Chikmagalur
ಬೀರೂರು ಗುರು ಭವನದಲ್ಲಿ ಪತ್ರಕರ್ತರ ಸಮ್ಮಿಲನ ಮತ್ತು ಪತ್ರಿಕಾ ದಿನಾಚರಣೆ
ಚಿಕ್ಕಮಗಳೂರು : ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಬೀರೂರು ಪಟ್ಟಣದ ಗುರು ಭವನದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಕಡೂರು ತಾಲೂಕು ಘಟಕದ ವತಿಯಿಂದ ಪತ್ರಕರ್ತರ ಸಮ್ಮಿಲನ ಮತ್ತು ಪತ್ರಿಕಾ ದಿನಾಚರಣೆ ನಡೆಸಲಾಯಿತು. ಈ ಕಾರ್ಯಕ್ರಮದ ಉದ್ಘಾಟನೆಯನ್ನ ಕೆಯುಡಬ್ಲ್ಯೂಜೆ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು, ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ.ಸಿ ಲೋಕೇಶ್, ರಾಷ್ಟ್ರೀಯ ಕಾರ್ಯಕಾರಿ ಮಂಡಳಿಯ ಮದನ್ ಗೌಡ ಅವರು ನೆರವೇರಿಸಿದರು.

Chikmagalur
ಅಪಘಾತ ಗಾಯ ಪ್ರಕರಣ
ಮೂಡಿಗೆರೆ : ದಿನಾಂಕ 25.07.2026 ರಂದು 14-00 ಗಂಟೆಗೆ ಪಿರ್ಯಾದಿ ಮಹೇಶ ಬಿನ್ ವೀರಭದ್ರಪ್ಪ, 46 ವರ್ಷ, ಸೆಲೂನ್ ಶಾಪ್ ಮಾಲೀಕರು, ಹೊಸಹಳ್ಳಿ ಗ್ರಾಮ, ಆಲ್ದೂರು ಹೋಬಳಿ, ಚಿಕ್ಕಮಗಳೂರು ತಾಲ್ಲೂಕು ಇವರು ಠಾಣೆಗೆ ಹಾಜರಾಗಿ ನೀಡಿದ ದೂರೆಂದರೆ, ನಾನು ಮೇಲ್ಕಂಡ ವಿಳಾಸದಲ್ಲಿ ವಾಸವಾಗಿರುತ್ತೇನೆ. ದಿನಾಂಕ 24.07.2026 ರಂದು ನಾನು ಮತ್ತು ಆನಂದ್ ರವರು ಬಿಳಗುಳದ ಕೊರಗಜ್ಜ ದೇವಸ್ಥಾನಕ್ಕೆ ಹೋಗಿ ವಾಪಾಸ್ ದೇವಸ್ಥಾನದಿಂದ ಮೂಡಿಗೆರೆ ಕಡೆಗೆ ಹೊರಟು ನಿಂತಿದ್ದಾಗ ಕೊರಗಜ್ಜ ದೇವಸ್ಥಾನದ ಮುಂಭಾಗ ಹಾದು ಹೋಗಿರುವ ರಸ್ತೆಯಲ್ಲಿ ರಾತ್ರಿ ಸುಮಾರು 09-30 ಗಂಟೆ ಸಮಯದಲ್ಲಿ ಮೂಡಿಗೆರೆ ಕಡೆಯಿಂದ ಒಂದು ಸ್ಕೂಟಿ ಕೊಲ್ಲಿಬೈಲು ಕಡೆ ಬರುತ್ತಿದ್ದು, ಚಿಕ್ಕಮಗಳೂರು ಕಡೆಯಿಂದ ಮೂಡಿಗೆರೆ ಕಡೆಗೆ ಒಂದು ಕಾರು ಸ್ಪೀಡ್ ಆಗಿ ಬಂದು ನಿರ್ಲಕ್ಷತನದಿಂದ ಕಾರನ್ನು ಚಾಲನೆ ಮಾಡಿ ಸ್ಕೂಟಿಗೆ ಡಿಕ್ಕಿ ಹೊಡೆಸಿದನು.

