National - International
ಮಾಲ್ಡೀವ್ಸ್ನ 60ನೇ ಸ್ವಾತಂತ್ರ್ಯ ದಿನಾಚರಣೆಗೆ ಪ್ರಧಾನಿ ಮೋದಿ ಮುಖ್ಯ ಅತಿಥಿ
ಮಾಲ್ಡೀವ್ಸ್/ನವದೆಹಲಿ: ಮಾಲ್ಡೀವ್ಸ್ನ 60ನೇ ಸ್ವಾತಂತ್ರ್ಯ ದಿನಾಚರಣೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಮುಖ್ಯ ಅತಿಥಿಯಾಗಿ ಆಹ್ವಾನಿಸಿದ್ದು, ಜುಲೈ. 25 ಮತ್ತು 26 ರಂದು ತೆರಳಲಿದ್ದಾರೆ.
ಕಳೆದ ಎರಡು ವರ್ಷಗಳಿಂದ ಭಾರತ ಮತ್ತು ಮಾಲ್ಡೀವ್ಸ್ನ ಸಂಬಂಧ ತೀರಾ ಹದಗೆಟ್ಟಿತ್ತು. 2023ರಲ್ಲಿ ಇಂಡಿಯಾ ಔಟ್ ಅಭಿಯಾನವನ್ನು ಮಾಲ್ಡೀವ್ಸ್ ಸರ್ಕಾರ ಪ್ರಾರಂಭಿಸಿತ್ತು. ಮೊಹಮ್ಮದ್ ಮುಯಿಝು ಮಾಲ್ಡೀವ್ಸ್ ಅಧ್ಯಕ್ಷರಾದ ಬಳಿಕ ಪ್ರಧಾನಿ ಮೋದಿ ಮೊದಲ ಬಾರಿಗೆ ಮಾಲ್ಡೀವ್ಸ್ ಪ್ರವಾಸ ಕೈಗೊಳ್ಳಲಿದ್ದಾರೆ.

ಅಲ್ಲಿನ ಸಚಿವರು ನೇರವಾಗಿಯೇ ಪ್ರಧಾನಿ ಮೋದಿ ವಿರುದ್ಧ ಅಪಪ್ರಚಾರ ಮಾಡಿದ್ದರು. ಅದಕ್ಕೆ ಭಾರತವೂ ಮಾಲ್ಡೀವ್ಸ್ ಹೆಸರೆತ್ತದೆ ಭಾರತದ ಲಕ್ಷ್ಯದ್ವೀಪ ಮಾಲ್ಡೀವ್ಸ್ಗಿಂತಲೂ ಸುಂದರವಾಗಿ ಹೆಚ್ಚಿನ ಜನರು ಅಲ್ಲಿಗೆ ಭೇಟಿ ನೀಡಬೇಕೆಂದು ಮೋದಿ ಹೇಳಿದ್ದರು. ಅದಾದ ನಂತರ ಮಾಲ್ಡೀವ್ಸ್ ಹೋಗುವ ಭಾರತೀಯರ ಸಂಖ್ಯೆಯಲ್ಲಿ ಗಮನಾರ್ಹ ಕಡಿತ ಉಂಟಾಗಿತ್ತು. ಆದರೆ ಕೇವಲ ಪ್ರವಾಸೋದ್ಯಮವನ್ನೇ ನಂಬಿಕೊಂಡಿರುವ ಮಾಲ್ಡೀವ್ಸ್ಗೆ ಇದರಿಂದ ಭಾರೀ ಮಟ್ಟದಲ್ಲಿ ಹೊಡೆತ ಬಿದ್ದಿತ್ತು.
