Mysore
ಕಲ್ಯಾಣಿ ಜಾಗಕ್ಕೆ ಜಗಳ: ಪೊಲೀಸರ ಮಧ್ಯಪ್ರವೇಶ
ಮೈಸೂರು: ನಗರದ ರಾಜೇಂದ್ರ ನಗರ ಬಡಾವಣೆಯಲ್ಲಿರುವ ಕಲ್ಯಾಣಿ, ಮಂಟಪದ ಜಾಗದಲ್ಲಿ ಮಾಂಸದ ಅಂಗಡಿ ನಡೆಸುತ್ತಿರುವ ಬಗ್ಗೆ ಎರಡು ಗುಂಪುಗಳ ನಡುವೆ ಬುಧವಾರ ಗಲಾಟೆ ನಡೆದಿದ್ದು, ಪೊಲೀಸರು ಮಧ್ಯ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು.
ರಾಜೇಂದ್ರನಗರದ ಸಿಂಗರಿಶೆಟ್ಟಿ ಕಲ್ಯಾಣಿ ಪುನರುಜ್ಜೀವನಕ್ಕೆ ಒತ್ತಾಯಿಸಿ ಎನ್.ಆರ್.ಕ್ಷೇತ್ರದ ಬಿಜೆಪಿ ಕಾರ್ಯಕರ್ತರು ರಾಜೇಂದ್ರನಗರದ ಮುಖ್ಯರಸ್ತೆಯಲ್ಲಿ ಪ್ರತಿಭಟನೆ ನಡೆಸಿದರು.
ನೂರು ವರ್ಷ ಇತಿಹಾಸವಿರುವ ಮಂಟಪ ಹಾಗೂ ಕಲ್ಯಾಣಿಯ ಜಾಗವನ್ನು ಅತಿಕ್ರಮಿಸಿಕೊಂಡು ಮೀನು, ಮಾಂಸಾಹಾರ ಮಾರಾಟ ಮಾಡಲಾಗುತ್ತಿದೆ. ಈ ಕುರಿತು ಪಾಲಿಕೆ ಹಾಗೂ ಎಂಡಿಎ ಅಧಿಕಾರಿಗಳು ಕ್ರಮಕೈಗೊಳ್ಳಬೇಕು. ಸ್ಥಳದಲ್ಲಿರುವ ಅನಧಿಕೃತ ಶೆಡ್ ಮಾದರಿಯ ಅಂಗಡಿಗಳನ್ನು ತೆರವುಗೊಳಿಸಬೇಕೆಂದು ಒತ್ತಾಯಿಸಿದರು.

ಬಿಜೆಪಿ ಕಾರ್ಯಕರ್ತರು ನಡೆಸುತ್ತಿದ್ದ ಪ್ರತಿಭಟನೆಗೆ ಆಕ್ಷೇಪ ವ್ಯಕ್ತಪಡಿಸಿದ ಮತ್ತೊಂದು ಗುಂಪು, ಅನಗತ್ಯವಾಗಿ ತೊಂದರೆ ಕೊಡಬೇಡಿ ಎಂದು ವಾಗ್ವಾದಕ್ಕಿಳಿದರು. ಇದರಿಂದಾಗಿ ಎರಡೂ ಗುಂಪುಗಳ ನಡುವೆ ಮಾತಿನ ಚಕಮಕಿ ನಡೆಯಿತು. ಪರಿಸ್ಥಿತಿ ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿದ ಪರಿಣಾಮ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಅಷ್ಟರಲ್ಲೇ ಸ್ಥಳಕ್ಕೆ ಭೇಟಿ ನೀಡಿದ ಎನ್.ಆರ್.ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಲಕ್ಷ್ಮಿಕಾಂತ ತಳವಾರ್ ಹಾಗೂ ಸಿಬ್ಬಂದಿ ಸ್ಥಳದಲ್ಲಿದ್ದ ಎರಡು ಗುಂಪುಗಳ ಸದಸ್ಯರನ್ನೂ ಚದುರಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ಎಚ್.ಜಿ.ಗಿರಿಧರ್ ಅವರು, ಶತಮಾನದ ಇತಿಹಾಸವಿರುವ ಕಲ್ಯಾಣಿ ಮುಚ್ಚಿ ಹೋಗಿದ್ದು, ಈ ಸ್ಥಳದಲ್ಲಿ ಅಂಗಡಿಗಳನ್ನು ತೆರೆಯಲಾಗಿದೆ. ಈ ಕುರಿತು ಜಿಲ್ಲಾಧಿಕಾರಿಗಳು, ಪಾಲಿಕೆ ಅಧಿಕಾರಿಗಳಿಗೆ ಮನವಿ ನೀಡಿದ್ದರು ಪ್ರಯೋಜನವಾಗಿಲ್ಲ. ಒಂದು ವಾರದಲ್ಲಿ ಪಾಲಿಕೆ ಅಧಿಕಾರಿಗಳು ಅಂಗಡಿಗಳನ್ನು ತೆರವು ಮಾಡಬೇಕು. ಇಲ್ಲವಾದರೆ ನಾವೇ ತೆರವು ಮಾಡಬೇಕಾಗುತ್ತದೆ.

