Mysore
ಸ್ವಾವಲಂಬಿ ಬದುಕಿಗೆಗೆ ಸಂಜೀವಿನಿ ಸಹಕಾರ — ಸಿಇಓ ಕೆ.ಎಂ. ಗಾಯಿತ್ರಿ

ನಂಜನಗೂಡು: ಮೇ.15
ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷಿನ್ ಅಡಿಯಲ್ಲಿ(ಎನ್.ಆರ್.ಎಲ್.ಎಂ) ಗ್ರಾಮೀಣ ಭಾಗದ ಸಾಕಷ್ಟು ಮಹಿಳೆಯರು ಆರ್ಥಿಕವಾಗಿ ಸದೃಢಗೊಳುತ್ತಿದ್ದು, ಇನ್ನಷ್ಟು ವಿನೂತನ ರೀತಿಯಲ್ಲಿ ಉಪಯುಕ್ತವಾಗುವಂತಹ ವಿವಿಧ ಉತ್ಪನ್ನಗಳನ್ನು ತಯಾರಿಸಿ ತಮ್ಮದೇ ಬ್ರ್ಯಾಂಡ್ ಅನ್ನು ಸೃಷ್ಠಿಸಿಕೊಂಡು ಮುಖ್ಯವಾಹಿನಿಗೆ ಬರುವಂತೆ ಸಂಜೀವಿನಿ ಸಂಘದ ಸ್ಥಳೀಯ ಸಮುದಾಯ ಸಂಪನ್ಮೂಲ ವ್ಯಕ್ತಿಗಳು ಹಾಗೂ ಮುಖ್ಯ ಪುಸ್ತಕ ಬರಹಗಾರರುಗಳಿಗೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ. ಗಾಯಿತ್ರಿ ತಿಳಿಸಿದರು.
ನಂಜನಗೂಡು ತಾಲ್ಲೂಕಿನ ಹದಿನಾರು ಗ್ರಾಮ ಪಂಚಾಯಿತಿಗೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಭೇಟಿ ವಿವಿಧ ಇಲಾಖೆಗಳೊಂದಿಗೆ ಹಲವು ಯೋಜನೆಗಳ ಕುರಿತು ಪ್ರಗತಿ ಪರಿಶೀಲನೆ ಸಭೆ ನಡೆಸಿ ಅವರು ಮಾತನಾಡಿದರು.
ಸಂಜೀವಿನಿ ಸಂಘಗಳಿಂದ ನೀಡಲಾಗುವ ಪ್ರೋತ್ಸಾಹಧನನ್ನು ಮಹಿಳೆಯರು ವಿನೂತನ ರೀತಿಯಲ್ಲಿ ಇಂಬ್ರಾಯಿಡ್ರಿ ಮಾಡುವುದು, ವಿವಿಧ ತಿನಿಸುಗಳ ತಯಾರಿಕೆ, ಗೊಬ್ಬರ ತಯಾರಿಕೆ, ಅಣಬೆ ಬೆಳೆಯುವುದು ಸೇರಿದಂತೆ ಸ್ಥಳೀಯವಾಗಿ ಬೆಳೆಯುವ ಬಾಳೆಯಿಂದ ಬಾಳೆಕಾಯಿ ಚಿಪ್ಸ್, ಬಾಳೆ ದಿಂಡಿನಿಂದ ಜ್ಯೂಸ್, ಅದರ ತ್ಯಾಜ್ಯಗಳಿಂದ ಗೊಬ್ಬರ ತಯಾರಿಕೆ ಹೀಗೆ ವಿನೂತನ ರೀತಿಯಲ್ಲಿ ಉತ್ಪಾದನೆ ಮಾಡಿ ಅವುಗಳಿಗೆ ಕ್ರಿಯಾತ್ಮಕವಾಗಿ ಬೇಡಿಕೆ ಹೆಚ್ಚಿಸಿಕೊಂಡು ಸ್ವಾವಲಂಭಿ ಬದುಕು ಕಟ್ಟಿಕೊಳ್ಳುವಂತೆ ಜೀವನ ಪಾಠ ಮಾಡಿದರು.
