Connect with us

Editorials

“ಬಲ ಪ್ರದರ್ಶನದಿಂದ ಸಾಧಿಸಿದ್ದೇನು, ಸಾಧಿಸುವುದೇನನ್ನು?”

Published

on

ಬಾಳೆಯಡ ಕಿಶನ್ ಪೂವಯ್ಯ,
ಲೇಖಕರು ಮತ್ತು ವಕೀಲರು,
ಮಡಿಕೇರಿ
ಫೋನ್: 94488995554

ಸಮಾಜದಲ್ಲಿ ಇಂತಹ ಘಟನೆಗಳಿಂದ ಬದಲಾವಣೆ ಸಾಧ್ಯವೇ? ಖಂಡಿತ ಸಾಧ್ಯವಿಲ್ಲ. ಕಳೆದ ಒಂದು ತಿಂಗಳಿನಲ್ಲಿ ಕೊಡಗಿನ ಎರಡು ಜನಾಂಗದ ನಡುವೆ ನಡೆದ ಬಲಪ್ರದರ್ಶನ ನೋಡಿದ್ರೆ ಬೇಸರವಾಗುತ್ತೆ. ವಿದ್ಯಾವಂತರೆ ತಪ್ಪು ದಾರಿ ಹಿಡಿದರೆ ತಪ್ಪನ್ನು ತಿದ್ದುವವರು ಯಾರು? ಎರಡು ಜನಾಂಗದ ಕೆಲವು ವ್ಯಕ್ತಿಗಳ ಸ್ವಾರ್ಥಕ್ಕೆ ಕೊಡಗಿನ ನೆಮ್ಮದಿ ಜೀವನ ಬಲಿಯಾಯಿತು. ನಾನೊಬ್ಬನೇ ಅಲ್ಲ, ಅನೇಕರು ತಮ್ಮ ಲೇಖನದ ಮೂಲಕ ಪರೋಕ್ಷವಾಗಿ ಮುಂದಿನ ದಿನಗಳಲ್ಲಿ ನಾವು ಎದುರಿಸಬೇಕಾದ ವಾಸ್ತವವನ್ನು ಸಮಾಜಕ್ಕೆ ತಿಳಿಸಿದ್ದರು. ಮಾಧ್ಯಮಗಳ ಮೂಲಕ ಅನೇಕ ಲೇಖನಗಳನ್ನು ಪ್ರಕಟಿಸುವ ಮೂಲಕ ಕೊಡಗಿನ ಮಣ್ಣಿನ ಬಗ್ಗೆ ಸಂಸ್ಕೃತಿ ಬಗ್ಗೆ ಇದ್ದ ಕಾಳಜಿ ಮತ್ತು ಇಂತಹ ಬೆಳವಣಿಗೆಯಿಂದ ಆಗುವ ಪರಿಣಾಮವನ್ನು ತುಂಬಾ ಪರಿಣಾಮಕಾರಿಯಾಗಿ ಧೈರ್ಯದಿಂದ ಹೇಳಿದರೂ ಏನು ಉಪಯೋಗವಾಗಲಿಲ್ಲ. ಕೊಡಗಿನಲ್ಲಿ ಮುಂದಿನ ದಿನಗಳಲ್ಲಿ ಇದರ ಪರಿಣಾಮ ಎರಡು ಜನಾಂಗದ ಜನರು ಅನುಭವಿಸಬೇಕಾಗುತೆ ಎಂಬ ಅರಿವು ಮೂಡಬೇಕಿದೆ.

