Connect with us

Health

ಮೀಸಲ್ಸ್- ರುಬೆಲ್ಲಾ ಲಸಿಕೆಯಿಂದ ಮಕ್ಕಳು ವಂಚಿತರಾಗದಂತೆ ನೋಡಿಕೊಳ್ಳಿ

Published

on

ಮಂಡ್ಯ : ದಢಾರ ರೋಗವು ಸಾಂಕ್ರಾಮಿಕ ರೋಗವಾಗಿದ್ದು, ಇದು ಒಬ್ಬರಿಂದ ಮತ್ತೊಬ್ಬರಿಗೆ ಬಹುಬೇಗ ಹರಡುತ್ತದೆ. ಜಿಲ್ಲೆಯಲ್ಲಿ ಮಕ್ಕಳು ಮೀಸಲ್ಸ್- ರುಬೆಲ್ಲಾ ಲಸಿಕೆಯಿಂದ ವಂಚಿತರಾಗದಂತೆ ಎಚ್ಚರಿಕೆ ವಹಿಸಿ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಅವರು ಅಧಿಕಾರಿಗಳಿಗೆ ಸೂಚಿಸಿದರು‌

ಅವರು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಸಾರ್ವತ್ರಿಕ ಲಸಿಕಾ ಕಾರ್ಯಕ್ರಮ ಮತ್ತು ದಢಾರ ರುಬೆಲ್ಲಾ ನಿರ್ಮೂಲನೆ ಕಾರ್ಯಕ್ರಮ ಕುರಿತು ಜಿಲ್ಲಾ ಮಟ್ಟದ ಕಾರ್ಯಪಡೆ ಸಮಿತಿ ಸಭೆ ನಡೆಸಿ ಮಾತನಾಡಿದರು.

ಮಧ್ಯಮ ಅಥವಾ ತೀವ್ರ ಅಪೌಷ್ಠಿಕತೆ ಹೊಂದಿರುವ ಮಕ್ಕಳಲ್ಲಿ ರೋಗದ ಹರಡುವಿಕೆ ಹೆಚ್ಚು. ದಢಾರ-ರುಬೆಲ್ಲಾ ಖಾಯಿಲೆಯಿಂದ ರಕ್ಷಿಸಲು ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದಡಿ ಮಕ್ಕಳಿಗೆ 9 ರಿಂದ 11 ತಿಂಗಳುಗಳಲ್ಲಿ ಮೊದಲನೇ ವರಸೆ ಲಸಿಕೆಯನ್ನು ಮತ್ತು 16 ರಿಂದ 24 ತಿಂಗಳಲ್ಲಿ ಎರಡನೇ ವರಸೆ ದಢಾರ-ರುಬೆಲ್ಲಾ ಲಸಿಕೆ ಯನ್ನು ನೀಡಲಾಗುವುದು ಎಂದರು.

ಮಂಡ್ಯ ಜಿಲ್ಲೆಯಲ್ಲಿ ಏಪ್ರಿಲ್ 2024 ರಿಂದ ಅಕ್ಟೋಬರ್ 2024 ರವರೆಗೆ ಮೀಸಲ್ಸ್- ರುಬೆಲ್ಲಾ ಮೊದಲನೇ ವರಸೆ ಲಸಿಕೆ ಪಡೆಯಲು 12361 ಗುರಿ ನಿಗಧಿಯಾಗಿದ್ದು 11885 ಮಕ್ಕಳಿಗೆ ಲಸಿಕೆ ನೀಡಿ ಶೇ 96.1 % ಗುರಿ ಸಾಧಿಸಲಾಗಿದೆ. ಎರಡನೇ ವರಸೆಯಲ್ಲಿ 12361 ಗುರಿ ನಿಗಧಿಯಾಗಿದ್ದು 11759 ಮಕ್ಕಳಿಗೆ ಲಸಿಕೆ ನೀಡಿ 95.1% ಗುರಿ ಸಾಧಿಸಲಾಗಿದೆ. ಶೇ 100 ರಷ್ಟು ಸಾಧನೆಗೆ ಅಧಿಕಾರಿಗಳು ಶ್ರಮಿಸಬೇಕು ಎಂದರು.

