Chikmagalur
ಕರ್ನಾಟಕ ಸಾರಿಗೆ ನೌಕರರ ಮುಷ್ಕರ: ಚಿಕ್ಕಮಗಳೂರಲ್ಲಿ ಉತ್ತಮ ಪ್ರತಿಕ್ರಿಯೆ
ಚಿಕ್ಕಮಗಳೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ಸಾರಿಗೆ ನೌಕರರು ಮುಷ್ಕರಕ್ಕೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಚಿಕ್ಕಮಗಳೂರಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಬಸ್ ನಿಲ್ದಾಣ ಸಂಪೂರ್ಣ ಖಾಲಿ ಖಾಲಿಯಾಗಿದ್ದು ಎಂದಿನಂತೆ ಪ್ರಯಾಣಿಕರು ಬಸ್ ನಿಲ್ದಾಣಕ್ಕೆ ಆಗಮಿಸುತ್ತಿದ್ದಾರೆ. ಆದರೆ ಬೆಳೆಗ್ಗೆಯಿಂದಲೇ ಒಂದೇ ಒಂದು ಬಸ್ ಗಳು ಸಂಚಾರ ನಡೆಸುತ್ತಿಲ್ಲ.
ಹೀಗಾಗಿ ಕೆಲಸ ಕಾರ್ಯಗಳಿಗೆ ತೆರಳುವವರು ಪರದಾಡುವಂತಾಗಿದೆ. ಪ್ರತಿನಿತ್ಯ ಬೆಳಗ್ಗೆ 4 ಗಂಟೆಯಿಂದಲೇ ಬಸ್ಸುಗಳು ಸಂಚಾರ ಆರಂಭಗೊಳ್ಳುತ್ತಿದ್ದವು ಆದರೆ ಇಂದು ಒಂದೇ ಒಂದು ಬಸ್ಸಿಲ್ಲದೆ ಬಸ್ ನಿಲ್ದಾಣ ಬೀಕೊ ಎನ್ನುತ್ತಿದೆ.
ಚಿಕ್ಕಮಗಳೂರು ವಿಭಾಗಕ್ಕೆ ಒಳಪಡುವ ಆರು ಡಿಪೋಗಳ 560 ಬಸ್ ಗಳು ಸಂಪೂರ್ಣ ನಿಲುಗಡೆಗೊಂಡಿದ್ದು ಚಾಲಕರು ಹಾಗೂ ನಿರ್ವಾಹಕರು ಬಸ್ ನಿಲ್ದಾಣ ಹಾಗೂ ಡಿಪೋಗಳಲ್ಲಿ ಮುಂದಿನ ಬೆಳವಣಿಗೆಗಾಗಿ ಕಾದು ನಿಂತಿದ್ದಾರೆ.

Chikmagalur
ಕೆಂಪೇಗೌಡರ ಕನಸಿನ ಬೆಂಗಳೂರು ನಮ್ಮ ಹೆಮ್ಮೆಯ ಸಂಕೇತ : ತಮ್ಮಯ್ಯ





Chikmagalur
ರಾಂಪಾಲ್ ಶಾಮಣ್ಣ(64) ನಿಧನ
ಜಯಪುರ : ಮಕ್ಕಿಕೊಪ್ಪ ವಾಸಿ ರಾಂಪಾಲ್ ಶಾಮಣ್ಣ(64ವರ್ಷ) ಅಲ್ಪ ಕಾಲದ ಅನಾರೋಗ್ಯದಿಂದ ಬಳಲುತ್ತಿದ್ದು, ಶುಕ್ರವಾರ ಬೆಳಿಗ್ಗೆ ಚಿಕ್ಕಮಗಳೂರಿನ ಮಗಳ ಮನೆಯಲ್ಲಿ ನಿಧನರಾಗಿದ್ದಾರೆ.
