Connect with us

National - International

NISAR ಉಪಗ್ರಹ ಉಡಾವಣೆ ಯಶ್ವಸಿ: ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಹತ್ವ ಮೈಲಿಗಲ್ಲು

Published

on

ಶ್ರೀಹರಿಕೋಟ: ಪ್ರಥಮ ಬಾರಿಗೆ ಭಾರತದ ಇಸ್ರೊ ಹಾಗೂ ಅಮೆರಿಕದ ನಾಸಾ  ಜಂಟಿಯಾಗಿ ಅಭಿವೃದ್ಧಿಪಡಿಸಿದ ಭೂಮಿ ಸಮೀಕ್ಷೆಯ ಸಿಂಥೆಟಿಕ್‌ ಅಪರ್ಚರ್ ರೇಡಾರ್ (NISAR) ಉಪಗ್ರಹ ಉಡಾವಣೆ ಯಶಸ್ವಿಯಾಗಿದೆ.

ಸತೀಶ್‌ ಧವನ್‌ ಬಾಹ್ಯಾಕಾಶ ಕೇಂದ್ರದಿಂದ ಇಂದು ಸಂಜೆ 5:40 ಗಂಟೆಗೆ ಜಿಎಸ್‌ಎಲ್‌ವಿ- ಎಫ್‌16 ರಾಕೆಟ್‌ ಮೂಲಕ ನಾಸಾ-ಇಸ್ರೋ ಸಿಂಥೆಟಿಕ್‌ ಅಪರ್ಚರ್ ರೇಡಾರ್ (NISAR) ಉಡಾವಣೆ ಮಾಡಲಾಯಿತು. ಉಪಗ್ರಹ ಯಶಸ್ವಿಯಾಗಿ ಕಕ್ಷೆಗೆ ತಲುಪುವ ಮೂಲಕ ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತ ಮಹತ್ವದ ಮೈಲಿಗಲ್ಲು ನಿರ್ಮಿಸಿದೆ.
 NISAR ಉಪಗ್ರಹ 2,392 ಕೆ.ಜಿ. ತೂಕದ ಹಾಗೂ ಡ್ಯುಯಲ್-ಫ್ರೀಕ್ವೆನ್ಸಿ ರೇಡಾರ್‌ ವ್ಯವಸ್ಥೆಗಳಿಂದ (L-ಬ್ಯಾಂಡ್ ಮತ್ತು S-ಬ್ಯಾಂಡ್) ಚಾಲಿತಯಾಗಿದ್ದು, ವಿಪತ್ತುಗಳು, ಹವಾಮಾನ ಬದಲಾವಣೆಗಳು ಹಾಗೂ ಪರಿಸರ ಬದಲಾವಣೆಗಳ ಬಗ್ಗೆ ನೈಜ-ಸಮಯದ ಡೇಟಾವನ್ನು ಒದಗಿಸಲಿದೆ. ಎಲ್ಲಾ ಹವಮಾನದಲ್ಲಿ ಹಗಲು ಮತ್ತು ರಾತ್ರಿಯ ವೇಳೆ ಹೆಚ್ಚಿನ ರೆಸಲ್ಯೂಶನ್ ಇರುವ ಚಿತ್ರವನ್ನು ಸೆರೆ ಹಿಡಿಯಲಿದೆ.

ಎಲ್‌–ಬ್ಯಾಂಡ್ ಅನ್ನು ನಾಸಾ ತಯಾರಿಸಿದ್ದರೆ ಎಸ್‌–ಬ್ಯಾಂಡ್‌ ಅನ್ನು ಇಸ್ರೊ ತಯಾರಿಸಿದೆ. ಎಸ್‌–ಬ್ಯಾಂಡ್‌ ಅನ್ನು ಸಿಂಥೆಟಿಕ್‌ ಅಪರ್ಚರ್ ರೇಡಾರ್‌ನಲ್ಲಿ ಅಳವಡಿಸಲಾಗುತ್ತದೆ. ಇದರಿಂದ ಭೂಮಿಗೆ ಸಂಬಂಧಿಸಿದಂತೆ ದತ್ತಾಂಶ ಸಂಗ್ರಹ ಸಾಧ್ಯವಾಗಲಿದೆ.