ಜಲ ಜೀವನ್ ಯೋಜನೆ ಪ್ರಗತಿ ಪರಿಶೀಲಿಸಿದ ಅವರು, ಪಂಚಾಯಿತಿ ವ್ಯಾಪ್ತಿಯಲ್ಲಿ ನೀರಿನ ಸಂಪರ್ಕ ಕೆಲಸವನ್ನು ಶೀಘ್ರವೇ ಪೂರ್ಣಗೊಳಿಸಬೇಕು ಎಂದರು. ಈ ವೇಳೆ ಅನುಮೋದಿತ ವರದಿಗಿಂತ ನೀರಿನ ಸಂಪರ್ಕವು ಹೆಚ್ಚಾಗಿರುವ ಬಗ್ಗೆ ಸಹಾಯಕ ಕಾರ್ಯಪಾಲಕ ಅಭಿಯಂತರರು ತಿಳಿಸಿದ್ದು, ಉಳಿತಾಯ ಹಣದಿಂದ ಭರಿಸುವಂತೆ ತಿಳಿಸಿದರು.
ಮಹಾತ್ಮ ಗಾಂಧಿ ನರೇಗಾ ಯೋಜನೆ ಕುರಿತು ಪರಿಶೀಲಿಸಿದ ಅವರು, ನಿಷ್ಕ್ರಿಯವಾಗಿರುವ ಜಾಬ್ ಕಾರ್ಡ್ ಗಳನ್ನು ಕ್ರಿಯಾಶೀಲವಾಗಿಸಲು ಕ್ರಮತೆಗೆದುಕೊಳ್ಳಬೇಕು. ಮಹಿಳಾ ಸಂಘಧ ಮಹಿಳೆಯರನ್ನು ಒಗ್ಗೂಡಿಸಿಕೊಂಡು ಅಭಿಯಾನಗಳ ಮೂಲಕ ಬೇಡಿಕೆ ಸಂಗ್ರಹಿಸಿ ಕೆಲಸ ನೀಡುವಂತೆ ಸೂಚಿಸಿದ ಅವರು, ಕೈಗೊಂಡಿರುವ ಕಾಮಗಾರಿಗಳನ್ನು ಶೀಘ್ರವೇ ಪೂರ್ಣಗೊಳಿಸುಂತೆ ಇದೇ ವೇಳೆ ತಿಳಿಸಿದರು.
ಬಳಿಕ ಮಾತನಾಡಿದ ಅವರು, ಗ್ರಾಮ ಪಂಚಾಯಿತಿಯಲ್ಲಿ ಆಸ್ತಿ ಸಮೀಕ್ಷೆ ಕುಂಠಿತಗೊಂಡಿದ್ದು, ಇದರಿಂದ ತೆರಿಗೆ ಸಂಗ್ರಹಿಸುದು ಕಷ್ಟವಾಗುತ್ತದೆ. ಆದ್ದರಿಂದ ಶೀಘ್ರವೇ ಆಸ್ತಿ ಸಮೀಕ್ಷೆ ಪೂರ್ಣಗೊಳಿಸುವಂತೆ ತಿಳಿಸಿದರು. ಸಕಾಲದಲ್ಲಿ ಯಾವುದೇ ಅರ್ಜಿಗಳನ್ನು ಬಾಕಿ ಉಳಿಸಿಕೊಳ್ಳದಂತೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಸೂಚಿಸಿದರು.
ಅಲ್ಲದೆ, ಯಾವುದೇ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸದಂತೆ ಕ್ರಮವಹಿಸಬೇಕು, ಎಲ್ಲಾ ಚರಂಡಿ, ನೀರಿನ ಟ್ಯಾಂಕ್ ಗಳು, ದನಗಳು ಕುಡಿಯುವ ನೀರಿನ ತೊಟ್ಟಿಯಲ್ಲಿ ಕಾಲ ಕಾಲಕ್ಕೆ ಸ್ವಚ್ಛಗೊಳಿಸುತ್ತಿರುವ ಬಗ್ಗೆ ಖಾತರಿ ಪಡಿಸಿಕೊಂಡರು.
