Crime
ಹಾಸನ: ತಂದೆ ಹಾಗೂ ಅಣ್ಣನನ್ನೇ ಕೊಲೆಗೈದ ದುರುಳ
ದೇವೇಗೌಡ (70), ಮಂಜುನಾಥ್ (50) ಕೊಲೆಯಾದವರು
ಮೋಹನ್ (47) ತಂದೆ ಹಾಗೂ ಅಣ್ಣನನ್ನೇ ಕೊಲೆಗೈದ ಆರೋಪಿ
ಹಾಸನ- ಆಸ್ತಿ ವಿಚಾರಕ್ಕೆ ಸಹೋದರನಿಂದ ತಂದೆ ಮತ್ತು ಅಣ್ಣನ ಬರ್ಬಕೊಲೆ
ಬರ್ಬರವಾಗಿ ಕೊಚ್ಚಿ ಕೊಲೆಗೈದ ಪಾಪಿ ಸಹೊದರ
ಹಾಸನ ಜಿಲ್ಲೆ ಹೊಳೆನರಸೀಪುರ ತಾಲ್ಲೂಕಿನ ಗಂಗೂರು ಗ್ರಾಮದಲ್ಲಿ ಘಟನೆ
ದೇವೇಗೌಡರ, ಮಂಜುನಾಥ ಕೊಲೆಯಾದ ತಂದೆ ಮಗ
ದೇವೇಗೌಡ ಪುತ್ರ ಮೋಹನ್ ನಿಂದಲೇ ಕೃತ್ಯ ಆರೋಪ
ಜೋಡಿ ಕೊಲೆಗೆ ಬೆಚ್ಚಿಬಿದ್ದ ಜನತೆ
ಹೊಳೆನರಸೀಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ

Crime
ಆಸ್ತಿಗಾಗಿ ಸಾರಿಗೆ ಇಲಾಖೆ ನೌಕರನ ಬರ್ಬರ ಹತ್ಯೆ
ಹಾಸನ: ಆಸ್ತಿ ವಿವಾದದ ಹಿನ್ನಲೆಯಲ್ಲಿ ಸಾರಿಗೆ ಇಲಾಖೆ ನೌಕರನನ್ನು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಹಾಸನ ಜಿಲ್ಲೆಯ ಆಲೂರು ತಾಲ್ಲೂಕು ವ್ಯಾಪ್ತಿಯ ರಾಜನಹಳ್ಳಿ ಗ್ರಾಮದಲ್ಲಿ ನಡೆದಿದೆ.

ರಾಜನಹಳ್ಳಿ ಗ್ರಾಮದ ನಿವಾಸಿ ಹಾಗೂ ಸಾರಿಗೆ ಇಲಾಖೆಯ ನೌಕರ ವೀರಪ್ಪ (58) ಕೊಲೆಯಾದ ವ್ಯಕ್ತಿ. ದಾಯಾದಿಗಳ ನಡುವೆ ನಡೆದ ಆಸ್ತಿ ಕಲಹವೇ ಹತ್ಯೆಗೆ ಕಾರಣವಾಗಿರಬಹುದು ಎಂದು ಕುಟುಂಬ ಸದಸ್ಯರು ಆರೋಪಿಸಿದ್ದಾರೆ.

ಮಂಗಳವಾರ ಆಲೂರಿನಲ್ಲಿ ಕೋರ್ಟ್ ಪ್ರಕರಣಕ್ಕೆ ಹಾಜರಾಗಿದ್ದ ವೀರಪ್ಪ ಅವರು ಬಳಿಕ ಜಮೀನಿನತ್ತ ತೆರಳಿದ್ದರು. ಇದೇ ವೇಳೆ ಹಿಂಬಾಲಿಸಿ ಬಂದ ದುಷ್ಕರ್ಮಿಗಳು ಅವರ ಮೇಲೆ ದಾಳಿ ನಡೆಸಿ, ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಸ್ಥಳದಿಂದ ಪರಾರಿಯಾಗಿದ್ದಾರೆ ಎನ್ನಲಾಗಿದೆ. ಪರಿಣಾಮ ವೀರಪ್ಪ ಅವರ ದೇಹ ಸಂಪೂರ್ಣ ಸುಟ್ಟು ಹೋಗಿದೆ.
ಘಟನೆಯ ಸುದ್ದಿ ತಿಳಿಯುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.