NISAR 13,000 ಕೋಟಿ ರೂ. ವೆಚ್ಚ 
ಇನ್ನೂ ನಿಸಾರ್‌ ಭೂಸರ್ವೇಕ್ಷಣಾ ಉಪಗ್ರಹಕ್ಕೆ 13,000 ಕೋಟಿ ರೂ. ವೆಚ್ಚ ಮಾಡಲಾಗಿದ್ದು, ವಿಶ್ವದ ಅತ್ಯಂತ ದುಬಾರಿ ಕಣ್ಗಾವಲು ಉಪಗ್ರಹವಾಗಿ ಗುರುತಿಸಿಕೊಂಡಿದೆ. ಅಲ್ಲದೇ ನಿಸಾರ್‌ ಉಪಗ್ರಹವು ಒಂದು ಬಾರಿಗೆ 242 ಕಿಮೀ ಭೂವಿಸ್ತೀರ್ಣವನ್ನು ನೋಡುವ ಸಾಮರ್ಥ್ಯ ಹೊಂದಿದೆ. 97 ನಿಮಿಷಕ್ಕೆ ಭೂಮಿಗೆ ಒಂದು ಸುತ್ತು ಬರಲಿದೆ. ಮುಖ್ಯವಾಗಿ ನಿಸಾರ್‌ ಉಪಗ್ರಹವು ಕಳುಹಿಸುವ ಎಲ್ಲ ಮಾಹಿತಿಗಳು ಹಾಗೂ ದತ್ತಾಂಶಗಳನ್ನು ಉಚಿತವಾಗಿ ಎಲ್ಲಾ ದೇಶಗಳು ಅಧ್ಯಯನಕ್ಕೆ ಬಳಸಿಕೊಳ್ಳಬಹುದಾಗಿದೆ. 

NISAR ಉಪಹ್ರಹದಿಂದ ಏನು ಲಾಭ?

ಅರಣ್ಯ ಹಾಗೂ ಜೀವವೈವಿಧ್ಯ ಸಂರಕ್ಷಣೆ: ದಟ್ಟವಾದ ಸಸ್ಯವರ್ಗವನ್ನು ಭೇದಿಸುವ ಸಾಮರ್ಥ್ಯವನ್ನು NISAR ಹೊಂದಿರುವುದು ವಿಶೇಷ. ಅರಣ್ಯನಾಶ, ಅರಣ್ಯದಲ್ಲಿ ಆಗುವ ಬದಲಾವಣೆಯನ್ನು ನಕ್ಷೆ ಮಾಡುವಲ್ಲಿ ಪ್ರಬಲ ಸಾಧನವಾಗಿ ಬಳಕೆಯಾಗಲಿದೆ. ಅಕ್ರಮ ಮರ ಕಡಿಯುವಿಕೆಯನ್ನು ಪತ್ತೆಹಚ್ಚಲು, ಅಳಿವಿನಂಚಿನಲ್ಲಿರುವ ಪರಿಸರ ವ್ಯವಸ್ಥೆಗಳನ್ನು ರಕ್ಷಿಸಲು ಡೇಟಾವನ್ನು ಬಳಸಬಹುದು.

ವಿಪತ್ತು ನಿರ್ವಹಣೆ: ಭೂಕಂಪಗಳು, ಭೂಕುಸಿತಗಳು, ಪ್ರವಾಹಗಳು, ಜ್ವಾಲಾಮುಖಿ ಚಟುವಟಿಕೆಗಳು ಮತ್ತು ಇತರ ನೈಸರ್ಗಿಕ ವಿಕೋಪಗಳ ಬಗ್ಗೆ NISAR ರಿಯಲ್‌ ಟೈಂ ಡೇಟಾವನ್ನು ಒದಗಿಸಲಿದೆ.ಅಧಿಕಾರಿಗಳು ಈ ಡೇಟಾವನ್ನು ಬಳಸಿಕೊಂಡು ಹಾನಿಯನ್ನು ನಕ್ಷೆ ಮಾಡಲು, ವಿಪತ್ತಿನ ಪ್ರಗತಿಯನ್ನು ಪತ್ತೆಹಚ್ಚಲು ಸಹಕಾರಿಯಾಗಲಿದೆ.

