೂಚನೆ ನೀಡಿ ಪಾಸ್‌ಪೋರ್ಟ್ ಮೇಳ ಆಯೋಜಿಸಲು ಕ್ರಮ ಕೈಗೊಂಡಿದ್ದಾರೆ ಎಂದು ಸಂಸದರು ವಿವರಿಸಿದರು.
ಕೊಡಗು ಜಿಲ್ಲೆಯ ನಾಗರಿಕರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಸಂಸದ ಯದುವೀರ್ ಒಡೆಯರ್ ಹೇಳಿದರು.
Mysore
2.90 ಕೋಟಿ ರೂ. ವೆಚ್ಚದ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದ ಶಾಸಕ ದರ್ಶನ್ ಧ್ರುವನಾರಾಯಣ್
ವರದಿ: ಮಹದೇವಸ್ವಾಮಿ ಪಟೇಲ್
ನಂಜನಗೂಡು: ಈ ವಿಧಾನಸಭಾ ಕ್ಷೇತ್ರವನ್ನು ಸಮಗ್ರ ಅಭಿವೃದ್ಧಿ ಮಾಡುವುದು ನನ್ನ ಗುರಿಯಾಗಿದ್ದು, ಇದಕ್ಕೆ ನಾನು ಸದಾ ಬದ್ದನಾಗಿರುತ್ತೆನೆ ಎಂದು ಶಾಸಕ ದರ್ಶನ್ ಧ್ರುವನಾರಾಯಣ್ ಕ್ಷೇತ್ರದ ಜನರಿಗೆ ಘೋಷಿಸಿದರು.
ಇಂದು ನಂಜನಗೂಡು ತಾಲೂಕಿನ ವಿವಿಧ ಗ್ರಾಮಗಳಲ್ಲಿ 2 ಕೋಟಿ 9 ಲಕ್ಷದ 50 ಸಾವಿರ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.

ಹೆಡಿಯಾಲ ಅರಣ್ಯ ವ್ಯಾಪ್ತಿಯಲ್ಲಿ 47 ಲಕ್ಷ ರೂ ವೆಚ್ಚದ ಮೆಸ್ ಅಳವಡಿಕೆ ನಿರ್ಮಾಣ ಕಾಮಗಾರಿ ದೇಪೇಗೌಡನಪುರ ಗ್ರಾಮದಲ್ಲಿ 14.50 ಲಕ್ಷ ರೂ ವೆಚ್ಚದ ಶಾಲೆ ಕಟ್ಟಡ ನಿರ್ಮಾಣ ಕಸುವಿನಹಳ್ಳಿ ಗ್ರಾಮದಲ್ಲಿ 13 ಲಕ್ಷ ರೂ ವೆಚ್ಚದ ಬಸ್ ನಿಲ್ದಾಣ ನಿರ್ಮಾಣ , ಕಾವೇರಿ ಜಲಾನಯನ ಯೋಜನೆಗಳ ಅಚ್ಚುಕಟ್ಟು ಅಭಿವೃದ್ಧಿ ಪ್ರಾಧಿಕಾರ (ಕಾಡಾ) ವತಿಯಿಂದ, ಎಚಗುಂಡ್ಲ ಗ್ರಾಮದಲ್ಲಿ ಕಾಡ ನಾಯಕರ ಬೀದಿಯ ಸ್ಮಶಾನಕ್ಕೆ ಹೋಗುವ ಅಚ್ಚುಕಟ್ಟು ರಸ್ತೆ ಹಾಗೂ ಮಾಸ್ಟರ್ ಚಿಕ್ಕನಾಯಕರ ಜಮೀನಿನಿಂದ ಕೆರೆ ಏರಿ ಮಾರ್ಗ ಪೋಸ್ಟ್ ಗೇಟ್ ಹೊರಗೆ ರಸ್ತೆ ಅಭಿವೃದ್ಧಿ, ಮತ್ತು ಮಸಗೆ ಗ್ರಾಮದಲ್ಲಿ ಕೆ.ಆರ್.ಬಿ.