Hassan
ಹಾಸನ ಸಂಸದ ಪ್ರಜ್ವಲ್ ರೇವಣ್ಣ ರನ್ನ ಬಂಧಿಸುವಂತೆ ಆಗ್ರಹ
ಹಾಸನ.
ಮಹಿಳೆಯರ ಜೊತೆ ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವೀಡಿಯೋ ಆರೋಪ
ಘಟನೆ ಖಂಡಿಸಿ ಪ್ರಗತಿಪರ ಸಂಘಟನೆಗಳ ಪ್ರತಿಭಟನೆ
ಹಾಸನದ ಹೇಮಾವತಿ ವೃತ್ತದ ಬಳಿ ಜಮಾಯಿಸಿದ ನೂರಾರು ಕಾರ್ಯಕರ್ತರು
ಪ್ರಜ್ವಲ್ ರೇವಣ್ಣರನ್ನ ಬಂಧಿಸಬೇಲು ಎಂದು ಪ್ರತಿಭಟನಾಕಾರರ ಆಗ್ರಹ
ಸಮಗ್ರ ತನಿಖೆಯನ್ನ ನಡೆಸಬೇಕು ಎಂದು ಒತ್ತಾಯ
ಜಿಲ್ಲಾಧಿಕಾರಿ ಕಚೇರಿವರೆಗೂ ಮೆರವಣಿಗೆ ಮೂಲಕ ನಡೆಯಲಿರೋ ಪ್ರತಿಭಟನೆ
ಲೈಂಗಿಕ ವಿಚಾರಕ್ಕಾಗಿ ಮಹಿಳೆಯೆರನ್ನು ಪ್ರಜ್ವಲ್ ರೇವಣ್ಣ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂಬ ಆರೋಪ ವಿಚಾರ
ಹಾಸನದಲ್ಲಿ ಪ್ರಗತಿಪರ, ರೈತ ಸಂಘಟನೆಗಳು, ಚಿಂತಕರು, ಸಾಹಿತಿಗಳಿಂದ ಪ್ರತಿಭಟನೆ
ಹೇಮಾವತಿ ಪ್ರತಿಭಟನೆಯಿಂದ ಜಿಲ್ಲಾಧಿಕಾರಿಗಳ ಕಚೇರಿ ವರೆಗೂ ನಡೆಯುತ್ತಿರೋ ಪ್ರತಿಭಟನಾ ಮೆರವಣಿಗೆ
ಎನ್.ಆರ್ ವೃತ್ತದ ಮೂಲಕ ಸಾಗುತ್ತಿರೋ ಪ್ರತಿಭಟನೆ
ಹಾಸನ ಸಂಸದ ಪ್ರಜ್ವಲ್ ರೇವಣ್ಣ ರನ್ನ ಬಂಧಿಸುವಂತೆ ಆಗ್ರಹ
ವೀಡಿಯೋ ಬಿಡುಗಡೆ ಮಾಡಿರುವವರ ವಿರುದ್ಧವೂ ಕ್ರಮಕ್ಕೆ ಆಗ್ರಹ
ಪ್ರತಿಭಟನೆಯಲ್ಲಿ ನೂರಾರು ಜನ ಭಾಗಿ
Hassan
ರಕ್ಷಿದಿಯಲ್ಲಿ ಫೆ.28ರಂದು ರಾಜ್ಯಮಟ್ಟದ ಸಾಹಿತ್ಯ–ರಂಗ ಪ್ರಶಸ್ತಿ ಸಮಾರಂಭ