ಮೀಸಲ್ಸ್- ರುಬೆಲ್ಲಾ ಖಾಯಿಲೆಯ ಲಕ್ಷಣಗಳು ಅಥವಾ ಯಾವುದೇ ಶಂಕಿತ ಪ್ರಕರಣಗಳು ಕಂಡುಬಂದಲ್ಲಿ ಜಿಲ್ಲಾ ಆರೋಗ್ಯ ಇಲಾಖೆಗೆ ವರದಿ ಮಾಡುವಂತೆ ತಿಳಿಸಿದರು.

ಸಾರ್ವತ್ರಿಕ ಲಸಿಕಾ ಕಾರ್ಯಕ್ರಮ ಕುರಿತು ಹಾಗೂ ದಢಾರ ಮತ್ತು ರುಬೆಲ್ಲಾ ನಿರ್ಮೂಲನೆ ಕುರಿತು ಜಾಗೃತಿ ಮೂಡಿಸುವಲ್ಲಿ ಧಾರ್ಮಿಕ ಮುಖಂಡರು/ಪ್ರಭಾವಿ ವ್ಯಕ್ತಿಗಳು/ಇಲಾಖಾ ಮುಖ್ಯಸ್ಥರುಗಳು ವ್ಯಾಪಕವಾಗಿ ಐ.ಇ.ಸಿ ಚಟುವಟಿಕೆ ನಡೆಸಿ ಸಹಕರಿಸುವುದು ಎಂದರು.

ತಾಲ್ಲೂಕು ಮಟ್ಟದಲ್ಲಿ ಆರೋಗ್ಯ ಇಲಾಖಾ ಮುಖ್ಯಸ್ಥರು ತಮ್ಮ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಮಕ್ಕಳು ಲಸಿಕೆ ಪಡೆದಿರುವುದರ ಕುರಿತು ಖಾತರಿಪಡಿಸಿಕೊಳ್ಳಬೇಕು ಎಂದರು

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶೇಖ್ ತನ್ವೀರ್ ಆಸಿಫ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ ಮೋಹನ್, ಕುಷ್ಠರೋಗ ನಿರ್ಮೂಲನಾಧಿಕಾರಿ ಡಾ.ಸೋಮಶೇಖರ್, ಆರ್.ಸಿ.ಎಚ್ ಅಧಿಕಾರಿ ಅಶ್ವಥ್, ಕುಟುಂಬ ಕಲ್ಯಾಣಾಧಿಕಾರಿ ಡಾ.ಬೆಟ್ಟಸ್ವಾಮಿ ಸೇರಿದಂತೆ ಇನ್ನಿತರ ವೈದ್ಯಾಧಿಕಾರಿಗಳು ಉಪಸ್ಥಿತರಿದ್ದರು.

Continue Reading

Health

ಈ ಲಕ್ಷಣಗಳು ಕಂಡು ಬಂದರೆ ಅದು ಶ್ವಾಸಕೋಶ ಕ್ಯಾನ್ಸರ್ : ಆರಂಭದಲ್ಲೇ ಪತ್ತೆ ಹಚ್ಚಿ ಜೀವ ಉಳಿಸಿಕೊಳ್ಳಿ

Published

on

Lung Cancer Symptoms – ಯಾವುದೇ ಒಂದು ರೋಗ ಬಂದರೆ ಅದನ್ನು ನಾವು ಆರಂಭದ ಹಂತದಲ್ಲೇ ಕಂಡುಕೊಂಡಲ್ಲಿ ಸುಲಭವಾಗಿ ಮತ್ತು ವೇಗವಾಗಿ ಅದಕ್ಕೆ ಉಪಾಯ ಕಂದುಕೊಳ್ಳಬಹುದು. ಇದರಿಂದ ಅಮೂಲ್ಯ ಜೀವಗಳನ್ನು ಉಳಿಸಬಹುದು.

ಈ ಲೇಖನದಲ್ಲಿ ನಾವು ಶ್ವಾಸಕೋಶ ಕ್ಯಾನ್ಸರ್ ನ ಪ್ರಮುಖ ಲಕ್ಷಣಗಳು ಯಾವವು? ಶ್ವಾಶಕೋಶ ಕಾಯಿಲೆಗಳನ್ನು ಹೇಗೆ ತಡೆಗಟ್ಟಬೇಕು ಎಂಬ ಮಾಹಿತಿಯನ್ನು ಇಲ್ಲಿ ತಿಳಿಸಿದ್ದೇವೆ.

