Connect with us

Mysore

ಬೆಂಕಿ ಅವಘಡ: ತಹಶೀಲ್ದಾರ್ ಶಿವಕುಮಾರ್ ಕಾಸ್ನೂರು ಭೇಟಿ

Published

on

ನಂಜನಗೂಡು: ಮೇ.14

ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಗೆ ನಂಜನಗೂಡಿನಲ್ಲಿ ಗಂಧದ ಕಡ್ಡಿ ತಯಾರಿಕಾ ಘಟಕಕ್ಕೆ ಬೆಂಕಿ ಬಿದ್ದ ಹಿನ್ನೆಲೆಯಲ್ಲಿ ನಂಜನಗೂಡು ತಹಶೀಲ್ದಾರ್ ಶಿವಕುಮಾರ್ ಕಾಸ್ನೂರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ನಂಜನಗೂಡು ನಗರದ ಮಾರ್ಕೆಟ್ ರಸ್ತೆಯ ಉರ್ದು ಶಾಲೆಯ ಹಿಂಭಾಗದಲ್ಲಿರುವ ರಫೀಕ್ ಎಂಬುವವರಿಗೆ ಸೇರಿದ ಗಂಧದ ಕಡ್ಡಿ ತಯಾರಿಕಾ ಘಟಕಕ್ಕೆ ಬೆಳಿಗ್ಗೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಬೆಂಕಿ ಕಾಣಿಸಿಕೊಂಡು ಲಕ್ಷಾಂತರ ಮೌಲ್ಯದ ವಸ್ತುಗಳು ಅಗ್ನಿಗೆ ಆಹುತಿಯಾಗಿತ್ತು. ಈ ಹಿನ್ನೆಲೆಯಲ್ಲಿ ತಹಶೀಲ್ದಾರ್ ಶಿವಕುಮಾರ್ ಕಾಸ್ನೂರು ಅಧಿಕಾರಿಗಳ ಜೊತೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಬೆಂಕಿ ಬಿದ್ದಿದೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ತನಿಖೆ ನಡೆಸಿದಾಗ ಬೆಳಕಿಗೆ ಬರುತ್ತದೆ. ಅಕ್ಕಪಕ್ಕದ ಮನೆಗಳಿಗೂ ಬೆಂಕಿ ಬಿದ್ದು ನಷ್ಟ ಉಂಟಾಗಿದೆ. ಸುಮಾರು 15 ರಿಂದ 20 ಲಕ್ಷ ನಷ್ಟವಾಗಿದೆ ಎಂದು ಮಾಲೀಕರು ತಿಳಿಸಿದ್ದಾರೆ. ಸರ್ಕಾರದಿಂದ ಸಿಗುವ ಪರಿಹಾರವನ್ನು ನೀಡಲಾಗುವುದು ಎಂದು ತಹಶೀಲ್ದಾರ್ ಶಿವಕುಮಾರ್ ಕಾಸ್ನೂರು ಭರವಸೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಪಿಎಸ್ಐ ಪ್ರಕಾಶ್ ರಾಜ್, ನಗರಸಭಾ ಸದಸ್ಯೆ ಗಾಯತ್ರಿ ಸೇರಿದಂತೆ ತಾಲ್ಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.

Continue Reading
Click to comment

Leave a Reply

Your email address will not be published. Required fields are marked *

Mysore

ಸಿಟಿಜನ್ಸ್ ಶಿಕ್ಷಣ ಸಂಸ್ಥೆ ಶಿಕ್ಷಣ ಮತ್ತು ಕ್ರೀಡೆಗೆ ಉತ್ತಮ ವಾತಾವರಣದಲ್ಲಿದೆ : ಶಾಸಕ ದರ್ಶನ್ ಧ್ರುವನಾರಾಯಣ್ z

