Agriculture
ಉಪವಿಭಾಗಾಧಿಕಾರಿ ಶೃತಿ ಅವರಿಂದ ಬೆಳೆ ಹಾನಿ ವೀಕ್ಷಣೆ
ಆಲೂರು: ಮಳೆಯಿಂದಾಗಿ ತಾಲೂಕಿನಲ್ಲಿ ಹಾನಿಗೀಡಾದ ವಿವಿಧ ಪ್ರದೇಶಗಳಿಗೆ ಉಪವಿಭಾಗಾಧಿಕಾರಿ ಶೃತಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.ತಾಲೂಕಿನ ಕೆಂಚಮ್ಮ ಹೊಸಕೋಟೆ ಹೋಬಳಿಯ ವ್ಯಾಪ್ತಿಯ ಹೈದೂರು, ಹಾಗೂ ಕಾಡ್ಲೂರು ಗ್ರಾಮಗಳಿಗೆ ಅಧಿಕಾರಿಗಳ ಜೊತೆ ಭೇಟಿ ಕಾಫಿ, ಕಾಳುಮೆಣಸು, ಬಾಳೆ, ಅಡಿಕೆ, ಮೆಕ್ಕೆಜೋಳ, ಭತ್ತದ ಗದ್ದೆ, ತೋಟಗಳಿಗೆ ತೆರಳಿ ರೈತರೊಂದಿಗೆ ಸಮಾಲೋಚನೆ ನಡೆಸಿ, ಅಧಿಕಾರಿಗಳಿಂದ ಬೆಳೆಹಾನಿಯ ಮಾಹಿತಿ ಪಡೆದರು.ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ರವರು, ಜುಲೈ ತಿಂಗಳಿನಲ್ಲಿ ಸುರಿದ ಮಳೆ, ಗಾಳಿಗೆ ಕಾಫಿ, ಕಾಳುಮೆಣಸು, ಅಡಿಕೆ, ತೆಂಗು, ಮಕ್ಕೇಜೋಳ, ಶುಂಠಿ, ಭತ್ತ ಮುಂತಾದ ಬೆಳೆಗಳು ಹಾನಿಗೀಡಾಗಿದ್ದು, ರೈತರಿಗೆ ಕೋಟ್ಯಾಂತರ ರೂ. ನಷ್ಟವಾಗಿದೆ. ಇದು ನಿಜಕ್ಕೂ ದುರಂತ. ಈಗಾಗಲೇ ಜಿಲ್ಲಾಧಿಕಾರಿಗಳೊಂದಿಗೆ ಈ ಬಗ್ಗೆ ಸಮಾಲೋಚನೆ ನಡೆಸಿದ್ದೇನೆ. ಅದರಂತೆ ತಹಶೀಲ್ದಾರ್, ಕೃಷಿ, ತೋಟಗಾರಿಕೆ ಇಲಾಖೆ ಅಧಿಕಾರಿಗಳ ಮಾಹಿತಿಯನ್ನು ಪಡೆದು ಸೂಕ್ತ ಪರಿಹಾರ ಕೊಡಿಸಲು ಪ್ರಾಮಾಣಿಕ ಕೆಲಸ ಮಾಡುತ್ತೇನೆ ಎಂದರು.

