Chamarajanagar
ಬಿಡಾಡಿ ದನ, ಕರು, ನಾಯಿ, ಇತರೆ ಸಾಕುಪ್ರಾಣಿಗಳನ್ನು ರಸ್ತೆಗೆ ಬಿಡದಿರಲು ಸೂಚನೆ
ಚಾಮರಾಜನಗರ: ಗುಂಡ್ಲುಪೇಟೆ ಪಟ್ಟಣದ ವ್ಯಾಪ್ತಿಯ ರಸ್ತೆಗಳಲ್ಲಿ ಬಿಡಾಡಿ ದನ, ಕರು, ನಾಯಿ, ಹಂದಿಗಳನ್ನು ರಸ್ತೆಗೆ ಬಿಡುತ್ತಿರುವುದರಿಂದ ಸಾರ್ವಜನಿಕರಿಗೆ ಮತ್ತು ವಾಹನ ಸವಾರರ ಸಂಚಾರಕ್ಕೆ ತೊಂದರೆಯಾಗುತ್ತಿದು ಸಾಕು ಪ್ರಾಣಿಗಳ ಮಾಲೀಕರು ತಮ್ಮ ಮನೆಯಲ್ಲೇ ಸಾಕು ಪ್ರಾಣಿಗಳನ್ನು ಕಟ್ಟಿಹಾಕಿಕೊಂಡು ಸಾಕಬೇಕು. ಇಲ್ಲವಾದಲ್ಲಿ ಪುರಸಭೆ ಕಾಯ್ದೆ ಅನುಸಾರ ಕ್ರಮವಹಿಸಲಾಗುವುದು ಎಂದು ಪುರಸಭೆ ತಿಳಿಸಿದೆ.

ಗುಂಡ್ಲುಪೇಟೆ ಪಟ್ಟಣದ ಪ್ರಮುಖ ರಸ್ತೆಗಳಾದ, ಚಾಮರಾಜನಗರ ರಸ್ತೆ, ಕೋಡಹಳ್ಳಿ ಸರ್ಕಲ್, ಬಿ.ಎನ್. ರಸ್ತೆ, ಕೆ.ಆರ್.ಸಿ ರಸ್ತೆ, ಕ್ಯಾಲಿಕೆಟ್ ರಸ್ತೆ, ಊಟಿ ರಸ್ತೆ ಹಾಗೂ ವಿವಿಧ ಬಡಾವಣೆಗಳಲ್ಲಿ ಬಿಡಾಡಿ ದನ, ಕರು, ಹಂದಿ ಹಾಗೂ ಇತರೆ ಸಾಕು ಪ್ರಾಣಿಗಳು ರಸ್ತೆಯಲ್ಲಿ ಒಡಾಡುತ್ತಿರುವುದರಿಂದ ಸಾರ್ವಜನಿಕರಿಗೆ ಮತ್ತು ವಾಹನ ಸವಾರರ ಸಂಚಾರಕ್ಕೆ ತೊಂದರೆಯಾಗುವುದಲ್ಲದೇ ಅಪಘಾತ ಸಂಭವಿಸುವ ಸಾಧ್ಯತೆ ಹೆಚ್ಚಾಗಿರುತ್ತದೆ.