Published

on

ವರದಿ :  ಮಹದೇವಸ್ವಾಮಿ ಪಟೇಲ್

ನಂಜನಗೂಡು: ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ಇಲ್ಲಿನ ಸಿಟಿಜನ್ ಶಿಕ್ಷಣ ಸಂಸ್ಥೆಯು ಶಿಕ್ಷಣ ಮತ್ತು ಕ್ರೀಡೆಗೆ ಉತ್ತಮ ವಾತಾವರಣವನ್ನುಂಟು ಮಾಡಿಕೊಂಡಿದ್ದು ಈ ಸಂಸ್ಥೆಯು ಸಾವಿರಾರು ಪ್ರತಿಭಾವಂತರನ್ನು ಸಮಾಜಕ್ಕೆ ನೀಡಿದ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ಶಾಸಕ ದರ್ಶನ್ ಧ್ರುವನಾರಾಯಣ್ ರವರು ಸಿಟಿಜನ್ ಶಿಕ್ಷಣ ಸಂಸ್ಥೆಯ ಕಾರ್ಯಸಾಧನೆಗಳ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು.

ಸಿಟಿಜನ್ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಎರಡು ದಿನಗಳ ಕಾಲ ನಡೆದ ಶಿಕ್ಷಣ ಸಂಸ್ಥೆಯ ವಾರ್ಷಿಕೋತ್ಸವ ಸಮಾರಂಭದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.

ಇಲ್ಲಿ ಎರಡು ದಿನಗಳು ಶಾಲಾ ವಾರ್ಷಿಕೋತ್ಸವ ಸಂದರ್ಭದಲ್ಲಿ ನಡೆದಿರುವ ಸಾಂಸ್ಕೃತಿಕ ಕಾರ್ಯಕ್ರಮಗಳು ಮಕ್ಕಳ ಪ್ರತಿಭೆಗಳನ್ನು ಪ್ರದೇಶಿಸಲು ಉತ್ತಮ ವೇದಿಕೆಯನ್ನು ಕಲ್ಪಿಸಿ ಕೊಟ್ಟಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಮುಂದಿನ ದಿನಗಳಲ್ಲಿ ನಂಜನಗೂಡು ತಾಲೂಕಿಗೆ ಯುನಿವರ್ಸಿಟಿಗಳು ಪ್ರಾರಂಭವಾಗಲಿದ್ದು ನಂಜನಗೂಡು ತಾಲೂಕು ಶಿಕ್ಷಣದ ಕೇಂದ್ರವಾಗಲಿದೆ ಎಂದು ಭವಿಷ್ಯ ನುಡಿದರು.

ಸಿಟಿಸನ್ ಶಿಕ್ಷಣ ಸಮೂಹದ ಸಂಸ್ಥೆಯ ಅಧ್ಯಕ್ಷರು ಹಾಗೂ ಕಾರ್ಯದರ್ಶಿ, ಆಡಳಿತ ಮಂಡಳಿಯವರ ಕಾರ್ಯ ಸಾಧನೆಗಳ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು.

ಸಮಾರಂಭದಲ್ಲಿ ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ವಾಲ್ಮೀಕಿ ನಿಗಮದ ಮಾಜಿ ಅಧ್ಯಕ್ಷ ಎಸ್ .ಸಿ. ಬಸವರಾಜು, ಪ್ರಥಮ ದರ್ಜೆ ಗುತ್ತಿಗೆದಾರ ಪದ್ಮನಾಭ ರಾವ್, ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಮಸೂದ ಜಾವಿದ್, ಕಾರ್ಯದರ್ಶಿ ಮೊಹಮ್ಮದ್ ಅಲಿ, ಸೇರಿದಂತೆ ಎಲ್ಲಾ ಪ್ರಮುಖರುಗಳು ಭಾಗವಹಿಸಿದ್ದರು.

ಸಿಟಿಜನ್ಸ್ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಶಾಲಾ ವಾರ್ಷಿಕೋತ್ಸವವು ಎರಡು ದಿನ ಮಕ್ಕಳ ಆಕರ್ಷಕ ನೃತ್ಯಗಳು ಯಶಸ್ವಿಯಾಗಿ ನಡೆಯಿತು.