ಬೆಳೆ ಹಾನಿ ವೀಕ್ಷಣೆಗೂ ಮುನ್ನ ಅಪಾರ ಪ್ರಮಾಣದಲ್ಲಿ ಕಾಳು ಮೆಣಸು, ಕಾಫಿ ಬೆಳೆ ಹಾಳಾದ ಹಿನ್ನೆಲೆ ಕಾಫಿ ಬೋರ್ಡ್ ನಿಂದ ಆಗಮಿಸಿದ್ದ ಅಧಿಕಾರಿಗಳ ಉಪ ವಿಭಾಗ ಅಧಿಕಾರಿ ಶೃತಿ ರವರು ಜೊತೆ ಸಭೆ ನಡೆಸಿ ಮಾಹಿತಿ ಪಡೆದರು.ಈ ಸಂದರ್ಭದಲ್ಲಿ ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ಕೇಶವ ಮೂರ್ತಿ, ಕಾಫಿ ಬೋರ್ಡ್ ಕ್ಷೇತ್ರ ಅಧಿಕಾರಿ ಜ್ಯೋತಿ, ಎ.ಹೆ.ಓ ಧನಂಜಯ್, ಉಪತಹಸೀಲ್ದಾರ್ ಮಧುಸೂದನ್, ರಾಜಸ್ವ ನಿರೀಕ್ಷಕ ವಸಂತ್, ಮಲ್ಲಾಪುರ ಸದಸ್ಯ ಸದಸ್ಯ ಚಂದನ್ ಹೈದೂರು, ಗ್ರಾಮಸ್ಥರಾದ ಮೋಹನ್ ಕುಮಾರ್, ಕಿರಣ್ ಕುಮಾರ್, ನಂದೀಶ್, ರವಿ ಮುಂತಾದವರು ಹಾಜರಿದ್ದರು.
Agriculture
ಮೆಕ್ಕೆಜೋಳಕ್ಕೆ ₹3,000 ಕನಿಷ್ಠ ಬೆಂಬಲ ಬೆಲೆ ಬೇಕು ಇಲ್ಲದಿದ್ದರೆ ಕಬ್ಬು ಬೆಳೆಗಾರರಂತೆ ಹೋರಾಟ : ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಎಚ್ಚರಿಕೆ
ಬೆಂಗಳೂರು : ಮೆಕ್ಕೆಜೋಳ ಬೆಳೆಗಾರರ ಹಿತಾಸಕ್ತಿಗಾಗಿ ರಾಜ್ಯ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಅವರು ಎಚ್ಚರಿಸಿದ್ದಾರೆ. ಸರ್ಕಾರವು ಮೆಕ್ಕೆಜೋಳಕ್ಕೆ ₹3,000 ಕನಿಷ್ಠ ಬೆಂಬಲ ಬೆಲೆ (MSP) ನಿಗದಿ ಮಾಡದಿದ್ದರೆ, ಕಬ್ಬು ಬೆಳೆಗಾರರಂತೆ ರೈತರು ಬೀದಿಗಿಳಿದು ಹೋರಾಟ ನಡೆಸಬೇಕಾಗುತ್ತದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಹಿನ್ನೆಲೆ:
ಇತ್ತೀಚಿನ ವರ್ಷಗಳಲ್ಲಿ ಮೆಕ್ಕೆಜೋಳದ ಮಾರುಕಟ್ಟೆ ಬೆಲೆ ನಿರಂತರ ಕುಸಿತ ಕಂಡಿದ್ದು, ರೈತರು ನಷ್ಟದ ಬಲೆಯಲ್ಲಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಉತ್ಪಾದನಾ ವೆಚ್ಚ ಹೆಚ್ಚಾಗಿರುವುದರಿಂದ ₹3,000 MSP ನೀಡುವುದು ನ್ಯಾಯಸಮ್ಮತ ಎಂದು ರೈತ ಸಂಘಟನೆಗಳು ಆಗ್ರಹಿಸುತ್ತಿವೆ.

“ರೈತರ ದುಡಿಮೆ ಗೌರವಿಸಲ್ಪಡಬೇಕು. ಸರ್ಕಾರವು ಮೆಕ್ಕೆಜೋಳದ ಬೆಲೆ ಸ್ಥಿರಪಡಿಸದಿದ್ದರೆ, ಕಬ್ಬು ಬೆಳೆಗಾರರ ಶೈಲಿಯ ಹೋರಾಟ ಅನಿವಾರ್ಯವಾಗಲಿದೆ. ರೈತರ ಹಿತಕ್ಕಾಗಿ ನಾವು ಹೋರಾಟಕ್ಕೆ ಸಿದ್ಧರಾಗಿದ್ದೇವೆ,” ಎಂದು ರೇಣುಕಾಚಾರ್ಯ ಅವರು ಹೇಳಿಕೆ ನೀಡಿದ್ದಾರೆ.
