Education
ಯುಜಿ ಸಿಇಟಿ ಮೊದಲನೇ ಸುತ್ತಿನ ವಿವಿಧ ವೃತ್ತಿಪರ ಅಣಕು ಸೀಟುಗಳ ಹಂಚಿಕೆ ಬಿಡುಗಡೆ : ಡೈರೆಕ್ಟ್ ಲಿಂಕ್ ಇಲ್ಲಿದೆ
KCET First Round Mock Allotment 2025 : ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ರಾಜ್ಯದ ವಿವಿಧ ಕಾಲೇಜುಗಳ ವಿವಿಧ ವೃತ್ತಿಪರ ಕೋರ್ಸ್ ಗಳ ಪ್ರವೇಶಕ್ಕೆ ಮೊದಲನೇ ಸುತ್ತಿನ ಹಣಕ್ಕೂ ಸೀಟು ಫಲಿತಾಂಶವನ್ನು ಬಿಡುಗಡೆ ಮಾಡಿದೆ.
ದ್ವಿತೀಯ ಪಿಯುಸಿ ಮುಗಿಸಿ ಮುಂದಿನ ಹಂತದ ವೃತ್ತಿಪರ ಪದವಿ ಕೋರ್ಸ್ ಗಾಗಿ ಕಾಯುತ್ತಿರುವ ಅಂತಹ ವಿದ್ಯಾರ್ಥಿಗಳು ನಿಮಗೆ ಮೊದಲನೇ ಸುತ್ತಿನಲ್ಲಿ ಯಾವ ಕಾಲೇಜು ಹಂಚಿಕೆಯಾಗಿದೆ ಎಂಬ ಮಾಹಿತಿಯನ್ನು ನಿಮ್ಮ ಮೊಬೈಲ್ ನಲ್ಲಿಯೇ ತಿಳಿದುಕೊಳ್ಳುವ ಮಾಹಿತಿ ಇಲ್ಲಿದೆ.
ಮೆರಿಟ್ ಮತ್ತು ರೋಸ್ಟರ್ ಪದ್ಧತಿ ಮುಖಾಂತರ ಮೊದಲನೇ ಸುತ್ತಿನ ಹಣಕ್ಕೂ ಸೀಟು ಹಂಚಿಕೆ ಫಲಿತಾಂಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಬಿಡುಗಡೆ ಮಾಡಿದ್ದು ಇದನ್ನು ಅಭ್ಯರ್ಥಿಗಳು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ ತಿಳಿದುಕೊಳ್ಳಬಹುದಾಗಿದೆ.

ಮುಂದಿನ ಪ್ರಕ್ರಿಯೆ ಏನಿರುತ್ತದೆ?
ಸದ್ಯಕ್ಕೆ ಅಣಕು ಸೀಟು ಹಂಚಿಕೆಯ ಫಲಿತಾಂಶವನ್ನು ಪ್ರಕಟಣೆ ಮಾಡಿದ್ದು ನಂತರದಲ್ಲಿ ಅಭ್ಯರ್ಥಿಗಳು ತಮಗೆ ಹೊಸದಾಗಿ ಯಾವುದೇ ಕಾಲೇಜನ್ನು ಸೇರಿಸಲು ಅಥವಾ ಯಾವುದೇ ಬೇಡವಾದ ಕಾಲೇಜನ್ನು ಅಳಿಸಲು ಅಥವಾ ಕ್ರಮಾಂಕ ಬದಲಿಸಲು 26 ನೇ ತಾರೀಖಿನಿಂದ 29 ನೇ ತಾರೀಖಿನವರೆಗೆ ಅವಕಾಶ ನೀಡಲಾಗಿದೆ.
ಅಭ್ಯರ್ಥಿಗಳು ತಮ್ಮ ಅರ್ಹತೆ ಹಾಗೂ ತಮ್ಮ ಆಸಕ್ತಿಗೆ ಅನುಗುಣವಾಗಿ ಆಪ್ಷನ್ ಎಂಟ್ರಿ ಯನ್ನು ಬದಲಾವಣೆ ಮಾಡಲು ಅವಕಾಶ ನೀಡಲಾಗಿದೆ.
ಒಂದು ವೇಳೆ ನೀವು ಆಯ್ಕೆಗಳನ್ನು ದಾಖಲಿಸದೆ ಇದ್ದಲ್ಲಿ ಏನು ಮಾಡಬೇಕು?