ಸೌಮ್ಯ ಸ್ವಭಾವದ ಸದಾ ನಗುಮುಖದ ಶಾಮಣ್ಣ ಚಿಕ್ಕ ಮಕ್ಕಳಿಂದ ವಯಸ್ಸಾದ ವ್ಯಕ್ತಿಗಳವರೆಗೂ ಪ್ರೀತಿಯ ಶಾಮಣ್ಣ ಆಗಿದ್ದರು. ವೃತ್ತಿಯಲ್ಲಿ ಉತ್ತಮ ಕೃಷಿಕರಾಗಿದ್ದು ಜೊತೆಗೆ ಪತ್ರಿಕೆ ವಿತರಣೆ, ಹಾಲು ವಿತರಣೆ ಮುಂತಾದ ಉದ್ಯೋಗ ಮಾಡುತ್ತಿದ್ದರು.

ಶ್ರೀಯುತರು ಪತ್ನಿ, ಇಬ್ಬರು ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗ ಮತ್ತು ಸ್ನೇಹಿತರನ್ನು ಅಗಲಿದ್ದಾರೆ. ಇವರ ಅಂತಿಮ ಸಂಸ್ಕಾರವನ್ನು ರಾಂಪಾಲ್ ನಲ್ಲಿರುವ ಸ್ವಂತ ಜಮೀನಿನಲ್ಲಿ ನಡೆಸಲಾಯಿತು ಎಂದು ಕುಟುಂಬಸ್ಥರು ತಿಳಿಸಿದರು.
Chikmagalur
ಅಪ್ರಾಪ್ತ ಬಾಲಕಿ ಅಪಹರಣ| ಪೋಕ್ಸೋ ಪ್ರಕರಣ ದಾಖಲು: ಜಿತೇಂದ್ರ ಕುಮಾರ್
ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆ ತಾಲೂಕು ಬಾಳೂರು ವ್ಯಾಪ್ತಿಯ ಕಾಫಿತೋಟದಲ್ಲಿ ಕೆಲಸ ಮಾಡುತ್ತಿದ್ದ ಅಸ್ಸಾಂ ಮೂಲದ ಹಬೀವರ್ ಇಸ್ಲಾಂ ಎಂಬ ವಲಸೆ ಕಾರ್ಮಿಕ ಮಧ್ಯಪ್ರದೇಶ ಮೂಲದ ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ ಮತಾಂತರಕ್ಕೆ ಯತ್ನಿಸಿದ ಆರೋಪದ ಹಿನ್ನಲೆ ಬಾಳೂರು ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ. ಆತನ ವಿರುದ್ದ ಪೋಕ್ಸೋ ಪ್ರಕರಣ ದಾಖಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿತೇಂದ್ರ ಕುಮಾರ್ ದಯಾಮ ತಿಳಿಸಿದ್ದಾರೆ.
ಶುಕ್ರವಾರ ಸುದ್ದಿಗಾರರ ಜತೆ ಮಾತನಾಡಿ, ಅಪ್ರಾಪ್ತ ಬಾಲಕಿಉನ್ನು ಆರೋಪಿ ಯುವಕ ಅಸ್ಸಾಂಗೆ ಕರೆದುಕೊಂಡು ಹೋಗಿದ್ದು, ಇತ್ತೀಚೆಗೆ ಅವರಿಬ್ಬರು ಮತ್ತೆ ಕಾಫಿತೋಟಕ್ಕೆ ಬಂದಿದ್ದಾರೆ. ಈ ಹಿನ್ನಲೆ ಬಾಲಕಿ ತಾಯಿ ನೀಡಿದ ದೂರಿನ ಮೇರೆಗೆ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದು, ಪ್ರಕರಣದ ತನಿಖೆ ಮುಂದೂವರೆದಿದೆ ಎಂದರು.

