Chikmagalur
ಮರ ಬಿದ್ದು 2 ಮನೆಗಳಿಗೆ ಹಾನಿ
ಚಿಕ್ಕಮಗಳೂರು : ಕಾಫಿ ನಾಡು ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದಲ್ಲಿ ಬಿರುಗಾಳಿ ಮಳೆ ಆರ್ಭಟ ಮುಂದುವರಿದಿದ್ದು ಸಾಲು ಸಾಲು ಅವಾಂತರಗಳನ್ನ ಸೃಷ್ಟಿಸುತ್ತಿದೆ.

ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಯಡದಂಟೆ ಗ್ರಾಮದಲ್ಲಿ ಭಾರೀ ಬಿರುಗಾಳಿಗೆ ಬೃಹತ್ ಗಾತ್ರದ ಅಕೇಶಿಯ ಮರವೊಂದು ಮುರಿದು ಮನೆಯ ಮೇಲೆ ಬಿದ್ದ ಪರಿಣಾಮವಾಗಿ ಮನ್ವಿತಾ ಅಫ್ರಿದ್ ಮತ್ತು ರಫೀಕ್ ಎಂಬುವವರ ಮನೆಗಳ ಮೇಲೆ ಮರ ಬಿದ್ದಿದ್ದರಿಂದ ಮನೆಯ ಮೇಲ್ಛಾವಣಿ ಸಂಪೂರ್ಣವಾಗಿ ಹಾನಿಯಾಗಿದ್ದು. ಮನೆಯ ಮುಂದೆ ನಿಲ್ಲಿಸಿದ್ದ ಕಾರಿಗೂ ಹಾನಿಯಾಗಿದೆ. ಇನ್ನೂ ವಿದ್ಯುತ್ ಕಂಬಗಳು ಕೂಡಾ ಮುರಿದು ಬಿದ್ದು. ವಿದ್ಯುತ್ ವ್ಯತ್ಯಯ ಉಂಟಾಗಿ ಜನ ಪರದಾಟ ಪಡುವಂತಾಗಿದೆ.
Chikmagalur
ದರ್ಶನ್ ಫೋಟೋ ಹಿಡಿದು ಧರ್ಮಸ್ಥಳಕ್ಕೆ ಪಾದಯಾತ್ರೆ ಹೊರಟ ಸುದೀಪ್…!
ಚಿಕ್ಕಮಗಳೂರು: ಕಾಫಿನಾಡಿನ ದರ್ಶನ್ ಅಭಿಮಾನಿ ಸುದೀಪ್ ಎಂಬಾತ ಸ್ಯಾಂಡಲ್‌ವುಡ್ ನಟ ದರ್ಶನ್ ಶೀಘ್ರವೇ ಜೈಲಿನಿಂದ ರಿಲೀಸ್ ಆಗಲಿ ಎಂದು ದರ್ಶನ್ ಫೋಟೋ ಹಿಡಿದು ಸುಮಾರು 100 ಕಿ.ಮೀ. ಪಾದಯಾತ್ರೆ ಹೊರಟಿದ್ದಾರೆ.
ಫೆ.16ರಂದು ಹುಟ್ಟುಹಬ್ಬ ದರ್ಶನ್ ಇರಲಿದ್ದು, ಶೀಘ್ರದಲ್ಲಿಯೇ ಜೈಲಿನಿಂದ ಹೊರಬರಲಿ ಎಂಬ ಆಶಯದೊಂದಿಗೆ ಧರ್ಮಸ್ಥಳಕ್ಕೆ ಪಾದಯಾತ್ರೆ ಮಾಡುತ್ತಿದ್ದಾರೆ.

