Connect with us

National - International

ಭಾರತದಿಂದ ಮಾಲ್ಡೀವ್ಸ್‌ಗೆ 4,850 ಕೋಟಿ ಸಾಲ ಘೋಷಣೆ: ಪ್ರಧಾನಿ ಮೋದಿ

Published

on

ಮಾಲೆ: ಭಾರತ ಹಾಗೂ  ಮಾಲ್ಡೀವ್ಸ್ ತಮ್ಮ ದ್ವಿಪಕ್ಷೀಯ ಸಂಬಂಧಗಳಲ್ಲಿ ಮಹತ್ವದ ಮೈಲಿಗಲ್ಲನ್ನು ಸ್ಥಾಪಿಸಿದ್ದು, ರಾಜತಾಂತ್ರಿಕ ಸಂಬಂಧಗಳ 60ನೇ ವರ್ಷವನ್ನು ಆಚರಿಸುತ್ತಿದೆ. ಈ ವೇಳೆ  ಪ್ರಧಾನಿ ನರೇಂದ್ರ ಮೋದಿ ಅವರು ಎರಡೂ ರಾಷ್ಟ್ರಗಳ ಮಧ್ಯೆ ಶಾಶ್ವತ ಸ್ನೇಹದ ಮಹತ್ವವನ್ನು ಪುನರುಚ್ಚರಿಸಿದ್ದಾರೆ. ದ್ವೀಪ ರಾಷ್ಟ್ರದ ಪ್ರಮುಖ ಅಭಿವೃದ್ಧಿ ಯೋಜನೆಗಳನ್ನು ಬೆಂಬಲಿಸಲು 4,850 ಕೋಟಿ ರೂ. ಮೌಲ್ಯದ ಹೊಸ ಸಾಲವನ್ನು ಘೋಷಿಸಿದ್ದಾರೆ.

ಮಾಲ್ಡೀವ್ಸ್​ನ ಸ್ವಾತಂತ್ರ್ಯ ದಿನಾಚರಣೆಗೆ ಮುಖ್ಯ ಅತಿಥಿಯಾಗಿ ಭಾಗವಹಿಸಲು ಮಾಲೆಗೆ ತೆರಳಿರುವ ಭಾರತದ ಪ್ರಧಾನಿ ನರೇಂದ್ರ ಮೋದಿ ಭಾರತ-ಮಾಲ್ಡೀವ್ಸ್ ರಾಜತಾಂತ್ರಿಕ ಸಂಬಂಧಗಳನ್ನು ಶ್ಲಾಘಿಸಿದ್ದಾರೆ.

ಎರಡೂ ರಾಷ್ಟ್ರಗಳು ತಮ್ಮ ರಾಜತಾಂತ್ರಿಕ ಸಂಬಂಧಗಳ 60 ವರ್ಷಗಳನ್ನು ಆಚರಿಸುತ್ತಿವೆ. ಈ ಸಂಬಂಧಗಳ ಬೇರುಗಳು ಆ ಇತಿಹಾಸಕ್ಕಿಂತ ಹಳೆಯವು ಮತ್ತು ಸಮುದ್ರದಷ್ಟು ಆಳವಾಗಿವೆ. ನಮಗೆ ಯಾವಾಗಲೂ ಸ್ನೇಹವೇ ಮೊದಲು ಎಂದು ತಿಳಿಸಿದ್ದಾರೆ.

ಪ್ರಧಾನಿ ಮೋದಿ ಅವರು, ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಝು ಅವರೊಂದಿಗೆ  ಎರಡೂ ದೇಶಗಳ ಸಾಂಪ್ರದಾಯಿಕ ದೋಣಿಗಳನ್ನು ಒಳಗೊಂಡ ಸ್ಮರಣಾರ್ಥ ಅಂಚೆಚೀಟಿಗಳನ್ನು ಬಿಡುಗಡೆ ಮಾಡಿದರು. ಇದು ಅವರ ಹಂಚಿಕೆಯ ಕಡಲ ಪರಂಪರೆಯನ್ನು ಸಂಕೇತಿಸುತ್ತದೆ.  ನಾವು ಕೇವಲ ನೆರೆಹೊರೆಯವರಲ್ಲ, ಸಹ-ಪ್ರಯಾಣಿಕರು ಕೂಡ ಎಂಬುದನ್ನು ಇದು ಪ್ರತಿಬಿಂಬಿಸುತ್ತದೆ ಎಂದು ಹೇಳಿದ್ದಾರೆ.

