Connect with us

Chikmagalur

ಚಾರ್ಮಾಡಿ ಘಾಟಿಯ ರಸ್ತೆಯಲ್ಲಿ ಕಾಡಾನೆ

Published

on

ಚಿಕ್ಕಮಗಳೂರು : ದಕ್ಷಿಣ ಕನ್ನಡ ಹಾಗೂ ಚಿಕ್ಕಮಗಳೂರಿಗೆ ಗಡಿ ಭಾಗವಾಗಿರುವ ಚಾರ್ಮಾಡಿ ಘಾಟಿಯ ರಸ್ತೆಯಲ್ಲಿ ಕಾಡಾನೆ ಮತ್ತೆ ಮತ್ತೆ ಕಾಣಿಸಿಕೊಳ್ಳುತ್ತಿದೆ. ನಿನ್ನೆ ರಾತ್ರಿ ಘಾಟಿಯ ರಸ್ತೆಯಲ್ಲಿ ಕಾಣಿಸಿಕೊಂಡ ಕಾಡಾನೆ, ಮತ್ತೆ ಬೆಳ್ಳಂಬೆಳಗ್ಗೆ ಸೊಂಡಿಲಿನಲ್ಲಿ ಮರದ ದಿಂಬಿ ಹಿಡಿದು ರಸ್ತೆಗೆ ಅಡ್ಡಲಾಗಿ ನಿಂತಿದೆ.

ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟಿಯಲ್ಲಿ ಕಾಡಾನೆ ಓಡಾಟ ಮಿತಿಮೀರಿದೆ. ಪ್ರತಿ ರಾತ್ರಿ ಎಂಬಂತೆ ಒಂದೊಂದು ತಿರುವಿನಲ್ಲಿ ಒಂಟಿ ಸಲಗ ಪ್ರತ್ಯಕ್ಷವಾಗುತ್ತಿದೆ. ನಿನ್ನೆ ರಾತ್ರಿ ಇದ್ದಕ್ಕಿದ್ದಂತೆ ರಸ್ತೆಯ ಮಧ್ಯೆದಲ್ಲಿ ಒಂಟಿ ಸಲಗ ಸೊಂಡಿಲಿನಲ್ಲಿ ಮರದ ದಿಂಬಿ ಹಿಡಿದು ನಿಂತಿದ್ದನು. ಗಜರಾಜನ ಈ ಅವತಾರ ಕಂಡು ಜನರು ವಾಹನಗಳನ್ನು ಸೈಡ್ ಅಲ್ಲಿ ಪಾರ್ಕ್ ಮಾಡಿ, ಮೊಬೈಲ್ ನಲ್ಲಿ ಆನೆಯ ಆರ್ಭಟವನ್ನು ಸೆರೆ ಹಿಡಿದಿದ್ದಾರೆ. ರಸ್ತೆ ಮಧ್ಯೆದಲ್ಲಿ ಒಂಟಿ ಸಲಗ ನಿಂತಿದ್ದರಿಂದ ಚಾರ್ಮಾಡಿ ಘಾಟ್ ನಲ್ಲಿ ಟ್ರಾಫಿಕ್ ಜಾಮ್ ಉಂಟಾಗಿ, ನೂರಾರು ವಾಹನಗಳು ಸಾಲುಗಟ್ಟಿ ನಿಂತಿದ್ದವು. ಇನ್ನು ಈ ಒಂಟಿ ಸಲಗ ಹಗಲು-ರಾತ್ರಿ ಎನ್ನದೆ ಉಪಟಳ ನೀಡುತ್ತಿದೆ. ಆದರೂ ಕೂಡ ಅರಣ್ಯ ಇಲಾಖೆಯ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ.

