Agriculture
ಜೀವನೋಪಾಯಕ್ಕಾಗಿ ಮಾಡಿರುವ ಭೂ ಒತ್ತುವರಿದಾರರು ಆತಂಕಪಡುವ ಅಗತ್ಯ ಇಲ್ಲ

ಚಿಕ್ಕಮಗಳೂರು: ಜೀವನೋಪಾಯಕ್ಕಾಗಿ ಮಾಡಿರುವ ಭೂ ಒತ್ತುವರಿದಾರರು ಆತಂಕಪಡುವ ಅಗತ್ಯ ಇಲ್ಲ ಎಂದು ಶೃಂಗೇರಿ ಕ್ಷೇತ್ರದ ಶಾಸಕ ಹಾಗೂ ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತ ಅಧ್ಯಕ್ಷ ಟಿ.ಡಿ.ರಾಜೇಗೌಡ ಭರವಸೆ ನೀಡಿದರು.ಇಂದು ನಗರದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಒತ್ತುವರಿ ಸಮಸ್ಯೆ ಸಂಬಂಧ ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್, ಲೋಕಸಭೆ ಮಾಜಿ ಸದಸ್ಯ ಜಯಪ್ರಕಾಶ್ ಹೆಗ್ಡೆ, ಮಾಜಿ ಸಚಿವರಾದ ಕಿಮ್ಮನೆ ರತ್ನಾಕರ್ ತಾವೂ ಹಾಗೂ ಜಿಲ್ಲೆಯ ಎಲ್ಲಾ ಶಾಸಕರು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅರಣ್ಯ ಸಚಿವ ಈಶ್ವರ್ ಖಂಡ್ರೇ ಅವರನ್ನು ಭೇಟಿ ಮಾಡಿ ಸಮಸ್ಯೆಯನ್ನು ಮನವರಿಕೆ ಮಾಡಿದ್ದೀವೆ ಎಂದು ಹೇಳಿದರು.
ಬಹಳಷ್ಟು ಉಹಾಪೋಹಗಳು ಭೂ ಒತ್ತುವರಿ ಬಗ್ಗೆ ಹರಿದಾಡುತ್ತಿದ್ದು, ಕೆಲವರು ರಾಜಕೀಯ ದುರುದ್ದೇಶದಿಂದ ಸುಳ್ಳು ಅಪಪ್ರಚಾರ ಮಾಡುತ್ತಾ ಜನರಲ್ಲಿ ಗೊಂದಲ ಮೂಡಿಸುತ್ತಿದ್ದಾರೆ. ಈಗಾಗಲೇ ಸರ್ಕಾರ ಒತ್ತುವರಿ ತೆರವು ಕಾರ್ಯವನ್ನು ಸ್ಥಗಿತಗೊಳಿಸಿ ಆದೇಶಿಸಿದೆ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಾರ್ವಜನಿಕರ ಹಿತಾಸಕ್ತಿಗೆ ಅನುಗುಣವಾಗಿ ಅರಣ್ಯ ಇಲಾಖೆಗೆ ಸೂಕ್ತ ನಿರ್ದೇಶನವನ್ನು ನೀಡಿದ್ದಾರೆ. ಜತೆಗೆ ಕಾನೂನಿನ ಚೌಕಟ್ಟಿನಡಿಯಲ್ಲಿ ಅರ್ಹ ಪ್ರಕರಣಗಳಿಗೆ ಹಕ್ಕುಪತ್ರ ನೀಡುವ ಪ್ರಕ್ರಿಯೆ ಪ್ರಾರಂಭಿಸಲಾಗಿದೆ. ಒತ್ತುವರಿ ಸಮಸ್ಯೆ ಬಹಳಷ್ಟು ವರ್ಷಗಳ ಸಮಸ್ಯೆಯಾಗಿದೆ. ಸ್ವಾತಂತ್ರ್ಯ ಪೂರ್ವದಿಂದ ಇಲ್ಲಿಯವರೆಗೂ ಜನಸಂಖ್ಯೆಯಲ್ಲಿ ಭಾರೀ ಪ್ರಮಾಣದ ಬದಲಾವಣೆಯಾಗಿದೆ. ಇದರಿಂದ ಜೀವನೋಪಾಯಕ್ಕಾಗಿ ಒತ್ತುವರಿಯೂ ನಡೆದಿದೆ. ಅರಣ್ಯವೂ ಕ್ಷೀಣಿಸಿದೆ ಎಂದು ತಿಳಿಸಿದರು.
