Sports
ಶ್ರೀಲಂಕಾ ವಿರುದ್ಧ ಇತಿಹಾಸ ನಿರ್ಮಿಸಿದ ಬಾಂಗ್ಲಾದೇಶ, ಹರ್ಭಜನ್ ಸಿಂಗ್ ದಾಖಲೆ ಮುರಿದ ಮೆಹದಿ ಹಸನ್
ಶ್ರೀಲಂಕಾ ಪ್ರವಾಸದಲ್ಲಿರುವ ಬಾಂಗ್ಲಾದೇಶ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ 2-1 ಅಂತರದಲ್ಲಿ ಐತಿಹಾಸಿಕ ಜಯ ಸಾಧಿಸಿದೆ.
ಕೊಲಂಬೋ: ಶ್ರೀಲಂಕಾ ಪ್ರವಾಸದಲ್ಲಿರುವ ಬಾಂಗ್ಲಾದೇಶ ಐತಿಹಾಸಿಕ ಜಯ ಸಾಧಿಸಿದ್ದು, ತಂಡದ ಸ್ಟಾರ್ ಬೌಲರ್ ಮೆಹದಿ ಹಸನ್ ಭಾರತದ ಸ್ಪಿನ್ ಲೆಜೆಂಡ್ ಹರ್ಭಜನ್ ಸಿಂಗ್ ದಾಖಲೆ ಮುರಿದಿದ್ದಾರೆ.
ಶ್ರೀಲಂಕಾ ಪ್ರವಾಸದಲ್ಲಿರುವ ಬಾಂಗ್ಲಾದೇಶ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ 2-1 ಅಂತರದಲ್ಲಿ ಐತಿಹಾಸಿಕ ಜಯ ಸಾಧಿಸಿದೆ. ಕೊಲಂಬೊದಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಬಾಂಗ್ಲಾದೇಶ ತಂಡ 8 ವಿಕೆಟ್ ಗಳ ಅಂತರದ ಭರ್ಜರಿ ಜಯ ಸಾಧಿಸಿದೆ.
ಆರ್ ಪ್ರೇಮದಾಸ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಶ್ರೀಲಂಕಾ ತಂಡದ ನಾಯಕ ಚರಿತ್ ಅಸಲಂಕಾ ಬ್ಯಾಟಿಂಗ್ ಆಯ್ದುಕೊಂಡರು. ಅದರಂತೆ ಮೊದಲು ಬ್ಯಾಟ್ ಮಾಡಿದ ಲಂಕಾ ತಂಡ ನಿಸ್ಸಾಂಕಾ (46 ರನ್) ಮತ್ತು ಶನಕ (35 ರನ್) ಸಮಯೋಚಿತ ಬ್ಯಾಟಿಂಗ್ ನೆರವಿನಿಂದ ನಿಗಧಿತ 20 ಓವರ್ ನಲ್ಲಿ 7 ವಿಕೆಟ್ ನಷ್ಟಕ್ಕೆ 132 ರನ್ ಗಳಿಸಿತು.
ಈ ಸುಲಭದ ಗುರಿಯನ್ನು ಬೆನ್ನು ಹತ್ತಿದ ಬಾಂಗ್ಲಾದೇಶ ಪರ ತಂಝೀಮ್ ಹಸನ್ ತಮೀಮ್ 47 ಎಸೆತಗಳಲ್ಲಿ 6 ಸಿಕ್ಸ್ ಹಾಗೂ 1 ಫೋರ್ನೊಂದಿಗೆ ಅಜೇಯ 73 ರನ್ ಬಾರಿಸಿದರು. ಇನ್ನು ನಾಯಕ ಲಿಟ್ಟನ್ ದಾಸ್ 32 ರನ್ ಕಲೆಹಾಕಿದರು. ಇನ್ನು ತೌಹಿದ್ ಹೃದೋಯ್ 27 ರನ್‌ಗಳ ಕೊಡುಗೆ ನೀಡಿದರು. ಈ ಮೂಲಕ ಬಾಂಗ್ಲಾದೇಶ್ ತಂಡವು 16.3 ಓವರ್ಗಳಲ್ಲಿ 133 ರನ್ ಬಾರಿಸಿ, 8 ವಿಕೆಟ್ಗಳ ಭರ್ಜರಿ ಜಯ ಸಾಧಿಸಿತು.