ಚಾರ್ಮಾಡಿ ಘಾಟಿ ರಸ್ತೆಯಿಂದ ಹಲವು ತೀರ್ಥಕ್ಷೇತ್ರಗಳಿಗೆ ಬರುವವರ ವಾಹನಗಳ ಸಂಖ್ಯೆ ಹೆಚ್ಚು ಇದೆ. ಈಗ ಶಾಲೆಗಳಿಗೆ ರಜೆಯೂ ಇರುವುದರಿಂದ ವಾಹನಗಳು ಇನ್ನಷ್ಟು ಹೆಚ್ಚಿವೆ. ರಸ್ತೆಯಲ್ಲಿ ಆನೆ ಓಡಾಟದಿಂದ ಪದೇಪದೇ ಟ್ರಾಫಿಕ್ ಜಾಮ್ ಆಗುತ್ತಿದೆ. ಆದರೆ ಅರಣ್ಯ ಇಲಾಖೆ ಅಧಿಕಾರಿಗಳು ತಲೆಕೆಡಿಸಿಕೊಳ್ಳುತ್ತಿಲ್ಲ. ಸಲಗ ವಾಹನಗಳ ಮೇಲೆ ಎರಗುವುದಕ್ಕೆ ಮೊದಲು ಎಚ್ಚೆತ್ತುಕೊಳ್ಳಬೇಕಿದೆ ಎಂದು ಸ್ಥಳೀಯರು ದೂರಿದ್ದಾರೆ.

Continue Reading
Click to comment

Leave a Reply

Your email address will not be published. Required fields are marked *

Chikmagalur

ಬದುಕಿದ್ದಾಗಲೇ ಅಧಿಕಾರಿಗಳಿಗೆ ತನ್ನ ತಿಥಿಗೆ ಆಹ್ವಾನ ನೀಡಿದ ಗಂಧದ ಬೆಳೆಗಾರ

Published

on

ಚಿಕ್ಕಮಗಳೂರು :  ತರೀಕೆರೆ ತಾಲೂಕಿನ ಗಂಧದ ಬೆಳೆಗಾರ ವಿಶುಕುಮಾರ್ ರಿಂದ ಅಧಿಕಾರಿಗಳಿಗೆ ಆಹ್ವಾನ ಮಾಡಿದರು.ವಾರದ ಹಿಂದೆ ದಯಾಮರಣಕ್ಕೆ ಮನವಿ ಮಾಡಿದ್ದ ಬೆಳೆಗಾರ  ಬದುಕಿದ್ದಾಗಲೇ ಅಧಿಕಾರಿಗಳಿಗೆ ತನ್ನ ತಿಥಿಗೆ ಆಹ್ವಾನ ನೀಡಿದ ಗಂಧದ ಬೆಳೆಗಾರ.

ನಾಳೆ ಬೆಳಗ್ಗೆ 10ಕ್ಕೆ ಸಂತಾಪ ಸಭೆ, ಮಧ್ಯಾಹ್ನ 1 ಗಂಟೆಗೆ ಊಟಕ್ಕೆ ಕರೆದ ಬೆಳೆಗಾರ,ಸಿಸಿಎಫ್ ರನ್ನ ಭೇಟಿ ಮಾಡಿಸಿ, ಇಲ್ಲ ಶಿವಮೊಗ್ಗ ಸಿಸಿಎಫ್ ಕಚೇರಿ ಬಳಿ ಕಾರಿನಲ್ಲೇ ಆತ್ಮಹತ್ಯೆ ಬೆದರಿಕೆ.

ಸಂತಾಪ ಸಭೆಯಲ್ಲಿ ಭಾಗವಹಿಸುವವರು ಎನ್.ಎಚ್.ಎ.ಐ.ನ ಅಧಿಕಾರಿಗಳು, ಅರಣ್ಯ ಇಲಾಖೆಯ ಭಷ್ಟ ಅಧಿಕಾರಿಗಳು, ಪೊಲೀಸ್ ಇಲಾಖೆಯ ಒಳ್ಳೆಯ ಅಧಿಕಾರಿಗಳು, ವಿಶೇಷ ಭೂಸ್ವಾದೀನ ಅಧಿಕಾರಿಗಳು, ಅಧಿಕಾರಿಗಳ ಕಣ್ಣಾಮುಚ್ಚಾಲೆ ಆಟಕ್ಕೆ ಬೇಸತ್ತು ವಿಭಿನ್ನ ರೀತಿ ಆಕ್ರೋಶ.