Agriculture
25 ಲಕ್ಷದವರೆಗೆ ಸಾಲ ಮತ್ತು ಅದಕ್ಕೆ 35% ಸಬ್ಸಿಡಿ : ಕೇಂದ್ರ ಸರ್ಕಾರದ ಈ ಯೋಜನೆಯಡಿ ಯಾರಿಗೆ ಸಿಗಲಿದೆ ಈ ಸೌಲಭ್ಯ?

PMEGP Scheme | How to apply? – ಕೇಂದ್ರ ಸರ್ಕಾರವು ಹೊಸದಾಗಿ ಸ್ವಂತ ಉದ್ಯಮ ಆರಂಭಿಸುವ ಯುವ ಜನತೆಗೆ ಅನೇಕ ರೀತಿಯಲ್ಲಿ ಸಹಾಯ ಮಾಡುತ್ತದೆ. ಆದರೆ ಹಲವು ಜನರಿಗೆ ಈ ಯೋಜನೆಗಳ ಮಾಹಿತಿ ತಿಳಿದಿರುವುದೇ ಇಲ್ಲ. ಈ ಒಂದು ಲೇಖನದಲ್ಲಿ ಕೇಂದ್ರ ಸರ್ಕಾರದ ಒಂದು ಉತ್ತಮ ಯೋಜನೆಯ ಬಗ್ಗೆ ತಿಳಿಸಲಿದ್ದೇವೆ.
ಯಾವುದು ಈ ಯೋಜನೆ?
ಈ ಯೋಜನೆಯ ಹೆಸರು ” ಪ್ರಧಾನ ಮಂತ್ರಿ ಉದ್ಯೋಗ ಸೃಷ್ಟಿ ಕಾರ್ಯಕ್ರಮ “. ಈ ಯೋಜನೆಯನ್ನು 2008 ಆಗಸ್ಟ್ 15ರಂದು ಅಂದಿನ ಪ್ರಧಾನ ಮಂತ್ರಿ ಮನಮೋಹನ ಸಿಂಗ್ ಅವರು ಜಾರಿಗೋಳಿಸಿದ್ದರು. ಈ ಯೋಜನೆಯ ಮುಖ್ಯ ಉದ್ದೇಶವೇನೆಂದರೆ ಹೊಸದಾಗಿ ಸ್ವಂತ ಉದ್ಯಮ ಆರಂಭಿಸುವವರಿಗೆ ಆರ್ಥಿಕ ಸಹಾಯ ಮಾಡುವುದಾಗಿದೆ.
ಈ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹತೆ ಹೊಂದಿರುವ ಅಭ್ಯರ್ಥಿಗಳಿಗೆ ಸಂಬಂಧಪಟ್ಟ ಬ್ಯಾಂಕಗಳು ನಿಮ್ಮ ಯೋಜನಾ ಮೊತ್ತದ ಗರಿಷ್ಟ 90% ನಿಂದ 95% ವರೆಗಿನ ಹಣವನ್ನು ಮಂಜೂರು ಮಾಡುತ್ತವೆ. ನೀವು ಪಡೆದ ಸಾಲದ ಮೊತ್ತದ ಮೇಲೆ PMEGP ಯೋಜನೆಯ ಅಡಿಯಲ್ಲಿ 15% ನಿಂದ 35% ನವರೆಗೆ ಸಬ್ಸಿಡಿಯನ್ನು ಕೇಂದ್ರ ಸರ್ಕಾರ ನೀಡುತ್ತದೆ.
ಹಾಗಿದ್ದರೆ ಈ ಯೋಜನೆಗೆ ಅರ್ಜಿ ಯಾರು ಸಲ್ಲಿಸಬಹುದು? ಹೇಗೆ ಅರ್ಜಿ ಸಲ್ಲಿಸಬೇಕು? ಯಾವ ದಾಖಲೆಗಳು ಬೇಕು ಎಂಬ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.
ಅರ್ಜಿ ಸಲ್ಲಿಸಲು ಯಾರು ಅರ್ಹರು?
ಕನಿಷ್ಠ 8ನೇ ತರಗತಿ ಪಾಸಾದಂತಹ 18 ವರ್ಷದ ಮೇಲಿನ ಭಾರತೀಯ ಪ್ರಜೆಗಳಾಗಿರಬೇಕು. ಈ ಮೊದಲು ಉದ್ಯಮ ಆರಂಭಿಸಲು ಸರ್ಕಾರದಿಂದ ಯಾವುದೇ ರೀತಿಯ ಲಾಭ ಪಡೆದುಕೊಂಡಿರಬಾರದು.