ಬಾಂಗ್ಲಾದೇಶಕ್ಕೆ ಐತಿಹಾಸಿಕ ಜಯ
ಇನ್ನು ದ್ವಿಪಕ್ಷೀಯ ಟಿ20 ಸರಣಿಯಲ್ಲಿ ಬಾಂಗ್ಲಾದೇಶಕ್ಕೆ ಇದು ಚೊಚ್ಚಲ ಸರಣಿ ಜಯವಾಗಿದೆ. ಬಾಂಗ್ಲಾದೇಶ ತಂಡವು ಈವರೆಗೆ ಶ್ರೀಲಂಕಾ ವಿರುದ್ಧ ಟಿ20 ಸರಣಿ ಗೆದ್ದಿಲ್ಲ. ಈ ಬಾರಿ ಲಂಕಾ ಪಡೆ ವಿರುದ್ಧ 2-1 ಅಂತರದಿಂದ ಸರಣಿ ಗೆಲ್ಲುವ ಮೂಲಕ ಬಾಂಗ್ಲಾದೇಶ್ ತಂಡವು ಹೊಸ ಇತಿಹಾಸ ನಿರ್ಮಿಸುವಲ್ಲಿ ಯಶಸ್ವಿಯಾಗಿದೆ.
ಹರ್ಭಜನ್ ದಾಖಲೆ ಮುರಿದ ಮೆಹದಿ ಹಸನ್
ಇನ್ನು ಈ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಭರ್ಜರಿ ಬೌಲಿಂಗ್ ಪ್ರದರ್ಶನ ನೀಡಿದ ಮೆಹದಿ ಹಸನ್ 4 ಓವರ್ ನಲ್ಲಿ ಕೇವಲ 2.80 ಸರಾಸರಿಯಲ್ಲಿ ಕೇವಲ 11ರನ್ ನೀಡಿದ್ದರು. ಈ ಪೈಕಿ ಒಂದು ಮೇಡಿನ್ ಕೂಡ ಸೇರಿತ್ತು. ಇದು ಪ್ರೇಮದಾಸ ಕ್ರೀಡಾಂಗಣದಲ್ಲಿ ಬೌಲರ್ ಒಬ್ಬರ ಟಿ20 ಪಂದ್ಯದ ಅತ್ಯುತ್ತಮ ಪ್ರದರ್ಶನವಾಗಿ ದಾಖಲಾಗಿದೆ.
ಈ ಹಿಂದೆ ಈ ದಾಖಲೆ ಭಾರತದ ಹರ್ಭಜನ್ ಸಿಂಗ್ ಹೆಸರಿನಲ್ಲಿತ್ತು. 2012ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಹರ್ಭಜನ್ ಸಿಂಗ್ ಕೇವಲ 12 ರನ್ ನೀಡಿ 4 ವಿಕೆಟ್ ಪಡೆದಿದ್ದರು. ಇದು ಈ ಕ್ರೀಡಾಂಗಣದಲ್ಲಿ ವಿದೇಶಿ ಬೌಲರ್ ಒಬ್ಬರ ಅತ್ಯುತ್ತಮ ಪ್ರದರ್ಶನವಾಗಿತ್ತು. ಇದೀಗ ಈ ದಾಖಲೆಯನ್ನು ಬಾಂಗ್ಲಾದೇಶದ ಮೆಹದಿ ಹಸನ್ ಹಿಂದಿಕ್ಕಿದ್ದಾರೆ.
ಉಳಿದಂತೆ ಈ ಮೈದಾನದಲ್ಲಿ ಅತ್ಯುತ್ತಮ ಬೌಲಿಂಗ್ ಪ್ರದರ್ಶನದ ದಾಖಲೆ ಶ್ರೀಲಂಕಾದ ವನಿಂದು ಹಸರಂಗ ಹೆಸರಲ್ಲಿದೆ. ಅವರು ಕೇವಲ 9 ರನ್ ನೀಡಿ 4 ವಿಕೆಟ್ ಪಡೆದಿದ್ದಾರೆ.
Sports
ಧರ್ಮಶಾಲಾದಲ್ಲಿ ಆರ್‌ಸಿಬಿಗೆ ಗುಡ್ ನ್ಯೂಸ್: ಫಿಲ್ ಸಾಲ್ಟ್ ಕಮ್‌ಬ್ಯಾಕ್ ಸಾಧ್ಯತೆ
ಧರ್ಮಶಾಲಾ: ಆರ್‌ಸಿಬಿ ತಂಡಕ್ಕೆ ಮಹತ್ವದ ಹಂತದಲ್ಲಿ ಸಿಹಿ ಸುದ್ದಿ ಸಿಕ್ಕಿದೆ. ಐಪಿಎಲ್ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಜಿಟಿ ವಿರುದ್ಧ ಸೆಣಸಲಿರುವ ಆರ್‌ಸಿಬಿ ತಂಡಕ್ಕೆ ಆರಂಭಿಕ ಬ್ಯಾಟರ್ ಫಿಲ್ ಸಾಲ್ಟ್ ಮರಳುವ ಸಾಧ್ಯತೆ ಎದುರಾಗಿದೆ.