ಹವಾಮಾನ ಮೇಲ್ವಿಚಾರಣೆ: ಉಪಗ್ರಹವು ಹಿಮನದಿ ಕರಗುವಿಕೆ, ಸಮುದ್ರ ಮಟ್ಟ ಏರಿಕೆ, ಮಣ್ಣಿನ ತೇವಾಂಶ ಟ್ರ್ಯಾಕ್ ಮಾಡುತ್ತದೆ.  ವಿಜ್ಞಾನಿಗಳಿಗೆ ಜಾಗತಿಕ ತಾಪಮಾನ ಏರಿಕೆಯ ವೇಗ ಮತ್ತು ಅದರ ಪ್ರಾದೇಶಿಕ ಪರಿಣಾಮಗಳನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ.

ಕೃಷಿ ಮುನ್ಸೂಚನೆ: NISAR ಬೆಳೆ ಬೆಳವಣಿಗೆ, ಮಣ್ಣಿನ ಸ್ಥಳಾಂತರ, ನೀರಾವರಿ ಮಟ್ಟಗಳು ಮತ್ತು ಭೂ ಬಳಕೆಯ ಬದಲಾವಣೆಗಳನ್ನು ಮೇಲ್ವಿಚಾರಣೆ ಮಾಡಬಹುದು. ಇದು ಸರ್ಕಾರಗಳು ಇಳುವರಿಯನ್ನು ಊಹಿಸಲು, ನೀರಿನ ಬಳಕೆಯನ್ನು ನಿರ್ವಹಿಸಲು ಮತ್ತು ಬರ ಬರಬಹುದಾ? ಇಲ್ಲವೋ ಎಂಬುದನ್ನು ಮೊದಲೇ ಪತ್ತೆಹಚ್ಚಲು ಅನುವು ಮಾಡಿಕೊಡುತ್ತದೆ.

ನಗರ ಮತ್ತು ಮೂಲಸೌಕರ್ಯ ಯೋಜನೆ: ವಿಶೇಷವಾಗಿ ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ ಭೂ ಕುಸಿತ ಮತ್ತು ರಚನಾತ್ಮಕ ಬದಲಾವಣೆಗಳ ಮಾಹಿತಿ ಸಿಗಲಿದೆ. ಅಣೆಕಟ್ಟುಗಳು, ರಸ್ತೆಗಳು, ಸೇತುವೆಗಳು ಮತ್ತು ಕಟ್ಟಡಗಳ ಮೇಲ್ವಿಚಾರಣೆಯಲ್ಲಿ ಉಪಗ್ರಹ ಸಹಾಯ ಮಾಡಲಿದೆ.