ಕೆಲವು ವಿದ್ಯಾರ್ಥಿಗಳು ವಿವಿಧ ಕಾರಣಗಳಿಂದಾಗಿ ಮೊದಲನೆಯ ಸುತ್ತಿನ ಅಣಕು ಹಂಚಿಕೆಗೆ ಆಪ್ಷನ್ ಎಂಟ್ರಿ ಮಾಡದೆ ಇದ್ದಲ್ಲಿ ಈಗಲೂ ಕೂಡ ಅವರು 750ರೂ. ಪಾವತಿಸಿ ಆಯ್ಕೆಯನ್ನು ದಾಖಲಿಸಲು ಅವಕಾಶ ನೀಡಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ ಜಾಲತಾಣ : https://cetonline.karnataka.gov.in/kea/ugcet2025
Education
ಗ್ರಾಮ ಪಂಚಾಯತಿ ಆಸ್ತಿ ತೆರಿಗೆ ಪಾವತಿಗೆ ಮಾರ್ಚ್ 31 ಕೊನೆಯ ದಿನ!
ಕರ್ನಾಟಕದ ಗ್ರಾಮೀಣ ಪ್ರದೇಶದ ನಾಗರಿಕರಿಗೆ ಪಂಚಾಯತ್ ರಾಜ್ ಇಲಾಖೆ ಮಹತ್ವದ ಸೂಚನೆಯನ್ನು ನೀಡಿದೆ. 2025-26ನೇ ಸಾಲಿನ ಮನೆ, ಕಟ್ಟಡ, ನಿವೇಶನ ಮತ್ತು ನೀರಿನ ಆಸ್ತಿ ತೆರಿಗೆ ಪಾವತಿಸಲು ಮಾರ್ಚ್ 31, 2026 ಕೊನೆಯ ದಿನಾಂಕವಾಗಿದೆ. ನಿಗದಿತ ಅವಧಿಯೊಳಗೆ ತೆರಿಗೆ ಪಾವತಿಸದಿದ್ದರೆ ದಂಡ ವಿಧಿಸಲಾಗುತ್ತದೆ ಎಂದು ಸರ್ಕಾರ ಎಚ್ಚರಿಸಿದೆ.
ಗಡುವು ಮೀರಿದರೆ ದಂಡ:
ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ನಿಯಮಗಳ ಪ್ರಕಾರ ಪ್ರತಿ ವರ್ಷ ತೆರಿಗೆ ಪಾವತಿಸುವುದು ಕಡ್ಡಾಯವಾಗಿದೆ. ಗಡುವು ಮೀರಿ ಪಾವತಿಸಿದರೆ ಬಾಕಿ ಮೊತ್ತದ ಮೇಲೆ 5% ದಂಡ ವಿಧಿಸಲಾಗುತ್ತದೆ. ಆದ್ದರಿಂದ ನಾಗರಿಕರು ತಕ್ಷಣವೇ ತೆರಿಗೆ ಪಾವತಿಸುವುದು ಉತ್ತಮ.
ಆನ್‌ಲೈನ್ ಮೂಲಕ ಸುಲಭ ಪಾವತಿ:
ಇಂದಿನ ಡಿಜಿಟಲ್ ಯುಗದಲ್ಲಿ ಪಂಚಾಯತ್ ಕಚೇರಿಗೆ ಹೋಗುವ ಅವಶ್ಯಕತೆಯಿಲ್ಲ. ಜನರು ತಮ್ಮ ಮೊಬೈಲ್‌ನಲ್ಲಿ PhonePe, Google Pay, BHIM, Paytm ಮುಂತಾದ UPI ಆಪ್‌ಗಳ ಮೂಲಕ ಸುಲಭವಾಗಿ ತೆರಿಗೆ ಪಾವತಿಸಬಹುದು.
ಪಾವತಿ ವಿಧಾನ:
• ಮೊಬೈಲ್‌ನಲ್ಲಿ UPI ಆಪ್ ತೆರೆಯಿರಿ
• Payments ವಿಭಾಗದಲ್ಲಿ BSK (Bapuji Seva Kendra) ಆಯ್ಕೆ ಮಾಡಿ
• ಬಾಕಿ ತೆರಿಗೆ ವಿವರ ನೋಡಿ ಪಾವತಿ ಮಾಡಿ
• ನಂತರ ರಸೀದಿಯನ್ನು ಡೌನ್‌ಲೋಡ್ ಮಾಡಿಕೊಳ್ಳಿ.
ಆಸ್ತಿ ತೆರಿಗೆ ಪಾವತಿ ಏಕೆ ಮುಖ್ಯ?
