National - International
ಪಾಕಿಸ್ತಾನ ಭಯೋತ್ಪಾದನೆ, ಮತಾಂಧತೆಯಲ್ಲಿ ಮುಳುಗಿದೆ: ವಿಶ್ವಸಂಸ್ಥೆಯಲ್ಲಿ ಭಾರತ ವಾಗ್ದಾಳಿ
ನ್ಯೂಯಾರ್ಕ್: ಗಡಿಯಾಚೆಗಿನ ಭಯೋತ್ಪಾದನೆಯನ್ನು ಪ್ರಚೋದಿಸುವ ದೇಶಗಳ ವಿರುದ್ಧ ಗಂಭೀರ ಕ್ರಮವಹಿಸಬೇಕು. ನಮ್ಮ ನೆರೆಯ ದೇಶವಾಗಿರುವ ಪಾಕಿಸ್ತಾವೂ ಭಯೋತ್ಪಾದನೆ, ಮತಾಂಧ ಹಾಗೂ ಸರಣಿ ಸಾಲದ ಸುಳಿಯಲ್ಲಿ ಸಿಲುಕಿರುವ ದೇಶ ಎಂದು ಭಾರತ ವಾಗ್ದಾಳಿ ನಡೆಸಿದೆ.
ಭಾರತ, ವಿಶ್ವಸಂಸ್ಥೆಯಲ್ಲಿ ಇಂದು ಪಾಕಿಸ್ತಾನ ಅಧ್ಯಕ್ಷತೆಯಲ್ಲಿ ನಡೆದ ಭದ್ರತ ಮಂಡಳಿ ಸಭೆಯಲ್ಲಿ ಪಾಕ್ ವಿರುದ್ದ ಪ್ರತಿಪಾದಿಸಿದೆ.

ವಿಶ್ವಸಂಸ್ಥೆಯಲ್ಲಿ ಭಾರತದ ಖಾಯಂ ಪ್ರತಿನಿಧಿಯಾಗಿರುವ ಪರ್ವತನೇನಿ ಹರೀಶ್, ಅಂತರಾಷ್ಟ್ರೀಯ ಶಾಂತಿ ಮತ್ತು ಭದ್ರತೆಯನ್ನು ಹೆಚ್ಚಿಸುವ ಬಗ್ಗೆ ಚರ್ಚಿಸುವಾಗ, ಕೆಲ ಮೂಲಭೂತ ತತ್ವಗಳನ್ನು ಗುರುತಿಸುವುದು ಅಗತ್ಯವಾಗಿದೆ. ಅವುಗಳಲ್ಲಿ ಭಯೋತ್ಪಾದನೆ ವಿರುದ್ಧ ಶೂನ್ಯ ಸಹಿಷ್ಣುವಾಗಿರುವುದು ಪ್ರಮುಖವಾಗಿದೆ ಎಂದು ತಿಳಿಸಿದ್ದಾರೆ.
ಭಾರತವೂ ಒಂದೆಡೆ ಅಭಿವೃದ್ಧಿಯತ್ತ ಸಾಗುತ್ತಿದೆ. ಪ್ರಬುದ್ಧ ಪ್ರಜಾಪ್ರಭುತ್ವ, ಬಹುತ್ವ ಮತ್ತು ಎಲ್ಲರನ್ನು ಒಳಗೊಂಡ ಸಮಾಜದೊಂದಿಗೆ ವೃದ್ಧಿಸುತ್ತಿರುವ ಆರ್ಥಿಕತೆಯತ್ತ ಮುಂದೆ ಸಾಗುತ್ತಿದೆ. ಆದರೆ ಇನ್ನೊಂದೆಡೆ ಪಾಕಿಸ್ತಾನವು ಭಯೋತ್ಪಾದನೆ ಹಾಗೂ ಮತಾಂಧತೆಯಲ್ಲಿ ಮುಳುಗಿದೆ. ಅಲ್ಲದೇ ಅಂತರಾಷ್ಟ್ರೀಯ ಹಣಕಾಸು ನಿಧಿಯಿಂದ ಸರಣಿ ಸಾಲಗಾರನಾಗಿದೆ ಎಂದು ಹೇಳಿದ್ದಾರೆ.