ಹಾಸನ: ಜೈ ಕರ್ನಾಟಕ ಸಂಘ ಬೆಳ್ಳಿಕೆರೆ (ಹಾಸನ ಜಿಲ್ಲೆ) ವತಿಯಿಂದ ಸಕಲೇಶಪುರ ತಾಲ್ಲೂಕಿನ ರಕ್ಷಿದಿಯ ಪೂರ್ಣಚಂದ್ರ ತೇಜಸ್ವಿ ಸಾಂಸ್ಕೃತಿಕ ಕೇಂದ್ರದಲ್ಲಿ ಫೆಬ್ರವರಿ 28ರಂದು ಶನಿವಾರ ಸಂಜೆ ರಾಜ್ಯಮಟ್ಟದ ವಾರ್ಷಿಕ ಪ್ರಶಸ್ತಿ ಪ್ರಧಾನ ಸಮಾರಂಭ ಆಯೋಜಿಸಲಾಗಿದೆ ಎಂದು ಪ್ರಸಾದ್ ರಕ್ಷಿದಿ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕಳೆದ 47 ವರ್ಷಗಳಿಂದ ರಂಗಭೂಮಿ, ಕಲೆ, ಸಾಹಿತ್ಯ, ಸಾಕ್ಷರತೆ, ಆರೋಗ್ಯ, ಕೃಷಿ, ಪರಿಸರ ಸಂರಕ್ಷಣೆ ಹಾಗೂ ಜನಪರ ಹೋರಾಟಗಳ ಮೂಲಕ ಬಹುಮುಖ ಚಟುವಟಿಕೆಗಳನ್ನು ನಡೆಸುತ್ತಿರುವ ಜೈ ಕರ್ನಾಟಕ ಸಂಘವು, ಸಕಲೇಶಪುರದ ಹೆಮ್ಮೆಯ ಪುತ್ರರಾದ ಎಸ್.ಕೆ. ಕರೀಂಖಾನ್ ಅವರ ಹೆಸರಿನಲ್ಲಿ “ಎಸ್.ಕೆ. ಕರೀಂಖಾನ್ ಸೌಹಾರ್ದ ಪ್ರಶಸ್ತಿ”ಯನ್ನು ಸ್ಥಾಪಿಸಿದೆ. ಈ ಪ್ರಶಸ್ತಿಯನ್ನು ಕವಿ ಸುಬ್ಬು ಹೊಲೆಯಾರ್ ಅವರ ತಾಯಿ ತಿಪ್ಪಮ್ಮ ಕೊಮಾರಯ್ಯ ಅವರ ನೆನಪಿನಲ್ಲಿ ಪ್ರದಾನಿಸಲಾಗುತ್ತದೆ ಎಂದರು.

ಇದೇ ಸಂದರ್ಭದಲ್ಲಿ ಅಕಾಲಿಕವಾಗಿ ನಿಧನರಾದ ಯುವ ಪ್ರತಿಭೆ ಅಮೃತಾ ರಕ್ಷಿದಿ ಅವರ ಸ್ಮರಣಾರ್ಥ “ಅಮೃತ ಕಾವ್ಯ ಪ್ರಶಸ್ತಿ”ಯನ್ನು ಕನ್ನಡದ ಇಬ್ಬರು ಯುವ ಪ್ರತಿಭೆಗಳಿಗೆ ನೀಡಲಾಗುತ್ತಿದೆ. ಇವು ರಾಜ್ಯವ್ಯಾಪ್ತಿಯ ವಾರ್ಷಿಕ ಪ್ರಶಸ್ತಿಗಳಾಗಿವೆ ಎಂದು ಮಾಹಿತಿ ನೀಡಿದರು.
ಈ ವರ್ಷದ ಪ್ರಶಸ್ತಿಗಳ ಆಯ್ಕೆಗಾಗಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಹಾಗೂ ಸಾಹಿತಿ–ಸಾಮಾಜಿಕ ಕಾರ್ಯಕರ್ತ ಡಾ. ಹೆಚ್.ಎಸ್. ಅನುಪಮ ಅವರನ್ನು ಒಳಗೊಂಡ ಸಮಿತಿಯು ಆಯ್ಕೆ ಪ್ರಕ್ರಿಯೆ ನಡೆಸಿದೆ ಎಂದರು.