ಮುಖ್ಯ ಬೇಡಿಕೆಗಳು:
ಮೆಕ್ಕೆಜೋಳಕ್ಕೆ ಕನಿಷ್ಠ ₹3,000 MSP ನಿಗದಿ
ರೈತರಿಗೆ ಸಮಯಕ್ಕೆ ಸರಿಯಾದ ಪಾವತಿ ಖಾತರಿ
ಮಾರುಕಟ್ಟೆಯಲ್ಲಿ ಖರೀದಿ ಕೇಂದ್ರಗಳ ಸಂಖ್ಯೆಯ ಹೆಚ್ಚಳ
ರೈತರ ಶ್ರಮಕ್ಕೆ ನ್ಯಾಯ ದೊರಕಿಸಲು ಸರ್ಕಾರವು ಶೀಘ್ರ ಕ್ರಮ ಕೈಗೊಳ್ಳಬೇಕು ಎಂಬುದು ರೈತ ನಾಯಕರ ಸ್ಪಷ್ಟ ಸಂದೇಶ. ಸರ್ಕಾರದ ನಿರ್ಧಾರವನ್ನು ಎದುರು ನೋಡುತ್ತಿರುವ ರೈತರ ನಂಬಿಕೆ ಈಗ ಸರ್ಕಾರದ ಮುಂದಿನ ಹೆಜ್ಜೆಯ ಮೇಲೆ ಅವಲಂಬಿತವಾಗಿದೆ.
Agriculture
ಸಕ್ಕರೆ ಕಾರ್ಖಾನೆಗಳ ಕಬ್ಬು ದರ ನಿಗದಿ: ರೈತರಿಗೆ ಸಿಹಿ ಸುದ್ದಿ : ಅಂತಿಮ ದರ ಪ್ರಕಟಣೆ
ಇತ್ತೀಚಿಗೆ ನಡೆದ ಪ್ರತಿಭಟನೆಯ ಫಲವಾಗಿ ಸಕ್ಕರೆ ಕಾರ್ಖಾನೆ ಮಾಲೀಕರು ಮತ್ತು ರೈತ ಮುಖಂಡರ ನಡುವೆ ಚರ್ಚೆ ನಡೆದಿದ್ದು, ರಾಜ್ಯ ಸರ್ಕಾರವು ಕಬ್ಬಿಗೆ ಹೊಸ ದರ ನಿಗದಿ ಮಾಡುವುದರ ಮೂಲಕ ರಾಜ್ಯದ ರೈತರಿಗೆ ಸರ್ಕಾರ ಸಿಹಿ ಸುದ್ದಿ ನೀಡಿದೆ.
ಎಷ್ಟು ಹೆಚ್ಚಳ?
ಹೊಸ ದರದ ಪ್ರಕಾರ, ಪ್ರತಿ ಟನ್ ಕಬ್ಬಿಗೆ ₹3,300 ನಿಗದಿ ಮಾಡಲಾಗಿದೆ. ಹಿಂದಿನ ದರವಾದ ₹3,200 ಗೆ ಹೋಲಿಸಿದರೆ ₹100ರಷ್ಟು ಹೆಚ್ಚಳವಾಗಿದೆ. ಇದರಲ್ಲಿ ಕಾರ್ಖಾನೆಗಳು ₹50 ಹೆಚ್ಚುವರಿ ಪಾವತಿಸಲಿದ್ದು, ರಾಜ್ಯ ಸರ್ಕಾರವು ಒಂದು ಅವಧಿಯ ಪ್ರೋತ್ಸಾಹ ಧನವಾಗಿ ಮತ್ತೊಂದು ₹50 ನೀಡಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ.
