Connect with us

Chamarajanagar

ಯಳಂದೂರು| ನಾಳೆ ಪಟ್ಟಣದ ಡಾ.ಬಿ.ಆರ್‌.ಅಂಬೇಡ್ಕರ್‌ ಭವನದಲ್ಲಿ ಪತ್ರಕರ್ತರ ದಿನಾಚರಣೆ: ಅಂಬಳ ವೀರಭದ್ರನಾಯಕ

Published

on

ಯಳಂದೂರು:  ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಿಂದ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕ‌ರ್ ಭವನದಲ್ಲಿ ಆ.6ರ ಬುಧವಾರ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ವನ್ನು ಆಯೋಜಿಸಲಾಗಿದ್ದು, ಈ ಕಾರ್ಯಕ್ರಮಕ್ಕೆ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ತಾಲ್ಲೂಕು ಅಧ್ಯಕ್ಷ ಅಂಬಳ ವೀರಭದ್ರನಾಯಕ ತಿಳಿಸಿದ್ದಾರೆ.

ಪಟ್ಟಣದ ದೇವಾಂಗ ಬೀದಿಯಲ್ಲಿ ತಾಲ್ಲೂಕು ಕಾರ್ಯನಿರತ ಪತ್ರಕರ್ತ ಸಂಘದಿಂದ ಹಣ್ಣು ಕೊಂಡಿದ್ದ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ತಾಲ್ಲೂಕಿನ ನಾಲ್ವರು ಪತ್ರಕರ್ತರು, ಒಬ್ಬ ಪತ್ರಿಕಾ ವಿತರಕ ಸೇರಿದಂತೆ ಒಟ್ಟು ಐವರಿಗೆ ದತ್ತಿ ಪ್ರಶಸ್ತಿನೀಡಿಸನ್ಮಾನಿಸಲಾಗುವುದು. ಕಾರ್ಯಕ್ರಮ ವನ್ನು ಶಾಸಕ ಎ.ಆರ್.ಕೃಷ್ಣಮೂರ್ತಿ ಉದ್ಘಾಟಿಸಲಿದ್ದಾರೆ. ಸಂಸದ ಸುನಿಲ್ ಬೋಸ್ ಉಪಸ್ಥಿತಿಯಲ್ಲಿ, ಡಿವಿಜಿ ಭಾವಚಿತಕ್ಕೆ ಪುಷ್ಪಾರ್ಚನೆಯನ್ನು ಶಾಸಕ ಸಿ. ಪುಟ್ಟರಂಗಶೆಟ್ಟಿ ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ತಿನ ಶಾಸಕರಾದ ಡಾ.ಡಿ.ತಿಮ್ಮಯ್ಯ, ಸಿ.ಎನ್.ಮಂಜೇಗೌಡ, ಮಧು ಜಿ.ಮಾದೇಗೌಡ, ಕೆ.ವಿವೇಕಾನಂದ, ಮಾಜಿ ಶಾಸಕರಾದ ಎನ್.ಮಹೇಶ್, ಎಸ್. ಬಾಲರಾಜು, ಜಿ.ಎನ್.ನಂಜುಂಡಸ್ವಾಮಿ, ಭಾಗವಹಿಸಲಿದ್ದಾರೆ ಎಂದು ಹೇಳಿದರು.

ಸಂಘ ರಾಜ್ಯ ಪರಿಷತ್ ಸದಸ್ಯ ಗೂಳಿಪುರ ನಂದೀಶ್, ಸಂಘದ ಉಪಾಧ್ಯಕ್ಷ ವಿ.ನಾಗರಾಜು, ಪ್ರಧಾನ ಕಾರ್ಯದರ್ಶಿ ಡಿ.ಪಿ.ಮಹೇಶ್, ಜಿಲ್ಲಾ ನಿರ್ದೇಶಕರಾದ ಫೈರೋಜ್ ಖಾನ್, ಸಹ ಕಾರ್ಯದರ್ಶಿ ಸೈಯದ್ ಇರ್ಫಾನ್, ಖಜಾಂಚಿ ನಾಗೇಂದ್ರ ನಿರ್ದೇಶಕರಾದ ಯರಿಯೂರು ನಾಗೇಂದ್ರ, ನಾಗರಾಜು, ಮದ್ದೂರು ಪುರುಷೋತ್ತಮ, ಬೂದಂಬಳ್ಳಿ ಗಿರೀಶ್, ಸೈಯದ್ ಮುಷರಫ್, ವಿವೇಕ್, ಕೊಮಾರನಪುರ ರಾಜಶೇಖ‌ರ್, ಇತರರು ಹಾಜರಿದ್ದರು.

