Mysore
ಭೂ ಸ್ವಾಧೀನ ಪರಿಹಾರ ನೀಡದಿರುವ ಬಗ್ಗೆ ಉಪ – ವಿಭಾಗಾಧಿಕಾರಿಗೆ ಡಿ ಎಸ್ ಎಸ್ ಸಂಚಾಲಕ ಚಂದ್ರು ಮನವಿ

ಸಾಲಿಗ್ರಾಮ ಪಟ್ಟಣದ ತಾಲೂಕು ಕಚೇರಿಗೆ ಆಗಮಿಸಿದ ಉಪ – ವಿಭಾಗಧಿಕಾರಿ ರವರಿಗೆ ಬೆಂಗಳೂರು – ಜಲಸೂರು ಮಾರ್ಗವಾಗಿ ಕರ್ನಾಟಕ ರಾಜ್ಯ ಹೆದ್ದಾರಿ ರಸ್ತೆ ಅಭಿವೃದ್ಧಿ ಪ್ರಾಧಿಕಾರ( ಕೆ – ಶಿಪ್ )ವತಿಯಿಂದ ಕೆ ಎನ್ ಆರ್ ಕಂಟ್ರಕ್ಷನ್ ರವರು ರಸ್ತೆ ಅಗಲೀಕರಣ ಕಾಮಗಾರಿ ಮಾಡುತ್ತಿದ್ದು, ಭೂಮಿ ಕಳೆದುಕೊಂಡ ಕೆಲವು ಮಾಲೀಕರಿಗೆ ಪರಿಹಾರ ನೀಡಿಲ್ಲ, ಆದರೂ ಕಾಮಗಾರಿ ಮಾಡುವುದಾಗಿ ಹೇಳುತ್ತಿದ್ದಾರೆ. ಪಟ್ಟಣದ ಸಮೀಪ ಇರುವ ಕೆ ಇ ಬಿ ಬಡಾವಣೆ ಬಳಿ ಹಾರಂಗಿ

ಕಿರು ಕಾಲುವೆಯನ್ನು ಮುಚ್ಚಿದ್ದು, ಈ ಭಾಗದಲ್ಲಿ ಧನ – ಕರು, ಜಾನುವಾರುಗಳಿಗೆ ನೀರಿನ ಅಭಾವ ಉಂಟಾಗಿ ತುಂಬಾ ತೊಂದರೆಯಾಗುತ್ತಿದೆ. ಮೂಡಲಬೀಡು ಗೇಟ್ ಹತ್ತಿರ ಪ್ರಸ್ತುತ ವಾಗಿ ಇದ್ದ ಒಳ ಚರಂಡಿಯನ್ನು ಮುಚ್ಚಿ, ಮಳೆ ಗಾಲ ಬಂದಾಗ ಈ ಭಾಗದಲ್ಲಿ ವಾಸಿಸುತ್ತಿರುವವರಿಗೆ ಮನೆಯ

ಸುತ್ತ – ಮುತ್ತ ನೀರು ತುಂಬಿ, ಮನೆಗಳು ಶಿಥಿಲ ಗೊಳ್ಳುತ್ತಿವೆ, ವಾಸಿಸುವ ಕುಟುಂಬಗಳು ಜೀವ ಕೈಯಲ್ಲಿ ಹಿಡಿದುಕೊಂಡು ಬದುಕಬೇಕಾದ ಪರಿಸ್ಥಿತಿ ಇದ್ದು, ರೋಗ ರುಜಿನಗಳು ಹರಡುವ ಸಾಧ್ಯತೆ ಇದೆ. ಅಸಮರ್ಪಕ ಹಾಗೂ ಅವೈಜ್ಞಾನಿಕವಾಗಿ ಕಾಮಗಾರಿ ಮಾಡುತ್ತಿದ್ದಾರೆ, ಈ ಭಾಗದ ಜನತೆ ಕೇಳಲು ಹೋದರೆ ಕೆ ಎನ್ ಆರ್ ಕಂಪನಿಯವರು ಹೆದರಿಸುತ್ತಿದ್ದಾರೆ, ತಾವುಗಳು ಸ್ಥಳ ಪರಿಶೀಲನೆ ಮಾಡಿ ಮುಂದಾಗುವ ಅನಾಹುತವನ್ನು ತಪ್ಪಿಸಬೇಕು ಎಂದು ಡಿ ಎಸ್ ಎಸ್ ಜಿಲ್ಲಾ ಸಂಚಾಲಕ ಕಳ್ಳಿಮುದ್ದನಹಳ್ಳಿ ಚಂದ್ರು, ಹುಣಸೂರು ಉಪ – ವಿಭಾಗಾಧಿಕಾರಿ ಮಹಮದ್ ಯಾರಿಸ್ ಸುಮೈ ರ್ ರವರಿಗೆ ಮನವಿ ಪತ್ರ ಸಲ್ಲಿಸಿದರು.