ನಾನು ಮತ್ತು ಆನಂದ್ ರವರು ತಕ್ಷಣ ಸ್ಥಳಕ್ಕೆ ಹೋಗಿ ನೋಡಿದಾಗ ಸ್ಕೂಟಿ ಚಾಲಕ ರಸ್ತೆಮೇಲ ಬಿದ್ದಿದ್ದು ಅವನನ್ನು ಉಪಚರಿಸಿ ನೋಡಲಾಗಿ ಸ್ಕೂಟಿ ಚಾಲಕನಿಗೆ ಎಡಕಾಲು, ಮುಖ, ತಲೆಗೆ ಗಾಯವಾಗಿರುತ್ತೆ. ಡಿಕ್ಕಿ ಹೊಡೆಸಿದ ಕಾರಿನ ನಂಬರ್ ನೋಡಲಾಗಿ KA02AF7873 ಆಗಿರುತ್ತೆ. ಹಾಗು ಸ್ಕೂಟಿಯ ನಂಬರ್ ನೋಡಲಾಗಿ KA14EN5807 ನೋಂದಣಿ ಸಂಖ್ಯೆಯಾಗಿರುತ್ತೆ. ಮತ್ತು ಸ್ಕೂಟಿಯ ಚಾಲಕ ನಮ್ಮ ಊರಿನ ಭಾಸ್ಕರ, ವಯಸ್ಸು ಸುಮಾರು 48 ವರ್ಷ ಆಗಿರುತ್ತೆ. ಹಾಗು ಅಲ್ಲೇ ಇದ್ದ ಕಾರಿನ ಚಾಲಕನ ಹೆಸರು ತಿಳಿಯಲಾಗಿ ಪ್ರವೀಣ್ ಕುಮಾರ್, ಶಿವಮೊಗ್ಗ ಎಂದು ತಿಳಿದಿರುತ್ತದೆ. ತಕ್ಷಣ ನಾನು ಮತ್ತು ಆನಂದ್ ರವರು ಕಾರಿನಲ್ಲಿದ್ದ ವಿಜಯ್ ಕುಮಾರ್ ರವರು ಸೇರಿಕೊಂಡು ಯಾವುದೋ ವಾಹನದಲ್ಲಿ ಭಾಸ್ಕರ ರವರನ್ನು ಮೂಡಿಗೆರೆ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿದೆವು.

ನಂತರ ಭಾಸ್ಕರ ರವರ ಸಂಬಂಧಿಗಳಿಗೆ ಪೋನ್ ಮಾಡಿ ವಿಚಾರ ತಿಳಿಸಿದ್ದು ಅವರು ಮೂಡಿಗೆರೆ ಆಸ್ಪತ್ರೆಗೆ ಬಂದು ವೈಧ್ಯರ ಸಲಹೆಯಂತೆ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದ್ದು ಗಾಯಾಳು ಚಿಕಿತ್ಸೆಪಡೆಯುತ್ತಿರುತ್ತಾರೆ. ಗಾಯಾಳುವನ್ನು ಮಂಗಳೂರು ಆಸ್ಪತ್ರೆಗೆ ಕಳುಹಿಸಿ ಈ ದಿವಸ ತಡವಾಗಿ ದಿನಾಂಕ 25.07.2026 ರಂದು ಠಾಣೆಗೆ ಹಾಜರಾಗಿ ಅಪಘಾತ ಮಾಡಿದ KA02AF7873 ನೋಂದಣಿ ಸಂಖ್ಯೆಯ ಕಾರಿನ ಚಾಲಕನ ವಿರುದ್ದ ಕಾನೂನು ಕ್ರಮ ಕೈಗೊಳ್ಳುವಂತೆ ದೂರು ನೀಡಿರುತ್ತೇನೆ. ಎಂದು ನೀಡಿದ ದೂರನ್ನು ಸ್ವೀಕರಿಸಿ ಪ್ರಕರಣ ದಾಖಲು ಮಾಡಿರುತ್ತೆ.
Chikmagalur
‘ದ್ವೇಷ ಭಾಷಣ’ ಆರೋಪ: ಸಿ.ಟಿ. ರವಿ ಬಂಧನಕ್ಕೆ ಮುಸ್ಲಿಮ್ ಒಕ್ಕೂಟ ಒತ್ತಾಯ
ಚಿಕ್ಕಮಗಳೂರು: ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಅವರು ನೀಡಿರುವ ಹೇಳಿಕೆಯನ್ನು ಖಂಡಿಸಿರುವ ಕರ್ನಾಟಕ ರಾಜ್ಯ ಮುಸ್ಲಿಮ್ ಒಕ್ಕೂಟ, ಅದನ್ನು ದ್ವೇಷ ಭಾಷಣ ಎಂದು ಆರೋಪಿಸಿ ಅವರ ವಿರುದ್ಧ ತಕ್ಷಣ ಕಾನೂನು ಕ್ರಮ ಕೈಗೊಂಡು ಬಂಧಿಸಬೇಕು ಎಂದು ಆಗ್ರಹಿಸಿದೆ.