ಭಾರತ, ಮಾಲ್ಡೀವ್ಸ್‌ಗೆ  4,850 ಕೋಟಿ ರೂ. ಸಾಲವನ್ನು ನೀಡಲು ತೀರ್ಮಾನಿಸಿದೆ. ಎರಡೂ ದೇಶಗಳ ನಡುವೆ ಮುಕ್ತ ವ್ಯಾಪಾರ ಒಪ್ಪಂದ ಆರಂಭವಾಗಿದೆ. ನಮ್ಮ ಆರ್ಥಿಕ ಪಾಲುದಾರಿಕೆಯನ್ನು ವೇಗಗೊಳಿಸಲು ನಾವು ಅನೇಕ ಕ್ರಮಗಳನ್ನು ತೆಗೆದುಕೊಂಡಿದ್ದೇವೆ. ನಮ್ಮ ಹಂಚಿಕೆಯ ಹೂಡಿಕೆಯನ್ನು ವೇಗಗೊಳಿಸಲು ನಾವು ಶೀಘ್ರದಲ್ಲೇ ದ್ವಿಪಕ್ಷೀಯ ಹೂಡಿಕೆ ಒಪ್ಪಂದವನ್ನು ಅಂತಿಮಗೊಳಿಸುವತ್ತ ಕೆಲಸ ಮಾಡುತ್ತೇವೆ. ಮುಕ್ತ ವ್ಯಾಪಾರ ಒಪ್ಪಂದದ ಕುರಿತಾದ ಮಾತುಕತೆಗಳು ಕೂಡ ಪ್ರಾರಂಭವಾಗಿದೆ ಎಂದು ತಿಳಿಸಿದ್ದಾರೆ.

Continue Reading

National - International

ಭಾರತ-ರಷ್ಯಾ ಆರ್ಥಿಕ ಬಲ ಹೆಚ್ಚಿಸಲು ವಿಷನ್- 2030: ಪಿಎಂ ಮೋದಿ-ಪುಟಿನ್‌ ಮಧ್ಯೆ ದ್ವಿಪಕ್ಷೀಯ ಒಪ್ಪಂದ

Published

on

ನವದೆಹಲಿ: ಭಾರತ ಮತ್ತು ರಷ್ಯಾ ಎರಡೂ ದೇಶಗಳ ನಡುವಿನ ಆರ್ಥಿಕ ಸಹಕಾರ ಹೆಚ್ಚಿಸಲು ವಿಷನ್ 2030  ದಾಖಲೆಗೆ ಸಹಿ ಹಾಕಿವೆ. ಈ ಮೂಲಕ ಉಭಯ ರಾಷ್ಟ್ರಗಳು ದ್ವಿಪಕ್ಷೀಯ ವ್ಯಾಪಾರ ಮತ್ತು ಹೂಡಿಕೆಯನ್ನು ಹೆಚ್ಚಿಸುವ  ಹಲವಾರು ವ್ಯಾಪಾರ ಮಾರ್ಗಗಳನ್ನ ತೆರೆಯುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ  ತಿಳಿಸಿದರು.

ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ಬಳಿಕ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮೋದಿ ಅವರು, ಆರ್ಥಿಕ ಸಹಕಾರವನ್ನು ಇನ್ನಷ್ಟು ಹೆಚ್ಚಿಸಲು, ನಾವು ʻವಿಷನ್ 2030ʼ ದಾಖಲೆಗೆ ಸಹಿ ಹಾಕಿದ್ದೇವೆ. ಇಂದು, ನಾವಿಬ್ಬರೂ ಭಾರತ-ರಷ್ಯಾ ವ್ಯಾಪಾರ ವೇದಿಕೆಯಲ್ಲಿ ಭಾಗವಹಿಸಿದ್ದೇವೆ. ಈ ಒಪ್ಪಂದವು ಆದ್ಯತೆಯ ಕ್ಷೇತ್ರಗಳಲ್ಲಿ ಬೆಳವಣಿಗೆಯನ್ನು ವೇಗಗೊಳಿಸುತ್ತದೆ. ಅಲ್ಲದೇ ಎರಡೂ ದೇಶಗಳ ನಡುವಿನ ದೀರ್ಘಕಾಲೀನ ಆರ್ಥಿಕ ಸಂಬಂಧವನ್ನು ಇನ್ನಷ್ಟು ಬಲಪಡಿಸುತ್ತದೆ. ಅಲ್ಲದೇ ಸಹ-ಉತ್ಪಾದನೆ ಮತ್ತು ಸಹ-ನಾವೀನ್ಯತೆಗಾಗಿ ಹೊಸ ಮಾರ್ಗಗಳನ್ನು ತೆರೆಯುತ್ತವೆ ಎಂಬ ವಿಶ್ವಾಸ ನನಗಿದೆ ಎಂದು  ಹೇಳಿದರು.

