Connect with us

Chamarajanagar

ಎಸ್ ಸುಪ್ರಿಯಾ ತಾಲೂಕಿಗೆ ಪ್ರಥಮ

Published

on

ತಾಲೂಕಿಗೆ ಈ ಬಾರಿ ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ಒಟ್ಟಾರೆ 72.40ರಷ್ಟು ಫಲಿತಾಂಶದ ಲಭಿಸಿದ್ದು ವಿದ್ಯಾರ್ಥಿನಿಯರು ಮೇಲುಗೈ ಸಾಧಿಸಿದ್ದಾರೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ ಕಾಂತರಾಜು ಮಾಹಿತಿ ನೀಡಿದರು.

ಒಟ್ಟು 882 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 640 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಈ ಬಾರಿಯೂ ಸರ್ಕಾರಿ ಶಾಲೆಗಳು ಉತ್ತಮ ಸಾಧನೆ ಮಾಡಿದೆ .ತಾಲೂಕಿನಲ್ಲಿ ಒಟ್ಟು 19 ಪ್ರೌಢಶಾಲೆಗಳಿದ್ದು ಇದರಲ್ಲಿ ಸರ್ಕಾರಿ ಆದರ್ಶ ಶಾಲೆ ವಿದ್ಯಾರ್ಥಿಗಳು ಫಲಿತಾಂಶದಲ್ಲಿ ಮೊದಲ ಸ್ಥಾನ ಗಳಿಸಿದ್ದು ಶೇಕಡ 98.7 ರಷ್ಟು ಫಲಿತಾಂಶ ಬಂದಿದೆ.
ಪ್ರತಿ ವರ್ಷವೂ ಶೇಕಡ ನೂರರಷ್ಟು ಫಲಿತಾಂಶ ದಾಖಲಿಸಿದ್ದ ಶಾಲೆಗೆ ಈ ಬಾರಿ ಒಬ್ಬ ವಿದ್ಯಾರ್ಥಿನಿ ಅನುತ್ತೀರ್ಣರಾಗಿದ್ದು ಈ ಅವಕಾಶ ಶಾಲೆಗೆ ತಪ್ಪಿದೆ. ಪರೀಕ್ಷೆಗೆ ಹಾಜರಾಗಿದ್ದ 407 ವಿದ್ಯಾರ್ಥಿಗಳಲ್ಲಿ 242 ವಿದ್ಯಾರ್ಥಿಗಳು ಉತ್ತೀರ್ಣರಾದರೆ, ಒಟ್ಟು 475 ವಿದ್ಯಾರ್ಥಿನಿಯರು ಪರೀಕ್ಷೆಗೆ ಹಾಜರಾಗಿದ್ದರು. ಇದರಲ್ಲಿ 398 ವಿದ್ಯಾರ್ಥಿನಿಯರು ತೆರ್ಗಡೆಯಾಗಿ ಮೇಲುಗೈ ಸಾಧಿಸಿದ್ದಾರೆ. ಶೇಕಡವಾರು ಫಲಿತಾಂಶದಲ್ಲಿ ವಿದ್ಯಾರ್ಥಿಗಳು ಶೇಕಡ 59.46 ದಾಖಲಿಸಿದ್ದಾರೆ. ವಿದ್ಯಾರ್ಥಿನಿಯರು ಶೇಕಡ 83.79 ರಷ್ಟು ಉತ್ತೀರ್ಣರಾಗಿದ್ದಾರೆ. ಜಿಲ್ಲೆಯಲ್ಲಿ ಯಳಂದೂರು ತಾಲೂಕು ಫಲಿತಾಂಶದಲ್ಲಿ 5 ಸ್ಥಾನ ಪಡೆದುಕೊಂಡಿದೆ.

ಎಸ್ ಸುಪ್ರಿಯಾ ತಾಲೂಕಿಗೆ ಪ್ರಥಮ.