Continue Reading

Chamarajanagar

ಜೇನುತುಪ್ಪದಿಂದ ಕುಟುಂಬದ ಆರೋಗ್ಯ ವೃದ್ಧಿ

Published

on

ಚಾಮರಾಜನಗರ: ಜೇನುತುಪ್ಪ ಸೇವನೆಯಿಂದ ಕುಟುಂಬದ ಆರೋಗ್ಯ ವೃದ್ಧಿಯಾಗಲಿದೆ ಎಂದು ರಾಷ್ಟ್ರೀಯ ಕೃಷಿ ಕೀಟ ಸಂಪನ್ಮೂಲಗಳ ಬ್ಯುರೋ ಸಂಸ್ಥೆಯ ಹಿರಿಯ ವಿಜ್ಞಾನಿ ಡಾ. ಅಮಲಾ ಉದಯಕುಮಾರ್‌ ಹೇಳಿದರು.

ತಾಲೂಕಿನ ಯರಕನಗದ್ದೆಯಲ್ಲಿ ರಾಷ್ಟ್ರೀಯ ಕೃಷಿ ಕೀಟ ಸಂಪನ್ಮೂಲಗಳ ಬ್ಯುರೋ, ರಾಷ್ಟ್ರೀಯ ಜೇನುನೊಣ, ಬಿಳಿಗಿರಿ ಸೋಲಿಗರ ಅಡವಿ ಸಂಸ್ಕರಣ ಟ್ರಸ್ಟ್‌ ಮತ್ತು ಏಟ್ರಿ ಸಂಸ್ಥೆಯ ಸಹಯೋಗದಲ್ಲಿ ಸೋಲಿಗ ಸಮುದಾಯದವರಿಗೆ ಆಯೋಜಿಸಿದ್ದ ಒಂದು ದಿನದ ನೆಸರೆ ಜೇನು ಸಾಕಾಣಿಕೆಯ ತರಬೇತಿ ಕಾರ‍್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.


ರಾಷ್ಟ್ರೀಯ ಕೃಷಿ ಕೀಟ ಸಂಪನ್ಮೂಲಗಳ ಬ್ಯುರೋ ಸಂಸ್ಥೆಯ ಯೋಜನೆಯಡಿಯಲ್ಲಿ ಈ ಮೊದಲು ನಾವು ಮಲೆ ಮಹದೇಶ್ವರ ಬೆಟ್ಟದಲ್ಲಿ ಹಾಗೂ ಗುಂಡ್ಲುಪೇಟೆಯಲ್ಲಿ ತರಬೇತಿಯನ್ನು ನೀಡಲಾಗಿದೆ. ಇದರಿಂದ ಅಲ್ಲಿನ ಸ್ಥಳೀಯರು ತರಬೇತಿಯ ಪ್ರಯೋಜನವನ್ನು ಪಡೆದುಕೊಂಡಿದ್ದಾರೆ. ಅದೇ ರೀತಿ ಬಿಳಿಗಿರಿರಂಗನ ಬೆಟ್ಟದ ಸೋಲಿಗ ಸಮುದಾಯದವರಿಗೆ ನೆಸರೆ ಜೇನು ಸಾಕಾಣಿಕೆಯು ಆರ್ಥಿಕವಾಗಿ ಲಾಭಗಳಿಸುವ ಉದ್ದಿಮೆಯನ್ನಾಗಿ ಮತ್ತು ಉಪಕಸುಬಾಗಿಯೂ ಮಾಡಕೊಳ್ಳಬಹುದಾಗಿದೆ ಎಂದು ತಿಳಿಸಿದರು.

ಜೇನು ಕುಟುಂಬಗಳನ್ನು ಮನೆಯ ಸುತ್ತಮುತ್ತ ಇಟ್ಟು ಸಾಕಾಣಿಕೆಯನ್ನು ಮಡಬಹುದು ಜೇನುತುಪ್ಪ ಕುಟುಂಬದ ಆರೋಗ್ಯದ ಗುಣಮಟ್ಟವನ್ನು ಹೆಚ್ಚಿಸುವುದರ ಜೊತೆಗೆ ಮೇಣ, ಇತರೆ ಉತ್ಪನ್ನಗಳನ್ನು ಮಾರಾಟ ಮಾಡುವುದರ ಮೂಲಕ ಆರ್ಥಿಕವಾಗಿ ಗುಣಮಟ್ಟವನ್ನು ಸುಧಾರಿಸಿಕೊಳ್ಳಬಹುದು ಎಂದರು.
ಇದೇ ವೇಳೆ ನೆಸರೆ ಜೇನು ಸಾಕಾಣಿಕೆ ಮಾಡುವುದನ್ನು ಕುರಿತು ತರಬೇತಿ ನೀಡಿದರು.