ದೂರು ಸ್ವೀಕರಿಸಿ ಮಾತನಾಡಿದ ಉಪ – ವಿಭಾಗಾಧಿಕಾರಿಗಳು ಪರಿಶೀಲನೆ ಮಾಡಿ ಸಾರ್ವಜನಿಕರಿಗೆ ತೊಂದರೆ ಆಗದ ರೀತಿಯಲ್ಲಿ ಕ್ರಮ ಜರುಗಿಸಿ, ಭೂ ಮಾಲೀಕರಿಗೆ ಪರಿಹಾರ,ಕೊಡಿಸುವ ಭರವಸೆ ನೀಡಿದರು.
ತಹಸೀಲ್ದಾರ್ ನರಗುಂದ, ಉಪ – ತಹಸೀಲ್ದಾರ್ ಮಹೇಶ್,ರೈತ ಮತ್ತು ಕಾರ್ಮಿಕ ಜಿಲ್ಲಾ ಅಧ್ಯಕ್ಷ ಮಂಜುನಾಥ್, ಡಿ ಎಸ್ ಎಸ್ ಜಿಲ್ಲಾ ಸಂಚಾಲಕ ಚಂದ್ರು, ಲಕ್ಕಿಕುಪ್ಪೆ ರಮೇಶ್, ಸ್ಥಳೀಯ ವಾಸಿ ವಿನಯ್, ಹರೀಶ್ ಇನ್ನಿತರರು ಇದ್ದಾರೆ

ಎಸ್ ಬಿ ಹರೀಶ್ ಸಾಲಿಗ್ರಾಮ
Mysore
ಮಚ್ಚಿನಿಂದ ಒಡೆದು ಓರ್ವ ವ್ಯಕ್ತಿಯ ಬರ್ಬರ ಹ*ತ್ಯೆ
ತಿ.ನರಸೀಪುರ: ವ್ಯಕ್ತಿಯೊಬ್ಬರನ್ನು ಮಚ್ಚಿನಿಂದ ಒಡೆದು ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿರುವ ಘಟನೆ ಪಟ್ಟಣದ ಸಮೀಪದ ಹಳೇ ತಿರುಮಕೂಡಲಿನ ಚೌಡಯ್ಯ ವೃತ್ತದ ಬಳಿ ಕಳೆದ ರಾತ್ರಿ ಸಂಭವಿಸಿದೆ.
ಹೊಸ ತಿರುಮಕೂಡಲು ರಾಮಚಂದ್ರ ಎಂಬುವರ ಮಗ ವಿನೋದ್ ಕುಮಾರ್ (ಪಚ್ಚರ್) (35) ಕೊಲೆಯಾದ ವ್ಯಕ್ತಿ.