National

ಆಫ್ರಿಕಾದಲ್ಲಿ ಎಬೋಲಾ ಆತಂಕ: ಭಾರತದಲ್ಲಿ ಹೈಅಲರ್ಟ್‌, ವಿಮಾನ ನಿಲ್ದಾಣಗಳಲ್ಲಿ ಕಟ್ಟೆಚ್ಚರ

Published

on

ನವದೆಹಲಿ/ಬೆಂಗಳೂರು: ಆಫ್ರಿಕಾದ ಹಲವು ಭಾಗಗಳಲ್ಲಿ ಪ್ರಾಣಾಂತಿಕ ಎಬೋಲಾ ವೈರಸ್‌ ಹಾವಳಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಭಾರತ ಸರ್ಕಾರ ದೇಶಾದ್ಯಂತ ಮುನ್ನೆಚ್ಚರಿಕಾ ಕ್ರಮಗಳನ್ನು ಕಟ್ಟುನಿಟ್ಟಾಗಿಸಿದೆ. ರಾಷ್ಟ್ರ ರಾಜಧಾನಿ ನವದೆಹಲಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸೇರಿದಂತೆ ಪ್ರಮುಖ ಏರ್‌ಪೋರ್ಟ್‌ಗಳಲ್ಲಿ ಎಬೋಲಾ ತಪಾಸಣೆ ಪ್ರಾರಂಭವಾಗಿದ್ದು, ಹೈ-ರಿಸ್ಕ್ ದೇಶಗಳಿಂದ ಬರುವ ಪ್ರಯಾಣಿಕರ ಮೇಲೆ ವಿಶೇಷ ನಿಗಾ ವಹಿಸಲಾಗಿದೆ.

ಈ ಬೆಳವಣಿಗೆಯ ನಡುವೆಯೇ ದೆಹಲಿಯಲ್ಲಿ ನಡೆಯಬೇಕಿದ್ದ ಭಾರತ–ಆಫ್ರಿಕಾ ಒಕ್ಕೂಟದ ಶೃಂಗಸಭೆಯನ್ನು ಮುಂದೂಡಲಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.

ರಾಜ್ಯಗಳಿಗೆ ಕೇಂದ್ರದ ಸೂಚನೆ

ಎಬೋಲಾ ಹರಡುವಿಕೆ ತಡೆಯಲು ರಾಜ್ಯ ಆರೋಗ್ಯ ಇಲಾಖೆಗೆ ಕೇಂದ್ರ ಸರ್ಕಾರ ಹಲವು ನಿರ್ದೇಶನಗಳನ್ನು ನೀಡಿದೆ.

ಆರೋಗ್ಯ ಇಲಾಖೆಗೆ ನೀಡಿದ ಪ್ರಮುಖ ಸೂಚನೆಗಳು:

  • ಕ್ವಾರಂಟೈನ್ ಸೆಂಟರ್‌ಗಳನ್ನು ಗುರುತಿಸುವುದು
  • ಐಸೋಲೇಷನ್ ಸೌಲಭ್ಯ ಹೊಂದಿರುವ ಪ್ರತ್ಯೇಕ ಕೇಂದ್ರಗಳನ್ನು ಸಿದ್ಧಪಡಿಸುವುದು
  • ಹೆಲ್ತ್ ಸ್ಕ್ರೀನಿಂಗ್ ಸಿಬ್ಬಂದಿಯನ್ನು ಹೆಚ್ಚಿಸುವುದು
  • ಶಂಕಿತ ಪ್ರಕರಣಗಳನ್ನು ಆಸ್ಪತ್ರೆಗೆ ಸಾಗಿಸಲು ಅಂಬುಲೆನ್ಸ್ ನಿಯೋಜನೆ
  • ಎಬೋಲಾ ಚಿಕಿತ್ಸೆ ಮತ್ತು ಸುರಕ್ಷತಾ ಕ್ರಮಗಳ ಬಗ್ಗೆ ಆರೋಗ್ಯ ಸಿಬ್ಬಂದಿಗೆ ತರಬೇತಿ

ಏರ್‌ಪೋರ್ಟ್‌ಗಳಿಗೆ ವಿಶೇಷ ಮಾರ್ಗಸೂಚಿ

ಎಬೋಲಾ ನಿಯಂತ್ರಣಕ್ಕಾಗಿ ವಿಮಾನ ನಿಲ್ದಾಣಗಳಲ್ಲಿ ಕಟ್ಟುನಿಟ್ಟಿನ ಕ್ರಮ ಜಾರಿಗೊಳಿಸಲಾಗಿದೆ.