National - International
ಭಾರತದ ಮೇಲಿನ 25% ಹೆಚ್ಚುವರಿ ಸುಂಕ ತೆಗೆಯಲು ಟ್ರಂಪ್ ಸಿದ್ಧತೆ!
ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಭಾರತದ ಮೇಲೆ 50% (25% ಹೆಚ್ಚುವರಿ) ಸುಂಕ ವಿಧಿಸಿದಾಗಿನಿಂದ ರಷ್ಯಾದಿಂದ ತೈಲ ಖರೀದಿಸುವುದು ಗಮನಾರ್ಹವಾಗಿ ಕಡಿಮೆಯಾಗಿದೆ. ಪ್ರಸ್ತುತ 50% ಸುಂಕ ಇದ್ದು, ಇದು ಶಾಶ್ವತವಾಗಿ ಇರೋದಿಲ್ಲ ಎಂದು ಸುಂಕ ಕಡಿತಗೊಳಿಸುವ ಬಗ್ಗೆ ಸುಳಿವು ಕೊಟ್ಟಿದ್ದಾರೆ.

ಭಾರತವು ರಷ್ಯಾದ ತೈಲ ಖರೀದಿ ಮಾಡುವ ಮೂಲಕ ಉಕ್ರೇನ್ ವಿರುದ್ಧದ ಯುದ್ಧಕ್ಕೆ ಫಂಡಿಂಗ್ ಮಾಡುತ್ತಿದೆ ಅನ್ನೋದು ಟ್ರಂಪ್ ಬಲವಾದ ಆರೋಪ ಇದೇ ಕಾರಣಕ್ಕೆ ಭಾರತದ ಮೇಲೆ ಸುಂಕ ಏರಿಸಿದ್ದಾರೆ. ಟ್ರಂಪ್ ಅಧಿಕಾರಕ್ಕೆ ಏರಿದ ಆರಂಭದಲ್ಲಿ ಭಾರತದಿಂದ ಅಮೆರಿಕಕ್ಕೆ ಆಮದಾಗುವ ವಸ್ತುಗಳ ಮೇಲೆ 25% ಸುಂಕ ವಿಧಿಸಿದ್ದರು. ಬಳಿಕ ರಷ್ಯಾದಿಂದ ಕಚ್ಚಾ ತೈಲವನ್ನು ಆಮದು ಮಾಡುತ್ತಿರುವುದಕ್ಕೆ ಪ್ರತಿಯಾಗಿ 25% ದಂಡದ ರೂಪದಲ್ಲಿ ಸುಂಕ ಹೇರಿದ್ದಾರೆ. ಈ ನಿರ್ಧಾರದಿಂದ ಭಾರತದ ಕೆಲವು ವಸ್ತುಗಳಿಗೆ ಈಗ 50% ಸುಂಕ ಹೇರಲಾಗಿದೆ.

ಯುಎಸ್, G7 ಮತ್ತು ಯುರೋಪಿಯನ್ ದೇಶಗಳು ರಷ್ಯಾದ ತೈಲಕ್ಕೆ ಬೆಲೆ ಮಿತಿ ವ್ಯವಸ್ಥೆ ಜಾರಿಗೆ ತಂದಿವೆ. ಈ ಮಿತಿ ಜನವರಿ 2026 ರ ವರೆಗೆ ಬ್ಯಾರೆಲ್‌ಗೆ ಸರಿಸುಮಾರು 47.60 ಡಾಲರ್ (4,360 ರೂ.) ಆಗಿದ್ದು, ಫೆಬ್ರವರಿ 1 ರಿಂದ 44.10 ಡಾಲರ್ (4,039 ರೂ.) ಗೆ ಇಳಿಕೆಯಾಗಲಿದೆ. ಒಂದು ವೇಳೆ ಮಿತಿಗೊಳಿಸಿದ ಬೆಲೆಗಿಂತ ಹೆಚ್ಚಿನ ದರಕ್ಕೆ ಮಾರಾಟ ಮಾಡಿದ್ರೆ, ವಿಮೆ, ಸಾಗಣೆ ಮತ್ತು ಹಣಕಾಸು ಮುಂತಾದ ಸೇವೆಗಳನ್ನು ಒದಗಿಸಲಾಗುವುದಿಲ್ಲ ಎಂದು ದೇಶಗಳು ಎಚ್ಚರಿಕೆ ನೀಡಿವೆ.