ಮೃತರಿಗೆ ಪತ್ನಿ ಹಾಗೂ 7 ವರ್ಷದ ಗಂಡು ಮಗವಿದೆ. ಕೊಲೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ, ತಿರುಮಕೂಡಲು ಚೌಡಯ್ಯ ವೃತ್ತದ ಸೇತುವೆ ಬಳಿ ಕಳೆದ ರಾತ್ರಿ ವಿನೋದ ಕುಮಾರ್ (ಪಚ್ಚರ್)ನನ್ನು ಹರಿತವಾದ ಆಯುಧದಿಂದ ಕೊಚ್ಚಿ ಕೊಲೆ ಮಾಡಲಾಗಿದೆ.

ಬೆಳಿಗ್ಗೆಯವರೆಗೂ ರಕ್ತದ ಮಡುವಿನಲ್ಲಿ ಬಿದ್ದು ಜೀವಂತವಾಗಿ ಒದ್ದಾಡುತ್ತಿದ್ದ ವಿನೋದಕುಮಾರ್‌ನನ್ನು ಪೊಲೀಸರು ಆಸ್ಪತ್ರೆಗೆ ದಾಖಲು ಮಾಡಿದರಾದರೂ ಆಸ್ವತ್ರೆಯಲ್ಲಿ ಆತ ಮೃತಪಟ್ಟಿದ್ದಾನೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತಿ.ನರಸೀಪುರ ಪೊಲೀಸ್ ಠಾಣೆಯಲ್ಲಿ ಮೃತನ ಸಹೋದರ ಸುರೇಂದ್ರ ದೂರು ನೀಡಿದ್ದು ಪೊಲೀಸರು ತನಿಖೆ ಕೈಗೊಳಲಾಗಿದೆ.

ಸ್ಥಳಕ್ಕೆ ಸರ್ಕಲ್ ಇನ್ಸ್ ಪೆಕ್ಟರ್ ಧನಂಜಯ್, ಸಬ್ ಇನ್ಸ್ಪೆಕ್ಟರ್ ಜಗದೀಶ್ ಧೂಳ್ ಶೆಟ್ಟಿ, ಭೇಟಿ ನೀಡಿ ಪರಿಶೀಲನೆ ನಡೆಸಿ ಪೋಲೀಸರು ಕೊಲೆ ಆರೋಪಿಯ ಪತ್ತೆಗೆ ಬಲೆ ಬೀಸಿದ್ದಾರೆ.
Mysore
ಡಿ.16 ರಿಂದ ಶ್ರೀ ಅಯ್ಯಪ್ಪ ಸ್ವಾಮಿಯ ಬ್ರಹ್ಮೋತ್ಸವ : ನಂಜನಗೂಡಿನಲ್ಲಿ ಸಿದ್ದತೆ
ವರದಿ: ಮಹದೇವಸ್ವಾಮಿ ಪಟೇಲ್
ನಂಜನಗೂಡು : ನಗರದ ಕಪಿಲಾ ನದಿ ತೀರದಲ್ಲಿರುವ ಶ್ರೀ ಸ್ವಾಮಿ ಅಯ್ಯಪ್ಪ ದೇವಸ್ಥಾನದಲ್ಲಿ 28 ನೇ ವರ್ಷದ ಬ್ರಹ್ಮೋತ್ಸವದ ಅಂಗವಾಗಿ ಡಿ. 16 ರಿಂದ 26 ರವರೆಗೆ ಒಟ್ಟು 11 ದಿನಗಳ ಕಾಲ ಧಾರ್ಮಿಕ ಪೂಜಾ ಕಾರ್ಯಗಳು ನೆರವೇರಲಿದೆ ಎಂದು ದೇವಾಲಯದ ಗುರುಸ್ವಾಮಿ ಗಳು ಪಿ.ದೇವರಾಜಸ್ವಾಮಿ ತಿಳಿಸಿದ್ದಾರೆ.