ಪ್ರಯಾಣಿಕರಿಗೆ ಸೂಚನೆ:

  • ತ್ರಿಬಲ್ ಲೇಯರ್ ಮಾಸ್ಕ್ ಕಡ್ಡಾಯ
  • ಹ್ಯಾಂಡ್ ಗ್ಲೌಸ್ ಧರಿಸಬೇಕು
  • ಸ್ಯಾನಿಟೈಸರ್ ಬಳಸಬೇಕು
  • ಶಂಕಿತ ಪ್ರಕರಣ ಕಂಡುಬಂದರೆ ತಕ್ಷಣ ವರದಿ ಮಾಡಬೇಕು
  • ಟ್ರಾವೆಲ್ ಹಿಸ್ಟರಿ ದಾಖಲಿಸಬೇಕು
  • ಸೆಲ್ಫ್ ಡಿಕ್ಲರೇಷನ್ ಫಾರ್ಮ್ ಸಲ್ಲಿಕೆ ಕಡ್ಡಾಯ

ಎಬೋಲಾ ಶಂಕಿತರಿಗೆ ಐಸೋಲೇಷನ್ ಕ್ರಮ

  • ಪ್ರತ್ಯೇಕ ಕೊಠಡಿಯಲ್ಲಿ ಇರಿಸಲಾಗುವುದು
  • ಅಟ್ಯಾಚ್ಡ್ ಬಾತ್‌ರೂಮ್ ಇರುವ ಕೊಠಡಿ ಕಡ್ಡಾಯ
  • ವೈದ್ಯಕೀಯ ಸಿಬ್ಬಂದಿಗೆ PPE ಕಿಟ್ ಕಡ್ಡಾಯ
  • ಪ್ರತಿ 2 ಗಂಟೆಗೆ ಆಕ್ಸಿಜನ್ ಮಟ್ಟ ಪರೀಕ್ಷೆ
  • ಹೃದಯ ಕಾರ್ಯಪಟುತೆಯ ಮೇಲ್ವಿಚಾರಣೆ

ಹೈ-ರಿಸ್ಕ್ ದೇಶಗಳಿಂದ ಬಂದವರು ಏನು ಮಾಡಬೇಕು?

  • 21 ದಿನಗಳ ಒಳಗೆ ಲಕ್ಷಣ ಕಂಡುಬಂದರೆ ತಕ್ಷಣ ಮಾಹಿತಿ ನೀಡಬೇಕು
  • ಜ್ವರ, ವಾಂತಿ, ದೌರ್ಬಲ್ಯ ಸೇರಿದಂತೆ ಯಾವುದೇ ಲಕ್ಷಣ ಕಂಡರೂ ವೈದ್ಯರನ್ನು ಸಂಪರ್ಕಿಸಬೇಕು
  • ಪ್ರಯಾಣದ ವಿವರಗಳನ್ನು ಆರೋಗ್ಯ ಇಲಾಖೆಗೆ ನೀಡಬೇಕು
  • ವಿಮಾನ ನಿಲ್ದಾಣ ತಪಾಸಣೆಯ ನಂತರವೂ ಲಕ್ಷಣ ಕಂಡುಬಂದರೆ ಪರೀಕ್ಷೆ ಕಡ್ಡಾಯ

ಎಬೋಲಾ ಎಷ್ಟು ಅಪಾಯಕಾರಿ?

ವಿಶ್ವ ಆರೋಗ್ಯ ಸಂಸ್ಥೆ (WHO) ಮಾಹಿತಿ ಪ್ರಕಾರ, ಎಬೋಲಾ ವೈರಸ್‌ ಮರಣ ಪ್ರಮಾಣ ಸರಾಸರಿ 50%ರವರೆಗೆ ಇರಬಹುದು. ಸೋಂಕಿತ ವ್ಯಕ್ತಿಯ ದೇಹದ ದ್ರವಗಳ ಸಂಪರ್ಕದಿಂದ ಈ ವೈರಸ್ ಹರಡುತ್ತದೆ. ಕೋವಿಡ್‌ನಂತೆ ಗಾಳಿಯಲ್ಲಿ ವೇಗವಾಗಿ ಹರಡುವ ಸೋಂಕು ಅಲ್ಲವಾದರೂ, ತೀವ್ರ ಜಾಗ್ರತೆ ಅಗತ್ಯವೆಂದು ತಜ್ಞರು ಎಚ್ಚರಿಸಿದ್ದಾರೆ.