National - International
ಭಾರತದಲ್ಲಿ ಪಂದ್ಯವಾಡಲು ಬಾಂಗ್ಲಾ ನಿರಾಕರಣೆ: ICCಯಿಂದ ಬಿಗ್‌ಶಾಕ್
ದುಬೈ: ಭಾರತದ ನೆಲದಲ್ಲಿ ಟಿ-20 ವಿಶ್ವಕಪ್ ಪಂದ್ಯ ಆಡಲು ಒಪ್ಪದ ಬಾಂಗ್ಲಾದೇಶಕ್ಕೆ ಐಸಿಸಿ ಬಿಗ್‌ಶಾಕ್ ನೀಡಿದ್ದು, ಬಾಂಗ್ಲಾ ಬದಲು ಮತ್ತೊಂದು ತಂಡಕ್ಕೆ ಅವಕಾಶ ಕಲ್ಪಿಸುವ ಬಗ್ಗೆ ಮತದಾನವಾಗಿದೆ.

ಐಸಿಸಿ ಬೋರ್ಡ್‌ನ ಒಟ್ಟು 16 ಸದಸ್ಯ ದೇಶಗಳ ಪೈಕಿ ಬಾಂಗ್ಲಾ ವಿರುದ್ಧ 14 ಮತ್ತು ಪರ 2 ಮತಗಳು ಬಿದ್ದಿವೆ. ಅದರಲ್ಲಿ ಬಾಂಗ್ಲಾದೇಶ ಮತ್ತು ಪಾಕಿಸ್ತಾನ ಮಾತ್ರ ಬಾಂಗ್ಲಾ ಪರವಾಗಿ ಮತವನ್ನು ಹಾಕಿದೆ. ಅಂತಿಮ ತೀರ್ಮಾನ ತಿಳಿಸಲು ಇಂದೇ ಬಾಂಗ್ಲಾಗೆ ಡೆಡ್‌ಲೈನ್ ವಿಧಿಸಲಾಗಿತ್ತು. ಆದರೆ ಈಗ 24 ಗಂಟೆಯ ಗಡುವು ನೀಡಲಾಗಿದೆ. ನಾಳೆಯೊಳಗೆ ತಮ್ಮ ನಿರ್ಧಾರ ತಿಳಿಸದೇ ಇದ್ದರೆ ಬಾಂಗ್ಲಾದ ಬದಲು ಸ್ಕಾಟ್ಲೆಂಡ್ ತಂಡ ಭಾರತಕ್ಕೆ ಬರಲಿದೆ.
ಬಾಂಗ್ಲಾದೇಶ ಸುರಕ್ಷತೆ ಹಾಗೂ ಭದ್ರತಾ ಕಾರಣದಿಂದಾಗಿ ಭಾರತಕ್ಕೆ ಪ್ರಯಾಣಿಸಲು ನಿರಾಕರಿಸಿದ್ದನ್ನು ಬೆಂಬಲಿಸಿ ಪಿಸಿಬಿ ಮಂಗಳವಾರ ತಡರಾತ್ರಿ ಐಸಿಸಿಗೆ ಪತ್ರ ಬರೆದಿತ್ತು. ಈ ಪತ್ರದಲ್ಲಿ ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ, ಶ್ರೀಲಂಕಾದಲ್ಲಿ ಆಯೋಜಿಸಲು ಸಾಧ್ಯವಾಗದೇ ಇದ್ದರೆ ಬಾಂಗ್ಲಾದೇಶದ ಪಂದ್ಯಗಳನ್ನು ಪಾಕಿಸ್ಥಾನದಲ್ಲಿ ಆಡಿಸಲು ನಾವು ಸಿದ್ಧ ಇದ್ದೇವೆ ಎಂದು ಬರೆದಿದ್ದರು.