ಇನ್ನು ಎರಡು ಜನಾಂಗದವರು ನಡೆಸಿದ ಬಲ ಪ್ರದರ್ಶನದ ಬಗ್ಗೆ ಸ್ವಲ್ಪ ಚಿಂತನೆ ಮಾಡುವ ಇದು ಕೊಡಗಿನ ಹಿತದೃಷ್ಟಿಯಿಂದ ಅವಶ್ಯಕತೆ ಇದೆ ಅನಿಸುತ್ತೆ. ಏನೋ ಮಾಡಲು ಹೋಗಿ ಇನ್ನೇನೋ ಆಯಿತು. ಮೊದಲು ಎರಡು ಜನಾಂಗದವರು ಬಲ ಪ್ರದರ್ಶನ, ತಾವು ತೆಗೆದುಕೊಂಡ ದುಡುಕಿನ ತೀರ್ಮಾನ ಅಂತ ಆರಂಭದಲ್ಲಿ ತಿಳಿಯಿತು. ಆದರೆ ಇಟ್ಟ ಹೆಜ್ಜೆ ಹಿಂದಕ್ಕೆ ಪಡೆದರೆ ಸ್ವಾಭಿಮಾನಕ್ಕೆ ಪೆಟ್ಟು ಎಂದು ಎರಡು ಜನಾಂಗದವರ ಯುವಕರ ಬಿಸಿ ರಕ್ತದ ಒತ್ತಡಕ್ಕೆ ಮಣಿದು ಮುಂದಡಿ ಇಟ್ಟ ಎರಡು ಜನಾಂಗ ಸಾಧಿಸಿದ್ದೆನು? ಬಹಿರಂಗವಾಗಿ ಹೇಳಿ ಜನಾಂಗದ ಸಮಾಜದ (ಕಲ್ಯಾಣಮಂಟಪಗಳ) ಆಡಳಿತ ಮಂಡಳಿಗಳ ಚುನಾವಣೆಯನ್ನು ಅವಿರೋಧ ಆಯ್ಕೆ ಮಾಡಲಾಗದಿದ್ದರೂ ಮನೆಯಲ್ಲಿ ಇಂಗ್ಲಿಷ್ ವ್ಯಾಮೋಹದಿಂದ ಮಾತೃ ಭಾಷೆ ಮಕ್ಕಳಿಗೆ ಕಲಿಸಿದವರು ಜನಾಂಗದ ಕಲ್ಯಾಣ ಮಂಟಪದಲ್ಲಿ ಸಂಸ್ಕೃತಿ ಉಳಿಸಲು ನಿಯಮ ಜಾರಿಗೊಳಿಸಿದ್ದರೆ, ಖಾಸಗಿ ರೆಸಾರ್ಟ್ಗಳಲ್ಲಿ ಮದುವೆ ಮಾಡುವವರು ಜನಾಂಗದ ಬಡವರಿಗೆ ಉಚಿತವಾಗಿ ಕಲ್ಯಾಣ ಮಂಟಪ ನೀಡದವರು, ತಮ್ಮ ಜನಾಂಗದ ಬಡವರ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ಸಹಾಯ ಮಾಡದವರು, ವರ್ಷಕೊಮ್ಮೆ ತಮ್ಮ ಊರ ಹಬ್ಬಕ್ಕೆ ಬಾರದವರು, ಮಕ್ಕಳಿಗೇ ತಮ್ಮ ಆಚಾರಗಳನ್ನು ಕಲಿಸದವರು, ಅದೆಲ್ಲ ಬೇಡ ಕೊಡಗಿನ ಭೂಮಿಗಳು ಎಕರೆಗಟ್ಟಲೆ ರೆಸಾರ್ಟ್ಗಳಾಗಿ ಪರಿವರ್ತನೆ ಆಗುತಿದ್ದರೂ ನಮ್ಮ ಸಂಸ್ಕೃತಿಯ ಭಾಗವಾದ ನಮ್ಮ ಭೂಮಿಯನ್ನು ಉಳಿಸಿಕೊಳ್ಳದವರು, ಮಾಡುತ್ತಾ ಹೋದರೆ ಹನುಮಂತನ ಬಾಲದಂತೆ ಪಟ್ಟಿ ಬೆಳೆಯುತ್ತದೆ. ಅದರೊಡನೇ ಮುಂದಿನ ದಿನಗಳಲ್ಲಿ ಕೊಡಗಿನ ಜನ ಬಾಂಗ್ಲಾ ವಲಸಿಗರಿಂದ ಬಹುದೊಡ್ಡ ಸಮಸ್ಯೆಯಾಗುವ ಎಲ್ಲಾ ಲಕ್ಷಣಗಳು ಕಂಡು ಬರುತ್ತಿದೆ. ಪಟ್ಟಿ ರೋಮ್ ಹೊತ್ತಿ ಉರಿಯುವಾಗ ನೀರೋ ಪಿಟೀಲು ಬಾರಿಸುತ್ತಿದ್ದಂತೆ, ಹಾಗೇ ಈಗಿನ ಕೊಡಗಿನ ಎರಡು ಜನಾಂಗದವರ ಕಥೆ. ನಮ್ಮ ಮೂಲ ಬೇರುಗಳು ಅಲ್ಲಾಡಿ ಹೋಗಿದೆ. ನಮ್ಮ ಮೂಲ ನೆಲೆಯನ್ನು ಮಾರಿಕೊಡಿದ್ದೇವೆ. ಈಗ ನಮ್ಮ ಹೋರಾಟ ಒಂದು ಕುಪ್ಪಸಕ್ಕಾಗಿ. ಎರಡು ಜನಾಂಗದವರು ಇನ್ನು ಮುಂದೆ ಇಂತಹ ಘಟನೆಗಳು ನಡೆಯದಂತೆ ಅದರಲ್ಲೂ ಬಲಪ್ರದರ್ಶನದಂತಹ ಕಾರ್ಯ ಬೇಡ, ಅದರಿಂದ ಇದರ ಬಗ್ಗೆ ತುಂಬಾ ಚಿಂತನೆ ಅಥವಾ ಆತ್ಮವಲೋಕನ ಮಾಡುವ ಅವಶ್ಯಕತೆ ಇದೆ. ಯಾಕೆ ನಮ್ಮದು ಪುಟ್ಟ ಜಿಲ್ಲೆ. ನಮ್ಮ ಹಳ್ಳಿಗಳಲ್ಲಿ ಇನ್ನು ಸೌಹರ್ದತೆ ಜೀವಂತ ಇದೆ.