ಗಂಧದ ಬೆಳೆಗೆ ಸೂಕ್ತ ಪರಿಹಾರ ನೀಡದ ಅಧಿಕಾರಿಗಳ ವಿರುದ್ಧ ಬೆಳೆಗಾರನ ಆಕ್ರೋಶ. ರಾಷ್ಟ್ರೀಯ ಹೆದ್ದಾರಿಗೆ ಇವರ ಜಮೀನು, ಗಂಧದ ಮರಗಳು ಹೋಗುತ್ತಿವೆ. ಸೂಕ್ತ ಪರಿಹಾರ ನೀಡದಿದ್ದಕ್ಕೆ ಸರ್ಕಾರ ಹಾಗೂ ಅಧಿಕಾರಿಗಳ ವಿರುದ್ಧ ಆಕ್ರೋಶ.

ಒಂದು ಗಂಧದ ಮರಕ್ಕೆ 420 ರೂ ನಿಗದಿ ಮಾಡಿರುವ ಅರಣ್ಯಾಧಿಕಾರಿಗಳು, 1 ಮಾವಿನ ಮರಕ್ಕೆ 63 ಸಾವಿರ, ತೆಂಗಿಗೆ 37 ಸಾವಿರ, ಬೇವಿಗೆ 2200, ನಿಂಬೆ ಗಿಡಕ್ಕೆ 3400 ರೂ , ಒಂದು ಶ್ರೀಗಂಧದ ಮರಕ್ಕೆ ಕೇವಲ 420 ರೂ ನಿಗದಿ ಮಾಡಿರುವ ಅಧಿಕಾರಿಗಳು ಕೋರ್ಟ್ 25 ಸಾವಿರ ನಿಗಧಿ ಮಾಡಿ ವೈಜ್ಞಾನಿಕ ದರ ನೀಡುವಂತೆ ಸೂಚಿಸಿದ್ದರು ಮಾಡದ ಆರೋಪ , ಬೆಳೆಗಾರ ಅಧಿಕಾರಿಗಳ ನಡೆಗೆ ಬೇಸತ್ತು ವಿಭಿನ್ನ ಶೈಲಿಯಲ್ಲಿ ಅಸಮಾಧಾನ ಹೊರಹಾಕಿದ್ದಾರೆ.

Continue Reading

Chikmagalur

ಜಿಲ್ಲೆಯ ಇತಿಹಾಸದಲ್ಲೇ ಅತ್ಯಂತ ಅಪರೂಪದ ಘಟನೆ: ಏಕಕಾಲಕ್ಕೆ ಆರು ಮರಿಗಳಿಗೆ ಜನ್ಮ ನೀಡಿದ ಕುರಿ

Published

on

ಚಿಕ್ಕಮಗಳೂರು : ಜಿಲ್ಲೆಯ ಇತಿಹಾಸದಲ್ಲೇ ಅತ್ಯಂತ ಅಪರೂಪದ ಘಟನೆಯೊಂದು ನಡೆದಿದ್ದು, ದೇವರಿಗೆ ಬಲಿ ಕೊಡಲು ತಂದಿದ್ದ ಕುರಿಯೊಂದು ಏಕಕಾಲಕ್ಕೆ ಆರು ಮರಿಗಳಿಗೆ ಜನ್ಮ ನೀಡುವ ಮೂಲಕ ರೈತನ ಪಾಲಿಗೆ ವರವಾಗಿ ಪರಿಣಮಿಸಿದೆ.