Continue Reading

National - International

ನವದೆಹಲಿಯಲ್ಲಿ BRICS ಶೃಂಗಸಭೆ: ಸೆಪ್ಟೆಂಬರ್‌ನಲ್ಲಿ ಭಾರತಕ್ಕೆ ಪುಟಿನ್ ಭೇಟಿ

Published

on

ನವದೆಹಲಿ: BRICS ಶೃಂಗಸಭೆಯಲ್ಲಿ ಭಾಗವಹಿಸಲು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಸೆಪ್ಟೆಂಬರ್ 12 ಮತ್ತು 13ರಂದು ಭಾರತಕ್ಕೆ ಆಗಮಿಸಲಿದ್ದಾರೆ. ನವದೆಹಲಿಯಲ್ಲಿ ನಡೆಯಲಿರುವ ಈ ಮಹತ್ವದ ಶೃಂಗಸಭೆಗೆ ಭಾರತ ಆತಿಥ್ಯ ವಹಿಸುತ್ತಿದೆ.

ಇದು ಕಳೆದ ಒಂದು ವರ್ಷದೊಳಗೆ ಪುಟಿನ್ ಅವರ ಎರಡನೇ ಭಾರತ ಪ್ರವಾಸವಾಗಲಿದೆ. ಇದಕ್ಕೂ ಮೊದಲು ನಡೆದ ಭಾರತ–ರಷ್ಯಾ ವಾರ್ಷಿಕ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ   ಅವರೊಂದಿಗೆ ಅವರು ದ್ವಿಪಕ್ಷೀಯ ಮಾತುಕತೆ ನಡೆಸಿದ್ದರು.

ಶೃಂಗಸಭೆಗೆ ಮುನ್ನ ರಷ್ಯಾ ವಿದೇಶಾಂಗ ಸಚಿವ ಸೆರ್ಗೆಯ್ ಲಾವ್ರೊವ್ ಭಾರತಕ್ಕೆ ಭೇಟಿ ನೀಡಿ BRICS ವಿದೇಶಾಂಗ ಸಚಿವರ ಸಭೆಯಲ್ಲಿ ಭಾಗವಹಿಸಿದ್ದರು. ಈ ವೇಳೆ ಅವರು ಪ್ರಧಾನಿ ಮೋದಿಯವರೊಂದಿಗೆ ಪ್ರತ್ಯೇಕ ಸಭೆಯನ್ನೂ ನಡೆಸಿದ್ದರು.

ಈ ಬಾರಿಯ BRICS ಶೃಂಗಸಭೆಯಲ್ಲಿ ಜಾಗತಿಕ ಭದ್ರತೆ, ಆರ್ಥಿಕ ಸಹಕಾರ, ಬಹುಧ್ರುವೀಯ ವಿಶ್ವ ವ್ಯವಸ್ಥೆ ನಿರ್ಮಾಣ ಸೇರಿದಂತೆ ಹಲವು ಮಹತ್ವದ ವಿಚಾರಗಳ ಕುರಿತು ಚರ್ಚೆ ನಡೆಯುವ ಸಾಧ್ಯತೆ ಇದೆ. ಬದಲಾಗುತ್ತಿರುವ ಜಾಗತಿಕ ರಾಜಕೀಯ ಹಾಗೂ ಆರ್ಥಿಕ ಪರಿಸ್ಥಿತಿಗಳ ನಡುವೆ ಈ ಸಭೆ ವಿಶೇಷ ಮಹತ್ವ ಪಡೆದುಕೊಂಡಿದೆ.

ಬಹುಧ್ರುವೀಯ ವಿಶ್ವ ವ್ಯವಸ್ಥೆ ಎಂದರೇನು?