ಶ್ವಾಸಕೋಶ ಕಾಯಿಲೆಗಳ ಪ್ರಮುಖ ಲಕ್ಷಣಗಳು :

* ಎದೆ ನೋವು
* ವಿಪರೀತ ಕೆಮ್ಮು
* ಕಫದಲ್ಲಿ ರಕ್ತ
* ಉಸಿರಾಟದ ತೊಂದರೆ

* ಧ್ವನಿಯಲ್ಲಿ ಒಂಟಿತನ
* ಉಬ್ಬಸ
* ಹಸಿವು ಆಗದೇ ಇರುವುದು
* ದೇಹದ ತೂಕ ಕಡಿಮೆ ಆಗುವುದು

ಈ ಮೇಲಿನ ಯಾವುದಾದರೂ ಲಕ್ಷಣಗಳು ನಿಮಗೆ ಕಂಡು ಬಂದಲ್ಲಿ ತಕ್ಷಣವೇ ನಿಮ್ಮ ಹತ್ತಿರದ ಸರ್ಕಾರಿ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ವೈದ್ಯರ ಸಲಹೆ ಪಡೆದು ಸರಿಯಾದ ಮಾಹಿತಿ ತಿಳಿದುಕೊಳ್ಳಿ.


ಶ್ವಾಸಕೋಶ ಕಾಯಿಲೆಯ ಅಪಾಯಗಳನ್ನು ಕಡಿಮೆ ಮಾಡುವುದು ಹೇಗೆ?

* ಪ್ರಮುಖವಾಗಿ ಧೂಮಪಾನ ಮಾಡುವವರು ಧೂಮಪಾನವನ್ನು ತಿಳಿಸಬೇಕು ಏಕೆಂದರೆ ಇದರಿಂದ ಲಂ ಕ್ಯಾನ್ಸರ್ ಆಗುವ ಸಾಧ್ಯತೆಗಳು ಹೆಚ್ಚಿರುತ್ತದೆ.
* ಮಾಲಿನ್ಯಕಾರಕಗಳಿಂದ ದೂರವಿರಬೇಕು
* ಆರೋಗ್ಯಕರ ಹಾಗೂ ಮನೆಯಲ್ಲಿಯೇ ತಯಾರಿಸಿದ ಆಹಾರವನ್ನು ಸೇವಿಸಬೇಕು.
* ನಿಯಮಿತವಾಗಿ ವ್ಯಾಯಾಮ ಮಾಡಿ ಹಾಗೂ ನೈರ್ಮಲ್ಯವನ್ನು ಕಾಪಾಡಿಕೊಳ್ಳಿ.

ನೆನಪಿಡಿ: ನಾವು ಯಾವುದೇ ಒಂದು ಅಮೂಲ್ಯ ಜೀವವನ್ನು ಉಳಿಸಲು ರೋಗ ಬಾರ್ದಂತೆ ತಡೆಗಟ್ಟುವುದು ಮತ್ತು ಅದನ್ನು ಆರಂಭದಲ್ಲಿಯೇ ಪತ್ತೆ ಹಚ್ಚುವುದು ಪ್ರಮುಖವಾಗಿರುತ್ತದೆ.

Continue Reading

Health

ಜಂಕ್ ಫುಡ್ ತ್ಯೆಜಿಸಿ, ಪೌಷ್ಟಿಕ ಆಹಾರ ಸೇವಿಸಿ : ಎಸ್.ಡಿ.ಬೆನ್ನೂರ್

Published

on

ಶ್ರೀರಂಗಪಟ್ಟಣ : ಪ್ರತಿಯೊಬ್ಬರಿಗೂ ಪೌಷ್ಟಿಕ ಆಹಾರ ಅಗತ್ಯವಾಗಿದ್ದು ಹಾಗಾಗಿ ಜಂಕ್ ಫುಡ್ ತ್ಯಜಿಸಿ ಕಬ್ಬಿಣಾಂಶ ಹೆಚ್ಚಾಗಿರುವ ಆಹಾರ ಪದಾರ್ಥಗಳನ್ನು ಸೇವಿಸಿ ಎಂದು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಸ್ ಡಿ ಬೆನ್ನೂರ್ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ತಾಲ್ಲೂಕಿನ ಹುಲಿಕೆರೆ ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ವತಿಯಿಂದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ “ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರ”ದಲ್ಲಿ ಅಭ್ಯಾಸ ಮಾಡುತ್ತಿರುವ ಮಕ್ಕಳಿಗೆ “ಪೌಷ್ಠಿಕ ಆಹಾರದ ಮಹತ್ವ ಹಾಗೂ ವೈಯಕ್ತಿಕ ಅರೋಗ್ಯದ ಬಗ್ಗೆ” ಅರಿವು ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.