ಇನ್ನೂ ಭಾರತ ಮತ್ತು ಶ್ರೀಲಂಕಾ ಫೆ. 7 ರಿಂದ ಮಾ. 8 ರವರೆಗೆ ಜಂಟಿಯಾಗಿ ಪಂದ್ಯಾವಳಿಯನ್ನು ಆಯೋಜಿಸುತ್ತಿದೆ. ಕಳೆದ ವರ್ಷ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಬಳಿಕ ಜಾರಿಯಲ್ಲಿರುವ ಬಿಸಿಸಿಐ ಹಾಗೂ ಪಿಸಿಬಿ ನಡುವಿನ ಹೈಬ್ರಿಡ್ ಮಾದರಿ ಒಪ್ಪಂದದ ಅಡಿಯಲ್ಲಿ ಪಾಕಿಸ್ತಾನ ತನ್ನ ಎಲ್ಲಾ ಪಂದ್ಯಗಳನ್ನು ಶ್ರೀಲಂಕಾದಲ್ಲಿ ಆಡಲಿದೆ.
National
ವಿರಾಟ್ ಕೊಹ್ಲಿ ಈಗ ವಿಶ್ವದ ನಂ.1 ಬ್ಯಾಟ್ಸ್‌ಮನ್
ಮುಂಬೈ: ರನ್ ಮಿಷಿನ್ ವಿರಾಟ್ ಕೊಹ್ಲಿ ತಮ್ಮ 37ನೇ ವಯಸ್ಸಿನಲ್ಲಿ ಐಸಿಸಿ ಏಕದಿನ ಶ್ರೇಯಾಂಕದಲ್ಲಿ ನಂ.1 ಬ್ಯಾಟರ್ ಆಗಿ ಹೊರಹೊಮ್ಮಿದ್ದಾರೆ.
ಇಂದು ಬಿಡುಗಡೆಯಾದ ನೂತನ ಐಸಿಸಿ ಏಕದಿನ ರ‍್ಯಾಂಕಿಂಗ್ ಪಟ್ಟಿಯಲ್ಲಿ 785 ಅಂಕ ಪಡೆಯುವ ಮೂಲಕ ಅಗ್ರಸ್ಥಾನಕ್ಕೇರಿದ್ದಾರೆ.

2013ರಲ್ಲಿ ಮೊಟ್ಟ ಮೊದಲ ಬಾರಿಗೆ ಐಸಿಸಿ ರ‍್ಯಾಂಕಿಂಗ್‌ನಲ್ಲಿ ನಂ.1 ಸ್ಥಾನ ಪಡೆದಿದ್ದ ಕೊಹ್ಲಿ, 2018ರಲ್ಲಿ ಇಂಗ್ಲೆಂಡ್ ವಿರುದ್ಧ ಸರಣಿಯಲ್ಲಿ ಅದ್ಭುತ ಪ್ರದರ್ಶನ ನೀಡುವ ಮೂಲಕ ಪುನಃ ಅಗ್ರಸ್ಥಾನಕ್ಕೆ ಜಿಗಿದಿದ್ದರು. ಆ ನಂತರ ಟಾಪ್ 11 ರಲ್ಲಿ ಅನೇಕ ಸ್ಥಾನಗಳಲ್ಲಿದ್ದ ಕೊಹ್ಲಿ 5 ವರ್ಷಗಳ ಬಳಿಕ ಮತ್ತೆ ನಂ.1 ಪಟ್ಟಕ್ಕೇರಿದ್ದಾರೆ.
ಕಳೆದ ಅಕ್ಟೋಬರ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಏಕದಿನ ಸರಣಿಯಲ್ಲಿ ಮೊದಲ ಎರಡೂ ಪಂದ್ಯಗಳಲ್ಲಿ ಕೊಹ್ಲಿ ಡಕೌಟ್ ಆಗಿದ್ದರು. ಮೂರನೇ ಪಂದ್ಯದಲ್ಲಿ ಅರ್ಧಶತಕ ಸಿಡಿಸಿದ್ದರು. ಇನ್ನೂ ಡಿಸೆಂಬರ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ 2 ಶತಕ, 1 ಅರ್ಧಶತಕ ಗಳಿಸುವ ಮೂಲಕ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು. ಇದೀಗ ಕಿವೀಸ್ ವಿರುದ್ಧ ನಡೆಯುತ್ತಿರುವ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ 91 ಎಸೆತಗಳಲ್ಲಿ 93 ರನ್ ಗಳಿಸಿದ್ದರು. ಈ ಮೂಲಕ 785 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ.