ಸಿ ನಾಲೆಯಿಂದ ಮಕ್ಕಳ ಮಾದಪ್ಪ ದೇವಸ್ಥಾನದವರೆಗೆ ರಸ್ತೆ ಹಾಗೂ ಶಿವಕುಮಾರ ರವರ ಜಮೀನಿನಿಂದ ಬಿ. ಸಿದ್ದಯ್ಯನವರ ಜಮೀನಿನವರೆಗೆ ಅಚ್ಚುಕಟ್ಟು ರಸ್ತೆ ಅಭಿವೃದ್ಧಿ, ಮತ್ತು ದೇವಿರಮ್ಮನಹಳ್ಳಿ ಪಾಳ್ಯದಿಂದ ಲಕ್ಷ್ಮಿಕಾಂತ ಸ್ವಾಮಿ ದೇವಸ್ಥಾನದವರೆಗೆ ರಸ್ತೆ ಅಭಿವೃದ್ಧಿ ಹಾಗೂ ಕಳಲೆ ಗ್ರಾಮದ ಆಸ್ಪತ್ರೆ ಮುಂಭಾಗದ ರಸ್ತೆಯಿಂದ ರಾಜ ನಾಯಕರ ಜಮೀನಿನವರೆಗೆ ರಸ್ತೆ ಅಭಿವೃದ್ಧಿ, ಹೆಗ್ಗಡಹಳ್ಳಿ ಗ್ರಾಮದಲ್ಲಿ ಮರಿ ಪುಟ್ಟಯ್ಯನ ಜಮೀನಿನಿಂದ ಬೈರಶೆಟ್ಟಿರವರ ಜಮೀನಿನವರೆಗೆ ಅಚ್ಚುಕಟ್ಟು ರಸ್ತೆ ಅಭಿವೃದ್ಧಿ ಕಾಮಗಾರಿ ಸೇರಿ ಸುಮಾರು ₹1.20 ಕೋಟಿ ರೂ ವೆಚ್ಚದಲ್ಲಿ ಗುದ್ದಲಿ ಪೂಜೆಯನ್ನು ಶಾಸಕರು ನೆರವೇರಿಸಿದರು.

ಇಂದು ಒಂದೇ ದಿನ, ಒಟ್ಟಾರೆ 2 ಕೋಟಿ 9 ಲಕ್ಷ 50, ಸಾವಿರ ರೂ, ವೆಚ್ಚದಲ್ಲಿ ಕಾಮಗಾರಿಗಳಿಗೆ ಶಾಸಕರು ಚಾಲನೆ ನೀಡಿದರು.
ಬಳಿಕ ಶಾಸಕರು ಮಾತನಾಡುತ್ತಾ ಅವರು,ಕಾಡಾಂಚಿನ ಗ್ರಾಮಗಳಲ್ಲಿ ಕಾಡು ಪ್ರಾಣಿಗಳ ಹಾವಳಿಯಿಂದ ರೈತರು ಬೆಳೆದ ಫಸಲುಗಳನ್ನು ಕಾಡು ಪ್ರಾಣಿಗಳ ನಾಶ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಈ ಭಾಗದ ರೈತರ ಅನುಕೂಲಕ್ಕಾಗಿ ಪ್ರಾಣಿಗಳ ಹಾವಳಿಯನ್ನು ತಪ್ಪಿಸುವ ನಿಟ್ಟಿನಲ್ಲಿ ಮಸ್ ಅಳವಡಿಕೆ ನಿರ್ಮಾಣ ಮಾಡಲಾಗುತ್ತಿದೆ.
ಉಳಿದ ಕಾಮಗಾರಿಯನ್ನು ಮುಂದಿನ ಅನುದಾನದಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸಲಾಗುವುದು.ನಮ್ಮ ಸರ್ಕಾರ ಗ್ಯಾರಂಟಿಯ ಜೊತೆಗೆ ರಾಜ್ಯದ ಅಭಿವೃದ್ಧಿಗೆ ಹೆಚ್ಚಿನ ರೀತಿಯಲ್ಲಿ ಶ್ರಮಿಸುತ್ತಿದೆನೆ.ನಾನು ಆಯ್ಕೆಯಾಗಿ 3 ವರ್ಷಗಳಿಂದ ಕ್ಷೇತ್ರಕ್ಕೆ ಈಗಾಗಲೇ ಹೆಚ್ಚಿನ ಅನುದಾನ ತಂದು ಕ್ಷೇತ್ರದ ಮಾದರಿ ಕ್ಷೇತ್ರವನ್ನಾಗಿ ಮಾಡಲು ಪ್ರಾಮಾಣಿಕವಾಗಿ ಶ್ರಮಿಸುತ್ತಿದೆನೆ ಎಂದರು.

