Chikmagalur
ನವ ಮಧು ಮತದಾನ
ಚಿಕ್ಕಮಗಳೂರು: ಕಾಫಿನಾಡಿ ನಲ್ಲಿ ಲೋಕಸಭಾ ಚುನಾವಣೆ ಮತದಾನ ಪ್ರಕ್ರಿಯೆ ಶಾಂತಿ ಯುತವಾಗಿ ಸಾಗುತ್ತಿದ್ದು, ನವ ಮಧು ಮತದಾನ ಮಾಡಿದ್ದು ವಿಶೇಷವಾಗಿದೆ.
ಮೂಡಿಗೆರೆ ತಾಲೂಕು ಕುಂದೂ ರು ಮತಕೇಂದ್ರದಲ್ಲಿ ನವ ವಧು ತಳವಾರ ಗ್ರಾಮದ ಸೌಮ್ಯ ಹಸಮಣೆ ಏರುವ ಮೊದಲು ತಮ್ಮ ಹಕ್ಕು ಚಲಾಯಿಸಿದರು.
ಇನ್ನೂ ಸ್ವಾಮೀಜಿಗಳು ಹಾಗೂ ಗಣ್ಯರು ತಮ್ಮ ಹಕ್ಕು ಚಲಾಯಿಸಿದ್ದು ಬಾಳೆಹೊ ನ್ನೂರು ರಂಭಾಪುರಿ ಶ್ರೀ ರಂಭಾಪುರಿ ಮಠದ ಮತಗಟ್ಟೆಗೆ ತೆರಳಿ ಹಕ್ಕು ಚಲಾಯಿಸಿದರು. ನಂತರ ಮಾತನಾಡಿದ ಅವರು, ಮತದಾನ ಸಂವಿಧಾನ ಕೊಟ್ಟ ಅಧಿಕಾರ ಎಂಬುದನ್ನು ಮರೆಯಬೇಡಿ, ಸಧೃಡ ಭಾರತ ನಿರ್ಮಾಣಕ್ಕಾಗಿ ಮತದಾನ ಮಾಡಿ ಎಂದು ಮನವಿ ಮಾಡಿದರು.
ಕೊಪ್ಪ ತಾಲೂಕು ಹರಿಹರಪುರ ಶ್ರೀಮಠದ ಶ್ರೀ ಸಚ್ಚಿದಾನಂದ ಸರಸ್ವತಿ ಮಹಾಸ್ವಾಮೀಜಿ ಹರಿಹರಪುರ ಸರ್ಕಾರಿ ಶಾಲೆಯಲ್ಲಿ ತೆರೆಯಲಾಗಿರುವ ಮತಗಟ್ಟೆಗೆ ತೆರಳಿ ಮತದಾನ ಮಾಡಿದರು.
ಎಲ್ಲರೂ ತಪ್ಪದೆ ಮತದಾನ ಮಾಡುವಂತೆ ವಿನಂತಿಸಿದರು.
ಚಿಕ್ಕಮಗಳೂರು ಕ್ಷೇತ್ರದ ಶಾಸಕ ಎಚ್.ಡಿ.ತಮ್ಮಯ್ಯ ಚಿಕ್ಕಕುರುಬರಹಳ್ಳಿ ಸರ್ಕಾರಿ ಶಾಲೆಯಲ್ಲಿ ತೆರೆಯಲಾಗಿರುವ ಮತಗಟ್ಟೆ ಸಂಖ್ಯೆ 138 ಮತಗಟ್ಟೆಗೆ ತೆರಳಿ ಮತ ಚಲಾಯಿಸಿದರು
Chikmagalur
ಬದುಕಿದ್ದಾಗಲೇ ಅಧಿಕಾರಿಗಳಿಗೆ ತನ್ನ ತಿಥಿಗೆ ಆಹ್ವಾನ ನೀಡಿದ ಗಂಧದ ಬೆಳೆಗಾರ
ಚಿಕ್ಕಮಗಳೂರು : ತರೀಕೆರೆ ತಾಲೂಕಿನ ಗಂಧದ ಬೆಳೆಗಾರ ವಿಶುಕುಮಾರ್ ರಿಂದ ಅಧಿಕಾರಿಗಳಿಗೆ ಆಹ್ವಾನ ಮಾಡಿದರು.ವಾರದ ಹಿಂದೆ ದಯಾಮರಣಕ್ಕೆ ಮನವಿ ಮಾಡಿದ್ದ ಬೆಳೆಗಾರ ಬದುಕಿದ್ದಾಗಲೇ ಅಧಿಕಾರಿಗಳಿಗೆ ತನ್ನ ತಿಥಿಗೆ ಆಹ್ವಾನ ನೀಡಿದ ಗಂಧದ ಬೆಳೆಗಾರ.