ದೇವಸ್ಥಾನದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬ್ರಹ್ಮೋತ್ಸವ ಕಾರ್ಯಕ್ರಮದ ಅಂಗವಾಗಿ ಶ್ರೀ ಕ್ಷೇತ್ರ ಶಬರಿ ಮಲೈ ದೇವಾಲಯದ ಪ್ರಧಾನ ಅರ್ಚಕರಾದ ಶ್ರೀಕಂಠ ರಾಜೀವರು ತಂತ್ರಗಳ ಮಾರ್ಗದರ್ಶನದಲ್ಲಿ ಡಿ. 16ರ ಬೆಳಗ್ಗೆ 9.30ರಿಂದ 10.15ರ ಸಮಯದಲ್ಲಿ ಧ್ವಜಾರೋಹಣ ನೆರವೇರಲಿದ್ದು ಡಿ.20ರ ವರೆಗೆ ಪ್ರತಿದಿನ ಬೆಳಗ್ಗೆ ಹಾಗೂ ಸಂಜೆ ದೇವತಾ ಕಾರ್ಯಗಳು ನೆರವೇರಲಿದೆ.

ಡಿ. 17ರ ಸಂಜೆ 6 ಕ್ಕೆ ವಿಶೇಷ ಪಡಿ ಪೂಜೆ ಹಾಗೂ 20.ರಂದು ಬೆಳಗ್ಗೆ 7ಕ್ಕೆ ಉತ್ಸವ ಮೂರ್ತಿಗೆ ವಿಶೇಷ ಪೂಜೆಯನ್ನು ಆಯೋಜಿಸಲಾಗಿದೆ. ಇದೇ ದಿನ ಬೆಳಗ್ಗೆ 11ಕ್ಕೆ ಅನ್ನ ಸಂತರ್ಪಣೆ ಹಾಗೂ ಮಧ್ಯಾಹ್ನ ಶ್ರೀ ಅಯ್ಯಪ್ಪ ಸ್ವಾಮಿ ಉತ್ಸವ ಮೂರ್ತಿಯ ಮೆರವಣಿಗೆ ನಗರದ ಪ್ರಮುಖ ರಸ್ತೆಗಳಲ್ಲಿ ಜರುಗಲಿದೆ. ರಾತ್ರಿ 7 ಗಂಟೆ ದೇವಾಲಯದ ಆವರಣದ ಕಪಿಲಾ ನದಿ ತೀರದಲ್ಲಿ ಅರಾಟ್ಟು ಹಾಗೂ ತೆಪ್ಪೋತ್ಸವ ಜರುಗಲಿದೆ. ರಾತ್ರಿ 8 ಗಂಟೆಯಿಂದ ಮಾರುತಿ ಸಾಂಸ್ಕೃತಿಕ ಕಲಾಸಂಘ ಇವರಿಂದ ಕುರುಕ್ಷೇತ್ರ ನಾಟಕ ನಡೆಯಲಿದೆ.
ಪಾದಯಾತ್ರೆ ಮೂಲಕ ಆಗಮಿಸಿ 18 ಮೆಟ್ಟಿಲುಗಳನ್ನು ಹತ್ತುವ ಭಕ್ತಾಧಿಗಳಿಗಾಗಿ 24ರಂದು ದೇವಾಲಯದ ಆವರಣದಲ್ಲಿ ಇರುಮುಡಿ ಕಟ್ಟಲಾಗುವುದು. ನಂತರ ಅಯ್ಯಪ್ಪ ಯಾತ್ರಿಗಳು 25ರ ಸೋಮವಾರ ಬೆಳಗ್ಗೆ 5.ಗಂಟೆ ಮೈಸೂರಿನ ಶ್ರೀ ದತ್ತ ವೆಂಕಟೇಶ್ವರಸ್ವಾಮಿ ದೇವಾಲಯದಿಂದ ಪಾದಯಾತ್ರೆ ಮೂಲಕ ನಂಜನಗೂಡಿಗೆ ತಲುಪಿ ದೇವರ ದರ್ಶನ ಪಡೆದುಕೊಳ್ಳಲಿದ್ದಾರೆ ಎಂದರು.