•ಆಸ್ತಿ ತೆರಿಗೆ ಪಾವತಿಸುವುದು ಕೇವಲ ಕಾನೂನುಬದ್ಧ ಕರ್ತವ್ಯವಲ್ಲ, ಅದು ಗ್ರಾಮ ಅಭಿವೃದ್ಧಿಗೆ ಮೂಲವಾಗಿದೆ.
•ರಸ್ತೆ, ಚರಂಡಿ, ಬೀದಿ ದೀಪಗಳಿಗೆ ನೆರವು.
•ಕುಡಿಯುವ ನೀರಿನ ವ್ಯವಸ್ಥೆಗೆ ಬಳಕೆ.
•ಸ್ವಚ್ಛತೆ ಮತ್ತು ನೈರ್ಮಲ್ಯ ಕಾಪಾಡಲು ಸಹಾಯ
•ಸರ್ಕಾರದಿಂದ ಹೆಚ್ಚಿನ ಅನುದಾನ ಪಡೆಯಲು ಸಹಕಾರಿ.
ನಾಗರಿಕರಿಗೆ ದೊರೆಯುವ ಪ್ರಯೋಜನಗಳು:
•ಆಸ್ತಿ ಮಾಲೀಕತ್ವಕ್ಕೆ ಕಾನೂನುಬದ್ಧ ದಾಖಲೆ
•ಬ್ಯಾಂಕ್ ಸಾಲ ಪಡೆಯಲು ಸಹಾಯ
•ಗ್ರಾಮ ಅಭಿವೃದ್ಧಿಗೆ ಕೊಡುಗೆ
•ದಂಡದಿಂದ ಮುಕ್ತಿ
ಸಮಯಕ್ಕೆ ತೆರಿಗೆ ಪಾವತಿಸುವುದು ನಿಮ್ಮ ಹಣವನ್ನು ಉಳಿಸುವುದರ ಜೊತೆಗೆ ಜವಾಬ್ದಾರಿಯುತ ನಾಗರಿಕರಾಗಿರುವುದನ್ನು ತೋರಿಸುತ್ತದೆ.
ಮಾರ್ಚ್ 31ರೊಳಗೆ ಆಸ್ತಿ ತೆರಿಗೆ ಪಾವತಿಸಿ, ದಂಡ ತಪ್ಪಿಸಿ ಮತ್ತು ನಿಮ್ಮ ಗ್ರಾಮದ ಅಭಿವೃದ್ಧಿಗೆ ಕೈಜೋಡಿಸಿ.
Education
ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿ: ಸಂಪೂರ್ಣ ಮಾಹಿತಿ!
ರಾಜ್ಯ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಕಾನ್ಸ್‌ಟೇಬಲ್ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಮಹತ್ವದ ಹೊಸ ಅಪ್‌ಡೇಟ್ಸ್ ಪ್ರಕಟವಾಗಿವೆ. ಸರ್ಕಾರ ಮತ್ತು ಪೊಲೀಸ್ ಇಲಾಖೆ ಯುವಕರಿಗೆ ಉದ್ಯೋಗಾವಕಾಶ ಕಲ್ಪಿಸುವ ಉದ್ದೇಶದಿಂದ ದೊಡ್ಡ ಪ್ರಮಾಣದಲ್ಲಿ ನೇಮಕಾತಿ ಪ್ರಕ್ರಿಯೆ ನಡೆಸಲು ಸಿದ್ಧತೆ ಮಾಡಿಕೊಳ್ಳುತ್ತಿದೆ. ಈ ನೇಮಕಾತಿಯ ಮೂಲಕ ಸಾವಿರಾರು ಅಭ್ಯರ್ಥಿಗಳಿಗೆ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುವ ಅವಕಾಶ ಸಿಗಲಿದೆ.
ನಾಗರಿಕ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳು:
ಈ ನೇಮಕಾತಿ ಪ್ರಕ್ರಿಯೆಯಲ್ಲಿ ಪ್ರಮುಖವಾಗಿ 4,110 Civil Police Constable (CPC) ಹುದ್ದೆಗಳು ಭರ್ತಿಯಾಗಲಿವೆ. ನಾಗರಿಕ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳು ಸಾಮಾನ್ಯ ಪೊಲೀಸ್ ಠಾಣೆಗಳಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಅಪರಾಧ ತಡೆ, ಜನರ ಸುರಕ್ಷತೆ ಮತ್ತು ಸಾರ್ವಜನಿಕ ಸೇವೆಯಲ್ಲಿ ಈ ಹುದ್ದೆಯವರಿಗೆ ಪ್ರಮುಖ ಜವಾಬ್ದಾರಿಗಳು ಇರುತ್ತವೆ. ಈ ಹುದ್ದೆಗಳಿಗೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಹುದ್ದೆವಾರು ಹಂಚಿಕೆ ಮಾಡಲಾಗುತ್ತದೆ.