ಒಕ್ಕೂಟದ ಪ್ರಕಾರ, ಸಿ.ಟಿ. ರವಿ ಅವರು “ಮುಲ್ಲಾನಿಗೂ ನೀಟ್ ಪರೀಕ್ಷೆಗೂ ಏನು ಸಂಬಂಧ? ಎದೆ ಸೀಳಿದರೆ ಮೂರು ಅಕ್ಷರ ಬರಲ್ಲ” ಎಂದು ಹೇಳುವ ಮೂಲಕ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟುಮಾಡಿದ್ದು, ಸಮಾಜದಲ್ಲಿ ಧರ್ಮದ ಆಧಾರದಲ್ಲಿ ದ್ವೇಷ ಮತ್ತು ವಿಭಜನೆ ಸೃಷ್ಟಿಸಲು ಪ್ರಯತ್ನಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಈ ಸಂಬಂಧ ಚಿಕ್ಕಮಗಳೂರಿನ ಜಾಮಿಯಾ ಮಸೀದಿ ಅಧ್ಯಕ್ಷ ಮುದಸ್ಸಿರ್ ಪಾಷಾ ಅವರು ಈಗಾಗಲೇ ದೂರು ದಾಖಲಿಸಿದ್ದಾರೆ. ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಕ್ಕೆ ಪ್ರಚೋದನೆ ನೀಡಿದ ಆರೋಪದಡಿ ಸಿ.ಟಿ. ರವಿ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಒಕ್ಕೂಟ ಒತ್ತಾಯಿಸಿದೆ.
ನೀಟ್ ಪರೀಕ್ಷೆಯ ಅಕ್ರಮಗಳ ವಿರುದ್ಧ ದೇಶಾದ್ಯಂತ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿರುವ ಸಂದರ್ಭದಲ್ಲಿ, ಮೂಲ ವಿಷಯದಿಂದ ಗಮನ ಬೇರೆಡೆ ಸೆಳೆಯಲು ಮುಸ್ಲಿಮರನ್ನು ಗುರಿಯಾಗಿಸಿ ಹೇಳಿಕೆ ನೀಡಲಾಗಿದೆ ಎಂದು ಒಕ್ಕೂಟ ಆರೋಪಿಸಿದೆ. ಇದೇ ವೇಳೆ, ಮಾಜಿ ಸಂಸದ ಪ್ರತಾಪ್ ಸಿಂಹ ಅವರ ಹೇಳಿಕೆಯನ್ನು ಉಲ್ಲೇಖಿಸಿ, ಬಿಜೆಪಿ ನಾಯಕರು ಧಾರ್ಮಿಕ ವಿಭಜನೆಯ ರಾಜಕೀಯ ಮಾಡುತ್ತಿದ್ದಾರೆ ಎಂದು ಟೀಕಿಸಿದೆ.

ಶಿಕ್ಷಣ, ಹಿಜಾಬ್ ಮತ್ತು ಮೀಸಲಾತಿ ಸೇರಿದಂತೆ ಹಲವು ವಿಷಯಗಳಲ್ಲಿ ಬಿಜೆಪಿಯ ನಿಲುವಿನಲ್ಲಿ ದ್ವಂದ್ವವಿದೆ ಎಂದು ಆರೋಪಿಸಿರುವ ಒಕ್ಕೂಟ, ಸಿ.ಟಿ. ರವಿ ಅವರ ಹೇಳಿಕೆಯಿಂದ ಸಮಾಜದಲ್ಲಿ ಅಶಾಂತಿ ಉಂಟಾಗುವ ಸಾಧ್ಯತೆ ಇರುವುದರಿಂದ ಸರ್ಕಾರ ಕೂಡಲೇ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದೆ.