ನನಗೆ ಇನ್ನು ನೆನಪಿದೆ, ಅಂದು ದಿವಂಗತ ಗುಂಡುರಾವ್ ನಮ್ಮ ಕುಪ್ಪಸವನ್ನು ಧರಿಸಿ ಪ್ರಮಾಣವಚನ ಸ್ವೀಕರಿಸಿದಾಗ, ಲಾಲ್ ಕೃಷ್ಣ ಅಡ್ವಾನಿ ಕೊಡಗಿಗೆ ಖಾಸಗಿ ಭೇಟಿ ನೀಡಿದಾಗ ನಮ್ಮ ಉಡುಪನ್ನು ಧರಿಸಿ ಸಂಸ್ಕೃತಿಯನ್ನು ಮೆಚ್ಚಿದಾಗ, ಸಂಸದ ಪ್ರತಾಪ್ ಸಿಂಹ ಲೋಕಸಭೆ ಸದಸ್ಯರಾಗಿ ಕುಪ್ಪಸವನ್ನು ಧರಿಸಿ ಪ್ರಮಾಣವಚನ ಸ್ವೀಕರಿಸಿದಾಗ, ಹೀಗೆ ಹಲವಾರು ಸಂದರ್ಭದಲ್ಲಿ ನಾವು ಗೌರವಿಸಿದ್ದೇವೆ, ಹೆಮ್ಮೆ ಪಟ್ಟಿದ್ದೇವೆ. ಹಾಗೆ ಅದಕ್ಕೆ ಅಗೌರವವಾದಾಗ ಪ್ರತಿಭಟನೆ ಮಾಡಿದ್ದೇವೆ. ಆದರೆ ಕಟ್ಟೆಮಾಡಿನ ಪ್ರಕರಣವನ್ನು ಆರಂಭದಲ್ಲಿ ಹೊಸಕಿ ಹಾಕಿದ್ದರೆ ಪರಿಸ್ಥಿತಿ ಇಷ್ಟು ಗಂಭೀರತೆ ಪಡೆದುಕೊಳ್ಳುತ್ತಿರಲಿಲ್ಲ. ನಮ್ಮ ಬುದ್ಧಿವಂತ ರಾಜಕಾರಣಿಗಳು ಕುರುಡು ಜಾಣತನ ತೋರಿದ್ದು ಹಾಗೂ ಸಾಮಾಜಿಕ ಜಾಲತಾಣದ ಸಂದೇಶಗಳು ಇಂದು ಕೊಡಗಿನಲ್ಲಿ ಜನಾಂಗಿಯ ಘರ್ಷಣೆಗೆ ಮುನ್ನುಡಿ ಯಾಗಿದ್ದು ಇದರಿಂದ ಯಾರಿಗೂ ಲಾಭವಿಲ್ಲ ಎಂಬುದು ನಾವು ಇತಿಹಾಸವನ್ನು ಅವಲೋಕನ ಮಾಡಿದರೆ ಅನುಭವವಾಗುತ್ತದೆ. ಅದು ದಕ್ಷಿಣ ಆಫ್ರಿಕಾದ ವರ್ಣಭೇದ ನೀತಿ, ಶ್ರೀಲಂಕಾದ ಜನಾಂಗಿಯ ಘರ್ಷಣೆ ಆಗಿರಬಹುದು, ಮುಂಬೈಯ ಕೋಮು ಗಲಭೆ, ಪಾಲೂರು ಗಲಾಟೆ, ಹೀಗೆ ಹಲವು ಘಟನೆಗಳಿಂದ ನಾವು ಪಾಠ ಕಲಿತಿದ್ದರೂ ಪುನಃ ಪುನಃ ತಪ್ಪು ಹೆಜ್ಜೆ ಇಡುವುದು ದುರ್ದೈವ. ನಡೆಯಬಾರದು ನಡೆದಿದೆ. ಮುಂದೆ ಇಂತಹ ಪ್ರಕರಣಗಳು ಮರುಕಳಿಸದಿರಲಿ. “ಬರವಣಿಗೆಯಿಂದ ಸಮಾಜದಲ್ಲಿ ಬದಲಾವಣೆ ಸಾಧ್ಯವಿಲ್ಲ” ಇತಿಹಾಸದಲ್ಲಿ ಬಸವಣ್ಣ, ಕನಕದಾಸರು, ಪುರಂದರದಾಸರು, ಅಕ್ಕಮದೇವಿ, ನಾರಾಯಣಗುರುಗಳು, ಕುವೆಂಪು ಹೀಗೆ ಇತಿಹಾಸ ಪುರುಷರಿಗೇ ಸಾಧ್ಯವಾಗದ್ದು ನಮಗೂ ಸಾಧ್ಯವಿಲ್ಲ. ಅನೇಕ ಜನರು ಈ ವಿಷಯದಲ್ಲಿ ಸಮಾಜಕ್ಕೆ ಒಂದು ಒಳ್ಳೆ ಸಂದೇಶ, ಪ್ರಾಮಾಣಿಕ ಪ್ರಯತ್ನ ಮಾಡಿದ್ದೇವೆ ಎಂಬ ಆತ್ಮತೃಪ್ತಿಯೊಂದಿಗೆ ಇತಿಹಾಸದಲ್ಲಿ ಈ ಘಟನೆಗಳು ಶಾಂತಿಪ್ರಿಯ ಕೊಡಗಿನಲ್ಲಿ ಮರು ಕಳುಹಿಸದಿರಲಿ ಎಂದು ಲೇಖನ ಮುಗಿಸುತ್ತೇನೆ.

ನಮಗೆ ಈ ಸಮಯದಲ್ಲಿ ಬೇಕಾಗಿರುವುದು ಕುವೆಂಪುರ ಈ ಸಂದೇಶ “ಮನುಜ ಮತ, ವಿಶ್ವ ಪಥ, ಸರ್ವೋದಯ, ಸಮನ್ವಯ, ಪೂರ್ಣ ದೃಷ್ಟಿ” ಈ ಪಂಚ ಮಂತ್ರಗಳು ಮುಂದಿನ ದಿನಗಳಲ್ಲಿ ಕೊಡಗಿಗೇ ಅಂದರೆ ನಮ್ಮ ಸಮಾಜಕ್ಕೆ ಬೇಕಾಗಿರುವುದು. “ಆ ಮತ ಈ ಮತ ಅಲ್ಲ; ಮನುಜ ಮತ”, “ಆ ಪಥ ಈ ಪಥ ಅಲ್ಲ; ವಿಶ್ವ ಪಥ”, “ಆ ಒಬ್ಬರ ಈ ಒಬ್ಬರ ಉದಯ ಮಾತ್ರವಲ್ಲ; ಸರ್ವರ ಸರ್ವಸ್ತರದ ಉದಯ ಅದುವೇ ಸರ್ವೋದಯ”, “ಪರಸ್ಪರ ವಿಮುಖವಾಗಿ ಸಿಡಿದು ಹೋಗುವುದಲ್ಲ; ಸಮನ್ವಯಗೊಳ್ಳುವುದು”, “ಮಿತಮತದ ಅಂಶಿಕ ದೃಷ್ಟಿಯಲ್ಲ; ಭೌತಿಕ ಪಾರಮಾರ್ಥಿಕ ಎಂಬ ಭಿನ್ನ ದೃಷ್ಟಿಯಲ್ಲ; ಎಲ್ಲವನ್ನು ಭಗವದ್ ದೃಷ್ಟಿಯಿಂದ ಕಾಣುವ ಪೂರ್ಣದೃಷ್ಟಿ”

ಕೊನೆಯದಾಗಿ ನನ್ನ ಮನದಲ್ಲಿ ಕಾಡುತ್ತಿರುವ ಪ್ರಶ್ನೆ ಏನೆಂದರೆ, ನಮ್ಮ ಜನಾಂಗದಲ್ಲಿ ಇಷ್ಟು ಈ ಒಗ್ಗಟ್ಟು ಇದ್ದಿದ್ರೆ ನಮ್ಮ ಕಾಫಿ, ಕರಿಮೆಣಸು, ಏಲಕ್ಕಿ ಏಕೆ ಕಂಡವರ ಪಾಲಾಗಬೇಕಿತ್ತು? ಕೃಷಿ ಮಾಡುವ ಹುಡುಗರಿಗೆ ಮದುವೆಗೆ ಹೆಣ್ಣು ಕೊಡಲು ಸಿದ್ದರಿಲ್ಲ, ಹುಡುಗಿಯರು ಮದುವೆ ಆಗಲು ಸಿದ್ದರಿಲ್ಲ. ವಾಸಿಸಲು ನಗರ… ಸಂಸ್ಕೃತಿಗೆ ಕೊಡಗು… ಎಂತಹ ವಿಪರ್ಯಾಸ! ದೇವರೆ ಕಾಪಾಡಬೇಕು. ಈಗ ಹಳ್ಳಿಗಳಲ್ಲಿ ಉಳಿದಿರುವುದು ವಯಸ್ಸಾದ ತಂದೆ-ತಾಯಿ ಮಾತ, ಸಂಸ್ಕೃತಿ ಉಳಿಸಲು….