ಯುರೇಷಿಯನ್ ಆರ್ಥಿಕ ಒಕ್ಕೂಟದೊಂದಿಗೆ FTA ಅನ್ನು ಸಾಕಾರಗೊಳಿಸಲು ಎರಡೂ ದೇಶಗಳು ಹೊಸ ಕ್ರಮಗಳನ್ನ ತೆಗೆದುಕೊಳ್ಳುತ್ತಿವೆ ಎಂದರು. ಇದೇ ಸಮಯದಲ್ಲಿ ಭಯೋತ್ಪಾದನೆಯ ವಿಷಯದಲ್ಲಿ ಜಾಗತಿಕ ಏಕತೆಯನ್ನು ಕೋರಿದ ಪ್ರಧಾನಿ ಮೋದಿ, ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಭಾರತ – ರಷ್ಯಾ ಒಟ್ಟಾಗಿ ಸಾಗಲಿವೆ ಎಂದು ತಿಳಿಸಿದರು.

ಇನ್ನೂ ಜಂಟಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಪುಟಿನ್, ಭಾರತದಲ್ಲಿ ತಮಗೆ ನೀಡಿದ ಆತ್ಮೀಯ ಸ್ವಾಗತಕ್ಕಾಗಿ ಅಧ್ಯಕ್ಷೆ ದ್ರೌಪದಿ ಮುರ್ಮು ಮತ್ತು ಪ್ರಧಾನಿ ಮೋದಿ ಅವರಿಗೆ ಧನ್ಯವಾದ ಅರ್ಪಿಸಿದರು. ಭಾರತ ಮತ್ತು ರಷ್ಯಾ ನಡುವಿನ ಅಭಿವೃದ್ಧಿ ಹೆಚ್ಚಿಸಲು ನಾನು, ಪ್ರಧಾನಿ ಮೋದಿ ನಿಕಟವಾಗಿ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರು.

Continue Reading

National - International

ರಷ್ಯಾದ ನಾಗರಿಕರಿಗೆ 30 ದಿನಗಳ ಉಚಿತ ಇ-ಟೂರಿಸ್ಟ್‌ ವೀಸಾ : ಪಿಎಂ ಮೋದಿ

Published

on

ನವದೆಹಲಿ:  ಶೀಘ್ರದಲ್ಲೇ ಭಾರತವೂ,  ರಷ್ಯಾದ ನಾಗರಿಕರಿಗೆ 30 ದಿನಗಳ ಉಚಿತ ಇ-ಟೂರಿಸ್ಟ್‌ ವೀಸಾ  ಹಾಗೂ 30 ದಿನಗಳ ಗುಂಪು ಪ್ರವಾಸಿ (ಗ್ರೂಪ್‌ ಟೂರಿಸ್ಟ್‌ ವೀಸಾ – Group Tourist Visa) ನೀಡಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಣೆ ಮಾಡಿದ್ದಾರೆ.

ನವದೆಹಲಿಯಲ್ಲಿ ಇಂದು ನಡೆದ‌ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರವಾಸೋದ್ಯಮಕ್ಕೆ) ಸಂಬಂಧಿಸಿದಂತೆ ಮಹತ್ವದ ಘೋಷಣೆ ಹೊರಡಿಸಿದರು. ರಷ್ಯಾದ ನಾಗರಿಕರಿಗೆ ಇ-ಟೂರಿಸ್ಟ್‌ ವೀಸಾ ಮತ್ತು ಗುಂಪು ಪ್ರವಾಸಿ ವೀಸಾ ಸೇವೆಗಳನ್ನ ಶೀಘ್ರದಲ್ಲೇ ಆರಂಭಿಸಲಿದ್ದೇವೆ. ಈ ತೀರ್ಮಾನ ಪ್ರಕಟಿಸಲು ನನಗೆ ತುಂಬಾ ಹರ್ಷವಾಗಿದ್ದು, ಮುಂದಿನ 30 ದಿನಗಳಲ್ಲಿ ಸಕ್ರಿಯಗೊಳಿಸಲಾಗುವುದು ಎಂದು ಹೇಳಿದರು.

ಉಭಯ ದೇಶದ ನಾಗರಿಕರಿಗೆ ಇದು ನಿರ್ಣಾಯಕವಾಗಿದೆ. ಈ ನಿಟ್ಟಿನಲ್ಲಿ ಒಪ್ಪಂದಕ್ಕೆ ಸಹಿ ಹಾಕಲಾಗಿದೆ, ಈ ನಿರ್ಧಾರವು ಭಾರತ-ರಷ್ಯಾದ ಸಂಬಂಧವನ್ನು ಅದರಲ್ಲೂ ವಿಶೇಷವಾಗಿ ಪ್ರವಾಸೋದ್ಯಮ ಮತ್ತು ವ್ಯಾಪಾರ ಕ್ಷೇತ್ರದಲ್ಲಿನ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸುತ್ತದೆ ಎಂದು  ತಿಳಿಸಿದರು.