ಬಹುಧ್ರುವೀಯ ವಿಶ್ವ ವ್ಯವಸ್ಥೆ ಎಂದರೆ ಜಾಗತಿಕ ರಾಜಕೀಯ ಮತ್ತು ಆರ್ಥಿಕ ಶಕ್ತಿ ಕೇವಲ ಒಂದು ಅಥವಾ ಎರಡು ದೇಶಗಳ ಕೈಯಲ್ಲಿ ಇರದೆ, ಭಾರತ, ಚೀನಾ, ರಷ್ಯಾ ಮೊದಲಾದ ಅನೇಕ ರಾಷ್ಟ್ರಗಳ ನಡುವೆ ಹಂಚಿಕೆಯಾಗಿರುವ ವ್ಯವಸ್ಥೆ.

BRICS ಎಂದರೇನು?

BRICS ಎಂಬುದು ಬ್ರೆಜಿಲ್, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾ ದೇಶಗಳ ಒಕ್ಕೂಟವಾಗಿದೆ. ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಜಾಗತಿಕ ಮಟ್ಟದಲ್ಲಿ ಹೆಚ್ಚಿನ ಪ್ರಾಮುಖ್ಯತೆ ಮತ್ತು ಬಲವಾದ ಧ್ವನಿ ಸಿಗಬೇಕು ಎಂಬ ಉದ್ದೇಶದಿಂದ ಈ ಸಂಘಟನೆ ಸ್ಥಾಪನೆಯಾಯಿತು.

2025ರ ಜುಲೈನಲ್ಲಿ ಬ್ರೆಜಿಲ್‌ನ ರಿಯೋ ಡಿ ಜನೈರೊದಲ್ಲಿ 17ನೇ BRICS ಶೃಂಗಸಭೆ ನಡೆದಿತ್ತು. ಇದೀಗ 2026ರ ಶೃಂಗಸಭೆಗೆ ಭಾರತ ಆತಿಥ್ಯ ವಹಿಸುತ್ತಿರುವುದು ಜಾಗತಿಕ ವೇದಿಕೆಯಲ್ಲಿ ಭಾರತದ ಪ್ರಭಾವ ಹೆಚ್ಚುತ್ತಿರುವುದನ್ನು ತೋರಿಸುತ್ತದೆ.

Continue Reading

National - International

ತಮಿಳುನಾಡಿನಲ್ಲಿ ‘ದಳಪತಿ’ ಯುಗಾರಂಭ – ಸಿಎಂ ಆಗಿ ವಿಜಯ್ ಪ್ರಮಾಣವಚನ

Published

on

ಚೆನ್ನೈ: ತಮಿಳುನಾಡಿನ  ರಾಜಕೀಯದಲ್ಲಿ ಹೊಸ ಸಂಚಲನ ಮೂಡಿಸಿರುವ ನಟ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ  ಸರ್ಕಾರ ಇಂದು ಅಧಿಕೃತವಾಗಿ ಅಸ್ತಿತ್ವಕ್ಕೆ ಬಂದಿದ್ದು , ಚೆನ್ನೈನ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ಬೆಳಿಗ್ಗೆ 10 ಗಂಟೆಗೆ ನಡೆದ ಅದ್ಧೂರಿ ಸಮಾರಂಭದಲ್ಲಿ ವಿಜಯ್ ಅವರು ತಮಿಳುನಾಡಿನ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ  ಸ್ವೀಕರಿಸಿದರು.

ಸದ್ಯ ವಿಜಯ್‌ ಅವರು ತಮ್ಮ ಸಂಪುಟದಲ್ಲಿ 9 ಮಂದಿ ಶಾಸಕರಿಗೆ ಮಂತ್ರಿಗಿರಿ ನೀಡಿದ್ದಾರೆ. ಟಿವಿಕೆಗೆ ಬೆಂಬಲ ನೀಡಿದ ಕಾಂಗ್ರೆಸ್ ಪಕ್ಷದ ಇಬ್ಬರು ಶಾಸಕರಿಗೆ ಸಂಪುಟದಲ್ಲಿ ಸ್ಥಾನ ನೀಡಲಾಗಿದೆ. ವಿಸಿಕೆ , ಸಿಪಿಐ, ಸಿಪಿಎಂ ಮತ್ತು ಮುಸ್ಲಿಂ ಲೀಗ್ ಪಕ್ಷಗಳು ಸರ್ಕಾರಕ್ಕೆ ಬಾಹ್ಯ ಬೆಂಬಲ ನೀಡಿದ್ದರಿಂದ ಈ ಪಕ್ಷಗಳ ಶಾಸಕರು ಸಂಪುಟ ಸೇರುತ್ತಿಲ್ಲ.ಈ ಹಿಂದೆ ಉಪಮುಖ್ಯಮಂತ್ರಿ ಸ್ಥಾನಕ್ಕೆ ವಿಸಿಕೆ ಬೇಡಿಕೆ ಇಟ್ಟಿದೆ ಎಂದು ಹೇಳಲಾಗಿತ್ತು. ಆದರೆ ವಿಜಯ್ ಸರ್ಕಾರದಲ್ಲಿ ಸದ್ಯಕ್ಕೆ ಯಾರಿಗೂ ಡಿಸಿಎಂ ಸ್ಥಾನ ನೀಡಿಲ್ಲ.