ಕೂಸಿನ ಮನೆಗೆ ಮೆಚ್ಚುಗೆ:
ಸಭೆ ಬಳಿಕ ಪಂಚಾಯಿತಿ ಎದುಗಿರಿನ ಕೂಸಿನ ಮನೆಗೆ ಭೇಟಿ ನೀಡಿದ ಅವರು, ಕೂಸಿನ ಮನೆಯ ಅತ್ಯಾಕರ್ಷಕ ಪೇಯಿಟಿಂಗ್, ಚಾರ್ಟ್ಗಳ ಪ್ರದರ್ಶನ ಹಾಗೂ ಕಟ್ಟಡವು ವಿಶಾಲ ಹಾಗೂ ಸುಸಜ್ಜಿತವಾಗಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು ಬಳಿಕ ದಾಖಲಾತಿ ಪುಸ್ತಕಗಳನ್ನು ಪರಿಶೀಲಿಸಿ, ಜಿಲ್ಲಾ ಪಂಚಾಯಿತಿ ಸಮಿತಿಯಿಂದ ಸಿದ್ದಪಡಿಸಿರುವ ಆಹಾರದ ಮೆನುವಿನಲ್ಲಿ ಬದಲಾವಣೆ ಬೇಕಿದಲ್ಲಿ ತಿಳಿಸುವಂತೆ ಕೇರ್ ಟೇಕರ್ಸ್ ಗಳಿಗೆ ತಿಳಿಸಿದರು.
ಬಳಿಕ ನರೇಗಾ ಯೋಜನೆಯಡಿ ಬಾಳೆ ಬೆಳೆದಿದ್ದ ಫಲಾನುಭವಿ ಮಹೇಶ್ ಎಂಬುವವರು ಬಾಳೆ ತೋಟಕ್ಕೆ ಭೇಟಿ ನೀಡಿದ ಅವರು, ಉದ್ಯೋಗ ಖಾತರಿ ಯೋಜನೆ ಅಡಿ ವೈಯಕ್ತಿಕ ಕಾಮಗಾರಿಗಳಿಗೆ ಇದ್ದ 2.5 ಲಕ್ಷ ಮಿತಿಯನ್ನು 5 ಲಕ್ಷ ರೂ.ಗೆ ಹೆಚ್ಚಿಸಲಾಗಿದೆ, ಹಾಗಾಗಿ ಇನ್ನಷ್ಟು ವೈಯಕ್ತಿಕ ಕಾಮಗಾರಿಗಳನ್ನು ಕೈಗೊಂಡು ಆರ್ಥಿಕವಾಗಿ ಸದೃಢಗೊಳ್ಳುವಂತೆ ಫಲಾನುಭವಿಗೆ ಸೂಚಿಸಿದರು.
ಸಮುದಾಯ ಆರೋಗ್ಯ ಕೇಂದ್ರಕ್ಕೆ ಭೇಟಿ:
ಹದಿನಾರು ಗ್ರಾಮದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಎಲ್ಲಾ ಕೊಠಡಿ, ಕಾರ್ಯವೈಖರಿ ಹಾಗೂ ದಾಖಲಾತಿ ನಿರ್ವಹಣೆ ಪುಸ್ತಕಗಳನ್ನು ಕುಲಂಕಷವಾಗಿ ಪರಿಶೀಲಿಸಿದರು. ಅಲ್ಲದೆ ಆಸ್ಪತ್ರೆಯಲ್ಲಿದ್ದ ರೋಗಿಗಳೊಂದಿಗೆ ಖುದ್ದು ಮಾತನಾಡಿ, ಆಸ್ಪತ್ರೆಯ ವಾತವಾರಣ, ಸಿಬ್ಬಂದಿಯ ಕಾರ್ಯವೈಖರಿ, ಇಲ್ಲಿನ ಸೇವೆ ಕುರಿತು ಮಾಹಿತಿ ಸಂಗ್ರಹಿಸಿದರು.
ಈ ವೇಳೆ, ನರೇಗಾ ಸಹಾಯಕ ನಿರ್ದೇಶಕರಾದ ಶಿವಕುಮಾರ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಲಮಲ್ಯ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರರು, ಪಂಚಾಯತ್ ರಾಜ್ ಸಹಾಯಕ ನಿರ್ದೇಶಕರಾದ ವಿವೇಕ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪ್ರದೀಪ್ ಕುಮಾರ್, ಕಾರ್ಯದರ್ಶಿ ಸೇರಿದಂತೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.
ನಂಜನಗೂಡು ಮಹದೇವಸ್ವಾಮಿ ಪಟೇಲ್.