ಮೊದಲು ಐದು ಸ್ಥಾನಗಳಲ್ಲಿರುವ ಆಟಗಾರರು ಯಾರು?
ಹೊಸದಾಗಿ ಬಿಡುಗಡೆಯಾದ ಐಸಿಸಿ ಏಕದಿನ ರ‍್ಯಾಂಕಿಗ್‌ನಲ್ಲಿ 785 ಅಂಕಗಳೊಂದಿಗೆ ಕಿಂಗ್ ಕೊಹ್ಲಿ ಅಗ್ರಸ್ಥಾನದಲ್ಲಿದ್ದರೆ, ಡೇರಿಲ್ ಮಿಚೆಲ್ 784, ರೋಹಿತ್ ಶರ್ಮಾ 775, ಇಬ್ರಾಹಿಂ ಜದ್ರಾನ್ 764, ಶುಭಮನ್ ಗಿಲ್ 725 ಅಂಕ ಅಂಕಗಳೊಂದಿಗೆ ಮೊದಲ 5 ಸ್ಥಾನಗಳಲ್ಲಿದ್ದಾರೆ.
-
National14 hours agoದೇಶದ ನಿಯಮಗಳನ್ನು ಪಾಲಿಸಲು ಸಾಧ್ಯವಾಗದಿದ್ದರೆ ದೇಶ ಬಿಟ್ಟು ತೊಲಗಿ: ವಾಟ್ಸಪ್ಗೆ ಸುಪ್ರೀಂ ಎಚ್ಚರಿಕೆ
-
Special18 hours agoಪೋಸ್ಟ್ ಆಫೀಸ್ ಉದ್ಯೋಗ ಅವಕಾಶ: ನೇರ ನೇಮಕಾತಿ
-
Hassan8 hours agoಎಸ್ಡಿಪಿಐ ಮುಖಂಡನ ಮೇಲೆ ಹಲ್ಲೆ ಆರೋಪ: ಮುನೀರ್ ಹಲ್ಲೆಗೊಳಗಾದ ಎಸ್ಡಿಪಿಐ ಮುಖಂಡ
-
Special8 hours agoಕಲೆ, ಸಾಹಿತ್ಯ, ನಾಟ್ಯ ಹಾಗೂ ಸಂಸ್ಕಾರದಲ್ಲಿ ಶ್ರೀಮಂತ ದೇಶ ಭಾರತ: ನ್ಯಾ.ಗೋಪಾಲಗೌಡ
-
Kodagu20 hours agoಹೂಡಿಕೆ ಹೆಸರಲ್ಲಿ ಸೈಬರ್ ವಂಚನೆ : 1.14 ಕೋಟಿ ರೂ. ಕಳೆದುಕೊಂಡ ಸಿದ್ದಾಪುರದ ವ್ಯಕ್ತಿ
-
State9 hours agoಕಮಿಷನ್ಗಾಗಿ ಡೀಲ್ ಆರೋಪದ ಆಡಿಯೋ ವೈರಲ್: ಗುತ್ತಿಗೆದಾರ ಸಂಘದ ಗೌರವಾಧ್ಯಕ್ಷ ಬಿ.ಜಗನ್ನಾಥ್ ಅಮಾನತು
-
Kodagu10 hours agoಬಾಲಗೌರವ ಪ್ರಶಸ್ತಿಗೆ ಅರ್ಜಿ ಆಹ್ವಾನ
-
Mandya12 hours agoಅದ್ದೂರಿಯಾಗಿ ಜರುಗಿದ ಶ್ರೀ ಮಾರಮ್ಮ ದೇವಿ ಅಮ್ಮನವರ 3 ನೇ ವರ್ಷದ ವಾರ್ಷಿಕೋತ್ಸವ