Continue Reading

Editorials

577 ಅಂಗನವಾಡಿ ಹುದ್ದೆಗಳ ನೇಮಕಾತಿಗೆ ಅರ್ಜಿ ಸಲ್ಲಿಕೆ : ಯಾರು ಅರ್ಜಿ ಸಲ್ಲಿಸಬಹುದು?

Published

on

ಬಾಗಲಕೋಟ ಜಿಲ್ಲೆಯ ವಿವಿಧ ಅಂಗನವಾಡಿ ಕೇಂದ್ರಗಳಲ್ಲಿ ಖಾಲಿ ಇದ್ದಂತಹ ಅಂಗನವಾಡಿ ಕಾರ್ಯಕರ್ತರು ಮತ್ತು ಅಂಗನವಾಡಿ ಸಹಾಯಕಿ ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳಲು ಅಧಿಸೂಚನೆ ಬಿಡುಗಡೆ ಮಾಡಿ ನವೆಂಬರ್ 15, 2024ರ ವರೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿತ್ತು.

ವಿವಿಧ ಕಾರಣಗಳಿಂದಾಗಿ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಅಪೂರ್ಣಗೊಳಿಸಿರುವಂತಹ ಅಭ್ಯರ್ಥಿಗಳಿಗೆ ಇದೀಗ ಮತ್ತೊಂದು ಭಾರಿ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಈ ನೇಮಕಾತಿಯಲ್ಲಿ ಒಟ್ಟು 598 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿತ್ತು. ಹುದ್ದೆಗಳ ವಿವರವು ಈ ಕೆಳಗಿನಂತಿದೆ.
• ಅಂಗನವಾಡಿ ಕಾರ್ಯಕರ್ತರು – 106 ಹುದ್ದೆಗಳು
• ಅಂಗನವಾಡಿ ಸಹಾಯಕರು – 471 ಹುದ್ದೆಗಳು

ಯಾರು ಅರ್ಜಿ ಸಲ್ಲಿಸಬಹುದು?

ಈ ನೇಮಕಾತಿಗಾಗಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ನಾಲ್ಕು ಹಂತಗಳಿವೆ. ಈ ನಾಲ್ಕು ಹಂತಗಳ ಅರ್ಜಿ ಸಲ್ಲಿಕೆಯನ್ನು ಅಪೂರ್ಣಗೊಳಿಸಿದ ಅಭ್ಯರ್ಥಿಗಳಿಗೆ ಮಾತ್ರ ಈಗ ಮತ್ತೊಂದು ಬಾರಿ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಲಾಗಿದೆ.

ಅರ್ಜಿ ಸಲ್ಲಿಸಲು ನಿಗದಿತ ದಿನಾಂಕಗಳು – ಅರ್ಜಿ ಸಲ್ಲಿಸಲು ಅರ್ಹತೆ ಹೊಂದಿರುವ ಅಭ್ಯರ್ಥಿಗಳು ಡಿಸೆಂಬರ್ 26, 2024 ರಿಂದ ಜನವರಿ 05, 2024ರ ವರೆಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಗಮನಿಸಿ : ಬಾಗಲಕೋಟ ಜಿಲ್ಲೆಯಲ್ಲಿ ಹುದ್ದೆಗಳಿಗೆ ಮಾತ್ರವಲ್ಲದೆ, ಕಲಬುರಗಿ & ಚಿಕ್ಕಮಗಳೂರು ಜಿಲ್ಲೆಯ ಹುದ್ದೆಗಳ ನೇಮಕಾತೀಯ ಅರ್ಜಿ ಸಲ್ಲಿಕೆಗೂ ಕೂಡ ಮತ್ತೊಂದು ಬಾರಿ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಲಾಗಿದ್ದು, ಜನವರಿ 05, 2024ರ ವರೆಗೆ ಅವಕಾಶ ನೀಡಲಾಗಿದೆ.

ಅರ್ಜಿ ಸಲ್ಲಿಸಲು ಜಾಲತಾಣದ ವಿಳಾಸ : https://karnemakaone.kar.nic.in

Continue Reading

Editorials

ಪೊಲೀಸ್ ಕಾನ್ಸ್ಟೇಬಲ್ ಪರೀಕ್ಷಾ ತಯಾರಿಗೆ ಸರ್ಕಾರದಿಂದ ವಸತಿಯುತ Free Coaching: ನೀವು ಅರ್ಜಿ ಸಲ್ಲಿಸಿ

Published

on

2024-25ನೇ ಸಾಲಿಗೆ ಸಮಾಜ ಕಲ್ಯಾಣ ಇಲಾಖೆಯ ಇಂದಿರಾಗಾಂಧಿ ವೃತ್ತಿ ಅಭಿವೃದ್ಧಿ ಕೇಂದ್ರದ ವತಿಯಿಂದ ಪರಿಶಿಷ್ಟ ಜಾತಿ ವರ್ಗದ ಅಭ್ಯರ್ಥಿಗಳಿಗೆ ಉಚಿತ ವಸತಿಯೊಂದಿಗೆ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳ ನೇಮಕಾತಿಯ ಪರೀಕ್ಷಾ ಪೂರ್ವ ತರಬೇತಿ ನೀಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಉಚಿತ ತರಬೇತಿ ಕುರಿತು :

ಅರ್ಜಿ ಸಲ್ಲಿಸಿ ಆಯ್ಕೆಯಾದ ಪರಿಶಿಷ್ಟ ಜಾತಿ ವರ್ಗದ ಅಭ್ಯರ್ಥಿಗಳಿಗೆ ಕರ್ನಾಟಕ ರಾಜ್ಯದ 4 ಕಂದಾಯ ವಿಭಾಗಗಳಲ್ಲಿ ಪ್ರತ್ಯೇಕವಾಗಿ ಒಟ್ಟು 60 ದಿನಗಳ ವಸತಿಯುತ ತರಬೇತಿ ನೀಡಲಾಗುತ್ತದೆ.