ಕ್ವಾಲಿಫೈಯರ್-1 ಪಂದ್ಯಕ್ಕೂ ಮುನ್ನ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆರ್‌ಸಿಬಿ ನಾಯಕ ರಜತ್ ಪಾಟೀದಾರ್, ಫಿಲ್ ಸಾಲ್ಟ್ ಗಾಯದಿಂದ ಚೇತರಿಸಿಕೊಂಡಿದ್ದು, ಈಗಾಗಲೇ ನೆಟ್ಸ್‌ನಲ್ಲಿ ಅಭ್ಯಾಸ ಆರಂಭಿಸಿದ್ದಾರೆ ಎಂದು ತಿಳಿಸಿದ್ದಾರೆ. ಆದರೆ ಅವರು ಅಂತಿಮವಾಗಿ ಪ್ಲೇಯಿಂಗ್-11ನಲ್ಲಿ ಸ್ಥಾನ ಪಡೆಯುವರೋ ಇಲ್ಲವೋ ಎಂಬುದರ ಕುರಿತು ತಂಡದ ಮ್ಯಾನೇಜ್‌ಮೆಂಟ್ ಕೊನೆಯ ಕ್ಷಣದಲ್ಲಿ ನಿರ್ಧಾರ ಕೈಗೊಳ್ಳಲಿದೆ ಎಂದರು.

ಸಾಲ್ಟ್ ತಂಡಕ್ಕೆ ಮರಳಿದರೆ ಆರ್‌ಸಿಬಿ ಬ್ಯಾಟಿಂಗ್ ವಿಭಾಗಕ್ಕೆ ದೊಡ್ಡ ಬಲ ಸಿಗಲಿದೆ. ಈ ಸೀಸನ್‌ನಲ್ಲಿ ಅವರು ಪವರ್‌ಪ್ಲೇ ಓವರ್‌ಗಳಲ್ಲೇ ಬೌಲರ್‌ಗಳ ಮೇಲೆ ಅಬ್ಬರಿಸಿ ವೇಗದ ಆರಂಭ ನೀಡುತ್ತಿದ್ದರು. ಹೀಗಾಗಿ ಪ್ಲೇಆಫ್‌ನಂತಹ ಮಹತ್ವದ ಪಂದ್ಯದಲ್ಲಿ ಅವರ ಅನುಭವ ಮತ್ತು ಆಕ್ರಮಣಕಾರಿ ಆಟ ತಂಡಕ್ಕೆ ನೆರವಾಗಬಹುದು.
ಇನ್ನೊಂದೆಡೆ, ಜಾಕೋಬ್ ಗಾಯಗೊಂಡಿರುವುದು ಆರ್‌ಸಿಬಿಗೆ ಹಿನ್ನಡೆಯಾಗಿತ್ತು. ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಎಡಗೈ ಉಂಗುರದ ಬೆರಳಿಗೆ ಗಾಯವಾದ ಕಾರಣ ಅವರು ಹೊರಬಿದ್ದಿದ್ದರು. ಸಾಲ್ಟ್ ಸಂಪೂರ್ಣ ಫಿಟ್ ಆಗಿ ಕಣಕ್ಕಿಳಿದರೆ, ತಂಡದ ಬ್ಯಾಟಿಂಗ್ ಕ್ರಮಾಂಕ ಮತ್ತೆ ಸಮತೋಲನಕ್ಕೆ ಬರಲಿದೆ.
ಲೀಗ್ ಹಂತದಲ್ಲಿ ಉತ್ತಮ ಪ್ರದರ್ಶನ ನೀಡಿರುವ ಆರ್‌ಸಿಬಿ, ಇಂದಿನ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ ಗೆದ್ದರೆ ನೇರವಾಗಿ ಫೈನಲ್ ಪ್ರವೇಶಿಸಲಿದೆ.
Sports
ನಾಳೆಯಿಂದ ಪ್ಲೇ ಆಫ್ ಹಣಾಹಣಿ
ಮುಂಬೈ: ಜಿದ್ದಾಜಿದ್ದಿಯಿಂದ ಕೂಡಿದ್ದ 19ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ನಿರ್ಣಾಯಕ ಹಂತಕ್ಕೆ ಬಂದು ನಿಂತಿದೆ.