ತಾಲೂಕಿನ ವೈದ್ಯ ಮೊಳೆ ಗ್ರಾಮದ ಲಿಂಗರಾಜು ಪ್ರೇಮ ದಂಪತಿ ಪುತ್ರಿ, ಸರ್ಕಾರಿ ಆದರ್ಶ ವಿದ್ಯಾಲಯದ ವಿದ್ಯಾರ್ಥಿನಿ ಎಸ್. ಸುಪ್ರಿಯಾ 602 ಅಂಕಗಳಿಸುವ ಮೂಲಕ ತಾಲೂಕಿಗೆ ಪ್ರಥಮ ಸ್ಥಾನ ಪಡೆದಿದ್ದಾಳೆ. ತಾಲೂಕಿನ ಟಾಪ್ 10 ಅಂಕಗಳಿಗೆ ವಿದ್ಯಾರ್ಥಿಗಳಲ್ಲೂ 9 ವಿದ್ಯಾರ್ಥಿಗಳು ಸರ್ಕಾರಿ ಶಾಲೆಯ ಮಕ್ಕಳೇ ಆಗಿದ್ದಾರೆ .ಆದರ್ಶ ಶಾಲೆಯ ವಿದ್ಯಾರ್ಥಿಗಳೇ ಐದು ಮಂದಿ ಇದ್ದಾರೆ .ತಾಲೂಕಿಗೆ ಪ್ರಥಮ ಸ್ಥಾನ ಪಡೆದ ಎಸ್ ಸುಪ್ರಿಯಾ ಮನೆಗೆ ಕ್ಷೇತ್ರ ಶಿಕ್ಷಣಾಧಿಕಾರಿ ಕೇಕಾಂತರಾಜು ಹಾಗೂ ಆದರ್ಶ ವಿದ್ಯಾಲಯದ ಮುಖ್ಯ ಶಿಕ್ಷಕ ಗುರುಮೂರ್ತಿ ಭೇಟಿ ನೀಡಿ ವಿದ್ಯಾರ್ಥಿಯನ್ನು ಸನ್ಮಾನಿಸಿದರು.

Continue Reading
Click to comment

Leave a Reply

Your email address will not be published. Required fields are marked *

Chamarajanagar

ಯಳಂದೂರು ತಾಪಂ ವತಿಯಿಂದ 15ನೇ ರಾಷ್ಟ್ರೀಯ ಮತದಾನ ದಿನಾಚರಣೆ

Published

on

ಯಳಂದೂರು ಜನವರಿ 25

ಯಳಂದೂರು ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ 15ನೇ ರಾಷ್ಟ್ರೀಯ

ಮತದಾರರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಿವಿಲ್ ನ್ಯಾಯಾಧೀಶರಾದ ಆರ್ಕಶ್ ಎಂ ರವರು 15ನೇ ರಾಷ್ಟ್ರೀಯ ಮತದಾರರ ದಿನಾಚರಣೆಯ ಶುಭಾಶಯ ತಿಳಿಸಿ ಈಗಿನ ಯುವಕರಿಗೆ ಮತದಾನದ ಅರಿವು ಅಗತ್ಯ 18 ವಯಸ್ಸು ಮೀರಿದವರು ಮಾತ ದಾರರಗೆ ನೋಂದಣಿ ಮಾಡುವುದು ಅಗತ್ಯ, ಎಂದು
ತಿಳಿಸಿದರು,

ಮುಖ್ಯ ಭಾಷಣಕಾರರಾಗಿ ಮಾತನಾಡಿದ ಕರ್ನಾಟಕ ಪಬ್ಲಿಕ್ ಶಾಲೆಯ ಉಪ ಪ್ರಾಂಶುಪಾಲರಾದ ನಂಜುಂಡಯ್ಯ ರವರು ಚುನಾವಣೆ ಸಂದರ್ಭದಲ್ಲಿ ನಿಮ್ಮ ಮತ ವನು ಮಾರಿಕೊಳ್ಳಬೇಡಿ , ಯುವಕರು ಹೆಚ್ಚಿನ ಪ್ರಮಾಣದಲ್ಲಿ ಒಂದಾಯಿಸಬೇಕು, ರಾಷ್ಟ್ರೀಯ ಮತದಾನ ದ ಬಗ್ಗೆ ತಿಳಿಸಿದರು,