ಮೊದಲನೇ ದಿನದ ಕಾರ್ಯಕ್ರಮದಲ್ಲಿ ಜಾವೀದ್ ಮತ್ತು ಅಹಮದ್ ಮತ್ತು ಪತ್ರಕರ್ತ ನಡುವಿನ ಅವಿನಾಭವ ಸಂಬಂಧ ಪ್ರಯುಕ್ತ ಗೌರವ ಪ್ರೀತಿ ಅನ್ಯುನ್ಯಕ್ಕಾಗಿ ಪ್ರತಿವರ್ಷ ಶಾಲಾ ವಾರ್ಷಿಕೋತ್ಸವ ಸಂದರ್ಭದಲ್ಲಿ ಪತ್ರಕರ್ತರು ಒಬ್ಬರಿಗೆ ಶ್ರೀ ಜಾವಿದ್ ಅಹಮದ್ ಮಾಧ್ಯಮ ಪ್ರಶಸ್ತಿ ಕಳೆದ ವರ್ಷದಿಂದ ಪ್ರಾರಂಭಗೊಂಡಿದ್ದು ಈ ಬಾರಿ ಹಿರಿಯ ಪತ್ರಕರ್ತ ಕೆಂಪೇಗೌಡರು ಈ ಪ್ರಶಸ್ತಿಗೆ ಬಾಜನರಾದರು.
ಸಮಾರಂಭದಲ್ಲಿ ಭಾಗವಹಿಸಿದ್ದ ಹಿರಿಯ ಗುತ್ತಿಗೆದಾರದ ಯು.ಏನ್ ಪದ್ಮನಾಭರಾವ್ ಬಿ.ಇ.ಓ.ಮಹೇಶ್ ಸಂಸ್ಥೆಯ ಕಾರ್ಯದರ್ಶಿ ನೂರ್ ಮಹಮ್ಮದ್ ಅಲಿ ಹಾಗೂ ಸಂಸ್ಥೆಯ ಮುಖ್ಯಸ್ಥರುಗಳು ಶ್ರೀ ಕೆಂಪೇಗೌಡರಿಗೆ ಪ್ರಶಸ್ತಿ ಫಲಕಗಳನ್ನು ನೀಡಿ ಗೌರವಿಸಿದರು.

ಮಕ್ಕಳ ಆಕರ್ಷಕ ನೃತ್ಯಗಳು ಸೇರಿದ್ದ ಸಹಸ್ರಾರು ಪೋಷಕರುಗಳವರಿಗೆ ರಂಜಿಸಿದವು.

ಸಮಾರಂಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಮಸೂದ ಜಾವಿದ್ ಮ್ಯಾನೇಜ್ಮೆಂಟ್ ಮೆಂಬರ್ ಆದ ಹನಿಯಾ ಹಲಿ ಆಡಳಿತ ಅಧಿಕಾರಿ ಸಲ್ಮಾನ್ ಶರೀಫ್, ಮುಖ್ಯೋಪಾಧ್ಯಾಯರುಗಳಾದ ಹೇನಾಕಣ್ಣನ್, ಪುಟ್ಟಸ್ವಾಮಿ, ಪ್ರಾಂಶುಪಾಲರುಗಳಾದ ಮೈತುಲಿ ಲಕ್ಷ್ಮಣ್,ಪ್ರಸಾದ್, ಗುರುಪ್ರಸಾದ್ ಸತೀಶ್ ಭಟ್ ಹಾಗೂ ಶಾಲೆಯ ಮುಖ್ಯಸ್ಥರುಗಳು ಸಿಬ್ಬಂದಿ ವರ್ಗದವರು ಪೋಷಕರುಗಳು ವಿದ್ಯಾರ್ಥಿ ವಿದ್ಯಾರ್ಥಿನಿಯರು ಭಾಗವಹಿಸಿದ್ದರು.