ಇದೀಗ ಮತ್ತೆ ಭಾರತದೊಂದಿಗಿನ ಸಂಬಂಧವನ್ನು ಸರಿಯಾಗಿಸಿಕೊಂಡು ಪ್ರವಾಸಿಗರನ್ನು ಆಕರ್ಷಿಸಲು ಮಾಲ್ಡೀವ್ಸ್ ಮುಂದಾಗಿದೆ. ಅಲ್ಲದೇ ಸ್ವಾತಂತ್ರ್ಯ ದಿನಾಚರಣೆಯಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಮುಖ್ಯ ಅತಿಥಿಯನ್ನಾಗಿ ಮಾಡಿರುವುದು ಮಾಲ್ಡೀವ್ಸ್ ಹಾಗೂ ಭಾರತ ನಡುವಿನ ನಿಕಟ ದ್ವಿಪಕ್ಷೀಯ ಸಂಬಂಧಗಳನ್ನು ಬಲಪಡಿಸಲು ಎಂಬುದರ ಸೂಚನೆಯಾಗಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.
National - International
ಭಾರತಕ್ಕೆ ಭರ್ಜರಿ ಜಯ; ಜಿಂಬಾಬ್ವೆ ವಿರುದ್ಧ ಟಿ-20 ಸರಣಿ ವಶ
India vs Zimbabwe T20 series: ಹರಾರೆಯಲ್ಲಿ ನಡೆದ ಎರಡನೇ ಟಿ20 ಪಂದ್ಯದಲ್ಲಿ ಭಾರತ ತಂಡ ಜಿಂಬಾಬ್ವೆ ವಿರುದ್ಧ 90 ರನ್‌ಗಳ ಭರ್ಜರಿ ಜಯ ಸಾಧಿಸಿ, ಮೂರು ಪಂದ್ಯಗಳ ಸರಣಿಯನ್ನು ಇನ್ನೂ ಒಂದು ಪಂದ್ಯ ಬಾಕಿ ಇರುವಾಗಲೇ ತನ್ನದಾಗಿಸಿಕೊಂಡಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ಆರಂಭದಲ್ಲೇ ಅಭಿಷೇಕ್ ಶರ್ಮಾ (8) ಮತ್ತು ವೈಭವ್ ಸೂರ್ಯವಂಶಿ (20) ವಿಕೆಟ್ ಕಳೆದುಕೊಂಡಿತು. ಬಳಿಕ ಇಶಾನ್ ಕಿಶನ್ ಮತ್ತು ನಾಯಕ ಶ್ರೇಯಸ್ ಅಯ್ಯರ್ ಜವಾಬ್ದಾರಿಯುತ ಆಟವಾಡಿ ಮೂರನೇ ವಿಕೆಟ್‌ಗೆ 66 ರನ್‌ಗಳ ಜೊತೆಯಾಟ ಕಟ್ಟಿದರು. ಅಯ್ಯರ್ 25 ರನ್ ಗಳಿಸಿ ಔಟಾದ ಬಳಿಕ, ತಿಲಕ್ ವರ್ಮಾ ಕಣಕ್ಕಿಳಿದು ಕಿಶನ್‌ಗೆ ಉತ್ತಮ ಸಾಥ್ ನೀಡಿದರು.

ಶತಕದತ್ತ ಸಾಗುತ್ತಿದ್ದ ಇಶಾನ್ ಕಿಶನ್ 44 ಎಸೆತಗಳಲ್ಲಿ 81 ರನ್‌ಗಳ ಅಮೋಘ ಇನ್ನಿಂಗ್ಸ್ ಆಡಿ ಔಟಾದರೆ, ತಿಲಕ್ ವರ್ಮಾ ಕೇವಲ 29 ಎಸೆತಗಳಲ್ಲಿ ಅಜೇಯ 60 ರನ್ ಸಿಡಿಸಿ ಮಿಂಚಿದರು. ಕೊನೆಯಲ್ಲಿ ಶಿವಂ ದುಬೆ 6 ರನ್ ಗಳಿಸಿ ಅಜೇಯರಾಗಿದ್ದು, ಭಾರತ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 219 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು.