ಚಿಕ್ಕಮಗಳೂರು ನಗರದ ಹೊರವಲಯದ ಚಂದ್ರಕಟ್ಟೆ ನಿವಾಸಿ, ಯುವ ರೈತ ಸಂತೋಷ್ ಅವರು ಇತ್ತೀಚೆಗೆ ನಡೆದ ದೇವಸ್ಥಾನದ ಜಾತ್ರೆಯ ಸಂದರ್ಭದಲ್ಲಿ ದೇವರಿಗೆ ಬಲಿ ನೀಡಲು ಮಾರುಕಟ್ಟೆಯಿಂದ ಎರಡು ಕುರಿಗಳನ್ನು ತಂದಿದ್ದರು.

ಇದರಲ್ಲಿ ಒಂದು ಕುರಿಯನ್ನು ಜಾತ್ರೆಯ ದಿನದಂದು ಕಡಿಯಲಾಗಿತ್ತು. ಆದರೆ, ಮತ್ತೊಂದು ಕುರಿಯು ಗರ್ಭಿಣಿಯಾಗಿರಬಹುದು ಎಂಬ ಸಂಶಯದಿಂದ ಸಂತೋಷ್ ಅದನ್ನು ಕಡಿಯದೆ ಹಾಗೆಯೇ ಉಳಿಸಿಕೊಂಡಿದ್ದರು.

ಒಂದೇ ಬಾರಿಗೆ ಆರು ಮರಿಗಳ ಜನನ:

ರೈತನ ಈ ನಿರ್ಧಾರ ಇಂದು ದೊಡ್ಡ ಮಟ್ಟದ ಫಲ ನೀಡಿದೆ. ಇಂದು ಬೆಳಿಗ್ಗೆ ಆ ಕುರಿಯು ಬರೋಬ್ಬರಿ 6 ಮರಿಗಳಿಗೆ ಜನ್ಮ ನೀಡಿದ್ದು ಅದರಲ್ಲಿ 4 ಹೆಣ್ಣು ಹಾಗೂ 2 ಗಂಡು ಮರಿಗಳಿವೆ.. ಸಾಮಾನ್ಯವಾಗಿ ಕುರಿಗಳು ಒಂದೆರಡು ಮರಿ ಹಾಕುವುದನ್ನು ನೋಡಿದ್ದೇವೆ, ಆದರೆ ಏಕಕಾಲಕ್ಕೆ ಆರು ಮರಿಗಳನ್ನು ಹಾಕಿರುವುದು ಎಲ್ಲರ ಅಚ್ಚರಿಗೆ ಕಾರಣವಾಗಿದೆ.

ತಾಯಿ ಕುರಿ ಸೇರಿದಂತೆ ಎಲ್ಲಾ ಆರು ಮರಿಗಳು ಸಂಪೂರ್ಣವಾಗಿ ಆರೋಗ್ಯವಾಗಿವೆ ಎಂದು ತಿಳಿದುಬಂದಿದೆ.

ಈ ಅಪರೂಪದ ವಿದ್ಯಮಾನದ ವಿಷಯ ತಿಳಿಯುತ್ತಿದ್ದಂತೆಯೇ ಚಂದ್ರಕಟ್ಟೆ ಗ್ರಾಮದ ಸುತ್ತಮುತ್ತಲಿನ ಜನರು ಕುರಿ ಹಾಗೂ ಮರಿಗಳನ್ನು ನೋಡಲು ಸಂತೋಷ್ ಅವರ ಮನೆಯತ್ತ ಬರುತ್ತಿದ್ದಾರೆ.