 

Continue Reading

Mysore

ಕೊಲ್ಕತ್ತಾದ ಮೈಸೂರು ಉದ್ಯಾನಕ್ಕೆ 10ನೇ ಚಾಮರಾಜ ಒಡೆಯರ್ ನಾಮಫಲಕ ಅಳವಡಿಸಲು ಪತ್ರ

Published

on

 

ಮೈಸೂರು: “ಕೊಲ್ಕತಾದಲ್ಲಿರುವ ‘ಮೈಸೂರು ಉದ್ಯಾನ’ದ ಬಳಿ 10ನೇ ಚಾಮರಾಜ ಒಡೆಯರ್ ಅವರ ಮಾಹಿತಿ ಫಲಕ ಅಳವಡಿಸಲು ರಾಜ್ಯ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷ ಆರ್. ರಘು (ಕೌಟಿಲ್ಯ) ಕೊಲ್ಕತಾ ಮುನ್ಸಿಪಲ್ ಆಯುಕ್ತರಿಗೆ ತಮ್ಮ ನೈಪುಣ್ಯ ಶಿಕ್ಷಣ ಸಂಸ್ಥೆಯ ಕಾಯಕ ಪ್ರತಿಷ್ಠಾನದ ಮುಖೇನ ಮನವಿ ಸಲ್ಲಿಸಿದ್ದಾರೆ.

ಮೈಸೂರು ಕೇಂದ್ರಿತ ಕಾಯಕ ಪ್ರತಿಷ್ಠಾನವು ದಕ್ಷಿಣ ಕರ್ನಾಟಕದಲ್ಲಿ ಶಿಕ್ಷಣ ಹಾಗೂ ಸೇವಾ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ

ಟ್ರಸ್ಟ್ ಮೈಸೂರಿನಲ್ಲಿರುವ ಒಂದು ಟ್ರಸ್ಟ್ ಆಗಿದ್ದು, ಇದು ಶಿಕ್ಷಣ, ಸಂಸ್ಕೃತಿ, ಜಾನಪದ, ಪಾರಂಪರಿಕ ಮೌಲ್ಯಗಳ ಮಹತ್ವದ ಪ್ರಸಾರ ಹಾಗೂ ಐತಿಹಾಸಿಕ ಸ್ಥಳಗಳ ಜಾಗೃತಿ ಹಾಗೂ ಸಂರಕ್ಷಣೆ ಕ್ಷೇತ್ರದಲ್ಲಿ ತನ್ನನ್ನು ತೊಡಗಿಸಿಕೊಂಡು ಬರುತ್ತಿದೆ.

ಮೈಸೂರು ರಾಜಮನೆತನದ 10ನೇ ಚಾಮರಾಜೇಂದ್ರ ಒಡೆಯರ್ ಮತ್ತು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಆಳ್ವಿಕೆಯ 1881- 1947 ಅವಧಿಯು ಭಾರತೀಯ ಇತಿಹಾಸದಲ್ಲೂ ಸುವರ್ಣಾಕ್ಷರಗಳಲ್ಲಿ ಬರೆದಿರುವ ಯುಗ. ಆ ದಿನಗಳಲ್ಲಿ ಆಧುನಿಕ ಮೈಸೂರು ಸಂಸ್ಥಾನವು ಭಾರತದ ಅತ್ಯಂತ ಪ್ರಗತಿಪರ ರಾಜ್ಯಗಳಲ್ಲಿ ಒಂದಾಗಿತ್ತು.