ಸುದೀಪ್ ಚಿಕ್ಕಮಗಳೂರು ನಗರದ ಹಿರೇಮಗಳೂರಿನ ನಿವಾಸಿಯಾಗಿದ್ದು, ನಾಳೆ ಬೆಳಗ್ಗೆ ಧರ್ಮಸ್ಥಳ ತಲುಪಲಿದ್ದಾರೆ.
Chikmagalur
ಭದ್ರಾ ನದಿಯಲ್ಲಿ ಈಜಲು ತೆರಳಿದ್ದ ಇಬ್ಬರು ಯುವಕರು ನೀರು ಪಾಲು
ಚಿಕ್ಕಮಗಳೂರು : ಭದ್ರಾ ನದಿಯಲ್ಲಿ ಈಜಲು ತೆರಳಿದ್ದ ಇಬ್ಬರು ಯುವಕರು ಭದ್ರಾ ನದಿಯಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಕಳಸ ತಾಲೂಕಿನ ಬಾಳೆಹೊಳೆ ಸಮೀಪ ನಡೆದಿದೆ.

ಅಭಿಷೇಕ್ (27) ಹಾಗೂ ಯೋಗೀಶ್ (17) ಮೃತ ದುರ್ದೈವಿಗಳು.
ಮೃತ ಯುವಕರಿಬ್ಬರು ಮೂಲತಃ ಕೊಡಗು ಜಿಲ್ಲೆಯವರು ಎಂದು ತಿಳಿದುಬಂದಿದೆ.
ಮೃತ ಅಭಿಷೇಕ್ ಅಕ್ಕ ಕಳಸದ ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದರು. ಹೀಗಾಗಿ ಅವರ ಮನೆಗೆ ಬಂದಿದ್ದ. ಅಲ್ಲಿಂದ ಯೋಗೀಶ್ ಹಾಗೂ ಅಭಿಷೇಕ್ ಇಬ್ಬರು ಭದ್ರಾ ನದಿಯಲ್ಲಿ ಈಜಲು ಹೋದಾಗ ಭದ್ರಾ ನದಿಯ ಆಳದ ಅರಿವಿಲ್ಲದ ಕಾರಣ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.

ಸ್ಥಳಕ್ಕೆ ಕಳಸ ಪೊಲೀಸರು ಭೇಟಿ ನೀಡಿ ಅಗ್ನಿಶಾಮಕ ಸಿಬ್ಬಂದಿ ಹಾಗೂ ಸ್ಥಳೀಯ ಈಜು ತಜ್ಞರ ನೆರವಿನಿಂದ ಮೃತ ದೇಹಕ್ಕಾಗಿ ಶೋಧ ನಡೆಸುತ್ತಿದ್ದಾರೆ. ಆದರೆ ಈವರೆಗೂ ಮೃತದೇಹ ಪತ್ತೆಯಾಗಿಲ್ಲ. ಘಟನೆ ಸಂಬಂಧ ಕಳಸ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಷಯ ತಿಳಿದು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಸಂಜೆಯಾದ ಕಾರಣ ಮೃತದೇಹದ ಶೋಧ ಕಾರ್ಯವನ್ನ ನಿಲ್ಲಿಸಲಿರುವ ಪೊಲೀಸರು ನಾಳೆ ಮತ್ತೆ ಹುಡುಕಾಟ ಆರಂಭಿಸಲಿದ್ದಾರೆ ಎಂದು ತಿಳಿದುಬಂದಿದೆ.
Chikmagalur
ಎನ್‌ಡಿಪಿಎಸ್ ಪ್ರಕರಣದಲ್ಲಿ ಆರೋಪಿಯ ಬಂಧನ
ಚಿಕ್ಕಮಗಳೂರು: ಎನ್‌ಡಿಪಿಎಸ್ ಪ್ರಕರಣದಲ್ಲಿ ಆರೋಪಿಯನ್ನು ಬಂಧಿಸಿ 3 ಲಕ್ಷ ರೂ. ಮೌಲ್ಯದ 5 ಕೆ.ಜಿ. 850 ಗ್ರಾಂ. ತೂಕದ ಗಾಂಜಾ ವಶಪಡಿಸಿಕೊಳ್ಳಲಾಗಿದೆ.
ನರಸಿಂಹರಾಜಪುರ ತಾಲೂಕು ಕಟ್ಟಿನ ಮನೆಯ ಹಾಲಿ ಮಾಗಡಿ ತಾಲೂಕು ಸೋಲೂರು ವಾಸಿ ವಿಜಯಕುಮಾರನನ್ನು ಬಂಧಿಸಲಾಗಿದೆ.