ಅರ್ಜಿ ಸಲ್ಲಿಸಲು ಬೇಕಾಗುವಂತಹ ಅವಶ್ಯಕ ದಾಖಲೆಗಳು :
ಈ ಯೋಜನೆಗೆ ಅರ್ಜಿ ಸಲ್ಲಿಸಲು ನೀವು ಅರ್ಹರಿದ್ದರೆ ಈ ಕೆಳಗಿನ ದಾಖಲಾತಿಗಳನ್ನು ಸಿದ್ಧಪಡಿಸಿ ಇಟ್ಟುಕೊಳ್ಳಿ.
1. ಪಾಸ್ಪೋರ್ಟ್ ಅಳತೆಯ ಭಾವಚಿತ್ರ
2. ಶೈಕ್ಷಣಿಕ ಪ್ರಮಾಣಪತ್ರ
3. ವಿವರವಾದ ಯೋಜನಾ ವರದಿ
4. ಜಾತಿ ಪ್ರಮಾಣಪತ್ರ
5. ಗ್ರಾಮೀಣ ಪ್ರಮಾಣ ಪತ್ರ (ಅನ್ವಯವಾದಲ್ಲಿ ಮಾತ್ರ)
ಅರ್ಜಿ ಹೇಗೆ ಸಲ್ಲಿಸಬೇಕು?
ಅರ್ಹತೆ ಹೊಂದಿರುವ ಅಭ್ಯರ್ಥಿಗಳು PMEGP ಯ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ, ನೋಂದಣಿ ಮಾಡಿಕೊಂಡು ಬೇಕಾಗುವ ಮಾಹಿತಿಯನ್ನು ಭರ್ತಿ ಮಾಡಿ ಮತ್ತು ಅವಶ್ಯಕ ದಾಖಲಾತಿಗಳನ್ನು ಅಪ್ಲೋಡ್ ಮಾಡಿ ಅರ್ಜಿ ಸಲ್ಲಿಸಬೇಕು.
PMEGP ಅಧಿಕೃತ ಜಾಲತಾಣ –
https://www.kviconline.gov.in/pmegpeportal/pmegphome/index.jsp
Agriculture
ಆರ್ ಬಿ ಐ ನಿಂದ ರೈತರಿಗೆ ಗುಡ್ ನ್ಯೂಸ್ : ಅಡಮಾನ ಇಲ್ಲದೆ 2 ಲಕ್ಷ ರೂ. ವರೆಗೆ ಸಾಲ ಸೌಲಭ್ಯ

Loan for farmers upto 2 lakh without Surity – ದೇಶದ ರೈತರಿಗೆ ಮೇಲಾಧಾರ – ಮುಕ್ತ ಕೃಷಿ ಸಾಲದ ಮಿತಿಯನ್ನು ಏರಿಸಲಾಗಿದೆ. ಈ ಮೊದಲು ₹1.6 ಲಕ್ಷ ರೂ. ವರೆಗೆ ಇದ್ದ ಸಾಲದ ಮಿತಿಯನ್ನು ₹2.0 ಲಕ್ಷ ರೂ. ಗೆ ಏರಿಸಲಾಗಿದೆ. ಈ ನಿರ್ಧಾರವನ್ನು ಜನವರಿ 01, 2025 ರಿಂದಲೇ ಜಾರಿಗೆ ತರಲು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ದೇಶದ ಎಲ್ಲಾ ಬ್ಯಾಂಕ್ ಗಳಿಗೆ ಸೂಚಿಸಿದೆ.
ಈ ಹೊಸ ಉಪಕ್ರಮದ ಮೂಲ ಉದ್ದೇಶವೇನು?
ಕೃಷಿ ವಲಯದ ಅಧಾಯವನ್ನು ಬೆಂಬಲಿಸಲು ಮತ್ತು ಹೆಚ್ಚಿಸಲು ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಈಗಿನ ಸಮಯದಲ್ಲಿ ಆಗಿರುವ ಹಣದುಬ್ಬರ (Inflation) ಮತ್ತು ಹೆಚ್ಚುತ್ತಿರುವ ಕೃಷಿ ಒಳಹರಿವಿನ ವೆಚ್ಚಕ್ಕೆ ರೈತರಿಗೆ ಸಹಾಯವಾಗುವಂತೆ ಈ ನಿರ್ಧಾರವನ್ನು ಕೈಗೊಳ್ಳಲಾಗಿದ್ದು, ಇದರಿಂದ ರೈತರಿಗೆ ಆರ್ಥಿಕ ನೆರವು ಸಿಗಲಿದೆ.