ಮಾಹಿತಿ ತಿಳಿದು ಸ್ಥಳಕ್ಕೆ ಹಾಸನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶುಭಾನ್ವಿತಾ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಘಟನೆ ಆಲೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದಾಖಲಾಗಿದ್ದು, ಪ್ರಕರಣ ದಾಖಲಿಸಿಕೊಂಡು ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
Crime
ಅನೈತಿಕ ಸಂಬಂಧಕ್ಕೆ ಅಡ್ಡಿ – ಸೈನೆಡ್ ನೀಡಿ ಕೊ*ಲೆ ಮಾಡಿದ ಇಬ್ಬರಿಗೆ ಜೀವಾವಧಿ ಶಿಕ್ಷೆ
ಮಡಿಕೇರಿ : ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತಿಯನ್ನು ಪ್ರಿಯಕರನೊಂದಿಗೆ ಸೇರಿ ಸೈನೆಡ್ ನೀಡಿ ಹತ್ಯೆಗೈದ ಮಹಿಳೆ ಹಾಗೂ ಆಕೆಯ ಪ್ರಿಯಕರನಿಗೆ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.
ಸೋಮವಾರಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಸೋಮವಾರಪೇಟೆ ನಿವಾಸಿ ಬಿ.ಡಿ. ಮುರಳಿ ಮತ್ತು ತಣ್ಣೀರುಹಳ್ಳ ಗ್ರಾಮದ ರಾಧ ಎಂಬಾಕೆಯ ನಡುವೆ ಅನೈತಿಕ ಸಂಬಂಧವಿತ್ತು. ಇವರ ಅನೈತಿಕ ಸಂಬಂಧಕ್ಕೆ ರಾಧಳ ಪತಿ ಸುರೇಶ ಎಂಬವರು ಅಡ್ಡಿಯಾಗಿದ್ದರಿಂದ ಅವರನ್ನು ಕೊಲೆ ಮಾಡಲು ರಾಧ ಮತ್ತು ಮುರಳಿ ಸಂಚು ರೂಪಿಸಿದ್ದರು. ಅದರಂತೆ ಮಂಗಳೂರಿನಲ್ಲಿ ಮೆಡಿಕಲ್ ರೆಪ್ ಆಗಿ ಕೆಲಸ ಮಾಡಿಕೊಂಡು, ಭೋಗ್ಯಕ್ಕೆ ಮನೆ ಮಾಡಿ ತಾತ್ಕಾಲಿಕ ವಾಸವಿದ್ದ ಮುರಳಿ ತಾ. ೧೭.೭.೨೦೧೯ ರಂದು ಮಹಾರಾಷ್ಟçದ ಸೊಲ್ಲಾಪುರದ ಮಲ್ಲಿಕಾರ್ಜುನ್ ಮೊಟಗಿ ಎಂಬವರೊಂದಿಗೆ ವಾಟ್ಸಾಪ್ ಮೂಲಕ ಪೊಟಾಷಿಯಂ ಸೈನೆಡ್ ಬಗ್ಗೆ ಚಾಟಿಂಗ್ ಮಾಡಿ ಅವರಿಂದ ೫೦೦ ಗ್ರಾಂ ಪೊಟಾಷಿಯಂ ಸೈನೆಡನ್ನು ಸೊಲ್ಲಾಪುರದಿಂದ ತನ್ನ ವಿಳಾಸಕ್ಕೆ ಕೊರಿಯರ್ ಮಾಡಿಸಿಕೊಂಡು