Mysore
ಸಿಡಿಮದ್ದು ಸಿಡಿದು ಹಸುವಿನ ಬಾಯಿ ಛಿದ್ರ

ನಂಜನಗೂಡು: ಹಂದಿಗಳ ಬೇಟೆಗೆ ಹಾಕಿದ್ದ ಸಿಡಿಮದ್ದು ಸಿಡಿದು ಹಸುವಿನ ಬಾಯಿ ಛಿದ್ರ ಛಿದ್ರವಾಗಿರುವ ಮನಕಲಕುವ ಘಟನೆ ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನ ಅಡಕನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಕೆಂಪಿಸಿದ್ದನಹುಂಡಿ ಗ್ರಾಮದ ರೈತ ಚನ್ನನಂಜೇಗೌಡ ಎಂಬುವರಿಗೆ ಸೇರಿದ ಹಸು ಇದಾಗಿದ್ದು, ಕೈಗಾರಿಕಾ ಪ್ರದೇಶದ ವ್ಯಾಪ್ತಿಯ ಜಮೀನಿನಲ್ಲಿ ಮೇವು ಮೇಯುತ್ತಿರುವಾಗ ಘಟನೆ ಸಂಭವಿಸಿದೆ. ಕಾಡು ಹಂದಿಗಳನ್ನು ಬೇಡೆಯಾಡಲು ಕಿಡಿಗೇಡಿಗಳು ಸಿಡಿಮದ್ದನ್ನು ಅಳವಡಿಸಿದ್ದಾರೆ ಎಂಬುದನ್ನು ತಿಳಿಯದೇ ರೈತ ಚನ್ನನಂಜೇಗೌಡ ಅವರು ಗ್ರಾಮದ ವಾಟರ್ ಟ್ಯಾಂಕ್‌ನ ಬಳಿ ಜಾನುವಾರುಗಳು ಮೇವು ಮೇಯಲು ಬಿಟ್ಟಿದ್ದಾರೆ. ಈ ವೇಳೆ ಸಿಡಿಮದ್ದು ಹಠಾತ್ತನೇ ಸಿಡಿದ ಪರಿಣಾಮ ಹಸುವಿನ ಬಾಯಿ ಛಿದ್ರ ಛಿದ್ರವಾಗಿದೆ. ಹಸು ಈಗ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದು, ರೈತ ಚನ್ನನಂಜೇಗೌಡ ಕಂಗಾಲಾಗಿದ್ದಾರೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ನಂಜನಗೂಡು ಗ್ರಾಮಾಂತರ ಠಾಣೆ ಪೊಲೀಸರು, ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಘಟನೆ ನಡೆಯುತ್ತಿದ್ದಂತೆ ರೊಚ್ಚಿಗೆದ್ದ ಗ್ರಾಮಸ್ಥರು, ಗಂಭೀರ ಗಾಯಗೊಂಡಿರುವ ಹಸುವಿಗೆ ಸೂಕ್ತ ಪರಿಹಾರ ನೀಡಬೇಕು. ಸಿಡಿಮದ್ದನ್ನು ಅಳವಡಿಸಿದ್ದ ಕಿಡಿಗೇಡಿಗಳನ್ನು ಹಿಡಿದು ಕಠಿಣ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.
Mysore
ಎಚ್‌ಸಿಎಂ ಮನೆಗೆ ದಸಂಸ ಮುಖಂಡರಿಂದ ಮುತ್ತಿಗೆ ಯತ್ನ

ಮೈಸೂರು: ಸಚಿವ ಡಾ. ಹೆಚ್ ಸಿ ಮಹದೇವಪ್ಪ ನಿವಾಸಕ್ಕೆ ದಲಿತ ಸಂಘರ್ಷ ಸಮಿತಿ ಮುಖಂಡರಿಂದ ಮುತ್ತಿಗೆ ಹಾಕಲು ಯತ್ನಿಸಿದ್ದಾರೆ.
ಮೈಸೂರಿನಲ್ಲಿ ಡಾ ಬಿ ಆರ್ ಅಂಬೇಡ್ಕರ್ ಭವನ ಕಾಮಗಾರಿ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ, ರೊಚ್ಚಿಗೆದ್ದ ದಸಂಸ ಕಾರ್ಯಕರ್ತರು ರಾಜ್ಯ ಸರ್ಕಾರರವನ್ನು ಎಷ್ಟೇ ಮನವಿ ಮಾಡಿದರೂ ಅಂಬೇಡ್ಕರ್ ಭವನ ಕಾಮಗಾರಿ ಪೂರ್ಣಗೊಳಿಸಿಲ್ಲ ಎಂದು ಬೇಸತ್ತು ಸಚಿವ ಮಹದೇವಪ್ಪ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ್ದಾರೆ.