ಇದೇ ವೇಳೆ ಸ್ಥಳೀಯ ನಿವಾಸಿ ನೂರ್ ಅಹಮ್ಮದ್ ಅವರು, ಇದು ಸರ್ಕಾರಿ ಜಾಗ. ಅತಿಕ್ರಮವಾಗಿದ್ದರೆ ಸರ್ಕಾರ ಅಥವಾ ಸಂಬಂಧಪಟ್ಟವರು ಕ್ರಮ ವಹಿಸುತ್ತಾರೆ. ದೂರು ನೀಡಿದ್ದರೆ ಅಧಿಕಾರಿಗಳು ಸೂಕ್ತ ತೀರ್ಮಾನ ಮಾಡುತ್ತಾರೆ. ಅದನ್ನು ಬಿಟ್ಟು ಬಿಜೆಪಿ ಕಾರ್ಯಕರ್ತರು ಸಂಘರ್ಷ ಮೂಡಿಸುವುದು ಸರಿಯಲ್ಲ.
Mysore
ಮುಳ್ಳೂರು ಗ್ರಾಮದಲ್ಲಿ ಮತ್ತೆ ಹುಲಿ ಅಟ್ಟಹಾಸ
ಸರಗೂರು : ತಾಲೋಕು ಮುಳ್ಳೂರು ಗ್ರಾಮದ ರೈತ ಕಿರಣ್ ಜಮೀನಿನಲ್ಲಿ ಕೆಲಸ ಮಾಡುತ್ತಿರುವಾಗ ಹುಲಿ ದಾಳಿ ಮಾಡಿ ಬೆನ್ನು ಮತ್ತು ಕತ್ತಿನ ಭಾಗಕೆ ಗಾಯ ಮಾಡಿದೆ.
ಕಳೆದ 8 ತಿಂಗಳು ಇದೇ ಬೆಣ್ಣೆಗೆರೆ ಗ್ರಾಮದ ರಾಜಶೇಖರ್ ಹುಲಿ ದಾಳಿಗೆ ಮುತ್ತಪಟ್ಟಿದ್ದರು ಇಂದು ಅದೇ ಸ್ಥಳದಲ್ಲಿ ಕಿರಣ್ ಗೆ ಹುಲಿ ದಾಳಿ ಮಾಡಿರುವುದು ಗ್ರಾಮಸ್ಥರಿಗೆ ಆತಂಕ ಸೃಷ್ಟಿಸಿದೆ.
ಕೂಡಲೇ ಸಂಬಂಧಪಟ್ಟ ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲನೆ ಮಾಡಿ ಯುವಕನಿಗೆ ಸರಿಯಾದ ಚಿಕಿತ್ಸೆ ಕೊಡಿಸಿ ಪರಿಹಾರ ಘೋಷಣೆ ಮಾಡಿ ಅದಷ್ಟು ಬೇಗ ನರಭಕ್ಷಕ ಹುಲಿಯನ್ನು ಸೆರೆಹಿಡಿಯಬೇಕು ಎಂದು ಗ್ರಾಮಸ್ಥರ ಒತ್ತಾಯ ಆಗಿದೆ.
ದುರದೃಷ್ಟಕರ ಪ್ರಾಣ ಅಪಾಯದಿಂದ ಪಾರಾಗಿದ್ದಾರೆ.