ಈ ಕೆಳಗಿನ ಅಭ್ಯರ್ಥಿಗಳು ಮಾತ್ರ ಈ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹರು :

ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದ ಒಳಗಾಗಿ ದ್ವಿತೀಯ ಪಿಯುಸಿ ಮುಗಿಸಿದಂತಹ ಪರಿಶಿಷ್ಟ ಜಾತಿ ವರ್ಗಕ್ಕೆ ಸೇರಿದ 18ರಿಂದ 26 ವರ್ಷದ ಒಳಗಿನ ಅಭ್ಯರ್ಥಿಗಳಾಗಿರಬೇಕು.

ದೈಹಿಕ ಅರ್ಹತೆಗಳು :

• ಪುರುಷ ಅಭ್ಯರ್ಥಿಗಳು ಕನಿಷ್ಠ 168 cm ಎತ್ತರ ಹಾಗೂ 50ಕೆಜಿ ತೂಕವಿರಬೇಕು.
• ಮಹಿಳಾ ಅಭ್ಯರ್ಥಿಗಳು ಕನಿಷ್ಠ 157 cm ಎತ್ತರ ಹಾಗೂ 45ಕೆಜಿ ತೂಕವಿರಬೇಕು.

ಉಚಿತ ತರಬೇತಿಗೆ ಅಭ್ಯರ್ಥಿಗಳನ್ನು ಹೇಗೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ?

ಈ ಉಚಿತ ತರಬೇತಿ ಯೋಜನೆಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ದ್ವಿತೀಯ ಪಿಯುಸಿಯಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ನೇರವಾಗಿ ಆಯ್ಕೆ ಮಾಡಿಕೊಡಲಾಗುವುದು.

ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ – 17 ಜನವರಿ 2024

ಅರ್ಜಿ ಸಲ್ಲಿಕೆಗೆ ಡೈರೆಕ್ಟ್ ಲಿಂಕ್ – https://swdservices.karnataka.gov.in/petccoaching/PC/PCPreValidation.aspx

Continue Reading

Chikmagalur

ಚಿಕ್ಕಮಗಳೂರಿಗರಿಗೆ ಧಕ್ಕುತ್ತಾ ಲೋಕಾ ಟಿಕೆಟ್?

Published

on

ಶ್ರೀಕಂಠಪ್ಪರ ಬಳಿಕ ಕಾಫಿನಾಡಿಗರಿಗಿಲ್ಲ ಸಂಸತ್ ಪ್ರವೇಶ ಅವಕಾಶ!  ಕೈ-ಕಮಲದಲ್ಲೂ ಲೋಕಾಟಿಕೆಟ್ ನದ್ದೇ ಸದ್ದು!  ಚಿಕ್ಕಮಗಳೂರಿನ ಕಡೆಯ ಸಂಸದ ಡಿ.ಸಿ ಶ್ರೀಕಂಠಪ್ಪ

ಯೋಗೀಶ್ ಕಾಮೇನಹಳ್ಳಿ

ಚಿಕ್ಕಮಗಳೂರು : ವಿಧಾನ ಸಭಾ ಚುನಾವಣೆ ಕಾವು ತಣ್ಣಗಾಗಿದ್ದು, ಲೋಕಸಭಾ ಚುನಾವಣೆಯ ಕಾವುಎಲ್ಲೆಡೆ ಹೊತ್ತಿಕೊಳ್ಳುತ್ತಿದೆ. ಉಡುಪಿ-ಚಿಕ್ಕಮಗಳೂರು ಲೋಕಸಭಾ ಚುನಾವಣೆಗೆ ಎರಡೂ ರಾಷ್ಟ್ರೀಯ ಪಕ್ಷಗಳಿಂದಲೂ ಈ ಬಾರಿ ಚಿಕ್ಕಮಗಳೂರಿನವರಿಗೆ ಟಿಕೆಟ್ ನೀಡಬೇಕೆಂಬ ಕೂಗು ವ್ಯಾಪಕವಾಗಿ ಕೇಳಿ ಬರತೊಡಗಿದೆ.