220 ರನ್‌ಗಳ ಗುರಿ ಬೆನ್ನಟ್ಟಿದ ಜಿಂಬಾಬ್ವೆಗೆ ಬ್ರಿಯಾನ್ ಬೆನೆಟ್ 32 ರನ್‌ಗಳೊಂದಿಗೆ ಉತ್ತಮ ಆರಂಭ ನೀಡಿದರೂ, ಭಾರತದ ಬೌಲರ್‌ಗಳ ದಾಳಿಗೆ ಆತಿಥೇಯರ ಬ್ಯಾಟಿಂಗ್ ಕುಸಿಯಿತು. ಸಿಕಂದರ್ ರಝಾ ಸೇರಿದಂತೆ ಪ್ರಮುಖ ಬ್ಯಾಟರ್‌ಗಳು ನಿರಾಸೆ ಮೂಡಿಸಿದ ಪರಿಣಾಮ ಜಿಂಬಾಬ್ವೆ 17.5 ಓವರ್‌ಗಳಲ್ಲಿ 129 ರನ್‌ಗಳಿಗೆ ಆಲೌಟ್ ಆಯಿತು.

ಭಾರತದ ಪರ ಅಭಿಷೇಕ್ ಶರ್ಮಾ 3 ವಿಕೆಟ್ ಕಬಳಿಸಿದರೆ, ಯಶ್ ಠಾಕೂರ್ ಮತ್ತು ಪ್ರಿನ್ಸ್ ಯಾದವ್ ತಲಾ 2 ವಿಕೆಟ್ ಪಡೆದು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಈ ಜಯದೊಂದಿಗೆ ಭಾರತ 2-0 ಅಂತರದ ಅಜೇಯ ಮುನ್ನಡೆ ಸಾಧಿಸಿ ಟಿ20 ಸರಣಿಯನ್ನು ತನ್ನದಾಗಿಸಿಕೊಂಡಿದೆ.
National - International
ಕಪ್ಪು ಸಮುದ್ರದಲ್ಲಿ ಸಾಗುತ್ತಿದ್ದ ಹಡಗಿನ ಮೇಲೆ ದಾಳಿ; ಭಾರತೀಯ ಪ್ರಜೆ ಸಾ*ವು
ನವದೆಹಲಿ: ಕಪ್ಪು ಸಮುದ್ರದ ಮೂಲಕ ಸಾಗುತ್ತಿದ್ದ ವಾಣಿಜ್ಯ ಹಡಗಿನ ಮೇಲೆ ದಾಳಿ ನಡೆದಿದ್ದು, ಈ ದಾಳಿಗೆ ಭಾರತೀಯ ಪ್ರಜೆಯೊಬ್ಬರು ಸಾವನ್ನಪ್ಪಿದ್ದಾರೆ ಎಂದು ವಿದೇಶಾಂಗ ಸಚಿವಾಲಯ (ಎಂಇಎ) ಶುಕ್ರವಾರ ತಿಳಿಸಿದೆ.
ಜುಲೈ 18 ರಂದು ಕಪ್ಪು ಸಮುದ್ರದಲ್ಲಿ ಸಾಗುತ್ತಿದ್ದ MV OMORFI ವಾಣಿಜ್ಯ ಹಡಗಿನ ಮೇಲೆ ದಾಳಿ ನಡೆದಿದೆ. ಈ ಘಟನೆ ರಷ್ಯಾದ ಪ್ರಾದೇಶಿಕ ಜಲ ಪ್ರದೇಶದಲ್ಲಿ ವರದಿಯಾಗಿದೆ. ಈ ದಾಳಿಯಲ್ಲಿ ಭಾರತೀಯ ನಾಗರಿಕರೊಬ್ಬರು ಪ್ರಾಣ ಕಳೆದುಕೊಂಡಿದ್ದಾರೆ. ಮೃತರ ಕುಟುಂಬಕ್ಕೆ ನಮ್ಮ ಸಂತಾಪವನ್ನು ವ್ಯಕ್ತಪಡಿಸುತ್ತೇವೆ ಎಂದು ಸಚಿವಾಲಯ ಸಂತಾಪ ವ್ಯಕ್ತಪಡಿಸಿದೆ.