ಮುಂದಿನ ದಿನಗಳಲ್ಲಿ ನಮ್ಮ ಸರ್ಕಾರದಿಂದ ಹೆಚ್ಚಿನ ಅನುದಾನ ತಂದು ಕ್ಷೇತ್ರದ ಅಭಿವೃದ್ಧಿ ಪಡಿಸಲು ಸದಾ ಬದ್ದನಾಗಿ ಇರುತ್ತೆನೆ ಏನೇ ಕೆಲಸ ಇದ್ದರೂ ನನ್ನ ಗಮನಕ್ಕೆ ತನ್ನಿ ಹಂತ ಹಂತವಾಗಿ ಅಭಿವೃದ್ಧಿ ಪಡಿಸಲು ಪ್ರಾಮಾಣಿಕವಾಗಿ ಶ್ರಮಿಸುತ್ತೆನೆ ಎಂದು ತಿಳಿಸಿದರು.
ಈ ವೇಳೆ ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ತಾ. ಪಂ. ಮಾಜಿ ಅಧ್ಯಕ್ಷ ನಾಗೇಶ್ ರಾಜ್,ಬ್ಲಾಕ್ ಅದ್ಯಕ್ಷ ಕೆ ಜಿ ಮಹೇಶ್, ಜಿ ಪಂ ಮಾಜಿ ಸದಸ್ಯ ಕೆ ಮಾರುತಿ,ಕಾಡ ಅಧ್ಯಕ್ಷರಾದ ಮರಿಸ್ವಾಮಿ, ಬ್ಲಾಕ್ ಅಧ್ಯಕ್ಷ ಕುರಹಟ್ಟಿ ಮಹೇಶ್ , ಕಳಲೆ ಮಹೇಶ್ , ಕರಳಾಪುರ ನಾಗರಾಜ್, ಹಲ್ಲರೆ ಮಹದೇವು, ಕಳಲೆ ರಾಜೇಶ್ , ಆನಂದ್ , ಹರೀಶ್ , ನಾಗೇಂದ್ರ, ಪಾಪಣ್ಣ, ಬಾಲಾಜಿ , ಹುಚ್ಚೇಗೌಡ , ಚಂದನ್, ವಿಜಯ್ ಕುಮಾರ್ , ಹೆಗ್ಗಡಹಳ್ಳಿ ಮಹೇಶ್ , ಪ್ರಕಾಶ್ ,ಮುಖಂಡರುಗಳಾದ ಶಿವನಾಗಪ್ಪ, ಗೋವಿಂದರಾಜು, ನೆಹಮತ್ ಉಲ್ಲಾಖನ್,ಅಸ್ರಫ್ ಅಲಿ,ಜಯರಾಂ,ಕೆ ಎನ್ ಮಲ್ಲೇಶ್, ಕೆ.ಎನ್. ಚಿನ್ನಸ್ವಾಮಿ, ಚನ್ನಪ್ಪ,ಜಯಕುಮಾರ್,ಮಹದೇವು,ಬಿಇಓ ಮಹೇಶ್, ರಾಜು, ಇಂಜಿನಿಯರ್ ಯಶವಂತ್ ,ಅರಣ್ಯಾಧಿಕಾರಿ ಪರಮೇಶ್,ಕೃಷ್ಣ, ಸೇರಿದಂತೆ ಪ್ರಮುಖರು ಹಾಜರಿದ್ದರು.
Mysore
ಗ್ಯಾರಂಟಿ ಅನುಷ್ಠಾನ ಸಮಿತಿಯಿಂದ ಎಂ.ಕೆ. ಸೋಮಶೇಖರ್‌ಗೆ ಅಭಿನಂದನೆ
ಮೈಸೂರು: ನಗರ ಗ್ಯಾರಂಟಿ ಅನುಷ್ಠಾನ ಸಮಿತಿಗೆ ನೂತನವಾಗಿ ನೇಮಕಗೊಂಡಿರುವ ಸಮಿತಿಯವರು ಹಾಗೂ ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಗ್ಯಾರಂಟಿ ಅನುಷ್ಠಾನ ಸಮಿತಿಗೆ ನೂತನವಾಗಿ ನೇಮಕಗೊಂಡಿರುವ ಸಮಿತಿಯವರು ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಎಂ.ಕೆ ಸೋಮಶೇಖರ್ ಅವರನ್ನು ಭೇಟಿ ಮಾಡಿ ಅಭಿನಂದಿಸಿದರು.