1952ರಲ್ಲಿ ರಚನೆಯಾಗಿ 2009ರ ಲೋಕಸಭಾ ಚುನಾವಣೆಯವರೆಗೂ ಅಸ್ತಿತ್ವದಲ್ಲಿದ್ದ ಚಿಕ್ಕಮಗಳೂರು ಲೋಕ ಸಭಾ ಕ್ಷೇತ್ರ ಬಳಿಕ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರವಾಗಿ ಮಾರ್ಪಟ್ಟಿತು. ಅಂದಿನಿಂದ ಇದುವರೆಗೂ ಚಿಕ್ಕಮಗಳೂರು ಜಿಲ್ಲೆಯವರಿಗೆ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಅವಕಾಶವನ್ನೇ ಕೊಡದೆ, ಕೇವಲ ಉಡುಪಿ ಜಿಲ್ಲೆಯವರಿಗೆ ಮಣೆ ಹಾಕುತ್ತ ಬಂದಿರುವುದು ಚಿಕ್ಕಮಗಳೂರಿಗರಿಗೆ ನಿರಾಸೆ ತರಿಸಿದೆ, ಈ ಬಾರಿ ಚಿಕ್ಕಮಗಳೂರು ಜಿಲ್ಲೆಯವರಿಗೆ ಟಿಕೆಟ್ ನೀಡುವ ಮೂಲಕ ಅವಕಾಶ ಕಲ್ಪಿಸಬೇಕೆಂದು ಪಕ್ಷದ ವರಿಷ್ಠರ ಮೇಲೆ ಒತ್ತಡ ಹೇರಲಾರಂಭಿಸಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ, ಮೂಡಿಗೆರೆ, ಚಿಕ್ಕಮಗಳೂರು, ಕಡೂರು, ತರೀಕೆರೆ ವಿಧಾನಸಭಾಕ್ಷೇತ್ರಗಳನ್ನು ಹೊಂದಿದ್ದ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ಮಾಜಿ ಪ್ರಧಾನಿ ದಿ. ಇಂದಿರಾಗಾಂಧಿಯವರಿಗೆ ರಾಜಕೀಯ ಪುನರ್ ಜನ್ಮ ನೀಡಿದ್ದಲ್ಲದೆ, ಡಿ.ಕೆ. ತಾರಾದೇವಿಯವರನ್ನು ಎರಡು ಬಾರಿ, ಡಿ.ಬಿ. ಚಂದ್ರೇಗೌಡ, ಡಿ.ಸಿ ಶ್ರೀಕಂಠಪ್ಪನವರಂತ ನಾಯಕರುಗಳನ್ನು ಮೂರು ಮೂರು ಬಾರಿ ಲೋಕಸಭೆಗೆ ಕಳುಹಿಸಿದೆ. ಆದರೆ, ಕ್ಷೇತ್ರ ಮರು ವಿಂಗಡಣೆಯ ಬಳಿಕ ಚಿಕ್ಕಮಗಳೂರಿನ ರಾಜಕೀಯ ಮುತ್ಸದ್ದಿಗಳು ಲೋಕಸಭೆಗೆ ಪ್ರವೇಶ ಮಾಡಲು ಅವಕಾಶವನ್ನೇ ಕಲ್ಪಿಸದಿರುವುದು ಬೇಸರದ ಸಂಗತಿಯಾಗಿದೆ.

ಸದ್ಯ ಉಡುಪಿ ಜಿಲ್ಲೆಯ ಕುಂದಾಪುರ, ಉಡುಪಿ, ಕಾರ್ಕಳ, ಕಾಪು ವಿಧಾನಸಭಾ ಕ್ಷೇತ್ರ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ, ಮೂಡಿಗೆರೆ, ಚಿಕ್ಕಮಗಳೂರು, ತರೀಕೆರೆ ವಿಧಾನ ಸಭಾ ಕ್ಷೇತ್ರಗಳು ಸೇರಿಕೊಂಡು ಉಡುಪಿ ಚಿಕ್ಕಮಗಳೂರು ಲೋಕಸಭಾ ಕೇತ್ರ ರಚನೆಯಾಗಿದ್ದು ಕೇವಲ ಕರಾವಳಿಯವರಿಗೆ ಮಣೆ ಹಾಕುತ್ತಿದ್ದು, ಚಿಕ್ಕಮಗಳೂರಿನವರನ್ನು ಕಡೆಗಣಿಸಲಾಗುತ್ತಿದೆ ಎಂಬ ಆರೋಪಗಳು ಎರಡೂ ರಾಷ್ಟಿçÃಯ ಪಕ್ಷಗಳಲ್ಲಿಯೀ ಕಂಡುಬರುತ್ತಿವೆ. ಹಾಗೂ ತಮ್ಮ ಪಕ್ಷದ ನಾಯಕರುಗಳ ಮುಂದೆ ಜಿಲ್ಲೆಯ ಮುಖಂಡರಿಗೆ ಈ ಬಾರಿ ಸ್ಪರ್ಧಿಸಲು ಅವಕಾಶ ನೀಡಬೇಕೆಂದು ಪಟ್ಟು ಹಿಡಿದಿದ್ದಾರೆ ಎಂಬ ಮಾತುಗಳು ರಾಜಕೀಯ ಪಡಸಾಲೆಯಲ್ಲಿ ಕೇಳಿಬರಲಾರಂಭಿಸಿವೆ.

ಈ ಬಾರಿಯ 2024ರ ಲೋಕಸಭಾ ಚುನಾವಣೆಯಲ್ಲಿ ಉಡುಪಿ ಜಿಲ್ಲೆಯವರನ್ನು ಹೊರತುಪಡಿಸಿ ಭೌಗೋಳಿಕವಾಗಿ ನೋಡಿದರೆ ಉಡುಪಿ ಜಿಲ್ಲೆಗಿಂತ ಅತೀ ಹೆಚ್ಚು ಸಮಸ್ಯೆ ಹೊಂದಿರುವ ಚಿಕ್ಕಮಗಳೂರು ಜಿಲ್ಲೆಯ ಮುಖಂಡರಿಗೆ ಟಿಕೆಟ್ ನೀಡುವ ಮೂಲಕ ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ರಾಷ್ಟ್ರೀಯ ಪಕ್ಷಗಳೂ ಚಿಕ್ಕಮಗಳೂರು ಜಿಲ್ಲೆಯಲ್ಲಿರುವ ಕೆಲವು ಜ್ವಲಂತ ಸಮಸ್ಯೆಗಳಿಗೆ ಸ್ಪಂಧಿಸಬೇಕೆಂಬುದು ಎಲ್ಲರ ಆಶಯವಾಗಿದೆ.

ಕೈ ಪಾಳಯದಲ್ಲಿ ಲೋಕಾ ಟಿಕೆಟ್‌ಗೆ ಪೈಪೋಟಿ :