ಪ್ರಶಸ್ತಿ ಪುರಸ್ಕೃತರು:
“ಎಸ್.ಕೆ. ಕರೀಂಖಾನ್ ಸೌಹಾರ್ದ ಪ್ರಶಸ್ತಿ” – ಕೋಲಾರ ಜಿಲ್ಲೆಯ ಅಚ್ಯುತ ಕೆ.ಜಿ.ಎಫ್. ರಂಗಭೂಮಿ, ಯಕ್ಷಗಾನ ಹಾಗೂ ಬಹುಭಾಷಾ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ದೀರ್ಘಕಾಲದ ಸೇವೆ ಸಲ್ಲಿಸಿರುವ ಅಚ್ಯುತ ಕೆ.ಜಿ.ಎಫ್ ಅವರಿಗೆ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ (2003) ಸೇರಿದಂತೆ ಹಲವು ಗೌರವಗಳು ಲಭಿಸಿವೆ. “ಅಮೃತ ಕಾವ್ಯ ಪ್ರಶಸ್ತಿ” – ಮಧು ಕಾರಗಿ ಮತ್ತು ವಿನಯ್ ಗುಂಟೆ.
ಯುವ ಕವಯತ್ರಿ ಮಧು ಕಾರಗಿ ಕಾವ್ಯಸೃಷ್ಟಿ, ಸಂಶೋಧನೆ ಹಾಗೂ ರಾಜ್ಯಮಟ್ಟದ ಸಾಹಿತ್ಯ ಸ್ಪರ್ಧೆಗಳಲ್ಲಿ ಸಾಧನೆ ಮಾಡಿದವರು, ವಿನಯ್ ಗುಂಟೆ ಕಥಾಸಾಹಿತ್ಯದಲ್ಲಿ ತಮ್ಮದೇ ಗುರುತನ್ನು ಮೂಡಿಸಿರುವ ಯುವ ಬರಹಗಾರರಾಗಿದ್ದಾರೆ. ಫೆ.28ರಂದು ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನದೊಂದಿಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ಸಂಘದ ಪದಾಧಿಕಾರಿಗಳು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಪ್ರಸಾದ್ ರಕ್ಷಿದಿ ಹಾಗೂ ಸುಬ್ಬು ಹೊಲೆಯಾರ್ ಉಪಸ್ಥಿತರಿದ್ದರು.
Hassan
ಎಪಿಜೆ ಕಾಲೇಜಿನ ವಿದ್ಯಾರ್ಥಿ ಕೌಸ್ತುಭ ಶರ್ಮ ಜಿಲ್ಲೆಗೆ ಪ್ರಥಮ
ಹಾಸನ: ರಾಷ್ಟ್ರಾದ್ಯಂತ ಜ.21 ರಿಂದ 29ರವರೆಗೆ ನಡೆದ ಜೆಇಇ ಮೇನ್ಸ್(ಪ್ರಥಮ ಆವೃತ್ತಿ) ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಹಾಸನ ಜಿಲ್ಲೆಯ ಅರಸೀಕೆರೆ ರಸ್ತೆಯ ಬಿ.ಕಾಟಿಹಳ್ಳಿಯ ಉನ್ನತಿ ಶಿಕ್ಷಣ ಸಂಸ್ಥೆಯ ಎಪಿಜೆ ಪಿಯು ಕಾಲೇಜಿನ ವಿದ್ಯಾರ್ಥಿ ಕೌಸ್ತುಭ ಶರ್ಮ 99.30 ಪರ್ಸೆಂಟೈಲ್ ಅಂಕಗಳನ್ನು ಗಳಿಸಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ.
ಹಾಸನದ ಮಂಜು ಭಾರ್ಗವಿ ಹಾಗೂ ನಾರಾಯಣ ಮೂರ್ತಿ ಅವರ ಪುತ್ರನಾದ ಕೌಸ್ತುಭ ಅವರ ಸಾಧನೆಗೆ ಶಿಕ್ಷಣ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.ಈ ಕುರಿತು ಮಾತನಾಡಿದ ಎಪಿಜೆ ಪಿಯು ಕಾಲೇಜಿನ ಸಂಸ್ಥಾಪಕ ಡಿ. ಮುರಳಿ, ಬೋಧಕ ವರ್ಗದ ಶ್ರಮ, ವಿದ್ಯಾರ್ಥಿಯ ನಿರಂತರ ಪರಿಶ್ರಮ ಹಾಗೂ ಪಾಲಕರ ಸಹಕಾರವೇ ಈ ಯಶಸ್ಸಿಗೆ ಅಡಿಪಾಯವಾಗಿದೆ ಎಂದು ತಿಳಿಸಿದರು.