ನಾಳೆ ಬೆಳಗ್ಗೆ 10ಕ್ಕೆ ಸಂತಾಪ ಸಭೆ, ಮಧ್ಯಾಹ್ನ 1 ಗಂಟೆಗೆ ಊಟಕ್ಕೆ ಕರೆದ ಬೆಳೆಗಾರ,ಸಿಸಿಎಫ್ ರನ್ನ ಭೇಟಿ ಮಾಡಿಸಿ, ಇಲ್ಲ ಶಿವಮೊಗ್ಗ ಸಿಸಿಎಫ್ ಕಚೇರಿ ಬಳಿ ಕಾರಿನಲ್ಲೇ ಆತ್ಮಹತ್ಯೆ ಬೆದರಿಕೆ.

ಸಂತಾಪ ಸಭೆಯಲ್ಲಿ ಭಾಗವಹಿಸುವವರು ಎನ್.ಎಚ್.ಎ.ಐ.ನ ಅಧಿಕಾರಿಗಳು, ಅರಣ್ಯ ಇಲಾಖೆಯ ಭಷ್ಟ ಅಧಿಕಾರಿಗಳು, ಪೊಲೀಸ್ ಇಲಾಖೆಯ ಒಳ್ಳೆಯ ಅಧಿಕಾರಿಗಳು, ವಿಶೇಷ ಭೂಸ್ವಾದೀನ ಅಧಿಕಾರಿಗಳು, ಅಧಿಕಾರಿಗಳ ಕಣ್ಣಾಮುಚ್ಚಾಲೆ ಆಟಕ್ಕೆ ಬೇಸತ್ತು ವಿಭಿನ್ನ ರೀತಿ ಆಕ್ರೋಶ.

ಗಂಧದ ಬೆಳೆಗೆ ಸೂಕ್ತ ಪರಿಹಾರ ನೀಡದ ಅಧಿಕಾರಿಗಳ ವಿರುದ್ಧ ಬೆಳೆಗಾರನ ಆಕ್ರೋಶ. ರಾಷ್ಟ್ರೀಯ ಹೆದ್ದಾರಿಗೆ ಇವರ ಜಮೀನು, ಗಂಧದ ಮರಗಳು ಹೋಗುತ್ತಿವೆ. ಸೂಕ್ತ ಪರಿಹಾರ ನೀಡದಿದ್ದಕ್ಕೆ ಸರ್ಕಾರ ಹಾಗೂ ಅಧಿಕಾರಿಗಳ ವಿರುದ್ಧ ಆಕ್ರೋಶ.