ಈ ಹಿಂದೆ ಕಾಫಿ ಕೊಯ್ಲು ಮುಗಿದ ನಂತರ ಬಾಲಕಿ ನಾಪತ್ತೆಯಾಗಿದ್ದಾಗ, ಆಕೆ ಬೀರೂರು ರೈಲ್ವೆ ನಿಲ್ದಾಣದ ಮೂಲಕ ಬೇರೆಡೆಗೆ ಹೋಗಿರುವ ಸಾಧ್ಯತೆ ಬಗ್ಗೆ ಪೋಷಕರಿಗೆ ಮಾಹಿತಿ ಇತ್ತು.
ಹಾಗಾಗಿ ಅವರು ಸ್ವಲ್ಪ ದಿನ ಕಾದಿದ್ದರು. ಆದರೆ, ಬಾಲಕಿ ಯುವಕನೊಂದಿಗೆ ವಾಪಾಸ್ ಬಂದ ತಕ್ಷಣ ಪೋಷಕರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಬಾಲಕಿಯ ಕುಟುಂಬವೂ ಮಧ್ಯಪ್ರದೇಶ ಮೂಲದ್ದಾ ಗಿದ್ದು, ಇಲ್ಲಿಗೆ ಕೂಲಿ ಕೆಲಸಕ್ಕೆ ಬಂದಿದ್ದರು. ಹಾಗೇ ಆರೋಪಿ ಯುವಕನ ಕುಟುಂಬವು ಅಸ್ಸಾಂನಿಂದ ಬಂದು ಇಲ್ಲಿನ ತೋಟವೊಂದರಲ್ಲಿ ಕೂಲಿ ಕೆಲಸ ಮಾಡುತ್ತಿದ್ದಾರೆ ಎಂದು ಮಾಹಿತಿ ನೀಡಿದರು.
-
Hassan23 hours agoಅಡ್ಡ ಮತದಾನ ಎಫೆಕ್ಟ್: ಕರ್ನಾಟಕ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆಗೆ ವರಿಷ್ಠರ ಚಿಂತನೆ
-
Chamarajanagar12 hours agoSSLC-PUC ಯಲ್ಲಿ 85% ಗಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಅಹ್ವಾನ.
-
Politics1 hour agoಬಿಡದಿ ಟೌನ್ಶಿಪ್: ರೈತರೊಂದಿಗೆ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಿ – ವಿ. ಸೋಮಣ್ಣ
-
Kodagu10 hours agoವಿಚಾರಣೆಗೆ ತೆರಳಿದ್ದ ವ್ಯಕ್ತಿ ನಾಪತ್ತೆ; ಮಾಹಿತಿ ನೀಡುವಂತೆ ಪೊಲೀಸರ ಮನವಿ
-
Uncategorized4 hours agoನಿಮ್ಮ ಚೇಲಾಗಳಿಗೆ ಹೆದರಲ್ಲ’: ಕುಮಾರಸ್ವಾಮಿಗೆ ಪ್ರದೀಪ್ ಈಶ್ವರ್ ಖಡಕ್ ಎಚ್ಚರಿಕೆ
-
Politics31 minutes agoಪುಟ್ಟ ಕಂದಮ್ಮಗಳ ಆರೋಗ್ಯಕ್ಕಾಗಿ ನಾಳೆ ಪೋಲಿಯೋ ಹನಿ ಹಾಕಿಸಲು ಮರೆಯದಿರಿ: ಡಿಕೆಶಿ
-
Special14 hours agoಮುಟ್ಟಿನ ಉತ್ಪನ್ನಗಳ ಸುರಕ್ಷಿತ ನಿರ್ವಹಣೆ: ಆರೋಗ್ಯ ಮತ್ತು ಸ್ವಚ್ಛತೆಗೆ ಆದ್ಯತೆ!!
-
Politics2 hours agoಆರ್ಎಸ್ಎಸ್ ವಿರುದ್ಧ ಪೋಸ್ಟ್ ಪ್ರಕರಣ: ಸಚಿವ ಪ್ರಿಯಾಂಕ್ ಖರ್ಗೆ, ನಲಪಾಡ್ಗೆ ಕೋರ್ಟ್ ಸಮನ್ಸ್
