Crime
ಸಂಭ್ರಮಾಚರಣೆ ವೇಳೆ RCB ಅಭಿಮಾನಿಗೆ ಚಾ*ಕು ಇರಿತ
ಬೆಂಗಳೂರು, ಜೂನ್ 4: ಆರ್ಸಿಬಿ (RCB) ತಂಡ ಚೊಚ್ಚಲ ಐಪಿಎಲ್ ಟ್ರೋಫಿ (IPL Trophy) ಎತ್ತಿಹಿಡಿದ ಬೆನ್ನಲ್ಲೇ ಬೆಂಗಳೂರು ನಗರದಾದ್ಯಂತ ಸಂಭ್ರಮಾಚರಣೆ ಮುಗಿಲುಮುಟ್ಟಿತು. ಹಲವೆಡೆ ಪಟಾಕಿಗಳನ್ನು ಸಿಡಿಸಿ ಜನ ಸಂಭ್ರಮಿಸಿದರೆ, ಇನ್ನು ಕೆಲವೆಡೆ ರಸ್ತೆಗಳಲ್ಲಿ ಘೋಷಣೆಗಳನ್ನು ಕೂಗುತ್ತಾ ಸಂಭ್ರಮ ಆಚರಿಸಿದರು. ಈ ಸಂದರ್ಭದಲ್ಲಿ, ಬೆಂಗಳೂರಿನ ಪೀಣ್ಯದ ಜಾಲಹಳ್ಳಿ ಕ್ರಾಸ್ ಬಳಿ ದುಷ್ಕರ್ಮಿಗಳ ಗುಂಪು ಕ್ರೌರ್ಯ ಮೆರೆದಿದೆ. ಸಂಭ್ರಮಾಚರಣೆ ವೇಳೆ ಯುವಕನಿಗೆ ಚಾಕು ಇರಿದು ಪರಾರಿಯಾಗಿದ್ದಾರೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಚೊಚ್ಚಲ ಐಪಿಎಲ್ ಟ್ರೋಫಿ ಎತ್ತಿ ಹಿಡಿದ ಬೆನ್ನಲ್ಲೇ ಬೆಂಗಳೂರಿನಲ್ಲಿ ರಾತ್ರಿಯಿಡೀ ಸಂಭ್ರಮಾಚರಣೆ ನೆರವೇರಿದೆ. ವಿವಿಧೆಡೆ ರಸ್ತೆಗಳಲ್ಲಿ ಘೋಷಣೆ ಕೂಗುತ್ತಾ ಅಭಿಮಾನಿಗಳು ಸಂಭ್ರಮಿಸಿದ್ದಾರೆ. ಈ ಸಂದರ್ಭದಲ್ಲಿ ದುಷ್ಕರ್ಮಿಗಳ ಗುಂಪೊಂದು ಯುವಕನಿಗೆ ಚಾಕು ಇರಿದ ಘಟನೆ ಜಾಲಹಳ್ಳಿ ಕ್ರಾಸ್ ಬಳಿ ನಡೆದಿದೆ.

Crime
ಜೀಪ್ ಹಾಗೂ ಬೈಕ್ ನಡುವೆ ಮುಖಾಮುಖಿ ಡಿಕ್ಕಿ : ಎಲ್‌ಎಲ್‌ಬಿ ವಿದ್ಯಾರ್ಥಿ ಸ್ಥಳದಲ್ಲೇ ಸಾ**ವು
ಹಾಸನ : ಜೀಪ್ ಹಾಗೂ ಬೈಕ್ ನಡುವೆ ಮುಖಾಮುಖಿ ಡಿಕ್ಕಿ
ಎಲ್‌ಎಲ್‌ಬಿ ವಿದ್ಯಾರ್ಥಿ ಸ್ಥಳದಲ್ಲೇ ಸಾವು
ಮತ್ತೋರ್ವ ಯುವಕನಿಗೆ ಗಂಭೀರ ಗಾಯ
ಚಂದನ್ (22) ಮೃತ ಎಲ್‌ಎಲ್‌ಬಿ ವಿದ್ಯಾರ್ಥಿ
ಹಾಸನ ಜಿಲ್ಲೆ, ಬೇಲೂರು ತಾಲ್ಲೂಕಿನ, ಹಿರಿಅಸಡೆ ಗ್ರಾಮದ ಬಳಿ ಘಟನೆ
ಪಕ್ಕದ ಮನೆಯ ಭರತ್ ಎಂಬುವವನ ಜೊತೆ KA-46-J-4594 ನಂಬರ್‌ನ ಬೈಕ್‌ನಲ್ಲಿ ಕಾಲೇಜಿಗೆ ತೆರಳುತ್ತಿದ್ದ ಚಂದನ್
ಕಾರ್ಮಿಕರನ್ನು ಕರೆದುಕೊಂಡು ಬರುತ್ತಿದ್ದ KA-13-M-2664 ನಂಬರ್‌ನ ಜೀಪ್ ನಡುವೆ ಸಂಭವಿಸಿದ ಅಪಘಾತ
ಸ್ಥಳದಲ್ಲೇ ಬೈಕ್‌ನಲ್ಲಿದ್ದ ಚಂದನ್ ಸಾವು
ಗಾಯಾಳು ಭರತ್ ಆಸ್ಪತ್ರೆಗೆ ರವಾನೆ
ಸ್ಥಳಕ್ಕೆ ಪೊಲೀಸರು ಭೇಟಿ, ಪರಿಶೀಲನೆ
ಅರೇಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ
Crime
ಹೆತ್ತ ತಾಯಿ ಕೊಲ್ಲಲು ತಾನಿದ್ದ ಮನೆಗೆ ಬೆಂಕಿ ಇಟ್ಟ ದುಷ್ಟ
ಮೈಸೂರು :
ಕುಡಿಯಲು ಹಣ ನೀಡದಿದ್ದಕ್ಕೆ ಮನೆಗೆ ಬೆಂಕಿ ಹಚ್ಚಿದ ಭೂಪ…!