ಒಂದು ಗಂಧದ ಮರಕ್ಕೆ 420 ರೂ ನಿಗದಿ ಮಾಡಿರುವ ಅರಣ್ಯಾಧಿಕಾರಿಗಳು, 1 ಮಾವಿನ ಮರಕ್ಕೆ 63 ಸಾವಿರ, ತೆಂಗಿಗೆ 37 ಸಾವಿರ, ಬೇವಿಗೆ 2200, ನಿಂಬೆ ಗಿಡಕ್ಕೆ 3400 ರೂ , ಒಂದು ಶ್ರೀಗಂಧದ ಮರಕ್ಕೆ ಕೇವಲ 420 ರೂ ನಿಗದಿ ಮಾಡಿರುವ ಅಧಿಕಾರಿಗಳು ಕೋರ್ಟ್ 25 ಸಾವಿರ ನಿಗಧಿ ಮಾಡಿ ವೈಜ್ಞಾನಿಕ ದರ ನೀಡುವಂತೆ ಸೂಚಿಸಿದ್ದರು ಮಾಡದ ಆರೋಪ , ಬೆಳೆಗಾರ ಅಧಿಕಾರಿಗಳ ನಡೆಗೆ ಬೇಸತ್ತು ವಿಭಿನ್ನ ಶೈಲಿಯಲ್ಲಿ ಅಸಮಾಧಾನ ಹೊರಹಾಕಿದ್ದಾರೆ.
Chikmagalur
ಜಿಲ್ಲೆಯ ಇತಿಹಾಸದಲ್ಲೇ ಅತ್ಯಂತ ಅಪರೂಪದ ಘಟನೆ: ಏಕಕಾಲಕ್ಕೆ ಆರು ಮರಿಗಳಿಗೆ ಜನ್ಮ ನೀಡಿದ ಕುರಿ
ಚಿಕ್ಕಮಗಳೂರು : ಜಿಲ್ಲೆಯ ಇತಿಹಾಸದಲ್ಲೇ ಅತ್ಯಂತ ಅಪರೂಪದ ಘಟನೆಯೊಂದು ನಡೆದಿದ್ದು, ದೇವರಿಗೆ ಬಲಿ ಕೊಡಲು ತಂದಿದ್ದ ಕುರಿಯೊಂದು ಏಕಕಾಲಕ್ಕೆ ಆರು ಮರಿಗಳಿಗೆ ಜನ್ಮ ನೀಡುವ ಮೂಲಕ ರೈತನ ಪಾಲಿಗೆ ವರವಾಗಿ ಪರಿಣಮಿಸಿದೆ.
ಚಿಕ್ಕಮಗಳೂರು ನಗರದ ಹೊರವಲಯದ ಚಂದ್ರಕಟ್ಟೆ ನಿವಾಸಿ, ಯುವ ರೈತ ಸಂತೋಷ್ ಅವರು ಇತ್ತೀಚೆಗೆ ನಡೆದ ದೇವಸ್ಥಾನದ ಜಾತ್ರೆಯ ಸಂದರ್ಭದಲ್ಲಿ ದೇವರಿಗೆ ಬಲಿ ನೀಡಲು ಮಾರುಕಟ್ಟೆಯಿಂದ ಎರಡು ಕುರಿಗಳನ್ನು ತಂದಿದ್ದರು.

ಇದರಲ್ಲಿ ಒಂದು ಕುರಿಯನ್ನು ಜಾತ್ರೆಯ ದಿನದಂದು ಕಡಿಯಲಾಗಿತ್ತು. ಆದರೆ, ಮತ್ತೊಂದು ಕುರಿಯು ಗರ್ಭಿಣಿಯಾಗಿರಬಹುದು ಎಂಬ ಸಂಶಯದಿಂದ ಸಂತೋಷ್ ಅದನ್ನು ಕಡಿಯದೆ ಹಾಗೆಯೇ ಉಳಿಸಿಕೊಂಡಿದ್ದರು.