ಮಾಜಿ ಪರಧಾನಿ ಇಂದಿರಾಗಾಂಧಿಯವರಿಗೆ ರಾಜಕೀಯವಾಗಿ ಮರು ಹುಟ್ಟು ನೀಡುವ ಮೂಲಕ ಕಾಂಗ್ರೆಸ್ ಪಕ್ಷ ಪಕ್ಷದ ಭದ್ರಕೋಟೆ ಎನಿಸಿಕೊಂಡಿದ್ದ ಕಾಫಿ ನಾಡಲ್ಲಿ ಡಿ.ಕೆ ತಾರಾ ದೇವಿ ಅವರ ಬಳಿಕ ಕಾಂಗ್ರೆಸ್ ಪಕ್ಷದಿಂದ ಯಾರೂ ಕೂಡಾ ಲೋಕಸಭೆ ಪ್ರವೇಶಿಸು ಸಾಧ್ಯವಾಗಿಲ್ಲ ಹಾಗೂ ಕ್ಷೇತ್ರ ಮರು ವಿಂಗಡಣೆ ಬಳಿಕ ಒಮ್ಮೆ ಕೆ. ಜಯಪ್ರಕಾಶ್ ಹೆಗ್ಡೆ ಕಾಂಗ್ರೆಸ್‌ನಿಂದ ಗೆಲುವು ಸಾಧಿಸಿದ್ದನ್ನು ಬಿಟ್ಟರೆ ಉಳಿದೆಲ್ಲ ಅವಧಿಗೆ ಬಿಜೆಪಿಯೇ ಅಧಿಕಾರದಲ್ಲಿದೆ. ಇನ್ನೂ ಈ ಬಾರಿ ಚಿಕ್ಕಮಗಳೂರು ಜಿಲ್ಲೆಯ ೫ಕ್ಕೆ ೫ ಕ್ಷೇತ್ರಗಳಲ್ಲಿಯೂ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸುವಲ್ಲಿ ಮಹತ್ತರವಾದ ಪಾತ್ರ ವಹಿಸಿರುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ. ಕೆ.ಪಿ ಅಂಶುಮಂತ್, ಎಐಸಿಸಿ ವಕ್ತಾರ ಬಿ.ಎಂ. ಸಂದೀಪ್, ಮಾಜಿ ಸಚಿವೆ ಡಾ. ಆರತಿ ಕೃಷ್ಣ, ಕಾಂಗ್ರೆಸ್ ಮುಖಂಡ ಸುಧೀರ್ ಕುಮಾರ್ ಮುರೊಳ್ಳಿ ಇವರುಗಳು ಈಗಾಗಲೇ ಲೋಕಸಭಾ ಚುನವಣೆಗೆ ಟಿಕೆಟ್ ಕೇಳಿದ್ದು ಕ್ಷೇತ್ರದಾದದ್ಯಂತ ಓಡವನ್ನೂ ಆರಂಭಿಸಿದ್ದಾರೆ. ಲೋಕಸಭಾ ಚುನಾವಣೆಗೆ ಟಿಕೆಟ್‌ಗಾಗಿ ಅರ್ಜಿಸಲ್ಲಿಕೆಗೆ ಅವಕಾಶ ಕಲ್ಪಿಸಿದರೆ ಕಾಂಗ್ರೆಸ್‌ನಲ್ಲಿ ಆಕಾಂಕ್ಷಿಗಳ ಪಟ್ಟಿ ಇನ್ನೂ ಸ್ವಲ್ಪ ದೊಡ್ಡದಾಗುವ ಲಕ್ಷಣಗಳಿವೆ.

ಕಮಲ ಪಡೆಯಲ್ಲೂ ಮಾರ್ಧನಿಸುತ್ತಿದೆ ಟಿಕೆಟ್ ಕೂಗು


ಇತ್ತೀಚೆಗೆ ನಡೆದ ವಿಧಾನ ಸಭಾ ಚುನಾವಣೆಯಲ್ಲಿ ಐದಕ್ಕೆ ಐದೂ ಕ್ಷೇತ್ರಗಳನ್ನು ಕಳೆದುಕೊಂಡು, ಒAದಷ್ಟು ದಿನ ಸೋಲಿನ ಅವಲೋಕನದ ಜೊತೆಗೆ ಪಕ್ಷವನ್ನು ಮತ್ತಷ್ಟು ಬಲಗೊಳಿಸಿಕೊಂಡಿರುವ ಬಿಜೆಪಿಯಲ್ಲಿಯೂ ಕೂಡಾ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಚಿಕ್ಕಮಗಳೂರಿನ ಮುಖಂಡರಿಗೆ ಟಿಕೆಟ್ ನೀಡಬೇಕೆಂದು ಆಗ್ರಹಿಸಿದ್ದಾರೆ. ಶೃಂಗೇರಿ ವಿಧಾನ ಸಭಾ ಕ್ಷೇತ್ರದಿಂದ ಮೂರು ಬಾರಿ ಶಾಸಕರಾಗಿ, ಸಚಿವರಾಗಿ ಕಾರ್ಯ ನಿರ್ವಹಿಸಿದ್ದ ಡಿ.ಎನ್ ಜೀವರಾಜ್ ಅವರು ಇತ್ತೀಚೆಗಷ್ಟೇ ತಮ್ಮ ಮೇಲಿದ್ದ ಪ್ರಕರಣವೊಂದರಿAದ
ಖುಲಾಸೆಯಾಗಿ ಹೊರಬಂದಿದ್ದು ಅವರೂ ಕೂಡಾ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ಇಂಗಿತವನ್ನು ಪರೋಕ್ಷವಾಗಿ ವ್ಯಕ್ತಪಡಿಸಿದ್ದು. ಅದಕ್ಕೆ ಬೇಕಾದ ಸಿದ್ಧತೆಯಲ್ಲಿ ತೊಡಗಿಕೊಂಡಿದ್ದಾರೆ. ಮತ್ತೊಂದೆಡೆ ನಾಲ್ಕು ಬಾರಿ ಶಾಸಕರಾಗಿ, ಸಚಿವರಾಗಿ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿದ್ದ ಸಿ.ಟಿ ರವಿ ಅವರೂ ಕೂಡಾ ಈ ಬಾರಿ ಲೋಕಸಭಾ ಚುನಾವಣೆ ತಯಾರಿಯಲ್ಲಿದ್ದು, ಪಕ್ಷದ ವರಿಷ್ಠರು ಅವಕಾಶ ನೀಡಿದರೆ ಸ್ಪರ್ಧೆ ಮಾಡುವ ಇಂಗಿತವನ್ನು ತಮ್ಮ ಆಪ್ತ ವಲಯದಲ್ಲಿ ತೋಡಿಕೊಂಡಿದ್ದಾರೆ ಎನ್ನಲಾಗುತ್ತದೆಯಾದರೂ ಎಲ್ಲಿಯೂ ಕೂಡಾ ಅವಬರು ಬಹಿರಂಗವಾಗಿ ಹೇಳಿಕೊಂಡಿಲ್ಲ. ಆದರೂ ಈ ಬಾರಿ ಬಿಜೆಪಿಯಿಂದ ಲೋಕಸಭಾ ಚುನಾವಣೆಯ ಟಿಕೆಟ್‌ನ್ನು ಚಿಕ್ಕಮಗಳೂರಿನವರಿಗೆ ನೀಡಬೇಕೆಂಬ ಕೂಗು ಕಮಲ
ಪಡೆಯಲ್ಲಿ ಮಾರ್ಧನಿಸುತ್ತಿದೆ.