ಸದರಿ ಸಾಕು ಪ್ರಾಣಿಗಳ ಮಾಲೀಕರು ಸಾಕು ಪ್ರಾಣಿಗಳನ್ನು ತಮ್ಮ ತಮ್ಮ ಮನೆಯಲ್ಲಿ ಕಟ್ಟಿ ಹಾಕಿಕೊಂಡು ಸಾಕಬೇಕು. ತಪ್ಪಿದಲ್ಲಿ ಪುರಸಭಾ ಕಾಯ್ದೆ 1964ರ ಅಧಿನಿಯಮ ಕಲಂ (222), (223) ಮತ್ತು (239)ರ ರೀತ್ಯಾ ಸಾಕು ಪ್ರಾಣಿಗಳನ್ನು ಪುರಸಭೆ ವಶಕ್ಕೆ ಪಡೆದು ದಂಢ ವಿಧಿಸುವುದಲ್ಲದೇ ಪಿಂಜಾರ್ ಪೋಲ್‌ಗೆ ಬಿಡಲು ಕ್ರಮವಹಿಸಲಾಗುವುದು ಎಂದು ಪುರಸಭೆ ಅಧ್ಯಕ್ಷರು, ಮುಖ್ಯಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Chamarajanagar
ಕಾಂಗ್ರೆಸ್‌ನ ‘ಸಂಘಟನ್ ಸೃಜನ್ ಅಭಿಯಾನ’ಕ್ಕೆ ಶಾಸಕ ಎಚ್.ಎಂ.ಗಣೇಶಪ್ರಸಾದ್ ಚಾಲನೆ
ಗುಂಡ್ಲುಪೇಟೆ: ಜು.27: ಗ್ರಾಮದ ಮಟ್ಟದಿಂದ ಬಲಿಷ್ಠಗೊಳಿಸುವ ಉದ್ದೇಶದಿಂದ ದೇಶದಾದ್ಯಂತ ‘ಸಂಘಟನ್ ಸೃಜನ್ ಅಭಿಯಾನ’ ಆರಂಭಿಸಲಾಗಿದೆ ಎಂದು ಶಾಸಕ ಎಚ್.ಎಂ.ಗಣೇಶಪ್ರಸಾದ್ ತಿಳಿಸಿದರು.
ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಸಮಾಲೋಚನಾ ಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಸಂಘಟನೆಯನ್ನು ತಳಮಟ್ಟದಿಂದ ಇನ್ನಷ್ಟು ಸದೃಢಗೊಳಿಸುವ ಉದ್ದೇಶದಿಂದ ದೇಶವ್ಯಾಪಿ ಹಮ್ಮಿಕೊಂಡಿರುವ ‘ಸಂಘಟನ್ ಸೃಜನ್ ಅಭಿಯಾನ’ ವನ್ನು ಎಐಸಿಸಿ ವೀಕ್ಷಕರಾದ ಶಬರಿನಾಥನ್ ಹಾಗೂ ಶಾಸಕ ಎಚ್.ಎಂ.ಗಣೇಶಪ್ರಸಾದ್ ಉದ್ಘಾಟಿಸಿದರು.

ಸಭೆಯಲ್ಲಿ ಶಾಸಕ ಎಚ್.ಎಂ. ಗಣೇಶಪ್ರಸಾದ್ ಮಾತನಾಡಿ, ಕಾಂಗ್ರೆಸ್ ಪಕ್ಷದ ನಿಜವಾದ ಶಕ್ತಿ ಕಾರ್ಯಕರ್ತರ ಪರಿಶ್ರಮ, ಬದ್ಧತೆ ಹಾಗೂ ಜನಸೇವೆಯ ಮನೋಭಾವದಲ್ಲಿದೆ. ಕಾಂಗ್ರೆಸ್ ಪಕ್ಷದ ಸಂಘಟನೆಯನ್ನು ಗ್ರಾಮ ಮಟ್ಟದಿಂದ ಬಲಿಷ್ಠಗೊಳಿಸುವ ಉದ್ದೇಶದಿಂದ ದೇಶದಾದ್ಯಂತ ‘ಸಂಘಟನ್ ಸೃಜನ್ ಅಭಿಯಾನ’ ಆರಂಭಿಸಲಾಗಿದೆ. ಪ್ರತಿಯೊಬ್ಬ ಕಾರ್ಯಕರ್ತರೂ ಸಂಘಟಿತವಾಗಿ ಕೆಲಸ ಮಾಡುವ ಮೂಲಕ ಪಕ್ಷವನ್ನು ಮತ್ತಷ್ಟು ಬಲಪಡಿಸುವ ಜವಾಬ್ದಾರಿ ಹೊಂದಿದ್ದಾರೆ ಎಂದು ಅವರು ತಿಳಿಸಿದರು.
