Connect with us

Chamarajanagar

ಚಾಮರಾಜನಗರ ಲೋಕಸಭಾ ಕ್ಷೇತ್ರದ ಚುನಾವಣೆ ಅಖಾಡ

Published

on

ಸುತ್ತೂರು ಮಠಾಧಿಪತಿ ಶ್ರೀವರಾತ್ರಿದೇಶಿಕೇಂದ್ರ ಸ್ವಾಮೀಜಿ ಮತ ಚಲಾವಣೆ.
ವರುಣ ವಿಧಾನಸಭೆ ಕ್ಷೇತ್ರದ ಸುತ್ತೂರು ಗ್ರಾಮದ ಮತಗಟ್ಟೆಯಲ್ಲಿ ಮತ ಚಲಾಯಿಸಿದ ಶ್ರೀಗಳು.
ಚಾಮರಾಜನಗರ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಸೇರಿರುವ ವರುಣ ಕ್ಷೇತ್ರ.

Continue Reading
Click to comment

Leave a Reply

Your email address will not be published. Required fields are marked *

Chamarajanagar

ಹುಲಿ ದಾಳಿ ಹಸು ಬಲಿ

Published

on

ಗುಂಡ್ಲುಪೇಟೆ: ಹುಲಿ ದಾಳಿಯಿಂದ ಹಸು ಸಾವನ್ನಪ್ಪಿರುವ ಘಟನೆ ತಾಲೂಕಿನ ಬೊಮ್ಮಲಾಪುರ ಗ್ರಾಮದಲ್ಲಿ ಇಂದು ಸಂಭವಿಸಿದೆ.

ಬೊಮ್ಮಲಾಪುರ ಗ್ರಾಮದ ಮಹದೇವಪ್ಪ ಎಂಬವವರ ಹಸು ಹುಲಿ ದಾಳಿಗೆ ಬಲಿಯಾಗಿದೆ.

ಎಂದಿನಂತೆ ಶನಿವಾರ ಜಮೀನಿನಲ್ಲಿ ಹಸು ಮೇಯಿಸಿಕೊಂಡು ಸಂಜೆ ಬರುವಾಗ ತಮ್ಮ ಹಸುವು ತಪ್ಪಿಸಿಕೊಂಡಿದೆ ಎಂದು ರಾತ್ರಿ ಸಮಯವಾದರಿಂದ ಕಾಡು ಪ್ರಾಣಿಗಳು ಭಯದಿಂದ ಹಸುವನ್ನು ಹುಡುಕಲು ಭಯವಾಗಿ ಮನೆಗೆ ತೆರಳಿದ್ದಾರೆ.

ಭಾನುವಾರ ಹಸುವನ್ನು ಹುಡುಕಿಕೊಂಡು ಜಮೀನಿಗೆ ಬಂದ ವೇಳೆ ಹಸುವಿನ ಮೇಲೆ ಹುಲಿ ದಾಳಿ ಮಾಡಿರುವುದು ಕಂಡು ಬಂದಿದೆ ಹಸುವಿನ ಮೇಲೆ ದಾಳಿ ಮಾಡಿ ದೇಹದ ವಿವಿಧ ಭಾಗವನ್ನು ಕಚ್ಚಿ ರಕ್ತ ಹೀರಿದ ಹಿನ್ನೆಲೆಯಲ್ಲಿ ಸ್ಥಳದಲ್ಲೇ ಹಸು ಸಾವನ್ನಪ್ಪಿರಬಹುದು ಎಂದು ತಿಳಿದುಬಂದಿದೆ.

ಇದೇ ಸಂದರ್ಭದಲ್ಲಿ ಹುಲಿಯನ್ನು ಸೆರೆಹಿಡಿದು ಹಸುವಿನ ಮಾಲೀಕನಿಗೆ ಪರಿಹಾರ ನೀಡುವಂತೆ ರೈತ ಮುಖಂಡ ಬಸವಣ್ಣ ಹಾಗೂ ಗ್ರಾಮಸ್ಥರು ಒತ್ತಾಯಿಸಿದರು. ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ.

Continue Reading

Chamarajanagar

ಅಪರಾಧ ತಡೆಯುವ ನಿಟ್ಟಿನಲ್ಲಿ ಜಾಗೃತರಾಗಿ: ಪಿಎಸ್ಐ ತಾಜುದ್ದೀನ್

Published

on

ಚಾಮರಾಜನಗರ: ವಿದ್ಯಾರ್ಥಿಗಳು ಸಮಾಜದ ಶಕ್ತಿಯಾಗಿ ಹೊರಹೊಮ್ಮುವುದರಿಂದ ಸುತ್ತಮುತ್ತನಲ್ಲಿ ನಡೆಯುವ ಅಪರಾಧ ಕೃತ್ಯಗಳನ್ನು ತಡೆಯುವ ನಿಟ್ಟಿನಲ್ಲಿ ಜಾಗೃತರಾಗಬೇಕೆಂದು ಸಂತೇಮರಹಳ್ಳಿ ಸಬ್ ಇನ್ಸ್ ಪೆಕ್ಟರ್ ತಾಜುದ್ದೀನ್ ತಿಳಿಸಿದರು.