10 ತಂಡಗಳ ಪೈಕಿ ಬೆಂಗಳೂರು, ಗುಜರಾತ್, ಹೈದರಾಬಾದ್ ಹಾಗೂ ರಾಜಸ್ಥಾನ್ ತಂಡಗಳು ಈ ಬಾರಿಯ ಪ್ಲೇ ಆಫ್ ಪ್ರವೇಶಿಸಿವೆ. ಉಳಿದ ಆರು ತಂಡಗಳು ಐಪಿಎಲ್ ಅಭಿಯಾನ ಮುಗಿಸಿವೆ.
ದ್ವಿತೀಯ ಸುತ್ತಿನಲ್ಲಿ, ಅಂದರೆ ಪ್ಲೇ ಆಫ್ ಸುತ್ತಿನಲ್ಲಿ ಒಟ್ಟು ನಾಲ್ಕು ಮ್ಯಾಚ್‌ಗಳು ನಡೆಯಲಿದೆ. ಪ್ಲೇ ಆಫ್ ಸುತ್ತಿನಲ್ಲಿ ಮೊದಲು ಮೊದಲ ಕ್ವಾಲಿಫೈಯರ್ ಪಂದ್ಯ ನಡೆಯಲಿದೆ. ಇದಾದ ಬಳಿಕ ಎಲಿಮಿನೇಟರ್ ಪಂದ್ಯ ನಡೆಯಲಿದೆ.
ಮೇ.26 ರಂದು ಅಗ್ರ ಎರಡು ತಂಡಗಳಾದ ಹಾಲಿ ಚಾಂಪಿಯನ್ಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಟೈಟಾನ್ಸ್ ನಡುವೆ ಧರ್ಮಶಾಲಾದಲ್ಲಿ ಮೊದಲ ಕ್ವಾಲಿಫೈಯರ್ ಪಂದ್ಯ ನಡೆಯಲಿದೆ.

ಈ ಪಂದ್ಯದಲ್ಲಿ ಗೆದ್ದ ತಂಡ ಮೇ.31ರಂದು ಅಹಮದಾಬಾದ್‌ನಲ್ಲಿ ನಡೆಯಲಿರುವ ಫೈನಲ್ ಪಂದ್ಯಕ್ಕೆ ನೇರವಾಗಿ ಎಂಟ್ರಿ ಕೊಡಲಿದೆ. ಸೋತ ತಂಡಕ್ಕೆ ಮತ್ತೊಂದು ಅವಕಾಶ ಇರುತ್ತದೆ.
ಮೇ.27 ರಂದು ಹೈದರಾಬಾದ್ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡಗಳು ಎಲಿಮಿನೇಟರ್ ಪಂದ್ಯದಲ್ಲಿ ಕಾದಾಟ ನಡೆಸಲಿವೆ.
ಈ ಪಂದ್ಯ ನ್ಯೂ ಚಂಢೀಗಡದಲ್ಲಿ ನಡೆಯಲಿದ್ದು, ಗೆದ್ದ ತಂಡ ಕ್ವಾಲಿಫೈಯರ್ -2ಕ್ಕೆ ಲಗ್ಗೆ ಇಡಲಿದೆ. ಸೋತ ತಂಡ ಟೂರ್ನಿಯಿಂದ ಹೊರಬೀಳಲಿದೆ. ಹಾಗೆಯೇ ಗೆಲ್ಲುವ ತಂಡ ಮೊದಲ ಕ್ವಾಲಿಫೈಯರ್‌ನಲ್ಲಿ ಸೋತ ತಂಡದೊಡನೆ ದ್ವಿತೀಯ ಕ್ವಾಲಿಫೈಯರ್ ಪಂದ್ಯವಾಡಲಿದೆ.
ದ್ವಿತೀಯ ಕ್ವಾಲಿಫೈಯರ್ ಪಂದ್ಯದಲ್ಲಿ ಗೆಲ್ಲುವ ತಂಡ ಫೈನಲ್‌ಗೆ ಪ್ರವೇಶಿಸುತ್ತದೆ. ಮೇ.31 ರಂದು ನಡೆಯಲಿರುವ ಫೈನಲ್‌ನಲ್ಲಿ ಮೊದಲ ಕ್ವಾಲಿಫೈಯರ್ ಹಾಗೂ ದ್ವಿತೀಯ ಕ್ವಾಲಿಫೈಯರ್‌ನಲ್ಲಿ ಗೆದ್ದ ತಂಡಗಳು ಮುಖಾಮುಖಿಯಾಗಲಿದೆ.