ದೇಹದ ಬೆಳವಣಿಗೆಗೆ,ಮಾಸ ಖಂಡಗಳ ನಿರ್ಮಾಣಕ್ಕೆ,ರಕ್ತ ಉತ್ಪಾದನೆಗೆ, ಮೂಳೆಗಳ ತಯಾರಿಗೆ ಹಾಗೂ ಉತ್ತಮ ಅರೋಗ್ಯಕ್ಕೆ ಪೌಷ್ಠಿಕ ಆಹಾರ ಅಗತ್ಯವಾಗಿ ಬೇಕು. ರಕ್ತ ಹೀನತೆಯಿಂದ ನಾನಾ ಖಾಯಿಲೆಗಳು ಬರುತ್ತವೆ ಮತ್ತು ಕಲಿಕೆಯಲ್ಲಿ ಗ್ರಹಿಕಾ ಶಕ್ತಿ ಕಡಿಮೆಯಾಗಿ ವಿದ್ಯಾಭ್ಯಾಸದ ಮೇಲೆ ಪರಿಣಾಮ ಬೀರುತ್ತದೆ ಹಾಗಾಗಿ ರಕ್ತ ಹೀನತೆ ಅಲಕ್ಷ ಬೇಡ ಕಬ್ಬಿಣಾಂಶ ಕೊರತೆಯಿಂದ ಹಿಮೊಗ್ಲೋಬಿನ್ ಕಡಿಮೆಯಾಗುತ್ತದೆ ಇದರಿಂದ ಸುಸ್ತು,ಆಯಾಸ ಆಗುತ್ತದೆ ಆದ್ದರಿಂದ ಸಕ್ಕರೆ,ಜ್ಯೂಸ್,ತಂಪು ಪಾನೀಯಗಳು, ಸಿಹಿ ತಿಂಡಿ, ಖರಿದ ಮತ್ತು ಎಣ್ಣೆ ಪದಾರ್ಥಗಳು ತಿನ್ನದಿರುವುದು ಒಳ್ಳೆಯದು. ಹಾಲು ಮತ್ತು ಹಾಲಿನ ಉತ್ಪನ್ನಗಳು,ಮಾಂಸ, ಮೀನು ಮತ್ತು ಮೊಟ್ಟೆ ಮಿತವಾಗಿ ಬಳಸಬೇಕು. ತರಕಾರಿ ಮತ್ತು ಹಣ್ಣುಗಳು ನಿಯಮಿತವಾಗಿ ಸೇವಿಸಿ ಚಪಾತಿ, ಅನ್ನ, ರಾಗಿ ಮುದ್ದೆ ದವಸ ಮತ್ತು ಧಾನ್ಯಗಳನ್ನು ಹೆಚ್ಛಾಗಿ ತೆಗೆದು ಕೊಳ್ಳಬಹುದಾದ ಆಹಾರಗಳಾಗಿವೆ. ಆದ್ದರಿಂದ ದಿನನಿತ್ಯ ಪೌಷ್ಟಿಕ ಆಹಾರ ತಪ್ಪದೇ ಸೇವನೆ ಮಾಡಬೇಕೆಂದು ಮಕ್ಕಳಿಗೆ ಸಲಹೆ ನೀಡಿದರು.

ನಂತರ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಟಿ ಟಿ ಜ್ಯೋತಿ ಮಕ್ಕಳಿಗೆ ವೈಯಕ್ತಿಕ ಶುಚಿತ್ವದ ಕುರಿತು ಹಾಗೂ ಕೈ ತೊಳೆಯುವ ವೈಜ್ಞಾನಿಕ ವಿಧಾನಗಳ ಕುರಿತು ಆರೋಗ್ಯ ಶಿಕ್ಷಣ ನೀಡಿದರು. ಈ ವೇಳೆ ಗ್ರಂಥಾಲಯ ಮೇಲ್ವಿಚಾರಕಿ ಪುಷ್ಪಲತಾ,
ಸಮುದಾಯ ಆರೋಗ್ಯ ಅಧಿಕಾರಿ ಉಷಾ, ಆಶಾ ಕಾರ್ಯಕರ್ತೆ ಜ್ಯೋತಿ ಉಪಸ್ಥಿತರಿದ್ದರು.