ಇಳುವರಿ ಪ್ರಮಾಣವನ್ನು ಆಧರಿಸಿ ದರ ನಿಗದಿ ಮಾಡಲಾಗಿದ್ದು, ಶೇ.10.5 ಇಳುವರಿ ಪ್ರಮಾಣ ಇರುವ ಕಬ್ಬಿಗೆ ₹3,200 ಮತ್ತು ಶೇ.11.25 ಇಳುವರಿ ಪ್ರಮಾಣದ ಕಬ್ಬಿಗೆ ₹3,300 ದೊರೆಯಲಿದೆ. ಸಾಗಣೆ ಮತ್ತು ಕಟಾವು ವೆಚ್ಚಗಳನ್ನು ಹೊರತುಪಡಿಸಿ ಈ ದರ ನೀಡಲಾಗುತ್ತದೆ.
ಈ ನಿರ್ಧಾರದಿಂದ ರಾಜ್ಯದ ಕಬ್ಬು ರೈತರಿಗೆ ಆರ್ಥಿಕ ನೆರವಾಗಲಿದ್ದು, ಸಕ್ಕರೆ ಕಾರ್ಖಾನೆಗಳು ಸಹ ರೈತರೊಂದಿಗೆ ಸಹಕಾರದ ಮನೋಭಾವದಿಂದ ಕೆಲಸ ಮಾಡಲಿವೆ ಎಂದು ಸರ್ಕಾರ ಆಶಾಭಾವನೆ ವ್ಯಕ್ತಪಡಿಸಿದೆ
Agriculture
ರೈತರಿಗೆ ಸಿಹಿ ಸುದ್ದಿ : ಬೆಳೆ ನಷ್ಟ ಪರಿಹಾರ ದರ ಪರಿಷ್ಕರಣೆಗೆ ಸರ್ಕಾರದ ನಿರ್ಧಾರ
Crop Loss Compensation Increase : ಕರ್ನಾಟಕ ರಾಜ್ಯದಲ್ಲಿ ಒಟ್ಟು ಅಂದಾಜು 5.20 ಲಕ್ಷ ಹೆಕ್ಟರ್ ಪ್ರದೇಶದಲ್ಲಿ ಬೆಳೆ ನಷ್ಟವಾಗಿದೆ ಎಂದು ಅಂದಾಜು ಮಾಡಲಾಗಿದ್ದು, SDRF ಮಾರ್ಗ ಸೂಚಿಯ ಪ್ರಕಾರ ಸದ್ಯಕ್ಕೆ ನೀಡುತ್ತಿರುವ ಪರಿಹಾರವು ರೈತರಿಗೆ ಸಾಲುವುದಿಲ್ಲ ಎಂಬ ಅಭಿಪ್ರಾಯದ ಹಿನ್ನಲೆಯಲ್ಲಿ ಸರ್ಕಾರವು ಪರಿಹಾರ ಮೊತ್ತ ಪರಿಷ್ಕರಣೆಗೆ ನಿರ್ಧಾರ ತೆಗೆದುಕೊಂಡಿದೆ.
ಈ ನಿರ್ಧಾರವನ್ನು ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಈ ವರ್ಷ ಉತ್ತಮ ಮುಂಗಾರು ಮಳೆ ಆದ ಕಾರಣ ರೈತರು ಸರಿಯಾದ ಸಮಯಕ್ಕೆ ಬಿತ್ತನೆ ಮಾಡಿದ್ದರು. ಆದರೆ ಇದರ ಮಧ್ಯೆ ಮೂರರಿಂದ ನಾಲ್ಕು ವಾರ ಸರಿಯಾದ ಮಳೆ ಬರೆದ ಕಾರಣ ಹಲವಾರು ಕಡೆಯಲ್ಲಿ ಬೆಳೆ ಒಣಿಗಿದ್ದವು.

ಇದರಿಂದಾಗಿ ರೈತರು ಮರು ಬಿತ್ತನೆ ಮಾಡಿದರು. ಇದರ ಬೆನ್ನಲ್ಲೇ ಜುಲೈ ಮತ್ತು ಅಗಸ್ಟ್ ತಿಂಗಳಿನಲ್ಲಿ ಅತಿವೃಷ್ಟಿ ಮಳೆಯಾದ ಕಾರಣ ರಾಜ್ಯದ್ಯಂತ ಹಲವಾರು ಕಡೆ ವ್ಯಾಪಕ ಬೆಳೆ ಹಾನಿಯಾಗಿದೆ. ಇದರಿಂದಾಗಿ ರೈತರು ನಷ್ಟ ಹಾಗೂ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದು, ಇದರಿಂದಾಗಿ ಪರಿಹಾರ ಮೊತ್ತವನ್ನು ಹೆಚ್ಚಳ ಮಾಡಲು ಸರ್ಕಾರ ನಿರ್ಧಾರ ತೆಗೆದುಕೊಂಡಿದೆ.