ಒಂದೇ ಬಾರಿಗೆ ಆರು ಮರಿಗಳ ಜನನ:
ರೈತನ ಈ ನಿರ್ಧಾರ ಇಂದು ದೊಡ್ಡ ಮಟ್ಟದ ಫಲ ನೀಡಿದೆ. ಇಂದು ಬೆಳಿಗ್ಗೆ ಆ ಕುರಿಯು ಬರೋಬ್ಬರಿ 6 ಮರಿಗಳಿಗೆ ಜನ್ಮ ನೀಡಿದ್ದು ಅದರಲ್ಲಿ 4 ಹೆಣ್ಣು ಹಾಗೂ 2 ಗಂಡು ಮರಿಗಳಿವೆ.. ಸಾಮಾನ್ಯವಾಗಿ ಕುರಿಗಳು ಒಂದೆರಡು ಮರಿ ಹಾಕುವುದನ್ನು ನೋಡಿದ್ದೇವೆ, ಆದರೆ ಏಕಕಾಲಕ್ಕೆ ಆರು ಮರಿಗಳನ್ನು ಹಾಕಿರುವುದು ಎಲ್ಲರ ಅಚ್ಚರಿಗೆ ಕಾರಣವಾಗಿದೆ.

ತಾಯಿ ಕುರಿ ಸೇರಿದಂತೆ ಎಲ್ಲಾ ಆರು ಮರಿಗಳು ಸಂಪೂರ್ಣವಾಗಿ ಆರೋಗ್ಯವಾಗಿವೆ ಎಂದು ತಿಳಿದುಬಂದಿದೆ.
ಈ ಅಪರೂಪದ ವಿದ್ಯಮಾನದ ವಿಷಯ ತಿಳಿಯುತ್ತಿದ್ದಂತೆಯೇ ಚಂದ್ರಕಟ್ಟೆ ಗ್ರಾಮದ ಸುತ್ತಮುತ್ತಲಿನ ಜನರು ಕುರಿ ಹಾಗೂ ಮರಿಗಳನ್ನು ನೋಡಲು ಸಂತೋಷ್ ಅವರ ಮನೆಯತ್ತ ಬರುತ್ತಿದ್ದಾರೆ.
Chikmagalur
ಮನರೇಗಾ ಕಾಯ್ದೆ ಹೆಸರು ಬದಲಾವಣೆ ವಿರೋಧಿಸಿ ಪ್ರತಿಭಟನೆ
ಚಿಕ್ಕಮಗಳೂರು: ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ ಯ ಹೆಸರು ಬದಲಾವಣೆ ವಿರೋಧಿಸಿ ನಗರದ ಗಾಂಧಿ ಪ್ರತಿಮೆ ಎದುರು ಶನಿವಾರ ಜಿಲ್ಲಾ ಕಾಂಗ್ರೆಸ್ ಕಾ ರ್ಯಕರ್ತರು ಉಪವಾಸ ಸತ್ಯಾಗ್ರಹ ನಡೆಸುವ ಮೂಲಕ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯಲ್ಲಿ ಮಾಜಿ ಸಚಿವೆ ಮೋಟಮ್ಮ ಮಾತನಾಡಿ ಕೇಂದ್ರದ ಬಿಜೆಪಿ ಸರ್ಕಾರ ಒಳಸಂಚು ನಡೆ ಸಿ ಕಾಂಗ್ರೆಸ್ ಆಡಳಿತದ ಕಾಯ್ದೆಗೆ ಮರುನಾಮಕರಣ ಮಾಡುತ್ತಿದೆ. ಕಾಯ್ದೆ ಹೆಸರು ಬದಲಾವಣೆ ಸಂಬಂಧ ಕಾಂಗ್ರೆಸ್ ಪ್ರಶ್ನೆಗೆ ಬಿಜೆಪಿ ನಾಯಕರಲ್ಲಿ ಸಮರ್ಪಕವಾದ ಉತ್ತರವೇ ಇಲ್ಲದಂತಾಗಿದೆ ಎಂದು ದೂರಿದರು.