ಸಾಂಸ್ಕೃತಿಕ ಕಾರ‍್ಯಕ್ರಮಗಳು: ಬ್ರಹ್ಮೋತ್ಸವ ಕಾರ್ಯಕ್ರಮದ ಅಂಗವಾಗಿ ಪ್ರತಿ ದಿನ ಸಂಜೆ ದೇವಾಲಯದ ಆವರಣದಲ್ಲಿ ಸಾಂಸ್ಕೃತಿಕ ಕಾರ‍್ಯಕ್ರಮಗಳು ಜರುಗಲಿವೆ. ಡಿ. 16ರ ಸಂಜೆ 6ಕ್ಕೆ ನಂಜನಗೂಡಿನ ನೂಪುರ ನೃತ್ಯ ಶಾಲೆಯ ಮಕ್ಕಳಿಂದ ನೃತ್ಯ ರೂಪಕ ಜರುಗಲಿದ್ದು ಜೊತೆಗೆ ಡಿ. 26ರವರೆಗೆ ಪ್ರತಿದಿನ ರಾತ್ರಿ 8 ಗಂಟೆಗೆ ನಾಟಕ ಪ್ರದರ್ಶನ ಜರುಗಲಿದೆ.
ಸುದ್ದಿಗೋಷ್ಠಿಯಲ್ಲಿ ಗುರುಸ್ವಾಮಿಗಳು ಪಿ.ದೇವರಾಜಸ್ವಾಮಿ, ದೇವಾಲಯದ ಸಮಿತಿಯ ಅಧ್ಯಕ್ಷ ನಾರಾಯಣ್, ಎನ್.ಎಂ.ಮಂಜುನಾಧ್, ಭಕ್ತ ವತ್ಸಲ, ನಾರಾಯಣ್ ರಾವ್, ಸೇರಿದಂತೆ ಉಪಸ್ಥಿತರಿದ್ದರು.
Mysore
ಎಂಸಿಡಿಸಿಸಿ ಬ್ಯಾಂಕ್‌ನಲ್ಲಿ ಮತ ಚೋರಿ: ಶಾಸಕ ಜಿ.ಡಿ.ಹರೀಶ್‌ಗೌಡ ಆರೋಪ
ಮೈಸೂರು: ಮೈಸೂರು- ಚಾಮರಾಜನಗರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್(ಎAಸಿಡಿಸಿಸಿ) ಚುನಾವಣೆಯಲ್ಲಿ ಮತಪತ್ರವನ್ನೇ ಬದಲಾವಣೆ ಮಾಡಲಾಗಿದೆ. ಇದು ಕಾಂಗ್ರೆಸ್ ಪಕ್ಷ ಮಾಡಿದ ನಿಜವಾದ ಮತ ಚೋರಿ ಎಂದು ಬ್ಯಾಂಕ್ ಮಾಜಿ ಅಧ್ಯಕ್ಷರೂ ಆದ ಹುಣಸೂರು ಶಾಸಕ ಜಿ.ಡಿ.ಹರೀಶ್‌ಗೌಡ ಆರೋಪಿಸಿದರು.
ಸುದ್ದಿಗಾರರೊಂದಿಗೆ ಶನಿವಾರ ಮಾತನಾಡಿದ ಅವರು, ಬೂತ್‌ನಲ್ಲೇ ಮತಪತ್ರ ಬದಲಾಯಿಸಿದ್ದಾರೆಂದು ಹೇಳುತ್ತಿದ್ದಾರೆ. ಮತ ಚಲಾವಣೆ ಮಾಡಿರುವ ಮತದಾರರು ಈ ಬಗ್ಗೆ ಹೇಳಿದ್ದಾರೆ. ಇವೆಲ್ಲವನ್ನು ನೋಡಿದರೆ ಯಾವುದನ್ನೂ ನಂಬಲು ಆಗುತ್ತಿಲ್ಲ. ಆಡಳಿತ ವ್ಯವಸ್ಥೆಯ ಮೇಲೆ ನಂಬಿಕೆಯೇ ಇಲ್ಲದಂತಾಗಿದೆ ಎಂದು ಕಿಡಿಕಾರಿದರು.