ಈ ಉಪಕ್ರಮದಿಂದ ದೇಶದ 86% ಕ್ಕಿಂತಲೂ ಹೆಚ್ಚು ಸಣ್ಣ ಹಾಗೂ ಅತೀ ಸಣ್ಣ ರೈತರಿಗೆ ಪ್ರಯೋಜನ ಸಿಗಲಿದೆ. ಆರ್ ಬಿಐ ನ ಈ ಹೊಸ ಮಾರ್ಗಸೂಚಿಯು ದೇಶದ ಪ್ರತಿಯೊಬ್ಬ ರೈತನಿಗೂ ತಲುಪಲಿ ಎಂಬ ಉದ್ದೇಶದಿಂದ ಸರ್ಕಾರವು ವ್ಯಾಪಾಕ ಪ್ರಚಾರ ಕೈಗೊಳ್ಳಲಿದೆ.
ಇದರಿಂದ ಕೃಷಿ ವಲಯದಲ್ಲಿ ಹೆಚ್ಚಿನ ಹೂಡಿಕೆ, ರೈತರ ಜೀವನ ಅಭಿವೃದ್ಧಿಗೊಳ್ಳಲಿದೆ. ಮುಂದಿನ ವರ್ಷ ಅಂದರೆ, ಜನವರಿ 01, 2025ರಿಂದ ದೇಶಾದ್ಯಂತ ಇದು ಜಾರಿಯಾಗಲಿದ್ದು ಇದರ ಲಾಭ ಪಡೆಯಲು ರೈತರು ತಮ್ಮ ಬ್ಯಾಂಕ್ ಗಳಿಗೆ ಭೇಟಿ ನೀಡಿ ಇದರ ಹೆಚ್ಚಿನ ಮಾಹಿತಿ ಪಡೆದುಕೊಳ್ಳಬಹುದು.
Agriculture
ಉಪವಿಭಾಗಾಧಿಕಾರಿ ಶೃತಿ ಅವರಿಂದ ಬೆಳೆ ಹಾನಿ ವೀಕ್ಷಣೆ

ಆಲೂರು: ಮಳೆಯಿಂದಾಗಿ ತಾಲೂಕಿನಲ್ಲಿ ಹಾನಿಗೀಡಾದ ವಿವಿಧ ಪ್ರದೇಶಗಳಿಗೆ ಉಪವಿಭಾಗಾಧಿಕಾರಿ ಶೃತಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.ತಾಲೂಕಿನ ಕೆಂಚಮ್ಮ ಹೊಸಕೋಟೆ ಹೋಬಳಿಯ ವ್ಯಾಪ್ತಿಯ ಹೈದೂರು, ಹಾಗೂ ಕಾಡ್ಲೂರು ಗ್ರಾಮಗಳಿಗೆ ಅಧಿಕಾರಿಗಳ ಜೊತೆ ಭೇಟಿ ಕಾಫಿ, ಕಾಳುಮೆಣಸು, ಬಾಳೆ, ಅಡಿಕೆ, ಮೆಕ್ಕೆಜೋಳ, ಭತ್ತದ ಗದ್ದೆ, ತೋಟಗಳಿಗೆ ತೆರಳಿ ರೈತರೊಂದಿಗೆ ಸಮಾಲೋಚನೆ ನಡೆಸಿ, ಅಧಿಕಾರಿಗಳಿಂದ ಬೆಳೆಹಾನಿಯ ಮಾಹಿತಿ ಪಡೆದರು.ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ರವರು, ಜುಲೈ ತಿಂಗಳಿನಲ್ಲಿ ಸುರಿದ ಮಳೆ, ಗಾಳಿಗೆ ಕಾಫಿ, ಕಾಳುಮೆಣಸು, ಅಡಿಕೆ, ತೆಂಗು, ಮಕ್ಕೇಜೋಳ, ಶುಂಠಿ, ಭತ್ತ ಮುಂತಾದ ಬೆಳೆಗಳು ಹಾನಿಗೀಡಾಗಿದ್ದು, ರೈತರಿಗೆ ಕೋಟ್ಯಾಂತರ ರೂ. ನಷ್ಟವಾಗಿದೆ. ಇದು ನಿಜಕ್ಕೂ ದುರಂತ. ಈಗಾಗಲೇ ಜಿಲ್ಲಾಧಿಕಾರಿಗಳೊಂದಿಗೆ ಈ ಬಗ್ಗೆ ಸಮಾಲೋಚನೆ ನಡೆಸಿದ್ದೇನೆ. ಅದರಂತೆ ತಹಶೀಲ್ದಾರ್, ಕೃಷಿ, ತೋಟಗಾರಿಕೆ ಇಲಾಖೆ ಅಧಿಕಾರಿಗಳ ಮಾಹಿತಿಯನ್ನು ಪಡೆದು ಸೂಕ್ತ ಪರಿಹಾರ ಕೊಡಿಸಲು ಪ್ರಾಮಾಣಿಕ ಕೆಲಸ ಮಾಡುತ್ತೇನೆ ಎಂದರು.