Continue Reading

Chikmagalur

ಮನರೇಗಾ ಕಾಯ್ದೆ ಹೆಸರು ಬದಲಾವಣೆ ವಿರೋಧಿಸಿ ಪ್ರತಿಭಟನೆ

Published

on

ಚಿಕ್ಕಮಗಳೂರು: ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ ಯ ಹೆಸರು ಬದಲಾವಣೆ ವಿರೋಧಿಸಿ ನಗರದ ಗಾಂಧಿ ಪ್ರತಿಮೆ ಎದುರು ಶನಿವಾರ ಜಿಲ್ಲಾ ಕಾಂಗ್ರೆಸ್ ಕಾ ರ್ಯಕರ್ತರು ಉಪವಾಸ ಸತ್ಯಾಗ್ರಹ ನಡೆಸುವ ಮೂಲಕ ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯಲ್ಲಿ ಮಾಜಿ ಸಚಿವೆ ಮೋಟಮ್ಮ ಮಾತನಾಡಿ ಕೇಂದ್ರದ ಬಿಜೆಪಿ ಸರ್ಕಾರ ಒಳಸಂಚು ನಡೆ ಸಿ ಕಾಂಗ್ರೆಸ್ ಆಡಳಿತದ ಕಾಯ್ದೆಗೆ ಮರುನಾಮಕರಣ ಮಾಡುತ್ತಿದೆ. ಕಾಯ್ದೆ ಹೆಸರು ಬದಲಾವಣೆ ಸಂಬಂಧ ಕಾಂಗ್ರೆಸ್ ಪ್ರಶ್ನೆಗೆ ಬಿಜೆಪಿ ನಾಯಕರಲ್ಲಿ ಸಮರ್ಪಕವಾದ ಉತ್ತರವೇ ಇಲ್ಲದಂತಾಗಿದೆ ಎಂದು ದೂರಿದರು.


ಮನರೇಗಾ ಕಾಯ್ದೆ ಬಡವರ ಸ್ವಾಭಿಮಾನ ಹೆಚ್ಚಳ, ಕೆಲಸ ಇಲ್ಲದವರಿಗೆ ಉದ್ಯೋಗ ನೀಡಿ ಕೂಲಿ ಕಾ ರ್ಮಿಕರ ಆಶಾದಾಯಕವಾಗಿತ್ತು. ಬಿಜೆಪಿಯಿಂದಲೇ ದೇಶದ ಅಭಿವೃದ್ದಿ ಎಂದು ಸುಳ್ಳು ಮಾತುಗಳಿಂದ ಜನ ತೆಯ ದಿಕ್ಕನ್ನು ತಪ್ಪಿಸುವ ಕೆಲಸ ಭಾಜಪ ಮಾಡುತ್ತಿದೆ. ಈ ಬಗ್ಗೆ ಸರಿಯಾದ ಮಾಹಿತಿ ನೀಡಲು ಗ್ರಾಮೀಣ ಮಟ್ಟದಿಂದ ಜಾಗೃತಿ ಮೂಡಿಸಬೇಕು ಎಂದರು.

ಗಾಂಧಿಜೀ ತತ್ವವನ್ನು ಧಿಕ್ಕರಿಸಿ, ತಾತ್ಸರ ಮಾಡುವ ಬಿಜೆಪಿಗರು ಎಲ್ಲವು ತಿದ್ದುಪಡಿ ಮಾಡಲು ಹೊರಟಿ ದ್ದಾರೆ. ಇನ್ನೊಂದೆಡೆ ಪಂಚ ಗ್ಯಾರಂಟಿ ಯೋಜನೆ ಸರಿಯಲ್ಲವೆಂದು ಹೇಳಿಕೆ ನೀಡಿದೆ. ಆದರೆ ದೇಶದ ಬಹು ತೇಕ ರಾಜ್ಯಗಳಲ್ಲಿ ಕರ್ನಾಟಕ ಪಂಚ ಗ್ಯಾರಂಟಿ ಯೋಜನೆ ಬಳಸಿಕೊಂಡು, ಮೋಸದಿಂದ ಚುನಾವಣೆ ಗೆಲ್ಲುತ್ತಿದೆ ಎಂದು ಆರೋಪಿಸಿದರು.