-1911 ರವರೆಗೆ ಕೊಲ್ಕತ್ತಾ ಬ್ರಿಟಿಷ್ ರಾಜರ ರಾಜಧಾನಿಯಾಗಿತ್ತು. ಆ ದಿನಗಳಲ್ಲಿಯೇ 10ನೇ ಚಾಮರಾಜೇಂದ್ರ ಒಡೆಯರ್ ಅವರು ಆಗಿನ ಗವರ್ನರ್ ಜನರಲ್ ಅವರನ್ನು ಭೇಟಿ ಮಾಡಲು ಕಲ್ಕತ್ತಾಗೆ ಹೋಗಿದ್ದರು.ಆಗ

ಇದ್ದಕ್ಕಿದ್ದಂತೆ ಅವರು ಡಿಫ್ತೀರಿಯಾದಿಂದ ಅನಾರೋಗ್ಯಕ್ಕೆ ತುತ್ತಾಗಿ 1894ನೇ ಡಿಸೆಂಬರ್ 28 ರಂದು ಕಲ್ಕತ್ತಾದಲ್ಲಿ ನಿಧನರಾದರು.

ಅವರ ದೇಹವನ್ನು ಸಹನಗರದ ಟೋಲಿಗುಂಜ್ ಕಿರೋತಲ ಘಾಟ್ ನಲ್ಲಿ ಅಂತ್ಯಸಂಸ್ಕಾರ ಮಾಡಲಾಯಿತು. ಈ ಜಾಗವನ್ನು ಮೈಸೂರು ಉದ್ಯಾನವನ ಎಂದೇ ಕರೆಯಲಾಗುತ್ತಿದೆ. ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ಜನರಿಗೆ ಮೈಸೂರಿನ ರಾಜವಂಶಸ್ಥರ ಬಗ್ಗೆ ಅಪಾರ ಗೌರವ ಮತ್ತು ಅಭಿಮಾನ ಇದೆ.

10ನೇ ಚಾಮರಾಜೇಂದ್ರ ಒಡೆಯರ್ ಅವರಂತೂ ದಾರ್ಶನಿಕ ಆಡಳಿತಗಾರರಾಗಿದ್ದರು. ಆಧುನಿಕ ಮೈಸೂರು ರಾಜ್ಯ ನಿರ್ಮಾಣದಲ್ಲಿ ಅವರ ಪಾತ್ರ ಗಮನಾರ್ಹ. 1881 ರಲ್ಲಿ ಅವರು ಸ್ಥಾಪಿಸಿದ ಮೈಸೂರು ಪ್ರತಿನಿಧಿ ಸಭೆ ಪ್ರಜಾಪ್ರಭುತ್ವದ ಅಡಿಗಲ್ಲು. 1893ರಲ್ಲಿ ಸ್ವಾಮಿ ವಿವೇಕಾನಂದರ ಚಿಕಾಗೋ ನಗರಕ್ಕೆ ತೆರಳಿದಾಗ, ಅದಕ್ಕೆ ನೆರವು ನೀಡಿದ್ದರು. ಇದೆಲ್ಲವನ್ನೂ ಭಾರತೀಯರು ಮರೆಯುವುದಿಲ್ಲ, ಮರೆಯಲಾಗದೂ ಕೂಡ. ಇತ್ತೀಚಿನ ದಿನಗಳಲ್ಲಿ ಕರ್ನಾಟಕದಿಂದ ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಕೋಲ್ಕತಾಗೆ ಭೇಟಿ ನೀಡುತ್ತಿದ್ದು, ಈ ಪೈಕಿ ಬಹುತೇಕರು ಮೈಸೂರು ಉದ್ಯಾನಕ್ಕೂ ಭೇಟಿ ನೀಡಿತ್ತಾರೆ. ಆದರೆ, ಆ ಉದ್ಯಾನದಲ್ಲಿ ಹತ್ತನೇ ಚಾಮರಾಜೇಂದ್ರ ಒಡೆಯರ್ ಅವರ ಕುರಿತು ಸಮಾಧಿ ಸ್ಥಳದ ಮಹತ್ವ ಸೇರಿದಂತೆ ಯಾವುದೇ ಮಾಹಿತಿಯೂ ಸಿಗುತ್ತಿಲ್ಲ. ಸಂದರ್ಶಕರಿಗೆ ತಿಳಿಸಲು ಕನಿಷ್ಠ ಪಕ್ಷ ಸೂಚನಾ ಫಲಕವೂ ಇಲ್ಲ. ಹಾಗಾಗಿ 10ನೇ ಚಾಮರಾಜೇಂದ್ರ ಒಡೆಯರ್ ಅವ ಜೀವನ ಮತ್ತು ಅವರ ಸಾಧನೆಗಳ ಬಗ್ಗೆ ಬಂಗಾಳಿ, ಇಂಗ್ಲಿಷ್, ಹಿಂದಿ ಮತ್ತು ಕನ್ನಡ ಸೇರಿ 4 ಭಾಷೆಗಳಲ್ಲಿ ಮಾಹಿತಿ ನೀಡುವ ತುರ್ತು ಇದೆ. ನಮ್ಮ ಟ್ರಸ್ಟ್ ಸ್ವಂತ ಖರ್ಚಿನಲ್ಲಿಯೇ ಮಾಹಿತಿ ಫಲಕವನ್ನು ಅಳವಡಿಸಲು ಉತ್ಸುಕವಾಗಿದೆ.