ಸಭೆಯಲ್ಲಿ ಮೈಸೂರು ಎಸ್ ಟಿ.ಸೋಮಶೇಖರ್, ಮಾಜಿ ಕಾಡಾ ಅಧ್ಯಕ್ಷ ಹಂಗಳ ನಂಜಪ್ಪ, ಚಾಮುಲ್ ನಿರ್ದೇಶಕ ಎಚ್.ಎಸ್.ನಂಜುಂಡಪ್ರಸಾದ್, ಅಣ್ಣಯ್ಯಸ್ವಾಮಿ, ನಾಜೀಮುದ್ದೀನ್, ಮುನಿರಾಜು, ಅಲತ್ತೂರು ಜಯರಾಂ, ವಿಷಕಂಠ ಮೂರ್ತಿ, ರಂಗೂಪುರ ಎಪಿಎಂಸಿ ಅಧ್ಯಕ್ಷ ನಾಗರಾಜು, ಬೇಗೂರು ಬ್ಲಾಕ್ ಕಾಂಗ್ರೆಸ್ ಹಾಗೂ ಗುಂಡ್ಲುಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ವಿವಿಧ ಘಟಕಗಳ ಪದಾಧಿಕಾರಿಗಳು, ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.
Chamarajanagar
ಕಾಡುಹಂದಿ ಬೇಟೆಗಾರರ ಜೊತೆ ಕೈ ಕಾಳಗ: ಗುಂಡು ಹಾರಿಸಿ ಓರ್ವನ ಸೆರೆ
ಹನೂರು : ಮಲೆ ಮಹದೇಶ್ವರ ವನ್ಯಜೀವಿಧಾಮದಲ್ಲಿ ಕಾಡುಹಂದಿ ಬೇಟೆಗಾರರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಗಳ ಜೊತೆ ಕೈಕಾಳಗ ನಡೆದು ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿದ್ದಂತೆ ಗುಂಡು ಹಾರಿಸಿ ಓರ್ವನನ್ನು ಬಂಧಿಸಿದ ಘಟನೆ ಸೋಮವಾರ ಜರುಗಿದೆ..ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ತಾಕೇರಿ ಗ್ರಾಮದ ಅನ್ವಿತ್ ಬಂಧಿತ ವ್ಯಕ್ತಿಯಾಗಿದ್ದು.
ದರ್ಶನ್, ಮಂಜ ಹಾಗೂ ಕಿರಣ್ ಎಂಬವರು ಸ್ಥಳದಿಂದ ಪರಾರಿಯಾಗಿದ್ದಾರೆ. ಹನೂರು ತಾಲೂಕಿನ ಮಲೆ ಮಹದೇಶ್ವರ ವನ್ಯಜೀವಿ ಧಾಮದ ಅರಣ್ಯ ಪ್ರದೇಶದಲ್ಲಿ ಕಾಡು ಹಂದಿ ಬೇಟೆಗೆ ಬಂದಿದ್ದ ಈ ನಾಲ್ವರ ಮೇಲೆ ಅರಣ್ಯ ಇಲಾಖೆ ಅಧಿಕಾರಿಗಳು ಸೋಮವಾರ ಬೆಳಗಿನ ಜಾವ ದಾಳಿ ನಡೆಸಿದ್ದಾರೆ. ಈ ವೇಳೆ ಆರೋಪಿಗಳು ಪರಾರಿಯಾಗಲು ಯತ್ನಿಸಿ ಕೈ ಕಾಳಗ ನಡೆಸುತ್ತಿದ್ದಂತೆ ಅನ್ವಿತ್ ಎಂಬಾತನ ಬಲಗಾಲಿಗೆ ಸ್ಲೈಡ್ ಆಕ್ಷನ್ ಗನ್‌ನಿಂದ ಗುಂಡು ಹಾರಿಸಿ ಬಂಧಿಸಿದ್ದಾರೆ.