ಎಐಸಿಸಿ ಕಾರ್ಯದರ್ಶಿ ಬಿ.ಎಂ.ಸಂದೀಪ್ ಮಾತನಾಡಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಕಾಲಘಟ್ಟದಲ್ಲಿ ಜಾರಿಗೊಂಡ ಮನರೇಗಾ ಕಾಯ್ದೆ ಗ್ರಾಮೀಣ ಜನರ ಸ್ವಾಭಿಮಾನಕ್ಕೆ ಧಕ್ಕೆಯಾಗದಂತೆ ರೂಪಿ ಸಿರುವ ಯೋಜನೆ. ಬಡವರು, ದೀನದಲಿತರು ಹಾಗೂ ಹಿಂದುಳಿದ ವರ್ಗಗಳಿಗೆ ಸ್ವಾಭಿಮಾನದ ಬದುಕ ನ್ನು ರೂಪಿಸಲು ಗಾಂಧೀಜಿ ಹೆಸರಿನಲ್ಲಿ ಸ್ಥಾಪಿಸಿದ್ದು ಇದನ್ನು ಬದಲಿಸಲು ಹೊರಟಿರುವುದು ಸರಿಯಲ್ಲ ಎಂದರು.

ಮನರೇಗಾ ಕಾಯ್ದೆಯಲ್ಲಿ ದೇಶದ ಸುಮಾರು ೩೮ ಕೋಟಿ ಜನಸಂಖ್ಯೆ ಅರ್ಜಿ ಕಾರ್ಡ್ ಹೊಂದಿದ್ದು ಕೋಟ್ಯಾಂತರ ಜನ ಈ ಕಾಯ್ದೆಯಿಂದ ಉದ್ಯೋಗ ಪಡೆದುಕೊಂಡಿದ್ದಾರೆ. ಹಳ್ಳಿ ಜನರ ಬದುಕಾಗಿದ್ಧ ಮನ ರೇಗ ಯೋಜನೆ ಬದಲಿಸುವ ಮೂಲಕ ಕೇಂದ್ರ ಸರ್ಕಾರ ಗ್ರಾಮೀಣರಿಗೆ ಇನ್ನಷ್ಟು ಸಂಕಷ್ಟಕ್ಕೆ ದೂಡುತ್ತಿದೆ ಎಂದು ಆರೋಪಿಸಿದರು.


ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ ಮಾತನಾಡಿ ಗ್ರಾಮೀಣ ಜನತೆಗೆ ಉದ್ಯೋಗ ಖಾತ್ರಿಪಡಿಸುವ ಉದ್ದೇಶದಿಂದ ತಂದಿದ್ದ ಮನರೇಗಾ ಕಾಯ್ದೆಯ ಬದಲಿಗೆ ಹೊಸ ಮಸೂದೆ ಜಾರಿಗೊಳಿಸಲು ಕೇಂದ್ರ ಬಿಜೆ ಪಿ ಸರ್ಕಾರ ಮುಂದಾಗಿದ್ದು ದುರಂತ. ಈ ಮಸೂದೆಯು ಮನರೇಗಾ ಕಾಯ್ದೆ ಮತ್ತು ಅದರಲ್ಲಿದ್ದ ಉದ್ಯೋ ಗದ ಶಾಸನಬದ್ಧ ಖಾತ್ರಿಯನ್ನು ತೆಗೆದು ಹಾಕುವುದು ಹಾಗೂ ಅದರ ಬದಲಿಗೆ ಗ್ರಾಮೀಣ ಬಡ ಕುಟುಂಬ ಗಳಿಗೆ ಉದ್ಯೋಗದ ಭರವಸೆ ಇಲ್ಲವಾಗಿಸುತ್ತದೆ ಎಂದರು.

ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ. ಕೆ.ಪಿ.ಅಂಶುಮಂತ್ ಮಾತನಾಡಿ ಕೇಂದ್ರ ಸರ್ಕಾರ ಸದಾ ಉಳ್ಳವರ ಪರ ವೇ ಕೆಲಸ ಮಾಡುತ್ತದೆ. ಈ ಹಾದಿಯಲ್ಲೇ ಇದೀಗ ಮನರೇಗಾ ಯೋಜನೆಯನ್ನು ಬದಲಿಸುತ್ತಿದೆ. ವಿಬಿ- ಜಿ ರಾಮ್ ಜಿ ಎಂದು ಹೆಸರು ಬದಲಿಸಿ ಅದರಲ್ಲಿ ಕೆಲವೊಂದು ಬದಲಾವಣೆಗಳನ್ನು ತಂದಿದೆ. ಈ ಬದಲಾವಣೆಗಳು ಮನರೇಗಾ ಕೂಲಿಕಾರರ ಹೊಟ್ಟೆ ಮೇಲೆ ಬರೆ ಎಳೆದಂತಿದೆ ಎಂದು ಹೇಳಿದರು.


ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಂ.ಸಿ.ಶಿವಾನಂದಸ್ವಾಮಿ ಮಾತನಾಡಿ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿದ್ದ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯನ್ನು ಕೈಬಿಟ್ಟು ಹೊಸ ಕಾಯ್ದೆ ಜಾರಿಗೊಳಿಸಿರು ವುದು ಸರಿಯಲ್ಲ. ಶ್ರೀಮಂತರಿಗೆ ಅನುಕೂಲವಾಗುವಂಥ ನೀತಿಗಳನ್ನು ಕೇಂದ್ರ ಸರ್ಕಾರ ಜಾರಿಗೆ ತರುತ್ತಿ ರುವುದು ಕಾರ್ಮಿಕರು, ಕೃಷಿ ಕಾರ್ಮಿಕರು ಹಾಗೂ ರೈತರ ಜೀವನಕ್ಕೆ ಮಾರಕವಾಗುತ್ತಿದೆ ಎಂದರು.

ಪ್ರತಿಭಟನೆಯಲ್ಲಿ ಶಾಸಕರಾದ ಹೆಚ್.ಡಿ.ತಮ್ಮಯ್ಯ, ಜಿ.ಹೆಚ್.ಶ್ರೀನಿವಾಸ್, ಕೆಪಿಸಿಸಿ ವಕ್ತಾರ ಹೆಚ್.ಹೆಚ್. ದೇವರಾಜ್, ಕಾರ್ಯದರ್ಶಿ ಡಾ.ಡಿ.ಎಲ್.ವಿಜಯ್ ಕುಮಾರ್, ರೇಖಾಹುಲಿಯಪ್ಪಗೌಡ, ಸಿಡಿಎ ಅಧ್ಯಕ್ಷ ಹೆಚ್.ಪಿ.ಮಂಜೇಗೌಡ, ತಾಲ್ಲೂಕು ಗ್ಯಾರಂಟಿ ಅಧ್ಯಕ್ಷ ಎಂ.ಮಲ್ಲೇಶ್, ನಗರಸಭೆ ನಾಮಿನಿ ಸದಸ್ಯರಾದ ಕೀರ್ತಿಶೇಟ್, ಪ್ರಕಾಶ್ ರೈ, ಜಿ.ಪಂ. ಮಾಜಿ ಸದಸ್ಯ ಕೆ.ವಿ. ಮಂಜುನಾಥ್, ಮುಖಂಡರುಗಳಾದ ತನೋಜ್ ನಾಯ್ಡು, ಹಿರೇಮಗಳೂರು ರಾಮಚಂದ್ರ, ಲಕ್ಷ್ಮಣ್, ಲಾಕೇಶ್ ಮತ್ತಿತರರು ಹಾಜರಿದ್ದರು.

Continue Reading

Trending

error: Content is protected !!