ಬಳಿಕ ಹೂ, ಕುಂಕುಮ ಖರೀದಿಸಿ ತಾನು ತರಿಸಿದ್ದ ಪೊಟಾಷಿಯಂ ಸೈನೆಡ್‌ನಲ್ಲಿ ಸ್ವಲ್ಪವನ್ನು ತೆಗೆದು ನೀರಿನಲ್ಲಿ ಹಾಕಿ ಮಿಶ್ರಣ ಮಾಡಿ, ಅದರೊಂದಿಗೆ ಹೂ, ಕುಂಕುಮ ಇಟ್ಟು ಅದರೊಂದಿಗೆ ಒಂದು ಪತ್ರವನ್ನು ಇಟ್ಟು ಅದರಲ್ಲಿ ಇದು ದೇವರ ಪ್ರಸಾದ ಮನೆಯ ಯಜಮಾನ ಮಾತ್ರ ಕುಡಿಯಬೇಕು ಎಂದು ಬರೆದು ಪ್ಯಾಕ್ ಮಾಡಿ ರಾಧಳ ಗಂಡ ಸುರೇಶ ಕೆಲಸ ಮಾಡುತ್ತಿದ್ದ ಸೋಮವಾರಪೇಟೆ ಪಟ್ಟಣದ ಹೊಟೇಲ್‌ಗೆ ಕೊರಿಯರ್ ಮಾಡಿದ್ದ. ಅದನ್ನು ರಾಧ ತಾ. ೪.೮.೨೦೧೯ ರಂದು ಸಂಜೆ ೬ ಗಂಟೆಗೆ ತನ್ನ ವಾಸದ ಮನೆಯಲ್ಲಿ ತನ್ನ ಗಂಡ ಸುರೇಶ ಬೇಡ ಎಂದರೂ ಕೂಡ ಬಿಡದೆ ದೇವರ ಪ್ರಸಾದ ಬೇಡ ಎನ್ನಬಾರದು ಎಂದು ಒತ್ತಾಯಪೂರ್ವಕವಾಗಿ ಪೊಟಾಷಿಯಂ ಸೈನೆಡ್ ಮಿಶ್ರಿತ ನೀರನ್ನು ಸುರೇಶ್‌ಗೆ ಕುಡಿಸಿ ಸುರೇಶನನ್ನು ಕೊಲೆ ಮಾಡಿ, ಉಳಿದಿದ್ದ ಸೈನೆಡ್ ಮಿಶ್ರಿತ ನೀರು ಹಾಗೂ ಪ್ಲಾಸ್ಟಿಕ್ ಡಬ್ಬವನ್ನು ಮನೆಯ ಹಿಂಬದಿ ನೀರಿನ ಒಲೆಗೆ ಹಾಕಿ ಸುಟ್ಟು ಹಾಕಿದ್ದಳು.
ಈ ಬಗ್ಗೆ ಪಿ.ಎಸ್.ಐ. ಶಿವಶಂಕರ್ ಪ್ರಕರಣ ದಾಖಲಿಸಿ ಮುರಳಿ ಹಾಗೂ ರಾಧ ವಿರುದ್ಧ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ನಡೆದು ಮುರಳಿ ಹಾಗೂ ರಾಧ ಸಂಚು ರೂಪಿಸಿ ಸೈನೆಡ್ ನೀಡಿ ಸುರೇಶನನ್ನು ಕೊಲೆ ಮಾಡಿ, ಸಾಕ್ಷ್ಯ ನಾಶಪಡಿಸಿದ ಆರೋಪ ಸಾಬೀತಾದ ಮೇರೆಗೆ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರಾದ ಹೊಸಮನಿ ಪುಂಡಲಿಕ್ ಅವರು, ಮುರಳಿ ಹಾಗೂ ರಾಧಗೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ಈ ಪ್ರಕರಣದಲ್ಲಿ ಸರಕಾರಿ ಅಭಿಯೋಜಕರಾದ ಕೆ.ಜಿ. ಅಶ್ವಿನಿ ವಾದ ಮಂಡಿಸಿದ್ದರು.
Crime
ಬೋಟಿಕ್ ತರಬೇತಿ ನೆಪದಲ್ಲಿ 12 ಲಕ್ಷ ರೂ. ವಂಚನೆ
ಮೈಸೂರು: ಡಿಸೈನಿಂಗ್ ಬೋಟಿಕ್ ತರಬೇತಿ ನೀಡಿ ವಿದೇಶಗಳ ಸರ್ಟಿಫಿಕೇಟ್ ನೀಡುವುದಾಗಿ ನಂಬಿಸಿ 12 ಲಕ್ಷ ರೂ. ವಂಚನೆ ಮಾಡಲಾಗಿದೆ.
ದೇವಾಂಶ್ ಬೋಟಿಕ್ ಮತ್ತು ರೆಂಟಲ್ ಸಂಸ್ಥೆಯ ಮಾಲೀಕರಾದ ಸುನಂದ ಮಾಲಾ ಹಾಗೂ ಬಾಲಬೊಮ್ಮ ಆರೋಪಿಗಳು.