ಬೆಳೆ ಹಾನಿ ವೀಕ್ಷಣೆಗೂ ಮುನ್ನ ಅಪಾರ ಪ್ರಮಾಣದಲ್ಲಿ ಕಾಳು ಮೆಣಸು, ಕಾಫಿ ಬೆಳೆ ಹಾಳಾದ ಹಿನ್ನೆಲೆ ಕಾಫಿ ಬೋರ್ಡ್ ನಿಂದ ಆಗಮಿಸಿದ್ದ ಅಧಿಕಾರಿಗಳ ಉಪ ವಿಭಾಗ ಅಧಿಕಾರಿ ಶೃತಿ ರವರು ಜೊತೆ ಸಭೆ ನಡೆಸಿ ಮಾಹಿತಿ ಪಡೆದರು.ಈ ಸಂದರ್ಭದಲ್ಲಿ ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ಕೇಶವ ಮೂರ್ತಿ, ಕಾಫಿ ಬೋರ್ಡ್ ಕ್ಷೇತ್ರ ಅಧಿಕಾರಿ ಜ್ಯೋತಿ, ಎ.ಹೆ.ಓ ಧನಂಜಯ್, ಉಪತಹಸೀಲ್ದಾರ್ ಮಧುಸೂದನ್, ರಾಜಸ್ವ ನಿರೀಕ್ಷಕ ವಸಂತ್, ಮಲ್ಲಾಪುರ ಸದಸ್ಯ ಸದಸ್ಯ ಚಂದನ್ ಹೈದೂರು, ಗ್ರಾಮಸ್ಥರಾದ ಮೋಹನ್ ಕುಮಾರ್, ಕಿರಣ್ ಕುಮಾರ್, ನಂದೀಶ್, ರವಿ ಮುಂತಾದವರು ಹಾಜರಿದ್ದರು.
-
Mandya22 hours ago
ನೇಣು ಬಿಗಿದ ಸ್ಥಿತಿಯಲ್ಲಿ ಪುರುಷ ಹಾಗೂ ಮಹಿಳೆಯ ಕೊಳೆತ ಶ*ವಗಳು ಪತ್ತೆ
-
State19 hours ago
ಹಾಸನ ಏರ್ಪೋರ್ಟ್ 2026ಕ್ಕೆ ಪೂರ್ಣ: ಚಿಕ್ಕಮಗಳೂರು-ಮಡಿಕೇರಿಯಲ್ಲಿ ಹೆಲಿಪೋರ್ಟ್ ನಿರ್ಮಾಣಕ್ಕೆ ವರದಿ ಸಿದ್ಧ
-
Kodagu24 hours ago
ಬಾಡಗ ಮಹಿಳಾ ಸಾಂಸ್ಕೃತಿಕ ಮಂಡಳಿಗೆ ಬೆಳ್ಳಿ ಹಬ್ಬದ ಸಂಭ್ರಮ
-
Mandya23 hours ago
ಜೂ. 26ಕ್ಕೆ ಮಾದಕ ವಸ್ತುಗಳ ದುಷ್ಪರಿಣಾಮ ಕುರಿತು ಜಾಗೃತಿ ಕಾರ್ಯಕ್ರಮ: ಡಾ. ಕುಮಾರ
-
Kodagu22 hours ago
ಗೃಹಲಕ್ಷ್ಮಿ ಯೋಜನೆ ಇ-ಕೆವೈಸಿ ಫೆಲ್ಯೂರ್: ಹತ್ತಿರದ ಸಿಡಿಪಿಓ ಕಚೇರಿ ತೆರಳಿ Status ಪರಿಶೀಲನೆ ಮಾಡಿಸಿ
-
Hassan22 hours ago
ಬೆಳೆ ವಿಮೆ ಪ್ರಚಾರದ ವಾಹನಗಳಿಗೆ ಡಿಸಿ ಸಿ. ಸತ್ಯಭಾಮ ಚಾಲನೆ
-
Hassan20 hours ago
ಕಾಣೆಯಾಗಿದ್ದ ಮಹಿಳೆ ಶವವಾಗಿ ಪತ್ತೆ
-
Mandya23 hours ago
ಗೌರವ ಡಾಕ್ಟರೇಟ್ ಸ್ವೀಕರಿಸಲು ಪ್ರೊ.ಜಯಪ್ರಕಾಶ್ ಗೌಡ ಅವರಿಗೆ ಅಧಿಕೃತ ಆಹ್ವಾನ