ರಾಹುಲ್ ಗಾಂಧಿ ಅವರು ಹೋದಲ್ಲಿ ಬಂದಲ್ಲಿ ಮತಗಳ್ಳತನದ ಬಗ್ಗೆ ಎಂದು ಹೇಳುತ್ತಿದ್ದಾರೆ. ಆದರೆ, ಮೈಸೂರಿನ ಎಂಸಿಡಿಸಿಸಿ ಚುನಾವಣೆಯಲ್ಲಿ ಮತಪತ್ರ ಬದಲಾಯಿಸಿದ್ದಾರೆ. ಯಾವುದೇ ಸರ್ಕಾರದ ಅವಧಿಯಲ್ಲೂ ಈ ರೀತಿ ಆಗಿರಲಿಲ್ಲ. ಇಷ್ಟೊಂದು ದ್ವೇಷ, ಅಸೂಯೆ ಇರುವ ಸರ್ಕಾರವನ್ನೂ ಯಾವಾಗಲೂ ನೋಡಿರಲಿಲ್ಲ. ಈ ಬಗ್ಗೆ ನ್ಯಾಯಾಲಯದ ಮೊರೆ ಹೋಗಿ ಕಾನೂನು ಹೋರಾಟ ಮಾಡುತ್ತೇವೆ ಎಂದರು.
ಸಹಕಾರಿ ಸಂಘಗಳ ಚುನಾವಣೆಯಲ್ಲಿ 5 ಮತಗಳನ್ನು ಹೆಚ್ಚುವರಿಯಾಗಿ ಸೇರಿಸಿ ಗೆಲುವು ಸಾಧಿಸಿದ್ದೇವೆಂದು ಮಾಜಿ ಸಚಿವ ಕೆ.ಎನ್.ರಾಜಣ್ಣ ಹೇಳಿದ್ದರು. ಅದರ ಮುಂದಿನ ಭಾಗ ಇದು. ನ್ಯಾಯಾಲಯ ಫಲಿತಾಂಶ ಪ್ರಕಟಿಸದಂತೆ ಆದೇಶ ನೀಡಿತ್ತು. ಆದರೂ ನ್ಯಾಯಾಲಯದ ಆದೇಶ ಉಲ್ಲಂಘನೆ ಮಾಡಿ ಫಲಿತಾಂಶ ಘೋಷಣೆ ಮಾಡಿದ್ದಾರೆ ಎಂದು ಆರೋಪಿಸಿದರು.

ಸಿಎಂ ಕುರ್ಚಿಗಾಗಿ ಕಚ್ಚಾಟ: ಕಾಂಗ್ರೆಸ್ ನಾಯಕರು ಸಿಎಂ ಕುರ್ಚಿಗಾಗಿ ಕಚ್ಚಾಡುತ್ತಿದ್ದಾರೆ. ಪರಿಣಾಮ ಬೆಳಗಾವಿ ಅಧಿವೇಶನದಲ್ಲಿ ಅಭಿವೃದ್ಧಿ ಬಗ್ಗೆ ಚರ್ಚೆ ನಡೆಯುತ್ತಿಲ್ಲ. ಬಹುತೇಕ ಸಚಿವರು ಸದನಕ್ಕೆ ಗೈರು ಹಾಜರಾಗುತ್ತಿದ್ದಾರೆ. ಯಾವುದಾದರೂ ಇಲಾಖೆಗೆ ಸಂಬಂಧಿಸಿದ ಪ್ರಶ್ನೆಗೆ ಉತ್ತರಿಸಲು ಸಚಿವರೇ ಇರುವುದಿಲ್ಲ. ಆಡಳಿತ ಪಕ್ಷದ ನಾಯಕರು ಪರಸ್ಪರ ಕಚ್ಚಾಟದಲ್ಲೇ ದಿನ ದೂಡುತ್ತಿದ್ದಾರೆ. ಸಿಎಂ, ಡಿಸಿಎಂ ಅಕ್ಕಪಕ್ಕದಲ್ಲಿ ಕುಳಿತಾಗಲೂ ಒಬ್ಬರ ಮುಖ ಮತ್ತೊಬ್ಬರು ನೋಡಲಾಗದ ಪರಿಸ್ಥಿತಿ ಇದೆ. ಎಲ್ಲವನ್ನೂ ಜನರ ತೀರ್ಮಾನಕ್ಕೆ ಬಿಡುತ್ತೇವೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