ಏಪ್ರಿಲ್ ಅಂತ್ಯದ ಜೆಇಇ ಮೇನ್ಸ್ ದ್ವಿತೀಯ ಆವೃತ್ತಿ ಹಾಗೂ ಮೇ ತಿಂಗಳ ಜೆಇಇ ಅಡ್ವಾನ್ಸ್ ಪರೀಕ್ಷೆಯಲ್ಲಿಯೂ ಇನ್ನಷ್ಟು ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡುವ ನಿರೀಕ್ಷೆಯಿದೆ ಎಂದರು. ಕಳೆದ ವರ್ಷ ಇಬ್ಬರು ವಿದ್ಯಾರ್ಥಿಗಳು ಐಐಟಿ ಮದ್ರಾಸ್‌ಗೆ ಪ್ರವೇಶ ಪಡೆದಿರುವುದನ್ನು ಅವರು ಸ್ಮರಿಸಿದರು.
ಕೌಸ್ತುಭ ಶರ್ಮ ಅವರನ್ನು ಕಾಲೇಜಿನ ಪ್ರಾಂಶುಪಾಲರು, ಬೋಧಕ, ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಹಾಗೂ ಆಡಳಿತ ಮಂಡಳಿ ಅಭಿನಂದಿಸಿ, ಶುಭಾಶಯ ಕೋರಿದ್ದಾರೆ.
Hassan
ಖಾಸಗಿ ಕಾರ್ಖಾನೆ ನೌಕರ ಅನುಮಾನಾಸ್ಪದ ಸಾವು: ಜಿಲ್ಲಾಸ್ಪತ್ರೆ ಎದುರು ಸಂಬಂಧಿಕರ ಆಕ್ರೋಶ
ಹಾಸನ: ನಗರದ ಹೊರವಲಯ ಹನುಮಂತಪುರದಲ್ಲಿ ಕಾರ್ಯನಿರ್ವಹಿಸುತ್ತಿರುವ ಹಿಮಂತ್ ಸಿಂಗ್ ಕಾ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಯುವ ಎಲೆಕ್ಟ್ರಿಷಿಯನ್ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಬುಧವಾರ ಬೆಳಕಿಗೆ ಬಂದಿದೆ. ಮೃತ ಯುವಕನ ಸಾವಿನ ಬಗ್ಗೆ ಕುಟುಂಬಸ್ಥರು ಗಂಭೀರ ಅನುಮಾನ ವ್ಯಕ್ತಪಡಿಸಿ ಸಮಗ್ರ ತನಿಖೆಗೆ ಒತ್ತಾಯಿಸಿದ್ದಾರೆ.
ಹನುಮಂತಪುರ ನಿವಾಸಿ ಪುನೀತ್ (26) ಮೃತ ಯುವಕ.

ಹಿಮಂತ್ ಸಿಂಗ್ ಕಾ ಕಾರ್ಖಾನೆಯಲ್ಲಿ ಎಲೆಕ್ಟ್ರಿಷಿಯನ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಪುನೀತ್ ಬುಧವಾರ ಬೆಳಿಗ್ಗೆ ಎಂದಿನಂತೆ ಸಮವಸ್ತ್ರ ಧರಿಸಿ ಕೆಲಸಕ್ಕೆ ತೆರಳಿದ್ದಾನೆ. ಆದರೆ ಮಧ್ಯಾಹ್ನದ ವೇಳೆ ಕಾರ್ಖಾನೆಯ ನೀರಿನ ಸಂಪ್‌ನಲ್ಲಿ ನಿಂತಿರುವ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ ಎನ್ನಲಾಗಿದೆ.
ಮೃತದೇಹವನ್ನು ಜಿಲ್ಲಾಸ್ಪತ್ರೆಯ ಶವಗಾರದಲ್ಲಿ ಮರಣೋತ್ತರ ಪರೀಕ್ಷೆಗೆ ಇರಿಸಲಾಗಿದೆ. ವಿಷಯ ತಿಳಿಯುತ್ತಿದ್ದಂತೆಯೇ ಆಸ್ಪತ್ರೆ ಆವರಣದಲ್ಲಿ ಮೃತನ ಕುಟುಂಬಸ್ಥರು, ಬಂಧುಗಳು ಸೇರಿದಂತೆ ನೂರಾರು ಮಂದಿ ಜಮಾಯಿಸಿ ಆಕ್ರೋಶ ವ್ಯಕ್ತಪಡಿಸಿದರು. ಯಾವುದೇ ಅಹಿತಕರ ಘಟನೆ ನಡೆಯದಂತೆ ಡಿವೈಎಸ್ಪಿ ಗಂಗಾಧರಪ್ಪ ಅವರ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ.