CAR/DAR ನಲ್ಲಿ ಹುದ್ದೆಗಳು:
ಇದಕ್ಕೆ ಜೊತೆಗೆ 1,650 CAR/DAR (City Armed Reserve / District Armed Reserve) ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳಿಗೂ ನೇಮಕಾತಿ ನಡೆಯಲಿದೆ. CAR ಮತ್ತು DAR ಘಟಕಗಳು ವಿಶೇಷ ಸಂದರ್ಭಗಳಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಬಳಸಲಾಗುತ್ತದೆ. ಸಾರ್ವಜನಿಕ ಕಾರ್ಯಕ್ರಮಗಳು, ಚುನಾವಣಾ ಭದ್ರತೆ ಮತ್ತು ತುರ್ತು ಪರಿಸ್ಥಿತಿಗಳಲ್ಲಿ ಈ ಸಿಬ್ಬಂದಿ ಪ್ರಮುಖ ಪಾತ್ರ ವಹಿಸುತ್ತಾರೆ.
ಹುದ್ದೆವಾರು ಹಂಚಿಕೆ ಮತ್ತು ನೇಮಕಾತಿ ಪ್ರಕ್ರಿಯೆ:
ಪೊಲೀಸ್ ಇಲಾಖೆಯ ಪ್ರಕಟಣೆಯ ಪ್ರಕಾರ, ಈ ಹುದ್ದೆಗಳ ಜಿಲ್ಲೆವಾರು ಮತ್ತು ವಿಭಾಗವಾರು ಹಂಚಿಕೆಯ ಸಂಪೂರ್ಣ ಮಾಹಿತಿಯನ್ನು ಶೀಘ್ರದಲ್ಲೇ ಪ್ರಕಟಿಸಲಾಗುತ್ತದೆ. ನೇಮಕಾತಿ ಪ್ರಕ್ರಿಯೆಯಲ್ಲಿ ಸಾಮಾನ್ಯವಾಗಿ ಲಿಖಿತ ಪರೀಕ್ಷೆ, ದೈಹಿಕ ಸಾಮರ್ಥ್ಯ ಪರೀಕ್ಷೆ (Physical Test) ಮತ್ತು ದಾಖಲೆ ಪರಿಶೀಲನೆ ಹಂತಗಳು ಇರಬಹುದು. ಅರ್ಜಿ ಸಲ್ಲಿಸುವ ದಿನಾಂಕ ಹಾಗೂ ಅರ್ಹತೆಗಳ ವಿವರವನ್ನು ಅಧಿಕೃತ ಅಧಿಸೂಚನೆಯ ಮೂಲಕ ತಿಳಿಸಲಾಗುತ್ತದೆ.
ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಲು ಆಸಕ್ತಿ ಇರುವ ಯುವಕರಿಗೆ ಇದು ಉತ್ತಮ ಅವಕಾಶವಾಗಿದೆ. ಸರ್ಕಾರಿ ಉದ್ಯೋಗ ಪಡೆಯಲು ಬಯಸುವ ಅಭ್ಯರ್ಥಿಗಳು ಈ ನೇಮಕಾತಿ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಗಮನಿಸಿ, ತಯಾರಿಯನ್ನು ಈಗಿನಿಂದಲೇ ಆರಂಭಿಸುವುದು ಒಳಿತು. ಶೀಘ್ರದಲ್ಲೇ ಅಧಿಕೃತ ಅಧಿಸೂಚನೆ ಪ್ರಕಟವಾಗುವ ಸಾಧ್ಯತೆ ಇದೆ.
Agriculture
ಪಾರ್ಥೇನಿಯಂ ಕಸದಿಂದ ಕಾಂಪೋಸ್ಟ್ ಗೊಬ್ಬರ ತಯಾರಿಸುವ ವಿಧಾನ!