ವರದಿ : ರಮೇಶ್ ಕೋಟೆ
Mysore
ಅಪರಿಚಿತ ವಾಹನ ಡಿಕ್ಕಿ ಗಂಡು ಚಿರತೆ ಸಾ*ವು
ಶಂಕರ್ ಕಟ್ಟೆಮಳಲವಾಡಿ
ಹುಣಸೂರು : ತಾಲೂಕಿನ ಹುಣಸೂರು – ಮೈಸೂರು ಹೆದ್ದಾರಿಯ ಅರಬ್ಬಿ ತಿಟ್ಟು ವನ್ಯಧಾಮದ ಬಳಿ ಶುಕ್ರವಾರ ರಾತ್ರಿ ಅಪರಿಚಿತ ವಾಹನ ಡಿಕೆ ಹೊಡೆದ ಪರಿಣಾಮ ಐದು ವರ್ಷದ ಗಂಡು ಚಿರತೆ ಮೃತಪಟ್ಟಿದ್ದು ಈ ಸಂಬಂಧ ಪ್ರಕರಣ ದಾಖಲಾಗಿದೆ, ಈ ಚಿರತೆಯನ್ನು ಇಂದು ಶನಿವಾರ ಕಲ್ ಬೆಟ್ಟ ಅರಣ್ಯದಲ್ಲಿ ಶವ ಪರೀಕ್ಷೆ ಮಾಡಲಾಗುವುದು ಎಂದು ಆರ್.ಎಫ್.ಓ ಸಂತೋಷ್ ಹೂಗಾರ್ ತಿಳಿಸಿದ್ದಾರೆ.
Mysore
ಬಾಡಿಗೆದಾರರಿಂದಲೇ ಮನೆ ಕಳ್ಳತನ: ಪಿರಿಯಾಪಟ್ಟಣದಲ್ಲಿ ಜೋಡಿ ಖದೀಮರ ಬಂಧನ
ಪಿರಿಯಾಪಟ್ಟಣ : ಮನೆಯ ಮಾಲೀಕರು ಊರಲ್ಲಿಲ್ಲದ ಸಮಯ ಸಾಧಿಸಿ ಬಾಡಿಗೆದಾರರೇ ದರೋಡೆ ಮಾಡಿರುವ ಆಘಾತಕಾರಿ ಘಟನೆಯೊಂದು ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನಲ್ಲಿ ಬೆಳಕಿಗೆ ಬಂದಿದೆ. ಕದ್ದ ಚಿನ್ನವನ್ನು ಫೈನಾನ್ಸ್‌ನಲ್ಲಿ ಮಾರಿ ಹಣ ಬಚ್ಚಿಟ್ಟಿದ್ದ ಕಿಲಾಡಿ ದಂಪತಿಯನ್ನು ಪೊಲೀಸರು ಯಶಸ್ವಿಯಾಗಿ ಬಂಧಿಸಿದ್ದಾರೆ.
ಘಟನೆಯ ವಿವರ:
ಪಿರಿಯಾಪಟ್ಟಣ ತಾಲೂಕಿನ ಆವರ್ತಿ ಗ್ರಾಮದ ನಿವೃತ್ತ ಶಿಕ್ಷಕ ನಾಗಯ್ಯ ಮತ್ತು ಮಂಜುಳಾ ದಂಪತಿಯ ಮನೆಯಲ್ಲಿ ಈ ಕಳ್ಳತನ ನಡೆದಿತ್ತು. ಜೂನ್ 13 ರಂದು ಶಿಕ್ಷಕ ದಂಪತಿಗಳು ತಮ್ಮ ಮನೆಗೆ ಬೀಗ ಹಾಕಿ ಮೈಸೂರಿಗೆ ತೆರಳಿದ್ದರು. ಇದೇ ಸಮಯವನ್ನು ಕಾಯುತ್ತಿದ್ದ ಇವರ ಮನೆಯಲ್ಲೇ ಬಾಡಿಗೆಗೆ ವಾಸವಿದ್ದ ಮಂಜುನಾಥ್ ಮತ್ತು ನಯನ ಎಂಬ ದಂಪತಿಗಳು ಜೋಡಿಯಾಗಿ ಕೈಚಳಕ ಪ್ರದರ್ಶಿಸಿದ್ದಾರೆ.
ಮನೆಯ ಬೀಗ ಮುರಿದು ಒಳನುಗ್ಗಿದ ಬಾಡಿಗೆದಾರರು, ಬೀರುವಿನಲ್ಲಿ ಇಟ್ಟಿದ್ದ 45 ಗ್ರಾಂ ತೂಕದ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದರು.