ಕುಟುಂಬಸ್ಥರ ಗಂಭೀರ ಆರೋಪ
“ಪುನೀತ್ ಬೆಳಗ್ಗೆ ಸಮವಸ್ತ್ರದಲ್ಲೇ ಕೆಲಸಕ್ಕೆ ಹೋಗಿದ್ದ. ಆದರೆ ಮೃತದೇಹ ಪತ್ತೆಯಾದ ಬಳಿಕ ಸಮವಸ್ತ್ರ ಬದಲಿಸಲಾಗಿದೆ. ಮಧ್ಯಾಹ್ನ 12 ಗಂಟೆಯಲ್ಲೇ ಮೃತಪಟ್ಟಿದ್ದರೂ ನಮಗೆ ತಕ್ಷಣ ಮಾಹಿತಿ ನೀಡದೇ ಸಂಜೆ 7 ಗಂಟೆಗೆ ಮಾತ್ರ ತಿಳಿಸಲಾಗಿದೆ. ಇದು ಅನುಮಾನಕ್ಕೆ ಎಡೆಮಾಡಿಕೊಡುತ್ತದೆ. ಇದು ಸಹಜ ಸಾವು ಅಲ್ಲ, ಕೊಲೆ,” ಎಂದು ಕುಟುಂಬಸ್ಥರು ಆರೋಪಿಸಿದರು.
ಮಾಹಿತಿ ನೀಡುವಲ್ಲಿ ತಡವಾದುದು ಮತ್ತು ಮೃತದೇಹದ ಸ್ಥಿತಿಗತಿಗಳ ಬಗ್ಗೆ ಸ್ಪಷ್ಟತೆ ಇಲ್ಲದಿರುವುದು ಕುಟುಂಬದ ಆಕ್ರೋಶಕ್ಕೆ ಕಾರಣವಾಗಿದೆ.

ಕಾರ್ಖಾನೆ ವಿರುದ್ಧ ಆಕ್ರೋಶ
ಕಾರ್ಖಾನೆಯಲ್ಲಿ ನೌಕರ ಮೃತಪಟ್ಟಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಅಥವಾ ನಿರ್ವಹಣಾ ಸಿಬ್ಬಂದಿ ಯಾರೂ ಆಸ್ಪತ್ರೆಗೆ ಭೇಟಿ ನೀಡಿಲ್ಲ ಎಂದು ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದರು. ಕಾರ್ಖಾನೆ ಪ್ರತಿನಿಧಿಗಳು ಸ್ಥಳಕ್ಕೆ ಬಂದು ಸ್ಪಷ್ಟನೆ ನೀಡಬೇಕು ಎಂದು ಒತ್ತಾಯಿಸಿದರು.