ಪರಿಹಾರ ಮೊತ್ತ ಪರಿಷ್ಕರಣೆ ಅಂತಿಮ ಯಾವಾಗ?
ಕೃಷಿ ಇಲಾಖೆ ಮತ್ತು ಕಂದಾಯ ಇಲಾಖೆ ವತಿಯಿಂದ ನಷ್ಟದ ಜಂಟಿ ಸಮೀಕ್ಷೆ ನಡೆಯುತ್ತಿದ್ದು, ಗರಿಷ್ಠ 10 ದಿನದ ಒಳಗಾಗಿ ಸಮೀಕ್ಷೆ ಕಾರ್ಯ ಮುಗಿಸಿ ವರದಿ ಸಲ್ಲಿಸಲು ಸರ್ಕಾರ ಆದೇಶ ನೀಡಿದೆ. ಇದರ ನಂತರ ಪರಿಷ್ಕೃತ ಪರಿಹಾರ ಮೊತ್ತ ಬಿಡುಗಡೆಯಾಗಲಿದೆ.
-
State13 hours agoಡಿವೈಡರ್ಗೆ ಕಾರ್ ಡಿಕ್ಕಿ, ಹೊತ್ತಿ ಉರಿದ ಕಾರಿನೊಳಗೆ ಲೋಕಾಯುಕ್ತ ಇನ್ಸ್ಪೆಕ್ಟರ್ ಸಜೀವ ದಹನ
-
Hassan10 hours agoನಗರದ ಇಂಜಿನಿಯರ್ ಕಾಲೇಜು ಆವರಣದಲ್ಲಿ ಸರ್ಕಾರಿ ಸೇವೆಗಳ ಸಮರ್ಪಣ ಸಮಾವೇಶ
-
Hassan13 hours agoಅಂಬೇಡ್ಕರ್ ತತ್ತ್ವ, ಸಿದ್ಧಾಂತಗಳು ಶಾಶ್ವತ: ಸಂಸದ ಶ್ರೇಯಸ್ ಪಟೇಲ್
-
Mandya8 hours agoಡಾ.ಬಿ.ಆರ್.ಅಂಬೇಡ್ಕರ್ ರವರ 69ನೇ ಪರಿನಿರ್ವಾಣ ದಿನ: ಮಾಲಾರ್ಪಣೆ ಮಾಡಿದ ಕೇಂದ್ರ ಸಚಿವ ಎಚ್ಡಿಕೆ
-
Chikmagalur16 hours agoಬ್ಯಾನರ್ ತೆರವು ವಿಚಾರಕ್ಕೆ ಕಾಂಗ್ರೆಸ್ ಕಾರ್ಯಕರ್ತನ ಹ*ತ್ಯೆ
-
Hassan14 hours agoಸಿಎಂ, ಡಿಸಿಎಂ ಇಂದು ಹಾಸನ ಜಿಲ್ಲಾ ಪ್ರವಾಸ
-
Mysore13 hours agoಡ್ರೋನ್ ಕ್ಯಾಮರದ ರೆಕ್ಕೆ ತಗಲಿ ಶಾಸಕ ಅನಿಲ್ ಚಿಕ್ಕಮಾದು ಮುಖಕ್ಕೆ ಗಾಯ
-
Mysore7 hours agoಡಿ.14ರಂದು ‘ಮೈಸೂರು ಭವಿಷ್ಯದ ಅಭಿವೃದ್ಧಿ’ ಸಾರ್ವಜನಿಕ ಸಂವಾದ