ಮನರೇಗಾ ಕಾಯ್ದೆ ಬಡವರ ಸ್ವಾಭಿಮಾನ ಹೆಚ್ಚಳ, ಕೆಲಸ ಇಲ್ಲದವರಿಗೆ ಉದ್ಯೋಗ ನೀಡಿ ಕೂಲಿ ಕಾ ರ್ಮಿಕರ ಆಶಾದಾಯಕವಾಗಿತ್ತು. ಬಿಜೆಪಿಯಿಂದಲೇ ದೇಶದ ಅಭಿವೃದ್ದಿ ಎಂದು ಸುಳ್ಳು ಮಾತುಗಳಿಂದ ಜನ ತೆಯ ದಿಕ್ಕನ್ನು ತಪ್ಪಿಸುವ ಕೆಲಸ ಭಾಜಪ ಮಾಡುತ್ತಿದೆ. ಈ ಬಗ್ಗೆ ಸರಿಯಾದ ಮಾಹಿತಿ ನೀಡಲು ಗ್ರಾಮೀಣ ಮಟ್ಟದಿಂದ ಜಾಗೃತಿ ಮೂಡಿಸಬೇಕು ಎಂದರು.
ಗಾಂಧಿಜೀ ತತ್ವವನ್ನು ಧಿಕ್ಕರಿಸಿ, ತಾತ್ಸರ ಮಾಡುವ ಬಿಜೆಪಿಗರು ಎಲ್ಲವು ತಿದ್ದುಪಡಿ ಮಾಡಲು ಹೊರಟಿ ದ್ದಾರೆ. ಇನ್ನೊಂದೆಡೆ ಪಂಚ ಗ್ಯಾರಂಟಿ ಯೋಜನೆ ಸರಿಯಲ್ಲವೆಂದು ಹೇಳಿಕೆ ನೀಡಿದೆ. ಆದರೆ ದೇಶದ ಬಹು ತೇಕ ರಾಜ್ಯಗಳಲ್ಲಿ ಕರ್ನಾಟಕ ಪಂಚ ಗ್ಯಾರಂಟಿ ಯೋಜನೆ ಬಳಸಿಕೊಂಡು, ಮೋಸದಿಂದ ಚುನಾವಣೆ ಗೆಲ್ಲುತ್ತಿದೆ ಎಂದು ಆರೋಪಿಸಿದರು.

ಎಐಸಿಸಿ ಕಾರ್ಯದರ್ಶಿ ಬಿ.ಎಂ.ಸಂದೀಪ್ ಮಾತನಾಡಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಕಾಲಘಟ್ಟದಲ್ಲಿ ಜಾರಿಗೊಂಡ ಮನರೇಗಾ ಕಾಯ್ದೆ ಗ್ರಾಮೀಣ ಜನರ ಸ್ವಾಭಿಮಾನಕ್ಕೆ ಧಕ್ಕೆಯಾಗದಂತೆ ರೂಪಿ ಸಿರುವ ಯೋಜನೆ. ಬಡವರು, ದೀನದಲಿತರು ಹಾಗೂ ಹಿಂದುಳಿದ ವರ್ಗಗಳಿಗೆ ಸ್ವಾಭಿಮಾನದ ಬದುಕ ನ್ನು ರೂಪಿಸಲು ಗಾಂಧೀಜಿ ಹೆಸರಿನಲ್ಲಿ ಸ್ಥಾಪಿಸಿದ್ದು ಇದನ್ನು ಬದಲಿಸಲು ಹೊರಟಿರುವುದು ಸರಿಯಲ್ಲ ಎಂದರು.
ಮನರೇಗಾ ಕಾಯ್ದೆಯಲ್ಲಿ ದೇಶದ ಸುಮಾರು ೩೮ ಕೋಟಿ ಜನಸಂಖ್ಯೆ ಅರ್ಜಿ ಕಾರ್ಡ್ ಹೊಂದಿದ್ದು ಕೋಟ್ಯಾಂತರ ಜನ ಈ ಕಾಯ್ದೆಯಿಂದ ಉದ್ಯೋಗ ಪಡೆದುಕೊಂಡಿದ್ದಾರೆ. ಹಳ್ಳಿ ಜನರ ಬದುಕಾಗಿದ್ಧ ಮನ ರೇಗ ಯೋಜನೆ ಬದಲಿಸುವ ಮೂಲಕ ಕೇಂದ್ರ ಸರ್ಕಾರ ಗ್ರಾಮೀಣರಿಗೆ ಇನ್ನಷ್ಟು ಸಂಕಷ್ಟಕ್ಕೆ ದೂಡುತ್ತಿದೆ ಎಂದು ಆರೋಪಿಸಿದರು.

ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ ಮಾತನಾಡಿ ಗ್ರಾಮೀಣ ಜನತೆಗೆ ಉದ್ಯೋಗ ಖಾತ್ರಿಪಡಿಸುವ ಉದ್ದೇಶದಿಂದ ತಂದಿದ್ದ ಮನರೇಗಾ ಕಾಯ್ದೆಯ ಬದಲಿಗೆ ಹೊಸ ಮಸೂದೆ ಜಾರಿಗೊಳಿಸಲು ಕೇಂದ್ರ ಬಿಜೆ ಪಿ ಸರ್ಕಾರ ಮುಂದಾಗಿದ್ದು ದುರಂತ. ಈ ಮಸೂದೆಯು ಮನರೇಗಾ ಕಾಯ್ದೆ ಮತ್ತು ಅದರಲ್ಲಿದ್ದ ಉದ್ಯೋ ಗದ ಶಾಸನಬದ್ಧ ಖಾತ್ರಿಯನ್ನು ತೆಗೆದು ಹಾಕುವುದು ಹಾಗೂ ಅದರ ಬದಲಿಗೆ ಗ್ರಾಮೀಣ ಬಡ ಕುಟುಂಬ ಗಳಿಗೆ ಉದ್ಯೋಗದ ಭರವಸೆ ಇಲ್ಲವಾಗಿಸುತ್ತದೆ ಎಂದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ. ಕೆ.ಪಿ.ಅಂಶುಮಂತ್ ಮಾತನಾಡಿ ಕೇಂದ್ರ ಸರ್ಕಾರ ಸದಾ ಉಳ್ಳವರ ಪರ ವೇ ಕೆಲಸ ಮಾಡುತ್ತದೆ. ಈ ಹಾದಿಯಲ್ಲೇ ಇದೀಗ ಮನರೇಗಾ ಯೋಜನೆಯನ್ನು ಬದಲಿಸುತ್ತಿದೆ. ವಿಬಿ- ಜಿ ರಾಮ್ ಜಿ ಎಂದು ಹೆಸರು ಬದಲಿಸಿ ಅದರಲ್ಲಿ ಕೆಲವೊಂದು ಬದಲಾವಣೆಗಳನ್ನು ತಂದಿದೆ. ಈ ಬದಲಾವಣೆಗಳು ಮನರೇಗಾ ಕೂಲಿಕಾರರ ಹೊಟ್ಟೆ ಮೇಲೆ ಬರೆ ಎಳೆದಂತಿದೆ ಎಂದು ಹೇಳಿದರು.

ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಂ.ಸಿ.ಶಿವಾನಂದಸ್ವಾಮಿ ಮಾತನಾಡಿ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿದ್ದ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯನ್ನು ಕೈಬಿಟ್ಟು ಹೊಸ ಕಾಯ್ದೆ ಜಾರಿಗೊಳಿಸಿರು ವುದು ಸರಿಯಲ್ಲ. ಶ್ರೀಮಂತರಿಗೆ ಅನುಕೂಲವಾಗುವಂಥ ನೀತಿಗಳನ್ನು ಕೇಂದ್ರ ಸರ್ಕಾರ ಜಾರಿಗೆ ತರುತ್ತಿ ರುವುದು ಕಾರ್ಮಿಕರು, ಕೃಷಿ ಕಾರ್ಮಿಕರು ಹಾಗೂ ರೈತರ ಜೀವನಕ್ಕೆ ಮಾರಕವಾಗುತ್ತಿದೆ ಎಂದರು.