ಕಾರ್ಯಕ್ರಮದಲ್ಲಿ ತಾಲ್ಲೂಕು ದಂಡಾಧಿಕಾರಿ ಗಳದ ಜಯಪ್ರಕಾಶ್, ತಾಲ್ಲೂಕು ಪಂಚಾಯಿತಿ ಸಾಹಯಕ ನಿರ್ದೇಶಕ ರಾದ ಗುರು ಮಲ್ಲು, ಭೂ ದಾಖಲೆಗಳ ನಿರ್ದೇಶಕ ರಾದ ಉಮೇಶ್, ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ವಿಜಯ ಹನೂರು, ಸಾಹಯಕ ಪ್ರಾದ್ಯಾಪಕರದ ಶ್ವೇತ ಕೆ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರಾದ ಅಮೃತೇಷ್, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ನಾಗೇಂದ್ರ, ಶಾಲೆಯ ಶಿಕ್ಷಕರು, ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು

Continue Reading

Chamarajanagar

ಗಿರಿಜನರು ಸಮಾಜದ ಮುಖ್ಯವಾಹಿನಿಗೆ ಬಂದು ಮೌಲ್ಯಯುತ ಬದುಕನ್ನು ಕಟ್ಟಿಕೊಳ್ಳಬೇಕು: ಟಿ ಹಿರಲಾಲ್

Published

on

ಚಾಮರಾಜನಗರ: ಗಿರಿಜನರು ಉತ್ತಮ ಶಿಕ್ಷಣ ಪಡೆದು ಸಮಾಜದ ಮುಖ್ಯವಾಹಿನಿಗೆ ಬಂದು ಮೌಲ್ಯಯುತ ಬದುಕನ್ನು ಕಟ್ಟಿಕೊಳ್ಳಬೇಕು ಎಂದು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಟಿ.ಹಿರಲಾಲ್ ಕರೆ ನೀಡಿದರು.

ಕೆರೆದಿಂಬ ಪೋಡಿನಲ್ಲಿ ಬಿಆರ್ ಟಿ ಹುಲಿ ಸಂರಕ್ಷಿತ ಪ್ರದೇಶ ಚಾಮರಾಜನಗರ ವಿಭಾಗದ ವತಿಯಿಂದ ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣೆ, ಬೆಂಕಿ ಅರಿವು ಮತ್ತು ಹಸಿರು ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಬಿ.ಆರ್.ಟಿ ಹುಲಿ ಸಂರಕ್ಷಿತ ಪ್ರದೇಶದ ವಿವಿಧ ವಲಯಗಳ ವ್ಯಾಪ್ತಿಯಲ್ಲಿ ಬರುವ ಪೋಡುಗಳ ಎಸ್ ಎಸ್ ಎಲ್ ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಗಳಲ್ಲಿ ಉತ್ತಮ ಅಂಕ ಪಡೆದ 13 ಗಿರಿಜನ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ಪಡೆದ ಅಂಕಗಳ ಆಧಾರದ ಮೇಲೆ 10 ಸಾವಿರ ರೂ, 7,000 ಮತ್ತು 5000 ಚೆಕ್ಕನ್ನು ವಿತರಿಸಲಾಯಿತು.

ಉಪ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ನಿರ್ದೇಶಕ ಶ್ರೀಪತಿ ಬಿ,ಎಸ್.ಮಾತನಾಡಿ, ಅರಣ್ಯ ಮತ್ತು ಗಿರಿಜನರ ನಡುವೆ ಅವಿನಾಭಾವ ಸಂಬಂಧವಿದ್ದು, ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣೆಯಲ್ಲಿ ಸಹಕರಿಸುವಂತೆ ತಿಳಿಸಿದರು.

ಗಿರಿಜನರು ಪೂಜ್ಯನಿಯ ಭಾವನೆಯಿಂದ ಅರಣ್ಯ ಮತ್ತು ವನ್ಯಜೀವಿಯನ್ನು ಗೌರವಿಸುತ್ತಿದ್ದು, ಅರಣ್ಯ ಇಲಾಖೆಯ ಉತ್ತಮ ಸಹಕಾರದಿಂದ ಅರಣ್ಯ ಮತ್ತು ವನ್ಯಜೀವಿಯನ್ನು ಸಂರಕ್ಷಿಸಬೇಕೆಂದು ಹೇಳಿದರು.