ಪಾರ್ಥೇನಿಯಂ (Congress Grass) ಎಂಬ ಕಳೆಗಿಡ ರೈತರಿಗೆ ದೊಡ್ಡ ಸಮಸ್ಯೆಯಾಗಿದೆ. ಇದು ಬೆಳೆಗಳ ಬೆಳವಣಿಗೆಗೆ ಅಡ್ಡಿಯಾಗುವುದಷ್ಟೇ ಅಲ್ಲದೆ ಮಣ್ಣಿನ ಗುಣಮಟ್ಟವನ್ನೂ ಹಾಳು ಮಾಡುತ್ತದೆ. ಆದರೆ ಇದೇ ಪಾರ್ಥೇನಿಯಂ ಗಿಡವನ್ನು ಸರಿಯಾದ ವಿಧಾನದಲ್ಲಿ ಬಳಸಿ ಉತ್ತಮ ಜೈವಿಕ ಕಾಂಪೋಸ್ಟ್ ಗೊಬ್ಬರವನ್ನು ತಯಾರಿಸಬಹುದು.
ಪಾರ್ಥೇನಿಯಂ ಕಾಂಪೋಸ್ಟ್ ಎಂದರೇನು?
ಪಾರ್ಥೇನಿಯಂ ಗಿಡಗಳನ್ನು ಕುಲುಮೆಯಾಗಿ ಮಾಡಿಸಿ ಜೀವಾಣುಗಳ ಸಹಾಯದಿಂದ ತಯಾರಿಸುವ ಜೈವಿಕ ಗೊಬ್ಬರವನ್ನು ಪಾರ್ಥೇನಿಯಂ ಕಾಂಪೋಸ್ಟ್ ಎಂದು ಕರೆಯುತ್ತಾರೆ. ಈ ಗೊಬ್ಬರದಲ್ಲಿ ನೈಟ್ರೋಜನ್, ಫಾಸ್ಫರಸ್ ಮತ್ತು ಪೊಟ್ಯಾಶಿಯಂ ಸೇರಿದಂತೆ ಹಲವು ಪೋಷಕಾಂಶಗಳು ಇರುವುದರಿಂದ ಮಣ್ಣಿನ ಉರ್ವರತೆ ಹೆಚ್ಚುತ್ತದೆ. ಇದರಿಂದ ಬೆಳೆಗಳ ಬೆಳವಣಿಗೆ ಉತ್ತಮವಾಗುತ್ತದೆ.
ಕಾಂಪೋಸ್ಟ್ ತಯಾರಿಸಲು ಬೇಕಾಗುವ ಸಾಮಗ್ರಿಗಳು:
ಪಾರ್ಥೇನಿಯಂ ಕಾಂಪೋಸ್ಟ್ ತಯಾರಿಸಲು ಪಾರ್ಥೇನಿಯಂ ಗಿಡಗಳು, ಗೋಮಯ, ಮಣ್ಣು, ಯೂರಿಯಾ ಅಥವಾ ರಾಕ್ ಫಾಸ್ಫೇಟ್ ಮತ್ತು ನೀರು ಅಗತ್ಯವಿರುತ್ತದೆ. ಇವುಗಳ ಸಹಾಯದಿಂದ ಸುಲಭವಾಗಿ ಗೊಬ್ಬರ ತಯಾರಿಸಬಹುದು.
ಕಾಂಪೋಸ್ಟ್ ತಯಾರಿಸುವ ವಿಧಾನ:
ಮೊದಲಿಗೆ ಸುಮಾರು 3 ಅಡಿ ಆಳ ಮತ್ತು 6–8 ಅಡಿ ಅಗಲದ ಗುಂಡಿಯನ್ನು ತೋಡಬೇಕು. ಗುಂಡಿಯ ತಳಭಾಗದಲ್ಲಿ ಪಾರ್ಥೇನಿಯಂ ಗಿಡಗಳನ್ನು ಒಂದು ಪದರವಾಗಿ ಹಾಕಬೇಕು. ನಂತರ ಅದರ ಮೇಲೆ ಸ್ವಲ್ಪ ಮಣ್ಣು ಮತ್ತು ಸಗಣಿಯನ್ನು ಹಾಕಬೇಕು. ಅದರ ಮೇಲೆ ಯೂರಿಯಾ ಅಥವಾ ರಾಕ್ ಫಾಸ್ಫೇಟ್ ಅನ್ನು ಸ್ವಲ್ಪ ಪ್ರಮಾಣದಲ್ಲಿ ಸಿಂಪಡಿಸಬೇಕು. ನಂತರ ನೀರನ್ನು ಹಾಕಿ ತೇವವಾಗುವಂತೆ ಮಾಡಬೇಕು. ಇದೇ ರೀತಿ ಪದರಗಳನ್ನು ಪುನರಾವರ್ತಿಸಿ ಗುಂಡಿ ತುಂಬುವವರೆಗೆ ಹಾಕಬೇಕು. ಕೊನೆಯಲ್ಲಿ ಮಣ್ಣಿನಿಂದ ಮುಚ್ಚಬೇಕು.