ಈ ವೇಳೆ ನಗರ ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷೆ ಪುಷ್ಪವಲ್ಲಿ, ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ವಿನಯ್.ಜೆ, ನರಸಿಂಹರಾಜ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಎಂ.ಎನ್. ಮಹದೇವು, ಚಾಮರಾಜ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಸುಶೀಲಾ ಮರೀಗೌಡ, ಸದಸ್ಯರಾದ ಗಣೇಶ್, ರಾಕೇಶ್, ಇಂದಿರಾ, ಜಗನ್ನಾಥ್ ಭೋವಿ, ಬಾಲಕೃಷ್ಣ ಎಂ.ಜೆ., ಮುಖಂಡ ರವಿಶಂಕರ್, ವಿಜಯ್ ಕುಮಾರ್, ಆಶ್ರಯ ಸಮಿತಿ ಸದಸ್ಯ ಗುಣಶೇಖರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಭವ್ಯ, ವಸಂತ್ ನಾಯಕ್,ಸೋಮು ಸರಗೂರು, ಯುವ ಕಾಂಗ್ರೆಸ್ ಮಲ್ಲೇಶ್ (ಮಲ್ಲು), ಲಖನ್, ಗೃಹಶೋಭೆ ಕೃಷ್ಣ, ಜಾನಿ ಮತ್ತಿತರರು ಉಪಸ್ಥಿತರಿದ್ದರು.
-
Hassan24 hours agoಮಹಿಳಾ ಇಂಜಿನಿಯರ್ ಕವಿತಾ ವಿರುದ್ಧ ಆರೋಪಗಳು: ಸೂಕ್ಷ್ಮ ವಿಚಾರಣೆಗೆ ಆಗ್ರಹ
-
Chikmagalur18 hours agoದೇಸಿ ತಳಿಗಳ ಸಂರಕ್ಷಣೆ ಮತ್ತು ಉತ್ತೇಜನ ಕಾರ್ಯಕ್ರಮ ಯಶಸ್ವಿ
-
Chamarajanagar19 hours agoಹನೂರು ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು 490 ಕೋಟಿ ರೂ. ಯೋಜನೆ ಜಾರಿಗೆ ಸಂಸದ ಸುನೀಲ್ ಬೋಸ್ ಮನವಿ
-
Hassan16 hours agoಶಾಂತಿಗ್ರಾಮ ಟೋಲ್ನಲ್ಲಿ ಸಿಎಸ್ಆರ್ ಯೋಜನೆಗಳ ಹಸ್ತಾಂತರ
-
Chikmagalur18 hours agoಕೈವಾರ ತಾತಯ್ಯ ವಿಶ್ವ ಶ್ರೇಷ್ಠ ಸಂತ: ಶಾಸಕ ಹೆಚ್.ಡಿ.ತಮ್ಮಯ್ಯ
-
Chamarajanagar2 hours agoಅಂತಾರಾಷ್ಟ್ರೀಯ ಮಾಸ್ಟರ್ಸ್ ಅಥ್ಲಿಟಿಕ್ಸ್ ಚಾಂಪಿಯನ್ ಶಿಪ್ ಕ್ರೀಡಾಕೂಟಕ್ಕೆ ಹೆಚ್.ಎಲ್. ಚಂದ್ರಶೇಖರ್ ಆಯ್ಕೆ
-
Kodagu24 hours agoಮಕ್ಕಂದೂರಿನಲ್ಲಿ ಕಾಲೋನಿ ರಸ್ತೆ ಅಭಿವೃದ್ಧಿ ಗೆ ಡಾ ಮಂತರ್ ಗೌಡ ರವರಿಂದ ಚಾಲನೆ
-
Manglore20 hours agoಪ್ರೀತಿ ನಿರಾಕರಣೆ- ಓಮನ್ನಲ್ಲಿ ಆ*ತ್ಮಹ*ತ್ಯೆಗೆ ಶರಣಾದ ಸೋಮೇಶ್ವರದ ಯುವಕ