ವೇಳಾಪಟ್ಟಿ ಹೀಗಿದೆ:
ಮೇ.26: ಕ್ವಾಲಿಫೈಯರ್ 1-ಆರ್‌ಸಿಬಿ v/s ಜಿಟಿ
ಸ್ಥಳ: ಎಚ್‌ಪಿಸಿಎ ಸ್ಟೇಡಿಯಂ, ಧರ್ಮಶಾಲಾ
ಮೇ 27: ಎಲಿಮಿನೇಟರ್- ಎಸ್‌ಆರ್‌ಹೆಚ್ ವರ್ಸಸ್ ಆರ್‌ಆರ್-ಸ್ಥಳ: ಮಹಾರಾಜ ಯಾದವೀಂದ್ರ ಸಿಂಗ್ ಸ್ಟೇಡಿಯಂ, ಮುಲ್ಲನ್‌ಪುರ್ (ನ್ಯೂ ಚಂಡೀಗಢ್)
ಮೇ.29: ಕ್ವಾಲಿಫೈಯರ್ 2- ಕ್ವಾಲಿಫೈಯರ್ 1ರಲ್ಲಿ
ಸೋತ ತಂಡ ವರ್ಸಸ್ ಎಲಿಮಿನೇಟರ್ ಪಂದ್ಯದಲ್ಲಿ ಗೆದ್ದ ತಂಡ, ಸ್ಥಳ: ನ್ಯೂ ಚಂಡೀಗಢ್)
ಮೇ .31: ಫೈನಲ್: ಕ್ವಾಲಿಫೈಯರ್ 2ವರ್ಸಸ್ ಕ್ವಾಲಿಫೈಯರ್ 2ನಲ್ಲಿ ಗೆದ್ದ ತಂಡ. ಸ್ಥಳ: ನರೇಂದ್ರ ಮೋದಿ ಸ್ಟೇಡಿಯಂ, ಅಹಮದಾಬಾದ್.
Sports
ಅಹಮದಾಬಾದ್‌ನಲ್ಲಿ ಸಿಎಸ್‌ಕೆಗೆ ಸೋಲು: ಗಾಯಕ್ವಾಡ್‌ಗೆ 24 ರೂ. ಲಕ್ಷ ದಂಡ
-
Mysore21 hours agoಹೊಲದಲ್ಲಿ ಕಳೆ ಕೀಳುತ್ತಿದ್ದ ವೇಳೆ ಸಿಡಿಲು ಬಡಿದು ಮಹಿಳೆ ಸಾ*ವು
-
Kodagu22 hours agoರಾಜಕೀಯ ಪಕ್ಷಗಳಿಗೆ ಜನಸಾಮಾನ್ಯರ ಒಳಿತಿಗಿಂತ ಅಧಿಕಾರವೇ ಮುಖ್ಯವಾಗಿದೆ : ಕೆ.ಪಿ.ಬಾಲಸುಬ್ರಹ್ಮಣ್ಯ ಬೇಸರ
-
Kodagu23 hours agoಪೊನ್ನಂಪೇಟೆ ಪ್ಯಾಕ್ಸ್ ಅಧ್ಯಕ್ಷರಾಗಿ ಕೋಳೆರ ಸಿ. ದಿನು ಆಯ್ಕೆ
-
Special6 hours agoಗೃಹಲಕ್ಷ್ಮಿ ಯೋಜನೆಯಲ್ಲಿ 1.04 ಲಕ್ಷ ಅನರ್ಹ ಫಲಾನುಭವಿಗಳ ಪತ್ತೆ: ಸರ್ಕಾರದಿಂದ ಪರಿಶೀಲನೆ!
-
Chamarajanagar22 hours agoಕೋಡಿಮೋಳೆ ಗ್ರಾಮದಲ್ಲಿ ಭಗೀರಥ ಜಯಂತಿ ಆಚರಣೆ
-
Kodagu22 hours agoಬ್ಯಾಡಗೊಟ್ಟ, ದೊಡ್ಡಕುಂದ ಸೇರಿದಂತೆ ವಿವಿಧೆಡೆ ಮೇ.30 ರಂದು ವಿದ್ಯುತ್ ವ್ಯತ್ಯಯ
-
Kodagu21 hours agoವರ್ಕ್ಶಾಪ್ ಮಾಲೀಕರ ಸಂಘದ ಅಧ್ಯಕ್ಷರಾಗಿ ಮಣಿಕಂಠನ್ ಆಯ್ಕೆ
-
Chikmagalur21 hours agoಜಯಪುರದಲ್ಲಿ ಮನೆ ಕಳ್ಳತನ : ₹2.04 ಲಕ್ಷ ಮೌಲ್ಯದ ಚಿನ್ನಾಭರಣ, ನಗದು ದೋಚಿಕೆ