ನವ್ಯ, ಜ್ಯೋತಿ, ರಕ್ಷಿತಾ, ಶ್ಯಾಮಲಾ, ಶೃತಿ, ಮಲ್ಲೇಶ್ವರಿ, ಉಷಾ ಸೇರಿದಂತೆ 8 ಮಂದಿ ವಂಚನೆಗೆ ಒಳಗಾಗಿದ್ದಾರೆ.

ಇವರಿಂದ ಆರೋಪಿಗಳು ಡಿಸೈನಿಂಗ್ ಬೋಟಿಕ್ ತರಬೇತಿ ನೀಡುವುದಾಗಿ ನಂಬಿಸಿ ತಲಾ 1 ಲಕ್ಷ ರೂ. ಹಣ ಪಡೆದು ಬಿಲ್ ನೀಡಿಲ್ಲ. ನಂತರ ಬಟ್ಟೆಗಳಿಗೆ ಎಂದು 60 ಸಾವಿರ ಪಡೆದು ತಾವುದೇ ತರಬೇತಿ ನೀಡದೆ ವಂಚಿಸಿದ್ದಾರೆಂದು ಆರೋಪಿಸಿದ್ದಾರೆ. ಅಲ್ಲದೆ 180 ದೇಶದ ಸರ್ಟಿಫಿಕೇಟ್ ಕೊಡುವುದಾಗಿ ಸಹ ನಂಬಿಸಿ ಮೋಸ ಮಾಡಿದ್ದಾರೆ.
ಈ ಸಂಬಂಧ ಕುವೆಂಪುನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
-
State12 hours agoತೆಂಗು ಬೆಳೆಗಾರರಿಗೆ ಸಿಹಿಸುದ್ದಿ: ಹೊಸ ತೋಟ ಸ್ಥಾಪನೆಗೆ ₹56 ಸಾವಿರ ಸಹಾಯಧನ!!
-
Chikmagalur10 hours agoಮೂಡಿಗೆರೆಯಲ್ಲಿ ಖೋಟಾ ನೋಟು ಚಲಾವಣೆ ಜಾಲ ಭೇದಿಸಿದ ಪೋಲಿಸರು: ಇಬ್ಬರ ಬಂಧನ, ₹18,000 ನಕಲಿ ಹಣ ವಶ!
-
National10 hours agoನೀಟ್ ವಿವಾದ: ಉನ್ನತ ಶಿಕ್ಷಣ ಕಾರ್ಯದರ್ಶಿ ವಿನೀತ್ ಜೋಶಿ ವಜಾ, ನರೇಶ್ ಗಂಗ್ವಾರ್ ನೇಮಕ
-
National6 hours agoನೀಟ್ ಪ್ರಕರಣ: ಎರಡು ಬೇಡಿಕೆ ಒಪ್ಪಿದ ಕೇಂದ್ರ, ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಸಿಜೆಪಿ ಪಟ್ಟು
-
Kodagu2 hours agoನಾಪೋಕ್ಲು ಹೋಬಳಿ ಕರ್ನಾಟಕ ರಕ್ಷಣಾ ವೇದಿಕೆ ನೂತನ ಪದಾಧಿಕಾರಿಗಳ ಆಯ್ಕೆ -ಅಧ್ಯಕ್ಷರಾಗಿ ಅನೀಫ್ ನೇಮಕ
-
Politics24 hours ago2002ರ ವಿವರ ಕಡ್ಡಾಯವಲ್ಲ, ಆದರೆ SIR ನಮೂನೆ ಸಲ್ಲಿಕೆ ಕಡ್ಡಾಯ: ಸಿಇಒ ಸ್ಪಷ್ಟನೆ
-
Chamarajanagar4 hours agoಹೊಂಗನೂರಿನಲ್ಲಿ ಶಾಲಾ–ಕಾಲೇಜು ವಿದ್ಯಾರ್ಥಿಗಳ ಪರದಾಟ: ಸಮಯಕ್ಕೆ ಬಸ್ ಇಲ್ಲದೆ ನಿತ್ಯ ಸಂಕಷ್ಟ
-
Kodagu2 hours ago₹24 ಲಕ್ಷ ವೆಚ್ಚದ 3 ಕಾಂಕ್ರೀಟ್ ರಸ್ತೆಗಳ ಲೋಕಾರ್ಪಣೆಗೊಳಿಸಿದ ಎ.ಎಸ್.ಪೊನ್ನಣ್ಣ