ಪ್ರಮಾಣವಚನ ಸ್ವೀಕರಿಸಿದವರು ಯಾರು?
ಎನ್. ಆನಂದ್ – ಪಕ್ಷದ ಪ್ರಧಾನ ಕಾರ್ಯದರ್ಶಿ
ಆಧವ್ ಅರ್ಜುನ- ಚುನಾವಣಾ ಪ್ರಚಾರ ನಿರ್ವಹಣೆಯ ಪ್ರಧಾನ ಕಾರ್ಯದರ್ಶಿ
ಕೆ.ಎ. ಸೆಂಗೊಟ್ಟೈಯನ್ – ಮಾಜಿ ಸಚಿವ ಮತ್ತು ಪಕ್ಷದ ಕಾರ್ಯಕಾರಿ ಸಮಿತಿಯ ಮುಖ್ಯ ಸಂಯೋಜಕ
ಡಾ. ಕೆ.ಜಿ. ಅರುಣ್‌ರಾಜ್- ನೀತಿ ಮತ್ತು ಪ್ರಚಾರ ವಿಭಾಗದ ಪ್ರಧಾನ ಕಾರ್ಯದರ್ಶಿ
ಪಿ. ವೆಂಕಟರಮಣನ್ – ಪಕ್ಷದ ಖಜಾಂಚಿ
ಸಿ.ಟಿ.ಆರ್. ನಿರ್ಮಲ್ ಕುಮಾರ್ – ಜಂಟಿ ಪ್ರಧಾನ ಕಾರ್ಯದರ್ಶಿ
ಎ. ರಾಜ್‌ಮೋಹನ್ – ಪ್ರಚಾರ ಕಾರ್ಯದರ್ಶಿ
ಡಾ. ಟಿ.ಕೆ. ಪ್ರಭು – ಮಂತ್ರಿ
ಸೆಲ್ವಿ ಎಸ್. ಕೀರ್ತನಾ – ಸಂಪುಟದ ಅತ್ಯಂತ ಕಿರಿಯ ಸಚಿವೆ

ಒಟ್ಟು ಸಂಖ್ಯಾಬಲ ಎಷ್ಟಿದೆ?
ಟಿವಿಕೆ (107), ಕಾಂಗ್ರೆಸ್ (5), ಸಿಪಿಐ (2), ಸಿಪಿಎಂ (2), ವಿಸಿಕೆ (2), ಮುಸ್ಲಿಂ ಲೀಗ್ (2).

ಸರ್ಕಾರ ರಚನೆಯ ಬೆನ್ನಲ್ಲೇ ಬಹುಮತ ಸಾಬೀತುಪಡಿಸಲು ರಾಜ್ಯಪಾಲರು ಮೇ 13ರವರೆಗೆ (3 ದಿನಗಳು) ಗಡುವು ನೀಡಿದ್ದಾರೆ. 120 ಶಾಸಕರ ಬೆಂಬಲದೊಂದಿಗೆ ವಿಜಯ್ ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚಿಸಲಿದ್ದಾರೆ.

Continue Reading

Trending

error: Content is protected !!