ಶ್ರೀಕಂಠಪ್ಪರ ಬಳಿಕ ಧಕ್ಕದ ಅವಕಾಶ :
ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕಟ್ಟ ಕಡೆಯ ಸಂಸದರೆಂದು ಕರೆಯಿಸಿಕೊಳ್ಳುವ ಡಿ.ಸಿ ಶ್ರೀಕಠಪ್ಪ ಅವರು ೧೯೯೮ ರಿಂದ ೨೦೦೪ರವರೆ ಒಟ್ಟು ಮೂರು ಬಾರಿ ಸಂಸದರಾಗಿ ಆಯ್ಕೆಯಾಗಿದ್ದರು. ೨೦೦೯ರ ಬಳಿಕ ಕ್ಷೇತ್ರ ವಿಂಗಡಣೆಯಾಗಿ ಉಡುಪಿ ಕ್ಷೇತ್ರದೊಂದಿಗೆ ಸೇರಿಕೊಂಡ ಬಳಿಕ ಜಿಲ್ಲೆಯವರಿಗೆ ಅವಕಾಶ ಸಿಗದೆ ಚಿಕ್ಕಮಗಳೂರಿಗರ ಮೇಲೆ ಮಲತಾಯಿ
ಧೋರಣೆ ತೋರುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿದ್ದು. ಈ ಬಾರಿ ಚಿಕ್ಕಮಗಳೂರಿನವರಿಗೆ ಅವಕಾಶ ಸಿಗುತ್ತಾ ಎಂಬ ಕುತೂಹಲ ರಾಜಕೀಯಾಸಕ್ತರನ್ನು ಮಂತ್ರ ಮುಗ್ಧರನ್ನಾಗಿಸಿದೆ.

ಹತ್ತು ಹಲವು ಸಮಸ್ಯೆ ಹೊಂದಿರುವ ಕಾಫಿ ನಾಡು :ಕಾಫಿ ನಾಡು ಚಿಕ್ಕಮಗಳೂರು ಜಿಲ್ಲೆ ಮಲೆನಾಡು, ಅರೆ ಮಲೆನಾಡು, ಬಯಲುಸೀಮೆ ಸೇರಿ ಮೂರು ವಿಭಿನ್ನ ಪ್ರದೇಶಗಳನ್ನು ಹೊಂದಿ, ವಿವಿಧ ಸಮಸ್ಯೆಗಳನ್ನು ಒಳಗೊಂಡಿರುವ ಜಿಲ್ಲೆಯಾಗಿದೆ. ಸರಳವಾಗಿ ಹೇಳುವುದಾದರೆ ಕೃಷ್ಣ ಕಣಿವೆ ಪ್ರದೇಶ ಹಾಗೂ ಕಾವೇರಿ ಕಣಿವೆ ಪ್ರದೇಶ ವರ್ಗೀಕರಿಸಲಾಗಿದ್ದು ಕೃಷ್ಣ ಕಣಿವೆಯನ್ನು ಬರ ಪೀಡಿತವೆಂದು, ಕಾವೇರಿ ಕಣಿವೆಯನ್ನು ಮಲೆನಾಡು ಎಂದು ಕರೆಯಲ್ಪಡುತ್ತದೆಯಾದರೂ, ಇಲ್ಲಿನ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಒದಗಿಸಬೇಕಾದರೆ ಇಲ್ಲಿನವರಿಗೇ ಅವಕಾಶ ಕಲ್ಪಿಸುವುದು ಅನಿವಾರ್ಯವಾಗಿದೆ.

ಲೋಕಸಭಾ ಚುನಾವಣೆಯಲ್ಲಿ ಪಕ್ಷ ನನಗೆ ಟಿಕೆಟ್ ಕೊಟ್ಟರೆ ಸ್ಪರ್ಧೆ ಮಾಡುತ್ತೇನೆ. ಒಂದು ವೇಳೆ ನನಗೆ ಟಿಕೆಟ್ ನೀಡದೆ ಯಾರಿಗೇ ಕೊಟ್ಟರೂ ಅವರ ಪರವಾಗಿ ಕೆಲಸ ಮಾಡುತ್ತೇ. ಲೋಕಸಭಾ ಚುನಾವಣೆಯಲ್ಲಿ ಈ ಬಾರಿಯೂ ಬಿಜೆಪಿ ಗೆಲ್ಲಿಸುವುದೇ ನಮ್ಮ ಗುರಿ.


– ಡಿ.ಎನ್ ಜೀವರಾಜ್, ಮಾಜಿ ಶಾಸಕ

ಈ ಬಾರಿ ಜಿಲ್ಲೆಯಲ್ಲಿ ಐದಕ್ಕೆ ಐದು ಕ್ಷೇತ್ರದಲ್ಲೂ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಿ ಜಿಲ್ಲೆಯನ್ನು ಕಾಂಗ್ರೆಸ್ ಭದ್ರ ಕೋಟೆ ಮಾಡಲಾಗಿದೆ. ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ಇಚ್ಛೆ ಹೊಂದಿದ್ದು, ಪಕ್ಷದ ವರಿಷ್ಟರೊಂದಿಗೆ ಮಾತುಕತೆ ಮಾಡಿದ್ದೇನೆ. ಪಕ್ಷ ಟಿಕೆಟ್ ನೀಡಿದರೆ ಸ್ಪರ್ಧೆ ಮಾಡುತ್ತೇನೆ. ಅಂತಿಮವಾಗಿ ಪಕ್ಷ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧನಾಗಿದ್ದೇನೆ.


– ಡಾ. ಕೆ.ಪಿ ಅಂಶುಮOತ್, ಚಿಕ್ಕಮಗಳೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ

 

 

 

 

Continue Reading

Trending

error: Content is protected !!