ಬೆಂಕಿಯಿಂದ ತಾಯಿ ಬಚಾವ್, ಆರೋಪಿ ಅಂದರ್.
ಮೈಸೂರು ತಾಲೂಕಿನ ರಮ್ಮನಹಳ್ಳಿಯಲ್ಲಿ ಘಟನೆ.
ಶಿವಪ್ರಕಾಶ್ (26) ಮನೆಗೆ ಬೆಂಕಿ ಹಚ್ಚಿದ ಭೂಪ.
ರಮ್ಮನಹಳ್ಳಿಯಲ್ಲಿ ಸಣ್ಣ ಅಂಗಡಿ ಇಟ್ಟುಕೊಂಡಿರುವ ಕಲಾವತಿ.
ಕಲಾವತಿಗೆ ಇಬ್ಬರು ಮಕ್ಕಳು. ಈ ಪೈಕಿ ಎರಡನೇ ಪುತ್ರನೇ ಶಿವಪ್ರಕಾಶ್.
ಮತ್ತೊಂದು ಮದುವೆಯಾಗಿ ಪ್ರತ್ಯೇಕವಾಗಿರುವ ಪತಿ.
ಕುಡಿತದ ಚಟಕ್ಕೆ ಒಳಗಾಗಿರುವ ಶಿವಪ್ರಕಾಶ್ ನಿಂದ ಹಣಕ್ಕಾಗಿ ಕಿರುಕುಳ.
ಎರಡು ದಿನಗಳ ಹಿಂದೆ ತಾಯಿ ಬಳಿ ಹಣ ಕೇಳಿದ್ದ ಶಿವಪ್ರಕಾಶ್.
ಹಣ ಇಲ್ಲ ಎಂದಿದ್ದಕ್ಕೆ ತಾಯಿ ಮನೆ ಒಳಗೆ ಇದ್ದಾಗಲೇ ಹೊರಗಿನಿಂದ ಮನೆಗೆ ಬೆಂಕಿ ಹಚ್ಚಿರುವ ಶಿವಪ್ರಕಾಶ್.
ಈ ವೇಳೆ ಕಲಾವತಿಯನ್ನು ರಕ್ಷಿಸಿದ ಸ್ಥಳೀಯರು.
ಮನೆಯಲ್ಲಿದ್ದ 60 ಸಾವಿರ ಮೌಲ್ಯದ ಪದಾರ್ಥಗಳು ಬೆಂಕಿಗಾಹುತಿ.
ದಕ್ಷಿಣ ಠಾಣೆ ಪೊಲೀಸರಿಂದ ಆರೋಪಿ ಶಿವಪ್ರಕಾಶ್ ಬಂಧನ.
Crime
ಚಿನ್ನದಂಗಡಿ ಕ್ಳಳತನ ಮಾಡಿದ್ದನ್ನು ನೋಡಿದ ಹೋಟೆಲ್ ಮಾಲೀಕನ ಹ*ತ್ಯೆ..