Continue Reading

Health

ತೋಟಗಾರಿಕೆ ಇಲಾಖೆಯಲ್ಲಿ ಯುವಕರಿಗೆ ಶಿಷ್ಯವೇತನದ ಜೊತೆಗೆ ಉಚಿತ 10 ತಿಂಗಳ ತರಬೇತಿ : ಅರ್ಜಿ ಅಹ್ವಾನ

Published

on

Free Training by Horticulture Department : ರಾಜ್ಯ ತೋಟಗಾರಿಕೆ ಇಲಾಖೆಯು 2025 – 26 ನೇ ಸಾಲಿಗೆ ತೋಟಗಾರಿಕೆ ತರಬೇತಿ ಕೇಂದ್ರಗಳಲ್ಲಿ ವೈಜ್ಞಾನಿಕವಾಗಿ ಉತ್ತಮ ತೋಟಗಾರಿಕೆ ಬೆಳೆಗಳನ್ನು ಬೆಳೆಯಲು ಹಾಗೂ ಆರ್ಥಿಕವಾಗಿ ಸಬಲರಾಗಲು ಅವಶ್ಯವಿರುವ ತರಬೇತಿಯನ್ನು ಯುವಕರಿಗೆ ಉಚಿತವಾಗಿ ನೀಡಲು ಅರ್ಜಿ ಆಹ್ವಾನಿಸಿದೆ.

ಉಚಿತ ತರಬೇತಿ ಯೋಜನೆಯ ವಿವರ :

ಈ ಉಚಿತ ತರಬೇತಿಯನ್ನು ಒಟ್ಟು 10 ತಿಂಗಳ ಅವಧಿಯವರೆಗೆ ನೀಡಲಾಗುವುದು. ತರಬೇತಿಯು ಮೇ 02, 2025 ರಿಂದ ಆರಂಭವಾಗಲಿದೆ. ವಿಶೇಷವೇನೆಂದರೆ ಈ ಉಚಿತ ತರಬೇತಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತರಬೇತಿಯ ಅವಧಿಯಲ್ಲಿ ಮಾಸಿಕ 1,750ರೂ. ಶಿಷ್ಯವೇತನವನ್ನು ನೀಡಲಾಗುತ್ತದೆ.

ಯಾರು ಅರ್ಜಿ ಸಲ್ಲಿಸಬಹುದು?

ತೋಟಗಾರಿಕೆ ಇಲಾಖೆಯ ಈ ಉಚಿತ ತರಬೇತಿಗೆ ಅರ್ಜಿ ಸಲ್ಲಿಸಲು ಕೇವಲ ರೈತರ ಮಕ್ಕಳಿಗೆ ಮಾತ್ರ ಅವಕಾಶವಿದೆ. ಅದೇ ರೀತಿ ಕನಿಷ್ಠ 10ನೇ ತರಗತಿ ಪಾಸಾಗಿರಬೇಕು ಹಾಗೂ 18 ರಿಂದ 30 ವರ್ಷದ ವಯೋಮಿತಿಯಲ್ಲಿರಬೇಕು. ಮೀಸಲಾತಿ ಕೋರುವ ಅಭ್ಯರ್ಥಿಗಳಿಗೆ ಗರಿಷ್ಟ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗುವುದು.

 

ಅರ್ಜಿ ಸಲ್ಲಿಸುವುದು ಹೇಗೆ ಮತ್ತು ಯಾವಾಗ?

ಅರ್ಜಿ ಸಲ್ಲಿಸಲು ನೀವು ಅರ್ಹತೆ ಹೊಂದಿದ್ದಲ್ಲಿ, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಕಚೇರಿಯಲ್ಲಿ ಅಥವಾ ಆನ್ಲೈನ್ ಮೂಲಕ ಅರ್ಜಿ ಫಾರಂ ಪಡೆದು ಸರಿಯಾದ ಮಾಹಿತಿಯನ್ನು ಭರ್ತಿ ಮಾಡಿ, ” ತೋಟಗಾರಿಕೆ ಉಪ ನಿರ್ದೇಶಕರು ಜಿಲ್ಲಾ ಪಂಚಾಯತ್ ಧಾರವಾಡ ಕಚೇರಿಗೆ” ಸಲ್ಲಿಸಬೇಕು.

ತೋಟಗಾರಿಕೆ ಇಲಾಖೆಯ ಅಧಿಕೃತ ಜಾಲತಾಣ : https://horticulturedir.karnataka.gov.in/

Continue Reading

Trending

error: Content is protected !!