ಪಶ್ಚಿಮ ಬಂಗಾಳ ಸರಕಾರ, ಸ್ಥಳೀಯ ಪಾಲಿಕೆ ಆಡಳಿತ ನಮಗೆ ಅನುಮತಿ ನೀಡುವಂತೆ ಕೋರಿಕೊಳ್ಳುತ್ತೇನೆ. ಈ ವ್ಯವಸ್ಥೆಯನ್ನು ನಗರ ಪಾಲಿಕೆಯೇ ಮಾಡಿದರೂ ಸಂತೋಷ. ಈ ಸ್ಮಾರಕವನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿ ಪಡಿಸಬೇಕೆಂದು ಕೋರುವೆ.

-ಈ ಉಪಕ್ರಮವು ಕೋಲ್ಕತಾಗೆ ಭೇಟಿ ನೀಡುವ ಪ್ರವಾಸಿಗರಲ್ಲಿ ಮೈಸೂರು ರಾಜಮನೆತನದ ಬಗ್ಗೆ ಅರಿವು ಮೂಡಿಸಲು, ಪಾರಂಪರಿಕ ತಾಣದ ಸಂರಕ್ಷಿಸಲು ಹಾಗೂ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು ಸಹಾಯ ಮಾಡುತ್ತದೆ ಎಂದು ರಘು ಕೋಲ್ಕತಾ

ಮುನ್ಸಿಪಲ್ ಆಯುಕ್ತರಿಗೆ ಮನವಿ ಮಾಡಿದ್ದಾರೆ.

Continue Reading

Mysore

ಬಾಬಾ ಅಂಬೇಡ್ಕರ್ ‘ಬಹುಜನ’ ನಾಯಕರು

Published

on

ತಿ.ನರಸೀಪುರ:-ದೇಶಕ್ಕೆ ಸಂವಿಧಾನ ಕೊಡುಗೆ ನೀಡಿ ಸರ್ವ ಜನಾಂಗದ ಸಮಾನತೆಗೆ ಮಹತ್ತರವಾದ ಕೊಡುಗೆ ನೀಡಿದ ಬಾಬಾ ಸಾಹೇಬ್ ಡಾ. ಬಿ.ಆರ್.ಅಂಬೇಡ್ಕರ್ ಅವರು ಕೇವಲ ಒಂದು ವರ್ಗಕ್ಕೆ ಸೀಮಿತವಲ್ಲ, ಅವರು ಈ ದೇಶದ ಬಹುಜನರ ಪ್ರಶ್ನಾತೀತ ನಾಯಕರು ಎಂದು ತಹಸೀಲ್ದಾರ್ ಟಿ.ಜಿ.ಸುರೇಶ್ ಆಚಾರ್ ತಿಳಿದರು.

ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರ 69ನೇ ಪರಿ ನಿರ್ವಾಣ ದಿನದ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದ ಅವರು ವ್ಯಕ್ತಿಯೊಬ್ಬರನ್ನು ಅವನ ಬಣ್ಣ,ಜಾತಿ ಮತ್ತು ಧರ್ಮದಿಂದ ಗುರುತಿಸದೆ ಅವರ ವ್ಯಕ್ತಿತ್ವ ಮತ್ತು ಸಾಧನೆಯ ಮೂಲಕ ಗುರುತಿಸುವ ಮುಖೇನ ಗೌರವ ಸಲ್ಲಿಸಬೇಕು. ಅಂಬೇಡ್ಕರ್ ಅವರನ್ನು ಒಂದು ಜಾತಿ ಸೀಮಿತಗೊಳಿಸಿ ಅವರ ಮಹಾನ್ ವ್ಯಕ್ತಿತ್ವವನ್ನು ಸಂಕುಚಿತಗೊಳಿಸುವುದು ತರವಲ್ಲ. ಇದು ಅವರ ವ್ಯಕ್ತಿತ್ವಕ್ಕೆ ಸಲ್ಲಿಸುವ ಅಗೌರವ. ಅವರು ಒಂದೇ ಜಾತಿ, ಧರ್ಮಕ್ಕೆ ಸೀಮಿತರಲ್ಲ, ಅವರು ಈ ದೇಶದ ಬಹುಜನರ ನಾಯಕ ಎಂದರು.

ಅಂಬೇಡ್ಕರ್ ಅವರ ಜೀವನದ ಕಥೆಯನ್ನು ಗಮನಿಸಿದಾಗ, ಅವರು ತಮ್ಮ ವೈಯುಕ್ತಿಕ ಜೀವನದ ಬಗ್ಗೆ ಕಿಂಚಿತ್ತು ಕಾಳಜಿ ವಹಿಸದೆ ದೇಶದಲ್ಲಿದ್ದ ಜಾತಿ ಅಸಮಾನತೆ,ದುರ್ಬಲರ ಆರ್ಥಿಕ ಕ್ಷೋಭೆಯನ್ನು ಗಮನದಲ್ಲಿಟ್ಟುಕೊಂಡು ಜನರ ಒಳಿತಿಗಾಗಿ ಅವರು ನಡೆಸಿದ ಹೋರಾಟದ ಮಾರ್ಗ ಅತ್ಯಂತ ಅವಿಸ್ಮರಣೀಯವಾದುದು ಎಂದರು.

 

ನಾಗರಿಕ ವೇದಿಕೆ ಮುಖಂಡ ಕರೋಹಟ್ಟಿ ಪ್ರಭುಸ್ವಾಮಿ ಮಾತನಾಡಿ, ಭಾರತದಲ್ಲಿ ಹಲವು ಜಾತಿ, ಧರ್ಮದ ಜನರು ವಾಸವಿದ್ದು, 140ಕೋಟಿ ಜನಸಂಖ್ಯೆ ಇರುವ ದೇಶಕ್ಕೆ ಸಂವಿಧಾನ ಎಂಬ ದಿಕ್ಸೂಚಿ ಭದ್ರ ಬುನಾದಿ ನೀಡಿದೆ. ಅಲ್ಲದೆ ದೇಶವನ್ನು ಉತ್ತಮ ಮಾರ್ಗದೆಡೆಗೆ ಸಾಗಿಸುತ್ತಿದೆ. ಅಂಬೇಡ್ಕರ್ ಅವರ ಬಗ್ಗೆ ಮಾತನಾಡಬೇಕೆಂದರೆ ಅವರ ಬಗ್ಗೆ ಆಳವಾದ ಅಧ್ಯಯನ ಅನಿವಾರ್ಯ. ಅಲ್ಪಮತಿಗಳಿಗೆ ಅಂಬೇಡ್ಕರ್ ಸಿದ್ದಿಸುವುದಿಲ್ಲ ಎಂದರು

 

ಇದೇ ವೇಳೆ ತಾಲೂಕು ಅಂಬೇಡ್ಕರ್ ಸಂಘದ ಕರೋಹಟ್ಟಿ ಮಹದೇವಯ್ಯ ಮತ್ತು ತಾಲೂಕು ಬಾಬು ಜಗಜೀವನ್ ರಾಂ ಸಂಘದ ಮಾಜಿ ಅಧ್ಯಕ್ಷ ಮೂಗೂರು ಸಿದ್ದರಾಜು ಅವರು ಅಂಬೇಡ್ಕರ್ ಕುರಿತು ಮಾತನಾಡಿದರು.