ಎರಡು ಮೃತ ಕಾಡು ಹಂದಿಗಳು, ಒಂದು ಮಚ್ಚು, ಒಂದು ಮೊಬೈಲ್ ಹಾಗೂ ಕೃತ್ಯಕ್ಕೆ ಬಳಸಿದ್ದ ಆಲ್ಟೊ ಕಾರನ್ನು ಅರಣ್ಯ ಇಲಾಖೆ ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ.
Chamarajanagar
ಸುಳ್ಳು ದಾಖಲೆ ನೀಡಿ ಬಿಸಿಎಂ(ಬಿ) ಪ್ರಮಾಣಪತ್ರ ಪಡೆದ ಆರೋಪ: ತಹಶೀಲ್ದಾರ್‌ಗೆ ದೂರು
ಗುಂಡ್ಲುಪೇಟೆ: ಜು. 27: ಸುಳ್ಳು ದಾಖಲೆಗಳನ್ನು ಸಲ್ಲಿಸಿ ಹಿಂದುಳಿದ ವರ್ಗಗಳ ಬಿಸಿಎಂ(ಬಿ) ಪ್ರವರ್ಗದ ಪ್ರಮಾಣಪತ್ರ ಪಡೆದಿರುವ ಆರೋಪದಡಿ ಆಲತ್ತೂರು ಗ್ರಾಮದ ಕೆ. ರಾಜೇಶ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ತಹಶೀಲ್ದಾರ್ ತನ್ಮಯ್ ಅವರಿಗೆ ದೂರು ಸಲ್ಲಿಸಲಾಗಿದೆ.
ಆಲತ್ತೂರು ಗ್ರಾಮದ ಕೆ. ರಾಜೇಶ್ ಅವರು ಪಿಎಲ್‌ಡಿ ಬ್ಯಾಂಕ್ ಚುನಾವಣೆಯಲ್ಲಿ ಸ್ಪರ್ಧಿಸುವ ಉದ್ದೇಶದಿಂದ ಬಿಸಿಎಂ(ಬಿ) ಪ್ರವರ್ಗದ ಪ್ರಮಾಣಪತ್ರ ಪಡೆದಿದ್ದಾರೆ. ಆದರೆ ಅವರ ಕುಟುಂಬದ ವಾರ್ಷಿಕ ಆದಾಯ 50 ಲಕ್ಷ ರೂ. ಗೂ ಅಧಿಕವಾಗಿದ್ದು, ವಾಣಿಜ್ಯ ಬೆಳೆ ಹೊಗೆಸೊಪ್ಪು ಬೆಳೆಯ ಪರವಾನಗಿ ಹೊಂದಿರುವುದರ ಜೊತೆಗೆ ಕುಟುಂಬದ ಹೆಸರಿನಲ್ಲಿ 33 ಎಕರೆ 39 ಗುಂಟೆಯಷ್ಟು ಕೃಷಿ ಭೂಮಿ ಇದೆ ಎಂದು ಚೆನ್ನಮಲ್ಲಿಪುರ ಗ್ರಾಮದ ಬಸವಣ್ಣ. ಎಸ್ ದೂರಿನಲ್ಲಿ ಆರೋಪಿಸಿದ್ದಾರೆ.