ತಾಲೂಕಿನ ಸಂತೇಮರಹಳ್ಳಿ ಜೆ ಎಸ್ ಎಸ್ ಪ್ರೌಢಶಾಲೆಯಲ್ಲಿ ಅಪರಾಧ ತಡೆ ಮಾಸಾಚರಣೆ ಅರಿವು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪ್ರತಿಯೊಬ್ಬ ವಿದ್ಯಾರ್ಥಿಯು ಕಾನೂನಿನ ಕಾಯ್ದೆಗಳನ್ನು ತಿಳಿದುಕೊಳ್ಳುವ ಮೂಲಕ ಅಪರಾಧಗಳಿಗೆ ಕಡಿವಾಣ ಆಕಬೇಕಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಮನೆಗಳ್ಳತನ, ಸರ ಕಳ್ಳತನ ಸೇರಿದಂತೆ ಅನೇಕ ಅಪರಾಧ ಕೃತ್ಯಗಳು ನಿರಂತರವಾಗಿ ನಡೆಯುತ್ತಿದೆ.ಇಂತಹ ಕೃತ್ಯಗಳ ಬಗ್ಗೆ ಹಳ್ಳಿಗಳಲ್ಲಿ ಕುಟುಂಬಸ್ಥರಿಗೆ ಜಾಗೃತಿ ಮೂಡಿಸಬೇಕಿದೆ ಎಂದು ಹೇಳಿದರು.

ಬಾಲ್ಯವಿವಾಹ ಕುರಿತು ಜಾಗೃತರಾಗಬೇಕು ಮತ್ತು ತಂದೆ ತಾಯಿಗಳು ಕೂಡ ಬಾಲ್ಯ ವಿವಾಹ ತಡೆಗಟ್ಟುವ ನಿಟ್ಟಿನಲ್ಲಿ ತಿಳುವಳಿಕೆ ಕಾನೂನು ಅರಿವು ತಿಳಿಸಬೇಕಾಗಿದೆ.

ಅತಿಯಾಗಿ ಮೊಬೈಲ್ ಬಳಕೆಯಿಂದ ವಿದ್ಯಾರ್ಥಿಗಳು ಕೆಲವು ಮಾದಕ ವಸ್ತುಗಳ ದುಷ್ಟಗಳಿಗೆ ಬಲಿಯಾಗುತ್ತಿದ್ದಾರೆ. ಇದರಿಂದ ವಿದ್ಯಾರ್ಥಿ ಜೀವನ ಹಾಳಾಗುತ್ತದೆ.

ತಂದೆ ತಾಯಿಗಳು ಮಕ್ಕಳ ಏಳಿಗೆಗೆ ಸಾಕಷ್ಟು ಶ್ರಮವಿಸಿ ದುಡಿಮೆ ಮಾಡುತ್ತಾರೆ. ಆದರೆ ಇಂತಹ ಚಟಗಳಿಗೆ ಬಲಿಯಾಗಬೇಡಿ ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಮರಿಸ್ವಾಮಿ, ಪೊಲೀಸ್ ಸಿಬ್ಬಂದಿಗಳಾದ ರಮೇಶ್, ರಾಜೇಶ್ವರಿ ಹಾಗೂ ಶಾಲಾ ಸಿಬ್ಬಂದಿಗಳು ಹಾಜರಿದ್ದರು.

Continue Reading

Chamarajanagar

ಚಿರತೆ ದಾಳಿ ಕರು ಬಲಿ

Published

on

ಗುಂಡ್ಲುಪೇಟೆ: ತಾಲ್ಲೂಕಿನ ಕರಕಲಮಾದಹಳ್ಳಿ ಗ್ರಾಮದಲ್ಲಿ ಹುಳಿ ದಾಳಿಯಿಂದ ಕರು ಬಲಿ.

ಗ್ರಾಮದ ಸೋಮೇಶ್ ಎಂಬುವವರ ಜಮೀನಿನಲ್ಲಿ ಚಿರತೆ ದಾಳಿ ಮಾಡಿದ ಪರಿಣಾಮ ಕರು ಸ್ಥಳದಲ್ಲಿ ಮೃತಪಟ್ಟಿರುವ ಘಟನೆ ನಡೆದಿದೆ.

ವಿಷಯ ತಿಳಿದು ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿಗಳು ಆಗಮಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಮಾಜಿ ಎಪಿಎಂಸಿ ಅಧ್ಯಕ್ಷ ಪ್ರಭುಸ್ವಾಮಿ ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ಮಾತನಾಡಿ ತ್ವರಿತಗತಿಯಲ್ಲಿ ಕೋಮಿಂಗ್ ಕಾರ್ಯಾಚರಣೆ ಮತ್ತು ಬೋನ್ ಇಡಲು ಮನವಿ ಮಾಡಿದರು.

ಈ ಭಾಗದಲ್ಲಿ ರಾತ್ರಿ ಸಮಯದಲ್ಲಿ ಹುಲಿ ಸಂಚಾರ ಜಾಸ್ತಿ ಆಗಿದ್ದು, ಇದರ ಬಗ್ಗೆ ಸರಿಯಾದ ರೀತಿಯಲ್ಲಿ ಕ್ರಮ ವಹಿಸುವಂತೆ ಮನವಿ ಮಾಡಿದರು.

Continue Reading

Trending

error: Content is protected !!