ಮೈಸೂರಿನ ವಿಜಯನಗರ 2ನೇ ಹಂತದಲ್ಲಿರುವ ಸಚಿವ ಮಹದೇವಪ್ಪ ನಿವಾಸಕ್ಕೆ ಕೂಡಲೇ ಆಗಮಿಸಿದ ಪೊಲೀಸರು ಪ್ರತಿಭಟನಾಕಾರರನ್ನು ತಡೆದಿದ್ದಾರೆ.
ದಲಿತ ಸಂಘರ್ಷ ಸಮಿತಿ ಮುಖಂಡರಾದ ಚೋರನಹಳ್ಳಿ ಶಿವಣ್ಣ, ಬೆಟ್ಟಯ್ಯ ಕೋಟೆ ನೇತೃತ್ವದಲ್ಲಿ ಸುಮಾರು 50ಕ್ಕೂ ಹೆಚ್ಚು ಮಂದಿ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಮುತ್ತಿಗೆಗೆ ಯತ್ನಿಸಿದ್ದು ಎಲ್ಲರನ್ನು ಪೊಲೀಸರು ಬಂಧಿಸಿದ್ದಾರೆ.
Mysore
ಮೈಸೂರು ರಫ್ತು ಕೇಂದ್ರ ಕಟ್ಟಡ ನಿರ್ಮಾಣ ಕಾಮಗಾರಿ ಪುನಾರಂಭಿಸಲು ಕೆ.ಐ.ಎ.ಡಿ.ಬಿ.ಗೆ ಆದೇಶಿಸಲು ವಿನಂತಿ

ಮೈಸೂರು: ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸೋಮವಾರ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಅವರನ್ನು ಮೈಸೂರು ಕೈಗಾರಿಕೆಗಳ ಸಂಘದ ಪ್ರಧಾನ ಕಾರ್ಯದರ್ಶಿ ಸುರೇಶ್ ಕುಮಾರ್ ಜೈನ್,ಸದಸ್ಯರಾದ ಗೌತಮ್ ಸಾಲೇಚ ಮತ್ತು ರಿತೇಶ್ ಗೌಡ ಭೇಟಿ ಮಾಡಿ ಮೈಸೂರು ರಫ್ತು ಕೇಂದ್ರ ಕಟ್ಟಡ ನಿರ್ಮಾಣ ಕಾಮಗಾರಿ ಬೇಸ್ ಮೆಂಟ್ನಲ್ಲಿ ನಿಲ್ಲಿಸಿದ್ದು ಪುನಾರಂಭಿಸಲು ಕೆ.ಐ.ಎ.ಡಿ.ಬಿ.ಗೆ ಆದೇಶಿಸಲು ವಿನಂತಿಸಿದರು .
ಕಾಮಗಾರಿ 2019 ರಲ್ಲಿ ಆದೇಶ ಪಡೆದ ಗುತ್ತಿಗೆದಾರರು 2021 ರಲ್ಲಿ ಬೇಸ್ ಮೆಂಟ್ ವರೆಗೆ ಮಾತ್ರ ಮಾಡಿ ನಿಲ್ಲಿಸಿದ್ದಾರೆ. ಕಳೆದ ಮೂರು ವರ್ಷಗಳಿಂದ ಕಟ್ಟಡ ಮಳೆಗೆ ಶಿಥಿಲವಾಗುತ್ತಿದೆ. ಕೇಂದ್ರ ಸರ್ಕಾರದ 3 ಕೋಟಿ ರೂಪಾಯಿ
ರಾಜ್ಯ ಸರ್ಕಾರದ 1 ಕೋಟಿ ರೂಪಾಯಿ ಮೈಸೂರು ಕೈಗಾರಿಕೆಗಳ ಸಂಘದ 50 ಲಕ್ಷ ರೂಪಾಯಿ ಕೆ.ಐ.ಎ.ಡಿ.ಬಿ.ಗೆ ವಿ.ಐ.ಪಿ.ಸಿ ಮೂಲಕ ನೀಡಿ 20020 ರಲ್ಲಿ ಕಟ್ಟಡ ಪೂರ್ಣ ಗೊಳಿಸುವ ಭರವಸೆ ಹುಸಿಯಾಗಿದೆ.