ದಾಳಿಯ ಸಮಯದಲ್ಲಿ, ಮೂವರು ಭಾರತೀಯ ಪ್ರಜೆಗಳು ಸೇರಿದಂತೆ 10 ಸಿಬ್ಬಂದಿ ಹಡಗಿನಲ್ಲಿದ್ದರು ಎಂದು ತಿಳಿದುಬಂದಿದೆ. ಹಡಗಿನಲ್ಲಿರುವ ಇತರ ಇಬ್ಬರು ಭಾರತೀಯ ಪ್ರಜೆಗಳು ಸುರಕ್ಷಿತವಾಗಿದ್ದಾರೆಂದು ವರದಿಯಾಗಿದೆ ಎಂದು ಸಚಿವಾಲಯ ಪೋಸ್ಟ್ ಹಂಚಿಕೊಂಡಿದೆ.
National - International
ವೈಭವ್ ಅಬ್ಬರಕ್ಕೆ ಜಿಂಬಾಬ್ವೆ ತತ್ತರ; ಭಾರತಕ್ಕೆ ಸುಲಭ ಜಯ
ಹರಾರೆ: ಇಂಗ್ಲೆಂಡ್ ವಿರುದ್ಧ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲರಾಗಿದ್ದ 15 ವರ್ಷದ ಯುವ ಬ್ಯಾಟರ್ ವೈಭವ್ ಸೂರ್ಯವಂಶಿ, ಜಿಂಬಾಬ್ವೆ ವಿರುದ್ಧದ ಮೊದಲ ಟಿ20 ಪಂದ್ಯದಲ್ಲೇ ಸ್ಫೋಟಕ ಬ್ಯಾಟಿಂಗ್ ಮೂಲಕ ಭರ್ಜರಿ ಕಮ್‌ಬ್ಯಾಕ್ ಮಾಡಿದ್ದಾರೆ. ಕೇವಲ 18 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ, ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅರ್ಧಶತಕ ದಾಖಲಿಸಿದ ಅತ್ಯಂತ ಕಿರಿಯ ಬ್ಯಾಟರ್ ಎಂಬ ಹೊಸ ಇತಿಹಾಸ ನಿರ್ಮಿಸಿದ್ದಾರೆ.
15 ವರ್ಷ 118 ದಿನಗಳ ವಯಸ್ಸಿನ ವೈಭವ್, ಭಾರತದ ಪರ ಇನ್ನಿಂಗ್ಸ್ ಆರಂಭಿಸಿ ಮೊದಲ ಓವರ್‌ನಲ್ಲೇ ಸಿಕ್ಸರ್‌ಗಳು ಮತ್ತು ಬೌಂಡರಿಗಳ ಸುರಿಮಳೆಗೈದರು. ಅಬ್ಬರದ ಬ್ಯಾಟಿಂಗ್ ಮುಂದುವರಿಸಿದ ಅವರು ಏಳನೇ ಓವರ್‌ನಲ್ಲಿ ಎರಡು ರನ್ ಕಲೆಹಾಕುವ ಮೂಲಕ ತಮ್ಮ ಚೊಚ್ಚಲ ಟಿ20 ಅಂತಾರಾಷ್ಟ್ರೀಯ ಅರ್ಧಶತಕ ಪೂರೈಸಿದರು. ಅರ್ಧಶತಕದ ತಕ್ಷಣವೇ ವಿಕೆಟ್ ಒಪ್ಪಿಸಿದರೂ, ಅವರ ಸಿಡಿಲಬ್ಬರದ ಆಟ ತಂಡದ ಗೆಲುವಿಗೆ ಭದ್ರ ಬುನಾದಿ ಹಾಕಿತು.

ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ ಜಿಂಬಾಬ್ವೆ 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 125 ರನ್ ಗಳಿಸಿತು. ವೆಸ್ಲಿ ಮಾಧೇವೆರೆ 39 ಹಾಗೂ ಮರುಮಾನಿ 27 ರನ್‌ಗಳಿಸಿ ತಂಡಕ್ಕೆ ಆಸರೆಯಾದರು.