ಸವಕನಹಳ್ಳಿ, ಆಲತ್ತೂರು ಹಾಗೂ ಮಂಚಹಳ್ಳಿ ಗ್ರಾಮಗಳ ವಿವಿಧ ಸರ್ವೆ ಸಂಖ್ಯೆಗಳಲ್ಲಿರುವ ಜಮೀನುಗಳು ರಾಜೇಶ್, ಅವರ ಪತ್ನಿ ಹಾಗೂ ಮಗನ ಹೆಸರಿನಲ್ಲಿ ದಾಖಲಾಗಿದ್ದು, ಇಂತಹ ಆಸ್ತಿ ಹೊಂದಿರುವ ಅವರು ಬಿಸಿಎಂ(ಬಿ) ಪ್ರಮಾಣಪತ್ರ ಪಡೆಯಲು ಅರ್ಹರಾಗಿರುವುದಿಲ್ಲ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಆದ್ದರಿಂದ ರಾಜೇಶ್ ಅವರಿಗೆ ನೀಡಿರುವ ಬಿಸಿಎಂ(ಬಿ) ಪ್ರಮಾಣಪತ್ರವನ್ನು ತಕ್ಷಣ ರದ್ದುಪಡಿಸಬೇಕು. ಅಲ್ಲದೆ, ಸ್ಥಳ ಪರಿಶೀಲನೆ ನಡೆಸದೆ ಪ್ರಮಾಣಪತ್ರ ನೀಡಲು ಶಿಫಾರಸು ಮಾಡಿದ ಕಸಬಾ ಹೋಬಳಿ ರಾಜಸ್ವ ನಿರೀಕ್ಷಕರು ಹಾಗೂ ಗ್ರಾಮ ಆಡಳಿತಾಧಿಕಾರಿಗಳ ವಿರುದ್ಧವೂ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ತಹಶೀಲ್ದಾರ್ ಅವರಿಗೆ ಸಲ್ಲಿಸಿರುವ ಮನವಿಯಲ್ಲಿ ಒತ್ತಾಯಿಸಲಾಗಿದೆ.
-
Chamarajanagar13 hours agoಅಕ್ರಮ ಪಡಿತರ ಅಕ್ಕಿ ಸಾಗಣೆ: ಆರೋಪಿ ಬಂಧನ
-
Chamarajanagar13 hours agoಸುಳ್ಳು ಜಾತಿ ಪ್ರಮಾಣ ಪತ್ರ ಪಡೆದ ನಿವೃತ್ತ ಅಧಿಕಾರಿಗಳ ಮೇಲೆ ಕ್ರಮಕ್ಕೆ ಆಗ್ರಹ
-
Manglore7 hours agoಖೋಟಾನೋಟು ಜಾಲ ಪ್ರಕರಣ: ಐನ್ನೂರರ ನೋಟುಗಳು ಮಾರುಕಟ್ಟೆಗೆ ತಲುಪುವ ಮೊದಲೇ ಬಯಲಾಯ್ತು ಹೈಟೆಕ್ ಸಂಚು!
-
Special5 hours agoNEET ಪ್ರತಿಭಟನೆ ವೇಳೆ ಜಂತರ್ ಮಂತರ್ ನಲ್ಲಿ ಅರಳಿದ ಪ್ರೀತಿ : ದೆಹಲಿ ವಿದ್ಯಾರ್ಥಿನಿಯನ್ನ ವಿವಾಹವಾದ ಬಿಹಾರ ಯುವಕ!!
-
Special4 hours agoಮತ್ತೊಬ್ಬಳು ನೀಟ್ ವಿದ್ಯಾರ್ಥಿನಿ ಆತ್ಮಹ*ತ್ಯೆ!!
-
Special6 hours agoಜಿರಳೆ ಪಕ್ಷಕ್ಕೆ 1 ಕೋಟಿ ದೇಣಿಗೆ, ಉಚಿತ ಕಾನೂನು ನೆರವು : ಕಪಿಲ್ ಸಿಬಲ್ ಘೋಷಣೆ!!
-
Hassan11 hours agoಮನೆಯಲ್ಲೇ ಕೈಚಳಕ: ಪ್ರಿಯಕರನಿಗೆ ಚಿನ್ನ-ನಗದು ಕೊಟ್ಟ ಸೊಸೆ ಬಂಧನ
-
State17 hours agoಮಾರ್ಫ್ ಫೋಟೋಗಳ ಬೆದರಿಕೆ: ₹48 ಲಕ್ಷ ಕಳೆದುಕೊಂಡ ಬೆಂಗಳೂರು ಮಹಿಳೆ, ಸೈಬರ್ ವಂಚಕರ ಹೊಸ ತಂತ್ರಕ್ಕೆ ಎಚ್ಚರ!!