Chikmagalur
ಜಮೀನು ವಿವಾದ; ಸಿಸಿ ಕ್ಯಾಮೆರಾ ಅಳವಡಿಸಿದ್ದಕ್ಕೆ ಯುವಕನ ಮೇಲೆ ಹಲ್ಲೆ, ಕೊಲೆ ಬೆದರಿಕೆ
ಚಿಕ್ಕಮಗಳೂರು: ಜಮೀನು ವಿಚಾರದ ಸಿವಿಲ್ ವ್ಯಾಜ್ಯಕ್ಕೆ ಸಂಬಂಧಿಸಿದಂತೆ, ತೋಟದಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿರುವ ಘಟನೆ ಮಲ್ಲಂದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಸಿರುಗೂರು ಗ್ರಾಮದ ಚಂದ್ರಶೇಖರ್ ಎಸ್‌ಟಿ (35) ಹಲ್ಲೆಗೊಳಗಾದವರು. ಜುಲೈ 23 ರಂದು ಸಂಜೆ ಚಂದ್ರಶೇಖರ್ ತಮ್ಮ ಕಾಫಿ ತೋಟದಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮೆರಾವನ್ನು ಜಮೀನು ವಿವಾದದಲ್ಲಿರುವ ಸುರೇಶ್, ಬಸವರಾಜು, ಪ್ರೇಮ, ಮಂಜುಳ, ಲಲಿತಾ, ದಿಗಂತ್ ಹಾಗೂ ಇತರರು ಸೇರಿ ಧ್ವಂಸಗೊಳಿಸಿದ್ದಾರೆ. ಇದನ್ನು ಪ್ರಶ್ನಿಸಲು ಹೋದ ಚಂದ್ರಶೇಖರ್ ಹಾಗೂ ಗಲಾಟೆ ಬಿಡಿಸಲು ಬಂದ ಧರ್ಮೇಶ್ ಅವರ ಮೇಲೆ ಆರೋಪಿಗಳು ಕಲ್ಲು ಮತ್ತು ಕೈಯಿಂದ ಹಲ್ಲೆ ನಡೆಸಿ, ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.
ಗಾಯಾಳು ಚಂದ್ರಶೇಖರ್ ನೀಡಿದ ಹೇಳಿಕೆಯ ಆಧಾರDಲಿ ಮಲ್ಲಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
-
Politics15 hours agoಪ್ರಜ್ವಲ್ ರೇವಣ್ಣ ವಿಡಿಯೋ ಹಂಚಿಕೆ ಪ್ರಕರಣ: ಆರೋಪಿಗಳ ವಿರುದ್ಧ ಕೋರ್ಟ್ ಕ್ರಮ, 8 ಮಂದಿಗೆ ಸಮನ್ಸ್
-
National17 hours agoಕೇಂದ್ರದ ಭರವಸೆ ಬಳಿಕ NEET ಪ್ರತಿಭಟನೆ ವಾಪಸ್: ಸುದ್ದಿಗೋಷ್ಠಿಯಲ್ಲಿ CJP ಘೋಷಣೆ
-
National18 hours agoಶಿಕ್ಷಣ ವ್ಯವಸ್ಥೆ ಸುಧಾರಣೆಗೆ ಪ್ರಧಾನ್ ರಾಜೀನಾಮೆ ದೊಡ್ಡ ಹೆಜ್ಜೆ: ರಾಹುಲ್ ಗಾಂಧಿ
-
Mandya20 hours agoಸಾತನೂರು ಕೆರೆಗೆ ₹4.50 ಕೋಟಿ ಅನುದಾನ: ತಡೆಗೋಡೆ ನಿರ್ಮಾಣ ಕಾಮಗಾರಿಗೆ ಶಾಸಕ ಪಿ. ರವಿಕುಮಾರ್ ಗೌಡ ಗಣಿಗರಿಂದ ಭೂಮಿ ಪೂಜೆ
-
National21 hours agoನೀಟ್ ಪ್ರತಿಭಟನೆಗೆ ಬಿಗ್ ವಿನ್: ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ
-
Politics18 hours agoಧರ್ಮೇಂದ್ರ ಪ್ರಧಾನ್ ರಾಜೀನಾಮೆ| ವಿದ್ಯಾರ್ಥಿ-ಯುವಜನರ ಗೆಲುವು: ಸಿದ್ದರಾಮಯ್ಯ
-
National18 hours ago‘ಒಂದು ಬೇಡಿಕೆ ಈಡೇರಿದೆ, ಮೂರು ಬಾಕಿ’: ಸಿಜೆಪಿ ಹೋರಾಟಕ್ಕೆ ಹೊಸ ಘೋಷಣೆ
-
National19 hours agoವಿದ್ಯಾರ್ಥಿಗಳ ಹೋರಾಟಕ್ಕೆ ಜಯ? ಧರ್ಮೇಂದ್ರ ಪ್ರಧಾನ್ ರಾಜೀನಾಮೆ, ಸಿಜೆಪಿ ಸಂಭ್ರಮ