 

ಕಾರ್ಯಕ್ರಮದಲ್ಲಿ ಮಾಜಿ ಜಿಪಂ ಸದಸ್ಯ ಹೊನ್ನನಾಯಕ, ಮಾಜಿ ತಾ ಪಂ ಉಪಾಧ್ಯಕ್ಷ ಬಿ.ಮರಯ್ಯ, ಸದಸ್ಯರಾದ ಗಣೇಶ್, ರಾಮಲಿಂಗಯ್ಯ, ಪ್ರಸನ್ನ, ಕಾಂಗ್ರೆಸ್ ಮುಖಂಡೆ ಪಾರ್ವತಿ, ದಸಂಸ ಸೋಸಲೆ ರಾಜಶೇಖರ್,

ವಿಜಯಪುರ ಶಿವಶಂಕರ್,ವಾಟಾಳು ಪುಟ್ಟಸ್ವಾಮಿ,ಸೋಸಲೆ ನಂಜುಂಡಯ್ಯ,ದಸಂಸ ಆಲಗೂಡು ಶಿವಣ್ಣ,ಕಾರ್ಮಿಕ ಮುಖಂಡ ಪುಟ್ಟಮಲ್ಲಯ್ಯ,ಎಚ್.ನಾಗರಾಜು, ತಾಲೂಕು ಭಾರತ್ ಕಿಸಾನ್ ಸಂಘದ ಅಧ್ಯಕ್ಷ ನಾಗಲಗೆರೆ,ಶಿವಕುಮಾರ್,ತಾಪಂ ಯೋಜನಾಧಿಕಾರಿ ಕೆ.ರಂಗಸ್ವಾಮಿ, ತೋಟಗಾರಿಕೆ ಸಹಾಯಕ ನಿರ್ದೇಶಕಿ ಶಾಂತ,ಕೃಷಿ ಸಹಾಯಕ ನಿರ್ದೇಶಕಿ ರೂಪ,ತಾಲೂಕು ವೈದ್ಯಾಧಿಕಾರಿ ಡಾ.ರವಿಕುಮಾರ್ , ಸಿಡಿಪಿಒ ಗೋವಿಂದರಾಜು,ಪುಟ್ಟಸ್ವಾಮಿ, ಅಬಕಾರಿ ನಿರೀಕ್ಷಕಿ ಸುಧಾರಾಣಿ, ಪಿಡಬ್ಲ್ಯೂಡಿ ಎಇಇ ಸತೀಶ್ ಚಂದ್ರನ್,ಸೆಸ್ಕ್ ಎಇಇ ವೀರೇಶ್, ಸರ್ವೇ ಸಹಾಯಕ ನಿರ್ದೇಶಕ ಪಂಚಲಿಂಗಪ್ಪ,ಪಶು ಸಂಗೋಪನಾ ಸಹಾಯಕ ನಿರ್ದೇಶಕ ಡಾ.ಮಲ್ಲಿಕಾರ್ಜುನಸ್ವಾಮಿ,ಸಮಾಜ ಕಲ್ಯಾಣಾಧಿಕಾರಿ ಕೆ.ಡಿ.ವಿನೂತನ್, ನರಸೀಪುರ ಪುರಸಭೆ ಕೆ.ಸಿ.ತ್ರಿವೇಣಿ,

ಸಮಾಜ ಕಲ್ಯಾಣ ಇಲಾಖೆ ಮಹೇಶ್, ರಾಕೇಶ್ ಇತರರು ಹಾಜರಿದ್ದರು.

Continue Reading

Trending

error: Content is protected !!