ಬಿಳಿಗಿರಿ ಸೋಲಿಗರ ಅಡವಿ ಸಂಸ್ಕರಣ ಟ್ರಸ್ಟ್‌ ನ ಡಾ. ಸಿ. ಮಾದೇಗೌಡರವರು ಮಾತನಾಡಿ, ನಸರೆ ಜೇನು ತರಬೇತಿ ಮೊದಲ ಬಾರಿಗೆ ಬಿಳಿಗಿರಿರಂಗನಬೆಟ್ಟದ ಸೋಲಿಗರಿಗೆ ಹಮ್ಮಿಕೊಳ್ಳಲಾಗುತ್ತಿದೆ. ನೆಸರೆ ಜೇನು ಅತ್ಯಮೂಲ್ಯವಾದ ಔಷಧಿ ಗುಣವನ್ನು ಹೊಂದಿರುತ್ತದೆ, ನೆಸರ ಜೇನಿಗೆ ಹೆಚ್ಚು ಬೇಡಿಕೆ ಇದ್ದು, ಪ್ರತಿ ಜೇನಿಗೆ 1500 ರಿಂದ 2000 ರೂ. ಬೆಲೆ ಇದೆ. ಅಲ್ಲದೇ ತುಂಬಾ ಬೇಡಿಕೆ ಇದೆ. ನೆಸರೆ ಜೇನು ಸಾಕಣಿಕೆ ಮಾಡುವುದರ ಮೂಲಕ ಸೋಲಿಗರರನ್ನು ಸಬಲರನ್ನಾಗಿ ಮಾಡುವುದು ಅಡವಿ ಮುಖ್ಯವಾದ ಉದ್ದೇಶವಾಗಿರುತ್ತದೆ ಎಂದು ಹೇಳಿದರು.

ಈ ತರಬೇತಿಯಲ್ಲಿ ಗೇಮ್‌ ಸಂಸ್ಥೆಯ ಮಹದೇಶ್‌, ಅಡವಿ ಸಂಸ್ಕರಣ ಟ್ರಸ್ಟ್‌ ಅಧ್ಯಕ್ಷೆ ಮಾದಮ್ಮ, ನಂಜೇಗೌಡ, ಸಿದ್ದೇಗೌಡ, ಕಲ್ಲಿಮಾದೇಗೌಡ, ಬಸವೇಗೌಡ, ಗಾಣಳ್ಳಿಮಾದೇಗೌಡ, ಕಾರನ ಕೇತೆಗೌಡ, ರಂಗಮ್ಮ, ಶಿವಮ್ಮ ಬಸಮ್ಮ, ಸಣ್ಣರಂಗೇಗೌಡ, ಮಂಜುನಾಥ, ಮಾದೇಶ, ಮಹೇಶ, ಅನಿತಾ, ನಾಗರಾಜು, ಶಿವಕುಮಾರ್‌ ಸೇರಿದಂತೆ ಇತರರು ಭಾಗವಹಿಸಿದ್ದರು.

Continue Reading

Chamarajanagar

ಚಿಕ್ಕಮಾಲಾಪುರದಲ್ಲಿ ವನ್ಯಜೀವಿ ದಾಳಿ: ಕುರಿ ಬಲಿ

Published

on

ಹನೂರು: ತಾಲೂಕಿನ ಚಿಕ್ಕಮಾಲಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಒಂಟಮಾಲಪುರ ಗ್ರಾಮದ ಕೆರೆ ಸಮೀಪ ವನ್ಯಜೀವಿ ದಾಳಿಯಿಂದ ಕುರಿಯೊಂದು ಸಾವನ್ನಪ್ಪಿದ ಘಟನೆ ನಡೆದಿದೆ.

ಗೋವಿಂದ ನಾಯ್ಡು ಅವರಿಗೆ ಸೇರಿದ ಕುರಿಯ ಮೇಲೆ ಹುಲಿ ದಾಳಿ ನಡೆಸಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಕುರಿಯನ್ನು ರಕ್ಷಿಸಲು ಪ್ರಯತ್ನಿಸಿದರೂ ಸಾಧ್ಯವಾಗಿಲ್ಲ ಎಂದು ಪ್ರತ್ಯಕ್ಷದರ್ಶಿ ನಾಗರಾಜು ಹೇಳಿದ್ದಾರೆ.

ಘಟನೆ ಬಳಿಕ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಹೆಜ್ಜೆ ಗುರುತುಗಳನ್ನು ಪರಿಶೀಲಿಸುತ್ತಿದ್ದಾರೆ. ದಾಳಿ ಮಾಡಿದ ಪ್ರಾಣಿಯ ಕುರಿತು ಖಚಿತಪಡಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.

ಈ ಘಟನೆಯಿಂದ ಗ್ರಾಮದಲ್ಲಿ ಆತಂಕದ ವಾತಾವರಣ ಉಂಟಾಗಿದ್ದು, ಅರಣ್ಯ ಇಲಾಖೆ ಹೆಚ್ಚುವರಿ ನಿಗಾ ವಹಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

Continue Reading

Chamarajanagar

ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ

Published

on

ಗುಂಡ್ಲುಪೇಟೆ: ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ಕಾರಿನಲ್ಲಿದ್ದವರಿಗೆ ಸಣ್ಣ ಪುಟ್ಟ ಗಾಯಗಳಾಗಿರುವ ಘಟನೆ ತಾಲೂಕಿನ‌ ಮದ್ದೂರು ಚೆಕ್‌ಪೋಸ್ಟ್ ಬಳಿ ನಡೆದಿದೆ.


ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ವಾಹನಗಳನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.

Continue Reading

Trending

error: Content is protected !!