ಸುಮಾರು 3 ರಿಂದ 4 ತಿಂಗಳೊಳಗೆ ಪಾರ್ಥೇನಿಯಂ ಸಂಪೂರ್ಣವಾಗಿ ಕುಲುಮೆಯಾಗುತ್ತದೆ ಮತ್ತು ಉತ್ತಮ ಕಾಂಪೋಸ್ಟ್ ಗೊಬ್ಬರ ಸಿದ್ಧವಾಗುತ್ತದೆ.
ಪಾರ್ಥೇನಿಯಂ ಕಾಂಪೋಸ್ಟ್‌ನ ಪ್ರಯೋಜನಗಳು:
ಪಾರ್ಥೇನಿಯಂ ಕಾಂಪೋಸ್ಟ್ ಬಳಕೆ ಮಾಡುವುದರಿಂದ ಮಣ್ಣಿನ ಉರ್ವರತೆ ಹೆಚ್ಚುತ್ತದೆ. ಜೈವಿಕ ಪದಾರ್ಥಗಳ ಪ್ರಮಾಣ ಹೆಚ್ಚಾಗಿ ಬೆಳೆಗಳ ಬೆಳವಣಿಗೆ ಉತ್ತಮವಾಗುತ್ತದೆ. ಜೊತೆಗೆ ಕಳೆ ಸಮಸ್ಯೆಯನ್ನು ನಿಯಂತ್ರಿಸಲು ಸಹ ಇದು ಸಹಕಾರಿ.
ಒಟ್ಟಾರೆ, ರೈತರು ಪಾರ್ಥೇನಿಯಂ ಕಸವನ್ನು ವ್ಯರ್ಥವಾಗಿ ಬಿಡುವುದಕ್ಕಿಂತ ಕಾಂಪೋಸ್ಟ್ ಗೊಬ್ಬರವಾಗಿ ಬಳಸಿದರೆ ಕೃಷಿಯಲ್ಲಿ ಉತ್ತಮ ಫಲಿತಾಂಶ ಪಡೆಯಬಹುದು.
-
Special18 hours agoಮಹಿಳೆಯರಿಗೆ 35 ದಿನಗಳ ಉಚಿತ ಬ್ಯೂಟಿ ಪಾರ್ಲರ್ ತರಬೇತಿ: ಅರ್ಜಿ ಆಹ್ವಾನ!!
-
Kodagu15 hours agoಗೋಣಿಕೊಪ್ಪದಲ್ಲಿ ಜೂ.5 ರಿಂದ ಮಾವು ಮೇಳ
-
Mandya8 hours agoಮಂಡ್ಯ ಜಿಲ್ಲೆಯ ಮೊದಲ ಅಕ್ಕ ಕೆಫೆ ಉದ್ಗಾಟನೆಗೆ ಸಜ್ಜು: ಜಿ.ಪಂ. ಸಿಇಓ ಕೆ.ಆರ್. ನಂದಿನಿ
-
Kodagu15 hours agoವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಬಾಳಲೆಯಲ್ಲಿ ರಕ್ತದಾನ ಶಿಬಿರ
-
Politics6 hours agoಕರ್ನಾಟಕದ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್: ಸರ್ಕಾರದ ಅಧಿಕೃತ ಆದೇಶ
-
Hassan12 hours agoಹೃದಯ ಆರೈಕೆಗೆ ಜನಪ್ರಿಯ ಆಸ್ಪತ್ರೆಯ ನೂತನ ಕಾರ್ಡಿಯಾಕ್ ಕೇರ್ ಘಟಕ ಉದ್ಘಾಟನೆ
-
Mandya13 hours agoಯುವಜನರಿಗೆ ನಾಲ್ವಡಿ ಕೃಷ್ಣರಾಜ ಒಡೆಯರವರ ಆದರ್ಶಗಳು ಸದಾ ಸ್ಫೂರ್ತಿಯಾಗಿವೆ : ಬಿ. ಸಿ. ಶಿವಾನಂದಮೂರ್ತಿ
-
Chamarajanagar11 hours agoಹಸುವನ್ನು ಕರೆತರಲು ಹೋದ ಮಹಿಳೆ ಕುಸಿದು ಬಿದ್ದು ಸಾವು