126 ರನ್‌ಗಳ ಗುರಿ ಬೆನ್ನಟ್ಟಿದ ಭಾರತ, ವೈಭವ್ ಅವರ ಅಬ್ಬರದ ಆರಂಭದ ಬಳಿಕ ಇಶಾನ್ ಕಿಶನ್ (35) ಮತ್ತು ನಾಯಕ ಶ್ರೇಯಸ್ ಅಯ್ಯರ್ (28*) ಅವರ ಜವಾಬ್ದಾರಿಯುತ ಬ್ಯಾಟಿಂಗ್ ನೆರವಿನಿಂದ ಕೇವಲ 13.2 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು ಗುರಿ ತಲುಪಿತು. ತಿಲಕ್ ವರ್ಮಾ 6 ರನ್‌ಗಳೊಂದಿಗೆ ಅಜೇಯರಾಗಿ ಉಳಿದರು.

ವೈಭವ್ ಸೂರ್ಯವಂಶಿ ಅವರ ಈ ಸ್ಫೋಟಕ ಇನ್ನಿಂಗ್ಸ್ ಭಾರತದ ಭವಿಷ್ಯದ ತಾರೆಯಾಗಿ ಅವರ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ.
-
Mandya14 hours agoಡ್ರಗ್ಸ್ ಮತ್ತು ಮಾದಕ ವಸ್ತುಗಳ ದುಷ್ಪರಿಣಾಮಗಳಿಂದ ಯುವಜನತೆಯನ್ನು ರಕ್ಷಿಸಲು ಸಮನ್ವಯದ ಕ್ರಮ ಅಗತ್ಯ: ನ್ಯಾ.ಸುಬ್ರಮಣ್ಯ ಜೆ. ಎನ್
-
Mandya10 hours agoತಮಿಳುನಾಡಿಗೆ ಪ್ರತಿನಿತ್ಯ 3,500 ಕ್ಯೂಸೆಕ್ ನೀರು ಹರಿಸಲು ಆದೇಶ : ಮಂಡ್ಯದಲ್ಲಿ ಪ್ರತಿಭಟನೆ
-
Chamarajanagar6 hours agoಮಲೆಮಹದೇಶ್ವರ ಬೆಟ್ಟದಲ್ಲಿ ಹುಂಡಿ ಎಣಿಕೆ ಕಾರ್ಯ : ಕೋಟಿ ಒಡೆಯ ಮಾದಪ್ಪ 3.37 ಕೋಟಿ ಸಂಗ್ರಹ
-
Kodagu11 hours agoನಾಪೊಕ್ಲು ಬ್ಲಾಕ್ ವ್ಯಾಪ್ತಿಯ ನೂತನ ವಲಯ ಕಾಂಗ್ರೆಸ್ ಅಧ್ಯಕ್ಷರ ನೇಮಕ
-
Chamarajanagar6 hours agoಮಹಾಂತಸ್ವಾಮೀಜಿ ತ್ಯಾಗದಿಂದ ಸಂಸ್ಥೆ ಬೆಳವಣಿಗೆ: ಶ್ರೀಇಮ್ಮಡಿ ಮುರುಘರಾಜೇಂದ್ರಸ್ವಾಮೀಜಿ
-
Mysore12 hours ago“ಅಕ್ಷರ, ಆರೋಗ್ಯ ರಾಜಕಾರಣಿಗಳ ಕೈಯಲ್ಲಿ; ಕೆಪಿಎಸ್ಸಿ ನೇಮಕಾತಿಯೂ ಅಕ್ರಮ” : ಎಚ್. ವಿಶ್ವನಾಥ್ ವಾಗ್ದಾಳಿ
-
Mandya12 hours agoಆರೋಪಿಗಳನ್ನು ದಸ್ತಗಿರಿ ಮಾಡಿ ವಿಚಾರಿಸದ ತನಿಖಾಧಿಕಾರಿ ಬದಲಾವಣೆಗೆ ಆಗ್ರಹ : ಸಿ.ಎಂ.ಕೃಷ್ಣ
-
Mysore10 hours agoಆಗಸ್ಟ್ 1ರಂದು ಮೈಸೂರಿನಲ್ಲಿ ವಿವೇಕಾನಂದ ಸ್ಮಾರಕ ಉದ್ಘಾಟನೆಗೆ ಪ್ರಧಾನಿ ಮೋದಿ ಆಗಮನ – ವಿಜಯೇಂದ್ರ