ಕೂಡಲೇ ಕಾಮಗಾರಿ ಪುನಾರಂಬಿಸುವಂತೆ ಕೆ.ಐ.ಎ.ಡಿ.ಬಿ ಮುಖ್ಯ ಕಾರ್ಯ ನಿರ್ವಾಹಕ ಮಹೇಶ್ ಅವರಿಗೆ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಅವರು ದೂರವಾಣಿಯಲ್ಲಿ ಸೂಚಿಸಿದರು.
ಜಿತೋ ಸಂಸ್ಥೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿಸ್ಟಾರ್ ಏರ್ ಲೈನ್ಸ್ ಮಾಲೀಕ ಶ್ರೀ ಸಂಜಯ್ ಗೋದಾವತ್ ಮೈಸೂರಿನಲ್ಲಿ ಅವರ ವಿಮಾನ ಸೇವೆಯನ್ನು ಮೈಸೂರು ವಿಮಾನ ನಿಲ್ದಾಣದ ರನ್ ವೇ ವಿಸ್ತರಣೆ ಪೂರ್ಣಗೊಂಡ ಬಳಿಕ ಒದಗಿಸಲಾಗುವುದು ಎಂದು ತಿಳಿಸಿದ ವಿಷಯವನ್ನು ಮುಖ್ಯ ಕಾರ್ಯದರ್ಶಿಗಳ ಗಮನಕ್ಕೆ ತರಲಾಇತು.
ಇದಕ್ಕೆ ಪ್ರಕ್ರಿಯಿಸಿದ ಮುಖ್ಯ ಕಾರ್ಯದರ್ಶಿಗಳು ವಿಮಾನಗಳ ಸದ್ಭಳಕೆ ದಿಕ್ಕಿನಲ್ಲಿ ಮೈಸೂರು ಕೈಗಾರಿಕೆಗಳ ಸಂಘ ಸೂಕ್ತ ಪ್ರಚಾರ ಮಾಡಬೇಕೆಂದರು.
-
Mandya8 hours ago
ಜನಮಿತ್ರ ಫಲಶೃತಿ: ಹೆಬ್ಬಾಡಿಹುಂಡಿ ಗ್ರಾಮದ ಸ್ಮಶಾನ ಜಾಗದ ರಸ್ತೆ ಬೇಲಿಗೆ ಸಿಗ್ತು ಉತ್ತರ
-
Hassan15 hours ago
ಹಾಸನದಲ್ಲಿ ಭಾರೀ ಮಳೆ: ಅಪಾರ ಪ್ರಮಾಣದ ಬೆಳೆ ಹಾನಿ
-
Mandya11 hours ago
ಜೆಎಸ್ಎಸ್ ಕಾಲೇಜಿನಲ್ಲಿ ಪತ್ರಿಕಾ ಬರಹ ಕುರಿತು ಕಾರ್ಯಾಗಾರ
-
Kodagu12 hours ago
ರಸ್ತೆಯ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ
-
Kodagu8 hours ago
ಮಡಿಕೇರಿಯಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಪ್ಲೈಬಸ್ ಸಂಚಾರ
-
Mandya10 hours ago
ವ್ಯಕ್ತಿಯ ಬಗ್ಗೆ ಮಾಹಿತಿ ಸಿಕ್ಕರೆ ಕೂಡಲೇ ತಿಳಿಸಿ
-
Kodagu11 hours ago
ನಿವೃತ್ತ ಶಿಕ್ಷಕಿಯಿಂದ ಕಕ್ಕಬ್ಬೆ ಯುವಕಪಾಡಿ ಸರಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಚಾರಣ ಭಾಗ್ಯ
-
Hassan14 hours ago
ಕ್ಷಯ ಮುಕ್ತ ಭಾರತವನ್ನಾಗಿ ಮಾಡಲು ಎಲ್ಲಾರೂ ಕೈಜೋಡಿಸಿ: ಡಿಸಿ ಸಿ. ಸತ್ಯಭಾಮ