-
Hassan53 minutes agoಬೈರಾಪುರ-ಚನ್ನಪುರ- ಮಗ್ಗೆ ರಸ್ತೆ ತಾತ್ಕಾಲಿಕ ಬಂದ್: ಬದಲಿ ಮಾರ್ಗದಲ್ಲಿ ವಾಹನ ಸಂಚಾರಕ್ಕೆ ಸೂಚನೆ
-
Special2 hours agoಕರ್ನಾಟಕ ಕುಕ್ಕುಟ ಸಂಜೀವಿನಿ ಯೋಜನೆ: ಮಹಿಳೆಯರಿಗೆ ಉಚಿತ ಕೋಳಿ ಮರಿ, ಶೆಡ್ ನಿರ್ಮಾಣಕ್ಕೆ ಭರ್ಜರಿ ಸಹಾಯಧನ
-
Hassan21 hours agoಒಳ್ಳೆಯ ಕೆಲಸ ಬ್ಯಾಂಕ್ ಠೇವಣಿಯಂತೆ; ಸಮಯ ಬಂದಾಗ ಫಲ ನೀಡುತ್ತದೆ: ರವಿಕುಮಾರ್ ಬಲ್ಲೇನಹಳ್ಳಿ
-
Hassan19 hours agoರೋಟರಿ ಬೆಂಗಳೂರು ದಕ್ಷಿಣದಿಂದ MCE ಕಾಲೇಜಿನ 51 ವಿದ್ಯಾರ್ಥಿಗಳಿಗೆ 15 ಲಕ್ಷ ರೂ. ವಿದ್ಯಾರ್ಥಿ ವೇತನ ವಿತರಣೆ
-
State16 hours agoರಾಹುಲ್, ಖರ್ಗೆ ಕಾಂಗ್ರೆಸ್ಸಿನ ಹೈಕಮಾಂಡೇ ಅಥವಾ ಯತೀಂದ್ರ ಹೈಕಮಾಂಡೇ: ಬಿ.ವೈ.ವಿಜಯೇಂದ್ರ
-
State21 hours agoಡಾ.ಜಿ.ಪರಮೇಶ್ವರ್ ಈ ರಾಜ್ಯದ ಸಿಎಂ ಆಗಲಿ ಎಂಬುದು ನನ್ನ ವೈಯಕ್ತಿಕ ಆಸೆ: ವಿ.ಸೋಮಣ್ಣ
-
Mandya19 hours agoವಿಕಲಚೇತನ ಯುವತಿ ಮೇಲೆ ಅತ್ಯಾಚಾರ ಆರೋಪ : ದೂರು ದಾಖಲು
-
Kodagu20 hours agoಅನಧಿಕೃತ ಹೋಸ್ಟೇಗಳಿಗೆ ಕಡಿವಾಣ ನಿಟ್ಟಿನಲ್ಲಿ ವಾರ್ಡ್ವಾರ್ ಸಮಿತಿ ರಚನೆ: 15 ದಿನಗಳೊಳಗೆ ಪೊಲೀಸರಿಂದ ದಲ್ಲಾಳಿಗಳ ವಿರುದ್ದ ಕ್ರಮ