ಮಾದೇಗೌಡ ಮಾತನಾಡಿ, ಗಿರಿಜರು ಶಿಕ್ಷಣವನ್ನು ಶ್ರದ್ಧೆಯಿಂದ ಕಲಿತು ವಿವಿಧ ಇಲಾಖೆಗಳಲ್ಲಿ ಉನ್ನತ ಹುದ್ದೆಯನ್ನು ಅಲಂಕರಿಸಬೇಕು. ಗಿರಿಜನರ ಮುಗ್ಧತೆಯನ್ನು ಬಳಸಿಕೊಂಡು ಹಣ ಹಾಗೂ ಇತರ ಆಮಿಷಗಳನ್ನು ಒಡ್ಡಿ ಯಾವುದೇ ಅರಣ್ಯ ಅಪರಾಧಗಳಲ್ಲಿ ಪಾಲ್ಗೊಳ್ಳುವಂತೆ ಯಾರಾದರೂ ಪ್ರೇರೇಪಿಸಿದಲ್ಲಿ ಇಲಾಖೆಯವರಿಗೆ ಮಾಹಿತಿಯನ್ನು ನೀಡುವಂತೆ ತಿಳಿಸಿದರು

ಕಾರ್ಯಕ್ರಮದಲ್ಲಿ ವಲಯ ಅರಣ್ಯ ಅಧಿಕಾರಿಗಳಾದ ವಾಸು.ಬಿ.ಎಸ್ ನಾಗೇಂದ್ರ ನಾಯಕ್, ಪ್ರಮೋದ್, ಗಿರಿಜನ ಮುಖಂಡರಾದ ಬೊಮ್ಮಯ್ಯ, ಕೇತೇಗೌಡ, ಉಪವಲಯ ಅರಣ್ಯ ಅಧಿಕಾರಿ ಭಾನುಪ್ರಕಾಶ್, ಮೂರ್ತಿ, ಅನಂತರಾಮು, ಗಣೇಶ್ ಪ್ರಸಾದ್, ಮುಖ್ಯಪೇದೆ ನಂಜುಂಡ, ರಾಚಪ್ಪ ಕೆರೆದಿಂಬ ಮತ್ತು ಗೊಂಬಗಲ್ಲು ಮುಖಂಡರು ಅರಣ್ಯ ಇಲಾಖೆಯ ವಿವಿಧ ವೃಂದದ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದವರು ಹಾಜರಿದ್ದರು.

Continue Reading

Chamarajanagar

ಅಂಬಳೆ ಗ್ರಾಮ ಪಂಚಾಯಿತಿಯ ನೂತನ ಕಟ್ಟಡದ ಶಂಕುಸ್ಥಾಪನೆ

Published

on

ಯಳಂದೂರು: ರಾಜೀವ್ ಗಾಂಧಿ ಪಂಚಾಯತ್ ಸಶಕ್ತೀಕರಣ ಅಭಿಯಾನದಡಿ ಅಂದಾಜು 15 ಲಕ್ಷ ರೂಪಾಯಿ ವೆಚ್ಚದಲ್ಲಿ ಯಳಂದೂರು ತಾಲ್ಲೂಕಿನ ಅಂಬಳೆ ಗ್ರಾಮ ಪಂಚಾಯಿತಿಯ ನೂತನ ಕಟ್ಟಡದ ಶಂಕುಸ್ಥಾಪನೆಗೆ ಶುಕ್ರವಾರ (ಜ.24) ಶಾಸಕ ಎ.ಆರ್‌ ಕೃಷ್ಣಮೂರ್ತಿ ಭೂಮಿ ಪೂಜೆ ನೆರವೇರಿಸಿದರು

ಜಿಲ್ಲಾ ಗ್ಯಾರೆಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್‌ವಿ. ಚಂದ್ರು‚ ನಿರ್ಮಿತಿ ಕೇಂದ್ರ ಇಂಜಿನಿಯರ್ ನಂದಿಶ್, ಗ್ರಾ.ಪಂ ಅಧ್ಯಕ್ಷ ನಂಜುಂಡಸ್ವಾಮಿ ಉಪಾಧ್ಯಕ್ಷೆ ಮಹದೇವಮ್ಮ ತಾ.ಪಂ ಇಒ ಉಮೇಶ್ ಅಗರ ಲಿಂಗರಾಜ್ ಹಾಗೂ ಪಿಡಿಒ ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.

Continue Reading

Trending

error: Content is protected !!