ಮಂಡ್ಯ: ಚಿನ್ನದಂಗಡಿಗೆ ಕನ್ನ..ಕಳ್ಳತನ ಮಾಡಿದ್ದನ್ನು ನೋಡಿದ ಹೋಟೆಲ್ ಮಾಲೀಕನ ಹತ್ಯೆ..ಯಾಗಿರುವ ಘಟನೆ ಮಳವಳ್ಳಿ ತಾಲ್ಲೂಕಿನ
ಕಿರುಗಾವಲು ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಮಹದೇಶ್ವರ ಹೋಟೆಲ್ ಮಾಲೀಕ ಮಾದಪ್ಪ (60) ಕೊಲೆಯಾದ ವ್ಯಕ್ತಿ. ಹೋಟೆಲ್ ಪಕ್ಕದಲ್ಲೆ ಇದ್ದ ಮಹಾಲಕ್ಷ್ಮಿ ಜ್ಯುವೆಲರ್ಸ್ ಗೆ ಬೆಳಗ್ಗಿನ ಜಾವ 3 ಗಂಟೆ ವೇಳೆ ಕಳ್ಳರ ಗ್ಯಾಂಗ್ ಒಂದು ಎಂಟ್ರಿ ಕೊಟ್ಟು ಗ್ಯಾಸ್ ಕಟರ್ ಮೂಲಕ ಚಿನ್ನದಂಗಡಿ ಶಟರ್ ಓಪನ್ ಮಾಡಿ
ಚಿನ್ನಾಭರಣ ದೋಚಿದ್ದಾರೆ.

ಶಬ್ದ ಕೇಳಿ ಹೋಟೆಲ್ ನಿಂದ ಹೊರಬಂದ ಮಾದಪ್ಪ ಕಳ್ಳರ ಗ್ಯಾಂಗ್ ಅನ್ನು ನೋಡಿದ್ದಾರೆ.
ಈ ವೇಳೆ ಮಾದಪ್ಪನ ಕತ್ತು ಹಿಸುಕಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ಜೊತೆಗೆ ಹಣ ದೋಚಿ ಸಿಸಿ ಕ್ಯಾಮರಾ ಡಿವಿಆರ್ ಅನ್ನು ಖಾದಿಮರು ಹೊತ್ತೊಯ್ದಿದ್ದಾರೆ
ಸ್ಥಳಕ್ಕೆ ಮಂಡ್ಯ ಎಸ್ಪಿ ಮಲ್ಲಿಕಾರ್ಜುನ್ ಬಳದಂಡಿ ಹಾಗೂ ಕಿರುಗಾವಲು ಠಾಣಾ ಪೊಲೀಸರ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
ಈ ಸಂಭಂದ ಕಿರುಗಾವಲು ಠಾಣೆಯಲ್ಲಿ ಪ್ರಕರಣ ದಾಖಲೂಗೊಂಡಿದ್ದು ಕಳ್ಳರಿಗಾಗಿ ಹುಡುಕಾಟ ನಡೆಸಲಾಗಿದೆ.
-
State14 hours agoಡಿವೈಡರ್ಗೆ ಕಾರ್ ಡಿಕ್ಕಿ, ಹೊತ್ತಿ ಉರಿದ ಕಾರಿನೊಳಗೆ ಲೋಕಾಯುಕ್ತ ಇನ್ಸ್ಪೆಕ್ಟರ್ ಸಜೀವ ದಹನ
-
Hassan11 hours agoನಗರದ ಇಂಜಿನಿಯರ್ ಕಾಲೇಜು ಆವರಣದಲ್ಲಿ ಸರ್ಕಾರಿ ಸೇವೆಗಳ ಸಮರ್ಪಣ ಸಮಾವೇಶ
-
Hassan14 hours agoಅಂಬೇಡ್ಕರ್ ತತ್ತ್ವ, ಸಿದ್ಧಾಂತಗಳು ಶಾಶ್ವತ: ಸಂಸದ ಶ್ರೇಯಸ್ ಪಟೇಲ್
-
Mandya10 hours agoಡಾ.ಬಿ.ಆರ್.ಅಂಬೇಡ್ಕರ್ ರವರ 69ನೇ ಪರಿನಿರ್ವಾಣ ದಿನ: ಮಾಲಾರ್ಪಣೆ ಮಾಡಿದ ಕೇಂದ್ರ ಸಚಿವ ಎಚ್ಡಿಕೆ
-
Chikmagalur17 hours agoಬ್ಯಾನರ್ ತೆರವು ವಿಚಾರಕ್ಕೆ ಕಾಂಗ್ರೆಸ್ ಕಾರ್ಯಕರ್ತನ ಹ*ತ್ಯೆ
-
Hassan15 hours agoಸಿಎಂ, ಡಿಸಿಎಂ ಇಂದು ಹಾಸನ ಜಿಲ್ಲಾ ಪ್ರವಾಸ
-
Mysore15 hours agoಡ್ರೋನ್ ಕ್ಯಾಮರದ ರೆಕ್ಕೆ ತಗಲಿ ಶಾಸಕ ಅನಿಲ್ ಚಿಕ್ಕಮಾದು ಮುಖಕ್ಕೆ ಗಾಯ
-
Mysore9 hours agoಡಿ.14ರಂದು ‘ಮೈಸೂರು ಭವಿಷ್ಯದ ಅಭಿವೃದ್ಧಿ’ ಸಾರ್ವಜನಿಕ ಸಂವಾದ