ಆರೋಪಿಯಿಂದ ಚಿಕ್ಕಮಗಳೂರು ನಗರದ ರೈಲ್ವೆ ಸ್ಟೇಷನ್ ಸಮೀಪ 5 ಕೆಜಿ 850 ಗ್ರಾಂ ತೂಕವುಳ್ಳ ಅಂದಾಜು 3,00,000 ರೂ. ಮೌಲ್ಯದ ಗಾಂಜಾ ಸೊಪ್ಪನ್ನು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ನಗರ ಪೊಲೀಸ್ ನಿರೀಕ್ಷಕ ಅಭಯ್ ಪ್ರಕಾಶ್ ಸೋಮನಾಳ್ ಪಿಎಸ್ಐ (ಕಾ&ಸು) ಶಂಭುಲಿಂಗನಗೌಡ, ಪಿಎಸ್ಐ (ತನಿಖೆ) ಧನರಾಜ್ ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು.
-
Mandya17 hours agoಬೃಹತ್ ಹಳ್ಳವಿದ್ದ ಕ್ವಾರಿ ಜಾಗದಲ್ಲಿ ನಿವೇಶನ ಮಂಜೂರಾತಿಗೆ ಸಿದ್ದತೆ : ಕ್ರೀಡಾ ತರಬೇತಿಗೆ ಮೀಸಲಿಡುವಂತೆ ಕ್ರೀಡಾಪಟುಗಳ ಒತ್ತಾಯ
-
Politics18 hours agoನಮ್ಮದು ನುಡಿದಂತೆ ನಡೆದ ಸರ್ಕಾರ, ನಮ್ಮ ಸರ್ಕಾರದ ಸಾಧನೆ ಹೇಳಲು 1 ದಿನ ಸಾಕಾಗಲ್ಲ: ಸಿಎಂ ಸಿದ್ದರಾಮಯ್ಯ
-
Chikmagalur15 hours agoಭದ್ರಾ ನದಿಯಲ್ಲಿ ಈಜಲು ತೆರಳಿದ್ದ ಇಬ್ಬರು ಯುವಕರು ನೀರು ಪಾಲು
-
Special14 hours agoಮೆಟ್ರಿಕ್ ನಂತರ ₹20,000ದವರೆಗೆ ವಿದ್ಯಾರ್ಥಿವೇತನ: ಸಂಪೂರ್ಣ ಮಾಹಿತಿ!
-
Politics14 hours agoಇ-ಸ್ವತ್ತು ತಾಂತ್ರಿಕ ತೊಂದರೆಗೊಳಗಾಗಿರುವರು ಆಯಾಯ ಜಿಲ್ಲೆಯ CEO ಮೂಲಕ ಮೇಲ್ಮನವಿ ಸಲ್ಲಿಸಲು ಅವಕಾಶ: ಪ್ರಿಯಾಂಕ್ ಖರ್ಗೆ
-
Hassan1 hour agoನಿಗೂಢ ನಾಪತ್ತೆಯ ಪ್ರಕರಣಕ್ಕೆ ಬಹುದೊಡ್ಡ ಮೇಜರ್ ಟ್ವಿಸ್ಟ್ : ಮಹಿಳೆ ಪೊಲೀಸರ ವಶಕ್ಕೆ,
-
Chikmagalur15 hours agoದರ್ಶನ್ ಫೋಟೋ ಹಿಡಿದು ಧರ್ಮಸ್ಥಳಕ್ಕೆ ಪಾದಯಾತ್ರೆ ಹೊರಟ ಸುದೀಪ್…!
-
Chamarajanagar22 hours agoಬೈಕ್–ಕೆಎಸ್ಆರ್ಟಿಸಿ ಬಸ್ ಅಪಘಾತ; ವ್ಯಕ್ತಿ ಸಾವು