ಕಾರ್ಖಾನೆಯಲ್ಲಿ ಶೇ.80ಕ್ಕೂ ಹೆಚ್ಚು ಹೊರರಾಜ್ಯದ ಕಾರ್ಮಿಕರು ಕೆಲಸ ಮಾಡುತ್ತಿದ್ದು, ಇಂತಹ ಸಾವು-ನೋವುಗಳ ಘಟನೆಗಳು ಪದೇ ಪದೇ ಸಂಭವಿಸುತ್ತಿವೆ. ಆದರೆ ಅವು ಬಹಿರಂಗವಾಗುತ್ತಿಲ್ಲ ಎಂಬ ಆರೋಪವೂ ಕೇಳಿಬಂದಿದೆ. “ಪುನೀತ್ ಸ್ಥಳೀಯನಾಗಿರುವುದರಿಂದ ಪ್ರಕರಣವನ್ನು ಮುಚ್ಚಿಹಾಕಲು ಸಾಧ್ಯವಾಗಿಲ್ಲ. ಕೂಡಲೇ ಕಾರ್ಖಾನೆ ವಿರುದ್ಧ ಸಮಗ್ರ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು,” ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಭಕ್ತಿಯಿಂದ ಬಂದ ಯುವಕನ ದುರಂತ ಅಂತ್ಯ
ಕಳೆದ ವಾರವಷ್ಟೇ ಪಾದಯಾತ್ರೆಯ ಮೂಲಕ ಧರ್ಮಸ್ಥಳಕ್ಕೆ ತೆರಳಿ ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದು ಫೆ.15ರಂದು ಗ್ರಾಮಕ್ಕೆ ಮರಳಿದ್ದ ಪುನೀತ್, ಬುಧವಾರ ಎಂದಿನಂತೆ ಕೆಲಸಕ್ಕೆ ತೆರಳಿದ್ದ. ಕೆಲವೇ ದಿನಗಳಲ್ಲಿ ಇಂತಹ ದುರಂತ ಸಂಭವಿಸಿರುವ ಸುದ್ದಿ ತಿಳಿದು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಘಟನೆ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮರಣೋತ್ತರ ಪರೀಕ್ಷೆ ವರದಿ ಬಂದ ಬಳಿಕ ಸಾವಿನ ನಿಜವಾದ ಕಾರಣ ಬಹಿರಂಗವಾಗಲಿದೆ. ಇದೀಗ ಜಿಲ್ಲೆಯಾದ್ಯಂತ ಪ್ರಕರಣ ಚರ್ಚೆಗೆ ಗ್ರಾಸವಾಗಿದ್ದು, ಕಾರ್ಖಾನೆಗಳ ಸುರಕ್ಷತಾ ಮಾನದಂಡಗಳ ಕುರಿತು ಪ್ರಶ್ನೆಗಳು ಎದ್ದಿವೆ.
-
Mysore24 hours agoಆರ್ಎಸ್ಎಸ್, ಬಿಜೆಪಿ ಹೀಯಾಳಿಸುವುದು ಮೂರ್ಖತನ
-
Manglore21 hours agoಶ್ರೀನಿವಾಸ್ ಸಮೂಹ ಶಿಕ್ಷಣ ಸಂಸ್ಥೆಗಳ ಸ್ಥಾಪಕ ,ಡಾ. ಸಿ.ಎ.ರಾಘವೇಂದ್ರ ರಾವ್ ನಿಧನ
-
Kodagu3 hours agoಪೊಲೀಸರಿಗೆ ಹೆದರಿ ಜೀವ ಕಳೆದುಕೊಂಡ ಬೈಕ್ ಸವಾರ ಪತಿ
-
State20 hours agoBJP ಗೌರವದಿಂದ ನಡೆದುಕೊಳ್ಳಬೇಕು: ಡಿಸಿಎಂ ಡಿ.ಕೆ.ಶಿವಕುಮಾರ್
-
Mysore1 hour agoಶಿವಾಜಿಯ ಶೌರ್ಯ ಯುವಕರಿಗೆ ಆದರ್ಶವಾಗಲಿ: ಪ್ರಶಾಂತ್ ಗೌಡ
-
Kodagu21 hours agoಕೊಡವ ಮಕ್ಕಡ ಕೂಟಕ್ಕೆ 13ನೇ ವಾರ್ಷಿಕೋತ್ಸವದ ಸಂಭ್ರಮ
-
Mysore16 hours agoಬಂಡರಸಮ್ಮ ಹಬ್ಬದ ಬಂಡಿ ಉತ್ಸವದ ವೇಳೆ ಬಂಡಿಗೆ ಸಿಕ್ಕಿ ಸಾ*ವನ್ನಪ್ಪಿದ ಯುವಕ
-
Mysore17 hours agoಸಫಾರಿ ಪುನಾರಂಭಕ್ಕೆ ಒಪ್ಪಿಗೆ| ಇಂದಿನಿಂದಲೇ ಸಫಾರಿ ಪುನಾರಂಭ: ಸಚಿವ ಈಶ್ವರ್ ಖಂಡ್ರೆ