ಇ-ಟೂರಿಸ್ಟ್‌ ವೀಸಾ ಎಂದರೇನು?
ಇ-ಪ್ರವಾಸಿ ವೀಸಾ ಅಂದರೆ ವಿದೇಶಿ ಪ್ರವಾಸಿಗರು ಭಾರತಕ್ಕೆ ಭೇಟಿ ನೀಡಲು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ ಪಡೆಯುವ ಎಲೆಕ್ಟ್ರಾನಿಕ್ ವೀಸಾ. ಇದು ಸಂಪೂರ್ಣ ಆನ್‌ಲೈನ್‌ ಪ್ರಕ್ರಿಯೆ ಆಗಿರುತ್ತದೆ. ಇದನ್ನು ಪಡೆಯಲು ನೀವು ವೀಸಾ ಕಚೇರಿಗೆ ಭೇಟಿ ನೀಡುವ ಅಗತ್ಯ ಇರೋದಿಲ್ಲ. ಪ್ರವಾಸಿಗರು ಮನರಂಜನೆ, ಪ್ರಯಾಣ ಅಥವಾ ಸಂಬಂಧಿಕರನ್ನ ಭೇಟಿ ಮಾಡುವಂತಹ ಉದ್ದೇಶಗಳಿಗಾಗಿ ಇ-ಟೂರಿಸ್ಟ್‌ ವೀಸಾ ಪಡೆಯಲು ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸಿದ ಬಳಿಕ ಮುಂದೇನು?
ಇ-ಪ್ರವಾಸಿ ವೀಸಾಗಾಗಿ ಅರ್ಜಿ ಸಲ್ಲಿಸಿದ ಬಳಿಕ, ನೀವು ಇಮೇಲ್ ಮೂಲಕ ಎಲೆಕ್ಟ್ರಾನಿಕ್ ಪ್ರಯಾಣ ಅಧಿಕಾರವನ್ನು (ETA) ಅನ್ನು ಸ್ವೀಕರಿಸುತ್ತೀರಿ. ಈ ಅಧಿಕಾರವು ನಿಮ್ಮ ಪಾಸ್‌ಪೋರ್ಟ್‌ಗೆ ಎಲೆಕ್ಟ್ರಾನಿಕ್ ಆಗಿ ಲಿಂಕ್ ಮಾಡಲಾಗಿರುತ್ತದೆ. ಜೊತೆಗೆ ಭಾರತದ ಪ್ರವಾಸ ಕೈಗೊಳ್ಳಲು ಅನುವು ಮಾಡಿಕೊಡುತ್ತದೆ. ಈ ಪ್ರಕ್ರಿಯೆಯು ಸಾಂಪ್ರದಾಯಿಕ ವೀಸಾಗಳಿಗಿಂತ ಅಧಿಕ ಸರಳ ಮತ್ತು ವೇಗವಾಗಿ ನಡೆಯುತ್ತದೆ.
Continue Reading

National - International

ರಾಜಘಾಟ್‌ಗೆ ಭೇಟಿ ನೀಡಿ ಮಹಾತ್ಮ ಗಾಂಧೀಜಿ ಸಮಾಧಿಗೆ ನಮನ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್‌

Published

on

ನವದೆಹಲಿ:  ಭಾರತದ ಪ್ರವಾಸದಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮನ್ ಪುಟಿನ್ ಅವರು ಇಂದು ರಾಜಘಾಟ್ ಗೆ ಭೇಟಿ ನೀಡಿ ಮಹಾತ್ಮ ಗಾಂಧೀಜಿ  ಸಮಾಧಿಗೆ ಪುಷ್ಪ ನಮನ ಸಲ್ಲಿಸಿದ್ದಾರೆ.

ನವದೆಹಲಿಯಲ್ಲಿರುವ ರಾಜಘಾಟ್ ಗೆ ವ್ಲಾಡಿಮನ್ ಪುಟಿನ್ ಪುಷ್ಪ ನಮನ ಸಲ್ಲಿಸಿದ ಬಳಿಕ ದೆಹಲಿಯ ಹೈದರಾಬಾದ್ ಭವನಕ್ಕೆ ತೆರಳಿದ್ದಾರೆ.

ಇದಕ್ಕೂ ಮುನ್ನ ರಾಷ್ಟ್ರಪತಿ ಭವನಕ್ಕೆ ಭೇಟಿ ನೀಡಿದ ವ್ಲಾಡಿಮನ್ ಪುಟಿನ್ ಅವರನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಹಾಗೂ  ಪ್ರಧಾನಿ ನರೇಂದ್ರ ಮೋದಿ ಸ್ವಾಗತಿಸಿದ್ದಾರೆ. ನಂತರ ಪುಟಿನ್ ಭಾರತೀಯ ಸೇನೆಯಿಂದ ಗೌರವ ವಂದನೆ ಸ್ವೀಕಾರ ಮಾಡಿದ್ದಾರೆ.

Continue Reading

Trending

error: Content is protected !!