ಪ್ರತಿಭಟನೆಯಲ್ಲಿ ಶಾಸಕರಾದ ಹೆಚ್.ಡಿ.ತಮ್ಮಯ್ಯ, ಜಿ.ಹೆಚ್.ಶ್ರೀನಿವಾಸ್, ಕೆಪಿಸಿಸಿ ವಕ್ತಾರ ಹೆಚ್.ಹೆಚ್. ದೇವರಾಜ್, ಕಾರ್ಯದರ್ಶಿ ಡಾ.ಡಿ.ಎಲ್.ವಿಜಯ್ ಕುಮಾರ್, ರೇಖಾಹುಲಿಯಪ್ಪಗೌಡ, ಸಿಡಿಎ ಅಧ್ಯಕ್ಷ ಹೆಚ್.ಪಿ.ಮಂಜೇಗೌಡ, ತಾಲ್ಲೂಕು ಗ್ಯಾರಂಟಿ ಅಧ್ಯಕ್ಷ ಎಂ.ಮಲ್ಲೇಶ್, ನಗರಸಭೆ ನಾಮಿನಿ ಸದಸ್ಯರಾದ ಕೀರ್ತಿಶೇಟ್, ಪ್ರಕಾಶ್ ರೈ, ಜಿ.ಪಂ. ಮಾಜಿ ಸದಸ್ಯ ಕೆ.ವಿ. ಮಂಜುನಾಥ್, ಮುಖಂಡರುಗಳಾದ ತನೋಜ್ ನಾಯ್ಡು, ಹಿರೇಮಗಳೂರು ರಾಮಚಂದ್ರ, ಲಕ್ಷ್ಮಣ್, ಲಾಕೇಶ್ ಮತ್ತಿತರರು ಹಾಜರಿದ್ದರು.
-
Hassan21 hours agoಅಸಹಾಯಕ ಮಹಿಳೆಗೆ ಧಮ್ಕಿ ಹಾಕಿದ ಎಎಸ್ಐ ದೇವರಾಜ್
-
Hassan23 hours agoರಾಷ್ಟ್ರೀಯ ಚಿಂತನೆ ಮೈಗೂಡಿಸಿಕೊಳ್ಳಿ : ಶಾಸಕ ಸಿಮೆಂಟ್ ಮಂಜು
-
Kodagu21 hours agoಕುಂದಚೇರಿ ಗ್ರಾ.ಪಂ. ನೂತನ ಕಟ್ಟಡ ಉದ್ಘಾಟಿಸಿದ ಶಾಸಕ ಎ.ಎಸ್.ಪೊನ್ನಣ್ಣ
-
Chamarajanagar6 hours agoನಾನಂಥವನಲ್ಲಾ ಎಂದ ನಂದಕುಮಮಾರ್: ಚಾಮರಾಜನಗರ ಹಿರಿಕಾಟಿ ಕ್ರಷರ್ ವಿವಾದಕ್ಕೆ ಸ್ಪಷ್ಟನೆ
-
Mandya22 hours agoಫೆ.28ಕ್ಕೆ ಮೈಸೂರು ಷುಗರ್ ಕಂಪನಿಯ ಸರ್ವ ಸದಸ್ಯರ ಸಾಮಾನ್ಯ ಸಭೆ : ಸಿ.ಡಿ.ಗಂಗಾಧರ್
-
Hassan22 hours agoಮನೆಗಳ್ಳನ ಬಂಧನ : 140 ಗ್ರಾಂ.ಚಿನ್ನ ವಶ
-
Hassan4 hours agoಕೃಷಿ ಸಾಲವನ್ನು ತೀರಿಸಲಾಗದೆ ರೈತನೋರ್ವ ಆತ್ಮ*ತ್ಯೆ
-
Mandya4 hours ago1.89 ಕೋಟಿ ರೂ.ವೆಚ್ಚದಲ್ಲಿ ಪೀಡರ್ ನಷ್ಟ ಕಡಿಮೆಗೊಳಿಸಿ ಪರಿವರ್ತಕ ಅಳವಡಿಸುವ ಯೋಜನೆಗೆ ರಮೇಶ್ ಬಂಡಿಸಿದ್ದೇಗೌಡ ಚಾಲನೆ