ಚಿನ್ನ ಮಾರಿ ಹಣ ಬಚ್ಚಿಟ್ಟಿದ್ದ ಖದೀಮರು:
ಮನೆಯಿಂದ ಕದ್ದ ಚಿನ್ನಾಭರಣಗಳನ್ನು ಆರೋಪಿಗಳು ‘ಅರ್ಟಿಕ್ ಗೋಲ್ಡ್ ಫೈನಾನ್ಸ್’ನಲ್ಲಿ 6.8 ಲಕ್ಷ ರೂಪಾಯಿಗಳಿಗೆ ಮಾರಾಟ ಮಾಡಿದ್ದರು. ಬಂದ ಹಣವನ್ನು ಯಾರಿಗೂ ತಿಳಿಯದಂತೆ ಬಚ್ಚಿಟ್ಟು ನಗದನ್ನಾಗಿ ಮಾಡಿಕೊಂಡಿದ್ದರು.
ಪೊಲೀಸರ ಕಾರ್ಯಾಚರಣೆ, ಆರೋಪಿಗಳ ಬಂಧನ:
ಮನೆಗೆ ಮರಳಿದ ಶಿಕ್ಷಕ ದಂಪತಿಗೆ ಕಳ್ಳತನವಾಗಿರುವುದು ಬೆಳಕಿಗೆ ಬಂದ ತಕ್ಷಣ, ಅವರು ಜೂನ್ 21 ರಂದು ಬೈಲುಕೊಪ್ಪ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಂಡ ಬೈಲುಕೊಪ್ಪ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ, ಬಾಡಿಗೆದಾರರಾದ ಮಂಜುನಾಥ್ ಮತ್ತು ನಯನ ದಂಪತಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯ ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಲಾಗಿದೆ.
-
Mandya21 hours agoಮದ್ದೂರು ನವೋದಯ ವಿದ್ಯಾಲಯಕ್ಕೆ ಕಾಯಕಲ್ಪ; ಹೆಚ್.ಡಿ. ಕುಮಾರಸ್ವಾಮಿ
-
Hassan19 hours agoಅಡ್ಡ ಮತದಾನ ಎಫೆಕ್ಟ್: ಕರ್ನಾಟಕ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆಗೆ ವರಿಷ್ಠರ ಚಿಂತನೆ
-
Mysore24 hours agoಕಳ್ಳತನ ಆಗಿರುವ ಹಣದ ಬಗ್ಗೆ ಸ್ಪಷ್ಟ ಮಾಹಿತಿ ಹೊರಬರಬೇಕು: ಅರುಣ್ ಯೋಗಿರಾಜ್
-
Politics23 hours agoಅಧಿಕಾರಿಗಳು ವೃತ್ತಿಪರತೆ ಪ್ರದರ್ಶಿಸಿ ಸರ್ಕಾರದ ಘನತೆ ಕಾಯ್ದುಕೊಳ್ಳಬೇಕು: ಸಿಎಂ ಡಿಕೆಶಿ
-
Kodagu5 hours agoವಿಚಾರಣೆಗೆ ತೆರಳಿದ್ದ ವ್ಯಕ್ತಿ ನಾಪತ್ತೆ; ಮಾಹಿತಿ ನೀಡುವಂತೆ ಪೊಲೀಸರ ಮನವಿ
-
Politics20 hours agoಕುಮಾರಸ್ವಾಮಿ ರೈತರೊಂದಿಗೆ ಚರ್ಚೆಗೆ ಸಿದ್ಧ, ಡಿಕೆಶಿಗೆ ಬಂದು ಚರ್ಚೆ ಮಾಡಲಿ: ನಿಖಿಲ್ ಸವಾಲ್
-
Mysore22 hours agoಅಯೋಧ್ಯೆ ಟ್ರಸ್ಟ್ FIR ಪ್ರಕರಣ: ತನಿಖೆಯಿಂದ ಸತ್ಯ ಹೊರಬರಲಿ – ಶಿಲ್ಪಿ ಅರುಣ್ ಯೋಗರಾಜ್
-
Special20 hours agoಜುಲೈ.1ರಿಂದ ಪಾಸ್ಪೋರ್ಟ್ ಪಡೆಯುವುದು ದುಬಾರಿ: ಕೇಂದ್ರದಿಂದ ಹೊಸ ಶುಲ್ಕ ಪ್ರಕಟ!!
